ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ 2024-25 ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಮುಂಬರುವ ಏಪ್ರಿಲ್ 20 (ಶನಿವಾರ) ಮತ್ತು 21ರಂದು (ಭಾನುವಾರ) ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಜನವರಿ 10 ರಿಂದ ನಿಗದಿತ ಶುಲ್ಕದೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಏ.20ರ ಬೆಳಗ್ಗೆ 10:30ರಿಂದ ಜೀವಶಾಸ್ತ್ರ, ಮಧ್ಯಾಹ್ನ 2:30ರಿಂದ ಗಣಿತ, 21ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.19ರ ಶುಕ್ರವಾರದಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ನ್ಯಾಚುರೋಪಥಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸುಗಳು, ಪಶು ಸಂಗೋಪನೆ, ಬಿ.ಎಸ್ಸಿ (ನರ್ಸಿಂಗ್), ವೈದ್ಯಕೀಯ, ದಂತ…
Author: AIN Author
ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ಉತ್ತರ ಭಾರತದ ಕಿಲಾಡಿ ಕಳ್ಳರ ಗ್ಯಾಂಗ್ ಹೋಲುವ ತಂಡವೊಂದು ಹುಟ್ಟಿಕೊಂಡಿದೆ. ಕಳ್ಳರ ಗ್ಯಾಂಗ್ ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬಂದು ಲಕ್ಷಾಂತರ ರೂ. ಹಣ ಲಪಟಾಯಿಸಿ ಪರಾರಿಯಾಗಿದೆ. ನಗರದ ಸಂತಕಟ್ಟೆಯಲ್ಲಿನ ಬೇಕರಿ ಒಂದರ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕಳ್ಳರು ಕೇವಲ ಚಡ್ಡಿಯನ್ನು ಹಾಕಿಕೊಂಡು, ಮೈ ತುಂಬಾ ಎಣ್ಣೆ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಮನೆಮಂದಿ ನಿದ್ದೆಯಲ್ಲಿರುವಾಗ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು 2.5 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯನ್ನು ಕದ್ದಿದ್ದಾರೆ. ಇದರ ಆಧಾರದಲ್ಲಿ ಉಡುಪಿಯಲ್ಲೊಂದು ನಟೋರಿಯಸ್ ಗ್ಯಾಂಗ್ ಸಕ್ರಿಯವಾಗಿರುವುದು ಖಚಿತಗೊಂಡಿದೆ. https://ainlivenews.com/apple-watch-series-9-watch-ultra-2-sales-halt-in-us-why/ ಇದೇ ಮಾದರಿಯಲ್ಲಿ ಚಡ್ಡಿ ಗ್ಯಾಂಗ್ ಉತ್ತರ ಭಾರತದಲ್ಲಿ ವಿಲಕ್ಷಣ ಮಾದರಿಯಲ್ಲಿ ಕಳ್ಳತನ ನಡೆಸುತ್ತಿತ್ತು. ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಕಸುಬಿಗೆ ಇಳಿಯುವ ಈ ತಂಡ, ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿಯನ್ನು ಬಿಟ್ಟು ಹೋಗುತ್ತಿತ್ತು. ಈ ತಂಡ ಸಹ ಅದೇ ರೀತಿ ಮಾಡುತ್ತಿದೆ. ಇದೇ ರೀತಿ ನಗರದ…
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ (Corona Virus) ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಇಂದು (ಶುಕ್ರವಾರ) ಒಂದೇ ದಿನ 78 ಕೊರೊನಾ (Covid-19) ಸೋಂಕು ಪ್ರಕರಣಗಳು ವರದಿಯಾಗಿವೆ. https://ainlivenews.com/the-bus-got-out-of-control-and-fell-into-the-lake-more-than-20-people-were-injured/ ಇಂದು ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 175 ಕ್ಕೆ ಏರಿಕೆಯಾಗಿದೆ. ಕೋವಿಡ್-19 ರಿಂದ ಗುಣಮುಖರಾಗಿ ಇಂದು 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 3.29 % ಗೆ ಏರಿಕೆಯಾಗಿದೆ ಬೆಂಗಳೂರಿನಲ್ಲಿ ಇಂದು 68 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 156 ಕ್ಕೆ ತಲುಪಿದೆ. ಶುಕ್ರವಾರ ಬೆಂಗಳೂರು ಗ್ರಾಮಾಂತರದಲ್ಲಿ 1, ಚಿಕ್ಕಮಗಳೂರಿನಲ್ಲಿ 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಮೈಸೂರಿನಲ್ಲಿ 1, ರಾಮನಗರದಲ್ಲಿ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ಇದೆಯಾ ಇಲ್ಲವೇ ಎಂದು ಪ್ರಶ್ನೆ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ಸಾಂಕೇತಿಕವಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಲೋಕಸಭೆ, ರಾಜ್ಯಸಭೆಯಲ್ಲಿ 140 ಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. https://ainlivenews.com/is-eating-garlic-on-an-empty-stomach-good-for-health-here-is-the-answer/ ಸಂಸತ್ ದಾಳಿ ಮಾಡಿದ್ದಕ್ಕಾಗಿ ಉತ್ತರ ಕೊಡಿ ಎಂದು ಕೇಳಿದ್ದರು. ಇಷ್ಟು ಕೇಳಿದ್ದಕ್ಕೆ ಹೊಸ ಸಂಸತ್ ಭವನದಲ್ಲಿ ಇರುವ ಎಲ್ಲಾ ವಿಪಕ್ಷ ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂದರು. ಕೇಂದ್ರದ ಪ್ರಜಾಪ್ರಭುತ್ವ ವಿರುದ್ಧ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಸೋನಿಯಾ, ರಾಹುಲ್, ಖರ್ಗೆ ಬಿಟ್ಟರೆ ಎಲ್ಲಾ ಉಚ್ಛಾಟನೆ ಮಾಡಲಾಗಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಕೆರೆ ಏರಿ ಮೇಲಿಂದ ಕೆಳಗೆ ಉರುಳಿ ಬಿದ್ದ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ (Anekal) ನಡೆದಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆ- ಸರ್ಜಾಪುರ ಮುಖ್ಯ ರಸ್ತೆಯ ಬಿದರಗುಪ್ಪೆ ಕೆರೆ ಏರಿ ಮೇಲೆ ಘಟನೆ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಖಾಸಗಿ ಬಸ್ ಚಿಕ್ಕ ಬೆಳಂಡೂರಿನಿಂದ ಓಂ ಶಕ್ತಿಗೆ ಹೋಗುತ್ತಿತ್ತು. ಈ ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣ ಮಾಡುತ್ತಿದ್ದರು. ಕೆರೆ ಏರಿ ಮೇಲೆ ಬರುತ್ತಿದ್ದಾಗ ಬಸ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕೂಡಲೇ ಸ್ಥಳೀಯರ ಸಹಕಾರದಿಂದ ಬಸ್ಸಿನಲ್ಲಿದ್ದ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. https://ainlivenews.com/is-eating-garlic-on-an-empty-stomach-good-for-health-here-is-the-answer/ ಕೆರೆ ಏರಿ ಮೇಲಿನ ಇನ್ನೊಂದು ಭಾಗದಲ್ಲಿ ಸಂಪೂರ್ಣವಾಗಿ ಕೆರೆಯಲ್ಲಿ ನೀರು ತುಂಬಿತ್ತು. ಎಡಬದಿಗೆ ಬಸ್ ಬಿದ್ದಿದ್ದರಿಂದ ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಅತ್ತಿಬೆಲೆ ಪೊಲೀಸ್ (Attibele Police Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ (Siddara maiah) ಅವರ ಗ್ಯಾರಂಟಿ ಎಂದು ಸಿಎಂ ವಿರುದ್ಧ ಬಿಜೆಪಿ (BJP) ಎಕ್ಸ್‌ನಲ್ಲಿ ಕಿಡಿಕಾರಿದೆ. ಶಾಲೆ ಹಾಗೂ ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಕೂಡಿರಬೇಕು ಎಂದೇ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ. https://ainlivenews.com/is-eating-garlic-on-an-empty-stomach-good-for-health-here-is-the-answer/ ಶಾಲಾ ವಿದ್ಯಾರ್ಥಿಗಳ ಮನಸ್ಸಲ್ಲಿ ಸಮವಸ್ತ್ರ ವಿಚಾರವಾಗಿ ಮುಖ್ಯಮಂತ್ರಿಗಳು ಬೇಧವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪಿಎಫ್‍ಐ ಗೂಂಡಾಗಳು ಹಾಗೂ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ವೋಟ್ ಬ್ಯಾಂಕ್‍ಗಾಗಿ ಸಿದ್ದರಾಮಯ್ಯ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಟ್ವೀಟ್‍ನಲ್ಲಿ ಎಚ್ಚರಿಸಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊವಿಡ್ ಟೆನ್ಷನ್ ಶುರುವಾಗಿದೆ. ಇದರ ಬೆನ್ನಲ್ಲೇ ಹೊಸ ವರ್ಷ, ಕ್ರಿಸ್ಮಸ್ ಇದೆ. ಎಂ. ಜಿ. ರೋಡ್, ಬ್ರಿಗೇಡ್ ರೋಡ್’ನಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧವಿಲ್ಲ. ಆದರೆ, ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ವರ್ಷದ ಬರ್ತಿದೆ. ಇಡೀ ರಾಜ್ಯದಲ್ಲಿ ಯುವಕರು ಆಚರಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಎಂ. ಜಿ. ರೋಡ್ , ಕಮರ್ಷಿಯಲ್ ಸ್ಟೀಟ್‌ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಸೆಲಬ್ರೇಷನ್ ಮಾಡ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಘಟನೆಗಳು ಸಹ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಅಬಕಾರಿ ಇಲಾಖೆ, ಮೆಟ್ರೋ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳೂ ಸೇರಿದಂತೆ ಎಲ್ಲರನ್ನೂ ಕರೆದು ಸಭೆ ಮಾಡಿದ್ದೇನೆ ಎಂದು ಪರಮೇಶ್ವರ್ ಹೇಳಿದರು. https://ainlivenews.com/is-eating-garlic-on-an-empty-stomach-good-for-health-here-is-the-answer/ ಯಾವುದೇ ರೀತಿಯಲ್ಲಿ ನಗರದಲ್ಲಿ ಅಹಿತಕರ ಘಟನೆಗಳು ನಡೆಯಬಾರದು. ಅದರ ಜೊತೆಗೆ ಕೋವಿಡ್ ಕೂಡಾ…
ನವದೆಹಲಿ: ನನಗೆ ಮುಚ್ಚಿಡಲು ಏನೂ ಇಲ್ಲ, ಸಮನ್ಸ್ ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಈ ಕೂಡಲೇ ಸಮನ್ಸ್ (Summons) ಹಿಂಪಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಹೇಳಿದರು. ಮದ್ಯ ನೀತಿ ಪ್ರಕರಣದಲ್ಲಿ (Liquor Policy Case) ತಮಗೆ ಜಾರಿ ಮಾಡಿರುವ ಇಡಿ ಸಮನ್ಸ್‌ಗೆ ಪ್ರತಿಕ್ರಿಯಿಸಿದ್ದು, ಸಂಸ್ಥೆ ನೀಡಿದ ಹಿಂದಿನ ಸಮನ್ಸ್‌ನಂತೆಯೇ ಈ ಸಮನ್ಸ್ ಕೂಡ ಕಾನೂನುಬಾಹಿರವಾಗಿದೆ. ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿರುವುದರಿಂದ ಸಮನ್ಸ್ ಅನ್ನು ಇಡಿ ಹಿಂಪಡೆಯಬೇಕು ಎಂದು ಹೇಳಿದ್ದಾರೆ. ಸಮನ್ಸ್‌ಗೆ ಪ್ರತಿಯಾಗಿ ಆರು ಪುಟಗಳ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ನನಗೆ ಕಳುಹಿಸಲಾಗುತ್ತಿರುವ ಸಮನ್ಸ್‌ಗಳು ಯಾವುದೇ ವಸ್ತುನಿಷ್ಠ ಅಥವಾ ತರ್ಕಬದ್ಧ ಮಾನದಂಡವನ್ನು ಆಧರಿಸಿಲ್ಲ, ದೇಶದಲ್ಲಿ ಬಹು ನಿರೀಕ್ಷಿತ ಸಂಸತ್ತಿನ ಚುನಾವಣೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಸಂವೇದನಾಶೀಲ ಸುದ್ದಿಯನ್ನು ಸೃಷ್ಟಿಸಲು ಈ ಸಮನ್ಸ್ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. https://ainlivenews.com/apple-watch-series-9-watch-ultra-2-sales-halt-in-us-why/ ಸದ್ಯ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ…
WFI(Wrestling Federation Of India)ದ ನೂತನ ಅಧಕ್ಷರಾಗಿ ಬ್ರಿಜ್ ಭೂಷಣ್ ಆಯ್ಕೆಯಾದ ಬೆನ್ನಲ್ಲೆ ಖ್ಯಾತ ಕುಸ್ತಿಪಟು ಹಾಗು ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕ್ರೀಡಾ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಇಂದು ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಕ್ಷಿ ಮಲಿಕ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಪ್ರತಿಕ್ರಿಯಿಸಿದ ಪ್ರಮುಖ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ ಎಂದು ಇಂದಿನ ಚುನಾವಣಾ ಫಲಿತಾಂಶ ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಜಯ್ ಸಿಂಗ್ ಅವರು ಫೆಡರೇಷನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿಪಟುಗಳು ನಿರಂತರ ಕಿರುಕುಳ ಎದುರಿಸುವುದು ಮುಂದುವರಿಯಲಿದೆ, ಎಂದು ವಿನೇಶ್ ಫೋಗಟ್ ದುಃಖತಪ್ತರಾಗಿ ಹೇಳಿದರು.
ಬೆಂಗಳೂರು: ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ಕೇಳಲು ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಇವರೆಲ್ಲಾ ದೆಹಲಿಗೆ ಹೋಗಿಬಂದ ಪ್ರೈವೇಟ್ ಜೆಟ್ ನ ಐಶಾರಾಮಿ ವಿಡಿಯೋವನ್ನ ಸಚಿವ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಹ ಕೆರಳಿ ಕೆಂಡವಾಗಿದ್ದಾರೆ, https://ainlivenews.com/is-eating-garlic-on-an-empty-stomach-good-for-health-here-is-the-answer/ ರಾಜ್ಯದಲ್ಲಿ ಬರ ಆವರಿಸಿ ಜನರು ಸಂಕಷ್ಟದಲ್ಲಿದ್ದಾರೆ. ನೀವು ಮಾತ್ರ ಜೆಟ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೀರಿ. ಸಿದ್ಧರಾಮಯ್ಯ ನವರೇ ಬರದ ನಡುವೆ ಈ ದೌಲತ್ತು ಬೇಕಿತ್ತಾ. ಒಂದು ಕಡೆ ಮಕ್ಕಳು ಜೆಸಿಬಿಯಲ್ಲಿ ಹೋಗ್ತಾರೆ ಮತ್ತೊಂದು ಕಡೆ ಸಿದ್ಧರಾಮಯ್ಯ ಜೆಟ್ ನಲ್ಲಿ ಹೋಗ್ತಾರೆ. ಇದು ಬೇಕಾಗಿತ್ತಾ ಇವರಿಗೆ. ಸಿದ್ಧರಾಮಯ್ಯನವರು ನಾವು ಸಮಾಜವಾದಿ ಸಮಾಜವಾದಿ ಅಂತ ಹೇಳ್ತಾರೆ. ಇದೇನಾ ನಿಮ್ಮ ಸಮಾಜವಾದಿ ಧೋರಣೆ ಎಂದು ಕಿಡಿಕಾರಿದ್ರು