Author: AIN Author

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಿ ಕಠಿಣ ಕ್ರಮವನ್ನು ಜಾರಿಗೊಳಿಸಿದೆ. ಇನ್ಮುಂದೆ ಕೋವಿಡ್ ಅಂತ ಯಾರೇ ಬಂದರೂ  ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ವೈದ್ಯರಿಗೆ ಶಿಕ್ಷೆ ಕೊಡುವುದು ಹಾಗೆ  ಕೊರೋನಾ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿರೋ ಸರ್ಕಾರ  ರೋಗಿಗಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಯಾವ ಸಂದರ್ಭದಲ್ಲಾದ್ರೂ ಚಿಕಿತ್ಸೆ ಗೆ ಸಿದ್ಧವಿರಿ ಎಂದು ಸೂಚನೆ  ನೀಡಿದೆ. https://ainlivenews.com/toilet-clean-case-by-school-children-in-andrahalli-head-teacher-arrested/ ಚಾಮರಾಜನಗರ ಪ್ರಕರಣದಿಂದ ಎಚ್ಚೆತ್ತುಕೊಳ್ಳಲು ವೈದ್ಯರಿಗೆ ಖಡಕ್ ಸೂಚನೆ  ನೀಡಿದ್ದು ಯಾವುದೇ ರೋಗಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗಬೇಕು  ಒಂದು ವೇಳೆ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಹಿಸಿದ್ರೆ ಆ ಸಿಬ್ಬಂದಿ ಅಥವಾ ವೈದ್ಯರ ಮೇಲೆ ಕ್ರಮ ಜರುಗಿಸಲಾಗುವುದು ಎಂದು  ವೈದ್ಯರಿಗೆ ಎಚ್ಚರಿಕೆ ನೀಡಿರೋ ಸರ್ಕಾರ ವೈದ್ಯರು ಸರಿಯಾಗಿ ಕೆಲಸ ನಿರ್ವಹಣೆ ಮಾಡದೆ ಹೋದರೆ ಅವರ ನಿರ್ಲಕ್ಷ್ಯಕ್ಕೆ ಅವರೇ ಹೊಣೆ  ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸೂಚನೆ  ಈ ಹಿನ್ನೆಲೆ ತಪ್ಪು ಮರುಕಳಿಸದಂತೆ ಕೆಲಸ ನಿರ್ವಹಿಸಲು…

Read More

ಚಿಕ್ಕಮಗಳೂರು: ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏಕತೆ ಬೆಳೆಯಲಿ ಎಂಬ ಕಾರಣಕ್ಕೆ ಶಾಲೆಗಳಲ್ಲಿ ಮಾತ್ರ ಸಮವಸ್ತ್ರ ಕಡ್ಡಾಯಗೊಳಿಸಿ ಹಿಜಬ್‌ (Hijab) ನಿಷೇಧಿಸಲಾಗಿತ್ತು. ಆದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಬ್‌ಗೆ ನಿಷೇಧ ಹೇರಿರಲಿಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi)  ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ಸಿದ್ದರಾಮಯ್ಯ (Siddaramaiah) ಸಮವಸ್ತ್ರಕ್ಕೆ ಹಿಜಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಅನ್ನೋದನ್ನೇ ತೆಗೆಯುತ್ತಾರೋ ಗೊತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಹಿಜಬ್ ನಿಷೇಧ ಆಗಿರಲಿಲ್ಲ. ಕೇವಲ ಶಾಲೆ-ಕಾಲೇಜುಗಳಲ್ಲಿ 1964 ಶಿಕ್ಷಣ ಕಾಯ್ದೆ ಪ್ರಕಾರ ಯೂನಿಫಾರಂ ಕಡ್ಡಾಯ ಮಾಡಲಾಗಿತ್ತು ಎಂದು ಹೇಳಿದ್ದಾರೆ. https://ainlivenews.com/is-eating-garlic-on-an-empty-stomach-good-for-health-here-is-the-answer/ ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು. ಆದ್ರೆ ಈಗ ಮುಖ್ಯಮಂತ್ರಿಗಳು ಎಲ್ಲಾ ಯೂನಿಫಾರಂಗೂ ಹಿಜಬ್ ಕಡ್ಡಾಯ ಮಾಡಲು ಹೊರಟಿದ್ದಾರೋ ಅಥವಾ ಅವರಿಷ್ಟದಂತೆ ಮಾಡಲು ಹೊರಟಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಮಕ್ಕಳಿಗೆ ಯೂನಿಫಾರಂ ಕಡ್ಡಾಯಗೊಳಿಸಿದ್ದು, ಬಡವ ಬಲ್ಲಿದ ಅಂತ ಭೇದ ಇರಬಾರದು, ಜಾತಿಯ ತಾರತಮ್ಯ ಇರಬಾರದು,…

Read More

ಬೆಲ್ಜಿಯಂ: ಚೀನಾದ ಮಾರುಕಟ್ಟೆಯಲ್ಲಿ ವಿದೇಶೀ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಇಲ್ಲದಿರುವುದು ಬಹಳಷ್ಟು ಪಾಶ್ಚಿಮಾತ್ಯ ದೇಶಗಳಿಗೆ ಇರಿಸುಮುರುಸು ತಂದಿದೆ. ಅದರಲ್ಲೂ ಯೂರೋಪ್ ದೇಶಗಳು ಚೀನಾ ಮಾರುಕಟ್ಟೆ ಪ್ರಾಬಲ್ಯದಿಂದ ಹತಾಶಗೊಂಡಿವೆ. ಈ ವಿಚಾರವು ಮುಂಬರುವ ಚೀನಾ ಮತ್ತು ಐರೋಪ್ಯ ಒಕ್ಕೂಟ (European Union) ವಾರ್ಷಿಕ ಸಭೆಯಲ್ಲಿ ಚರ್ಚೆಗೆ ಬರಲಿದೆ.  ಚೀನಾದ ಬೀಜಿಂಗ್​ನಲ್ಲಿ ನಡೆಯಲಿರುವ 24ನೇ ಯೂರೋಪಿಯನ್ ಯೂನಿಯನ್ ಚೀನಾ ಮಹಾಸಭೆಗೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಐರೋಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲ ವೋನ್ ಡೆರ್ ಲೆಯೆನ್ (Ursula Von Der Leyen), ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. https://ainlivenews.com/can-diabetics-eat-dates-here-is-useful-information/ ಚೀನಾ ಜೊತೆಗಿನ ವ್ಯಾಪಾರ ಅಸಮತೋಲವನ್ನು ಯೂರೋಪ್ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜರ್ಮನಿಯ ಮಾಜಿ ಸಚಿವೆಯೂ ಆದ ಉರ್ಸುಲ ಹೇಳಿದ್ದಾರೆ. ಐರೋಪ್ಯ ಒಕ್ಕೂಟದ ದೇಶಗಳು ವ್ಯಾಪಾರ ಸಮರಕ್ಕೆ ಬೀಳುವ ಬದಲು ಸಂಧಾನ ಬಯಸುತ್ತಾರೆ ಎಂದೂ ಯೂರೋಪಿಯನ್ ಕಮಿಷನ್​ನ ಅಧ್ಯಕ್ಷೆಯೂ ಆದ ಅವರು ಹೇಳಿದ್ದಾರೆ. ಫೋರ್ಬ್ಸ್ 2023 ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿರುವ ಉರ್ಸುಲಾ…

Read More

ಬೆಂಗಳೂರು: ಯಶವಂತಪುರದ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ (Andrahalli School) ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕಿಯನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. BEO ಆಂಜಿನಪ್ಪ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿದೇವಮ್ಮರನ್ನ ಬಂಧಿಸಿದ್ದಾರೆ. ತಡರಾತ್ರಿಯಿಂದಲೇ ಅವರನ್ನ ರಾಜ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಶನಿವಾರ (ಇಂದು) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಡೆದಿದ್ದೇನು..?: ಕೋಲಾರ ಜಿಲ್ಲೆಯಲ್ಲಿ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೆಟ್ ಕ್ಲೀನಿಂಗ್‌ (Toilet Clean) ಮಾಡಿಸಿದ್ದರು. 6 ನೇ ತರಗತಿ ವಿದ್ಯಾರ್ಥಿಗಳು ಆಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದರು. ಈ ವಿಚಾರ ಪೋಷಕರಿಗೆ ಗೊತ್ತಾಗಿ ಅವರು ಶಾಲೆಯ…

Read More

ಬೆಂಗಳೂರು: ಸ್ವರ್ಗದ ಬಾಗಿಲು ತೆರೆಯುವ ಪುಣ್ಯದಿನವಾದ ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ (Vaikunta Ekadasi) ಸಂಭ್ರಮ ಮನೆ ಮಾಡಿದೆ. ಈ ದಿನ ಭಕ್ತರು ವೆಂಕಟೇಶ್ವರನ ದೇಗುಲಕ್ಕೆ ಭೇಟಿ ಕೊಟ್ಟು ಸ್ವರ್ಗದ ದ್ವಾರ ಹಾದು ಹೋಗಿ, ಪುನೀತರಾಗುವ ಕ್ಷಣ ಎಂದೇ ಈ ದಿನವನ್ನ ಭಾವಿಸಲಾಗಿದೆ. ಕೊರೊನಾ ಆತಂಕದ ನಡುವೆಯೂ ಭಕ್ತರು ದೇಗುಲಗಳಿಗೆ (Temples) ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೊನಾ ಇರೋದ್ರಿಂದ ಏಕಾದಶಿಯ ಸಂಭ್ರಮದ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಲಾಗುತ್ತಿದೆ. ಆದ್ರೆ ಕೆಲ ಭಕ್ತರು ಮಾಸ್ಕ್‌ ಧರಿಸದೇ ದೇವಸ್ಥಾನಕ್ಕೆ ಆಗಮಿಸಿದ್ದ ದೃಶ್ಯಗಳು ಕಂಡುಬಂದಿವೆ. ಈಗಾಗಲೇ ಬೆಂಗಳೂರಿನ ರಾಜಾಜಿನಗರದ (Bengaluru Rajajinagar) ಇಸ್ಕಾನ್ ದೇಗುಲದಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವರ ದರ್ಶನಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಮಾಸ್ಕ್ ಧರಿಸುವ ಬಗ್ಗೆ ನಿಗಾ ಇಡಲು, ಜನಜಂಗುಳಿ ನಿಯಂತ್ರಣಕ್ಕೆ ಭದ್ರತಾ ಸಿಬ್ಬಂದಿಯನ್ನ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ನಗರದ ವೈಯಾಲಿಕಾವಲ್‌ನ ಟಿಟಿಡಿ ದೇಗುಲದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬರುವ ಭಕ್ತರಿಗೆ ದೇಗುಲ ವತಿಯಿಂದಲೇ ಮಾಸ್ಕ್…

Read More

ಉಡುಪಿ: ಹಿಂದೂ (Hindu) ಎಂದರೆ ಅದೊಂದು ಜೀವನ ಪದ್ಧತಿ. ಆ ಪದ್ಧತಿಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಬರುತ್ತಾರೆ. ಹಿಂದೂ ಎಂದರೆ ಭಾರತವನ್ನು ಪ್ರೀತಿಸುವ ಮತ್ತು ಭಾರತವನ್ನು ಮಾತೃಭೂಮಿ ಎಂದು ಒಪ್ಪಿದ ಎಲ್ಲರೂ ಒಳಗೊಳ್ಳುತ್ತಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ (Raghupati Bhat) ಹೇಳಿದ್ದಾರೆ. ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆ ಅಜ್ಞಾನ ಪ್ರದರ್ಶಿಸುತ್ತದೆ. ಭಾರತವೇ ಶ್ರೇಷ್ಠ ಎಂದು ಭಾವಿಸುವವರೆಲ್ಲ ಹಿಂದೂಗಳು. https://ainlivenews.com/apple-watch-series-9-watch-ultra-2-sales-halt-in-us-why/ ಯಾರು ಕೂಡ ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ ಎಂದು ಹೇಳುವ ಪ್ರಶ್ನೆ ಬರುವುದಿಲ್ಲ. ಭಾರತವನ್ನು ಯಾವಾಗಲೂ ಹಿಂದುಸ್ಥಾನ ಎಂದು ಕರೆಯಲಾಗುತ್ತದೆ. ಇದು ಹಿಂದೂ ರಾಷ್ಟ್ರ, ಆ ಶಬ್ದವನ್ನು ಸಿದ್ದರಾಮಯ್ಯನವರು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆ ರಾಜಕೀಯ ತಂತ್ರ ಅಷ್ಟೇ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಹಿಂದೂಗಳನ್ನು ದೂಷಿಸುತ್ತಾರೆ. ಹಿಂದೂ ಜೀವನ ಪದ್ಧತಿ ಎಂದು ನಮಗೆ ಸಂಘಟನೆಗಳು…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಾದ ಜಮೀರ್ ಅಹ್ಮದ್‌‌ಖಾನ್ ಮತ್ತು ಕೃಷ್ಣಬೈರೇಗೌಡ ಖಾಸಗೀ ವಿಮಾನಯಾನದಲ್ಲಿ ದೆಹಲಿಗೆ ಹೋಗಿಬಂದ ವಿಚಾರ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಪ್ರಮುಖರು ಐಶಾರಾಮಿ ಪ್ರಯಾಣದ ನೆಪದಲ್ಲಿ ಮೋಜು ಮಸ್ತಿ ಬೇಕಿತ್ತಾ ಎಂದು  ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕ್ತಿದೆ. ಇದು ಆಡಳಿತ ಹಾಗೂ ವಿಪಕ್ಷದ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ…. ರಾಜ್ಯದಲ್ಲಿ ಬರ ತಾಂಡವವಾಡ್ತಿದೆ ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ಕೇಳಲು ಸಿಎಂ‌ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಇವರೆಲ್ಲಾ ದೆಹಲಿಗೆ ಹೋಗಿಬಂದ ಪ್ರೈವೇಟ್ ಜೆಟ್ ನ ಐಶಾರಾಮಿ ವಿಡಿಯೋವನ್ನ ಸಚಿವ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದೇ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಇಂತಹ ಸಂಕಷ್ಟದ ಸಮಯದಲ್ಲಿ ಈ ಮೋಜು ಮಸ್ತಿ ಬೇಕಿತ್ತಾ ಅಂತ…

Read More

ಪರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಹರಿಣರ ತಂಡದ ಕೇಶವ್ ಮಹಾರಾಜ್ (Keshav Maharaj) ಕ್ರೀಸ್‌ಗೆ ಬಂದ ವೇಳೆ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ (KL Rahul) ನಡೆಸಿದ ಸಣ್ಣ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇಶವ್ ಮಹಾರಾಜ್ ಕ್ರೀಸ್‌ಗೆ ಬಂದಕೂಡಲೇ `ರಾಮ್ ಸಿಯಾ ರಾಮ್ (Ram Siya Ram), ಜೈ ಜೈ ರಾಮ್, ಸೀತಾರಾಮ್’ ಗೀತೆಯನ್ನು ನುಡಿಸಲಾಗಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ಚೇಸಿಂಗ್ ವೇಳೆ, 33.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದ್ದಾಗ ಆಲ್‌ರೌಂಡರ್ ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು. ಕೇಶವ್ ಬರುತ್ತಿದ್ದಂತೆ ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಸ್ಪೀಕರ್‌ಗಳಲ್ಲಿ `ರಾಮ್ ಸಿಯಾ ರಾಮ್’ ಹಾಡು ಮೊಳಗಿತು. ಭಾರತ ಮೂಲದವರೇ ಆದ ಕೇಶವ್ ಮಹಾರಾಜ್ ದೈವಭಕ್ತ ಎಂಬುದು ಹೊಸ ವಿಷಯವೇನಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಅವರಿಗೊಪ್ಪುವ ಹಾಡನ್ನೇ ಅವರ ಎಂಟ್ರಿ ವೇಳೆ ಪ್ರಸಾರ…

Read More

ಕೊಪ್ಪಳ: ಲೋಕಸಭಾ ಚುನಾವಣೆಗೆ (Loksabha Election) ನಾನಾಗಲಿ, ನನ್ನ ಕುಟುಂಬದವರಾಗಲಿ ಸ್ಪರ್ಧೆ ಮಾಡುವುದಿಲ್ಲ. ಹೊಸ ಅಭ್ಯರ್ಥಿಗಳು ಈಗಾಗಲೇ ರೆಡಿ ಆಗಿದ್ದಾರೆ. ಅವರ ಹೆಸರುಗಳನ್ನು ಕೊಪ್ಪಳದ ಸಮಾವೇಶದಲ್ಲಿ ಘೋಷಣೆ ಮಾಡುತ್ತೇನೆ ಎಂದು ಶಾಸಕ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಹಿನ್ನೆಲೆ ಜನವರಿ 11 ರಂದು ಕೊಪ್ಪಳದಲ್ಲಿ 6 ಜಿಲ್ಲೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 4 ರಿಂದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಅವರನ್ನು ಗೆಲ್ಲಿಸಲು ಹಗಲು ರಾತ್ರಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. https://ainlivenews.com/apple-watch-series-9-watch-ultra-2-sales-halt-in-us-why/ ಬೇರೆ ಪಕ್ಷಗಳ ಜೊತೆಗೆ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ (Vidhanasabha Election) ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಕೆಆರ್ ಪಿಪಿ (KRPP) ತನ್ನ ಇತಿಮಿತಿಗಳಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡುತ್ತದೆ. ಬೇರೆ ಪಕ್ಷಗಳ ಜೊತೆಗೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರು ಏನೇ ಮಾಡಿದರೂ ನನ್ನ ನಿರ್ಧಾರ ದೃಢವಾಗಿದೆ. ಕೆಆರ್ ಪಿಪಿ ಸ್ವತಃ ಬಲದ ಮೇಲೆ ಪಕ್ಷ ಕಟ್ಟುವ…

Read More

ದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಆಪ್ತ ಸಂಜಯ್ ಸಿಂಗ್ (Sanjay Singh) ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ವಿರೋಧಿಸಿ, ಕುಸ್ತಿಪಟು ಬಜರಂಗ್‌ ಪುನಿಯಾ (Bajrang Punia) ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಸಂಜಯ್‌ ಸಿಂಗ್‌ ಆಯ್ಕೆ ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲಿಕ್‌ (Sakshee Mallikh), ಗುರುವಾರ ಕಣ್ಣೀರಿಟ್ಟು ಕುಸ್ತಿಗೆ ವಿದಾಯ ಹೇಳಿದರು. ಇದರ ಬೆನ್ನಲ್ಲೇ ಬಜರಂಗ್‌ ಪುನಿಯಾ, ಪದ್ಮಶ್ರೀ ಪ್ರಶಸ್ತಿ (Padma Shri) ಹಿಂದಿರುಗಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ ‘ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಗೆ ಹಿಂದಿರುಗಿಸುತ್ತಿದ್ದೇನೆ. ಅದನ್ನು ಹೇಳಲು ಈ ಪತ್ರ ಬರೆದಿದ್ದೇನೆ ಎಂದು ಬಜರಂಗ್‌ ಪುನಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ‘ಎಲ್ಲಿ ಹೋಗಬೇಕು, ಏನು ಮಾಡಬೇಕು ಮತ್ತು ಹೇಗೆ ಬದುಕಬೇಕು ಎಂದು ನನಗೆ ಅರ್ಥವಾಗಲಿಲ್ಲ. ಸರ್ಕಾರ ಮತ್ತು ಜನರು ನನಗೆ ತುಂಬಾ ಗೌರವ ನೀಡಿದರು. ಈ ಗೌರವದ ಹೊರೆಯಲ್ಲಿ ನಾನು ಉಸಿರುಗಟ್ಟುವುದನ್ನು…

Read More