Author: AIN Author

ದಾವಣಗೆರೆ:- ರಾಜ್ಯದಲ್ಲಿರುವುದು ಟಿಪ್ಪು ಸುಲ್ತಾನ್ ನೇತೃತ್ವದ ತುಘಲಕ್ ಸರ್ಕಾರ ಎಂದು ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಲ್ಲ. ಬದಲಾಗಿ ಟಿಪ್ಪು ಸುಲ್ತಾನ್ ನೇತೃತ್ವದ ತುಘಲಕ್ ಸರ್ಕಾರ‌ ಇದೆ ಎಂದರು. ಹಿಜಾಬ್​ ನಿಷೇಧ ವಾಪಸ್​ ಪಡೆದಿರುವ ಕಾಂಗ್ರೆಸ್​ ಸರ್ಕಾರದ ಕ್ರಮವನ್ನು ಖಂಡಿಸಿರುವ ಎಂ.ಪಿ. ರೇಣುಕಾಚಾರ್ಯ ಹಿಂದೂ ಯುವಕರಿಗೆ ಕೇಸರಿ ಶಾಲು ಧರಿಸುವಂತೆ ನಾವೇ ಕರೆ ಕೊಡುತ್ತೇವೆಂದು ತಿಳಿಸಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಹಿಂದೂ ಯುವಕ, ಯುವತಿಯರಿಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು. ಅಂದಿನ ಬಿಜೆಪಿ ಸರ್ಕಾರದ ಅದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹಿಜಾಬ್ ಆದೇಶ ವಾಪಸ್ ಪಡೆದರೆ ಹಿಂದೂ ಯುವಕರಿಗೆ ಕೇಸರಿ ಶಾಲು ಧರಿಸುವಂತೆ ನಾವೇ ಕರೆ ಕೊಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟ, ಬಟ್ಟೆ ನಮ್ಮ ಹಕ್ಕು ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಲ್ಲ. ಬದಲಾಗಿ ಟಿಪ್ಪು ಸುಲ್ತಾನ್ ನೇತೃತ್ವದ ತುಘಲಕ್…

Read More

ಬಿಗ್ ಬಾಸ್​ ಮನೆಯಲ್ಲಿ ವೀಕೆಂಡ್​ ಬಂತು ಅಂದ್ರೆ ಸಾಕು ಸ್ಪರ್ಧಿಗಳಿಗೆ ಅಚ್ಚರಿಗಳು  ಎದುರಾಗುತ್ತಲೇ ಇದೆ. ಆ ಅಚ್ಚರಿ ಏನೆಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಬೆಳಿಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಹಿರಿಯ ನಟಿ, ಬಿಗ್‌ಬಾಸ್‌ ಸ್ಪರ್ಧೆಯ ವಿಜೇತೆಯೂ ಆಗಿರುವ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರನ್ನು ನೋಡುತ್ತಿದ್ದ ಹಾಗೆಯೇ ಮನೆಯ ಸದಸ್ಯರೆಲ್ಲರೂ ಖುಷಿಯಿಂದ ಕುಣಿದಾಡಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶ ಕುರ್ಚಿಯಲ್ಲಿ ಕೂತಿದ್ದಾರೆ. ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ‘ವಿನಯ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ, ವಾರವಿಡೀ ಮನೆಯ ಸದಸ್ಯರ ಜೊತೆಗೇ ಇನ್ನೊಂದು ರೀತಿ ಇರುತ್ತಾರೆ?’ ಎಂಬ ಪ್ರಶ್ನೆಗೆ ಸಂಗೀತಾ ತುಂಬ ಪ್ರಬಲವಾಗಿ ಹೌದು ಎಂದಿದ್ದಾರೆ. ಅಷ್ಟೇ ಅಲ್ಲ, ಇಷ್ಟು ದಿನಗಳ ಕಾಲ ವಿನಯ್ ಆಪ್ತಬಳಗದಲ್ಲಿ ಗುರ್ತಿಸಿಕೊಂಡಿದ್ದ ನಮ್ರತಾ ಕೂಡ, ‘ನನಗೂ ಹಾಗೇ ಅನಿಸುತ್ತದೆ. ಸುದೀಪ್ ಸರ್ ಎದುರಿಗೆ…

Read More

ಬೆಂಗಳೂರು: ಹಿಜಬ್‌ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಕಿಡಿಕಾರಿದ್ದಾರೆ. https://x.com/BasanagoudaBJP/status/1738454045067817302?s=20 ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಯತ್ನಾಳ್‌, ಸಿದ್ದರಾಮಯ್ಯನವರು ಹಿಜಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ. ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳು ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Read More

ಧಾರವಾಡ:- ಹಿಜಾಬ್ ನಿಷೇಧ ಆದೇಶ ವಾಪಸ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವ ಸಂತೋಷ್ ಲಾಡ್ ಗರಂ ಆಗಿದ್ದಾರೆ. ಈ ಸಂಬಂಧ ದಾವಣಗೆರೆಯಲ್ಲಿ ಮಾತನಾಡಿದ ಅವರು, ಅದು ದಂಗಲ್ ಹೇಗೆ ಆಗುತ್ತದೆ. ಸಿಎಂ ಹೇಳಿದ್ದು ಕಾನೂನಾತ್ಮವಾಗಿ ಇದೆ. ಅದನ್ನು ದಂಗಲ್ ಎಂಬ ಪದ ಬಳಸಿ ಯಾಕೆ ಹೇಳ್ತಿರಾ? ಧರ್ಮ ದಂಗಲ್ ಎಂದರೆ ಏನು? ಅದರಲ್ಲಿ ಧರ್ಮ ದಂಗಲ್ ಏನಾಗಿದೆ ಹೇಳಿ ಮಾಧ್ಯಮಗಳು ಧರ್ಮ ದಂಗಲ್ ಪದ ಬಳಸುತ್ತಿದ್ದಿರಿ. ಇದು ಎಷ್ಟು ಸರಿ? ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಅದಕ್ಕೆ ಅವಕಾಶವಿದೆ. ಅದರಲ್ಲಿ ಸಿಎಂ ತಪ್ಪು ಏನಿದೆ. ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ ಮಾಡಲಿ. ನಾನು ಒಬ್ಬ ಹಿಂದೂ ಅಲ್ಲವಾ? ನಾನೇನು ವಿರೋಧ ಮಾಡುತ್ತಿಲ್ಲ. ನೀವು ಹಿಂದೂ ಅಲ್ಲವಾ? ನೀವು ವಿರೋಧ ಮಾಡುತ್ತಿರಾ? ನಿಮ್ಮ ನಿಲುವು ಏನು? ಎಂದು ಪ್ರಶ್ನಿಸಿದರು. ಮುಸ್ಲಿಂ ತುಷ್ಠೀಕರಣ ಆರೋಪ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷಗಳ ದೃಷ್ಟಿಕೋನ ಹಾಗಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ…

Read More

ಬೆಂಗಳೂರು: ಕ್ರಿಸ್ಮಸ್ ಗೆ ಕೇವಲ ಎರಡೇ ದಿನಗಳು ಬಾಕಿ ಉಳಿದಿವೆ. ಕ್ರಿಸ್ಮಸ್ ಅಂದಾಕ್ಷಣ ನೆನಪಾಗೋದು ಕೇಕ್ ಶೋ (Cake Show). ಸಿಲಿಕಾನ್ ಸಿಟಿಯಲ್ಲಿ ಕೇಕ್‍ಗಳ ಲೋಕ ಧರೆಗಿಳಿದಿದ್ದು, ಎಲ್ಲರನ್ನೂ ಕೈ ಬೀಸಿ ಕರೆಯುತ್ತಿವೆ. ಹೌದು. ಕ್ರಿಸ್ಮಸ್ (Christmas) ಹಾಗೂ ನ್ಯೂ ಇಯರ್ (New Year) ಅನ್ನು ಬರ ಮಾಡಿಕೊಳ್ಳೋಕೆ ಬೆಂಗಳೂರಿಗರು ಸಜ್ಜಾಗಿದ್ದಾರೆ. ಕ್ರಿಸ್ಮಸ್ ಹಬ್ಬದ ಅಂದ ತಕ್ಷಣ ಬೆಂಗಳೂರಿಗರಿಗೆ ನೆನಪಾಗೋದು ಕೇಕ್ ಶೋ. ಪ್ರತಿ ವರ್ಷದಂತೆ ಈ ವರ್ಷವೂ ಸಂತ ಜೋಸೆಫ್ ಸ್ಕೂಲ್ ಗ್ರೌಂಡ್ ನ ಆವರಣದಲ್ಲಿ 49ನೇ ವರ್ಷದ ಕೇಕ್ ಶೋ ಆರಂಭವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಕೇಕ್‍ಗೆ ಕಲಾ ರೂಪ ಕೊಟ್ಟಿದ್ದು, ಸುಮಾರು 25 ಕೇಕ್ ನ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಪ್ರಮುಖವಾಗಿ ಈ ಬಾರಿ ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ (Shakti Scheme), ಮಹಿಳೆಯರ ಉಚಿತ ಪ್ರಯಾಣದ ಫ್ರೀ ಬಸ್, ಸಂಸತ್ತು ಭವನ, ದುರ್ಗ ದೇವಿ, ಚಂದ್ರಯಾನ (Chandrayaan), ಶಿವಾಜಿ, ಶಾಂಪಿಗ್…

Read More

ಬೆಂಗಳೂರು: ಹಿಜಾಬ್​ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಬೈ. ವಿಜಯೇಂದ್ರ ಕಿಡಿಕಾರಿದರು. ಈ ಕುರಿತು  ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಿಎಂ ಸಿದ್ದರಾಮಯ್ಯ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹಿಜಾಬ್ ರದ್ದತಿ ಆದೇಶ ವಾಪಸ್‌ ವಿಚಾರ ಮತ್ತೆ ರಾಜ್ಯದಲ್ಲಿ ಹಿಜಾಬ್ ಗೆ ಅವಕಾಶ ನೀಡೊದಾಗಿ ಹೇಳಿ ಶಿಕ್ಷಣವನ್ನ ಕಲುಷಿತ ಮಾಡೊದಕ್ಕೆ ಸಿಎಂ ಕೈಹಾಕಿರೋದು ದುರಾದೃಷ್ಟಕರ, ಶಾಲೆಗೆ ಹೋಗುವ ಮಕ್ಕಳನ್ನಾದ್ರು ರಾಜಕೀಯದಲ್ಲಿ ಬಳಕೆ ಮಾಡಿಕೊಳ್ಳೊದ್ರಿಂದ ದೂರ ಇಡಬಹುದಾಗಿತ್ತು ಎಂದರು. https://ainlivenews.com/hijab-ban-back-cms-big-trick-lies-behind-this-r-ashok/ ಇದನ್ನ ನಾವು ವಿರೋಧ ವ್ಯಕ್ತಪಡಿಸುತ್ತೇವೆ, ಇವತ್ತಿಗೂ ಶೇ50 ರಷ್ಟು ಅಲ್ಪಸಂಖ್ಯಾತರಿಗೆ ಶಿಕ್ಷಣದಿಂದ ವಂಚಿತರಾಗಿದ್ದಾರೆ ಇದಕ್ಕೆ ಕಾಂಗ್ರೆಸ್ ಪಕ್ಷವೆ ಕಾರಣ ತಾನೆ. ಶೇ 6೦ ರಷ್ಟು ಕೆಲಸವಿಲ್ಲದೆ ಬೇಜವಾಬ್ದಾರಿಯಿಂದ ಓಡಾಡೊದಕ್ಕೆ ಕಾಂಗ್ರೆಸ್ ಕಾರಣ, ಅಲ್ಪಸಂಖ್ಯಾತರನ್ನ ಕೇವಲ‌ ಓಟ್ ಬ್ಯಾಂಕ್ ಗಾಗಿ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಅಲ್ಪಸಂಖ್ಯಾತ ಮಹಿಳೆರ ಪರವಾಗಿ ತ್ರಿಪಲ್‌ ತಲಾಕ್ ನಿಷೇಧ ಮಾಡಿದ್ದರು ಕಾಂಗ್ರೆಸ್ ನವರು ಏನ್ ಮಾಡಿದ್ದೀರಿ ಎಂದು…

Read More

ಬೆಳಗಾವಿ:- ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದಲ್ಲಿ ಹಿಜಾಬ್ ಬ್ಯಾನ್ ವಾಪಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ತುಷ್ಟೀಕರಣ ಮಾಡ್ತಾರೆ. ಇದು ಹೊಸತೇನು ಅಲ್ಲ, ಈ ಸಲ ಅಧಿಕಾರಕ್ಕೆ ಬಂದಿದ್ದು ಮುಸ್ಲಿಂ ಮತಗಳಿಂದ ಎಂಬುದನ್ನು ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಹೇಳಿದೆ. ಬಳಿಕ 10 ಸಾವಿರ ಕೋಟಿ ಕೊಡ್ತಿನಿ ಅಂತ ಹೇಳಿದರು. ನಂತರ ಹಿಜಾಬ್ ಬ್ಯಾನ್ ವಾಪಸ್ ಹೊಸದಲ್ಲ. ಹಿಂದುಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದು ದುರಂತ ಎಂದು ಹೇಳಿದರು ಮುಸ್ಲಿಂ ಮಹಿಳೆಯರ ಅಭಿವೃದ್ಧಿ ಮುಖ್ಯ ಎಂದು ಮೋದಿ ಸರ್ಕಾರ ತ್ರೀವಳಿ ತಲಾಕ್ ರದ್ದು ಮಾಡಿತು. ಸಿದ್ದರಾಮಯ್ಯ ನಡೆ ಪ್ರಗತಿಗೆ ವಿರೋಧವಾಗಿದೆ. ಹೋರಾಟವನ್ನು ಯಾರು ಮಾಡಬೇಕಿಲ್ಲ. ಹಿಂದೂಗಳು ಸಹ ಕೇಸರಿ ಶಾಲ್ ಹಾಕಿ ಬಂದ್ರೆ ಯಾರು ತಡೆಯುವಂತೆ ಇಲ್ಲ ಎಂದು ಹೇಳಿದರು. ತರಗತಿಯ ವಾತಾವರಣ ಹಾಳು ಮಾಡೋ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

Read More

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾಗೆ ಯುಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಇದೇ ಡಿಸೆಂಬರ್ 29ರಂದು ‘ಕಾಟೇರ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಕಾಟೇರ’ ನೋಡಿ ಸೆನ್ಸಾರ್‌ ಮಂಡಳಿ ಮೆಚ್ಚಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ತರುಣ್ ಸುಧೀರ್ ಅವರು, ಕಾಟೇರ ಚಿತ್ರಕ್ಕೆ ಸೆನ್ಸಾರ್​ ಮಂಡಳಿ ಯುಎ ಸರ್ಟಿಫಿಕೇಟ್ ನೀಡಿದೆ. ಕನ್ನಡ ಸಿನಿ ಪ್ರೇಕ್ಷಕರು ಹಬ್ಬ ಮಾಡಲು ಸಿದ್ಧರಾಗಿ. ಇದೇ ಡಿಸೆಂಬರ್ 29ರಂದು (ಒಂದು ವಾರ) ನಿಮ್ಮ ‘ಕಾಟೇರ’ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ‘ಕಾಟೇರ’ ಚಿತ್ರ ಈಗಾಗಲೇ ಎರಡು ಹಾಡು ಹಾಗೂ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಟ ದರ್ಶನ್​ಗೆ ಜೊತೆಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಅಭಿನಯಿಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೌಕ, ರಾಬರ್ಟ್​ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತೊಮ್ಮೆ ದರ್ಶನ್​ಗೆ ಆಕ್ಷನ್​ ಕಟ್ ಹೇಳಿದ್ದಾರೆ. ಇದೇ ಡಿಸೆಂಬರ್ 29ರಂದು ‘ಕಾಟೇರ’…

Read More

ಬೆಂಗಳೂರು: ಸಿಲಿಕಾನ್ ಸಿಟಿ ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿದ್ದರೆ ಈ ಕಡೆ ಮಾತ್ರ  ಬೆಂಗಳೂರಿನಲ್ಲಿ ಡ್ರಗ್ಸ್ ವಾಸನೆ ತೋರಿಸಲು ಮುಂದಾಗಿದ್ದ ಮೂವರು ಡ್ರಗ್ ಪೆಡ್ಲರ್’ಗಳನ್ನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸಿಸಿಬಿಯಿಂದ ಒರ್ವ ವಿದೇಶಿ ಮತ್ತು ಇಬ್ಬರು ಕೇರಳ ಡ್ರಗ್ ಪೆಡ್ಲರ್’ಗಳನ್ನ ಅರೆಸ್ಟ್ ಮಾಡಲಾಗಿದ್ದು  ಜೋಶುಹಾ, ನಿಸಾಮ್, ಅಬ್ದುಲ್ ಅಹದ್ ಬಂಧಿತ ಆರೋಪಿಗಳು ಬಂಧಿತರಿಂದ 52 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಬೇಗೂರು ಮತ್ತು ಕೋರಮಂಗಲ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಂಗ್ರಹ ಮಾಡಿಕೊಂಡಿದ್ರು  ಖಚಿತ ಮಾಹಿತಿ ಮೇರೆ ದಾಳಿ ನಡೆಸಿ ಆರೋಪಿಗಳು ಹಾಗೂ 86.89 ಗ್ರಾಂ. MDMA, 100 LSD Strips ಸೇರಿದಂತೆ ಅನೇಕ ವಿಧದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಮೂರು ತಿಂಗಳಿಂದ  ಬೆಂಗಳೂರಿನಲ್ಲಿ ವಾಸವಿದ್ದ ವಿದೇಶಿ ಪ್ರಜೆ  ಇಲ್ಲಿ ವಾಸವಿರೋ ಆಫ್ರಿಕಾ ಪ್ರಜೆಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ ಮಾಡಿ ಹೆಚ್ಚು ಬೆಲೆಗೆ ಮಾರಾಟ ಮಾಡ್ತಿದ್ದ  ಉಳಿದ ಇಬ್ಬರು ಕೇರಳ ಡ್ರಗ್ ಪೆಡ್ಲರ್ಗಳು ಸ್ಥಳೀಯ ಪೆಡ್ಲರ್ ನಿಂದ ಖರೀದಿ…

Read More

ತುಮಕೂರು:- ಫೈನಾನ್ಸ್ ನೌಕರರ ಕಿರುಕುಳಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮದ್ಲೇಹಳ್ಳಿಯಲ್ಲಿ ಜರುಗಿದೆ. 36 ವರ್ಷದ ಪುಪ್ಪಲತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ. ಪುಷ್ಪಲತಾ ತಿಪಟೂರು ನಗರದಲ್ಲಿರುವ ಬಜಾಜ್ ಫೈನಾನ್ಸ್ ನಿಂದ 90,000 ಸಾಲ ಪಡೆದಿದ್ದ. ಕೊನೆಯ ಕಂತು ಕಟ್ಟಲು ಸ್ವಲ್ಪ ವಿಳಂಬವಾದ ಹಿನ್ನೆಲೆ, ಒಂದು ಕಂತಿಗೆ ಮನೆಯ ಮುಂದೆ ಬಂದು ಫೈನಾನ್ಸ್ ನೌಕರರು ಗಲಾಟೆ ಮಾಡಿದರು. ಹರ್ಷವರ್ಧನ್ ಮತ್ತು ಮತ್ತೊಬ್ಬ ವ್ಯಕ್ತಿಯಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ಜೀವ ಹೋಗಿದೆ ಎಂದರೂ ಹಣವೇ ಮುಖ್ಯ ಎಂದು ಫೈನಾನ್ಸ್ ನೌಕರರು ಮಾತನಾಡಿದ್ದಾರೆ. ಸತ್ರೆ ಸಾಯ್ತಾರೆ, ನಮ್ಮ ಹಣ ಕೊಡಿ ಎಂದು ಪೈನಾನ್ಸ್ ನೌಕರರು ಹಾವಾಜ್ ಹಾಕಿದ್ದಾರೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ಪತಿ ಕೃಷ್ಣಕುಮಾರ್ ದೂರು ನೀಡಿದ್ದು, ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More