Author: AIN Author

ಬೆಂಗಳೂರು: ಫೈಟರ್ ರವಿ ಒಂದು ಕಾಲದಲ್ಲಿ ಫೀಲ್ಡಲ್ಲಿ ಹೆಸರು ಮಾಡಿದ್ದ ಆಸಾಮಿ.. ನಾಗಮಂಗಲದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಟಿಕೆಟ್ ಕೈತಪ್ಪಿ ಪಕ್ಷೇತರ ಅಭ್ಯರ್ಥಿಯಾಗಿ‌ ಕಣಕ್ಕಿಳಿದು ಸದ್ದು ಮಾಡಿದ್ದ.. ಇದೀಗ ಐಟಿ ದಾಳಿಯಾಗಿ ಸಿಸಿಬಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ.. ಹೀಗೆ ಮಾತನಾಡುತ್ತಾ ನಿಂತಿರೋ ಇವರ ಹೆಸರು ಬಿಎಂ ಮಲ್ಲಿಕಾರ್ಜುನ.. ಹೀಗಂದ್ರೆ ಇವ್ರು ಯಾರು ಅನ್ನೋದು ಯಾರಿಗೂ ತಿಳಿಯೋದಿಲ್ಲ..  ಫೈಟರ್ ರವಿ ಅಂದ್ರೆನೆ ಎಲ್ಲಾರಿಗೂ ಗೊತ್ತಾಗೊದು.. ರವಿ ಇದೀಗ ಮತ್ತೆ ಸುದ್ದಿಯಲ್ಲಿರೋಕೆ ಕಾರಣ ಮೊನ್ನೆ ಮೊನ್ನೆಯಷ್ಟೇ ತೆರಿಗೆ ವಂಚನೆ ಆರೋಪದ ಮೇಲೆ  ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು.. ಈಗ ಸಿಸಿಬಿಯ ದೃಷ್ಟಿ ಸಹ ಫೈಟರ್ ರವಿ ಮೇಲೆ ಬಿದ್ದಿದ್ದು ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಗೋಡಂಬಿ ವ್ಯವಹಾರದ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಗಂಟೆಗಟ್ಟಲೆ ಕಾದು ಫೈಟರ್ ರವಿ ಮನೆಗೆ ಬಂದಾಗ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ಇನ್ನು ನನ್ನ‌ ಮೇಲೆ ಯಾವ ಪ್ರಕರಣ ದಾಖಲಾಗಿದೆ ಎಂಬುದರ ಮಾಹಿತಿ ತನಗಿಲ್ಲ.  ಸಿಸಿಬಿ…

Read More

ಬೆಂಗಳೂರು: ಬ್ರಿಟಿಷರು ದೇಶ, ರಾಜ್ಯವನ್ನು ವಿಭಜಿಸಿ ಆಳಿದ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ; ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು. https://ainlivenews.com/did-cm-siddaramaiah-backfire-on-the-withdrawal-of-hijab-ban-order/ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಜಾಬ್ ವಿಷಯ ಇದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂಥ ಸಂದರ್ಭದಲ್ಲಿ ಹಿಜಾಬ್‍ಗೆ ಅನುಮತಿ ಕೊಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ಈ ವಿಷಯ ಹಿಂದೆ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಹೈಕೋರ್ಟಿಗೆ ಹೋಗಿ, ಹಿಜಾಬ್ ಬೇಕೇ ಬೇಡವೇ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಹಿಜಾಬ್ ಧರಿಸಬಾರದು; ಸಮವಸ್ತ್ರ ಧರಿಸಿ ಹೋಗಬೇಕೆಂದು ಹೈಕೋರ್ಟಿನ ತೀರ್ಪು ಬಂದಿತ್ತು ಎಂದು ತಿಳಿಸಿದರು. ಆದರೆ, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ ಎಂದು ಟೀಕಿಸಿದರು. ಎಸ್.ಎಂ.ಕೃಷ್ಣ ಅವರು…

Read More

ಶಿವಮೊಗ್ಗ :- ಹಿಜಾಬ್ ವಿಚಾರವಾಗಿ ಸಿಎಂ ನೀಡಿದ ಹೇಳಿಕೆಯನ್ನು ಸಚಿವ ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಮಾತನಾಡಿದ್ದಾರೆ. ಹೃದಯ ಶ್ರೀಮಂತಿಕೆ ತೋರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ. ಎಲ್ಲಾ ಧರ್ಮಗಳಿಗೂ ಗೌರವ ಕೊಡಬೇಕು. ಕೋರ್ಟ್ ನಲ್ಲಿ ಏನಿದೆ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಬಿಜೆಪಿಯವರಿಗೆ ಚುನಾವಣೆ ಸಂದರ್ಭ ಬಂದಾಗ ಹಿಜಾಬ್ ತರಬೇಕು, ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು. ನೀವೆಷ್ಟು ಕೀಳು ಮಟ್ಟದಲ್ಲಿ ಮಾತನಾಡ್ತೀರಾ ಅದೆಲ್ಲಾ ನೀವೆ ಎಂದು ತಿರುಗೇಟು ನೀಡಿದರು. ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಗಲಭೆಯಾದ್ರೆ ಸಿಎಂ ಸಿದ್ದರಾಮಯ್ಯ ಕಾರಣ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ದಂಗೆ ಮಾಡುವವರೇ ಹೀಗೆ ಹೇಳುವುದು. ಕಾನೂನು ಬಹಳ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಎಲ್ಲಾ ಧರ್ಮಗಳಿಗೂ ಗೌರವ ಕೊಡಬೇಕು, ಅದೇ ರೀತಿ ಹಿಜಾಬ್ ಗೂ ಎಂದರು.

Read More

ಬೆಂಗಳೂರು: ಹಿಜಬ್ ನಿಷೇಧ ಆದೇಶ ವಾಪಸ್ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉಲ್ಟಾ ಹೊಡೆದ್ರಾ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಿಜಬ್ ನಿಷೇಧ (Hijab Ban Withdraw) ಆದೇಶ ವಾಪಸ್‌ಗೆ ಇನ್ನೂ ತೀರ್ಮಾನಿಸಿಲ್ಲ. ಯಾರೋ ಪ್ರಶ್ನೆ ಕೇಳಿದ್ರು. ಆಗ ಆದೇಶ ವಾಪಸ್ಸಿಗೆ ಯೋಚನೆ ಮಾಡ್ತಿದ್ದೀವಿ ಅಂತಷ್ಟೇ ಹೇಳಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಿಸ್ತೀವಿ ಎಂದು ಹೇಳಿದ್ದಾರೆ https://ainlivenews.com/i-tell-school-students-to-come-wearing-a-saffron-shawl-yatnal/ ಈ ಮೂಲಕ ಭಾರೀ ವಿವಾದದ ಬಳಿಕ ಸಿಎಂ ಎಚ್ಚೆತ್ತುಕೊಂಡು ಇಂದು ಹೇಳಿಕೆ ಬದಲಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಬಳಿಕ ಹಿಜಬ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿಎಂ ಮತ್ತೊಂದು ವಿವಾದದಲ್ಲಿ ಸಿಲುಕಿದ್ರಾ ಅನ್ನೋ ಅನುಮಾನವೂ ಮೂಡಿದೆ ನಿನ್ನೆ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಹಿಜಬ್‌ ನಿಷೇಧಿಸಿತ್ತು. ಅದನ್ನು ವಾಪಸ್‌ ಪಡೆಯಲಾಗುವುದು. ಹಿಜಬ್‌ ನಿಷೇಧ ವಾಪಸ್‌ಗೆ ತಿಳಿಸಿದ್ದೇನೆ ಎಂದು ಹೇಳಿದ್ದರು.

Read More

ಇಂದು ಸಂಜೆ ಪ್ರಸಾರವಾಗಬೇಕಿದ್ದ ವಾರದ ಕಥೆ ಕಿಚ್ಚನ ಜೊತೆ ಮತ್ತು ಕಿಚ್ಚನ ಪಂಚಾಯಿತಿ ಪ್ರಸಾರವಾಗುವುದಿಲ್ಲ. ಕಾರಣ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇಂದು ಮತ್ತು ನಾಳೆ ನಡೆಯುತ್ತಿದೆ. ಇಂದು ಅದ್ಧೂರಿಯಾಗಿ ಪಂದ್ಯಕ್ಕೆ ಚಾಲನೆ ಸಿಗಲಿದೆ. ಹೀಗಾಗಿ ಸುದೀಪ್ (sudeep) ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಹಾಗಂತ ಇಂದಿನ ಕಾರ್ಯಕ್ರಮವನ್ನು ನೆನಪಿಸುವಂತಹ ಮತ್ತೊಂದು ಏರ್ಪಾಟನ್ನು ಮಾಡಿಕೊಂಡಿದೆ ಬಿಗ್ ಬಾಸ್ (Bigg Boss Kannada) ಟೀಮ್. ಇಂದು ಮನೆಯೊಳಗೆ ಹಿರಿಯ ನಟಿ, ಬಿಗ್ ಬಾಸ್ ವಿನ್ನರ್ ಶ್ರುತಿ ಅವರನ್ನು ಕಳುಹಿಸಿದೆ. ಬೆಳಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶರ ಕುರ್ಚಿಯಲ್ಲಿ ಕೂತಿದ್ದಾರೆ. ಈ ನಡುವೆ ಮತ್ತೋರ್ವ ಅತಿಥಿ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶ್ರುತಿ ಅವರು ಮನೆಯಿಂದ ಆಚೆ ಬರುತ್ತಿದ್ದಂತೆಯೇ…

Read More

ಬೆಂಗಳೂರು: ಕ್ರಿಸ್ಮಸ್ ಹಾಗೂ ಇಯರ್ ಎಂಡ್  ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಬೆಂಗಳೂರು ಕಡೆಯಿಂದ ಶನಿವಾರ ಸಾವಿರಾರು ವಾಹನಗಳು ಮೈಸೂರು ಕಡೆಗೆ ಪ್ರಯಾಣಿಸಿದವು. ಇದರಿಂದಾಗಿ ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಟೋಲ್‌ ಬಳಿ ಸುಮಾರು 3 ಕಿ.ಮೀ.ನಷ್ಟು ಟ್ರಾಫಿಕ್‌ ಜಾಮ್‌ ಆಯಿತು. ಸುಮಾರು 2 ಗಂಟೆಗಳ ವರೆಗೆ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ರಸ್ತೆಯುದ್ದಕ್ಕೂ ವಾಹನಗಳು ಕಿಕ್ಕಿರಿದು ನಿಂತಿದ್ದ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನೆಲಮಂಗಲ ಹೈವೇನಲ್ಲೂ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಶನಿವಾರ ಮತ್ತು ಭಾನುವಾರ ರಜೆ. ಜೊತೆಗೆ ಕ್ರಿಸ್‌ಮಸ್‌ ಪ್ರಯುಕ್ತ ಸೋಮವಾರ ಕೂಡ ರಜೆ ಇದೆ. ಮೂರು ದಿನಗಳ ರಜೆ ಹಿನ್ನೆಲೆಯಲ್ಲಿ ಜನರು ಊರುಗಳತ್ತ ಮುಖ ಮಾಡಿದ್ದಾರೆ. ಬಸ್‌ ನಿಲ್ದಾಣಗಳಲ್ಲೂ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ನೆರೆದಿದ್ದಾರೆ. ಬಸ್‌ಗಳು ಸಹ ರಶ್‌ ಆಗುತ್ತಿವೆ.

Read More

ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್’ನಿಂದ ಅಕ್ರಮವಾಗಿ ಚಿನ್ನ ಸಾಗಣೆ ಯತ್ನ ನಡೆಸುತ್ತಿದ್ದು ಈ ವೇಳೆ  816 ಗ್ರಾಂ ಪೇಸ್ಟ್ ರೂಪದ  ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ಪೇಸ್ಟ್ ರೂಪದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನ ನಡೆಸುತ್ತಿದ್ದು  ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಸಾಗಣೆ ಮಾಡುವ ವೇಳೆ ಕಾರ್ಯಾಚರಣೆ. ಹ್ಯಾಂಡ್ ಬ್ಯಾಗ್ ನಲ್ಲಿ 816 ಗ್ರಾಂ ಸಾಗಾಟ ಮಾಡಲು ಯತ್ನ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೋಲೀಸರು. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು!

Read More

2024 ರ ಐಪಿಎಲ್ ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇದ್ದು, ಮುಂಬೈ ಇಂಡಿಯನ್ಸ್​ ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ ಅವರನ್ನು ಕ್ಯಾಪ್ಟನ್​ ಆಗಿ ನೇಮಿಸುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಆದರೆ, ರೋಹಿತ್​ ಶರ್ಮಾ ಅಭಿಮಾನಿಗಳಿಗಾಗಿ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ಖಂಡಿತವಾಗಿಯೂ ಇದು ನೆರವೇರಬೇಕು ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಪುನಶ್ಚೇತನಕ್ಕಾಗಿ ಈಗಾಗಲೇ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (NCA) ಸೇರಿಕೊಂಡಿದ್ದು, ಅವರು ಸಂಪೂರ್ಣವಾಗಿ ಫಿಟ್​ ಆಗಲು ಇನ್ನು ಕೆಲ ಸಮಯ ಬೇಕಾಗಬಹುದು ಎಂದು ಹೇಳಲಾಗಿದೆ. ಜನವರಿ 11ರಿಂದ ಅಫ್ಘಾನಿಸ್ತಾನ ವಿರುದ್ಧ ಆರಂಭವಾಗಲಿರುವ ಟಿ-20 ಸರಣಿಗೂ ಪಾಂಡ್ಯ ಅಲಭ್ಯರಾಗಿದ್ದು, ಐಪಿಎಲ್​ ವೇಳೆಗೆ ಸಂಪೂರ್ಣ ಫಿಟ್​ ಆಗುವುದು ಡೌಟ್ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಅವರು 17ನೇ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಹಾಗೆ ಆದಲ್ಲಿ ಟೀಂ ಇಂಡಿಯಾ…

Read More

ಮಹದೇವಪುರ: ಹಿಂದೂ ಧರ್ಮದಲ್ಲಿ ಒಂದೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ , ವೈಭವವಿದ್ದು ಭಕ್ತರ ನಂಬಿಕೆಗಳಿಗೂ ಮಿಗಿಲಾದ ವಿಸ್ಮಯಗಳಿವೆ. ವರ್ಷಕ್ಕೆ ಒಮ್ಮೆ ಬರುವ ವೈಕುಂಠ ಏಕಾದಶಿಯೆಂದು ವೈಕುಂಠ ದ್ವಾರ ದಾಟಬೇಕೆಂಬ ಭಕ್ತರ ನಂಬಿಕೆಗೆ  ಇಂದು ಬೆಂಗಳೂರು ಸಜ್ಜಾಗಿತ್ತು . ಹಾಗೇ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲೂ ಈ ವೈಭವ ಯಾವುದೇ ಕಮ್ಮಿ ಇಲ್ಲವಂತೆ ನಡೆದಿದ್ದು. ಕುಂದಲಹಳ್ಳಿ ಸಮೀಪದ ಬಿಇಎಂಎಲ್ ಲೇಔಟ್ ನಲ್ಲಿರುವ ಶ್ರೀ ಭೂನೀಳಾ ಸಮೇತ ವೆಂಕಟರಮಣ ದೇಗುಲ ಸೇರಿ ಕೆಆರ್ ಪುರದ ಇತಿಹಾಸ ಪ್ರಸಿದ್ಧ  ಶ್ರೀ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯದಲ್ಲೂ ವೈಭವದ ವೈಕುಂಠ ಏಕಾದಶಿಯನ್ನು ಆಚರಣೆ ಮಾಡಲಾಗಿದ್ದು . ದೇವಾಲಯಗಳು ವರ್ಣ ರಂಜಿತವಾಗಿ ಸಿಂಗಾರಗೊಂಡಿದ್ದು .ದೂರ ದೂರದವರೆಗೂ ಭಕ್ತಸಾಗರೇ ಕಾಣಸಿಗುತ್ತಿತ್ತು. ಇನ್ನೂ ವೈಕುಂಠಾಧಿಪತಿಯ ದರ್ಶನ  ಮಾಡಿ ಗೋವಿಂದಾ ಗೋವಿಂದ ಎಂಬ ನಾಮ ಸ್ಮರಣೆಯಲ್ಲೇ ವೈಕುಂಠ ದ್ವಾರವನ್ನು ದಾಟುತ್ತ ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ದೇವಾ ಎಂದು ಭಕ್ತಿ ಭಾವದಿಂದ ಬೇಡಿತ್ತಾ ಹೊರ ಬರುತ್ತಿದ್ದರು ಭಕ್ತಾದಿಗಳು . ದ್ವಾದಶಿ ದಿನದಂದು ಬೆಳಗ್ಗೆ ವೆಂಕಟೇಶ್ವರ…

Read More

ವಿಜಯಪುರ:- ಸಿಎಂ ಸಿದ್ದರಾಮಯ್ಯ ಟಿಪ್ಪುವಿನ ಎರಡನೇ ಅವತಾರ ಎಂದು ಬಸನ್​​ಗೌಡ ಪಾಟೀಲ್​ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾನತೆ ಇರಲಿ ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸದಂತೆ ಆದೇಶ ಹೊರಡಿಸಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ನಿಷೇಧವನ್ನು ಹಿಂಪಡೆಯುವ ಮೂಲಕ ತಾವು ಟಿಪ್ಪುವಿನ ಎರಡನೇ ಅವತಾರವೆಂಬುದನ್ನು ನಿರೂಪಿಸಿದ್ದಾರೆ ಎಂದರು. ಸಂವಿಧಾನ ಶಿಲ್ಪಿ ಬಾಬಾಸಾಹೇಬ್​ ಡಾ.ಬಿ. ಆರ್. ಅಂಬೇಡ್ಕರ್ ಅವರು ಹಿಂದೆ ಸಮವಸ್ತ್ರದ ಕಾಯ್ದೆ ಮಾಡಿದ್ದರು. ಈ ರೀತಿ ಅವರವರಿಗೆ ತಿಳಿದಿದ್ದನ್ನ ಅವರು ಧರಿಸಿ ಬರೋದಾದರೆ, ನಾಳೆ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ ಎಂದು ಎಚ್ಚರಿಸಿದ್ದಾರೆ. ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿದ ಯಾವ ಆದೇಶವೂ ಇಲ್ಲ,…

Read More