ಕಾಜು ಮಸಾಲಾ ಒಂದೊಮ್ಮೆ ಮಾಡಿ ತಿಂದ್ರೆ ಮತ್ತೊಮ್ಮೆ ತನ್ನದೇ ಇರಲಾಗದು. ಇದು ಬರೀ ನಾನ್, ಕುಲ್ಚಾ ಅಲ್ಲ, ಬದಲಾಗಿ ಜೀರಾ ರೈಸ್, ಚಪಾತಿ, ಪೂರಿಗೂ ಸೂಟ್ ಆಗತ್ತೆ. ಹಾಗಾದ್ರೆ ಕಾಜು ಮಸಾಲಾ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. 2ರಿಂದ 3ಟೊಮೆಟೋವನ್ನು, 10ರಿಂದ 20 ಕಾಜು ಜೊತೆ ಪೇಸ್ಟ್ ಮಾಡಿ. ಈ ಪೇಸ್ಟ್ ತಯಾರಿಸುವಾಗ, ಚಕ್ಕೆ, ಲವಂಗ, ಏಲಕ್ಕಿಯನ್ನನೂ ಸೇರಿಸಿಕೊಳ್ಳಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಬಿಸಿ ಮಾಡಿ, ಅದಕ್ಕೆ ನಾಲ್ಕು ಸ್ಪೂನ್ ತುಪ್ಪ, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಪಲಾವ್ ಎಲೆ, ಎರಡು ಏಲಕ್ಕಿ, ಚಿಕ್ಕ ತುಂಡು ಚಕ್ಕೆ, ನಾಲ್ಕು ಲವಂಗ, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಈರುಳ್ಳಿಯನ್ನೂ ಹುರಿಯಿರಿ. ಇದರೊಂಗಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ಈಗ ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಕೊತ್ತೊಂಬರಿ ಕಾಳಿನ ಪುಡಿ, ಉಪ್ಪು ಮಿಕ್ಸ್ ಮಾಡಿ. ಈಗ ಪೇಸ್ಟ್…
Author: AIN Author
ಕೊಪ್ಪಳ:- ಹಿಜಾಬ್ ನಿಷೇಧ ವಾಪಸ್ ಕುರಿತು ಮುಖ್ಯಮಂತ್ರಿ ನೀಡಿದ ಹೇಳಿಕೆ ಬಗ್ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಭಿವೃದ್ಧಿ ಕೆಲಸ ಮಾಡಲು ಖಜಾನೆಯಲ್ಲಿ ಹಣ ಖಾಲಿಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರ ಗಮನ ಬೇರೆಡೆ ಸೆಳೆಯಲು ಕುತಂತ್ರ ಮಾಡುತ್ತಿದ್ದಾರೆ’ ಎಂದರು. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾದ ಮೇಲೆಯೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಎಳೆದು ತರಲಾಗಿದೆ. ಹಿಂದೆ ಯುಪಿಎ ಸರ್ಕಾರ ಆಡಳಿತ ನಡೆಸಿದಾಗ ಯಾಕೆ ಅವರನ್ನು ಪ್ರಧಾನಿ ಮಾಡಲಿಲ್ಲ. ದಲಿತ ಸಿಎಂ, ಪಿಎಂ. ಎನ್ನುವುದು ಕಾಂಗ್ರೆಸ್‌ನ ಗಿಮಿಕ್’ ಎಂದು ಹೇಳಿದರು. ‘ಕಾಂಗ್ರೆಸ್ ಮುಳುಗುವ ಹಡಗು, ಒಬ್ಬೊಬ್ಬರೇ ಇಳಿದು ಹೋಗುವುದು ಸ್ವಾಭಾವಿಕ. ಹರಿಪ್ರಸಾದ್ ಸೇರಿದಂತೆ ಹಲವರು ರಾಜಕೀಯ ಅಸ್ತಿತ್ವಕ್ಕಾಗಿ ಹೊರಹೋಗಬಹುದು. ಹಿಂದುಳಿದವರನ್ನು ಕಾಂಗ್ರೆಸ್‌ನಲ್ಲಿ ಎಂದೂ ಗೌರವಯುತವಾಗಿ ನಡೆಸಿಕೊಂಡಿಲ್ಲ. ಹರಿಪ್ರಸಾದ್ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ಹೇಳಿದ್ದಾರೆ.
ಥೈರಾಯ್ಡ್ ಸಮಸ್ಯೆಗೆ ಕೊತ್ತಂಬರಿ ಬೀಜ ಸಹಕಾರಿ ಎಂದು ವರದಿಯೊಂದು ಹೇಳಿದೆ. 1 ದೊಡ್ಡ ಚಮಚದಷ್ಟು ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅದನ್ನು ಕಲ್ಲಿನಲ್ಲಿ ಜಜ್ಜಿ ಪುಡಿ ಮಾಡಿಕೊಳ್ಳಿ. ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದನ್ನು ರಾತ್ರಿ ಹಾಗೇ ಬಿಟ್ಟು ಬೆಳಿಗ್ಗೆ ಚೆನ್ನಾಗಿ ಕುದಿಸಿ ಸೋಸಿ ಅದನ್ನು ಉಗುರು ಬೆಚ್ಚಗಿರುವಾಗ ಸ್ವಲ್ಪ ಸ್ವಲ್ಪ ನಿಧಾನವಾಗಿ ಕುಡಿಯಿರಿ. ಇದನ್ನು 6 ತಿಂಗಳು ಗಳ ಕಾಲ ಮಾಡಿ. ಹಾಗೇ ವಾಲ್ ನಟ್ಸ್ ಆಯಿಲ್ ಅನ್ನು ತೆಗೆದುಕೊಂಡು ಅದನ್ನು ರಾತ್ರಿ ಮಲಗುವಾಗ ಥೈರಾಯ್ಡ್ ಗ್ರಂಥಿಯ ಸ್ಥಳದಲ್ಲಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇಲ್ಲವಾದರೆ ಈರುಳ್ಳಿ ರಸವನ್ನು ಹಚ್ಚಿ ಮಸಾಜ್ ಮಾಡಿ ಬೆಳಿಗ್ಗೆ ವಾಶ್ ಮಾಡಿ.
ಬಿಗ್ ಬಾಸ್ ನಲ್ಲಿ ಈ ವಾರದ ಟಾಸ್ಕ್ನಲ್ಲಿ ನಮ್ರತಾ ಗೌಡ ಅತ್ಯುತ್ತಮ ಪ್ರದರ್ಶನದ ಮೂಲಕ ಮನೆಯ ಕ್ಯಾಪ್ಟನ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ರತಾ ಕ್ಯಾಪ್ಟನ್ ಆಗುವಲ್ಲಿ ಪ್ರತಾಪ್ ಅವರ ಪಾತ್ರವೂ ಇದೆ. ತಮ್ಮ ಪಾಲಿನ ಪಾಯಿಂಟ್ಸ್ ಶೇರ್ ಮಾಡಿ ನಮ್ರತಾ ಕ್ಯಾಪ್ಟನ್ಸಿ ರೇಸ್ನಲ್ಲಿ ಉಳಿದುಕೊಳ್ಳುವಂತೆ ಪ್ರತಾಪ್ ಸಹಾಯ ಮಾಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಮನೆಯ ಕ್ಯಾಪ್ಟನ್ ಆಗಿ ದಿನ ಕಳೆಯುವದರೊಳಗೆ ನಮ್ರತಾ ಅವರು ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಪ್ರತಾಪ್ ಹಳ್ಳಿಯವರನ್ನು ಸೆಳೆಯಲು ಅಲ್ಲಿಯವರಂತೆ ಮಾತನಾಡುತ್ತಾರೆ ಅನ್ನೋದು ಕೆಲವರ ವಾದವಾಗಿದೆ. ಈ ವಾದಕ್ಕೆ ನಮ್ರತಾ ಕೂಡ ಧ್ವನಿಗೂಡಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಮ್ರತಾ ಅವರ ಹೇಳಿಕೆ ವೈರಲ್ ಆಗುತ್ತಿದ್ದು, ಪ್ರತಾಪ್ ಬೆನ್ನಿಗೆ ನಮ್ರತಾ ಚಾಕು ಹಾಕಿದರು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಟಾಸ್ಕ್ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ವಾರದ ಕೊನೆಯಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಿರುತ್ತಾರೆ. ಈ ವಾರ ನಟ ಕಿಚ್ಚ ಸುದೀಪ್ ಅವರ…
ದಾವಣಗೆರೆ:- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಾತಿಗಣತಿ ವಿರೋಧಿಯಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವೈಜ್ಞಾನಿಕ ಆಧಾರದಲ್ಲಿ ಜಾತಿಗಣತಿ ಮಾಡಬೇಕು ಎಂದು ದಾವಣಗೆರೆಯಲ್ಲಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯ ಮಾಡಿದ್ದಾರೆ. ನಾವು ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ವಾಸ್ತವಾಂಶದ ಆಧಾರದ ಮೇಲೆ ಸತ್ಯಾಸತ್ಯತೆ ಖಚಿತಪಡಿಸಿಕೊಂಡು ಜಾತಿಗಣತಿ ಮಾಡಲಿ. ವೀರಶೈವ ಲಿಂಗಾಯತದ ಎಲ್ಲ ಒಳಪಂಗಡಗಳನ್ನ ಸೇರಿಸಿಕೊಂಡು ಜಾತಿಗಣತಿ ಮಾಡಬೇಕು ಎಂದರು. ಹಿಜಾಬ್ ಹಿಂಪಡೆದ ವಿಚಾರವಾಗಿ ಮಾತನಾಡಿ, ಅವರವರ ಧರ್ಮದ ಆಚರಣೆ ಮಾಡಲು ಸಂವಿಧಾನ ಅವಕಾಶ ಕೊಟ್ಟಿದೆ. ಅದನ್ನ ಜಾರಿ ಮಾಡುವುದು ಮತ್ತು ಅವಕಾಶ ಕೊಡುವ ಕೆಲಸವನ್ನ ಸಿಎಂ ಮಾಡುತ್ತಾರೆ. ಸಿಎಂ ಯಾವುದೇ ನಿರ್ಧಾರ ತೆಗೆದುಕೊಂಡ್ರು ಸಂವಿಧಾನಬದ್ದವಾಗಿರುತ್ತದೆ, ನ್ಯಾಯಬದ್ಧವಾಗಿರುತ್ತದೆ ಎಂದರು. ಯತ್ನಾಳ ನಾಲಿಗೆ ಮತ್ತು ಮೆದುಳಿಗೆ ಲಿಂಕ್ ಇಲ್ಲ. ಅವರು ಯಾವ ಸಮಯದಲ್ಲಿ ಏನು ಮಾತಾಡ್ತಾರೆ ಅಂತ ಅವರಿಗೆ ಅರಿವಿದೆಯೋ ಗೊತ್ತಿಲ್ಲ ಎಂದು ದಾವಣಗೆರೆಯಲ್ಲಿ…
ಚಾಮರಾಜನಗರ:- ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ರೈತ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಚಾಲನೆ ನೀಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಸಿರಿಧಾನ್ಯಗಳಿಂದ ತಯಾರಿಸಿದ್ದ ತಿನಿಸುಗಳು ಹಾಗೂ ವಿವಿಧ ಇಲಾಖೆಗಳಿಂದ ತಯಾರಿಸಲಾಗಿದ್ದ ಸಿರಿಧಾನ್ಯಗಳ ಪದಾರ್ಥಗಳ ಪ್ರದರ್ಶನಗೊಂಡು ಮಾರಾಟವಾದವು. ಇದೇ ಸಂದರ್ಭದಲ್ಲಿ ಎಲ್ಲಾ ಮಳಿಗೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ರೈತರನ್ನು ಪರಿಚಯ ಮಾಡಿಕೊಂಡು ರೈತರು ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ತಿನಿಸುಗಳ ರುಚಿ ಸವಿದು ರೈತರಿಗೆ ಶುಭಕೋರಿದರು.
ಚೆನ್ನೈ :- ತಮಿಳುನಾಡು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿನಲ್ಲಿ ಇತ್ತೀಚೆಗೆ ಉಂಟಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಭಾರಿ ಸಂಕಷ್ಟಕ್ಕೆ ಕಾರಣವಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಕೋರಿದ್ದರು. ರಾಷ್ಟ್ರೀಯ ವಿಪತ್ತು ಘೋಷಣೆಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಸರ್ಕಾರವನ್ನು ನಿರ್ಮಲಾ ಸೀತಾರಾಮನ್ ತೀವ್ರವಾಗಿ ಟೀಕಿಸಿದರು. ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ ಎಂದು ಆರೋಪಿಸಿದರು. 2015ರ ಪ್ರವಾಹದ ನಂತರವೂ ಸರ್ಕಾರ ಪಾಠ ಕಲಿತಿಲ್ಲ. ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹವನ್ನು ತಪ್ಪಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯವು ಕೋರಿರುವ ಹೆಚ್ಚುವರಿ ಹಣಕಾಸು ನೆರವು ಹಂಚಿಕೆ ಕುರಿತು ಗೃಹ ಸಚಿವಾಲಯವು…
ಬೆಂಗಳೂರು:- ಮುಸ್ಲಿಮರ ಅತಿಯಾದ ತುಷ್ಟೀಕರಣಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಚ್ಚರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅತಿಯಾದ ತುಷ್ಟೀಕರಣ ಮಾಡಿದ್ದರಿಂದಲೇ 2018ರ ವಿಧಾನಸಭೆ ಚುನಾವಣೆಯಲ್ಲಿ ನೀವು ಸೋತಿದ್ದೀರಿ ಎಂಬುದನ್ನು ಮರೆಯಬಾರದು. ಈಗಲೂ ಅದು ಮುಂದುವರೆದರೆ ಜನ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎಚ್ಚರಿಸಿದ್ದಾರೆ. ಅಷ್ಟಕ್ಕೂ ಕರ್ನಾಟಕದಲ್ಲಿ ಹಿಜಾಬ್‍ನ್ನು ಯಾರು ನಿಷೇಧ ಮಾಡಿದ್ದಾರೆ? ನಾನು ಆದೇಶವನ್ನು ವಾಪಸ್ ಪಡೆಯುತ್ತೇನೆಂದು ಹೇಳಿದ್ದೀರಿ. ನಿಮಗೆ ಕಾನೂನಿನ ಅರಿವು ಇದೆಯೇ ಎಂದು ಪ್ರಶ್ನಿಸಿದರು. ಶಾಲಾಕಾಲೇಜಿನ ಕೊಠಡಿಗಳಲ್ಲಿ ಮಾತ್ರ ಹಿಜಾಬ್ ಧರಿಸಬಾರದೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತು ಯಾರು ಎಲ್ಲಿ ಬೇಕಾದರೂ ತಮಗೆ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸಲು ಅವಕಾಶವಿದೆ. ಶಾಲಾಕಾಲೇಜುಗಳಲ್ಲಿ ಎಲ್ಲರೂ ಸಮಾನತೆ ಬರಲಿ ಎಂಬ ಕಾರಣಕ್ಕಾಗಿಯೇ ಸಂಹಿತೆಯನ್ನು ಜಾರಿಮಾಡಲಾಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಬಾರದೆಂದು ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತೆ? ಎಂದು ಪ್ರಶ್ನಿಸಿದರು. ಸರ್ಕಾರದ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ.…
ಬೆಂಗಳೂರು: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ. ಈ ಹಬ್ಬವನ್ನು ಬೆಂಗಳೂರಿಗರು ಪ್ರತಿವರ್ಷ ಸಡಗರದಿಂದ ಆಚಾರಿಸುತ್ತಾರೆ. ಈ ವರ್ಷ ಕೂಡ ಅದ್ದೂರಿಯಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದ್ದು, ನಗರದ ದೇವಸ್ಥಾನಗಳಲ್ಲಿ ಶುಕ್ರವಾರವೇ ಹಬ್ಬದ ವಾತಾವರಣ ಮನೆಮಾಡಿತ್ತು.ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. ಇಂದು ಎಲ್ಲಾ ಕಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಇದು ಭಗವಾನ್ ಮಹಾವಿಷ್ಣು ನಿದ್ರೆಯಿಂದ ಎಚ್ಚರವಾಗಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ. ಆದ್ದರಿಂದ ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ.ವೈಕುಂಠ ಏಕಾದಶಿಯನ್ನ ಬೆಂಗಳೂರಿನಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ.ವೈಕುಂಠ ಏಕಾದಶಿ ಪ್ರಯುಕ್ತವಾಗಿ ನಗರದ ಮಲ್ಲೇಶ್ವರಂ ನ ಟಿಡಿಡಿ ದೇವಸ್ಥಾನದ ಸುತ್ತಲೂ ದಕ್ಷಿಣ ಶೈಲಿಯ ಚಪ್ಪರ ಹಾಕಿ ಹೂವಿನಿಂದ ಅಲಾಂಕಾರ ಮಾಡಲಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೇ ವಿಶೇಷ ಪೂಜೆ ಆರಂಭವಾಗಿದೆ. ವೆಂಕಟೇಶ್ವರನಿಗೆ ಪಂಚಾಭಿಷೇಕ ಮಾಡಿ, ಪುಷ್ಪಾಭಿಷೇಕ ಮಾಡಿ ನಂತರ ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ.…
ಇತ್ತೀಚಿನ ಅಧ್ಯಯನವು ಹಗಲಿನ ನಿದ್ರೆಯನ್ನು ಒಂದು ನಿರ್ದಿಷ್ಟ ಸಮಯಕ್ಕೆ ಸೀಮಿತಗೊಳಿಸಿದರೆ ಉತ್ತಮ ಎಂದು ಸೂಚಿಸುತ್ತದೆ. ಇದು ಮನುಷ್ಯನಿಗೆ ಉತ್ಸಾಹವನ್ನು ನೀಡುತ್ತದೆ ಎಂದು ತೀರ್ಮಾನಿಸಲಾಗಿದೆ. ತಜ್ಞರು ಸಹ ಈ ಅಧ್ಯಯನವನ್ನು ಒಪ್ಪುತ್ತಾರೆ. ಮಲಗಲು ಸಹ ಸೂಚಿಸಲಾಗುತ್ತದೆ. ಮಧ್ಯಾಹ್ನ ಮಲಗುವುದರಿಂದ ಒತ್ತಡವನ್ನು ನಿವಾರಿಸಬಹುದು. ರಾತ್ರಿಯಲ್ಲಿ ಕೆಲಸ ಮಾಡುವ ಜನರು ಹೆಚ್ಚು ಸಮಯದವರೆಗೆ ಎಚ್ಚರವಾಗಿರುತ್ತಾರೆ. ಅಂತಹ ಜನರು ಒತ್ತಡವನ್ನು ನಿವಾರಿಸಲು ಹಗಲಿನಲ್ಲಿ ಮಲಗುತ್ತಾರೆ. ಒತ್ತಡ ಮತ್ತು ಕೆಲಸದ ಹೊರೆ ಹೆಚ್ಚಾದರೆ, ಹಗಲಿನಲ್ಲಿ ಮಲಗುವ ಆಲೋಚನೆ ಹೆಚ್ಚಾಗುತ್ತದೆ. ಪ್ರತಿ 12 ಗಂಟೆಗಳಿಗೊಮ್ಮೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಅಂತಹ ಸಮಯದಲ್ಲಿ ನೀವು ಕೇವಲ 20 ರಿಂದ 30 ನಿಮಿಷಗಳ ಕಾಲ ಮಲಗಿದರೆ, ನೀವು ಆಯಾಸವನ್ನು ತೊಡೆದುಹಾಕಬಹುದು. ನೀವು ಮನಸ್ಸಿನ ಶಾಂತಿಯನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಮಧ್ಯಾಹ್ನ ಸಣ್ಣ ರಾತ್ರಿ ನಿದ್ರೆ ಮಾಡುವುದು ಸಾಮಾನ್ಯ. ಆದರೆ ಹೆಚ್ಚು ಸಮಯ ಮಲಗುವುದು ಆರೋಗ್ಯಕ್ಕೆ ಹಾನಿಕಾರಕ. ಇದು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ತಜ್ಞರು ಹಗಲಿನಲ್ಲಿ ಸಾಧ್ಯವಾದಷ್ಟು ನಿದ್ರೆ…