ಬೆಂಗಳೂರು:- ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕನ್ನಡ ಸಾಹಿತ್ಯ, ಶಾಸನ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದರು. ಕನ್ನಡದ ಮೊದಲ ನಿಘಂಟು ನೀಡಿದ ಫರ್ಡಿನೆಂಡ್ ಕಿಟ್ಟೆಲ್, ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರತಂದ ಹರ್ಮನ್ ಮೊಗ್ಲಿಂಗ್, ‘ಕನ್ನಡ ಶಾಸನ ಪಿತಾಮಹ’ ಎಂಬ ಹೆಗ್ಗಳಿಕೆ ಪಾತ್ರರಾದ ಬಿ.ಎಲ್. ರೈಸ್ ಸೇರಿ ಹಲವು ಕ್ರೈಸ್ತರು ಕನ್ನಡ ನಾಡು-ನುಡಿಗೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣ ಕ್ಷೇತ್ರದಲ್ಲಿಯೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆಸ್ಪತ್ರೆಗಳ ಸ್ಥಾಪನೆಯ ಮೂಲಕ ಆರೋಗ್ಯ ಕ್ಷೇತ್ರಕ್ಕೂ ಕ್ರೈಸ್ತರು ಸಾಮಾಜಿಕ ಕಾರ್ಯ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಕ್ರೈಸ್ತ ಸನ್ಯಾಸಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದರು. ಯೇಸುಕ್ರಿಸ್ತನು ಜನಮಾನಸದಲ್ಲಿ ಶಾಂತಿ, ಪ್ರೀತಿ, ಸ್ನೇಹ, ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾನೆ. ಅವನ ಉಪದೇಶಗಳು…
Author: AIN Author
ಬೆಂಗಳೂರು:- ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಮಾಜಿ ಸಚಿವರಾದ ಮುರುಗೇಶ್ ನಿರಾಣಿ , ಬೈರತಿ ಬಸವರಾಜ್ ಅವರು ಉಪಾಧ್ಯಕ್ಷರಾಗಿದ್ದರೆ, ಮತ್ತೊಬ್ಬ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಹತ್ತು ಉಪಾಧ್ಯಕ್ಷರು ಇವರು: ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ (ಯಾದಗಿರಿ), ಎನ್ ಮಹೇಶ್ (ಚಾಮರಾಜನಗರ), ಅನಿಲ್ ಬೆನಕೆ (ಬೆಳಗಾವಿ), ಹರತಾಳು ಹಾಲಪ್ಪ (ಶಿವಮೊಗ್ಗ), ರೂಪಾಲಿ ನಾಯಕ್ (ಉತ್ತರ ಕನ್ನಡ), ಡಾ. ಬಸವರಾಜ್ ಕೇಲಗಾರ (ಹಾವೇರಿ), ಮಾಳವಿಕಾ ಅವಿನಾಶ್ (ಬೆಂಗಳೂರು) ಹಾಗೂ ಎಂ. ರಾಜೇಂದ್ರ (ಮೈಸೂರು) ಅವರನ್ನು ನೇಮಿಸಲಾಗಿದೆ. ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕುಡಚಿಯ…
ಪ್ರಸಕ್ತ ಸಾಲಿನಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವುದು ಪೋಷಕರು ಸಾಮಾನ್ಯವಾಗಿ ಮಾಡುತ್ತಿದ್ದಾರೆ. ಆದರೆ ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಅರ್ಥಮಾಡಿಕೊಳ್ಳಲು ಅನೇಕ ಜನರು ವಿಫಲರಾಗಿದ್ದಾರೆ. ಚಿಕ್ಕ ಮಕ್ಕಳಲ್ಲಿ ಫೋನ್ ಬಳಕೆಯ ಅಂಕಿಅಂಶಗಳು ಆತಂಕಕಾರಿಯಾಗಿವೆ. ಆಘಾತಕಾರಿ ವಿಷಯವೆಂದರೆ ಒಂದೂವರೆ ವರ್ಷದೊಳಗಿನ ಮಕ್ಕಳು ದಿನಕ್ಕೆ 5 ಗಂಟೆಗಳ ಕಾಲ ಮೊಬೈಲ್ ಸಾಧನಗಳಲ್ಲಿ ತೊಡಗಿದ್ದಾರೆ. ಅಳುವ ಅಥವಾ ಹಠಮಾರಿ ಮಗುವನ್ನು ಸಮಾಧಾನಪಡಿಸಲು ಫೋನ್ ಹಸ್ತಾಂತರಿಸುವುದು ತ್ವರಿತ ಪರಿಹಾರದಂತೆ ತೋರಬಹುದು, ಆದರೆ ವಾಸ್ತವವಾಗಿ, ಅಪಾಯಕಾರಿ ಮೊಬೈಲ್ ವ್ಯಸನವನ್ನು ಉತ್ತೇಜಿಸುವ ಆರಂಭಿಕ ಹೆಜ್ಜೆಯಾಗಿದೆ. ಈ ಮೊಬೈಲ್ ವ್ಯಸನದ ಅಡ್ಡಪರಿಣಾಮಗಳು ಗಮನಾರ್ಹವಾಗಿವೆ. ಊಟದ ಸಮಯದಲ್ಲಿ ಮಕ್ಕಳು ನಿರಂತರವಾಗಿ ಮೊಬೈಲ್ ವ್ಯಸನಿಯಾಗಿದ್ದರೆ . ಇದು ನಿರಂತರ ಹಠಕ್ಕೆ ಕಾರಣವಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್ರೋನ್ ವ್ಯಸನವು ಮಗುವಿನ ಸಾಮಾಜಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಸೀಮಿತ ಹೊರಾಂಗಣ ಚಟುವಟಿಕೆಗಳು ಎಂದರೆ ಅವರು ಪ್ರಮುಖ ಸಾಮಾಜಿಕ ಸಂವಹನ ಮತ್ತು ದೈಹಿಕ ಚಟುವಟಿಕೆಗಳನ್ನು ಕಳೆದುಕೊಳ್ಳುತ್ತಾರೆ.…
ತುಮಕೂರು:- ಜನವರಿ ತಿಂಗಳೊಳಗೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ ತಿಂಗಳೊಳಗೆ ಅಂತಿಮಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಜನವರಿ ತಿಂಗಳೊಳಗೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಈಗ ತುಮಕೂರು ಲೋಕಸಭಾ ವ್ಯಾಪ್ತಿಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಟಿ.ಬಿ.ಜಯಚಂದ್ರರ ಸಮಕ್ಷಮದಲ್ಲಿ ಬೆಂಗಳೂರಿನಲ್ಲಿ ಇನ್ನೊಂದು ಸಭೆ ನಡೆಯಲಿದೆ. ಆ ಸಭೆಯಲ್ಲಿ ಅಭ್ಯರ್ಥಿಗಳು ಫೈನಲ್ ಆಗಲಿದ್ದಾರೆ. ಜನವರಿ ತಿಂಗಳೊಳಗೆ ಎಲ್ಲವೂ ಫೈನಲ್ ಆಗಲಿದೆ ಎಂದು ತಿಳಿಸಿದರು. ಇನ್ನು ಲೋಕಸಭಾ ಚುನಾವಣೆಯ ಫೈನಲ್ ಪಟ್ಟಿ ಬಂದ ನಂತರ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ. ಆ ಮೂಲಕ ಇಂಡಿ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲಬೇಕು. ಕೇಂದ್ರದ ಬಡವರ ವಿರೋಧಿ ಸರ್ಕಾರ ಹೋಗಬೇಕಾಗಿದೆ. ದಿನೇದಿನೇ…
ಮೈಸೂರು:- ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಡ್ಡಾಯ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೈಸೂರು ಹಾಗೂ ಸುತ್ತಮುತ್ತ ಸ್ಥಾಪಿಸಿರುವ ಕಾರ್ಖಾನೆಗಳಲ್ಲಿ ತಾಂತ್ರಿಕ ನೈಪುಣ್ಯ ಇರುವವರು ಸಿಗದಿದ್ದಾಗ ಮಾತ್ರ ಹೊರಗಿನವರಿಗೆ ಅವಕಾಶ ಕೊಡಬೇಕು. ಇದರ ಹೊರತಾಗಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂದರು. ಕಾರ್ಖಾನೆಗಳಲ್ಲಿ ಉದ್ಯೋಗ ಸ್ಥಳೀಯರಿಗೆ ಸಿಗಬೇಕು. ಮಾನವ ಸಂಪನ್ಮೂಲ ನಮ್ಮಲ್ಲಿ ಇದೆ. ವೃತ್ತಿ ನೈಪುಣ್ಯ ಇರುವವರೂ ನಮ್ಮಲ್ಲಿ ಇದ್ದಾರೆ. ಹೀಗಾಗಿ ಸುಳ್ಳು ಕಾರಣ ಕೊಟ್ಟು ಸ್ಥಳೀಯರಿಗೆ ಉದ್ಯೋಗ ಅವಕಾಶ ನಿರಾಕರಿಸಬಾರದು ಎಂದು ತಿಳಿಸಿದರು. ಕಾರ್ಖಾನೆಗಳು ಶಾಂತಿಯುತವಾಗಿ ನಡೆಯಬೇಕು. ನಮ್ಮ ಸರ್ಕಾರ ನಿರುದ್ಯೋಗಿ ಪದವೀಧರರಿಗಾಗಿ ಯುವ ನಿಧಿ ಯೋಜನೆ ಜಾರಿಗೆ ತರುತ್ತಿದೆ. ಯೋಜನೆ ಜನವರಿ 12ರಂದು ಉದ್ಘಾಟನೆಯಾಗಲಿದೆ. ನಿಮಗೆ ಯಾವ ರೀತಿಯ ವೃತ್ತಿ ನೈಪುಣ್ಯತೆ ಇರುವವರು ಬೇಕು ಎಂಬುದನ್ನು ಮನಗಂಡು ಪದವೀಧರರಿಗೆ ಸರ್ಕಾರದ ವತಿಯಿಂದ ತರಬೇತಿ ನೀಡಲಾಗುವುದು ಎಂದು ಹೇಳಿದರು. ಕಾರ್ಖಾನೆಗಳಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆ. ಜಿಡಿಪಿ ಬೆಳವಣಿಗೆಗೂ ಇದು ಸಹಕಾರಿ. ಕಾರ್ಖಾನೆಗಳಿಗೆ ಜಮೀನು ನೀಡಿದ ಮಾಲೀಕರ…
ಧಾರವಾಡ:- ವೈಯಕ್ತಿಕವಾಗಿ ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾರಾಗುತ್ತಾರೆ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಆದರೆ ಈ ಬಾರಿ ಖಂಡಿತವಾಗಿಯೂ ಬಿಜೆಪಿ ವಿರುದ್ಧ ಕಠಿಣ ಹೋರಾಟ ನಮ್ಮದಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎನ್ನುವ ಮೂಲಕ ಅವರು ತಾವು ಧಾರವಾಡ ಲೋಕಸಭೆ ಅಭ್ಯರ್ಥಿಯಾಗಲು ಮನಸ್ಸಿಲ್ಲ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ನೀಡಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆರೇಳು ಬಾರಿ ಸೋಲುಂಡಿದೆ.ಈ ಬಾರಿ ಅಷ್ಟು ಸುಲಭಕ್ಕೆ ಅವರನ್ನು ಗೆಲ್ಲಲುಬಿಡುವುದಿಲ್ಲ. ಒಳ್ಳೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ವಿರುದ್ಧ ಕಠಿಣ ಹೋರಾಟ ರೂಪಿಸುತ್ತೇವೆ. ಈಗಾಗಲೇ 15 ಕ್ಕೂ ಜನ ಆಕಾಂಕ್ಷಿಗಳು ಟಿಕೇಟ್ ಗಾಗಿ ಚುನಾವಣಾ ಉಸ್ತುವಾರಿ ಅಗಿರುವ ಲಕ್ಷ್ಮೀ ಹೆಬ್ಬಾಳ್ಕರ್…
ಚಾಮರಾಜನಗರ:- ದಂಗೆ, ಗಲಭೆ ಮಾಡುವವರು ಬಿಜೆಪಿ ವರೆತೂ ಕಾಂಗ್ರೆಸ್ ಅಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದಂಗೆ ಆಗಲಿ ಎನ್ನುವವರೇ ಬಿಜೆಪಿಯವರು, ಕೋಮು ಗಲಭೆ ಬಯಸುವವರು ಬಿಜೆಪಿಯವರು, ಇಬ್ಬರು-ಮೂರು ಜನ ಸತ್ತರೆ ರಾಜಕೀಯ ಲಾಭ ಸಿಗಲಿದೆ ಎಂದು ಯೋಚಿಸುವವರೇ ಬಿಜೆಪಿಯವರು, ಇದೇ ಬಿಜೆಪಿಯವರ ಸ್ರ್ಟಾಟಜಿ ಎಂದು ಹಿಜಾಬ್ ವಿಚಾರದಲ್ಲಿ ದಂಗೆ ಆಗಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ಕೊಟ್ಟರು. ಹಿಜಾಬ್ ನಿಷೇಧದ ಆದೇಶ ಹಿಂಪಡೆಯುವದರ ಬಗ್ಗೆ ಅವರು ಮಾತನಾಡಿ,ಇದು ಜಾತ್ಯಾತೀತ ರಾಷ್ಟ್ರ ಎಲ್ರಿಗೂ ಗೌರವದಿಂದ ಕರೆದು ಕೊಂಡು ಹೋಗುವ ಅವಕಾಶ ಮಾಡಿ ಕೊಡಬೇಕು, ವಾತಾವರಣವನ್ನ ಹಾಳು ಮಾಡುವುದಕ್ಕೆ ಚಕ್ರವರ್ತಿ ಸೂಲಿಬೆಲೆ ಅಂತ ವ್ಯಕ್ತಿಗಳಿದ್ದಾರೆ, ಇಷ್ಟು ವರ್ಷ ಇಲ್ದೆ ಇರೋ ವಿಚಾರಗಳು ಈಗ ಯಾಕೆ ತಲೆ ಎತ್ತುತ್ತಿವೆ, ಈ ವಿಚಾರವನ್ನ ಬೆಳೆಸಲು ಹೋದ್ರೆ ಅವರಿಗೂ ಕೂಡ ಒಳ್ಳೆದಾಗಲ್ಲ ಎಂದು ಕಿಡಿಕಾರಿದರು. ಇದೇ ವೇಳೆ, ಚಾಮರಾಜನಗರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ…
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಅಶ್ವತ್ ನಗರದಲ್ಲಿ ಮಗು ಜತೆಗೆ ಸ್ನಾನಕ್ಕೆ ಹೋದಾಗ ಗೀಸರ್ ಲೀಕ್ ಆಗಿ ಪ್ರಜ್ಞೆ ತಪ್ಪಿ ಬಾತ್‌ರೂಮ್‌ನಲ್ಲೇ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ. 23 ವರ್ಷದ ರಮ್ಯ ಮೃತ ದುರ್ದೈವಿ. ರಮ್ಯ ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋಗಿದ್ದಾರೆ. ಆದರೆ ಈ ವೇಳೆ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದೆ. ಆದರೆ ಇದು ತಿಳಿಯದೆ ಸ್ನಾನ ಮಾಡಲು ಬಾತ್ ರೂಮ್‌ಗೆ ಹೋಗಿದ್ದಾರೆ. ಗೀಸರ್ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ರಮ್ಯಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗರ್ಭಿಣಿಯಾಗಿದ್ದ ರಮ್ಯರ ಮಗುವೂ ಪ್ರಪಂಚ ನೋಡುವ ಮುನ್ನವೇ ಗರ್ಭದಲ್ಲೇ ಮೃತಪಟ್ಟಿದೆ. ಇತ್ತ ರಮ್ಯರ ನಾಲ್ಕು ವರ್ಷದ ಮಗುವಿಗೂ ಚಿಕಿತ್ಸೆ ಮುಂದುವರಿದಿದೆ. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’, ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕನ್ನಡದಲ್ಲಿ ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಸಲಾರ್’ ಪ್ಯಾನ್ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್…
ಬೆಂಗಳೂರು:- ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 104 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ಬರೊಬ್ಬರಿ 85 ಪ್ರಕರಣ ವರದಿ ಆಗಿದೆ. 1752 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು ಬೆಂಗಳೂರಿನಲ್ಲಿ 677 ಟೆಸ್ಟ್ ಮಾಡಲಾಗಿತ್ತು. ಎರಡೇ ದಿನದಲ್ಲಿ ಪಾಸಿಟಿವಿಟಿ ರೇಟ್ 5.93ಗೆ ಏರಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ 8 ಜನ ಕೊರೊನಾ ಸೋಂಕಿನಿಂದ ಗಣಮುಖವಾಗಿದ್ದಾರೆ ಎನ್ನಲಾಗಿದೆ.