ಬೆಳಗಾವಿ: ಇದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಡಲೇಬೇಕಾದ ಸ್ಟೋರಿ ನಿಮ್ಮ ಜಿಲ್ಲೆಯಲ್ಲೇ ಇಂಥ ವ್ಯವಸ್ಥೆ ನಡೆದಿರುವುದು ನಾಚಿಕೇಡಿತನ ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಇಟನಾಳ ಗ್ರಾಮದಲ್ಲಿ ಎಲ್ಲಿದ್ದೀರಾ ಮೇಡಂ ನೀವು ನೋಡಲೇಬೇಕಾದ ಸ್ಟೋರಿ. ಗ್ರಾಮದ 11 ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡಬೇಕು ಆದರೆ ರಾತ್ರಿಯ ಸಮಯಕ್ಕೆ ಬಂದ ಕೇವಲ 2 ಅಂಗನವಾಡಿ ಕೇಂದ್ರಕ್ಕೆ ವಿತರಣೆ ಹಾಗಾಗಿ ಅಂಗನವಾಡಿಯ ಆಹಾರ ಅಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯರಿಂದ ಬ್ರೇಕ್.! ಈ ವಿಷಯ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು ಆಹಾರ ವಿತರಿಸುವ ವಾಹನ ಚಾಲಕನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿ ಹಾಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಕೂಡ ನೀಡಿದ ಅಧಿಕಾರಿ. ತಾಲೂಕಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಪಂಚಾಯತಿ ಸದಸ್ಯ ಮುತ್ತಪ್ಪ ಡಾಂಗೆ.
Author: AIN Author
ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಮತ್ತು ಕಿರುಕುಳ ಆಗದಂತೆ ನೋಡಿಕೊಳ್ಳಲು ವಿಶೇಷ ಗೈಡ್‌ಲೈನ್ಸ್ ಬಿಡುಗಡೆ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವರ್ಷಾಚರಣೆ ವೇಳೆ ಮಹಿಳೆಯರಿಗೆ (Women) ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಲ್ಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ (New Year Guidelines) ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಹಾಗೂ ಅಬಕಾರಿ ಇಲಾಖೆಗಳ ಜೊತೆ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಲಾಗಿದೆ. ಎಂ.ಜಿ ರಸ್ತೆ, ಬ್ರಿಗೆಡ್ ರೋಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕುಡಿದು ಅತಿರೇಕವಾಗಿ ವರ್ತಿಸಿದ್ರೆ ಹಾಗೂ ಇತರೆ ದುರ್ಘಟನೆಗಳನ್ನ ತಡೆಗಟ್ಟಲು ಈ ಹಿಂದಿನ ಪ್ರಕರಣಗಳನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ…
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ್ದೇ ಟೆನ್ಷನ್ ಆಗಿದ್ದು ಮತ್ತೆ ಕೊರೊನಾ ಹಾಟ್ ಸ್ಪಾಟ್ ಆಗುತ್ತಾ ಸಿಲಿಕಾನ್ ಸಿಟಿ ಎಂಬ ಭಯದಲ್ಲೇ ಇದ್ದಾರೆ. ಬೆಂಗಳೂರಿನಲ್ಲಿ ಸ್ವಲ್ಪ ಯಾಮಾರಿದ್ರೂ ಕೊರೊನಾ ಸ್ಪೋಟ ಭೀತಿ ಹೆಚ್ಚಾಗಲಿದ್ದು ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರೇ ನಂಬರ್ 1 ಆಗಲಿದ್ದು ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತೀ ಹೆಚ್ಚು ಕೇಸ್ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಕಳೆದ ಮೂರು ಅಲೆಗಳಲ್ಲಿಯೂ ಬೆಂಗಳೂರಿನಲ್ಲೇ ಅತೀ ಹೆಚ್ಚು ಕೇಸ್ ಗಳು ಪತ್ತೆಯಾಗ್ತಿದ್ದವು ಇದೀಗ ಮತ್ತೆ ಕೋವಿಡ್ ಹೆಚ್ಚಳದಿಂದ ಬೆಂಗಳೂರು ಡೇಂಜರ್ ಆಗುತ್ತಾ ಹಾಗೆ ಬೆಂಗಳೂರಿಗರನ್ನ ಟಾರ್ಗೆಟ್ ಮಾಡ್ತಾ ಕೊರೊನಾ ನಾಲ್ಕನೇ ಅಲೆ ಎಂಬ ಸಂಶಯವು ಈಗ ಕಾಡುತ್ತಿದೆ. ದಿನೇ ದಿನೇ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳವಾಗ್ತಿದ್ದು ರಾಜ್ಯದಲ್ಲಿರುವ ಸಕ್ರಿಯ ಕೇಸ್ ಗಳಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ರಾಜ್ಯದಲ್ಲಿ ಆಕ್ಟೀವ್ ಕೇಸ್ 271 ಕೇಸ್…ಬೆಂಗಳೂರಿನಲ್ಲೇ 234 ಆಕ್ಟೀವ್ ಕೇಸ್ ನಿನ್ನೇ ಒಂದೇ ದಿನ ಬೆಂಗಳೂರಿನಲ್ಲಿ 85 ಹೊಸ ಕೇಸ್…
ದಾವಣಗೆರೆ : ಹಿಜಾಬ್ ಬಗ್ಗೆ ಸಿಎಂ ಸಿದ್ದರಾಮಯ್ಯ ಯು ಟರ್ನ್ ಹೊಡೆದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ ಸಿಎಂ ಹೇಳಿಕೆ ವಾಪಸ್ ಪಡೆದಿರುವುದು ಒಳ್ಳೆಯ ಸಂಗತಿ ಈಗಲಾದರೂ ಅವರಿಗೆ ಸದ್ಬುದ್ಧಿ ಬಂದಿದೆ. ನಾವೇನು ಅಲ್ಪ ಸಂಖ್ಯಾತರ ವಿರೋಧಿಗಳಲ್ಲ ಹಿಂದು ಮುಸ್ಲಿಂ ಕ್ರೈಸ್ತ್ ರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎನ್ನುತ್ತೇವೆ. ಜಾತಿ ವಿಷ ಬೀಜ ಬಿತ್ತುವುದನ್ನ ಸಿದ್ದರಾಮಯ್ಯ ನಿಲ್ಲಿಸಬೇಕು ಹಾಗೆ ಇದರಿಂದ ಯಾವುದೇ ಲಾಭ ಆಗುವುದಿಲ್ಲ ಎಂದು ಸಿಎಂ ವಿರುದ್ಧ ಯಡಿಯೂರಪ್ಪ ಕಿಡಿಕಾರಿದರು. ಹಾಗೆ ಜಾತಿಗಣತಿ ಬಗ್ಗೆ ಸಮುದಾಯದ ವಿರೋಧ ವಿಚಾರ ಬಗ್ಗೆಯೂ ಮಾತನಾಡಿದ ಅವರು, ಈಗಾಗಲೇ ಜಾತಿಗಣತಿ ಬಗ್ಗೆ ಎಲ್ಲರ ಮನಸ್ಸಲ್ಲು ವಿರೋಧವಿದೆ ನಾನು ಅದೇ ಭಾವನೆಯನ್ನ ವ್ಯಕ್ತಪಡಿಸುತ್ತೇನೆ ಹೊಸದಾಗಿ ಜಾತಿಗಣತಿ ಮಾಡಬೇಕು ಪ್ರಸ್ತುತ ಸ್ಥಿತಿಯನ್ನ ಜನತೆಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿ…
ಧಾರವಾಡ: ಇಷ್ಟುದಿನ ಮನೆ ಮಠ, ಬ್ಯಾಂಕ ಎಟಿಎಂ ಸೇರಿದಂತೆ ದೇವಸ್ಥಾನಗಳ ಹಿಂಡಿಗಳಿಗೆ ಕನ್ನಾ ಹಾಕುತ್ತಿದ್ದ ಕಳ್ಳರು ಈಗ ರೈತರ ಹತ್ತಿ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ. ಹೌದು ಇದು ಅಚ್ಚರಿ ಅನಿಸಿದ್ದರು ನಿಜ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮೈಲಾರಪ್ಪ ಕುರಗುಂದ ಅವರ ಜಮೀನಿನಲ್ಲಿ ಒಂದು ವರೇ ಎಕರೆಯ ಜಮೀನಿನಲ್ಲಿನ ಹತ್ತಿಯನ್ನು ಕಳ್ಳರ ಗ್ಯಾಂಗ್ ಬಿಡಿಸಿಕೊಂಡು ಪರಾರಿಯಾಗಿದೆ. ಇನ್ನೂ ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ್ ರೈತ ಮಲ್ಲಪ್ಪನಿಗೆ ಹೊಲದಲ್ಲಿನ ಹತ್ತಿ ಒಂದವರೇ ಎಕರೆಯಲ್ಲಿ ಹತ್ತಿ ಇಲ್ಲದನ್ನು ನೋಡಿ ಶಾಕ್ ಆಗಿದೆ. ಹತ್ತಿ ಬೆಳೆ ಫಸಲು ನೀಡಲು ಆರಂಭದಿಂದಾ ಒಂದು ಬಾರಿ ಹತ್ತಿ ಬೀಡಿಸಿ ಮಾರಾಟ ಮಾಡಿದ್ದು, ಎರಡನೇ ಬಾರಿ ಬೀಡಿಬೇಕಾಗಿತ್ತು. ಮನೆಯಲ್ಲಿ ಕೆಲಸ ಕಾರ್ಯಗಳಿಂದ ಹಾಗೂ ಆಳಿನ ಸಮಸ್ಯೆಯಿಂದಾ ಹಾಗೇ ಬಿಟ್ಟಿದ ಹತ್ತಿ ಬೆಳೆ ಈಗ ರೈತನ ಕೈ ತಪ್ಪಿ ಕಳ್ಳರ ಪಾಲಾಗಿದೆ. ಖದೀಮ ಕಳ್ಳರ ಈ ಕೃತ್ಯದಿಂದ ಬ್ಯಾಲ್ಯಾಳ…
ಕಲಬುರಗಿ: ತರಕಾರಿ ವ್ಯಾಪಾರ ಮಾಡುತಿದ್ದ ಯುವಕನನ್ನ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ಕೊಲೆ ನಡೆದಿದ್ದು https://ainlivenews.com/kai-leaders-sons-gruesome-murder-friend-is-the-accused/ ಕೊಲೆಯ ನಂತ್ರ ಪೆಟ್ರೋಲ್ ಸುರಿದು ಶವ ಗುರುತು ಸಿಗದಂತೆ ಬೆಂಕಿ ಹಚ್ಚಲಾಗಿದೆ..ಕೊಲೆಯಾದಯುವಕನನ್ನ ದಾವಲ್ ಸಾಬ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಚಿತ್ತಾಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ..ಕೊಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ತನಿಖೆ ನಂತ್ರ ಪಾತಕಿಗಳ ಬಣ್ಣ ಬಯಲಾಗಲಿದೆ.
ಹುಬ್ಬಳ್ಳಿ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಅವರಿಂದ ಏನೂ ನೀರಿಕ್ಷೆ ಮಾಡಲು ಸಾಧ್ಯ ಇಲ್ಲ. ಹಿಜಾಬ್ ಮತ್ತು ಭುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಹಿಜಾಬ್ ಅನ್ನೋದು ತಲೆ ಮತ್ತೆ ಎದೆ ಮುಚ್ಚಿಕೊಳ್ಳೊಕೆ ಇರೋದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದೆ. ಭುರ್ಖಾ ಅನ್ನೋದು ಸಂಪೂರ್ಣ ದೇಹ ಮುಚ್ಚಿಕೊಳ್ಳೋದು. ಶಾಲಾ ಕಂಪೌಂಡ್ ವರೆಗೂ ಭುರ್ಖಾ ಆ ನಂತರ ಹಿಜಾಬ್ ಇರಬೇಕು ಅನ್ನೋದು ನನ್ನ ಕಲ್ಪನೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯವರು ಸಮಾನತೆ ವಿಚಾರ ಮಾತಾಡ್ತಾರೆ. ಅಹಾರ,ಉಡುಪಿನ ಹಕ್ಕು ಎಲ್ಲರ ವೈಯಕ್ತಿಕ. ಬಿಜೆಪಿಗೆ ರೈತರು,ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಈ ವಿಚಾರ ಮಾತಾಡ್ತೀದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆ ಮಾಡ್ತೀವಿ. ನಮ್ದು ಜ್ಯಾತ್ಯಾತೀತ ರಾಷ್ಟ್ರ, ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು ಎಂದರು. ಕಾಂಗ್ರೆಸ್ ತುಷ್ಟೀಕರಣ ಮಾಡತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡ್ತಿರೋದು ಬಿಜೆಪಿ. ಹಿಂಸೆ ಸುಳ್ಳನ್ನು ಪ್ರಚಾರ ಮಾಡ್ತಿರೋದು ಬಿಜೆಪಿ.…
‘ಕಾಟೇರ.. ಕಾಟೇರ.. ಕಾಟೇರ..’ ಪರಭಾಷೆ ಸಿನಿಮಾಗಳ ಹಾವಳಿಯ ನಡುವೆಯೂ ಡಿ ಬಾಸ್ ಹವಾ ಕಡಿಮೆ ಆಗಿಲ್ಲ. ನಟ ದರ್ಶನ್ ನಟನೆಯ ಕಾಟೇರ ಸಿನಿಮಾ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ‘ಜೈ ಡಿ ಬಾಸ್’ ಘೋಷಣೆ ಮೊಳಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ ಈ ಅಪ್ಪಟ್ಟ ಕನ್ನಡ ಸೊಗಡಿನ ಸಿನಿಮಾ ಬಿಡುಗಡೆಗಾಗಿ ದಾಸನ ಭಕ್ತಗಣ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭವಾಗಿರುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಈ ಕುರಿತು ನಟ ದರ್ಶನ್ ತೂಗುದೀಪ, ಚಿತ್ರದ ನಿರ್ದೇಶಕ ತರುಣ್ ಸುಧೀರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಾಟೇರ’ ಚಿತ್ರದ ಮುಂಗಡ ಬುಕ್ಕಿಂಗ್‌ಗಳು ಓಪನ್ ಆಗಿದೆ. ಪ್ರೇಕ್ಷಕರೇ, ನಿಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿ ಹಾಗೂ ಡಿಸೆಂಬರ್ 29ರಿಂದ ತೆರೆಮೇಲೆ ‘ಕಾಟೇರ’ ಘರ್ಜನೆ ನೋಡಲು ಸಿದ್ಧರಾಗಿ ಎಂದು ತಮ್ಮ ಭಕ್ತಗಣಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಇದೇ ಡಿಸೆಂಬರ್ 29ರಂದು ಕಾಟೇರ ಸಿನಿಮಾ ಬಿಡುಗಡೆಯಾಗಲಿದ್ದು, ರಾಜ್ಯ ಸೇರಿದಂತೆ ದೇಶಾದ್ಯಂತ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ…
ಶಾಲಾ ಕಾಲೇಜುಗಳ ಕರ್ಮಕಾಂಡ ಹೊರ ಬಂದು ಸರ್ಕಾರದ ಮಾನ ಹರಾಜಿಗೆ ಬೀಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನವರು ಅವರು ಹಿಜಾಬ್ ವಿಚಾರ ಮುನ್ನಲೆಗೆ ತಂದಿದ್ದಾರೆ. https://x.com/BJP4Karnataka/status/1738779500979093815?s=20 ಕಾಂಗ್ರೆಸ್ ತಿರುಚುವ ಕಲೆಗಳ ಬಗ್ಗೆ ತಿಳಿಯಲು ವಿಡಿಯೋ ನೋಡಿ
ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ. ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಹನುಮ ಭಕ್ತರು ಆಗಮಿಸಿದ್ದು ಹನುಮ ಮಾಲಾಧಾರಿಗಳು ಹನುಮ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಇನ್ನು ಅಂಜನಾದ್ರಿಯಲ್ಲಿ ಜೈ ಶ್ರೀರಾಮ, ಜೈ ಆಂಜನೇಯ ಎಂಬ ಘೋಷವಾಕ್ಯಗಳ ನಡುವೆ ಮೋದಿ, ಪುನೀತ್ ರಾಜ್ಕುಮಾರ್ಗಳ ಘೋಷಣೆಗಳು ಮೊಳಗಿವೆ. ಸಾವಿರಾರು ಭಕ್ತರು ಪ್ರಧಾನಿ ನರೇಂದ್ರ ಮೋದಿ, ದಿ. ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದು ಅಂಜನಾದ್ರಿಗೆ ಆಗಮಿಸಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮ ಮಾಲೆ ವಿಸರ್ಜನೆ ನಡೆಯುತ್ತಿದೆ. ಹೀಗಾಗಿ ಹನುಮ ಮಾಲಾಧಾರಿಗಳಷ್ಟೇ ಅಲ್ಲದೆ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಮೋದಿ ಮತ್ತು ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಹಿಡಿದು ಜೈಕಾರ ಹಾಕಿದ್ದಾರೆ.