Author: AIN Author

ಬೆಂಗಳೂರು: ಹಿಜಬ್ (Hijab) ವಿಚಾರದಲ್ಲಿ ಸರ್ಕಾರದ ನಿಲುವು ಹಾಗೂ ಆದೇಶ ಏನು ಎಂಬುದು 2 ರಿಂದ 3 ದಿನಗಳಲ್ಲಿ ಹೊರ ಬೀಳಲಿದೆ, ಕಾದು ನೋಡಿ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್  ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಜಬ್ ವಿಚಾರ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಹೆಚ್ಚು ಚರ್ಚೆ ಹಾಗೂ ವಿಮರ್ಶೆ ಮಾಡಲು ನಾನು ಹೋಗುವುದಿಲ್ಲ. ಹಿಂದಿನ ಸರ್ಕಾರದ ವಿವಾದಾತ್ಮಕ ನಿರ್ಧಾರವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಎಂ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ ಸರ್ಕಾರದ ಅಧಿಕೃತ ಆದೇಶ 2-3 ದಿನದಲ್ಲಿ ಹೊರ ಬರಲಿದೆ. ಆ ಆದೇಶ ಏನು ಎಂಬುದು ಬಂದ ನಂತರವೆ ಗೊತ್ತಾಗಲಿದೆ. ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಸರ್ಕಾರದ ನಿರ್ಧಾರಕ್ಕೆ ಕೋರ್ಟ್‍ನ ವಿಚಾರ ಅಡ್ಡಿ ಆಗಲ್ಲ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

Read More

ಬೆಂಗಳೂರು: ಸರ್ಕಾರ ಬೀಳಲಿದೆ, ಅಜಿತ್ ಪವಾರ್ ಹಾಗೂ ಶಿಂಧೆಗಳಿದ್ದಾರೆ ಅನ್ನೋ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ (D.K.Suresh) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್‌, ವಿಪಕ್ಷಗಳಿಗೆ ಅಧಿಕಾರ ಒಂದೇ ಮುಖ್ಯ ಅಂತೇಳಿ ಪದೇ ಪದೇ ಎಲ್ಲಾ ನಾಯಕರು ಸ್ಪಷ್ಟಪಡಿಸುತ್ತಿದ್ದಾರೆ. ವಿಪಕ್ಷವಾಗಿ ಸೃಜನಾತ್ಮಕ ಕೆಲಸ ಮಾಡಬೇಕು. ಅದನ್ನ ಬಿಟ್ಟು. ಅಧಿಕಾರ ಹೇಗೆ ಹಿಡಿಯಬೇಕು ಅಂತ ವಾಮ ಮಾರ್ಗದ ಮುಖಾಂತರ ಪ್ರಯತ್ನ ಮಾಡ್ತಿದಾರೆ ಎಂದು ಟೀಕಿಸಿದ್ದಾರೆ. ಕುದುರೆ ವ್ಯಾಪಾರ ಹೇಗೆ ಮಾಡಬೇಕು ಅನ್ನೋ ಬಗ್ಗೆ ಚಿಂತನೆ ಮಾಡ್ತಿದ್ದಾರೆ. ವಿಪಕ್ಷಗಳು ಬೇರೇನೂ ಮಾಡ್ತಿಲ್ಲ. ಕೆಲವರಿಗೆ ಅಭ್ಯಾಸ ಆಗೋಗಿದೆ. ಅಂಥವರು ಹೀಗೆಲ್ಲಾ ಮಾತಾಡುತ್ತಿರುತ್ತಾರೆ. ಅವರ ಆಸೆ ಖಂಡಿತ ಈಡೇರಲ್ಲ. ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ. ಯಾರು ಏನೂ ಮಾಡಲು ಸಾಧ್ಯವಿಲ್ಲ. ಸದ್ಯ ಬಿಜೆಪಿ, ಜೆಡಿಎಸ್‌ ನಾಯಕರು ಭ್ರಮೆಯಲ್ಲಿದ್ದಾರೆ. ಭ್ರಮೆಯಿಂದ ಈಚೆ ಬರಬೇಕು. ಅವರಲ್ಲಿರುವ ಲೋಪ ಮುಚ್ಚಿಕೊಳ್ಳಲು, ಪಕ್ಷ ಉಳಿಸಿಕೊಳ್ಳಲು, ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ರೀತಿ ದೂಷಣೆ ಮಾಡ್ತಿದ್ದಾರೆ ಎಂದು ವಾಗ್ದಾಳಿ…

Read More

ಬೆಂಗಳೂರು: ಪಾರ್ಟಿಗೆ ಕುಳಿತ ಗೆಳೆಯ ಎಣ್ಣೆ ಜಾಸ್ತಿ ಕುಡಿಯೊಲ್ಲ ಎಂದಿದ್ದಕ್ಕೆ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಿತೇಂದ್ರ ಕೊಲೆಯಾದ ದುರ್ದೈವಿಯಾಗಿದ್ದು, ಬಾಬು ಕೊಲೆ ಮಾಡಿದ ಸ್ನೇಹಿತ. ರಾತ್ರಿ ಒಟ್ಟಿಗೆ ಗೆಳೆಯರು ಪಾರ್ಟಿಗೆ ಕುಳಿತಿದ್ದರು. ಈ ವೇಳೆ ಜಿತೇಂದ್ರನಿಗೆ ಮದ್ಯ ಸೇವಿಸಿದ ಬಳಿಕವೂ ಮತ್ತಷ್ಟು ಎಣ್ಣೆ ಕುಡಿಯಲು ಒತ್ತಾಯಿಸಿದ್ದ ಆರೋಪಿ ಸ್ನೇಹಿತ. ಆದರೆ ಪಾರ್ಟಿ ಜಾಗದಿಂದ ಹೊರಗೆ ಹೋಗಿ ಜಿತೇಂದ್ರ ಖಾಲಿ ನಿವೇಶನದ ಬಳಿ ಅವಿತಿದ್ದ. ವಿಷಯ ತಿಳಿದ ಆರೋಪಿ ಎಣ್ಣೆ ಮತ್ತಿನಲ್ಲಿ ಕುತ್ತಿಗೆಗೆ ಸ್ಕಾರ್ಫ್ ಬಿಗಿದು ಕರೆತರಲು ಯತ್ನಸಿದ್ದಾನೆ. ಅದೇ ವೇಳೆ ಉಸಿರುಗಟ್ಟಿ ಸಾವನಪ್ಪಿದ್ದಾನೆ. ಗಾಬರಿಯಲ್ಲಿ ಪೊದೆಯಲ್ಲೇ ಮೃತದೇಹ ಬಿಸಾಡಿ ಆರೋಪಿ ಪರಾರಿಯಾಗಿದ್ದ ಸ್ಥಳಕ್ಕೆ ಬಂದ ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೊಲೆ ಆರೋಪಿಯನ್ನ ಬಂಧನಸಿದ್ದಾರೆ.

Read More

ಬೆಂಗಳೂರು: ಹಿಜಬ್ ವಿಚಾರದಲ್ಲಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಕಾನೂನಿನ ಅಡಿಯಲ್ಲೇ ಕ್ರಮ ತಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜಬ್ ನಿಷೇಧ ವಾಪಸ್ ಪಡೆಯುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಹಿಜಬ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಕಾನೂನು ಏನು ಹೇಳುತ್ತದೆ ಎಂಬುದನ್ನ ನೋಡಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಶಾಲಾ ಕಾಲೇಜುಗಳಲ್ಲಿ ಈ ಹೇಳಿಕೆಯಿಂದ ಗೊಂದಲ ಆಗಿದ್ದರೆ, ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದು ಚರ್ಚೆ ಮಾಡಿ ನಿರ್ದೇಶನ ನೀಡುತ್ತೇನೆ ಇದು ಸೂಕ್ಷ್ಮವಾದ ವಿಚಾರವಾಗಿದ್ದು, ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಕಾನೂನು ತಜ್ಞರ ಜೊತೆ ಮಾತುಕತೆ ನಡೆಸುತ್ತೇವೆ. ನಾವು ಏನೇ ತೀರ್ಮಾನ ಮಾಡಿದರೂ ಅದು ಕಾನೂನು ತಜ್ಞರ ಸಲಹೆ ಪಡೆದು ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ ಮುಂದಿನ…

Read More

ಬೆಂಗಳೂರು: ಕ್ರಿಸ್ಮಸ್, ನ್ಯೂ ಇಯರ್ ಸಲುವಾಗಿ  ಸಾಲು ಸಾಲು ರಜೆಗಳು ಬಂದಿದ್ದು ಊರಿಗೆ ಹೋಗಲು ಇದ್ದವರಿಗೆ  ಬಸ್ ಬುಕ್ಕಿಂಗ್ ಆ್ಯಪ್​ಗಳು ಬಿಗ್ ಶಾಕ್ ಕೊಟ್ಟಿವೆ. ಬೆಂಗಳೂರಿನಿಂದ ಬಹುತೇಕ ಊರುಗಳಿಗೆ ಖಾಸಗಿ ಬಸ್​ಗಳು ದುಪ್ಪಟ್ಟು ದರ ನಿಗದಿ ಮಾಡಿವೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್​ಗಳಲ್ಲಿ ಮತ್ತಷ್ಟು ಹೆಚ್ಚಿನ ದರದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬೇಕಿದೆ. ನಿನ್ನೆ, ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ‌ ಹಿನ್ನೆಲೆ ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್​ಗಳ ದರ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್​ಗಳು ಪ್ರತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದೆ. ಬೇಕಾಬಿಟ್ಟಿ ದರ ಹೆಚ್ಚಿಸುತ್ತಿರುವ ಖಾಸಗಿ ಬಸ್​ ಆ್ಯಪ್​ಗಳ ಮೇಲೆ ಕ್ರಮ ಯಾವಾಗ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಬಸ್ ದರ ಪಟ್ಟಿ ಇಲ್ಲಿದೆ ​ ಬೆಂಗಳೂರು-ಶಿವಮೊಗ್ಗ 450-650 ರೂ.ರಿಂದ ಈಗ 1000-1400 ಇದೆ. ಬೆಂಗಳೂರು- ಹುಬ್ಬಳಿ 600-850ರೂ. ಇತ್ತು. ಈಗ 1550-2000 ರೂ. ಬೆಂಗಳೂರು-ಮಂಗಳೂರು…

Read More

ಕಲಬುರಗಿ: ನಾನು ಯಾವತ್ತೂ ವಿಲನ್ ಇದ್ದೇನೆ.ವಿಲನ್ ಇದ್ರೇನೇ  ಹಿರೋಗೆ ಕಿಮ್ಮತ್ತಿರುತ್ತೆ. ಹೀಗಾಗಿ ಸರ್ವಪಕ್ಷಗಳಿಗೂ ನಾನೇ ವಿರೋಧ ಪಕ್ಷದ ನಾಯಕ ಅಂತ ಬಿಜೆಪಿ ಶಾಸಕ ಬಸಣ್ಣಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಯತ್ನಾಳ್ ವಿಲನ್ ಇಲ್ಲದೇ ಹೋದ್ರೆ ಹೀರೋ ಯಾರ ಜೋಡಿ ಫೈಟ್ ಮಾಡ್ತಾನೆ ಹೇಳಿ.ಅದಕ್ಕಾಗಿ ನಾನು ವಿಲನ್ ಆಗಿದ್ದೇನೆ.ಮುಂದೆ ನೋಡೋಣ ಅಂಬರೀಷ್ ಸಹ ಮೊದಲು ವಿಲನ್ ಇದ್ರು ನಂತ್ರ ಹೀರೋ ಆದ್ರು..ಹಾಗೇನೇ ನಾನೂ ಆಗಬಹುದು ಅಂತ ಹೇಳಿದ್ರು. ಇದೇವೇಳೆ ಮಲ್ಲಿಕಾರ್ಜುನ ಖರ್ಗೆಯವರು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ರಿಯಾಕ್ಟ್ ಮಾಡಿದ ಯತ್ನಾಳ್ ಖರ್ಗೆಯವರು ಪ್ರಧಾನಿ ಆಗಲ್ಲ ಇನ್ನೇನಿದ್ರೂ ಮತ್ತೆ ಮೋದಿಯವರೇ ಪ್ರಧಾನಿ ಆಗ್ತಾರೆ ಖರ್ಗೆಯವರು ವಿರೋಧ ಪಕ್ಷದಲ್ಲಿರ್ತಾರೆ ಅಂತ ಹೇಳಿದ್ರು..

Read More

ಬೆಂಗಳೂರು: ರಾಜ್ಯದಲ್ಲಿ ಇಂದು 104 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ ಬರೊಬ್ಬರಿ 85 ಜನರಿಗೆ ಕೊರೊನಾ ಸೋಂಕು ಹರಡಿದೆ. ಕಳೆದ 24 ಗಂಟೆಯಲ್ಲಿ 8 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನಲೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 5.93ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕೊರೊನಾ ಹಾಟ್​ಸ್ಪಾಟ್​ ಆಗುತ್ತಿರುವ ಬೆಂಗಳೂರಿನ ವಾಣಿ ವಿಲಾಸ, ವಿಕ್ಟೋರಿಯಾ, ಮಿಂಟೋ ಆಸ್ಪತ್ರೆಗಳಲ್ಲಿ ಈಗಾಗಲೇ ಕೊರೊನಾ ಮುನ್ನೇಚರಿಕೆ ಕ್ರಮವಾಗಿ ಸಿ‌ದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿನಿತ್ಯ ಆಸ್ಪತ್ರೆ ಕ್ಯಾಂಪಸ್​ನಲ್ಲಿ ಸಿಬ್ಬಂದಿಗಳು RT-PCR ಟೆಸ್ಟ್ ಮಾಡುತ್ತಿದ್ದಾರೆ. ಕೊವಿಡ್ ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕ ವಾರ್ಡ್​ ನಿರ್ಮಾಣ ಮಾಡಲಾಗಿದೆ. ಐಸಿಯುನಲ್ಲಿ 6 ಬೆಡ್​ಗಳನ್ನು ಇರಿಸಲಾಗಿದೆ. ಜೊತೆಗೆ ಚಿಕಿತ್ಸೆ ನೀಡಲು ನರ್ಸ್, ವೈದ್ಯರು, ಟೆಕ್ನಷಿಯನ್ಸ್​​​ಗಳನ್ನು ಆಸ್ಪತ್ರೆ ಹೊಂದಿದೆ.

Read More

ಬೆಂಗಳೂರು ಗ್ರಾಮಾಂತರ: ನೀರಿನ ತೊಟ್ಟಿ ಕ್ಲೀನ್‌ ಮಾಡಲು ಇಳಿದ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು  ಸಾವಿಗೀಡಾಗಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆರಟೇನ ಅಗ್ರಹಾರದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಘಟನೆ ನಡೆದಿದೆ. https://ainlivenews.com/breaking-kas-officer-complaint-against-ias-officers/ ಮೃತರು ತಮಿಳುನಾಡು ಮೂಲದ ಶಶಿಕುಮಾರ್ (51) ಮತ್ತು ಆಂಧ್ರ ಮೂಲದ ಆನಂದ್ (41) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಂಜೆ ಶಾಹಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಸಂಪ್‌ ಕ್ಲೀನ್ ಮಾಡಲು ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಬೆಂಗಳೂರು: ಐಎಎಸ್ ಅಧಿಕಾರಿಗಳ ವಿರುದ್ಧ ಕೆಎಎಸ್ ಅಧಿಕಾರಿ ದೂರು ನೀಡಿದ್ದಾರೆ ಐಎಎಸ್ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಸಿಎಂಗೆ ದೂರು ನೀಡಿರುವ KAS  ಅಧಿಕಾರಿ. ಮುಖ್ಯಮಂತ್ರಿಗೆ ದೂರು ನೀಡಿದ ಆನೇಕಲ್ ತಹಶಿಲ್ದಾರ್ ಅಮಾನತ್ತಾದ ಆನೇಕಲ್ ತಹಶಿಲ್ದಾರ್ ಶಿವಪ್ಪ ಎಚ್ ಲಮಾಣಿ ದೂರು ಒಂದೇ ವರ್ಷದಲ್ಲಿ ನಾಲ್ಕು ಬಾರಿ ಅಮಾನತ್ತು ಮಾಡಿ ಆದೇಶ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ರಿಂದ ಕಿರುಕುಳ ಆರೋಪ ಆನೇಕಲ್ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ  ಏಪ್ರಿಲ್ 12 ರಂದು ಮೊದಲು ಅಮಾನತು. ಈ ಅಮಾನತ್ತು ಆದೇಶ ವಿರುದ್ಧ ಹೈಕೋರ್ಟ್ ನಲ್ಲಿ ತಡೆಯಾಜ್ಞೆ  ಬಳಿಕ ವಿಚಾರಣೆ ನಡೆಸಿ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಇದ್ರು ತಹಶಿಲ್ದಾರ್ ಪರ ಅಂತಿಮ ಆದೇಶ ನೀಡಿದ್ದರು ಅಕ್ಟೋಬರ್ 11 ರಂದು ಪುನಃ ಅಮಾನತ್ತುಅಮಾನತ್ತು ಅದೇಶ ವಿರುದ್ಧ ಕರ್ನಾಟಕ ರಾಜ್ಯ ಆಡಳಿತ ಮಂಡಳಿಗೆ ಮೇಲ್ಮನವಿಅಕ್ಟೋಬರ್ 17 ರಂದು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ…

Read More

ಬಿಗ್ ಬಾಸ್ ಮನೆಯಲ್ಲಿ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದೊಡ್ಮನೆ ಆಟಕ್ಕೆ ಅಂತ್ಯ ಬೀಳಲು ಕೆಲವೇ ಕೆಲವು ದಿನಗಳು ಬಾಕಿಯಿದೆ. ಹೀಗಿರುವಾಗ ದೊಡ್ಮನೆಗೆ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ (Shine Shetty) ಮತ್ತು ನಟಿ ಶುಭಾ ಪೂಂಜಾ (Shubha Poonja) ಎಂಟ್ರಿ ಕೊಟ್ಟಿದ್ದಾರೆ. ಕೆಸಿಸಿ ಪಂದ್ಯ ಇರುವ ಕಾರಣ ಸುದೀಪ್ ಅವರು ವಾರಾಂತ್ಯದ ಬಿಗ್‌ ಬಾಸ್‌ ಶೋಗೆ ಗೈರಾಗಿದ್ದಾರೆ. ಹಾಗಾಗಿ ಶನಿವಾರದ ಎಪಿಸೋಡ್‌ನಲ್ಲಿ (ಡಿ.23) ಹಿರಿಯ ನಟಿ ಶೃತಿ ಅವರು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟು ಹಲವು ವಿಚಾರಗಳಿಗೆ ನ್ಯಾಯಧೀಶರಾಗಿ ತೀರ್ಪು ನೀಡಿದ್ದರು. ಸ್ಪರ್ಧಿಗಳಿಗೆ ಸರಿ ಮತ್ತು ತಪ್ಪುಗಳನ್ನ ತಿದ್ದಿದ್ದರು. ಈಗ ವಾರಾಂತ್ಯದ ಮತ್ತೊಂದು ಎಪಿಸೋಡ್‌ಗೆ ಅದ್ದೂರಿಯಾಗಿ ಶೈನ್ ಶೆಟ್ಟಿ-ಶುಭಾ ಎಂಟ್ರಿ ನೀಡಿದ್ದಾರೆ. ಈ ಸೀಸನ್‌ನ ಸ್ಪರ್ಧಿಗಳ ಜೊತೆ ಶೈನ್-ಶುಭಾ ಎಂಜಾಯ್ ಮಾಡಿದ ಮೇಲೆ ಎಂದಿನಂತೆ ಮನೆಮಂದಿ ಎಲಿಮಿನೇಷನ್ ತಲೆ ಬಿಸಿ ಶುರುವಾಗಿದೆ. ಈ ವಾರ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಅವಿನಾಶ್ ಶೆಟ್ಟಿ, ಸಂಗೀತಾ, ಮೈಕಲ್,…

Read More