ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಜಯ್ ಸಿಂಗ್ (Sanjay Singh) ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India) ಸಮಿತಿಯನ್ನು ಕ್ರೀಡಾ ಸಚಿವಾಲಯ (Sports Ministry) ಅಮಾನತುಗೊಳಿಸಿದೆ. ಡಬ್ಲ್ಯೂಎಫ್‌ಐ (WFI) ಸಂವಿಧಾನ ಮತ್ತು ನಿಯಮವನ್ನು ಉಲ್ಲಂಘಿಸಿ ನಿರ್ಧಾರವನ್ನು ಕೈಗೊಂಡಿದ್ದಕ್ಕೆ ಭಾನುವಾರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಪ್ರಕಟಿಸಿದೆ. ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟ ಉತ್ತರ ಪ್ರದೇಶದದ ಗೊಂಡಾದ ನಂದಿನಿ ನಗರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ರಾಷ್ಟ್ರೀಯ ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೇ ಮತ್ತು WFI ನ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೇ ಈ ಘೋಷಣೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ. ಯಾವುದೇ ಟೂರ್ನಿ ನಡೆಸುವ ಮೊದಲು ಕಾರ್ಯಕಾರಿ ಸಮಿತಿ ಸಭೆ ನಡೆಸಿ ತೀರ್ಮಾನ…
Author: AIN Author
ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆಯ ನಾಲ್ಕನೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ಎಂ.ಡಿ ನಜಿಮೋದ್ದಿನ್ ರವರ ಪರ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮತಯಾಚನೆ ನಡೆಸಿದರು. ಡಿಸೆಂಬರ್ 27ರಂದು ಉಪ ಚುನಾವಣೆ ನಡೆಯಲಿರುವ ಹುಮನಾಬಾದ್ ಪಟ್ಟಣದ ವಾರ್ಡ್ ಸಂಖ್ಯೆ ನಾಲ್ಕಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಅವರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವಾರ್ಡ್ ಸಂಖ್ಯೆ ನಾಲ್ಕರ ಅಂಗಡಿಗಳು, ಮನೆಗಳಿಗೆ ತೆರಳಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಜೆಡಿಎಸ್ ಪಕ್ಷ ಬಡವರ, ಶ್ರಮಿಕರ, ರೈತರ ಪಕ್ಷವಾಗಿದೆ. ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ನಿರಂತರವಾಗಿ ಬಡ ಜನರ ಪರವಾಗಿ ಕೆಲಸ ಮಾಡುವ ಪಕ್ಷ ಜೆಡಿಎಸ್ ಪಕ್ಷವಾಗಿದೆ. ಹುಮನಾಬಾದ್ ಪುರಸಭೆಯ ನಾಲ್ಕನೇ ವಾರ್ಡ್ ನ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ನೀಡುವ…
ಬೆಂಗಳೂರು: ಸಂಪು ಶುಚಿಗೊಳಿಸುವಾಗ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಯಿ ಗಾರ್ಮೆಂಟ್ಸ್ ನಲ್ಲಿ ನಡೆದಿದೆ. ಇನ್ನು ತಮಿಳುನಾಡು ಮೂಲದ ಶಶಿಕುಮಾರ್ (51)ಮತ್ತು ಆಂಧ್ರ ಮೂಲದ ಆನಂದ್ (41) ಮೃತರು ಎನ್ನಲಾಗಿದೆ. ಹೌದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಹಿ ಗಾರ್ಮೆಂಟ್ಸ್ ನಲ್ಲಿ, https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ನೆನ್ನೆ ಸಂಜೆ ಸಂಪ್ ಕ್ಲೀನ್ ಮಾಡಲು ಮುಂದಾಗಿದ್ದರು .ಅಲ್ಲದೆ ಸಂಪ್ ಒಳಗೆ ಇಬ್ರು ಇಳಿದಿದ್ದರು ಕಾರ್ಮಿಕರು ಸಂಪ್ ಕ್ಲೀನಿಂಗ್ ಮಾಡುವ ವೇಳೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದು ಕಾರ್ಮಿಕರು ಸಾವನ್ನಪ್ಪಿದ್ದಾರೆ..ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು ಇನ್ನು ಘಟನೆಗೆ ಪ್ರಮುಖ ಕಾರಣ ಏನೆಂಬುದು ಪೊಲೀಸ್ ತನಿಕೆಯಲ್ಲಿ ತಿಳಿಯಬೇಕಾಗಿದೆ.. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಧಾರವಾಡ: ವಿಕಲಚೇತನ ಮಗಳ ಫೋಟೋ ಹಿಡಿದು ಜನತಾ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಸಚಿವ ಸಂತೋಷ ಲಾಡ್ ತಮ್ಮ ಲಾಡ್ ಫೌಂಡೇಶನ್ ವತಿಯಿಂದ 50 ಸಾವಿರ ರೂಪಾಯಿ ಧನ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದಾರೆ. ಕವಿತಾ ದೇವರದವರ ಎಂಬ ಯುವತಿಗೆ ಕಳೆದ 2015 ರಲ್ಲಿ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ನಡೆದಿತ್ತು. ಆಗಿನಿಂದ ಆಕೆ ಹಾಸಿಗೆ ಹಿಡಿದಿದ್ದಲ್ಲದೇ ಯಾವುದೇ ಚಿಕಿತ್ಸೆ ಫಲಿಸದೇ ಕೈ ಕಾಲುಗಳು ಸಹ ಸೆಟೆದು ನಿಂತಿವೆ. ಇದಕ್ಕೆ ಎಷ್ಟೇ ಖರ್ಚು ಮಾಡಿದರೂ ಕವಿತಾಳ ಆರೋಗ್ಯ ಸುಧಾರಿಸಿಲ್ಲ. ಹೀಗಾಗಿ ಕವಿತಾ ತಾಯಿ ಪ್ರತಿಭಾ ಇವತ್ತು ಲಾಡ್ ಅವರನ್ನು ಭೇಟಿ ಮಾಡಲು ಬಂದಾಗ, ಮಗಳ ಫೋಟೋ ತೋರಿಸಿದ್ದಾಳೆ. ಇದನ್ನು ನೋಡಿ ಮರುಗಿದ ಲಾಡ್, ಆ ಮಹಿಳೆಗೆ ಸಹಾಯ ಮಾಡಿದ್ದಾರೆ. ಮೂಲತಃ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಪ್ರತಿಭಾ, ಕೊರೊನಾದಲ್ಲಿ ತನ್ನ ಪತಿಯ ಸಾವಿನ ನಂತರ ಮಗಳ ಚಿಕಿತ್ಸೆಗಾಗಿ ಓಡಾಡಲು ಆಗದೇ ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದಾಳೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಪ್ರತಿಭಾ ಅವರ ಸಣ್ಣ ಮಗ…
ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್‌ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ? ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ. ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ವಿವಾದ (Controversy) ಬಗ್ಗೆ ತಮ್ಮದೊಂದು ಅಭಿಪ್ರಾಯ ಹೇಳಲು ಹೋಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಸಾಯಿಪಲ್ಲವಿ ಈಗ ಸಿನಿಮಾ ರಂಗದಲ್ಲಿ ಹೆಸರೇ ಮರೆಯುವಂತೆ ಕಣ್ಮರೆಯಾಗುತ್ತಿರೋದು ವಿಷಾದ. ನೈಜ ಅಭಿನಯ. ಸಹಜ ಸೌಂದರ್ಯ. ಅದ್ಭುತ ನೃತ್ಯಕಲೆಗೆ ಹೆಸರಾದ ಪ್ರತಿಭಾನ್ವಿತೆಗೆ ಈಗ ಸಿನಿಮಾ ಅವಕಾಶಗಳೇ ಇಲ್ಲ. ಗಾರ್ಗಿಯೇ ಕೊನೆ. ಮತ್ಯಾವ ಸಿನಿಮಾ ತೆರೆಕಂಡಿಲ್ಲ. ಕಾರ್ತಿಕೇಯನ್ ಜೊತೆ ಅನೌನ್ಸ್ ಆದ ಪ್ರಾಜೆಕ್ಟ್ ಯಾವ ಹಂತದಲ್ಲಿದೆಯೋ ಅದರ ಸುಳಿವೂ ಇಲ್ಲ. ಪರಿಣಾಮ ಪ್ರತಿಭಾನ್ವಿತೆಯ ಕೈ ಖಾಲಿ ಖಾಲಿ. ಕಳೆದ…
ಬೆಂಗಳೂರು: ಹಿಜಾಬ್ ನಿಷೇಧ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದೆ.ಹಿಜಾಬ್ ಬಗ್ಗೆ ಸಿಎಂ ಹೇಳಿಕೆ ನೀಡುತ್ತಿದ್ದಂತೆ,ಬಿಜೆಪಿ ನಾಯಕರು ಕೊತ ಕೊತ ಕುದಿಯಲು ಪ್ರಾರಂಭಮಾಡಿದ್ದಾರೆ.ಸಿದ್ದರಾಮಯ್ಯ 2ನೇ ಟಿಪ್ಪುಸುಲ್ತಾನ್,ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲು ಹೊರಟ್ಟಿದ್ದಾರೆ ಎಂದು ಕೇಸರಿ ಕಲಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಹಿಜಾಬ್ ನಿಷೇಧವನ್ನ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.ಅವರ ಈ ಹೇಳಿಕೆಯೀಗ ರಾಜಕೀಯ ವಲಯದೊಳಗೆ ಸಂಚಲನ ಮೂಡಿಸಿದೆ. ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ದ ಅಕ್ರೋಶ ಹೊರ ಹಾಕುವ ಮೂಲಕ ಎಚ್ಚರಿಕೆ ಕೊಟ್ಟಿದೆ.
ಚಿಕಾಗೋ: 10 ತಿಂಗಳ ಹೆಣ್ಣು ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನ ಬೇರ್ಪಡಿಸಿ ತೆಗೆಯುವಲ್ಲಿ ಚಿಕಾಗೋ ವೈದ್ಯರು ಯಶಸ್ವಿಯಾಗಿದ್ದಾರೆ. ಪುಟ್ಟ ಮಗು ಡೊಮಿನಿಕ್ಯೂ ಹುಟ್ಟಿದಾಗಿನಿಂದಲೂ ಸಂಪೂರ್ಣವಾಗಿ ಬೆಳವಣಿಯಾಗದ ಕಾರಣ ಅವಳಿ ಮಗುವಿನ ಕಾಲುಗಳನ್ನ ಬೆನ್ನಿನಲ್ಲಿ ಹೊತ್ತುಕೊಂಡಿತ್ತು. ಈ ರೀತಿ ಒಂದು ಮಗುವಿನ ದೇಹದಲ್ಲಿ ಕೂಡಿಕೊಂಡ ಅವಳಿ ಮಗುವನ್ನು ವೈದ್ಯರು ಪ್ಯರಾಸಿಟಿಕ್ ಟ್ವಿನ್(ಪರಾವಲಂಬಿ ಅವಳಿ ಮಗು) ಎಂದು ಕರೆದಿದ್ದು, ಈ ರೀತಿಯ ಪ್ರಕರಣಗಳು ತುಂಬಾ ವಿರಳ ಎಂದಿದ್ದಾರೆ. ಅದರಲ್ಲೂ ಬೆನ್ನು ಮೂಳೆಯಲ್ಲಿ ಕೂಡಿಕೊಂಡ ಅವಳಿ ಮಕ್ಕಳ ಪ್ರಕರಣ ಅತ್ಯಂತ ವಿರಳ. ಇಂತಹ ಪ್ರಕರಣಗಳು ವರದಿಯಾಗಿರುವುದು 30ಕ್ಕಿಂತ ಕಡಿಮೆ ಎಂದಿದ್ದಾರೆ. 10 ತಿಂಗಳ ಮಗು ಡೊಮಿನಿಕ್ಯೂವನ್ನು ಶಸ್ತ್ರಚಿಕಿತ್ಸೆಗಾಗಿ ಫೆಬ್ರವರಿಯಲ್ಲಿ ವೆಸ್ಟ್ ಆಫ್ರಿಕಾದ ಐವರಿ ಕೋಸ್ಟ್‍ನಿಂದ 5 ಸಾವಿರ ಮೈಲಿ ದೂರದ ಚಿಕಾಗೋದ ಅಡ್ವೋಕೇಟ್ ಚಿಲ್ಡ್ರೆನ್ಸ್ ಹಾಸ್ಪಿಟಲ್‍ಗೆ ಕರೆತರಲಾಗಿತ್ತು. ಡೊಮಿನಿಕ್ಯೂ ಪೋಷಕರು ಮಗುವಿನ ಶಸ್ತ್ರಚಿಕಿತ್ಸೆಗಾಗಿ ಚಿಕಾಗೋದಲ್ಲಿ ಉಳಿದುಕೊಳ್ಳಲು ಸ್ವಾಬ್ ಎಂಬವರು ಸಹಾಯ ಮಾಡಿದ್ರು. https://ainlivenews.com/can-diabetics-eat-dates-here-is-useful-information/ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡ ಅವಳಿ ಮಗುವಿನ ಅಂಗಾಗವನ್ನು ತೆಗೆಯಲು ಶಸ್ತ್ರಚಿಕಿತ್ಸೆ…
ಮುಂಬೈ: ಅಪ್ರಾಪ್ತ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿ ʻಹಾಟ್ʼಎಂದು ಕರೆದಿದ್ದಕ್ಕಾಗಿ 50 ವರ್ಷದ ವೃದ್ಧನಿಗೆ ಮುಂಬೈ ವಿಶೇಷ ನ್ಯಾಯಾಲಯವು (Mumbai Speical Court) 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕೃತ್ಯವು ಆರೋಪಿಯು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್ ಗಮನಿಸಿದೆ. ಈ ಹಿನ್ನೆಲೆಯಲ್ಲಿ 2016ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 3 ವರ್ಷ ಜೈಲು (Jail) ಶಿಕ್ಷೆ ವಿಧಿಸಿದೆ. ವಿಶೇಷ ಪೋಕ್ಸೊ ನ್ಯಾಯಾಲಯದ (POCSO Court) ನ್ಯಾಯಾಧೀಶರಾದ ಎಸ್.ಸಿ ಜಾಧವ್ ಅವರು ಡಿಸೆಂಬರ್ 14 ರಂದು ಆರೋಪಿಗೆ ಭಾರತೀಯ ದಂಡ ಸಂಹಿತೆಗೆ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಿಂಬಾಲಿಸುವುದು ಮತ್ತು ಕಿರುಕುಳ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ. https://ainlivenews.com/apple-watch-series-9-watch-ultra-2-sales-halt-in-us-why/ ಈ ಪ್ರಕರಣವು 2016ರ ಮೇ 24ರಂದು ನಡೆದಿತ್ತು. ಆಗ ಹುಡುಗಿಗೆ 13 ವರ್ಷ ವಯಸ್ಸಾಗಿತ್ತು. ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಯ ಒಟ್ಟಾರೆ ಸಾಕ್ಷ್ಯವನ್ನು ಪರಿಶೀಲಿಸಿಸಲಾಯಿತು. ಈ…
ಮೈಸೂರು: ”ಇಂದು ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದ್ದು, ಎಲ್ಲ ವಯೋಮಾನದವರನ್ನೂ ಬಾಧಿಸುತ್ತಿದೆ. ಹೀಗಾಗಿ, ಎಲ್ಲ ಜಿಲ್ಲೆಗಳಲ್ಲೂ ಕ್ಯಾನ್ಸರ್ ಆಸ್ಪತ್ರೆ ಆರಂಭಿಸುವ ಅಗತ್ಯವಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ” ರಾಜಧಾನಿ ಬೆಂಗಳೂರು ನಂತರ ಮೈಸೂರು ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. https://ainlivenews.com/cet-exam-on-april-20-21-application-submission-starts-from-january-10/ ಬೆಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಇದೆ. ಮೈಸೂರು ಭಾಗದಿಂದಲೂ ಅಲ್ಲಿಗೆ ಸಾಕಷ್ಟು ರೋಗಿಗಳು ಹೋಗುತ್ತಾರೆ. ಅಲ್ಲಿನ ಒತ್ತಡ ಕಡಿಮೆ ಮಾಡಬೇಕಾದರೆ ಜಿಲ್ಲಾಕೇಂದ್ರಗಳಲ್ಲಿಕ್ಯಾನ್ಸರ್ ಆಸ್ಪತ್ರೆ ಪ್ರಾರಂಭ ಮಾಡಬೇಕು. ದುಡಿಯುವ ವರ್ಗಗಳಿಗೆ ಭಾರವಾಗದೆ ಉಚಿತವಾಗಿ ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಸರಕಾರದ ಕಾಳಜಿ,” ಎಂದು ತಿಳಿಸಿದರು.
ತಮಿಳಿನ ಜನಪ್ರಿಯ ಹಾಸ್ಯನಟ (Tamil Actor) ಬೋಂಡಾ ಮಣಿ (Bonda Mani) ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಡಿ.23ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ನಿಧನ ಕುಟುಂಬಕ್ಕೆ ಮತ್ತು ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 60 ವರ್ಷದ ನಟ ಬೋಂಡಾ ಮಣಿ ಅವರು ಪೊಜಿಚಲೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮೂರ್ಛೆ ತಪ್ಪಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸುವ ಮುನ್ನವೇ ಬೋಂಡಾ ಮಣಿ ವಿಧಿವಶರಾಗಿದ್ದರು. ನಟ ಧನುಷ್ (Dhanush) ಮತ್ತು ವಿಜಯ್ ಸೇತುಪತಿ (Vijay Sethupathi) ಅವರು ಬೋಂಡಾ ಮಣಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಮಾಡಿದ್ದರು. ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದು, 270ಕ್ಕೂ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ತಮಿಳು ಬೋಂಡಾ ಮಣಿ ಅವರ ನಿಧನಕ್ಕೆ ಫ್ಯಾನ್ಸ್ ಸೇರಿದಂತೆ ಸಿನಿಮಾ ತಾರೆಯರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.