ಚಾಮರಾಜನಗರ: ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ರೈತ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಚಾಲನೆ ನೀಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಸಿರಿಧಾನ್ಯಗಳಿಂದ ತಯಾರಿಸಿದ್ದ ತಿನಿಸುಗಳು ಹಾಗೂ ವಿವಿಧ ಇಲಾಖೆಗಳಿಂದ ತಯಾರಿಸಲಾಗಿದ್ದ ಸಿರಿಧಾನ್ಯಗಳ ಪದಾರ್ಥಗಳ ಪ್ರದರ್ಶನಗೊಂಡು ಮಾರಾಟವಾದವು. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಇದೇ ಸಂದರ್ಭದಲ್ಲಿ ಎಲ್ಲಾ ಮಳಿಗೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ರೈತರನ್ನು ಪರಿಚಯ ಮಾಡಿಕೊಂಡು ರೈತರು ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ತಿನಿಸುಗಳ ರುಚಿ ಸವಿದು ರೈತರಿಗೆ ಶುಭಕೋರಿದರು.
Author: AIN Author
ಕಾರವಾರ: ಸಿದ್ದರಾಮಯ್ಯನವರಿಗೆ (Siddaramaiah) ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ. ಹಿಜಬ್‌ನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಸಿದ್ದರಾಮಯ್ಯನ ಸರ್ಕಾರ ಹುಚ್ಚು ಮಹಮ್ಮದ್‌ನ ಸರ್ಕಾರ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegade) ಕಿಡಿಕಾರಿದ್ದಾರೆ. ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ. ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪು. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೇ ಕಾಂಗ್ರೆಸ್‌ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತಾರೆ ಎಂಬುದನ್ನು ಯೋಚನೆ ಮಾಡಬೇಕು ಎಂದು ತಿಳಿಸಿದ್ದಾರೆ. ಹಿಜಬ್ ವಿಷಯದಲ್ಲಿ ಸಿದ್ದರಾಮಯ್ಯ ಅವರ, ಯಾರು ಬೇಕಾದ್ರು ಏನು ಬೇಕಾದ್ರು ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ಮುಂದಿನ ದಿನ ಆತಂಕಕಾರಿ…
ಬಿಗ್ ಬಾಸ್ ಮನೆ ಇದೀಗ 77 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಅಸ್ಥಿಕ್ ಅವಿನಾಶ್ ಶೆಟ್ಟಿ (Avinash Shetty) ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆ ಆಟ 50 ದಿನ ಪೂರೈಸಿದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಂಗಳೂರಿನ ಅವಿನಾಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದರು. ಮನೆಗೆ ಎಂಟ್ರಿ ಕೊಟ್ಟಾಗಲೇ ಆನೆ ವಿನಯ್‌ಗೆ ಮಾವುತನಾಗಿ ಪಳಗಿಸುತ್ತೇನೆ ಎಂದು ಅವಿನಾಶ್ ಡೈಲಾಗ್ ಹೊಡೆದಿದ್ದರು. ಇದೀಗ ಆನೆ ವಿನಯ್‌ನ ಪಳಗಿಸೋದ್ರಲ್ಲಿ ಮತ್ತು ಬಿಗ್ ಬಾಸ್ ಮನೆ ಆಟ ಆಡೋದ್ರಲ್ಲಿ ಅವಿನಾಶ್ ಸೋತಿದ್ದಾರೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದರು. ಇದೀಗ ಈ ವಾರ ಅವಿನಾಶ್‌ಗೆ ದೊಡ್ಮನೆ ಆಟ ಅಂತ್ಯವಾಗಿದೆ. ಡಬಲ್ ಎಲಿಮಿನೇಷನ್‌ನ (Elimination) ಮೊದಲ ಸ್ಪರ್ಧಿ ಅವಿನಾಶ್ ಎಂದು ತಿಳಿದು ಬಂದಿದ್ದು, ಮತ್ತೊಬ್ಬ ಸ್ಪರ್ಧಿ ಯಾರು ರಿವೀಲ್ ಆಗಿಲ್ಲ. ಬಿಗ್ ಬಾಸ್…
ಬೆಂಗಳೂರು: ಹಿಜಬ್ (Hijab) ವಿಚಾರದಲ್ಲಿ ಕಾನೂನು ಪರಿಶೀಲಿಸಿಯೇ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಈಗ ಗೊತ್ತಾಗಿದೆ. ಪ್ರತಿಯೊಬ್ಬ ಪ್ರಜೆಗೂ ತಾನು ಏನು ಸೇವಿಸಬೇಕು ತಾನು ಏನು ಧರಿಸಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಈ ಹಕ್ಕು ಸಂವಿಧಾನದಲ್ಲೇ (Constitution) ಇದೆ. ಇದು ಅವರ ಮೂಲಭೂತ ಹಕ್ಕು. ಹಾಗಾಗಿ ಮುಖ್ಯಮಂತ್ರಿಗಳು ಆ ಅರ್ಥದಲ್ಲಿ ಹೇಳಿದ್ದಾರೆ ಎಂದರು. ಬಿಜೆಪಿಯವರು ಅದನ್ನೇ ಮೂಲವಾಗಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಕಾನೂನನ್ನು ಪರಿಶೀಲನೆ ಮಾಡಿಯೇ ಮಾಡುತ್ತೇವೆ. ಕಾನೂನನ್ನ ಬಿಟ್ಟು ಮಾಡುವುದಕ್ಕೆ ಹೋಗುವುದಿಲ್ಲ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು. ನಾವು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದೇವೆ. ಎಲ್ಲಾ ಕಡೆ ಶಾಂತಿ ಇರಬೇಕು ಅಂತ ಹೇಳಿದ್ದೇವೆ ಅದನ್ನು ಮಾಡುತ್ತೇವೆ. ಸಮಾಜದಲ್ಲಿ ಅನೇಕ…
ಧಾರವಾಡ: ಧಾರವಾಡ ಜಿಲ್ಲಾಡಳಿತದಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವರಿಗೆ ಸುಮಾರು 177 ಅಹವಾಲುಗಳನ್ನು ಸಲ್ಲಿಸಿದರು. ಹೆಸ್ಕಾಂ 07, ಉದ್ಯೋಗ ಇಲಾಖೆ 03, ಸಹಕಾರಿ ಇಲಾಖೆ 03, ಸಾರಿಗೆ ಇಲಾಖೆ 03, ವಸತಿ ಇಲಾಖೆ 07, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 10, ಕಾರ್ಮಿಕ ಇಲಾಖೆ 05, ಶಾಲಾ ಶಿಕ್ಷಣ ಇಲಾಖೆ 10, ಲೋಕೋಪಯೋಗಿ ಇಲಾಖೆ 02, ಸಮಾಜ ಕಲ್ಯಾಣ ಇಲಾಖೆ 03, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 03, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ 04, ಆರೋಗ್ಯ ಇಲಾಖೆ 03, ಕ್ರೀಡಾ ಇಲಾಖೆ 03, ಅಲ್ಪಸಂಖ್ಯಾತರ ಇಲಾಖೆ 01, ಗೃಹ ಇಲಾಖೆ 03, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ 02, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 03, ಮಹಾನಗರಪಾಲಿಕೆ 44, ನೋಂದಣಿ ಇಲಾಖೆ 01, ಕಂದಾಯ…
ಬಾಗಲಕೋಟೆ: “ಜೆಡಿಎಸ್ ನಾಯಕರು ಪ್ರಧಾನ ಮಂತ್ರಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಭೇಟಿ ಮಾಡಿ ಬಂದಿದ್ದಾರೆ. ವಿಜಯೇಂದ್ರ ಎಲ್ಲ ಹಿರಿಯರನ್ನ ವಿಶ್ವಾಸ ತಗೆದುಕೊಂಡು ಯಾವ ಗೊಂದಲವಿಲ್ಲದೇ ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಆಶಿರ್ವಾದ ಸಿಕ್ಕಿದೆ” ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. https://ainlivenews.com/cet-exam-on-april-20-21-application-submission-starts-from-january-10/ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡುತ್ತಾ, “ಕುಮಾರಸ್ವಾಮಿ ಅವರು, ಮೋದಿಯವರನ್ನು ಪ್ರಧಾನಿ ಮಾಡಲು, ರಾಜ್ಯದ ತುಂಬ ಓಡಾಡಿ ಕೆಲಸ ಮಾಡ್ತೇವೆ ಅಂತಾ ಹೇಳಿದ್ದಾರೆ. ಇದರ ಜೊತೆಗೆ ನನ್ನ ಮಗ ಹಾಗೂ ನಾನು ಚುನಾವಣೆಯಲ್ಲಿ ಸ್ಪರ್ದಿಸಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆ ಸಂತೋಷ ತಂದಿದ್ದು, ರಾಷ್ಟ್ರೀಯ ನಾಯಕರ ಭೇಟಿ ನಮಗೆ ಖುಷಿಯಾಗಿದೆ” ಎಂದರು.
ವಿಜಯಪುರ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮಮಂದಿರ ಟ್ರಸ್ಟ್ ಆಹ್ವಾನ ಮಾಡಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಿರುದ್ಧ ಯತ್ನಾಳ್, “ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ ದೇಶದ ಬಗ್ಗೆ ಕಳಕಳಿ ಇದ್ದರೆ ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ. https://ainlivenews.com/cet-exam-on-april-20-21-application-submission-starts-from-january-10/ ಸೋನಿಯಾ ರಾಮ ಮಂದಿರಕ್ಕೆ ಬರೋದು ಓಟಿಗಾಗಿ ಅನ್ನೋದನ್ನ ಮರೀಬೇಡಿ. ಅಕಸ್ಮಾತ್ ಅವರಿಗೆ ಸಾಬರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ’’ ಎಂದು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಮನದ ಮಾತುಗಳನ್ನು ಹೊರಹಾಕಿದರು.
ಕಲಘಟಗಿ: ಕೆಲ ದಿನಗಳಿಂದ ಕಲಘಟಗಿ ತಾಲೂಕಿನ ಬಿ ಶಿಗ್ಗಿಗಟ್ಟಿ ಗ್ರಾಮದ ಗ್ರಾಮಸ್ಥರಿಗೆ 63 KVA TC ಪದೇ ಪದೇ ಸುಟ್ಟು ತುಂಬಾ ತೊಂದರೆ ಉಂಟಾಗುತಿತ್ತು. ಆದ ಕಾರಣ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿಯ ಸದಸ್ಯರುಗಳು ಎಲ್ಲರೂ ಮಾನ್ಯ ಶ್ರೀ ಸಂತೋಷ ಲಾಡ್ ಸಾಹೇಬರಿಗೆ ಮನವಿ ಮಾಡಿದ್ದರು. ಕೂಡಲೇ ಸಾಹೇಬರು ಸ್ಪಂದಿಸಿ ಅಧಿಕಾರಿಗಳಿಗೆ ಹೇಳಿ 100 KVA TC ಅನ್ನು ಗ್ರಾಮಕ್ಕೆ ಕೊಡಿಸುವ ಮುಕಾಂತರ ಗ್ರಾಮದ ವಿದ್ಯುತ್ ಸಮಸ್ಯೆ ಸರಿಪಡಿಸಿದರು. ಮಾನ್ಯರಿಗೆ ಹಾಗೂ ಅವರ ಆಪ್ತರಾದ ಸೋಮಶೇಖರ್ ಅವರಿಗೆ ಗ್ರಾಮಸ್ಥರಿಂದ ಧನ್ಯವಾದಗಳು ಅರ್ಪಿಸಿದ್ದರು. ವರದಿ, ಮಾರುತಿ ಲಮಾಣಿ
ಮೈಸೂರು: ಲೋಕಸಭೆಯ ಒಳಗಡೆ ಹೊಗೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳು ಕೇಳಿದ್ದಕ್ಕೆ ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ ಎಂದು ಮೂರು ಮೂರು ಬಾರಿ ಹೇಳಿ, ಆ ವಿಚಾರದಲ್ಲಿ ಯಾವುದೇ ವಿವರಣೆ ಕೊಡುವುದಿಲ್ಲ ಎಂದು ಉತ್ತರಿಸಿದರು. ಪ್ರತಾಪ್ ಸಿಂಹ ದೇಶದ್ರೋಹಿನಾ ದೇಶಪ್ರೇಮಿನಾ ಅಂತಾ ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ. ನನ್ನ ಓದುಗರು, ಮೈಸೂರಿನ ಕೊಡಗು ಜನ ತೀರ್ಪು ನೀಡುತ್ತಾರೆ. ಮುಂಬರುವ ಚುನಾವಣೆಯಲ್ಲಿ ನಾನು ದೇಶಪ್ರೇಮಿನಾ, ದೇಶದ್ರೋಹಿನಾ ಎಂದು ಜನ ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ನಾನು ಇಷ್ಟೇ ಹೇಳುತ್ತೇನೆ. ಈ ಬಗ್ಗೆ ಬೇರೆ ಏನೂ ಕೇಳಬೇಡಿ ಎಂದರು. ಸಿದ್ದರಾಮಯ್ಯ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಕೇಳಿದ ಪ್ರಶ್ನೆಗೆ, https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿಯವರು ಸರ್ಕಾರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್‌ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ…
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ಜೊತೆ ಮಲ್ಲೇಶ್ವರಂ ಐಪಿಪಿ ಸಭಾಂಗಣದಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದೆಂದು ಹೇಳಿದರು. ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1400 ಕಿ.ಮೀ ನಷ್ಟಿದ್ದು, ಸದರಿ ರಸ್ತೆಗಳಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಸರ್ವೇಯ ನಂತರ ಶೇ.…