ಬೆಂಗಳೂರು:- ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಬಿಗ್ ಅಪ್ಡೇಟ್ ಕೊಟ್ಟಿದೆ. MG ರೋಡ್‌ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್‌ವರೆಗಿನ ಸುರಂಗ ಮಾರ್ಗದಲ್ಲಿ ನಿನ್ನೆ ಪರಿಶೀಲನೆ ನಡೆದಿದೆ. ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಸುರಂಗ ಮಾರ್ಗ ಶೀಘ್ರದಲ್ಲೇ ಆರಂಭವಾಗುವ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. https://ainlivenews.com/nirani-sugars-company-fired-45-employees/ ಹೀಗಾಗಿ ಬೆಂಗಳೂರು ಜನರಿಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಂತಾಗಿದೆ. ಬಹು ನಿರೀಕ್ಷೆಯ ನಮ್ಮ ಮೆಟ್ರೋದ ಪಿಂಕ್ ಲೈನ್ ಓಪನ್ ಆಗಲಿದೆ. ಎಂಜಿ ರೋಡ್‌ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ವರೆಗೆ ಸುರಂಗ ಮಾರ್ಗದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇಂದು ಟಿಬಿಎಂ ಮಷಿನ್ ಸುರಂಗ ಕೊರೆದು ಹೊರ ಬಂದಿದೆ. ಅಂಡರ್ ಗ್ರೌಂಡ್ ಮೆಟ್ರೋ ಕಾಮಗಾರಿಗಾಗಿ 9 ಟಿಬಿಎಂ ಮೆಷಿನ್ಗಳನ್ನು ಭೂಮಿಗಿಳಿಸಲಾಗಿತ್ತು. ಅದರಲ್ಲಿ ಈಗಾಗಲೇ 8 ಟಿಬಿಎಂ ಮೆಷಿನ್ ಸುರಂಗ ಕೊರೆದು ಹೊರಗೆ ಬಂದಿವೆ. ಉಳಿದಿರುವ ಒಂದು ಟಿಬಿಎಂ ಮೆಷಿನ್ ಹೊರ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗವನ್ನು ಹೊಂದಿರುವ ಪಿಂಕ್ ಲೈನ್ ಯೋಜನೆ ಇದೆ.…
Author: AIN Author
ಬೆಂಗಳೂರು:- ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿರುವ ಮನೆಯಲ್ಲಿ ಮಹಿಳೆಯೊಬ್ಬರು ತನ್ನ 5 ವರ್ಷದ ಮಗಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://ainlivenews.com/good-news-for-hitman-fans-hardik-out-rohit-sharma-back-as-mi-captain/ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಮಹಿಳೆ, ಮಗಳು ರೋಷಿಣಿಯನ್ನು ಕೊಲೆ ಮಾಡಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಡೆತ್ನೋಟ್ ಕೂಡ ಬರೆದಿಟ್ಟಿದ್ದು, ಪತಿಯ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ. ಶ್ರುತಿಯ ಪತಿಯನ್ನು ವಶಕ್ಕೆ ಪಡೆದು ಬಾಗಲಗುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು/ನವದೆಹಲಿ:- ಫಾಸ್ಟ್‌ಟ್ಯಾಗ್‌ನ ಹೊಸ ನಿಯಮ ಹೀಗಾಗಲೇ ಜಾರಿ ಆಗಿದೆ. ಕಡಿಮೆ ಬ್ಯಾಲೆನ್ಸ್, ಪಾವತಿ ವಿಳಂಬ ಅಥವಾ ಫಾಸ್ಟ್‌ಟ್ಯಾಗ್ ಅನ್ನು ಕಪ್ಪುಪಟ್ಟಿ ಅಥವಾ ಬ್ಲ್ಯಾಕ್ ಲಿಸ್ಟ್ಗೆ ಸೇರಿಸಿದರೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ವಾಹನವು ಟೋಲ್ ದಾಟುವ ಮೊದಲು 60 ನಿಮಿಷಗಳಿಗಿಂತ ಹೆಚ್ಚು ಕಾಲ ಮತ್ತು ಟೋಲ್ ದಾಟಿದ ನಂತರ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ವಹಿವಾಟನ್ನು ತಿರಸ್ಕರಿಸಲಾಗುತ್ತದೆ. ಇದು ದೋಷ ಕೋಡ್ 176 ಅಡಿಯಲ್ಲಿ ಬರಲಿದೆ. https://ainlivenews.com/nirani-sugars-company-fired-45-employees/ ಹೌದು, ಫೆಬ್ರವರಿ 17 ರಿಂದ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಫಾಸ್ಟ್‌ಟ್ಯಾಗ್ ಬ್ಯಾಲನ್ಸ್ ವಿಚಾರದಲ್ಲಿ ಹಲವು ನಿಯಮಗಳನ್ನು ಬದಲಾಯಿಸಿದೆ. ಫಾಸ್ಟ್‌ಟ್ಯಾಗ್ ಟ್ರಾಂಜಕ್ಷನ್ನಲ್ಲಿ ಯಾವುದೇ ರೀತಿಯ ರೀತಿಯ ಮೋಸದ ಚಟುವಟಿಕೆಗಳು ಆಗದಂತೆ ತಡೆಯಲು ಈ ಒಂದು ಬಲಾವಣೆಗಳನ್ನು ಮಾಡಲಾಗಿದೆ. 60 ನಿಮಿಷದ ಟಾರ್ಗೆಟ್: ನೀವು ಟೋಲ್ ಪ್ಲಾಜಾ ತಲುಪುವ…
ಮನುಷ್ಯರಲ್ಲಿ ಹಲವು ಗುಣಗಳು ಇರುತ್ತವೆ. ಪ್ರತಿಯೊಬ್ಬರಿಗೂ ಯಾವುದೋ ಒಂದು ಅಭ್ಯಾಸ/ ದುರಭ್ಯಾಸ ಇರುತ್ತದೆ. ಕೆಲವರು ಉಗುರು ಕಚ್ಚುತ್ತಾ ಇರುತ್ತಾರೆ, ಇಲ್ಲಾಂದ್ರೆ ಯಾರದ್ದೋ ಕಿವಿ ಕಚ್ಚುತ್ತಾ ಇರುತ್ತಾರೆ, ಮತ್ತೆ ಕೆಲವರು ಬೆಳರುಗಳಿಂದ ನಟಿಕೆ ಮುರಿಯುತ್ತಿರುತ್ತಾರೆ. ಇಂತಹವುಗಳಲ್ಲಿ ಒಂದು.. ಕಾಲು ಅಲ್ಲಾಡಿಸುವುದು! ತುಂಬಾ ಜನರಿಗೆ ಇಂತಹ ಅಭ್ಯಾಸ ಇರುತ್ತದೆ. ವಿಶೇಷವಾಗಿ ಕುರ್ಚಿಯಲ್ಲಿ ಕುಳಿತಿರುವ ಸಮಯದಲ್ಲಿ ಹೆಚ್ಚಾಗಿ ಮಾಡುತ್ತಾ ಇರುತ್ತಾರೆ. ಕುಳಿತಾಗಲಷ್ಟೇ ಅಲ್ಲ, ಮಲಗಿರುವ ಸಮಯದಲ್ಲೂ ಕಾಲುಗಳನ್ನು ಆಡಿಸುವ ಚಟ ಅನೇಕರಿಗೆ ಇರುತ್ತದೆ. https://ainlivenews.com/nirani-sugars-company-fired-45-employees/ ಹಾಗೆಲ್ಲಾ ಕಾಲು ಅಲ್ಲಾಡಿಸಬೇಡಿ ಎಂದು ಎಚ್ಚರಿಸುವ ದೊಡ್ಡವರೂ ಸೈಲೆಂಟಾಗಿ ಕಾಲು ತೂಗುತ್ತಾ ಇರುತ್ತಾರೆ! ಈ ಅಭ್ಯಾಸವೇ ಅಂತಹುದು. ಕೆಲವರು ಕುಳಿತಾಗ, ಮಲಗಿದಾಗ ತಮ್ಮ ಕಾಲುಗಳನ್ನು ತೂಗಾಡಿಸುತ್ತಿರುವುದನ್ನು ಗಮನಿಸಿರಬಹುದು. ಕೆಲವರು ತಮ್ಮ ಪಾದಗಳನ್ನು ನಿಧಾನವಾಗಿ ಅಲುಗಾಡಿಸುತ್ತಾರೆ. ಇಂದಿಗೂ ಕೆಲವರು ತಮ್ಮ ಪಾದಗಳನ್ನು ಜೋರಾಗಿ ಅಲುಗಾಡಿಸುತ್ತಾರೆ. ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂತೋಷದಲ್ಲಿ ಕೈ ಬೀಸುತ್ತಿರುವಂತೆ ಕಾಣುತ್ತದೆ. ಅಸಲಿಗೆ ಇದರ ಹಿಂದೆ ಬಲವಾದ ಕಾರಣಗಳಿವೆ. ಈ ರೋಗಲಕ್ಷಣವು ಯುವಜನರಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇದಕ್ಕೆ ಮುಖ್ಯ…
ಐಪಿಎಲ್ 2024 ರ ಆರಂಭದ ಮೊದಲು, ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿತ್ತು. ಈ ನಿರ್ಧಾರವು ಆಗ ಭಾರೀ ಟೀಕೆಗೆ ಗುರಿಯಾಗಿತ್ತು. https://ainlivenews.com/kolar-e-khata-campaign-in-the-municipal-council-kottur-manjunath/ ಏಕೆಂದರೆ ಐದು ಬಾರಿ ಚಾಂಪಿಯನ್ ಪಟ್ಟವನ್ನು ಗೆದ್ದ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ, ಮಾರ್ಚ್ 22 ರಿಂದ ಆರಂಭವಾಗಲಿರುವ ಹೊಸ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬದಲಿಗೆ ರೋಹಿತ್ ಶರ್ಮಾ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ಎದುರಾಗಿದ್ದು, CSK ವಿರುದ್ಧದ ಪಂದ್ಯಕ್ಕೆ ನಿಷೇಧ ಮಾಡಲಾಗಿದೆ. ಮಾರ್ಚ್ 22 ರಿಂದ ಶುರುವಾಗಲಿರುವ IPL 2025ರ ಟೂರ್ನಿಯ ಮೊದಲ ಪಂದ್ಯದಲ್ಲಿ KKR ಮತ್ತು RCB ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮಾರ್ಚ್ 23 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿದೆ. ಆದರೆ…
ಬೆಂಗಳೂರು:- ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತದೆ. https://ainlivenews.com/kolar-e-khata-campaign-in-the-municipal-council-kottur-manjunath/ ಆದರೆ ಮೂರ್ನಾಲ್ಕು ತಿಂಗಳಿಂದ ಗೃಹಲಕ್ಷ್ಮೀ’ ಹಣದ ಬರದ ಹಿನ್ನೆಲೆ ಮಹಿಳೆಯರು ಕಂಗಾಲಾಗಿದ್ದಾರೆ. ಇದೀಗ ಮತ್ತೆ ಇಡೀ ರಾಜ್ಯದ ಮಹಿಳೆಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಆಗಿದೆ. 2,000 ರೂಪಾಯಿ ಹಣ ಬಾರದೆ ಇರೋ ಕಾರಣ ನಾರಿಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. 3 ತಿಂಗಳಿಂದ ಬ್ಯಾಂಕ್ಗೆ ಅಲೆದರೂ ಹಣ ಮಾತ್ರ ಜಮೆಯಾಗಿಲ್ಲ. ಹಣಬಾರದಕ್ಕೆ ಹಲವು ಜಿಲ್ಲೆಯ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಮನೆ ಬಾಡಿಗೆ, ಆಸ್ಪತ್ರೆ, ಇತರೆ ಖರ್ಚಿಗಾಗಿ ಬಳಕೆಯಾಗ್ತಿದ್ದ ಹಣ ಈಗ ಬಾರದಿದ್ದಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಣ ಕೊಡ್ತಿದ್ದೇವೆ ಅಂತ ಸರ್ಕಾರದ ಸಬೂಬು,…
ಬೆಂಗಳೂರು:- ರಾಜಧಾನಿ ಜನರು ಇನ್ಮುಂದೆ ಸ್ವಲ್ಪ ಎಚ್ಚರದಿಂದ ಇರಬೇಕು. ಸುಖಾ ಸುಮ್ಮನೇ ನೀರು ವ್ಯರ್ಥ ಮಾಡುವ ಜನರಿಗೆ ಬಿಸಿ ಮುಟ್ಟಿಸಲು ಜಲಮಂಡಳಿ ಮುಂದಾಗಿದೆ. https://ainlivenews.com/gas-cylinder-blast-burned-tea-shop/ ಇನ್ಮುಂದೆ ಬೆಂಗಳೂರು ನಗರದಲ್ಲಿ ನೀರು ವೇಸ್ಟ್ ಮಾಡಿದ್ರೆ ಸ್ಥಳದಲ್ಲೇ ದಂಡ ಬೀಳುತ್ತೆ. ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರನ್ನು ವ್ಯರ್ಥ ಮಾಡೋರಿಗೆ ದಂಡ ಹಾಕಲಾಗುವುದು ಎಂದು ಜಲಮಂಡಳಿ ನಗರದ ಜನತೆಗೆ ಎಚ್ಚರಿಕೆ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಗೆ ಮುನ್ನವೇ ಜಲಮಂಡಳಿ ಎಚ್ಚೆತ್ತುಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ನೀರು ವ್ಯರ್ಥ ಮಾಡಿದ್ರೆ 5,000 ರೂ. ದಂಡ ವಿಧಿಸೋದಕ್ಕೆ ಮುಂದಾಗಿದೆ. ಕಳೆದ ಬಾರಿ ಉಂಟಾದ ನೀರಿನ ಅಭಾವ, ಈ ಬಾರಿ ಆಗದಂತೆ ಜಲಮಂಡಳಿ ನೀರು ಉಳಿತಾಯಕ್ಕೆ ಮುಂದಾಗಿದೆ. ಈ ಬಾರಿಯೂ ನೀರು ಪೋಲು ಮಾಡಿದ್ರೆ ದಂಡಾಸ್ತ್ರಕ್ಕೆ ಮುಂದಾಗಿದೆ. ಕಾರು, ಬೈಕ್, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ವ್ಯರ್ಥ ಮಾಡಿದ್ರೆ ಆಯಾ ವಲಯದ ಜಲಮಂಡಳಿ ಇಂಜಿನಿಯರ್ಸ್ 5 ಸಾವಿರ ರೂ. ದಂಡ ವಿಧಿಸಲಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು…
ಐಪಿಎಲ್ 2025 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ರಜತ್ ಪಾಟಿದಾರ್ ಅವರನ್ನು ನೇಮಿಸಲಾಗಿದೆ, ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. https://ainlivenews.com/nirani-sugars-company-fired-45-employees/ 2021 ರಲ್ಲಿ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ 31 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಈಗ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆರ್ಸಿಬಿ ಹಿಂದಿನ ನಾಯಕ ರಜತ್ ಅವರನ್ನು ಕೊಂಡಾಡಿದ್ದಾರೆ. ಅಧಿಕೃತವಾಗಿ ನಾನು ಜವಾಬ್ದಾರಿಯನ್ನು ನಿಮಗೆ ಹಸ್ತಾಂತರಿಸುತ್ತಿದ್ದೇನೆ. ಆರ್ಸಿಬಿಗೆ ನಾಯಕನಾಗಿರುವುದು ನಿಜಕ್ಕೂ ವಿಶೇಷ. ಕ್ಯಾಪ್ಟನ್ ಆಗಲು ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ನಾಯಕತ್ವದ ನೊಗ ಹೊರುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇನ್ನೊಂದು ಮುಖ್ಯ ವಿಚಾರ ಏನೆಂದರೆ ಚೆನ್ನಾಗಿ ಆಡೋದನ್ನ ಮರೆಯದಿರಿ. ಸಿಕ್ಸರ್ಗಳನ್ನು ಬಾರಿಸುತ್ತಲೇ ಇರಿ ಎಂದು ಶುಭ ಹಾರೈಸಿದ್ದಾರೆ. 2022 ರಿಂದ ಫಾಫ್ ಆರ್ಸಿಬಿ ನಾಯಕರಾಗಿ ಜವಾಬ್ದಾರಿ ತೆಗೆದುಕೊಂಡಿದ್ದರು. ಮೂರು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಡುಪ್ಲೆಸಿಸ್, ಆರ್ಸಿಬಿಯ ಟ್ರೋಫಿ ಬರ ನೀಗಿಸುವಲ್ಲಿ ವಿಫಲರಾಗಿದ್ದರು. ಅದೇ ಕಾರಣಕ್ಕೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ಆರ್ಸಿಬಿ…
ಬೆಂಗಳೂರು:- ಎಣ್ಣೆ, ಡ್ರಗ್ ಗೆ ದಾಸನಾಗಿದ್ದ ಮಗನಿಗೆ ಬುದ್ದಿ ಹೇಳಿದ ತಂದೆ ಎದೆಗೆ ಇರಿದು ಮಗನೆ ಕೊಲೆ ಮಾಡಿರೋ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ. ತಿಗಳರಪಾಳ್ಯದ ಕೆರೆ ಮುನೇಶ್ವರ ದೇವಸ್ಥಾನದ ಬಳಿ ಇಂದು ಸಂಜೆ ಈ ದುರ್ಘಟನೆ ಸಂಭವಿಸಿದೆ. https://ainlivenews.com/gas-cylinder-blast-burned-tea-shop/ ನಿವೃತ್ತ ಸೈನಿಕರಾಗಿದ್ದ ಚನ್ನಬಸವಯ್ಯ (61) ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡ್ತಿದ್ರು. ಮಗ ಅಮಿತ್ (21) ಕೆಲಸ ಕಾರ್ಯ ಇಲ್ಲದ ಎಣ್ಣೆ, ಡ್ರಗ್ಸ್ ಅಂತ ನಶೆಗೆ ದಾಸನಾಗಿ ತಿರುಗಾಡ್ತಿದ್ದ. ಪ್ರತಿ ದಿನ ಇದೇ ವಿಚಾರಕ್ಕೆ ಅಪ್ಪ ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಇಂದು ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಅಪ್ಪ ಚನ್ನಬಸವಯ್ಯ ಮಗನಿಗೆ ಈ ಚಟದಿಂದ ಮುಕ್ತಿಹೊಂದಿ ಒಳ್ಳೆ ಬಟ್ಟೆ ಹಾಕೊಂಡು ಕೆಲಸ ಮಾಡು ಅಂತ ಬುದ್ದಿ ಹೇಳಿದ್ದಕ್ಕೆ ಅಪ್ಪನ ಮೇಲೆ ಸಿಟ್ಟಿಗೆದ್ದ ಮಗ ಅಮಿತ್ ತಂದೆ ಚನ್ನಬಸವಯ್ಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಮನೆಯವರು ಚನ್ನಬಸವಯ್ಯರನ್ನ ಆಸ್ಪತ್ರೆಗೆ ಸೇರಿಸೋ ಕೆಲಸ ಮಾಡಿದ್ರು…
ಪ್ರಪಂಚದಲ್ಲಿ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆದಿದ್ದು, ಇದರಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ. ಬಾದಾಮಿ ಪೋಷಕಾಂಶವುಳ್ಳ ಪದಾರ್ಥವಾಗಿದ್ದು, ಬಾದಾಮಿಯಿಂದ ನಮ್ಮ ಚರ್ಮ, ಕೂಡಲು ಹಾಗೂ ಆರೋಗ್ಯಕ್ಕೆ ಹಲವು ಪ್ರಯೋಜನಕಾರಿ ಅಂಶಗಳಿವೆ. https://ainlivenews.com/nirani-sugars-company-fired-45-employees/ ಬಾದಮಿಯನ್ನು ನಿಯಮಿತಾಗಿ ಸೇವನೆ ಮಾಡುವುದರಿಂದ ಹೃದಯವನ್ನು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜೊತೆಗೆ ಇದು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವ ಮೂಲಕ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಈ ರೀತಿ ಮಾನವನಿಗೆ ಇದರಿಂದ ಹೆಚ್ಚು ಪ್ರಯೋಜನ ಇರುವುದರಿಂದ ಇದಕ್ಕೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚು. ಸಾಮಾನ್ಯವಾಗಿ ಭಾರತದಲ್ಲಿ ಬಾದಾಮಿಯನ್ನು ವಿವಿಧ ರುಚಿಕರ ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಬಾದಾಮಿ ಬೆಳೆಯುವ ಮರವು ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾ ಪ್ರದೇಶದ ಒಂದು ಸಸ್ಯವಾಗಿದೆ. ಇದು ಸುಮಾರು 30 ಅಡಿ ಎತ್ತರಕ್ಕೆ ಸಮನಾಗಿ ಹರಡಿಕೊಂಡು ಬೆಳೆಯುವ ಮರ. ಪ್ರಪಂಚದಲ್ಲಿ ಬೆಳೆಯಲಾಗುವ ಬಾದಾಮಿಗಳಲ್ಲಿ ಶೇ 80ರಷ್ಟು ಬಾದಾಮಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯಲಾಗುತ್ತದೆ. ಒಬ್ಬ ವ್ಯಕ್ತಿಯು ದಿನಕ್ಕೆ 30 ರಿಂದ 50…