Author: AIN Author

ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ರೋಟಿ, ಬಟರ್ ನಾನ್, ಕುಲ್ಚಾ ಮುಂತಾದ ಆಹಾರಗಳೊಂದಿಗೆ ಗ್ರೇವಿ ತಿಂದಿರುತ್ತೀರಿ. ಗ್ರೇವಿಗಳಲ್ಲಿ ಅನೇಕ ವಿಧಗಳಿವೆ. ಕಾಜೂ ಗ್ರೇವಿ, ಪನೀರ್ ಗ್ರೇವಿ, ಪಾಲಕ್ ಪನೀರ್ ಮುಂತಾದವುಗಳು ರೋಟಿಗಳಿಗೆ ಅದ್ಭುತ ಕಾಂಬಿನೇಷನ್ ಆಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ಪನೀರ್ ಮಾಡೋದು ಹೇಗಂತೀರಾ ಇಲ್ಲಿದೆ ತಿಳಿಯಿರಿ! ಬೇಕಾಗುವ ಸಾಮಗ್ರಿಗಳು: ಪಾಲಕ್ ಸೊಪ್ಪು – 1 ಕಪ್ ಪನೀರ್ ಕ್ಯೂಬ್ಸ್ – 100 ಗ್ರಾಂ ಪಲಾವ್ ಎಲೆ -2 ಜೀರಿಗೆ – ಅರ್ಧ ಚಮಚ ಚೆಕ್ಕೆ – ಸ್ವಲ್ಪ ಏಲಕ್ಕಿ – 1 ಬೆಣ್ಣೆ – 2 ಚಮಚ ಕಸೂರಿ ಮೇತಿ – 2 ಚಮಚ ಹಸಿರು ಮೆಣಸಿನ ಕಾಯಿ – 3 ಬೆಳ್ಳುಳ್ಳಿ – 5 ಎಸಳು ಶುಂಠಿ – ಅರ್ಧ ಇಂಚು ಗರಂ ಮಸಾಲ – ಅರ್ಧ ಚಮಚ ಅಚ್ಚ ಖಾರದ ಪುಡಿ – ಅರ್ಧ ಚಮಚ ಅರಶಿಣ – ಕಾಲು ಚಮಚ ಫ್ರೆಶ್ ಕ್ರೀಮ್ – 2 ಚಮಚ…

Read More

ಕಪ್ಪು ಒಣದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ, ಶಾಶ್ವತವಾಗಿ ಬಿಳಿಕೂದಲು ಕಪ್ಪಾಗಿ ಉಳಿಯುತ್ತದೆ. ಕಪ್ಪು ಒಣದ್ರಾಕ್ಷಿಗಳು ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಒಣದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಕಬ್ಬಿಣದ ಪ್ರಮಾಣವು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತಿದ್ದರೆ, ಕಪ್ಪು ಒಣದ್ರಾಕ್ಷಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ಸೇವನೆಯಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಹೀಗಾಗಿ ಇದನ್ನು ನಿಯಮಿತವಾಗಿ ಸೇವಿಸಿದರೆ ಕೂದಲಿನ ಬೆಳವಣಿಗೆಯು ಉತ್ತಮಗೊಳ್ಳುತ್ತದೆ. ನಿಗದಿತ ಪ್ರಮಾಣದಲ್ಲಿ ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಕೂದಲು ಹೊಳಪು ಮತ್ತು ಮೃದುವಾಗಿರುತ್ತದೆ. ಕಪ್ಪು ಒಣದ್ರಾಕ್ಷಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 20-15 ಗ್ರಾಂ ಕಪ್ಪು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ತಿನ್ನಿ.

Read More

ಕೆಲವು ಜನರಲ್ಲಿ ಶ್ರವಣ ದೋಷದ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅಂತವರು ನಿಮ್ಮ ಶ್ರವಣದ ಶಕ್ತಿಯನ್ನು ಹೆಚ್ಚಿಸಲು ಈ ಆಹಾರ ಸೇವಿಸಿ. ಶ್ರವಣ ಶಕ್ತಿ ಹೆಚ್ಚಾಗಲು ಮೆಗ್ನೀಶಿಯಂ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದು ನರಗಳನ್ನು ಬಲಗೊಳಿಸುತ್ತದೆ. ದೊಡ್ಡ ಶಬ್ದದಿಂದಾಗುವ ಹಾನಿಯನ್ನು ತಡೆಯುತ್ತದೆ. ಹಾಗಾಗಿ ಆವಕಾಡೊ, ಬಾದಾಮಿ, ಅಂಜೂರ, ಪಾಲಕ್ ಮುಂತಾದವುಗಳನ್ನು ಸೇವಿಸಿ. ಪೊಟ್ಯಾಶಿಯಂ ಸೇವನೆಯಿಂದ ಕಿವಿಯಲ್ಲಿ ದ್ರವದ ಸಮತೋಲನ ಉತ್ತಮವಾಗಿರುತ್ತದೆ. ಇದು ಕಿವಿಯ ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬಾಳೆಹಣ್ಣು, ಆಲೂಗಡ್ಡೆ, ಕಿತ್ತಳೆ, ಎಳನೀರನ್ನು ಕುಡಿಯಿರಿ. ಸತುವು ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಕಿವಿಯಲ್ಲಿ ಸೋಂಕಿನ ಸಮಸ್ಯೆಯನ್ನು ನಿವಾರಿಸಬಹುದು.

Read More

ವಿಜಯಪುರ:- ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್‌ ಬಂದ್ ಮಾಡಿ ಲಂಚ ತಿನ್ನುತ್ತಿದೆ. ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರವಾಗಿದೆ. ಜನರ ಅಸಮಾಧಾನವನ್ನು ಬೇರೆಡೆಗೆ ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದರು. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ-ರಾಷ್ಟ್ರ ನಾಯಕರೊಂದಿಗೆ ಸೇರಿ ರಾಜ್ಯದ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇನೆ. ಗಾಳಿ ಸುದ್ದಿಗಳನ್ನು ಮಾಧ್ಯಮಗಳು ನಂಬಬಾರದು ಎಂದರು. ನೂತನ ಪದಾಧಿಕಾರಿಗಳ ನೇಮಕ ಅಸಮಾಧಾನ ವಿಚಾರ ಸತ್ಯಕ್ಕೆ ದೂರವಾದದ್ದು, ಯಾರಿಗೆ ಅವಕಾಶ ಸಿಕ್ಕಿಲ್ಲ, ಅವರಿಗೆಲ್ಲಾ ಅಸಮಾದಾನ ಆಗಬಾರದು. ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಬೇಕು ಎಂದರು. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಡಿಮೆ ಸ್ಥಾನ ಸಾಧ್ಯವೇ ಇಲ್ಲ. ಹೊಸ ತಂಡ ಕಟ್ಟಲಾಗಿದೆ ಹೊಸಬರನ್ನು ಮುಂದೆ ತರುವ ಕೆಲಸ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ನಿನ್ನೆ 106 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆ 344ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಗುಣಮುಖರಾಗಿ 33 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಾದ್ಯಂತ ಭಾನುವಾರ ಒಟ್ಟು 1,441 ಮಂದಿಗೆ ಕೋವಿಡ್ 19 ತಪಾಸಣೆ (RTPCR – 1,135 , RAT – 306) ನಡೆಸಲಾಗಿದ್ದು, ಈ ಪೈಕಿ 106 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 95, ಚಾಮರಾಜನಗರ 1, ದಕ್ಷಿಣ ಕನ್ನಡ 2, ಮಂಡ್ಯ 1, ಮೈಸೂರು 6, ಶಿವಮೊಗ್ಗದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 344 ಇದ್ದರೆ, ಈ ಪೈಕಿ ಬೆಂಗಳೂರಿನಲ್ಲೇ 297 ಪ್ರಕರಣಗಳು ಇವೆ. ಈ ಪೈಕಿ 323 ಮಂದಿ ಹೋಮ್‌ ಐಸೋಲೇಶನ್‌ನಲ್ಲಿದ್ದು, ಆಸ್ಪತ್ರೆಯಲ್ಲಿ 21 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿಇದೆ ನಿನ್ನೆ ಕೊರೊನಾ ಪಾಸಿಟಿವಿಟಿ ದರ ಶೇ. 7.35 ಇದೆ.

Read More

ಬೆಂಗಳೂರು:- ನಗರದಲ್ಲಿ ಇಂದು ಮತ್ತು ನಾಳೆ ಚಳಿಯ ವಾತಾವರಣ ಅಧಿಕವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಸೋಮವಾರದಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ದಟ್ಟ ಮಂಜು ಹೆಚ್ಚಾಗಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಅಂದರೆ ಮಂಗಳವಾರದಂದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಮಂಜು ಕಾಣಿಸಲಿದೆ. ಭಾಗಶಃ ಮೋಡ ಕವಿದ ವಾತಾವರಣವೂ ಇರಲಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್‌ನಷ್ಟಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ

Read More

ನಾವು ಸರಿಯಾದ ಸಮಯದಲ್ಲಿ ಮಲಗಿ ಸರಿಯಾದ ಸಮಯದಲ್ಲಿ ಎದ್ದೇಳುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಇದು ಉತ್ತಮ ನಿದ್ದೆಗೂ ಅವಶ್ಯ. ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದರೆ ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಎದ್ದೇಳುವ ಸಮಯಕ್ಕೆ ಎದ್ದೇಳಲೇಬೇಕು. ದೇಹಕ್ಕೆ ಅವಶ್ಯ ಇರುವಷ್ಟು ನಿದ್ದೆ ಮಾಡದೇ ಇದ್ದರೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ, ಹೃದ್ರೋಗ ಸೇರಿದಂತೆ ಆತಂಕದಂತಹ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ರಾತ್ರಿ ತಡವಾಗಿ ಮಲಗುವುದರಿಂದ ಮುಂಜಾನೆ ಸೂರ್ಯನ ಬೆಳಕು ನೋಡಲು ಆಗುವುದಿಲ್ಲ. ಮುಂಜಾನೆಯ ಎಳೆ ಬಿಸಿಲು ನಮ್ಮ ಸಿರ್ಕಾಡಿಯನ್‌ ಲಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದ ಆಂತರಿಕ ಗಡಿಯಾರವನ್ನು ಸಿಂಕ್ರೊನೈಸ್‌ ಮಾಡಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ನಿದ್ದೆಯ ಗುಣಮಟ್ಟದ ಸುಧಾರಣೆಗೂ ಸಹಕಾರಿ. ಹಾಗಾದ್ರೆ ತಡವಾಗಿ ನಿದ್ದೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ರೀತಿ ಪರಿಣಾಮ…

Read More

ಹುಬ್ಬಳ್ಳಿ:- ಹಿಜಾಬ್‌ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಸಿದ್ದರಾಮಯ್ಯ ಅವರ ಮುಠ್ಠಾಳತನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಜಾಬ್‌ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ರೀತಿ ಮಾಡುತ್ತಿದ್ದಾರೆ’ ಎಂದರು. ನಮ್ಮ ಸರ್ಕಾರ ಇದ್ದಾಗ ಹಿಜಾಬ್‌ ನಿಷೇಧ ಮಾಡಿರಲಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಈ ರೀತಿ ಹೇಳಿದರೆ ಅದು ಸಮಾಜಕ್ಕೆ ಬಗೆಯುತ್ತಿರುವ ದ್ರೋಹ. ಗೊತ್ತಿಲ್ಲ ಎಂದಾದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ’ ಎಂದರು. ‘ಹಿಜಾಬ್ ನಿಷೇಧ ಎಂದರೆ ಅದನ್ನು ಧರಿಸಿ ಎಲ್ಲಿಯೂ ಓಡಾಡುವಂತಿಲ್ಲ. ಹಿಜಾಬ್‌ ಯಾವಾಗ ನಿಷೇಧವಾಗಿದೆ? ಸಿದ್ದರಾಮಯ್ಯ ಮೂರ್ಖರ ರೀತಿ ಮಾತನಾಡಿದ್ದಾರೆ. ಸಮುದಾಯಗಳ ನಡುವೆ ಜಗಳ ಹಚ್ಚಿ, ತುಷ್ಟೀಕರಣ ಮಾಡಿ ಮುಸ್ಲಿಮರ ಮತಗಳನ್ನು ಪಡೆಯುವ ಹುನ್ನಾರ ಇದರ ಹಿಂದೆ ಇದೆ. ಈ ಷಡ್ಯಂತ್ರಕ್ಕೆ ಮುಸ್ಲಿಮರು ಬಲಿಯಾಗಬಾರದು’ ಎಂದು…

Read More

ಚಿಕ್ಕಮಗಳೂರು:- ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಲಾಭಕ್ಕೆ ಸಮಾಜದಲ್ಲಿನ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಸಂಚು ಹೂಡಿದ್ದು ಅದು ಅವರ ಹೇಳಿಕೆಯಲ್ಲಿ ವ್ಯಕ್ತವಾಗಿದೆ ಎಂದರು. ಶಾಲೆಯಲ್ಲಿ ಸಮವಸ್ತ್ರ ಇರಬೇಕೋ, ಬೇಡವೋ ಎನ್ನುವುದು ಚರ್ಚೆಯ ವಿಷಯವಾಗಬಾರದು. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಯಾವ ಉದ್ದೇಶಕ್ಕೆ ತಂದಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇದು ಅರ್ಥ ಮಾಡಿಕೊಳ್ಳದೆ ಶಾಲಾ-ಕಾಲೇಜು ಮಕ್ಕಳಲ್ಲಿಯೂ ಜಾತಿ ಮತ್ತು ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಶಾಲಾ ಮಕ್ಕಳಲ್ಲಿ ವಿಷ ಬೀಜ ಬಿತ್ತುವುದು, ಕೋಮುವಾದ ಬಿತ್ತುವುದು ಅದೊಂದು ರಾಷ್ಟ್ರಘಾತಕ ಕೆಲಸ. ಮಹಮದ್‌ ಆಲಿ ಜಿನ್ನಾ ಮತ್ತು ಕಾಂಗ್ರೆಸ್‌ ಮನಸ್ಥಿತಿ ಬೇರೆ ಬೇರೆಯಲ್ಲ. ಜಿನ್ನಾ ಕೂಡ ಪ್ರತ್ಯೇಕತೆ ಭಾವನೆಯನ್ನು ಬಿತ್ತಿ ಬೆಳೆಸಿ, ಆ ಮೂಲಕ ಭಾರತದ ವಿಭಜನೆಗೆ ಕಾರಣನಾದ. ಇವತ್ತು ಕಾಂಗ್ರೆಸ್‌ ತನ್ನ ರಾಜಕೀಯ ಲಾಭಕ್ಕೆ ಶಾಲಾ ಮಕ್ಕಳಲ್ಲೂ…

Read More

ಕೊಯಮತ್ತೂರು:- ಪರೋಟ ತಿಂದ ಮರುದಿನವೇ ಯುವಕ ದುರ್ಮರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ವರದಿಯಲ್ಲಿ ಭಯಾನಕ ಸಂಗತಿ ಬಹಿರಂಗವಾಗಿದೆ. ಹೇಮಚಂದ್ರನ್​ ಮೃತ ಯುವಕ. ಬುಧವಾರ ರಾತ್ರಿ ಹೇಮಚಂದ್ರನ್​ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದು ಸೇವಿಸಿದ್ದರು. ಗುರುವಾರ ಬೆಳಗ್ಗೆ ಹೇಮಚಂದ್ರನ್​ ಎಚ್ಚರಗೊಂಡಾಗ ಉಸಿರಾಡಲು ತೊಂದರೆಯಾಗುತ್ತಿದೆ ಅಂತಾ ಹೇಳಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಆತ ಕುಸಿದುಬಿದ್ದಿದ್ದಾರೆ. ತಕ್ಷಣ ಆತನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪ್ರಕರಣ ದಾಖಲಿಸಿಕೊಂಡ ಸುಲೂರು ಪೊಲೀಸರು ಹೇಮಚಂದ್ರನ್​ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್​)ಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಆರು ತಿಂಗಳ ಹಿಂದೆಯೂ ರಾತ್ರಿ ಪರೋಟ ತಿಂದಾಗ ಹೇಮಚಂದ್ರನ್​ ಉಸಿರಾಟದ ತೊಂದರೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹೇಮಚಂದ್ರನ್​ ಅವರ ಪಾಲಕರು ಮೃತದೇಹದ ಹೆಬ್ಬೆರಳಿನಲ್ಲಿ ಗಾಯದ ಗುರುತನ್ನು ಕಂಡು ಅನುಮಾನ ವ್ಯಕ್ತಪಡಿಸಿದರು. ಆದರೆ, ಆ ಗಾಯ ಸ್ನೇಹಿತರು ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಭಾರತೀಯ…

Read More