ಕಲಬುರ್ಗಿ:- ನಾನು ಹೀರೋ ಅಲ್ಲ, ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಯಾವತ್ತಿದ್ರು ವಿಲನ್, ನಾನು ಹೀರೋ ಅಲ್ಲ, ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇರುತ್ತೆ, ಇಲ್ಲದಿದ್ರೆ ಇಲ್ಲ ಎಂದು ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮನ್ನು ವಿಲನ್‌ಗೆ ಹೋಲಿಕೆ ಮಾಡಿಕೊಂಡು ಮಾತನಾಡಿದ್ದಾರೆ. ತಮ್ಮನ್ನು ಆಲ್ ಪಾರ್ಟಿ ವಿಪಕ್ಷ ನಾಯಕ ಎಂದು ತಾವೇ ಬಣ್ಣಿಸಿಕೊಂಡರಲ್ಲದೆ ಎಲ್ಲದಕ್ಕೂ ಒಂದು ಅಂತ್ಯ ಅಂತ ಇರುತ್ತೆ. ಅದು 2024 ಲೋಕಸಭೆ ಚುನಾವಣೆ ನಂತರದಲ್ಲಿ ಎಲ್ಲರು ಅನುಭವಿಸುತ್ತಾರೆಂದು ಒಗಟಾಗಿ ಹೇಳಿದರು. ವಿಲನ್ ಇಲ್ಲದಿದ್ರೆ ಹೀರೋ ಯಾರ ಜೋಡಿ ಫೈಟ್ ಮಾಡ್ತಾನೆ? ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ಅದೇ ತರಹ ನಾನು ಆಮೇಲೆ ಹೀರೋ ಆಗಬಯಸೋದು ಎಂದು ಹೇಳುತ್ತ ಬಿಜೆಪಿಯ ಆಂತರಿಕ ಕಚ್ಚಾಟದ ಹಲವು ಸಂಗತಿಗಳನ್ನ ಒಗಟಾಗಿ ವಿಲನ್, ಹಿರೋ ಪರಿಕಲ್ಪನೆಯಲ್ಲಿ ಸೋದಾಹರಣವಾಗಿ ವಿವರಿಸಿದರು. ರಾಜ್ಯ…
Author: AIN Author
ಮಂಗಳೂರು:- ದಲಿತ ಎಂಬ ಕೀಳರಿಮೆಯನ್ನು ತೆಗೆದು ಹಾಕಬೇಕು ಎಂದು ಮಾಜಿ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ..ದಲಿತ. ಇಂತಹ ಕೀಳರಿಮೆಯನ್ನು ತೆಗೆದು ಹಾಕಬೇಕಾದಲ್ಲಿ ನಾವೆಲ್ಲಾ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರಿಯುತ್ತದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಯುತರಾಗಲು ಸಾಧ್ಯ. ಆದ್ದರಿಂದ ಆದಿ ದ್ರಾವಿಡ ಸಮಾಜದ ಪ್ರತೀ ಮನೆಯಿಂದ ಓರ್ವನನ್ನಾದರೂ ಪದವೀಧರರನ್ನಾಗಿಸುವ ಸಂಕಲ್ಪವನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು ಎಂದರು. ನಾನು ಆದಿದ್ರಾವಿಡ ಸಮುದಾಯದಿಂದ ಬಂದವನು. ಆದರೆ ನಾನು ಹೊರದೇಶಕ್ಕೆ ಹೋಗಿ ಶಿಕ್ಷಣ ಪಡೆಯುವಷ್ಟು ನನ್ನ ತಂದೆ ಶಿಕ್ಷಣದ ಬಗ್ಗೆ ಒಲವು ಇರಿಸಿಕೊಂಡಿದ್ದರು. ಬಳಿಕ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ 35 ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ. ಸಚಿವನಾಗಿದ್ದೇನೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರಾಜ್ಯದಲ್ಲಿ ಮೂರು ಬಾರಿ ಗೃಹ…
ನೆಲಮಂಗಲ: ಮನೆಯ ಮುಂದೆ ಇದ್ದ ಶ್ವಾನದ ಮೇಲೆ ದೈತ್ಯ ಚಿರತೆ ದಾಳಿ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಕ್ರಾಸ್ ಬಳಿ ರಾತ್ರಿ ಜರುಗಿದೆ. ಗ್ರಾಮದ ಭರತ್ ಎಂಬುವವರ ತೋಟದ ಮನೆಯಲ್ಲಿ ಇದ್ದ ಶ್ವಾನದ ಮೇಲೆ ಸಂಚು ಹಾಕಿ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಕಾಟದಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ.
ದೇವನಹಳ್ಳಿ:-ದೊಡ್ಡಬಳ್ಳಾಪುರ ನಗರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ಜರುಗಿದೆ. ದೊಡ್ಡಬಳ್ಳಾಪುರದ ಬಾಶಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅರಹಳ್ಳಿ- ಗುಡ್ಡದಹಳ್ಳಿ ಬಳಿಯ ಅಜಾಕ್ಸ್ ಕಂಪನಿ ಮುಂಭಾಗ ಚಿರತೆ ಕಾಣಿಸಿಕೊಂಡಿದ್ದು, ಗುಡ್ಡದಹಳ್ಳಿ ಅಪೇರಲ್ ಪಾರ್ಕ್ ಅಜಾಕ್ಸ್ ಕಂಪನಿಯ CCTV ಯಲ್ಲಿ ಚಿರತೆ ಪ್ರತ್ಯಕ್ಷ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆ ಮತ್ತೆ ದೊಡ್ಡಬಳ್ಳಾಪುರ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ.
ವಿಜಯಪುರ:- ಇಲ್ಲಿನ ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ-ರಾಷ್ಟ್ರ ನಾಯಕರೊಂದಿಗೆ ಸೇರಿ ರಾಜ್ಯದ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇನೆ. ನಾನು ಲೋಕಸಭೆ ಸ್ಪರ್ಧೆ ಮಾಡಬೇಕು ಎನ್ನುವ ಕೂಗು ಪಕ್ಷದಲ್ಲಿ ಇಲ್ಲ ಎಂದರು. ಗಾಳಿ ಸುದ್ದಿಗಳನ್ನು ಮಾಧ್ಯಮ ಮಿತ್ರರು ನಂಬಬಾರದು. ಸದ್ಯ ನಡೆಯುತ್ತಿರುವ ಮಾದಿಗರ ಆತ್ಮಗೌರವ ಸಮಾವೇಶ. ಇದೊಂದು ಸಾಮಾಜಿಕ ನ್ಯಾಯದ ಹೋರಾಟ, ಜನರ ಎಚ್ಚರಿಸುವ ಕೆಲಸ ಇದಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಆರ್.ಎಸ್.ಎಸ್ ವಿರುದ್ಧ ಕಾಂಗ್ರೆಸ್ ನಾಯಕ ಹರಿಪ್ರಸಾದ ಆರೋಪ ಕುರಿತು ಪ್ರತಿಕ್ರೀಯೆ ನೀಡಿದ ಗೊಂವಿದ ಕಾರಜೋಳ ಅವರು, ಕಾಂಗ್ರೆಸ್ ನಾಯಕ ಹರಿಪ್ರಸಾದ ಬಗ್ಗೆ ಹಗುರವಾಗಿ ಮಾತನಾಡಲು ಇಷ್ಟಪಡಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸ್ವಾತಂತ್ರ್ಯ ಯೋಧರ ಬಗ್ಗೆ ತಿಳಿದುಕೊಂಡು ಹರಿಪ್ರಸಾದ ಮಾತನಾಡಲಿ, ದೇಶ ಇತಿಹಾಸ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದರು.
ನಮ್ಮ ದೇಶದ ಪ್ರಮುಖ ಕಂಪನಿಯಾದ ಮಾರುತಿ ಸುಜುಕಿ, ವಾರ್ಷಿಕ ಒಂದರಿಂದ ಎರಡು ಲಕ್ಷ ಕಾರುಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡುತ್ತಿತ್ತು. ಈಗ ಇದೇ ಕಂಪನಿಯು ವಾರ್ಷಿಕ ಸುಮಾರು 18 ಲಕ್ಷ ಕಾರುಗಳನ್ನು ಮಾರಾಟ ಮಾಡುತ್ತದೆ. ಇಪ್ಪತ್ತು ವರ್ಷದ ಹಿಂದೆ ಮಾರುತಿ ಸುಜುಕಿ ಕಂಪನಿಯ ಒಂದು ಷೇರಿನ ಬೆಲೆ 125 ರೂಪಾಯಿ ಸೆನ್ಸೆಕ್ಸ್-70,000: ಹೂಡಿಕೆದಾರರು ಈಗ ಏನು ಮಾಡಬೇಕು? * ಸೆನ್ಸೆಕ್ಸ್ 70 ಸಾವಿರ ಮಾತ್ರವಲ್ಲ, 71 ಸಾವಿರ ಮಟ್ಟವನ್ನೂ ಇತ್ತೀಚೆಗೆ ದಾಟಿದೆ. ಹೀಗೆಂದರೆ ಮಾರುಕಟ್ಟೆಯು ಅತೀ ಎತ್ತರಕ್ಕೆ ಹೋಗಿಬಿಟ್ಟಿದೆಯೆ? ಇಲ್ಲಿಂದ ಮತ್ತೆ ಮೇಲೇರುತ್ತದೆಯಾ ಅಥವಾ ಕೆಳಗಿಳಿಯುತ್ತದೆಯಾ? ಇಂದಿನ ಸನ್ನಿವೇಶದಲ್ಲಿ ಷೇರು ಖರೀದಿ ಮಾಡುವುದೇ ಅಥವಾ ಮಾರಾಟ ಮಾಡುವುದೇ ಅಥವಾ ಸುಮ್ಮನಿರುವುದೇ? ಬಹುತೇಕ ಖ್ಯಾತ ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ, ಮಾರುಕಟ್ಟೆಯ ಮಟ್ಟವನ್ನು ನೋಡಿ ಷೇರು ಖರೀದಿಸಬಾರದು. ಕಂಪನಿಗಳ ಸಾಮರ್ಥ್ಯ ನೋಡಿ ಷೇರು ಖರೀದಿಸಬೇಕು. ಉತ್ತಮ ಕಂಪನಿಗಳ ಸಾಮರ್ಥ್ಯವು ಮಾರುಕಟ್ಟೆಯ ಮಟ್ಟದ ಮೇಲೆ ನಿರ್ಧಾರವಾಗಿಲ್ಲ. ಉತ್ತಮ ಕಂಪನಿಗಳು ಸದಾ ಉತ್ತಮ ಪ್ರದರ್ಶನ ತೋರುತ್ತಿರುತ್ತವೆ. ಕಳೆದ…
ಹಾವೇರಿ:- ರಾಜ್ಯದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ, ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕದ ಬಗ್ಗೆ ಒಂದು ದಿನವಾದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದಾರಾ? ಚುನಾವಣೆ ಸಂದರ್ಭದಲ್ಲಿ ಮಹದಾಯಿ ಬಗ್ಗೆ ಬಹಳ ಕೂಗಾಡಿದರು. ಕೊನೆಗೆ ಏನಾದರೂ ನೀರು ಬಿಟ್ಟಿದ್ದಾರಾ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ ಬಹಳಷ್ಟು ನಾಯಕರು ಈಗಾಗಲೇ ಮಾರ್ಗದರ್ಶನ ಮಂಡಳಿಗೆ ಹೋಗುತ್ತಿದ್ದಾರೆ. ಉದಾಸಿ, ನಾರಾಯಣಸ್ವಾಮಿ, ಡಿವಿಎಸ್ ಚುನಾವಣೆ ನಿಲ್ಲಲ್ಲ ಅಂದಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿ ಆಗಲು ಸಚಿವ ಪ್ರಲ್ಹಾದ್ ಜೋಶಿ ಶತಪ್ರಯತ್ನ ಮಾಡಿದ್ದರು. ಬಿಜೆಪಿ ಹೀನಾಯ ಸ್ಥಿತಿಗೆ ತರಲು ಕಾರಣ ಯಾರೆಂದು ಅವರನ್ನೇ ಕೇಳಿ. ಯಾವುದೋ ಸಂತೋಷದ ಗುಂಪಿನ ಜೊತೆಗೆ ಸೇರಿಕೊಂಡಿದ್ದರು. ಅದರಿಂದಲೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಭಾರತದ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಬಳಿಕ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಡೀನ್ ಎಲ್ಗರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಈ ಬಗ್ಗೆ ಶುಕ್ರವಾರ ಡೀನ್ ಎಲ್ಗರ್ ಅವರೇ ಅಧಿಕೃತ ಹೇಳಿಕೆಯ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 26 ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಡೀನ್ ಎಲ್ಗರ್ ಅವರು ತಮ್ಮ ಅಧಿಕೃತ ಹೇಳಿಕೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕ್ರಿಕೆಟ್ ಆಡುವುದು ನನ್ನ ಕನಸು. ಅದರಲ್ಲಿಯೂ ನನ್ನ ನೆಚ್ಚಿನ ಕ್ರೀಡೆಯಾದ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆ ಸಂಗತಿಯಾಗಿದೆ,” ಎಂದು ಹರಿಣಗಳ ಮಾಜಿ ನಾಯಕ ಹೇಳಿದ್ದಾರೆ. “ಅಂತಾರಾಷ್ಟ್ರೀಯ ಮಟ್ಟದಲ್ಲಿ 12 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸುವ ಸವಲತ್ತು ಪಡೆದಿರುವುದು ನನ್ನ ಹುಚ್ಚು ಕನಸುಗಳನ್ನು ಮೀರಿದೆ. ನನ್ನ ಅಸಾಧಾರಣ ಪಯಣ ಇದಾಗಿದ್ದು, ನನ್ನ ಜೀವನದಲ್ಲಿ ಈ ಸ್ಮರಣೀಯ ಕ್ಷಣಗಳನ್ನು ಮರೆಯುವುದೇ ಇಲ್ಲ,” ಎಂದು ದಕ್ಷಿಣ ಆಫ್ರಿಕಾ…
ಭಾರತೀಯ ರೈಲ್ವೆಯ ಆನ್‌ಲೈನ್ ಟಿಕೆಟ್ ಬುಕಿಂಗ್ ಪೋರ್ಟಲ್ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್) ಷೇರು ಸೋಮವಾರ ಭಾರೀ ಏರಿಕೆ ಕಂಡಿದೆ. ದಿನದ ವಹಿವಾಟು ಮುಕ್ತಾಯದ ವೇಳೆಗೆ ಐಆರ್‌ಸಿಟಿಸಿಯ ಷೇರು ಸುಮಾರು ಶೇ. 12ರಷ್ಟು ಏರಿಕೆ ಕಂಡಿದ್ದು, 874.55 ರೂ. ಮಟ್ಟವನ್ನು ತಲುಪಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಷೇರಿನ ಅತ್ಯುನ್ನತ ಮಟ್ಟವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಐಆರ್‌ಸಿಟಿಸಿ ಷೇರು ಸಾಕಷ್ಟು ಏರಿಳಿತ ಕಂಡಿದ್ದು, ಜನವರಿ 17, 2022ರಂದು 897 ರೂ.ಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದಾದ ನಂತರ ಷೇರುಗಳಲ್ಲಿ ಭಾರೀ ಮಾರಾಟ ಕಂಡುಬಂದಿತ್ತು. ಜುಲೈ 6, 2022ರಂದು ಐಆರ್‌ಸಿಟಿಸಿ ಷೇರುಗಳು 557 ರೂ.ಗಳ ಮಟ್ಟಕ್ಕೆ ಕುಸಿತ ಕಂಡಿತ್ತು. ಈ ವೇಳೆ ಷೇರುಗಳು ಅದರ ಗರಿಷ್ಠ ಮಟ್ಟದಿಂದ ಶೇ. 38ರಷ್ಟು ಕುಸಿತ ಕಂಡಿದ್ದವು. ಅಂದಿನಿಂದ, ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ರೈಲ್ವೇ ಸಂಬಂಧಿತ ಷೇರುಗಳು ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಆದರೆ ಐಆರ್‌ಸಿಟಿಸಿಯ ಷೇರು ಮಾತ್ರ ಏರಿಕೆ ಕಂಡಿರಲಿಲ್ಲ. ಆದರೆ…
ಬೆಂಗಳೂರು :- ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಹಿನ್ನೆಲೆಯಲ್ಲಿ ಚರ್ಚ ಸುತ್ತಮುತ್ತ ಪೊಲೀಸರು ಗಸ್ತು ತಿರುಗುವಂತೆ ಬೆಂಗಳೂರು ನಗರ ಆಯುಕ್ತರು ಸೂಚನೆ ನೀಡಿದ್ದಾರೆ. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ಗೆ ಇಂದು 20 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಚರ್ಚೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಚರ್ಚ್ಗೆ ಬರುವ ಜನರನ್ನು ನಿಭಾಯಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.