ಹುಬ್ಬಳ್ಳಿ : ಲಿಂಗಾಯತಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ ಅಂತಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಾನು ಈ ಮಾತನ್ನಈ ಹಿಂದೆಯೂ ಹೇಳಿದ್ದೇನೆಈಗಲೂ ಅದನ್ನೇ ಹೇಳುತ್ತೇನೆಮನೆ ಒಡೆಯುವಂತಹ ಕೆಲಸ ಯಾರೂ ಮಾಡಬಾರದು ಎಂಬ ವಿಜಯೇಂದ್ರ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ವೀರಶೈವ, ಲಿಂಗಾಯತ ಬೇರೆ ಬೇರೆ ಅನ್ನೋ ಅರ್ಥದಲ್ಲಿ ಬಿಂಬಿಸಲಾಗುತ್ತಿತ್ತುಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಅಂತ ನಾನು ಹೇಳಿದ್ದೆ ವೀರಶೈವ ಮಹಾಸಭಾ ಲೀಡ್ ತೆಗೆದುಕೊಳ್ಳಬೇಕೆಂದು ನಾನು ಹೇಳಿದ್ದೆ ಕಾರಣಸಮಾಜದಲ್ಲಿ ಒಡಕು ಉಂಟಾಗುವುದು ಬೇಡ ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಲು ಹೊರಟಿದ್ದಕ್ಕೆ ನಾನೂ ವಿರೋಧ ಮಾಡಿದ್ದೆ ಯಾವುದೇ ಕಾರಣಕ್ಕೂ ಸಮಾಜವನ್ನು ಒಡೆಯುವ ಪ್ರಶ್ನೆಯೇ ಇಲ್ಲ ನಿನ್ನೆಯ ದಾವಣಗೆರೆ ಸಮಾವೇಶದಲ್ಲಿ ಕೆಲ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು ಅದರಂತೆ ವೀರಶೈವ ಲಿಂಗಾಯತರ ಬೇಡಿಕೆಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಲಾಗಿದೆ ಸಚಿವ ಶಿವಾನಂದ ಪಾಟೀಲರಿಂದ ರೈತರ ಅವಹೇಳನ ವಿಚಾರಯಾರೋ ಒಬ್ಬರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಅದನ್ನು ಅವರೇ…
Author: AIN Author
ದಾವಣಗೆರೆ : ಕಿಡಿಗೇಡಿಗಳು ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ. ಪರಮೇಶ್ವರಪ್ಪ ಎಂಬ ರೈತನಿಗೆ ಸೇರಿದ ಎರಡು ಎಕರೆಯಲ್ಲಿರುವ ಸಾವಿರಕ್ಕೂ ಹೆಚ್ಚು ಅಡಿಕೆ ಗಿಡಗಳು ಫಸಲು ಬಂದಿದ್ದು ನಾಲ್ಕು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ್ದ ರೈತ ಆದರೆ ಇದನ್ನು ಸಹಿಸದ ಕಿಡಿಗೇಡಿಗಳು ಕಡಿದು ಹಾಕಿದ್ದರು. ಬೆಳಗ್ಗೆ ಅಡಿಕೆ ತೋಟಕ್ಕೆ ಹೋದಾಗ ಅಡಿಕೆ ಗಿಡಗಳನ್ನು ನಾಶವಾಗಿರುವುದನ್ನ ಕಂಡು ಕಣ್ಣೀರು ಹಾಕಿದ ರೈತ ಪರಮೇಶ್ವರಪ್ಪ. ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ಥಳೀಯರ ಮನವಿ ಮಾಡಿದ್ದು ಹೊನ್ನಾಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರನ್ನು ಹಿಡಿಯಲು ಸ್ಕೆಚ್ ಹಾಕಿದ್ದಾರೆ.
ಮಹದೇವಪುರ: ನಗರದಾದ್ಯಂತ ಹನುಮಾನ್ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿ ಭಕ್ತಿ ಭಾವದಿಂದ ನಮಿಸಲಾಗುತ್ತಿದೆ . ಹಾಗೆ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬಿಳಿಶಿವಾಲೆಯ ಕಟ್ಟಣಗಿರಿ ಆಂಜನೇಯ ದೇವಸ್ಥಾನದಲ್ಲಿ ಅದ್ದೂರಿವಾಗಿ ಹನುಮಾನ್ ಜಯಂತಿಯನ್ನು ಆಚರಣೆ ಮಾಡಲಾಗಿದೆ . ನೂರಾರು ವರ್ಷಗಳ ಇತಿಹಾಸವಿರುವ ಈ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮನ ಬಂಟನಿಗೆ ಶ್ರದ್ದಾ ಭಕ್ತಿಯಿಂದ ನಮಿಸಿದರು . ಇನ್ನೂ ಹನುಮಾನ್ ಜಯಂತಿ ಹಾಗೂ ಅಯೋಧ್ಯೆಯಿಂದ ಬಂದಿರುವ ರಾಮ ಮಂತ್ರಾಕ್ಷತೆಯನ್ನು ಸ್ಥಳೀಯ ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಕಲಶ ಹೊತ್ತ ನೂರಾರು ಮಹಿಳೆಯರೊಂದಿಗೆ ಶೋಭಾ ಯಾತ್ರೆ ಮೂಲಕ ಕಟ್ಟಣಗಿರಿ ಆಂಜನೇಯ ದೇವಸ್ಥಾನಕ್ಕೆ ಬೇಟಿ ನೀಡಿ ಕೇಸರಿ ನಂದನಿಗೆ ದಂಪತಿಗಳ ಸಮೇತ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಭಾಗಿಯಾಗಿದ್ದರು . ಸಂಜೆ ಬಿಳಿ ಶಿವಾಲಯದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಟ್ಟಣಗಿರಿ ಆಂಜನೇಯ ದೇವರ ಮೂರ್ತಿಯ ರಥೋತ್ಸವ ಮಾಡಲಾಯಿತು.ಸುಮಾರು 80 ಕ್ಕೂ ಹೆಚ್ಚು ಮಾಲಾದಾರಿಗಳು ಅಂಜನಾದ್ರಿ ಬೆಟ್ಟಕ್ಕೆ…
ದೊಡ್ಡಬಳ್ಳಾಪುರ: ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿರುವ ಶ್ರೀ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಸ್ವಾಮಿ ಯವರಿಗೆ ಸುಪ್ರಭಾತ ಸೇವೆ, ವಿಶೇಷ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಲಂಕಾರ ಹಾಗೂ ಗ್ರಾಮಸ್ಥರಿಂದ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಸಂಜೆ ವೇಳೆಗೆ 25 ರಿಂದ 30 ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.. ದೇವಾಲಯದ ಪ್ರಧಾನ ಅರ್ಚಕರಾದ ವಾಸುದೇವಾಚಾರ್ ಮಾತನಾಡಿ ಉದ್ಬವ ದಿನ್ನೆ ಆಂಜಿನೇಯ ಸ್ವಾಮಿಗೆ 800 ವರ್ಷದ ಇತಿಹಾಸವಿದೆ.ದೇವಾಲಯಕ್ಕೆ ಬಂದು ಭಕ್ತಾಧಿಗಳು ಅರಕೆ ಹೊತ್ತರೆ ಆಂಜನೇಯ ಸ್ವಾಮಿ ಈಡೇರಿಸುತ್ತಾನೆ.ಸಂತಾನ ಇಲ್ಲದವರು ದೇವರಲ್ಲಿ ಪ್ರಾರ್ಥನೆ ಮಾಡಿದರೆ ಸಂತಾನ ಫಲಗಳು ಪ್ರಾಪ್ತಿಯಾಗುತ್ತೆ.ಮೋಕ್ಷ ಫಲಗಳು ಸಿಗುತ್ತೆ ಎಂದರು.ಪ್ರತಿ ವರ್ಷ ಹನುಮ ಜಯಂತಿ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಆಂಧ್ರ,ತಮಿಳುನಾಡು,ಕೇರಳ,ಹಾಸನ,ಚನ್ನರಾಯಪಟ್ಟಣ, ಕಾಳಹಸ್ತಿ ಇಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ.ಹನುಮ ಜಯಂತಿ ಪ್ರಯುಕ್ತ 20 ರಿಂದ 25 ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು…
ಚಿರು ಸರ್ಜಾ ಮತ್ತು ಮೇಘನಾ ರಾಜ್ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ ಸಮಸ್ತ ಜನತೆಗೆ ಕಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ತಾಯಿ ಮತ್ತು ಅಜ್ಜ ಅಜ್ಜಿಯೊಂದಿಗೆ ಕೋರಮಂಗಲ ಸಂತ ಫ್ರಾಯರಿ ಚರ್ಚ್ ಆಗಮಿಸಿದ್ದ ರಾಯನ್, ತಾಯಿಯ ಜೊತೆ ಜೊತೆಗೆ ಎಲ್ಲರಿಗೂ ಮೇರಿ ಕ್ರಿಸ್ಮಸ್ ಎಂದು ಶುಭಾಶಯ ತಿಳಿಸಿದರು. ಚರ್ಚ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷಕ್ಕೆ ಮತ್ತೆ ಕಾಲಿಡ್ತಿದ್ದೀವಿ. ಈ ಕ್ರಿಸ್ ಮಸ್ ಎಲ್ಲರಿಗೂ ಮಿರಾಕಲ್ ತರಲಿ. ಎಲ್ಲರೂ ಸೇಫ್ ಆಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ. ನಾನೆಲ್ಲಿದ್ದರೂ ನನ್ನ ಮಗ ಇರಲೇಬೇಕು. ನಾವಿಬ್ರು ಒಂಥರ ಬೆಸ್ಟ್ ಫ್ರೆಂಡ್ಸ್ ಇದ್ದಂಗೆ’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ರಾಯನ್ ರಾಜ್ ಸರ್ಜಾ ಮೇರಿ ಕ್ರಿಸ್ ಮಸ್ ಎಂದರು. ಅದನ್ನು ಕಂಡ ಮೇಘನಾ, ಇವನು ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರು ಮಾತ್ರ ಆಚರಿಸೋದಲ್ಲ.…
ಕೊಡಗು: ಚಾರಣಕ್ಕೆ ತೆರಳಿದ್ದ ಯುವಕ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ನಡೆದಿದೆ. ಹರಿಯಾಣ ಮೂಲದ ಜತಿನ್ (25) ಮೃತಪಟ್ಟ ಯುವಕ. ಜತಿನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. 5 ಮಂದಿ ಸ್ನೇಹಿತರ ಜೊತೆ ತಡಿಯಂಡಮೋಳ್ ಬೆಟ್ಟಕ್ಕೆ ಬಂದಿದ್ದನು. ಬೆಟ್ಟದ ಮೇಲೆ ತಲುಪಿದಾಗ ತೀವ್ರತರಹದ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುರ್ಗಮ ಹಾದಿಯಲ್ಲೆ ಪ್ರವಾಸಿಗನ ಮೃತದೇಹ ಹೊತ್ತು ತಂದಿದ್ದಾರೆ.
Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ (Ramlala Pran Pratishtha) ಕಾರ್ಯಕ್ಕೆ ಆಯೋಧ್ಯೆಗೆ ಅಯೋಧ್ಯೆಯೇ (Ayodhya) ಸಿಂಗಾರಗೊಳ್ಳುತ್ತಿದೆ. ರಾಮಮಂದಿರದಲ್ಲಿ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಯೋಧ್ಯೆಯನ್ನು ರಾಮಾಯಣದ ಕತೆಯಲ್ಲಿರುವ ಪ್ರತೀಕದಂತೆಯೇ ಸಜ್ಜುಗೊಳಿಸಲಾಗುತ್ತಿದೆ.ರಾಮಾಯಣ ಕಾಲದ ಬಹುದೊಡ್ಡ ಸಾಕ್ಷಿಯಾಗಿ ಉಳಿದಿರುವ ರಾಮ್ ಕೀ ಪೌರಿ (Ram ki Pauri) ಯನ್ನು ಸುಂದರವಾಗಿ ಅಲಂಕರಿಸುತ್ತಿದ್ದಾರೆ. ಈ ಜಾಗದ ಐತಿಹಾಸಿಕ ಹಿನ್ನೆಲೆ ರಾಮ ಭಕ್ತರಿಗೆ ತಿಳಿಸಲು ಎಲ್ಲ ರೀತಿಯ ಸಿದ್ಧತೆಗಳೂ ಶುರುವಾಗಿವೆ ರಾಮನ ಮೆಟ್ಟಿಲು (ರಾಮ್ ಕೀ ಪೌರಿ) ಎಂದರೇನು?: ಹಿಂದಿ ಭಾಷೆಯಲ್ಲಿ ಬರುವ ಪೌರಿಗೆ ಕನ್ನಡದಲ್ಲಿ ಮೆಟ್ಟಿಲು ಎಂದು ಅರ್ಥ. ರಾಮನ ಮೆಟ್ಟಿಲು ಎನ್ನುವುದು ಸರಯೂ ನದಿಯ ತಟದಲ್ಲಿರುವ ಪ್ರದೇಶ. ಹುಣ್ಣಿಮೆಯ ದಿನ ಈ ಜಾಗ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ. ಸರಯೂ ನದಿ ತಟದಲ್ಲಿರುವ ಈ ಘಟ್ಟದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲ ಪಾಪ ಕಳೆದುಹೋಗುತ್ತದೆ ಎಂಬುದು ಭಕ್ತರ ಪ್ರತೀತಿ. ಈ ಮೆಟ್ಟಿಲುಗಳ ಮೂಲಕ ಸರಯೂ ನದಿಯಲ್ಲಿ ಸ್ನಾನಕ್ಕಿಳಿಯಬಹುದು. ಪೌರಾಣಿಕ ಕಥೆಗಳ ಪ್ರಕಾರ, ಪ್ರಭು ಶ್ರೀರಾಮಚಂದ್ರನೂ ಕೂಡಾ ಇದೇ…
ದೆಹಲಿ: ಮಿಮಿಕ್ರಿ ಮಾಡುವುದು ಒಂದು ಕಲೆಯಾಗಿದ್ದು, ಬೇಕಿದ್ರೆ ನಾನು ಸಾವಿರ ಬಾರಿ ಅದನ್ನು ಮಾಡುತ್ತೇನೆ. ಹೀಗೆ ಮಾಡಲು ನನಗೆ ಹಕ್ಕಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಮತ್ತೆ ಉದ್ಧಟತನ ಮೆರೆದಿದ್ದಾರೆ. ಪಶ್ಚಿಮ ಬಂಗಾಳದ (West Bengal) ಶ್ರೀರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ , ಕ್ಷುಲ್ಲಕ ವಿಚಾರದಲ್ಲಿ ಅಸಮಾಧಾನಗೊಂಡಿದ್ದಕ್ಕಾಗಿ ಧನ್ಕರ್ ಅವರನ್ನು ಟೀಕಿಸಿದರು. ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲೆ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಬ್ಯಾನರ್ಜಿಯವರ ಮಿಮಿಕ್ರಿಯಿಂದ ರೈತ ಸಮುದಾಯಕ್ಕೆ ಅವಮಾನವಾಗಿದೆ ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagadeep Dhankar) ಹೇಳಿಕೆಯನ್ನು ಉಲ್ಲೇಖಿಸಿದ ಟಿಎಂಸಿ ಸಂಸದರು, ಧನ್ಕರ್ ಅವರು ಜೋಧ್‌ಪುರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ದೆಹಲಿಯಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ಅಲ್ಲದೇ ಅವರು ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸುತ್ತಾರೆ ಎಂದು…
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 1 ಲಕ್ಷ ಜನರು ಸಾಮೂಹಿಕವಾಗಿ ಭಗವದ್ಗೀತೆಯ (Bhagavad Gita) ಪವಿತ್ರ ಶ್ಲೋಕಗಳನ್ನು ಪಠಿಸಿ, ದಾಖಲೆ ಬರೆದಿದ್ದಾರೆ. ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಪಾಲ್ಗೊಂಡಿದ್ದ ವಿವಿಧ ವಯೋಮಾನದ ಜನರು ಸಾಂಪ್ರದಾಯಿಕ ಸ್ಥಳದಲ್ಲಿ ಸಮಾವೇಶಗೊಂಡು, ಪೂಜ್ಯ ಋಷಿಗಳೊಂದಿಗೆ ಪವಿತ್ರ ಪುಸ್ತಕದ ಶ್ಲೋಕಗಳನ್ನು ಪಠಿಸಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ‘ಭಗವದ್ಗೀತೆ ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಈ ಕಾರ್ಯಕ್ರಮವನ್ನು ಅಪಹಾಸ್ಯ ಮಾಡುವವರಿಗೆ ಹಿಂದೂ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಗೌರವವಿಲ್ಲ. ಹಿಂದೂಗಳನ್ನು ವಿಭಜಿಸಿದರೆ ಅವರ ಪ್ರಯತ್ನಗಳು ವಿಫಲವಾಗುತ್ತವೆ ಎಂದು ತಿಳಿಸಿದ್ದಾರೆ. ಬಂಗಾಳದ ಬಿಜೆಪಿ ಘಟಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕತ್ವದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 1,20,000 ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಭಾನುವಾರ ನಡೆದ ‘ಲೋಕೇ ಕೊಂಥೆ ಗೀತಾ ಪಥ’ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ…
ಕಠ್ಮಂಡು: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಆಗಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ವಿಶೇಷ ಉಡುಗೊರೆ ನೀಡಿ ವಿಶ್ ಮಾಡಲು ನೆರೆ ರಾಷ್ಟ್ರ ನೇಪಾಳ (Nepal) ಸಿದ್ಧತೆ ಮಾಡಿಕೊಂಡಿದೆ. ಅಯೋಧ್ಯೆಯಲ್ಲಿ ಹೊಸ ವರ್ಷದ ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ರಾಷ್ಟ್ರ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲಿದೆ. ಸ್ಮರಣಿಕೆಗಳನ್ನು ತಲುಪಿಸಲು ಜನಕಪುರಧಾಮ್-ಅಯೋಧ್ಯಧಾಮ ಪ್ರಯಾಣವನ್ನು ಕೈಗೊಳ್ಳಲಾಗುವುದು ಎಂದು ನೇಪಾಳದ ಮೈ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ. ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ. ಜನಕ್‌ಪುರಧಾಮ್‌ನಿಂದ ಜಲೇಶ್ವರನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮೂಲಕ…