Author: AIN Author

ಬೆಂಗಳೂರು: ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಹೊತ್ತಲ್ಲೇ ಕೊರೊನಾ ವೈರಸ್‌ (Corona Virus) ಮತ್ತೆ ಭೀತಿ ಹುಟ್ಟಿಸಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 106 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಇಂದು (ಭಾನುವಾರ) 33 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಇಂದು ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 344 ಕ್ಕೆ ಏರಿಕೆಯಾಗಿದೆ. ಪಾಸಿಟಿವಿ ರೇಟ್‌ ಕೂಡ ಏರಿಕೆ ಕಂಡಿದ್ದು, 7.35 % ಆಗಿದೆ ಬೆಂಗಳೂರು ನಗರದಲ್ಲಿ ದಿನೇ ದಿನೇ ಕೊರೊನಾ (Covid-19) ಕೇಸ್‌ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇಂದು ನಗರದಲ್ಲಿ 95 ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ. ಆ ಮೂಲಕ ದಿನದ ಕೇಸ್‌ ಶತಕದ ಸನಿಹಕ್ಕೆ ತಲುಪಿದೆ. ಚಾಮರಾಜನಗರದಲ್ಲಿ 1, ದಕ್ಷಿಣ ಕನ್ನಡದಲ್ಲಿ 2, ಮಂಡ್ಯದಲ್ಲಿ 1, ಮೈಸೂರಿನಲ್ಲಿ 6, ಶಿವಮೊಗ್ಗದಲ್ಲಿ 1 ಪ್ರಕರಣ ವರದಿಯಾಗಿದೆ. ಕೊರೊನಾದಿಂದಾಗಿ ಇಂದು 323 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 21 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 7 ಮಂದಿ ಐಸಿಯುನಲ್ಲಿದ್ದಾರೆ

Read More

ಬೆಂಗಳೂರು : ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ 18.50 ಕೋಟಿ ಜಾಹೀರಾತು ನೀಡಿ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ಬರದಿಂದ ಬಸವಳಿದ ರೈತರ ಪರಿಹಾರಕ್ಕೆ ಹಣವಿಲ್ಲ. ಆದರೆ, ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆಯಲು ಮಾತ್ರ ಸ್ವಯಂ ಘೋಷಿತ ಆರ್ಥಿಕ ತಜ್ಞ ಅಲಿಯಾಸ್ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಕೋಟಿ ಕೋಟಿ ಹಣವಿದೆ’ ಎಂದು ಕುಟುಕಿದೆ. ‘ಅಭಿವೃದ್ಧಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಘೋಷಿಸಿದ ಗ್ಯಾರಂಟಿಗಳನ್ನು ನೀಡುವುದಕ್ಕೂ ಹಣವಿಲ್ಲ. ಶಾಸಕರಿಗೆ ಅನುದಾನ ಕೊಡುವುದಕ್ಕೂ ಹಣವಿಲ್ಲ. ಭಲೇ ಭಲೆ ಮಜವಾದಿ ಸಿದ್ದರಾಮಯ್ಯ ಸರ್ಕಾರ’ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಮೂದಲಿಸಿದೆ. ‘ಆರು ತಿಂಗಳಲ್ಲಿ ಸರ್ಕಾರದ ಸಾಧನೆ ಏನೇನೂ ಇಲ್ಲ. ಆದರೂ ಕೂಡ ಜಾಹೀರಾತಿಗಾಗಿ ಬರೊಬ್ಬರಿ 18.50 ಕೋಟಿ‌ ರೂ. ವ್ಯಯ ಮಾಡಲಾಗಿದೆ. ಕಾಂಗ್ರೆಸ್​ ಶೋಕಿ,‌ ಮೋಜು, ಮಸ್ತಿ ಮಾಡುತ್ತಿದೆ. ಇಲ್ಲದ ವಿವಾದಗಳನ್ನು ಮುನ್ನಲೆಗೆ ತಂದು ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿರುವ ಸರ್ಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ, ಥೂ ಎಂದು ಮಾತನಾಡುತ್ತಿದ್ದಾರೆ. ಸರ್ಕಾರ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರ ಎಂದು ಟೀಕಿಸಿದ್ದಾರೆ ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಈವರೆಗೆ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. 15-20 ಸಾವಿರ ರೂ.ಗೆ ಯಾರೂ ಬರದೆ ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ…

Read More

ಬೆಂಗಳೂರು: ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುವಿನ ಜನ್ಮದಿನದ ಆಚರಣೆಯೇ ಕ್ರಿಸ್ಮಸ್ (Christmas). ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನ ಕೇಳುವಂತವನಾಗಿರಬೇಕು ಎನ್ನುವುದೇ ಹಬ್ಬದ ಮುಖ್ಯ ಧ್ಯೇಯ. ಪ್ರತಿ ವರ್ಷ ಡಿಸೆಂಬರ್‌ 25ರಂದು ದೇಶಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್‌ ಹಬ್ಬವನ್ನು (Christmas Festival) ಆಚರಿಸುತ್ತಾರೆ. ವಿವಿಧ ಚರ್ಚ್‌ಗಳಲ್ಲಿ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆ ಭಾರೀ ಗಾತ್ರದ ಕೇಕ್‌ಗಳನ್ನು ಕತ್ತರಿಸುತ್ತಾರೆ. ಪ್ರಮುಖ ನಗರದ ಮಾಲ್‌ಗಳಲ್ಲಿಯೂ ವಿಶೇಷ ಕ್ರಿಸ್ಮಸ್‌ ದೀಪಾಲಂಕಾರ, ಕ್ರಿಸ್ಮಸ್‌ ಟ್ರೀ (Christmas Tree) ಸ್ಥಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ ಈ ಬಾರಿ ಏನು ವಿಶೇಷ? ಈ ಬಾರಿಯ ಕ್ರಿಸ್ಮಸ್‌ ಹಬ್ಬಕ್ಕೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್‌ ಮಾಲ್‌ ಆಫ್‌ ಏಷ್ಯಾದಲ್ಲಿ ದೇಶದಲ್ಲೇ ಅತಿದೊಡ್ಡ 100 ಅಡಿ ಎತ್ತರದ ಕ್ರಿಸ್ಮಸ್‌ ಟ್ರೀಯನ್ನು ಅನಾವರಣಗೊಳಿಸಲಾಗಿದೆ. ಇದರೊಂದಿಗೆ ನೀರು ಹಾಗೂ ಸಂಗೀತ ಕಾರಂಜಿಯನ್ನೂ ಆಯೋಜಿಸಲಾಗಿದೆ. ಇದರ ಪಕ್ಕದಲ್ಲೇ ಸಾಂತಾಕ್ರೂಸ್‌ ವೇಶದಲ್ಲಿರುವ ವ್ಯಕ್ತಿಗೆ ಕ್ರಿಸ್ಮಸ್‌ ವಿಶ್‌ ಮಾಡುವ ಮೂಲಕ ಜನರು…

Read More

ಬೆಂಗಳೂರು : ರಾಜ್ಯದಲ್ಲಿ ಕೊವಿಡ್​​ ಪ್ರಕರಣಗಳ ಸಂಖ್ಯೆ 300ರ ಗಡಿದಾಟಿದೆ. ರಾಜ್ಯದಲ್ಲಿ ಒಟ್ಟು 344 ಸಕ್ರಿಯ ಕೊವಿಡ್ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ (ಇಂದು ಹೊಸದಾಗಿ) 106 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 7.35% ಕೊವಿಡ್ ಪಾಸಿಟಿವ್ ರೇಟ್ ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ 1,441 ಟೆಸ್ಟ್‌ಗಳನ್ನು ಮಾಡಲಾಗಿದ್ದು, 1135 RTCPR ಹಾಗೂ 306 RAT ಟೆಸ್ಟ್‌ಗಳನ್ನ ಮಾಡಲಾಗಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೂ 297 ಪ್ರಕರಣಗಳು ವರದಿಯಾಗಿವೆ. ಒಟ್ಟು 343 ಸಕ್ರಿಯ ಪ್ರಕರಣಗಳಲ್ಲಿ 323 ಸೋಂಕಿತರು (ಪ್ರಕರಣ) ಹೋಂ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. 21 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 7 ಸೋಂಕಿತರಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ 6 ಪ್ರಕರಣ ಪತ್ತೆ ಬೆಂಗಳೂರಿನಲ್ಲಿ 95 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಮೈಸೂರಿನಲ್ಲಿ 6, ಮಂಡ್ಯದಲ್ಲಿ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಶಿವಮೊಗ್ಗ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದು…

Read More

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಯುನೆಸ್ಕೋದ ವಿಶೇಷ ವಿಶ್ವ ಮನ್ನಣೆ ಸಿಕ್ಕಿದೆ. ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ‌ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಇದೂ ಒಂದು ಎಂಬ ಕೀರ್ತಿಗೆ ನಮ್ಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ ಎಂದು ಕಳೆದ ವರ್ಷ ಟರ್ಮಿನಲ್ ಕಟ್ಟಡ ಉದ್ಘಾಟನೆಯ ಫೋಟೋಗಳನ್ನ ಶೇರ್‌ ಮಾಡಿ ಮೋದಿ ಹರ್ಷವನ್ನ ವ್ಯಕ್ತಪಡಿಸಿದ್ದಾರೆ. ಉತ್ಸಾಹಭರಿತ ನಗರದ ಜೊತೆಗೆ ವಾಸ್ತುಶಿಲ್ಪದಲ್ಲಿ ತನ್ನ ಜಾಣ್ಮೆಯನ್ನ ಇಲ್ಲಿ ತೋರಿಸಲಾಗಿದೆ. ಇದು ಭಾರತಕ್ಕೆ ಹೆಮ್ಮೆ ಎಂದು ಪ್ರಧಾನಿಗಳು ಶ್ಲಾಘಿಸಿದ್ದಾರೆ. ‘ಶ್ಲಾಘನೀಯ ಸಾಧನೆ! ಬೆಂಗಳೂರಿನ ಜನತೆಗೆ ಅಭಿನಂದನೆಗಳು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಕೇವಲ ರೋಮಾಂಚಕ ನಗರವಾದ ಬೆಂಗಳೂರಿನ ಹೆಬ್ಬಾಗಿಲು ಮಾತ್ರವಲ್ಲದೆ, ವಾಸ್ತುಶಿಲ್ಪದ ವೈಭವದ ಪ್ರದರ್ಶನವಾಗಿದೆ. ಈ ಸಾಧನೆಯು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಕಲಾತ್ಮಕ ಸೌಂದರ್ಯದೊಂದಿಗೆ ಸಂಯೋಜಿಸುವಲ್ಲಿ ದೇಶದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ಟರ್ಮಿನಲ್ ಕಟ್ಟಡದ ಉದ್ಘಾಟನೆಯ ಝಲಕ್ ಇಲ್ಲಿದೆ’ ಎಂದು…

Read More

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸಿನಿಮಾ ಶೈಲಿಯಲ್ಲಿ ಕಿಲೋಮೀಟರ್‌ಗಟ್ಟಲೇ ರೌಡಿಶೀಟರ್​ ಅನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಬೆಂಗಳೂರಿನ ಲಕ್ಕಸಂದ್ರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಜೈಪ್ರಕಾಶ್ ಅಲಿಯಾಸ್ ಅಪ್ಪಿ ಕೊಲೆಯಾದ ರೌಡಿಶೀಟರ್. ಸಂಜೆ 7 ಗಂಟೆ ಸುಮಾರಿನಲ್ಲಿ ಐದಾರು ದುಷ್ಕರ್ಮಿಗಳ ಗುಂಪು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಹನುಮ ಜಯಂತಿ ಹಿನ್ನೆಲೆ ಜೈಪ್ರಕಾಶ್ ಲಕ್ಕಸಂದ್ರ ಬಸ್ ನಿಲ್ದಾಣದ ಬಳಿ ಆಂಜನೇಯ ದೇವಸ್ಥಾನದಲ್ಲಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ ಐದಾರು ಜನ ಆತನನ್ನು ಗಮನಿಸಿದ್ದಾರೆ. ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಜೈಪ್ರಕಾಶ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ಜೈಪ್ರಕಾಶ್​ನನ್ನು ಹಂತಕರು ಸುಮಾರು ಕಿಲೋಮೀಟರ್ ದೂರ ಅಟ್ಟಿಸಿಕೊಂಡು ಬಂದಿದ್ದಾರೆ. ಹೀಗಾಗಿ, ಆತ ಹೋಟೆಲ್ ಒಳಗೆ ಹೋಗಿದ್ದಾನೆ. ಆದರೂ ಬಿಡದೇ ಸಾರ್ವಜನಿಕರ ಮುಂದೆಯೇ ಪಾಪಿಗಳು ಆತನನ್ನು ಕೊಚ್ಚಿ ಕೊಲೆಗೈದಿದ್ದಾರೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ, ಎಫ್‍ಎಸ್‍ಎಲ್…

Read More

ಬೆಳಗಾವಿ: ಪದೇಪದೆ ಬರಗಾಲ ಬರಲಿ ಅಂತ ರೈತರಿಗೆ ಆಸೆ ಅವರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಮತ್ತೆ ರೈತರ ಮೇಲೆ ನಾಲಗೆ ಹರಿಬಿಟ್ಟು ಹಗುರವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲರೇ ಮಾತನಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬರಗಾಲ ಬರಲೆಂದು ರೈತರು ದಾರಿ ಕಾಯುತ್ತಿದ್ದಾರೆ ಅವರ ನಿರೀಕ್ಷೆ ಸಾಲಮನ್ನಾ ಎಂದು ರೈತರ ಬಗ್ಗೆ ಕಾಳಜಿಯಿಲ್ಲದೇ ಮಾತನಾಡಿದ್ದರು. ಈ ಹಿಂದೆ ಅವರ ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರ ಆತ್ಮಹತ್ಯೆ ಬಗ್ಗೆ ವಿವಾತ್ಮಾಕ ಹೇಳಿಕೆ ನೀಡಿ ರೈತರ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದರು. ಇವರಿಗೆ ಅನ್ನದಾತರ ಸಂಕಷ್ಟದ ಬಗ್ಗೆ ಅರಿವಿಲ್ಲ ಒಬ್ಬ ಸಚಿವರಾಗಿ ಈ ರೀತಿ ಮಾತನಾಡಬಾರದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಬಾಗಲಕೋಟೆ:  ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಮಂಗಳವಾರ ಪೇಟೆಯಲ್ಲಿರುವ ಶ್ರೀ ಗುರು ವೀರಭದ್ರೇಶ್ವರ ಸ್ವಾಮಿಯ 93 ನೇ ವರ್ಷದ ಕಾರ್ತಿಕೋತ್ಸವವು ಇದೇ ಬರುವ 27 ಡಿಸೆಂಬರ್ 2023 ರಂದು ಬುಧವಾರ ದಿವಸ ಅದ್ದೂರಿಯಾಗಿ ನಡೆಯಲಿದೆ. ಅಂದು ಬೆಳ್ಳಗಿನ ಜಾವ ಬನಹಟ್ಟಿಯ ಹಿರೇಮಠದ ಶ್ರೀ ಗಳಿಂದ ಸಕಲ ವಿಧಿ ವಿಧಾನಗಳೊಂದಿಗೆ ಶ್ರೀ ವೀರಭದ್ರ ಸ್ವಾಮಿಗೆ ರುದ್ರಾಭಿಕ್ಷಕ ಬುತ್ತಿ ಪೂಜೆ,ಅಗ್ನಿ ಪುಟ್ಟ ಪ್ರಾರಂಭ ನಂತರ ಮಧ್ಯಾಹ್ನ 12 ಕ್ಕೆ ಸೋಮವಾರ ಪೇಟೆಯ ಬಡಿಗಣಿ ರವರ ಮನೆಯಿಂದ ಶ್ರೀ ರಾಚೋಟೆಶ್ವರ ಪಲ್ಲಕಿ ಉತ್ಸವ ಪ್ರಮುಖ ರಸ್ತೆ ಮಾರ್ಗವಾಗಿ ದೇವಸ್ಥಾನದ ಮುಂಭಾಗದ ಅಗ್ನಿ ಪ್ರವೇಶಿಸುತ್ತದೆ, ಸಂಜೆ 6 ಕ್ಕೆ ಹೂವಿನ ಅಲಂಕಾರದಲ್ಲಿಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ರಾಚೋಟೆಶ್ವರರ ಪಲ್ಲಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಈಶ್ವರಲಿಂಗ ಮೈದಾನ ತಲುಪಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವೀರಗಾಸೆ ಪುರವಂತರ ವೀರಭದ್ರನ ಒಡಪು ಹೇಳುವ ಮೂಲಕ ವಿರಾಟ ಸೇವೆಯೊಂದಿಗೆ ಸಂಪನ್ನಗೊಳ್ಳುತ್ತದೆ ಎಂದು ಕಾರ್ತಿಕೋತ್ಸವ ಕಮಿಟಿ ಹಿರಿಯರಾದ ಪಂಡಿತ…

Read More

ಹುಬ್ಬಳ್ಳಿ;ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ ಅವರದು ಸ್ಟ್ಯಾಂಡ್ ಅಂದ್ರೆ ಬಸ್ಟ್ಯಾಂಡ್ ಇದ್ದ ಹಾಗೆ.. ಯಾರ ಬೇಕಾದರೂ ಏನಾದರೂ ಮಾತಾಡ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.ಮದ್ಯಪ್ರದೇಶದಲ್ಲಿ ಹನುಮಾನ್ ಚಾಲೀಸ್ ಮಾಡೋಕೆ ಹೋದ್ರು.. ರಾಹುಲ್ ಗಾಂಧಿ ಜನಿವಾರ ಹಾಕಿದ್ರು ಎಂದರುಮುಖ್ಯಮಂತ್ರಿ ಸಿದ್ದರಾಮಯ್ಯನಾವೇನಾದರ ಕೋಟಿ ಕೊಡ್ತೀನಿ ಅಂತಾರೆ ಮಾಜಿ ಪ್ರಧಾನಿಮನಮೋಹನ ಸಿಂಗ್ ಅವರು ಬಜೆಟ್ ಮೇಲೆ ಮುಸಲ್ಮಾನರಿಗೆ ಹಕ್ಕಿದೆ ಅಂತಾರೆ ಆದರೆಮುಸಲ್ಮಾನರನ್ನು ತಪ್ಪು ದಾರಿಗೆ ಎಳೆಯೋದು ಗೊತ್ತಾಗತ್ತೆ.ಎಲ್ಲಿಯೂ ಹಿಜಾಬ್ ಬ್ಯಾನ ಇಲ್ಲ.. ಇದನ್ನು ಮಾದ್ಯಮದವರು ಸರಿಯಾಗಿ ಅನಾಲಿಸಿಸ್ ಮಾಡಬೇಕುವಸ್ತ್ರ ಸಂಹಿತೆ ಬಿಟ್ಟು ಹಿಜಾಬ್ ಹಾಕ್ತೀವಿ ಅಂದ್ರೆ ನಾಳೆ ಒಬ್ರು ಕೇಸರಿ ಶಾಲು ಹಾಕೊಂಡು ಬರ್ತೀನಿ ಅಂತಾರೆಸಿದ್ದರಾಮಯ್ಯ ನವರೇ ಏನ ಮಾಡೋಕೆ ಹೊರಟಿದ್ದರಿ ನಿಮ್ದು ಮುಠ್ಠಾಳತನವೋ ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ತರ ಹೇಳಿಕೆ ಕೊಡ್ತಿದಿರೋ..ಸಮಾಜ ಒಡೆದು ವೋಟ್ ತಗೆದುಕೊಳ್ಳಬೇಕು ಅನ್ನೋದಾ. ಒಂದು ಕರ್ನಾಟಕ,ಹಿಮಾಚಲ ಪ್ರದೇಶ ತೆಲಂಗಾಣದಲ್ಲಿ ಮಾತ್ರ ನೀವಿರೋದು ಎಂದ ಅವರು ಇದು ನಿಮ್ಮ ಸ್ಥಿತಿ,ಹೀಗೆ ನೀವು…

Read More