ಬೆಂಗಳೂರು:- ಕೇವಲ ಡೆತ್ ನೋಟ್ ಪರಿಗಣಿಸಿ ಆರೋಪಿಗೆ ಶಿಕ್ಷೆ ನೀಡಲ್ಲ, ಅದಕ್ಕೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ ಆತ್ಮಹತ್ಯೆ ನೋಟ್‍ನಲ್ಲಿ ವ್ಯಕ್ತಿಯ ಹೆಸರು ಇದ್ದ ಮಾತ್ರಕ್ಕೆ ಆತ ಆರೋಪಿಯೆಂಬ ತೀರ್ಮಾನ ಸಲ್ಲ. ಆತ ನಿಜಕ್ಕೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಂಪೂರ್ಣ ತನಿಖೆ ಅತ್ಯಗತ್ಯ ಎಂದರು. ನ್ಯಾ. ವೆಂಕಟೇಶ್ ಟಿ.ನಾಯಕ್ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ. ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಆತ್ಮಹತ್ಯೆ ಪ್ರಕರಣಗಳಲ್ಲಿ ಸಿಗುವ ಸೂಸೈಡ್ ನೋಟ್‍ಗಳಲ್ಲಿ ಕೆಲವು ಸಲ ವ್ಯಕ್ತಿಯ ಹೆಸರು ಉಲ್ಲೇಖವಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮೊದಲಿಗೆ ತನಿಖೆ ನಡೆಸಿ ನೋಟ್‍ನಲ್ಲಿನ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸುವ ಬದಲು ತಕ್ಷಣಕ್ಕೆ ಐಪಿಸಿ 306ರಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಅಪರಾಧ ಎಸಗಿದ್ದಾರೆನ್ನುವಂತೆ ಭಾವಿಸಿ ಅವರನ್ನು ಬಂಧಿಸುವುದು ಮಾಮೂಲಿಯಾಗಿದೆ. ಡೆತ್ ನೋಟ್‍ನಲ್ಲಿನ ಅಂಶಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ, ನಿಜವಾಗಿಯೂ ಆತ್ಮಹತ್ಯೆಗೆ ಆ ವ್ಯಕ್ತಿ ಪ್ರಚೋದನೆ ನೀಡಿದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ಸತ್ಯಾಂಶ ಅರಿಯಲು…
Author: AIN Author
ಈ ತೀವ್ರ ಚಳಿಯಲ್ಲಿ 45 ವರ್ಷ ಮೇಲ್ಪಟ್ಟವರು ರಾತ್ರಿ 10 ಗಂಟೆಗೆ ಮಲಗಿದ ತಕ್ಷಣ ಏಳಬಾರದು ಎಂದು ಹೇಳುತ್ತಿದ್ದೇನೆ. ಏಕೆಂದರೆ ಶೀತದಿಂದ ದೇಹದ ರಕ್ತ ದಪ್ಪವಾಗುತ್ತದೆ, ನಂತರ ನಿಧಾನವಾಗಿ ಕೆಲಸ ಮಾಡುವುದರಿಂದ ಹೃದಯವನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗದೆ ದೇಹವು ಹೊರಗುಳಿಯುತ್ತದೆ. ಈ ಕಾರಣಕ್ಕಾಗಿ, 40 ವರ್ಷ ವಯಸ್ಸಿನ ಜನರು ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಚಳಿಗಾಲದ ತಿಂಗಳುಗಳಲ್ಲಿ ಹೃದಯ ಸ್ತಂಭನದಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳನ್ನು ಹೊಂದಿರುತ್ತಾರೆ, ಆದ್ದರಿಂದ ನಾವು ಅತ್ಯಂತ ಜಾಗರೂಕರಾಗಿರಬೇಕು. ನಾನು ಅದನ್ನೇ ಸೂಚಿಸುತ್ತೇನೆ. ಬೆಳಿಗ್ಗೆ ಅಥವಾ ರಾತ್ರಿ ಮಲಗುವಾಗ ಮೂತ್ರ ವಿಸರ್ಜನೆ ಮಾಡಬೇಕಾದವರಿಗೆ ವಿಶೇಷ ಮಾಹಿತಿ ಈ ಮೂರೂವರೆ ನಿಮಿಷದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾಗರೂಕರಾಗಿರಬೇಕು. ಅದು ಏಕೆ ಮುಖ್ಯ? ಈ ಮೂರೂವರೆ ನಿಮಿಷಗಳು ಅಪಘಾತದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಅಂತಹ ಘಟನೆಗಳು ಸಂಭವಿಸಿದಾಗಲೆಲ್ಲಾ, ಪರಿಣಾಮವಾಗಿ ಆರೋಗ್ಯವಂತರು ಸಹ ರಾತ್ರಿಯಲ್ಲಿ ಸತ್ತರು. ಅಂತಹವರ ಬಗ್ಗೆ ನಾವು ನಿನ್ನೆಯಷ್ಟೇ ಮಾತನಾಡಿದ್ದೇವೆ ಎಂದು ಹೇಳುತ್ತೇವೆ. ಇದ್ದಕ್ಕಿದ್ದಂತೆ ಏನಾಯಿತು? ಅದು ಹೇಗೆ…
ಹೊಸದಿಲ್ಲಿ :- ಸಮಾಜದ ವಂಚಿತ ವರ್ಗಗಳನ್ನು ಗೌರವಿಸುವುದು ಮತ್ತು ಸಶಕ್ತೀಕರಣ ಕೇಂದ್ರದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಅವಧಿಯಲ್ಲಿ ಇಂದೋರ್‌ನಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದರು. ತಮ್ಮ ನೇತೃತ್ವದ ಸರಕಾರ ಅಧಿಕಾರವನ್ನು ಸೇವಾ ರೂಪದಲ್ಲಿ ಭಾವಿಸಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ ಪಂಡಿತ ಮದನಮೋಹನ ಮಾಳವೀಯ ಅವರ ಬಗ್ಗೆ 11 ಭಾಗಗಳಲ್ಲಿ ಮುದ್ರಿತವಾಗಿರುವ ಕೃತಿಯ ಮೊದಲ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. ರಾಷ್ಟ್ರದ ನಿರ್ಮಾಣ ಕ್ಕಾಗಿಯೇ ಹಲವು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅವುಗಳು ಉತ್ತಮ ರೀತಿಯಲ್ಲಿ ದೇಶಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದ್ದಾರೆ.
ಶಿರಸಿ:- ಗ್ಯಾರಂಟಿಯಿಂದ ಭಾರ ಬಿದ್ದಿ, ತೆರಿಗೆ ಹೆಚ್ಚಾಗಬಹುದು ಎಂದು ಸಚಿವ ಎಚ್.ಕೆ. ಪಾಟೀಲ್ ಸುಳಿವು ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಯಿಂದ ನಮಗೆ ಭಾರ ಬಿದ್ದಿದೆ. ಚಾಣಾಕ್ಷ ನೀತಿಯಿಂದ ಇದನ್ನು ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು’ ಎಂದರು. ಲೋಕಸಭೆ ಚುನಾವಣೆ ಹಿನ್ನೆಲೆ ಯಾರು ಅಭ್ಯರ್ಥಿ ಆದರೆ ಸೂಕ್ತ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು. ಉತ್ತರ ಕನ್ನಡದಿಂದ ಆರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು. ಅಭ್ಯರ್ಥಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಜವಾಬ್ದಾರಿ ನೀಡಿದ್ದಾರೆ. ಈಗಾಗಲೇ ಅಂಕೋಲಾದಲ್ಲಿ ಸಭೆ ನಡೆಸಿ ಸಾಕಷ್ಟು ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದೇನೆ. ಅದರಂತೆ ಈಗ ಶಿರಸಿಯಲ್ಲೂ ಸಭೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದೇನೆ. ಪಕ್ಷದಿಂದ ಆರು ಅಭ್ಯಥಿಗಳು ಆಕಾಂಕ್ಷೆ ಹೊಂದಿದ್ದಾರೆ ಎಂಬುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ…
ಕಲಬುರಗಿ:- ಚಿತ್ತಾಪುರದಲ್ಲಿ ನಡೆದಿದ್ದ ತರಕಾರಿ ವ್ಯಾಪಾರಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೋಲೀಸರು ಬಂಧಿಸಿದ್ದಾರೆ. ಪ್ರಮುಖ A1 ಆರೋಪಿ ಆಶೀಫ್ ಸೇರಿ ನಾಲ್ವರು ಲಾಕ್ ಆಗಿದ್ದಾರೆ.. ಮೃತ ದಾವಲಸಾಬ್ ಆರೋಪಿ ಆಶೀಫನ ತಂಗಿಯನ್ನ ಚುಡಾಯಿಸಿದ್ದೇ ಕೊಲೆಗೆ ಕಾರಣ ಅಂತ ವಿಚಾರಣೆ ವೇಳೆ ಗೊತ್ತಾಗಿದೆ.. ಡಿಸೆಂಬರ್ 23 ರಂದು ಕೊಲೆ ನಡೆದಿದ್ದು ಕೊಲೆ ನಂತ್ರ ಆರೋಪಿಗಳು ಶವಸುಟ್ಟಿದ್ದರು..ತನಿಖೆ ಕೈಗೊಂಡ ಪೋಲೀಸರು 48 ಗಂಟೆಯಲ್ಲಿ ಪಾತಿಕಗಳ ಹೆಡೆಮುರಿ ಕಟ್ಟಿದ್ದಾರೆ..
2023-24ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಕರ್ನಾಟಕ ರಾಜ್ಯದ ಅರ್ಹ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ https://Sevasindhuservices.karnataka.gov.in/sevasindhu/departmentservices ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 20 ರವರೆಗೆ ನಿಗಧಿಪಡಿಸಲಾಗಿತ್ತು. ಈ ಅವಧಿಯನ್ನು 2023 ರ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು. ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಕ್, ಬೌದ್ಧ, ಪಾರ್ಸಿ). ವಿದ್ಯಾರ್ಥಿಯ ಕೋರ್ಸ್ ಪೂರ್ಣಕಾಲಿಕವಾಗಿರಬೇಕು. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯವು ಕನಿಷ್ಠ ರೂ.6.00/- ಲಕ್ಷಗಳನ್ನು ಮತ್ತು ಗರಿಷ್ಠ ರೂ.15.00/- ಲಕ್ಷಗಳನ್ನು ಮೀರಿರಬಾರದು. ವಿದ್ಯಾರ್ಥಿಯ ಗರಿಷ್ಠ ವಯೋಮಿತಿ 38 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು 2023 ರ ಡಿಸೆಂಬರ್ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ, ಜಿಲ್ಲಾ ಮಾಹಿತಿ/ತಾಲ್ಲೂಕು ಮಾಹಿತಿ ಸಂಪರ್ಕಿಸುವುದು. ಜಿಲ್ಲಾ ಕಛೇರಿ, ದೇವನಹಳ್ಳಿ ದೂರವಾಣಿ ಸಂಖ್ಯೆ-080-29787455, ದೊಡ್ಡಬಳ್ಳಾಪುರ ತಾಲ್ಲೂಕು ಮಾಹಿತಿ ಕೇಂದ್ರ ದೂರವಾಣಿ ಸಂಖ್ಯೆ-9986874875, ನೆಲಮಂಗಲ…
ಈ ಎಂಟು ರಾಶಿಗಳಿಗೆ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ನಿಮಗೆ ಉದ್ಯೋಗ ಸಿಗಲಿದೆ, ಮಂಗಳವಾರ-ರಾಶಿ ಭವಿಷ್ಯ ಡಿಸೆಂಬರ್-26,2023 ದತ್ತಾತ್ರೇಯ ಜಯಂತಿ,ಪೂರ್ಣಿಮಾ ಸೂರ್ಯೋದಯ: 06.39 AM, ಸೂರ್ಯಾಸ್ತ : 06.01 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಚತುರ್ದಶಿ 05:46 AM ತನಕ ನಂತರ ಹುಣ್ಣಿಮೆ ನಕ್ಷತ್ರ: ಇವತ್ತು ಮೃಗಶಿರ 10:21 PM ತನಕ ನಂತರ ಆರ್ದ್ರಾ ಯೋಗ: ಇವತ್ತು ಶುಭ 04:23 AM ತನಕ ನಂತರ ಶುಕ್ಲ ಕರಣ: ಇವತ್ತು ವಣಿಜ 05:46 AM ತನಕ ನಂತರ ವಿಷ್ಟಿ 05:51 PM ತನಕ ನಂತರ ಬವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 01.18 PM to 02.56 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:38…
ಕುಂದಗೋಳ : ಕುಂದಗೋಳ ಹರಭಟ ಪ್ರೌಢ ಶಾಲೆಯ ಕುಂದಗೋಳ ಇದರ 2006 ಮತ್ತು 2007 ಸಾಲಿನ ಎಸ್ ಎಸ್ ಎಲ್ ಸಿ ಹಳೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಬಳಗದಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವು ಡಿ.24 ರಂದು ಕುಂದಗೋಳ ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣಪುರಮಠದಲ್ಲಿ ಜರುಗಿತು. ಹಳೇ ವಿದ್ಯಾರ್ಥಿಗಳಿಯಿಂದ ಗುರುಗಳಿಗೆ ಸನ್ಮಾನ ಕಾರ್ಯಕ್ರಮವು ಜರುಗಿತು. ಸನ್ಮಾನ ಸ್ವೀಕರಿಸಿದ ಮಾತನಾಡಿದ ಶಿಕ್ಷಕ ಸಿ ಎಂ ಶಿಂದೆ ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಲು ನಾವು ನಮ್ಮಲ್ಲಿ ಕಲಿಯುವಾಗ ಸಾಕಷ್ಟು ಶೈಕ್ಷಣಿಕ ಹಾಗೂ ಇನ್ನಿತರ ಪಾಠಗಳಲ್ಲಿ ಅವರಿಗೆ ಬೋಧನೆ ಮಾಡಿದ್ದೇವೆ ಇದೀಗ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ನಾನಾ ರೀತಿ ಕೆಲಸಗಳಲ್ಲಿ ತೊಡಗಿಕೊಂಡು ಇದೀಗ ನಮ್ಮನ್ನೆಲ್ಲರನ್ನು ಕರೆಸಿ ಸನ್ಮಾನ ಮಾಡಿ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು.ಸಿ.ಎಮ್. ಶಿಂದೆ ಹೇಳಿದರು ಈ ಸಂದರ್ಭದಲ್ಲಿ ಗುರುಗಳಾದ ಆರ್ ಸಿ ಪಾಟೀಲ್ ಎಂ ಎಸ್ ರೇವಣ್ಣವರ ವಿ ಎಂ ಮಂಟೂರ ಬಿ ಎಫ್ ಬಳಗಾನೂರ ಎಸ್ ಬಿ ಧಾರವಾಡ ಎಂ ಎ ಮುಲ್ಲಾ…
ಹುಬ್ಬಳ್ಳಿ; ಭಾರತದ ಭವ್ಯತೆ, ಪ್ರಮುಖ ವಿಚಾರಗಳ ಏಕತೆ , ಶೈಲಿಗಳು ಮತ್ತು ವೇಷಭೂಷಣಗಳನ್ನು ಪ್ರತಿಬಿಂಬಿಸುವ ಪ್ರದರ್ಶನ ಕಲೆ ಶಾಸ್ತ್ರೀಯ ನೃತ್ಯ. ನೃತ್ಯದ ಮೂಲಕ ನಮ್ಮ ಸನಾತನ ಧರ್ಮದ ಇತಿಹಾಸ, ಸುಂದರ ಸಂಸ್ಕಾರವನ್ನು ಪ್ರತಿಪಾದಿಸುತ್ತಾ ಕಲಾ ಸೇವೆಯ ಹಾದಿಯಲ್ಲಿ ನಡೆದುಬಂದ ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯ ಅತಿ ನಿರೀಕ್ಷಿತ ನೃತ್ಯೋಸ್ವವ ಮಯೂರೋತ್ಸವ 2023 ಸೋಮವಾರ ಡಿಸೆಂಬರ್ ೨೫ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ವೈಭವದಿಂದ ಮೂಡಿ ಬಂದಿತು. ಸುಮಾರು 400 ಜನ ನೃತ್ಯ ಪಟುಗಳ ಕಿಂಕಿಣಿಗಳ ನಾದ, ನಿನಾದ, ಅವರ ಹಾವಭಾವನೆಗಳಿಂದ ಗಂಧರ್ವ ಲೋಕವನ್ನೇ ಪ್ರತಿಬಿಂಬಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ ಹಾಗೂ ಖ್ಯಾತ ಉದ್ಯಮಿಗಳಾದ ಶ್ರೀಯುತ ಅನಂತಪದ್ಮನಾಭ ಐತಾಳ ಅವರು ಆಗಮಿಸಿದ್ದರು. ಪ್ರಖ್ಯಾತ ಇತಿಹಾಸ ತಜ್ಞರಾದ ಡಾ. ಕರುಣಾ ವಿಜಯೇಂದ್ರ ಅವರನ್ನು ಮಯೂರ ಪುರಸ್ಕಾರದಿಂದ ಸತ್ಕರಿಸಲಾಯಿತು. ಸನ್ಮಾನಿತರಾದ ಮಹೇಶ ಟೆಂಗಿನಕಾಯಿಯವರು ಶಾಸ್ತ್ರೀಯ ಸಂಗೀತ ಹಾಗೂ ನೃತ್ಯದ ಬಾಗೆ ಮಾತದಿದ್ದಲ್ಲಿ ಡಾ.ಕರುಣಾ ವಿಜಯೇಂದ್ರರವರು…
ಬೆಂಗಳೂರು:- ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮೊ ಸಿಕ್ವೇನ್ಸಿಂಗ್ ನಲ್ಲಿ ಒಮೆಕ್ರಾನ್ ವೈರಾಣು ಉಪತಳಿ JN.1 ಪತ್ತೆಯಾಗಿದೆ. ಸುಮಾರು 34 ಕೋವಿಡ್ ಸೊಂಕಿತರಿಗೆ JN.1 ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮದವರಿಗೆ ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, JN.1 ವೈರಾಣು ರಾಜ್ಯದಲ್ಲಿ ಇರಬಹುದು ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ ಅದು ಜಿನೋಮೊ ಸಿಕ್ವೆನ್ಸಿಂಗ್ ನಲ್ಲೇ ನಮಗೆ ಸ್ಪಷ್ಟವಾಗಿ ಗೊತ್ತಾಗೊದು. ಹೀಗಾಗಿ ಜಿನೋಮೊ ಸಿಕ್ವೆನ್ಸಿಂಗ್ ಗೆ ಕಳಿಸಿದ್ವಿ. ಇದೀಗ ವರದಿ ಬಂದಿದ್ದು, ರಾಜ್ಯದಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿದೆ ಎಂದರು. ಆದರೆ ರಾಜ್ಯದ ಜನರು ಕೋವಿಡ್ ಸಂಬಂಧ ಆತಂಕ ಪಡುವ ಅಗತ್ಯವಿಲ್ಲ. JN.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನ ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ…