2023ರಲ್ಲಿ ಸಾಕಷ್ಟು ಕಾರುಗಳು ಭಾರತದ ರಸ್ತೆಯಲ್ಲಿ ಹವಾ ಎಬ್ಬಿಸಿವೆ. ಈ ಹೊಸ ಕಾರುಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅಂತಹ ಕೆಲವು ಕಾರುಗಳ ಬಗೆಗಿನ ಮಾಹಿತಿ ಇಲ್ಲಿದೆ.ಸದ್ಯ ಉತ್ತಮ ಬೇಡಿಕೆಯಿದ್ದರೂ ಬೆಲೆ ತುಸು ದುಬಾರಿಯಾಗಿದ್ದು, ದುಬಾರಿ ಬೆಲೆ ಹಿನ್ನಲೆ ಹಲವು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಎನ್ಜಿ ಮಾದರಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸಿಎನ್ ಜಿ ಕಾರುಗಳು ಸದ್ಯ ಎಂಟ್ರಿ ಲೆವಲ್ ಕಾರುಗಳಲ್ಲಿ ಮಾತ್ರವಲ್ಲದೆ ಮಧ್ಯಮ ಗಾತ್ರದ ಎಸ್ ಯುವಿ ಮತ್ತು ಎಂಪಿವಿ ಕಾರುಗಳಲ್ಲೂ ಸಹ ಮಾರಾಟಗೊಳ್ಳುತ್ತಿದ್ದು, ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರುವ ಸಿಎನ್ಜಿ ಮಾದರಿಗಳ ಮಾಹಿತಿ ಇಲ್ಲಿದೆ. ಹ್ಯುಂಡೈ ಎಕ್ಸ್ಟರ್ ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆಯ ಹ್ಯುಂಡೈ ಎಕ್ಸ್ ಟರ್ ಕಾರು ಮಾದರಿಯು ಸಿಎನ್ಜಿ ಆಯ್ಕೆ ಹೊಂದಿರುವ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾಗಿದ್ದು, ಎಕ್ಸ್ ಟರ್ ಸಿಎನ್ ಜಿ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್…
Author: AIN Author
ಒಡಿಶಾ:- ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಕೃಷಿ ಜಮೀನಿನಿಂದ ಹೂಕೋಸು ಕಿತ್ತು ಬಂದಿದ್ದಕ್ಕೆ ಮಹಿಳೆಯೊಬ್ಬರನ್ನು ಆಕೆಯ ಮಗನೇ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಜರುಗಿದೆ. ಮಹಿಳೆಯು ತನ್ನ ಕಿರಿಯ ಮಗನ ಜಮೀನಿನಲ್ಲಿ ಹೂಕೋಸು ಕಿತ್ತು ತಂದು ಪದಾರ್ಥ ಮಾಡಿ ತಿಂದಿದ್ದರು.ಇದನ್ನರಿತ ಕಿರಿಯ ಮಗ ತನ್ನ ತಾಯಿಯ ಜೊತೆ ಜಗಳಕ್ಕೆ ಇಳಿದಿದ್ದಾನೆ. ಆ ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾನೆ. ಹಿಂದುಳಿಯದೆ ಮಹಿಳೆಯನ್ನು ರಕ್ಷಿಸಿ ಬಾಸುದೇವಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ಮಹಿಳೆಯನ್ನು ಕೇಳಿದ್ದು, ಆಕೆಯ ಮಗನ ವಿರುದ್ಧ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ನಿದ್ದೆಯ ಅಭ್ಯಾಸ ಇರುತ್ತೆ. ಕೆಲವರಿಗೆ ದಿಂಬು ಇದ್ರೆ ನಿದ್ರೆ ಬರುತ್ತೆ. ಕೆಲವರಿಗೆ ದಿಂಬು ಇಲ್ಲದಿದ್ರೆ ನಿದ್ರೆ ಬರುತ್ತೆ. ಹಾಗಿದ್ರೆ, ದಿಂಬು ಬಳಕೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ನೀವು ತಿಳಿಯಲೇಬೇಕು. ಮನುಷ್ಯನಿಗೆ ನಿದ್ರೆ ತುಂಬಾ ಮುಖ್ಯ. ಮನುಷ್ಯ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ವಿಶ್ರಾಂತಿಯೆಂಬುದು ಬೇಕೇ ಬೇಕು. ಮಲಗುವಾಗ ದಿಂಬು ಬಳಸುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಕೆಲವರು ದಪ್ಪ ಇರುವ ದಿಂಬುಗಳನ್ನು ಬಳಸುವುದರಿಂದ ಆರಾಮಾಗಿ ನಿದ್ರಿಸುತ್ತಾರೆ. ಆದರೆ, ಕೆಲವರಿಗೆ ನಿದ್ರೆ ಬರುವುದಿಲ್ಲ. ಅಂಥವರು ತೆಳುವಾಗಿರುವ ದಿಂಬನ್ನು ಬಳಸುತ್ತಾರೆ. ದಿಂಬು ಇಲ್ಲದೆ ಮಲಗುವುದರಿಂದ ಆಗುವ ಪ್ರಯೋಜನಗಳೇನು? ತಿಳಿಯೋಣ ಬನ್ನಿ. ಬೆನ್ನು ನೋವು ಕೆಲವು ಸಂಶೋಧನೆಯ ಪ್ರಕಾರ ದಿಂಬು ಬಳಸುವುದರಿಂದ ನಮ್ಮ ಕುತ್ತಿಗೆ ಹಾಗೂ ಬೆನ್ನು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೊಡವೆ ಸಮಸ್ಯೆ ದಿಂಬು ಬಳಸುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ಧೂಳು ಅಥವಾ ತಲೆಯಲ್ಲಿ ಇರುವ ಅಗರು ದಿಂಬಿನ ಮೇಲೆ ಶೇಖರಣೆ ಆಗಿರುತ್ತದೆ. ಅದರ ಮೇಲೆಯೇ ನಾವು ತಲೆ ಹಾಕಿ…
ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪಾತ್ರಕ್ಕೆ ಮಸಾಲೆ ಹಾಕಿ ನಗುವನ್ನು ಹಂಚಿದ ಸಿಹಿಕಹಿ ಚಂದ್ರು (Shihkahi Chandru) ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಬೊಂಬಾಟ್ ಭೋಜನ” (Bombat Bhojana) ಕಾರ್ಯಕ್ರಮದಲ್ಲಿ ಪಾತ್ರೆಗೆ ಮಸಾಲೆ ಹಾಕಿ ಭೋಜನ ಪ್ರಿಯರಿಗೆ ರಸದೌತಣವನ್ನು ಬಡಿಸುತ್ತ ಅಮೋಘ 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಬೊಂಬಾಟ್ ಭೋಜನದ ಮೂರನೇ ಆವೃತ್ತಿ ಇದಾಗಿದ್ದು, ಈ ಆವೃತ್ತಿಯು ಸಾಕಷ್ಟು ವೈಶಿಷ್ಟ್ಯತೆಗಳಿಂದ ತುಂಬಿದೆ. ನಮ್ಮೂರ ಊಟ, ಮನೆ ಊಟ, ಸವಿ ಊಟ, ಕೈ ರುಚಿ, ಅಂಗೈಯಲ್ಲಿ ಆರೋಗ್ಯ, ಅಂದ ಚೆಂದ ಹಾಗೂ ಅತಿಥಿ ದೇವೋಭವ ಎಂಬ ವಿಭಾಗಗಳನ್ನು ಹೊಂದಿದ್ದು ಮನೆ ಮಂದಿಯ ಮನಗೆದ್ದು ಮನೆ ಮಾತಾಗಿದೆ. ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರುವ “ಬೊಂಬಾಟ್ ಭೋಜನ ಶೋ” 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಸಾವಿರದ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree) ಭಾಗಿಯಾಗಲಿದ್ದಾರೆ. ತಪ್ಪದೇ ವೀಕ್ಷಿಸಿ ಇಂದು ಮಧ್ಯಾಹ್ನ 12 ಗಂಟೆಗೆ ನಿಮ್ಮ…
ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನದ ‘ದೇಸಾಯಿ’ ಚಿತ್ರಕ್ಕೆ ಮಾತಿನ ಜೋಡಣೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ದೇಸಾಯಿ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಉತ್ತರ ಕರ್ನಾಟಕದ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ರಚನೆ ಹಾಗೂ ನಿರ್ದೇಶನ ನಾಗಿರೆಡ್ಡಿ ಭಡ ಅವರದು. ಬಾದಾಮಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಮೈಸೂರಿನ ರಾಧ್ಯ ಇದ್ದಾರೆ. ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮಲೆನಾಡಿನ ಬಹುತೇಕ ಭತ್ತದ ಗದ್ದೆಗಳು ಮಳೆಯಾಶ್ರಿತ ಭೂಮಿಯಾಗಿದೆ. ಜುಲೈ ತಿಂಗಳಿನಲ್ಲಿ ಕೇವಲ 15 ದಿನ ಮಾತ್ರ ಧಾರಾಕಾರ ಮಳೆಯಾಗಿದ್ದು ಬಿಟ್ಟರೆ ಉಳಿದ ದಿನಗಳು ಕೇವಲ ತುಂತುರು ಮಳೆಯಷ್ಟೆ. ಕೆರೆ, ಹೊಳೆ, ಹಳ್ಳಗಳ ಅಕ್ಕಪಕ್ಕ ಇರುವ ತಗ್ಗಿನ ಗದ್ದೆಯಲ್ಲಿ ತೇವಾಂಶ ಇರುವ ಕಾರಣ ಒಂದಿಷ್ಟು ಭತ್ತದ ಫಸಲು ಕೈಗೆ ದೊರೆತಿದೆ. ಮಕ್ಕಿ ಗದ್ದೆ, ಹಕ್ಕಲು ಪ್ರದೇಶದ ಜಮೀನಿನಲ್ಲಿ ಪ್ರತಿ ವರ್ಷ ಭತ್ತ ಬೆಳೆಯಲಾಗುತ್ತಿದೆ. ಆದರೆ, ಈ ವರ್ಷ ಇಂತಹ ಜಮೀನಿನಲ್ಲಿ ನೀರಿನ ತೀವ್ರ ಕೊರತೆ ಕಾರಣ ನಾಟಿ ಮಾಡಿದ ಒಂದು ತಿಂಗಳಿನಲ್ಲಿಯೇ ಭೂಮಿಯ ತೇವಾಂಶ ಕ್ಷೀಣಿಸಿ ಭತ್ತದ ಸಸಿ ಹುಲುಸಾಗಿ ಬೆಳೆಯಲು ಸಾಧ್ಯವಾಗಿಲ್ಲ. ಯಂತ್ರಗಳ ಮೂಲಕ ಒಣ ಹುಲ್ಲುಪಿಂಡಿ ಕಟ್ಟಿ ಸಂಗ್ರಹಿಸಲಾಗುತ್ತಿದೆ. ಯಂತ್ರ ಚಲಿಸದ ಚಿಕ್ಕಚಿಕ್ಕ ಗದ್ದೆಗಳ ಭತ್ತದ ಹುಲ್ಲನ್ನು ಹೊರೆ ಕಟ್ಟಿ ರಾಶಿ ಹಾಕಲಾಗುತ್ತಿದೆ. ಒಣ ಹುಲ್ಲಿನ ಇಳುವರಿ ಕಡಿಮೆಯಿರುವ ಕಾರಣ ಹೆಚ್ಚಿನ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಹುಲ್ಲಿನ ಪಿಂಡಿಯೊಂದಕ್ಕೆ ರೂ. 220 ರಿಂದ 240 ರ ವರೆಗೂ ರೈತರು ಮಾರಾಟ ಮಾಡುತ್ತಿದ್ದಾರೆ.
ಇನ್ನು ಮುಂದೆ ಯುಐಡಿಎಐ ಬದಲು ರಾಜ್ಯ ಸರ್ಕಾರವು ಆಧಾರ್ ನೋಂದಣಿಯ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಈ ಕಾರ್ಯಕ್ಕಾಗಿ, ರಾಜ್ಯ ಸರ್ಕಾರವು ಜಿಲ್ಲಾ ಮತ್ತು ಉಪ-ವಿಭಾಗೀಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್ಗಳನ್ನು ನೇಮಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರು ನಿಗದಿಪಡಿಸಿದ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪಡೆಯಬಹುದು. ಪ್ರತಿ ಜಿಲ್ಲೆಯ ಮುಖ್ಯ ಅಂಚೆ ಕಚೇರಿ ಮತ್ತು ಯುಐಡಿಎಐ ನಿರ್ದಿಷ್ಟಪಡಿಸಿದ ಇತರ ಆಧಾರ್ ಕೇಂದ್ರಗಳಲ್ಲಿಯೂ ಈ ಸೌಲಭ್ಯ ದೊರೆಯಲಿದೆ. ಆಧಾರ್ ಅರ್ಜಿಗಳನ್ನು ಸೇವಾ ಪೋರ್ಟಲ್ ಸ್ವೀಕರಿಸುವ ಮೊದಲು ಡೇಟಾ ಗುಣಮಟ್ಟ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಎಲ್ಲ ಅಪ್ಲಿಕೇಷನ್ನ ಪರಿಶೀಲನೆಯನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮೇಲ್ವಿಚಾರಣೆ ನಡೆಸುತ್ತಾರೆ. ಅನುಮತಿ ಪಡೆದ 180 ದಿನಗಳಲ್ಲಿ ಆಧಾರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಐಡಿಎಐ ಅಧಿಕಾರಿ ಪ್ರಶಾಂತ್ ಕುಮಾರ್ ಸಿಂಗ್ ಮಾತನಾಡಿ, ʼʼಇತ್ತೀಚೆಗೆ ಹೊರಡಿಸಲಾದ ನಿರ್ದೇಶನಗಳು ಮೊದಲ ಬಾರಿಗೆ ಆಧಾರ್ ಕಾರ್ಡ್ ಪಡೆಯುವ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಅನ್ವಯವಾಗುತ್ತದೆʼʼ ಎಂದು ತಿಳಿಸಿದ್ದಾರೆ.…
₹100 ಮುಖಬೆಲೆಯ ಹಳೆಯ ನೋಟುಗಳನ್ನು ಮಾರ್ಚ್ ಅಂತ್ಯದ ಹೊತ್ತಿಗೆ ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಇದು ಡಿಮಾನಿಟೈಸೇಷನ್ ಅಲ್ಲ. ಹಾಗಾಗಿ ಭೀತಿ ಬೇಡ. ಜೊತೆಗೆ, ಮಾರ್ಚ್ ನಂತರದಲ್ಲಿ ಹೊಸದಾದ ₹100 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ. ಹಳೆಯ ₹100 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಆರ್ಬಿಐ ಹೇಳಿದೆ’ ಎಂಬಂಥ ಪೋಸ್ಟ್ಗಳು ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ. ಈ ಹಿಂದೆ 2016ರಲ್ಲಿ ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಆರ್ಬಿಐ ಹಿಂಪಡೆದಿತ್ತು. ಆದ್ದರಿಂದ, ‘₹100, ₹10 ಹಾಗೂ ₹5 ಮುಖಬೆಲೆಯ ನೋಟುಗಳನ್ನು ಆರ್ಬಿಐ ಹಿಂಪಡೆಯಲಿದೆ. ಇದು ಎರಡನೇ ನೋಟು ರದ್ದತಿಯಾಗಲಿದೆ’ ಎಂಬಂಥ ಪೋಸ್ಟ್ಗಳು 2019ರಲ್ಲಿ ಹಾಗೂ 2021ರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈಗ ಮತ್ತೊಮ್ಮೆ ₹100 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂಬಂತೆ ಪೋಸ್ಟ್ಗಳು ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪೋಸ್ಟ್ಗಳ ಕುರಿತು…
ಕೊಚ್ಚಿ:- ನೀರಿಲ್ಲ, ಅನ್ನವಿಲ್ಲ ಶಬರಿಮಲೆಗೆ ದಯವಿಟ್ಟು ಬರಬೇಡಿ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ನಮಗಿಲ್ಲಿ ಕುಡಿಯಲು ನೀರಿಲ್ಲ. ಹಸಿವಾಗುತ್ತಿದ್ದರೂ ತಿನ್ನಲು ಅನ್ನವಿಲ್ಲ. ಅಷ್ಟೇ ಏಕೆ ಕನಿಷ್ಠ ಪಕ್ಷ ನಮಗೆ ಶೌಚದ ವ್ಯವಸ್ಥೆ ಕೂಡ ಇಲ್ಲ. ಆ ಸಿಎಂ ಪಿಣರಾಯಿ ವಿಜಯನ್ ಇದನ್ನೆಲ್ಲ ನೋಡಲ್ವ? ಅಯ್ಯೋ ನಿಮ್ಮ ಕೈ ಮುಗಿತೀವಿ ದಯವಿಟ್ಟು ಯಾರೂ ಶಬರಿಮೆಲೆಗೆ ಬರಬೇಡಿ’ ಇದು ಕೇರಳದ ಶಬರಿಮಲೆಯಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕನ್ನಡಿಗ ಭಕ್ತರ ಗೋಳು. ಈ ಬಾರಿ ಶಬರಿಮಲೆಯಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದ್ದು, ಭಕ್ತರಿಗೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿಯೂ ಕೇರಳ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಭಕ್ತಾದಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಹೊರತಾಗಿಯೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗದ ಕುರಿತು ಶಬರಿಮೆಲೆಗೆ ತೆರಳಿರುವ ಕರ್ನಾಟಕ, ತಮಿಳುನಾಡು ಸೇರಿದಂತೆ ಇತರ ಭಕ್ತಾದಿಗಳು ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಕೇರಳ ಸರ್ಕಾರ ಹಿಡಿಶಾಪ ಹಾಕಿದ್ದಾರೆ. ನಮಗೆ ಇಲ್ಲಿ ಕನಿಷ್ಠ ಶೌಚಾಲಯ ವ್ಯವಸ್ಥೆಯೂ ಇಲ್ಲ. ಕುಡಿಯಲು ನೀರಿಲ್ಲ, ಊಟ ಮಾಡಲು…
ಭಾರತ ತಂಡಕ್ಕೆ ಮತ್ತೊಬ್ಬ ಆಟಗಾರನ ಗಾಯದ ಸಮಸ್ಯೆಯಿಂದ ದೊಡ್ಡ ಹೊಡೆತ ಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ 7 ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅಫಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20-ಐ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪಾದದ ಮೇಲೆ ಗ್ರೇಡ್ 2 ಸ್ನಾಯು ಮುರಿತ ಉಂಟಾಗಿದ್ದು, 7 ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಣ ಮೂರನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ (108 ರನ್) ಸಿಡಿಸಿ ಈ ಸ್ವರೂಪದಲ್ಲಿ 4ನೇ ಶತಕ ಸಿಡಿಸಿದ ದಾಖಲೆ ಬರೆದಿದ್ದ ಸೂರ್ಯಕುಮಾರ್ ಯಾದವ್, ಕ್ಷೇತ್ರ ರಕ್ಷಣೆಯ ವೇಳೆ ಅವರ ಪಾದ ಉಳುಕಿತ್ತು. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಪಾದದಲ್ಲಿ ಗಂಭೀರ ನೋವು ಕಾಣಿಸಿಕೊಂಡಿದ್ದರಿಂದ ಫಿಸಿಯೋ ನೆರವಿನಿಂದ ಅವರು ಮೈದಾನದಿಂದ ಹೊರ ನಡೆದಿದ್ದರು. ಆದರೆ ಪೋಸ್ಟ್…