ಬೆಂಗಳೂರು: ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ವಿದ್ಯುತ್ ಚಾಲಿತ ಬಸ್ ಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕರಾದ ಟಿ ಎ ಶರವಣ ಅವರು ಭಾಗಿಯಾಗಿದ್ದರು. ರಾಜ್ಯದ 4 ಕೋಟಿ 30 ಲಕ್ಷ ಮಂದಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಬಡವರು ಮತ್ತು ದುಡಿಯುವ ವರ್ಗಗಳನ್ನು ಆರ್ಥಿಕ ಪ್ರಗತಿಯ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು. ಆರ್ಥಿಕ ಶಕ್ತಿ ಮೂಲಕ ನಾಡಿನ ಸಮಸ್ತ ಮಹಿಳೆಯರಿಗೆ ಮತ್ತು ಬಡ, ಶ್ರಮಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಹಿಂದಿದ್ದ ಬಿಜೆಪಿ ಸರ್ಕಾರಗಳು ಇದನ್ನು ಸಾಧಿಸಲಿಲ್ಲ. ಬದಲಿಗೆ ಟೀಕಿಸುತ್ತಾ ಕುಳಿತಿವೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘನ ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ…
Author: AIN Author
ಹಾಸನ : ಕೌಟುಂಬಿಕ ಜಗಳದ ಹಿನ್ನಲೆ ಪತಿ ಪತ್ನಿ ಚಿಕ್ಕಕಟ್ಟೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರಾಜಕುಮಾರ ನಗರದ ಬಳಿ ನಡೆದಿದೆ. ರಿಜ್ವಾನ್ (31), ಸಮ್ರಿನ್ ಭಾನು (25) ಆತ್ಮಹತ್ಯೆಗೆ ಶರಣಾದ ದಂಪತಿ ನಗರದ, ಅಡ್ಲಿಮನೆ ರಸ್ತೆಯ ಚಿಕ್ಕಟ್ಟೆ ಕೆರೆಯಲ್ಲಿ ಘಟನೆ ನಿನ್ನೆ ಸಂಜೆ ಜಗಳವಾಡಿದ್ದ ಗಂಡ-ಹೆಂಡತಿ ಮಂಗಳವಾರ ಬೆಳಿಗ್ಗೆ ಫಲ್ಸರ್ ಬೈಕ್ ನಲ್ಲಿ ಬದು ಚಿಕ್ಕಟ್ಟೆ ಕೆರೆಗೆ ಹಾರಿದ ಸಮ್ರಿನ್ ಬಾನು ನಂತರ ಅದೇ ಕೆರೆಗೆ ಹಾರಿದ ಪತಿ ರಿಜ್ವಾನ್ ಕೂಡ ಆತ್ಮಹತ್ಯೆ ಶಂಕೆದಂಪತಿ ಶವ ಹೊರತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬದ (Christmas Festival) ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇದರ ನಡುವೆ ಸಿನಿಮಾ ನಟ-ನಟಿಯರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಕ್ರಿಸ್ಮಸ್ ಹಬ್ಬದಂದು ಚೆಂದದ ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ. ಕ್ರಿಸ್ಮಸ್ ಹಬ್ಬದ ದಿನದಂದು ‘ಗಟ್ಟಿಮೇಳ’ (Gattimela) ಬ್ಯೂಟಿ ಶರಣ್ಯ ಶೆಟ್ಟಿ (Sharanya Shetty) ಅವರು ಕೆಂಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಕಲರ್ ಗೌನ್‌ಗೆ ಬಿಳಿ ಬಣ್ಣದ ಉಲ್ಲನ್ ಶಾಲ್ ಮತ್ತು ಟೋಪಿ ಧರಿಸಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಶರಣ್ಯ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ‘ಬಚ್ಚನ್’ ಚಿತ್ರದ ನಟಿ ಪಾರುಲ್ ಯಾದವ್ (Parul Yadav) ಅವರು ತಮ್ಮ ನಾಯಿ ಮರಿಗಳ ಜೊತೆ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಇದರ ಸ್ಪೆಷಲ್ ಫೋಟೋಗಳನ್ನ ಕೂಡ ನಟಿ ಹಂಚಿಕೊಂಡಿದ್ದಾರೆ ಉಗ್ರಂ, ಬಘೀರ ಹೀರೋ ಶ್ರೀಮುರಳಿ (Srimurali) ಕೂಡ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿ ವಿದ್ಯಾ ಮತ್ತು ಮಕ್ಕಳೊಂದಿಗಿನ…
ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ.27 ರಿಂದ 29 ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ ಅಪ್ಡೆಟ್, ಹೊಸ ಬ್ಯಾಂಕ್ ಖಾತೆ ಆರಂಭ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಹಲವು ಮಹಿಳೆಯರು ತೊಂದರೆ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ತೊಂದರೆಗಳನ್ನು ಪರಿಹರಿಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಈ ಶಿಬಿರ ಸಜ್ಜುಗೊಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮೂರು ದಿನಗಳ ಕಾಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗುವುದು, ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್…
ಸ್ಯಾಂಡಲ್‌ವುಡ್‌ಗೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಎಂಟ್ರಿ ಕೊಡ್ತಿದ್ದಾರೆ. ಚೊಚ್ಚಲ ಸಿನಿಮಾ ‘ಗೌರಿ’ (Gowri Film) ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ. ‘ಗೌರಿ’ ಸಿನಿಮಾದಲ್ಲಿ ಸಲಗ (Salaga) ಸುಂದರಿ ಸಂಜನಾ ಆನಂದ್ (Sanjana Anand) ಕೂಡ ನಟಿಸುತ್ತಿದ್ದಾರೆ. ಇಂದ್ರಜಿತ್ ನಿರ್ದೇಶನದ ಈ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಇದೇ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಚಿತ್ರದಲ್ಲಿ ಸಂಜನಾ ಪಾತ್ರ ತಿರುವು ಕೊಡಲಿದೆ. ಅಷ್ಟೇ ಅಲ್ಲ, ಹೀರೋ ಸಮರ್ಜಿತ್ ಜೊತೆ ಸ್ಪೆಷಲ್ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿ ಬಂದಿದ್ದಾರೆ. ಸಂಜನಾ ಆ್ಯಕ್ಟಿಂಗ್ ಜೊತೆಗೆ ಡ್ಯಾನ್ಸ್ ಕೂಡ ತೆಗೆಸಿದ್ದಾರೆ ನಿರ್ದೇಶಕರು. ಎರಡು ದಿನ ರಿಹರ್ಸಲ್ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಸಮರ್ಜಿತ್ ನೃತ್ಯ ಕೌಶಲ್ಯದ ಬಗ್ಗೆ ನಟಿ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಂಜನಾ…
ಬಿಗ್ ಬಾಸ್ ಸೀಸನ್ 7 (Bigg Boss Kannada 7) ಸ್ಪರ್ಧಿ ವಾಸುಕಿ ವೈಭವ್ (Vasuki Vaibhav) ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ನವೆಂಬರ್ 16ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದು ತಿಂಗಳ ನಂತರ ಇದೀಗ ಮದುವೆಯ ಸುಂದರ ಫೋಟೋಗಳನ್ನ ಶೇರ್ ಮಾಡಿದ್ದಾರೆ. ವಾಸುಕಿ- ಬೃಂದಾ ಜೋಡಿ ರಂಗಭೂಮಿಯಲ್ಲಿರುವಾಗಲೇ ಪರಿಚಿತರು. ಹಲವು ವರ್ಷಗಳು ಪ್ರೀತಿಸಿ ಇತ್ತೀಚೆಗೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇದೀಗ ಇಬ್ಬರ ಮದುವೆ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ವಾಸುಕಿ ಮದುವೆಗೆ ಡಾಲಿ, ಕಿಶನ್, ದೀಪಿಕಾ ದಾಸ್, ಸಾನ್ಯ ಅಯ್ಯರ್, ಶೈನ್ ಶೆಟ್ಟಿ, ಕೃಷಿ ತಾಪಂಡ, ಶೃತಿ ಹರಿಹರನ್, ಮೇಘನಾ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು
ಬಾಲಿವುಡ್ ನಟ ರಣ್‌ಬೀರ್ ಕಪೂರ್- ಆಲಿಯಾ ಭಟ್ (Aliaa Bhatt) ಜೋಡಿ ಕ್ರಿಸ್ಮಸ್ ದಿನದಂದು ಮಗಳ ಮುಖ ರಿವೀಲ್ ಮಾಡಿದ್ದಾರೆ. ಕೊನೆಗೂ ಮಗಳ ಮುಖ ರಿವೀಲ್ ಮಾಡುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. 2022ರಲ್ಲಿ ರಣ್‌ಬೀರ್-ಆಲಿಯಾ ಮದುವೆಯಾಗಿದ್ದರು. ಹಲವು ವರ್ಷಗಳು ಪ್ರೀತಿಸಿ ದಾಂಪತ್ಯದ ಮುದ್ರೆ ಒತ್ತಿದ್ದರು. ಕಳೆದ ವರ್ಷ ನವೆಂಬರ್ 6ರಂದು ರಾಹಾಗೆ (Raha) ಆಲಿಯಾ ಭಟ್ ಜನ್ಮ ನೀಡಿದ್ದರು. ಮಗಳ ಹೆಸರನ್ನ ರಿವೀಲ್ (Reveal) ಮಾಡಿದ್ದು ಬಿಟ್ಟರೇ, ಮುಖವನ್ನು ಎಲ್ಲೂ ತೋರಿಸಿರಲಿಲ್ಲ ರಾಹಾ ಮುಖದಲ್ಲಿ ನೀಲಿ ಕಣ್ಣುಗಳು ಹೈಲೆಟ್ ಆಗಿದ್ದು, ಮುದ್ದು ಮದ್ದಾಗಿದ್ದಾಳೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ರಾಹಾ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈಗ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಗಳ ಜೊತೆಗಿನ ರಣ್‌ಬೀರ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸದ್ದು ಮಾಡುತ್ತಿವೆ. ಮಗಳ ಜೊತೆ ರಣ್‌ಬೀರ್ (Ranbir Kapoor) ದಂಪತಿ ಕ್ರಿಸ್ಮಸ್ ಪಾರ್ಟಿ ಮಾಡಿದ್ದಾರೆ. ಸದ್ಯ ರಾಹಾ (Raha) ಲುಕ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಾಹಾ ಪೋಸ್…
ಬೆಂಗಳೂರು : ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬೆಂಗಳೂರು ಮಹಾನಗರ ಬಸ್ ಗಳು ನಗರ ಸಾರಿಗೆಗೆ ಸೇರ್ಪಡೆ ಆಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ವಿದ್ಯುತ್ ಚಾಲಿತ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಇಲ್ಲಿಯವರೆಗೂ ರಾಜ್ಯ ಸಾರಿಗೆಯ ಬಸ್ ಗಳಲ್ಲಿ 120 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ನಿತ್ಯ 40 ಲಕ್ಷ ಜನ ಬಿಎಂಟಿಸಿ ಯಲ್ಲಿ ಪ್ರಯಾಣ. ಇದರಲ್ಲಿ ಎಲ್ಲ ಜಾತಿ, ಎಲ್ಲ ಧರ್ಮದ, ಎಲ್ಲ ಅಂತಸ್ತಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣವನ್ನು ಬಿಜೆಪಿ ಯವರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿ ಯವರು ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಸಿ.ಎಂ ಪ್ರಶ್ನಿಸಿದರು. ನಮ್ಮ ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಾಗಿ ರಾಜ್ಯದ ಆರ್ಥಿಕ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ಮತ್ತು…
ಬೆಳಗಾವಿ: ರೈತರ ಬಗ್ಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ನಾಲಗೆ ಹರಿಬಿಟ್ಟಿದ್ದಕ್ಕೆ ಸಚಿವರ ಕಚೇರಿಗೆ ಬೀಗ ಜಡಿದು ರೈತರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಳಗಾವಿಯ ಗಣೇಶಪುರದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿರುವ ಸಚಿವರ ಕಚೇರಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಈ ವೇಳೆ ಸಕ್ಕರೆ ಸಂಸ್ಥೆ ಸಿಬ್ಬಂದಿ ಹಾಗೂ ರೈತರ ಮಧ್ಯೆ ವಾಗ್ವಾದ ರೈತರ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರ ಬಿಗಿ ಭದ್ರತೆ ರೈತರು ಬರ ಬರುವುದನ್ನೇ ಕಾಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದರು.
ಬಳ್ಳಾರಿ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಜಿಂದಾಲ್ ನೌಕರರಲ್ಲಿ ಕಾಣಿಸಿಕೊಂಡ ಸೋಂಕು ಹೊರ ರಾಜ್ಯದಿಂದ ಬಂದಿದ್ದ ಇಬ್ಬರು ಜಿಂದಾಲ್ ನೌಕರರಲ್ಲಿ ಕಾಣಿಸಿಕೊಂಡ ಸೋಂಕು ನೌಕರರ ಟ್ರಾವೆಲ್ ಹಿಸ್ಟರಿ ಕಲೆ ಹಾಕಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಇಲ್ಲಿಯವರಗೆ ಸುಮಾರು 194 ಜನರ ಸ್ವಾಬ್ ಸಂಗ್ರಹ ವರದಿಗಾಗಿ ಕಾದು ಕುಳಿತು ಆರೋಗ್ಯ ಇಲಾಖೆ ಇಬ್ಬರು ನೌಕರ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕ ಹೊಂದಿದವರ ಮೇಲೆ ನಿಗಾ ಇರಿಸಿದ ಆರೋಗ್ಯ ಇಲಾಖೆ ಇಂದು ಸಂಜೆ 194 ಜರ ವರದಿ ನಿರೀಕ್ಷೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ.