Author: AIN Author

ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ಹೊತ್ತಿ ಉರಿದ ಮಾರುತಿ ಕಾರು ತಪ್ಪಿಸಿಕೊಳ್ಳಲಾಗದೆ ಕಾರು ಚಾಲಕ ಸುಟ್ಟು ಕರಕಲಾದ ಘಟನೆ ನೆಲಮಂಗಲದ ಟೋಲ್ ಬಳಿ ಇರುವ ಪಾರ್ಲೆಜಿ ಬಳಿ ಘಟನೆ ನೋಡ ನೋಡುತ್ತಲೇ ಸಂಪೂರ್ಣವಾಗಿ ಕಾರನ್ನು ಆವರಿಸಿಕೊಂಡ ಬೆಂಕಿ ಕಣ್ಣೇದುರೇ ಚಾಲಕ ಸುಟ್ಟು ಕರಕಲು ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ದೌಡು, ಮುಂದುವರೆದ ಕಾರ್ಯಾಚರಣೆ

Read More

ಮಂಡ್ಯ: ಬರದ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (Manmul) ರೈತರಿಗೆ ಶಾಕ್‌ ನೀಡಿದೆ. ಲೀಟರ್‌ ಹಾಲಿಗೆ 1.50 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಇತ್ತ ಮನ್ಮುಲ್‌ ಹಾಲಿನ ದರ (Milk Price) ಇಳಿಕೆ ಮಾಡಿದೆ. ಆದರೆ ಅತ್ತ ಪಶು ಆಹಾರದ ಬೆಲೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲಾಗಿದ್ದಾರೆ. ಮನ್ಮುಲ್ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ KMF ಪಶು ಆಹಾರದ ಬೆಲೆ ಚೀಲಕ್ಕೆ 50 ರೂ. ಏರಿಕೆ ಮಾಡಿದೆ. ಡಿಸೆಂಬರ್ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

Read More

ಬೆಂಗಳೂರು: ಕ್ರಿಕೆಟಿಗ ಕಾರಿಯಪ್ಪ (K.C.Cariappa) ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಗೆ ಆರ್‌.ಟಿ. ನಗರ ಪೊಲೀಸರು ನೋಟಿಸ್‌ ನೀಡಿದ್ದಾರೆ. ಘಟನೆ ಬಗ್ಗೆ ವಿವರ ನೀಡುವಂತೆ ಕಾರಿಯಪ್ಪ ಪ್ರೇಯಸಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಈಕೆಯಿಂದ ಮಾಹಿತಿ ಪಡೆದ ಬಳಿಕ ಕ್ರಿಕೆಟಿಗ ಕಾರಿಯಪ್ಪಗೆ ನೋಟಿಸ್‌ ನೀಡಲು ಆರ್‌.ಟಿ. ನಗರ ಪೊಲೀಸರು ಮುಂದಾಗಿದ್ದಾರೆ. ಏನಿದು ಪ್ರಕರಣ? ಒಂದೂವರೆ ವರ್ಷಗಳ ಹಿಂದೆ ಕ್ರಿಕೆಟಿಗ ಕಾರಿಯಪ್ಪ ಮತ್ತು ಮಹಿಳೆಗೆ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅಲ್ಲದೇ ಪರಸ್ಪರರ ವಿರುದ್ಧ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಆರ್‌.ಟಿ. ನಗರ ಪೊಲೀಸರು ತಿಳಿಸಿದ್ದಾರೆ. 2018 ರಲ್ಲಿ ಮೊದಲ ಮದುವೆಯಾಗಿತ್ತು. ಕಾರಣಾಂತರಗಳಿಂದ 2020 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದೂವರೆ ವರ್ಷದ ಹಿಂದೆಯಷ್ಟೇ ಕಾರಿಯಪ್ಪ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದರು. ನಾನು ಗರ್ಭಿಣಿಯಾಗಿದ್ದೆ. ನಂತರ ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದರು. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಮದುವೆಯಾಗುವುದಾಗಿ…

Read More

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್‌ ಮಾರ್ಗಸೂಚಿ ಇಲ್ಲ,ಬಿಗಿ ಭದ್ರತೆ ಮಾತ್ರ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ. ಮಾಧ್ಯಮ ಗೋಷ್ಠಿಯನ್ನು ಮಾತನಾಡಿದ ಅವರು,ಹೊಸ ವರ್ಷಾಚರಣೆಗೆ ಸಂಬಂಧಿಸಿ ಎರಡು ಸುತ್ತಿನ ಸಭೆ ಮಾಡಿದ್ದೇವೆ. ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಜೊತೆಗೆ ಚರ್ಚೆ ನಡೆಸಿದ್ದೇವೆ. ಚರ್ಚೆಗಳ ಒಟ್ಟು ಹಿನ್ನೆಲೆಗಳನ್ನು ಇಟ್ಟುಕೊಂಡು ಭದ್ರತೆ, ಸುರಕ್ಷತೆಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು. ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಗೈಡ್​ಲೈನ್ಸ್​​​ ಹೀಗಿದೆ ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಎಂ.ಜಿ ರೋಡ್‌, ಬ್ರಿಗೇಡ್ ರೋಡ್‌, ಇಂದಿರಾ ನಗರ, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಸೂಕ್ತ ಬಂದೋಬಸ್ತ್ ನಿಯೋಜನೆ ಮಾಡಲಾಗುತ್ತದೆ. ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿ 15, ಎಸಿಪಿ 45, ಪೊಲೀಸ್ ಇನ್ಸ್ ಪೆಕ್ಟರ್ 160, ಪಿಎಸ್‌ಐ 600, ಎಎಸ್‌ಐ 600 ಸೇರಿ 5200 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ವರ್ಷಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಪೊಲೀಸ್ ಕಿಯೋಸ್ಕ್ ಗಳನ್ನು…

Read More

ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು, ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು ಕರ್ನಾಟಕ ಸಮೃದ್ಧವಾಯಿತು ಕರ್ನಾಟಕ ಪ್ರಬುದ್ಧವಾಯಿತು ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಸಂಪೂರ್ಣ ಅನುಷ್ಠಾನ ಮತ್ತು ಅದನ್ನು ನೋಡಿ ವಿರೋಧ ಪಕ್ಷಗಳ ಪರಿಸ್ಥಿತಿ, ಸಂಕಟವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕವನದ ಮೂಲಕ ಛೇಡಿಸಿದ್ದು ಹೀಗೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಕಾಂಗ್ರೆಸ್ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಈ ಕವನ ವಾಚಿಸಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು. ಕಾರ್ಯಕ್ರಮದ ನಂತರ ಮಾಧ್ಯಮದವರು ಕೇಳಿ ಮತ್ತೊಮ್ಮೆ ಡಿಸಿಎಂ ಅವರಿಂದ ಈ ಮೇಲಿನ ಕವನ ವಾಚಿಸಿದರು.ಉಳಿದಂತೆ ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ಕಾರ್ಯಕ್ರಮದಲ್ಲಿ ಡಿಸಿಎಂ ಅವರು ಹೇಳಿದ್ದಿಷ್ಟು; “ಈ ಕಾಲದ…

Read More

ಬೆಂಗಳೂರು: ಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಿಮ್ಮ ಮಾತು ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವನಿಧಿ ಜತೆಗೆ ಉಚಿತ ತರಬೇತಿ, ಅರ್ಜಿ ಶುಲ್ಕವೂ ಉಚಿತ. ರಾಜ್ಯದ ಜನರಿಗೆ ಇದು ಮುಟ್ಟಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿಸಿದ್ರಾ ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ ? ನೀವು ಮಾತಿಗೆ ತಪ್ಪಿದ ಮೋದಿ ಎಂದು ಸಿಎಂ ವ್ಯಾಪಕ ಟೀಕಿಸಿದರು. ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ ಎಂದು ಟೀಕಿಸಿದರು. ಮೋದಿಯವರೇನು ಆರ್ಥಿಕ ತಜ್ಞರಾ ? ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ…

Read More

ಬಳ್ಳಾರಿ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾರಾ ಪ್ರತಾಪ್ ರೆಡ್ಡಿಯವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಘೋಷಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1985ರಲ್ಲಿ ನಾನು ಮತ್ತು ಪ್ರತಾಪ್ ಜನತಾ ಪಾರ್ಟಿಯಲ್ಲಿ ಇದ್ದೆವು. ಇಬ್ಬರು ಬೇರೆ ಬೇರೆ ದಾರಿಯಲ್ಲಿ ನಡೆದರು ಚಿಂತನೆ ಒಂದೇ ಆಗಿದೆ. ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ಶೋಷಿತರ ಧ್ವನಿಯಾಗಬೇಕು, ಒಳ್ಳೇ ಕೆಲಸ ಮಾಡಬೇಕು ಎನ್ನವ ಚಿಂತನೆಯನ್ನು ಪ್ರತಾಪ್ ರೆಡ್ಡಿ ಹೊಂದಿದ್ದಾರೆ ಎಂದರು. ಪಾರದರ್ಶಕ, ಪ್ರಾಮಾಣಿಕ ವ್ಯಕ್ತಿಗಳಿಗೆ ಬೆಂಬಲ ಕೊಡಲು ನಿರ್ಧರಿಸಿದಾಗ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ. ಪ್ರತಾಪ್ ರೆಡ್ಡಿ ಹೋರಾಟದ ಹಿನ್ನೆಲೆಯಿಂದ ಬಂದವರು. ನೀರಿಗಾಗಿ, ಮೂಲ ಸೌಕರ್ಯಗಳಿಗಾಗಿ ಹೋರಾಡಿ ಜನರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಜೊತೆ ಆಮ್ ಆದ್ಮಿ ಪಕ್ಷ ಕೈ ಜೋಡಿಸಲಿದೆ. ಏಳು ಜಿಲ್ಲೆಯ ಜಿಲ್ಲಾಧ್ಯಕ್ಷರಿಗೆ ಬೆಂಬಲ ನೀಡಲು ಮನವಿ ಮಾಡಿದ್ದೇವೆ. ಕೇಂದ್ರದ ನಾಯಕರಿಗೆ ಕೂಡ…

Read More

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರರಾದ ತುಷಾರ್ ಗಿರಿ ನಾಥ್ ರವರು ವಲಯ ಆಯುಕ್ತರಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಪಾಲಿಕೆ ಕೇಂದ್ರ ಕಛೇರಿಯ ಸಂಬಾಂಗಣ-01ರಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಅನುಷ್ಠಾನಗೊಳ್ಳಬೇಕೆಂದು ಸೂಚನೆ ನೀಡಿದರು. ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳ ಸರ್ವೇ ಕಾರ್ಯವನ್ನು ಪ್ರಾರಂಭಿಸಿ ಕನ್ನಡ ಭಾಷೆಯ ನಾಮಫಲಕಗಳನ್ನು ಬಳಸಡಿರುವ ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಬೇಕು. ನಂತರ ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅನುಷ್ಠಾನಗೊಳಿಸಲು ಗಡವು ನೀಡಬೇಕು. ಆದರೂ ನಾಮಫಲಕ ಬದಲಾಯಿಸದಿದ್ದಲ್ಲಿ ಮೊದಲು ಪರವಾನಗಿಯನ್ನು…

Read More

ಲಕ್ನೋ: ಧಾರ್ಮಿಕ ನಗರಗಳ ಪ್ರತಿಷ್ಠಿತ ದೇವಾಲಯಗಳ ಬಳಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸೂಚನೆ ನೀಡಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, ಗೋರಖ್‌ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದಂತಹ ಧಾರ್ಮಿಕ ನಗರಗಳ ಪುರಾತನ ಮತ್ತು ಐತಿಹಾಸಿಕ ಸಾರವನ್ನು ಕಾಪಾಡುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇವಾಲಯಗಳ ಎತ್ತರವನ್ನು ಮೀರಿದ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಡಳಿತ ವಲಯಕ್ಕೆ ಸೂಚಿಸಿದ್ದಾರೆ. ಗೋರಖ್‌ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದ ಯೋಜಿತ ಅಭಿವೃದ್ಧಿಗಾಗಿ ಸಂಬಂಧಿಸಿ ಅಧಿಕಾರಿಗಳು ಸಿದ್ಧಪಡಿಸಿದ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್-2031 ಅನ್ನು ಸಿಎಂ ಪರಿಶೀಲಿಸಿದರು. ಜೊತೆಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದರು. ಧಾರ್ಮಿಕ ನಗರಗಳ ದೇವಾಲಯಗಳು ಮಹತ್ವದ ರಚನೆಗಳಿಗೆ ಹೆಸರುವಾಸಿಯಾಗಿವೆ. ಈ ದೇವಾಲಯಗಳು ಮತ್ತು ಪವಿತ್ರ ಕಟ್ಟಡಗಳ ಎತ್ತರವನ್ನು ಮೀರಿದ ರಚನೆಗಳಿಗೆ ಅನುಮತಿಸಬಾರದು. ನಿಯಂತ್ರಣಕ್ಕೆ ಮಾಸ್ಟರ್‌ ಪ್ಲ್ಯಾನ್‌ ಅಳವಡಿಸಬೇಕು. ನಾವು ಸಂಘಟಿತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

Read More

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಲುಲ್ಲಕ ವಿಚಾರಕ್ಕಾಗಿ ಮದುವೆಗಳು (Marriage Cancel) ರದ್ದಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅಂಥದ್ದೇ ಘಟನೆಯೊಂದು ನಡೆದು ಹೋಗಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಹೌದು. ವಧುವಿನ ಕಡೆಯವರು ಊಟದ ಮೆನುವಿನಲ್ಲಿ ಮಟನ್ ಬೋನ್ ಮ್ಯಾರೋ (Mutton Bone Marrow) ಸೇರಿಸಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ನಿಜಾಮಾಬಾದ್‍ನ ವಧು ಹಾಗೂ ಜಗ್ತಿಯಾಳ್ ಮೂಲದ ವರನಿಗೂ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಕಳೆದ ನವೆಂಬರ್ ತಿಂಗಳಲ್ಲಿ ವಧುವಿನ ಮನೆಯಲ್ಲಿ ನೆರವೇರಿತ್ತು. ಆದರೆ ಇದೀಗ ಸಣ್ಣ ವಿಚಾರವೊಂದಕ್ಕೆ ಮದುವೆಯೇ ರದ್ದಾಗಿದೆ. ನಿಶ್ಚಿತಾರ್ಥದ (Engagement) ಬಳಿಕ ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ಆದರೆ ಈ ಮೆನುವಿನಲ್ಲಿ ಮಟನ್ ಐಟಮ್ ಇರಲಿಲ್ಲ. ಇದನ್ನು ಗಮನಿಸಿದ ವರನ ಕಡೆಯವರು ಮಟನ್ ಬೇಕು ಎಂದು ಹಠಕ್ಕೆ ಬಿದ್ದರು. ಈ ಸಂಬಂಧ ಎರಡೂ ಮನೆಯವರಿಗೂ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು ಕೂಡ…

Read More