Author: AIN Author

ಹುಬ್ಬಳ್ಳಿ: ‘ಮುಂದಿನ ಮಳೆಗಾಲದಲ್ಲಿ ಸ್ಥಳೀಯರು, ಉದ್ಯಮಿಗಳ ಸಹಕಾರದೊಂದಿಗೆ 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅವಳಿ ನಗರಗಳ ಹಸಿರೀಕರಣ ಮಾಡುವ ಗುರಿ ಇದೆ’ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ಹೇಳಿದರು. ನಗರದ ತೋಳನಕೆರೆ ಉದ್ಯಾನದಲ್ಲಿ ನಡೆದ ‘ರನ್ ಫಾರ್ ನೇಚರ್‌ –2023’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಗ್ರೀನ್‌ ಕರ್ನಾಟಕ ಅಸೋಸಿಯೇಷನ್‌, ವಸುಂಧರಾ ಫೌಂಡೇಷನ್‌, ವಿ ಕೇರ್‌ ಫೌಂಡೇಷನ್‌ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 4ರಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೃಕ್ಷಮಾತೆ ಸಾಲುಮರ ತಿಮ್ಮಕ್ಕ ಕಾರ್ಯಕ್ರಮ ಉದ್ಘಾಟಿಸಿದ್ದರು’ ಎಂದರು. ‘ ಈವರೆಗೆ 19 ಸಾವಿರ ಜನರಿಗೆ ಸಸಿಗಳನ್ನು ವಿತರಿಸಲಾಗಿದ್ದು, ವಿವಿಧ ಬಡಾವಣೆಗಳು, ಉದ್ಯಾನಗಳು, ಕೆರೆ ಡಂಡೆಗಳ ಮೇಲೆ ಆರು ಸಾವಿರ ಗಿಡಗಳನ್ನು ನೆಡಲಾಗಿದೆ’ ಎಂದು ತಿಳಿಸಿದರು. ‘ ಜೂನ್‌ ತಿಂಗಳಿಂದ ಈವರೆಗೆ ತೋಳನಕೆರೆ, ನೃಪತುಂಗ ಬೆಟ್ಟ, ಪಿರಾಮಿಡ್ ಧ್ಯಾನ ಮಂದಿರ, ಕೆಸಿಡಿ ಕಾಲೇಜು ವೃತ್ತ, ಉಣಕಲ್ ಉದ್ಯಾನ, ಜಿಮ್ಖಾನಾ ಕ್ಲಬ್ ಮೈದಾನ, ನುಗ್ಗಿಕೆರೆ ಹನುಮಂತ…

Read More

ಬೆಂಗಳೂರು:- ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕಟ್ಟುನಿಟ್ಟಿನ ನಿರ್ಬಂಧ ಏರಲಾಗಿದೆ. ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಬೆನ್ನಲ್ಲೇ ಬ್ರಿಗೇಡ್ ರೋಡ್ ಶಾಪ್ಸ್ ಅಸೋಸಿಯೇಷನ್ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, 1 ಗಂಟೆಯೊಳಗೆ ಎಲ್ಲಾ ಪಬ್’ಗಳನ್ನು ಬಂದ್ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಬ್ರಿಗೆಡ್ ರೋಡ್, ಚರ್ಚ್ ಸ್ಟ್ರೀಟ್, ಎಂ ಜಿ ರೋಡ್ ಬಳಿ ಅಂಗಡಿಗಳಿಗೆ ನಿರ್ಬಂಧ ಹೇರಲಾಗಿದೆ. ರಾತ್ರಿ 8 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಬೇಕೆಂದು ಅಸೋಸಿಯೇಷನ್ ಸೆಕ್ರೆಟರಿ ಸಾಹಿಲ್ ಹೇಳಿಕೆ ನೀಡಿದ್ದಾರೆ. ಈ ಬಾರಿ ಪೊಲೀಸರು ತುಂಬಾ ಕಠಿಣ ನಿಯಮ ಜಾರಿಗೆ ತರುತ್ತಿದ್ದು, ಒಂದು ಗಂಟೆ ಅಷ್ಟರಲ್ಲಿ ಎಲ್ಲಾ ಬಂದ್ ಇರಬೇಕು. ಡಿಸೆಂಬರ್ 31ರಂದು ರಾತ್ರಿ 8ಗಂಟೆಗೆ ಅಂಗಡಿಗಳು ಎಲ್ಲವೂ ಕ್ಲೋಸ್ ಇರುತ್ತೆ. ಉಳಿದಂತೆ ಪಬ್, ಹೋಟೆಲ್’ಗಳಿಗೆ ಒಂದು ಗಂಟೆವರೆಗೆ ಅವಕಾಶ ಕೊಟ್ಟಿದ್ದಾರೆ” ಎಂದು ಸಾಹಿಲ್ ಹೇಳಿದ್ದಾರೆ.

Read More

ಹೊಸಕೋಟೆ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ‌ ಫುಡ್ ಪಾಯ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಆಸ್ವತ್ರೆಗಳಿಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೊಸಕೋಟೆ ಸರ್ಕಾರಿ ಆಸ್ವತ್ರೆ ಹಾಗೂ ಎಂವಿಜೆ ಆಸ್ವತ್ರೆಗೆ ಭೇಟಿ ನೀಡಿದ್ದಾರೆ. ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಮಾಜಿ ಸಚಿವ ಎಂಟಿಬಿ ವಿಚಾರಿಸಿದರು. ಆಸ್ವತ್ರೆಯಲ್ಲಿರುವವರಿಗೆ ಎಂಟಿಬಿ ನಾಗರಾಜ್ ಅವರು, ಎಳನೀರು ಓ ಆರ್ ಎಸ್ ಜ್ಯೂಸ್ ವಿತರಿಸಿದ್ದಾರೆ. ಮುಖಂಡರ ಜೊತೆ ಆಗಮಿಸಿ ಮಾಜಿ ಸಚಿವರು ಎಲ್ಲರಿಗೂ ದೈರ್ಯ ತುಂಬಿದ್ದಾರೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 74ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಕಳೆದ 24 ಘಂಟೆಯಲ್ಲಿ ಇಬ್ಬರು ಬಲಿ, ಮೈಸೂರು, ದಕ್ಷಿಣ ಕನ್ನಡ ಒಬ್ಬೊಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 57 ಪ್ರಕರಣ ವರದಿಯಾಗಿದೆ. 6403 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಬೆಂಗಳೂರಿನಲ್ಲಿ 2104 ಕೋವಿಡ್ ಟೆಸ್ಟ್ ಮಾಡಲಾಗಿತ್ತು. ರಾಜ್ಯದ ಕೋವಿಡ್ ಪಾಸಿಟಿವಿಟಿ ರೇಟ್ 1.15%ಗೆ ಇಳಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ 44 ಜನ ಕೊರೊನಾ ಸೋಂಕಿನಿಂದ ಗಣಮುಖವಾಗಿದ್ದು, ರಾಜ್ಯದಲ್ಲಿರುವ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 464 ಏರಿಕೆ ಆಗಿದೆ. ಹೋಮ್ ಐಸೊಲೇಷನ್ ನಲ್ಲಿರುವ 423 ಸೋಂಕಿತರು, 41 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

Read More

ಕೊಪ್ಪಳ:- ಜಾತಿ ಗಣತಿ ಮರು ಗಣತಿ ಮಾಡಲಿ ಇದರಲ್ಲಿ ತಪ್ಪೆನಿದೆ ? ಎಂದು ಬಸವರಾಜ್ ರಾಯರೆಡ್ಡಿ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ ಎಂದು ಹೇಳಿದ್ದು ನಿಜಾ ಅದು ಒಳ್ಳೆಯದು. ಅದು ಜಾತಿ ಗಣತಿಯಲ್ಲ, ಸಮಾಜಿಕ ಸ್ಥಿತಿಗತಿಯ ಗಣತಿ, ಈ ಗಣತಿ ಸರಿಯಿಲ್ಲವೆಂದರೆ ಮತ್ತೊಮ್ಮೆ ಮಾಡಿಸಲಿ ತಪ್ಪೇನಿದೆ ಎಂದರು. ಜಾತಿ ಪಟ್ಟಿಯಲ್ಲಿ ಇದು ಮೊದಲಿಂದಲೂ ಇದೆ. ನಾವು ಇದನ್ನ ಒಪ್ಪಿದ್ದೇವೆ. ಈಗಷ್ಟೆ ಕೆಲವರು ಉಪಜಾತಿಗಳ ಹೆಸರು ಬರೆಸುತ್ತಿದ್ದಾರೆ. ಗಣತಿ ವಿಚಾರದಲ್ಲಿ ಬಿಡುಗಡೆ ಮಾಡುವುದರಲ್ಲಿ ತಪ್ಪಿಲ್ಲ. ಸಾಮಾಜಿಕ ಸ್ಥಿತಿಗತಿ ಗಣತಿಯಲ್ಲಿ ಒಂದು ಜಾತಿ ಕಾಲಂ ಸೇರಿದೆ. ಇದರಿಂದ ಕೆಲವರಿಗೆ ಆತಂಕವಾಗಿದೆ. ಸಿಎಂ ಅವರೇ ಗಣತಿ ವರದಿ ನನ್ನ ಕೈ ಸೇರಲಿ ಎಂದಿದ್ದಾರೆ. ಬಳಿಕ ನೋಡೋಣವೆಂದಿದ್ದಾರೆ. ಜಾತಿ ಗಣತಿ ಹೊರಗಡೆ ಬರಲಿ, ಸರಿಯಿಲ್ಲ ಎಂದಾದ್ರೆ ಇನ್ನೊಮ್ಮೆ ಮಾಡೋಣ. ಮರು ಗಣತಿ ಮಾಡಲಿ ತಪ್ಪೆನಿದೆ ? ಎರಡು ತಿಂಗಳಲ್ಲಿ ಮರುಗಣತಿ ಮಾಡಲಿ ಎನ್ನುವುದು ನನ್ನ ಸಲಹೆ ಎಂದರು.…

Read More

ಕಂಪ್ಲಿ : ನಗರದ ಹೋರ ವಲಯದಲ್ಲಿರುವ ಕೃಷಿ ತರಬೇತಿ ಕೇಂದ್ರದ ಬಳಿ ಹುಲ್ಲಿನ ಟ್ರಾಕ್ಟರ್ ಪಲ್ಟಿಯಾಗಿ ಸುಮಾರು 5-6ಜನಕ್ಕೆ ಗಾಯವಾದ ಘಟನೆ ಇಂದು ಸಂಜೆ 5ಗಂಟೆಗೆ ನಡೆದಿದೆ. ಚಿನ್ನಪುರ ದಿಂದ ಭತ್ತದ ಹುಲ್ಲನ್ನು ಹೊತ್ತು ತರುತ್ತಿದ್ದ ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿ ಹೊಡಿದಿದ್ದು, ಟ್ರಾಕ್ಟರ್ ನಲ್ಲಿದ್ದ ಸುಮಾರು 5 ರಿಂದ 6ಜನ ರೈತರಿಗೆ ಗಾಯಗಳಗಿವೆ.ಇನ್ನೂ ರಸ್ತೆಗೆ ಅಡ್ಡಲಾಗಿ ಬಿದ್ದ ಟ್ರಾಕ್ಟರ್ ಅನ್ನು ಮೇಲೆತ್ತಲು, ವಾಹನ ಸವಾರರು ಹರಸಾಹಸಪಡಬೇಕಾಯಿತು‌. ಕೆಲವೊತ್ತು ಶಾಲಾ ವಾಹನ, ಲಾರಿ,ಕಾರುಗಳು ರಸ್ತೆಯಲ್ಲಿ ಜಾಮ್ ಆಗಿ, ಸವಾರರು ಪರದಾಡುವಂತಾಗಿತ್ತು. ಗಾಯಳುಗಳನ್ನು ನಗರದ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

Read More

ಕೊಪ್ಪಳ:- ಒಂದು ತಾಲೂಕಿಗೆ ಬರ ಪರಿಹಾರ ಈ ವಾರ ರಿಲೀಸ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬರ ಪರಿಹಾರವನ್ನು ಪ್ರೂಟ್‌ಆಪ್ ನಿಂದ ವಿತರಣೆ ಮಾಡಲಾಗುತ್ತಿದೆ. ಈ ವಾರದಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕಿನಲ್ಲಿ ಪರಿಹಾರ ನೀಡಲಾಗುವುದು. ಇದರ ಸಾಧಕ ಬಾಧಕಗಳನ್ನು ನೋಡಿ ಮುಂದೆ ಕ್ರಮ ಕೈಗೊಳ್ಳಲಾಗುವುದು. ಈ ಆಪ್‌ನಲ್ಲಿ ತಪ್ಪುಗಳು ಕಂಡು ಬಂದರೆ ಸರಿಪಡಿಸಲಾಗುವುದು. ಇದು ಶಾಶ್ವತ ಪರಿಹಾರ ನೀಡುವ ಆಪ್ ಆಗಿರುತ್ತದೆ. ಪ್ರೂಟ್ ಆಪ್‌ನಲ್ಲಿ ಈಗ ಶೇ. 5೦ ರಷ್ಟು ರೈತರು ನೊಂದಾಯಿಸಿದ್ದಾರೆ. ಈಗ ಅಭಿಯಾನ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗೆ ನೇರ ಹಣ ಜಮಾ ಆಗುತ್ತದೆ ಎಂದರು. ರಾಜ್ಯದಲ್ಲಿ236 ತಾಲೂಕಿಗಳಲ್ಲಿ ಬರವಿದೆ. ಈ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇವೆ. ಕೇಂದ್ರ ಅಧ್ಯಯನ ತಂಡ ಬಂದು ರಾಜ್ಯದಲ್ಲಿಯ ಬರ ತೀವ್ರತೆ ಮನವರಿಕೆಯಾಗಿದೆ. ಕೇಂದ್ರ ಸರಕಾರ ಇಷ್ಟರಲ್ಲಿಯೇ ಪರಿಹಾರ ನೀಡಬಹುದು ಎದರು.

Read More

ಕೆಎಲ್ ರಾಹುಲ್ ಗೆ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ನೀಡುತ್ತಿರವ ಬಗ್ಗೆ ಕೆಲವು ಮಾಜಿ ಕ್ರಿಕೆಟಿಗರಿಂದ ಅಪಸ್ವರ ಕೇಳಿಬಂದಿದೆ. ಇಶಾನ್ ಕಿಶನ್ ಸರಣಿಯಿಂದ ಹೊರಬಿದ್ದ ಮೇಲೆ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಖಾಲಿಯಿದೆ. ಟೆಸ್ಟ್ ನಲ್ಲೂ ವಿಕೆಟ್ ಕೀಪಿಂಗ್ ಮಾಡಲು ತಾನು ಸಿದ್ಧ ಎಂದು ಕೆಎಲ್ ರಾಹುಲ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಕೂಡಾ ಪ್ರತಿಭಾವಂತ, ನಂಬಿಕಸ್ಠ ಬ್ಯಾಟಿಗರೂ ಆಗಿರುವ ರಾಹುಲ್ ಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನೂ ನೀಡಿ ಆಡುವ ಬಳಗದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆಲವರು ಅಪಸ್ವರವೆತ್ತಿದ್ದು, ರಾಹುಲ್ ರನ್ನು ಆಡುವ ಬಳಗದಲ್ಲಿ ಸೇರಿಸುವ ಸಲುವಾಗಿ ಖಾಯಂ ವಿಕೆಟ್ ಕೀಪರ್ ಅಲ್ಲದೇ ಇದ್ದರೂ ಅವರಿಗೆ ಹೆಚ್ಚುವರಿ ಜವಾಬ್ಧಾರಿ ಹೊರಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದ.ಆಫ್ರಿಕಾದಂತಹ ಕ್ಲಿಷ್ಟಕರ ಪಿಚ್ ನಲ್ಲಿ ತಂಡಕ್ಕೆ ಒಬ್ಬ ವೃತ್ತಿಪರ ವಿಕೆಟ್ ಕೀಪರ್ ಅಗತ್ಯವಿದೆ. ರಣಜಿಯಂತಹ ದೇಶೀಯ…

Read More

ಶೀತ ವಾತಾವರಣದಲ್ಲಿ ಎಲ್ಲಾ ರೀತಿಯ ಆಹಾರಗಳು ದೇಹಕ್ಕೆ ಒಗ್ಗುವುದಿಲ್ಲ. ಜೊತೆಗೆ ಇವುಗಳು ದೇಹದಲ್ಲಿ ಇನ್ನಷ್ಟು ಸಮಸ್ಯೆ ಉಂಟು ಮಾಡಲು ಕಾರಣವಾಗಬಹುದು. ಚಳಿಗಾಲದಲ್ಲಿ ಮೊಸರು ತಿನ್ನುವ ವಿಚಾರದಲ್ಲಿ ಒಂದಿಷ್ಟು ಗೊಂದಲಗಳಿರುವುದು ಸಹಜ. ಮೊಸರು, ಮಜ್ಜಿಗೆ ದೇಹವನ್ನು ತಂಪಾಗಿಸುವ ಗುಣ ಹೊಂದಿರುವುದರಿಂದ ಬಹಳಷ್ಟು ಜನ ಇದನ್ನು ತಿನ್ನುವುದು ಒಳ್ಳೆಯದಲ್ಲ ಎಂಬ ಭಾವನೆ ಹೊಂದಿದ್ದಾರೆ. ಆದರೆ ಕೆಲವು ಜೀರ್ಣಶಕ್ತಿ ವೃದ್ಧಿಸುವ ಜೊತೆಗೆ ಹಲವು ಕಾರಣಕ್ಕೆ ಪ್ರತಿದಿನ ಮೊಸರು ತಿನ್ನುವ ಅಭ್ಯಾಸ ಉತ್ತಮ ಎನ್ನುತ್ತಾರೆ. ಆದರೆ ಚಳಿಗಾಲದಲ್ಲಿ ಪ್ರತಿದಿನ ಮೊಸರು ತಿನ್ನುವುದು ಒಳ್ಳೆಯದೋ ಕೆಟ್ಟದ್ದೋ ಎಂಬ ಬಗ್ಗೆ ಹಲವರಿಗೆ ಇನ್ನೂ ಸ್ಪಷ್ಟ ಉತ್ತರ ದೊರಕಿರುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ದೇಹದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಬೇಕು ಅಂದ್ರೆ ನೀವು ಈ ಸ್ಟೋರಿ ನೋಡಿ. ಪೌಷ್ಟಿಕ ತಜ್ಞರಾದ ಕಿರಣ್‌ ಕುಕ್ರೇಜಾ ಅವರ ಪ್ರಕಾರ ಮೊಸರು ತಣ್ಣಗಿರುವುದು ನಿಜ. ಆದರೆ ಇದರಲ್ಲಿ ದೇಹ ಬೆಚ್ಚಗಿಡುವ ಒಂದಿಷ್ಟು ಅಂಶಗಳಿವೆ. ಇದು ದೇಹದ ಮೇಲೆ ಶಾಖದ ಪರಿಣಾಮ ಬೀರುವಂತೆ ಮಾಡುತ್ತದೆ ಎಂದು…

Read More

‘ದಿಯಾ’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ ದಸರಾದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಚಾಕ್ಲೇಟ್ ಹೀರೋ, ಈಗ ಮಲಯಾಳಂ ಇಂಡಸ್ಟ್ರೀಗೂ ಪದಾರ್ಪಣೆ ಮಾಡಿದ್ದಾರೆ. ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಒಪ್ಪೀಸ್ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೆ ಕಥೆಯ ತಿರುಳು. ಫೆಬ್ರವರಿಯಿಂದ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸೌಜನ್ ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ. ಎಂ ಜಯಚಂದ್ರನ್ ಮ್ಯೂಸಿಕ್ ಚಿತ್ರಕ್ಕಿದೆ. ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು ‘ದಿಯಾ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ. ಸದ್ಯ ಅವರೀಗ ‘ಬ್ಲಿಂಕ್’ ಎಂಬ…

Read More