ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣದಲ್ಲಿ ಮೂಡಿ ಬಂದಿರುವ ಬ್ಯಾಚುಲರ್ ಪಾರ್ಟಿ (Bachelor Party) ಸಿನಿಮಾದ ಬಿಡುಗಡೆ (Release) ದಿನಾಂಕ ಘೋಷಣೆಯಾಗಿದೆ. ಜನವರಿ 26ರಂದು ರಾಜ್ಯಾದ್ಯಂತ ಸಿನಿಮಾ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿದೆ. ರಕ್ಷಿತ್ ಅಂಡ್ ಟೀಮ್ ಕಿರಿಕ್ ಪಾರ್ಟಿ ನಂತರ ಯೂತ್ ಕಾಮಿಡಿ ಸ್ಟೋರಿ ಹೊಂದಿರುವ ಸಿನಿಮಾವನ್ನು ಕೊಡಲು ಸಜ್ಜಾಗಿದ್ದಾರೆ. ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ‘ಬ್ಯಾಚುಲರ್ ಪಾರ್ಟಿ’ಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದಿಗಂತ್ (Diganth), ಲೂಸ್ ಮಾದ ಯೋಗಿ (Loose Mada Yogi) ಹಾಗೂ ಅಚ್ಯುತ್ ಕುಮಾರ್ (Achyut Kumar) ಪೋಸ್ಟರ್‌ನಲ್ಲಿದ್ದಾರೆ.…
Author: AIN Author
ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹಲವರು ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ತೂಕ ನಿಯಂತ್ರಣ ಮಾಡುವ ಉದ್ದೇಶದಿಂದಲೂ ಇದನ್ನು ಸೇವಿಸುತ್ತಾರೆ. ಕಾಮಕಸ್ತೂರಿ ಬೀಜ ತಿನ್ನುವುದರಿಂದ ಸಿಗುವ ಲಾಭಗಳು ಉಷ್ಣಾಂಶ ಕಡಿಮೆ ಮಾಡಿ ದೇಹ ತಂಪಾಗಿತುವಂತೆ ನೋಡಿಕೊಳ್ಳಲು ಸಹಾಯಕ. ಬಾಯರಿಕೆ ಕಡಿಮೆ ದೇಹಕ್ಕೆ ಅಗತ್ಯವಾದ ನೀರು, ಆಹಾರ ಒದಗಿಸುತ್ತೆ. ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡುತ್ತದೆ. ಚರ್ಮದ ಕಾಂತಿಗಾಗಿ ಕೂಡ ಈಕಾಮಕಸ್ತೂರಿ ಬೀಜ ಸೇವನೆ ಮಾಡುತ್ತಾರೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ಕಾಪಾಡುತ್ತದೆ. ಮಲಬದ್ದತೆಯ ಸಮಸ್ಸೆಯನ್ನು ನಿರ್ವಾಹರಣೆ ಮಾಡುತ್ತದೆ.
ಸ್ಥೂಲ ಆರ್ಥಿಕ ವಿಸ್ತರಣೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಭಾರತೀಯ ವಾಹನ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಥೆಯು ಬಹಿರಂಗಪಡಿಸಿದ ಡೇಟಾ ವಿಶ್ಲೇಷಣೆಯ ಪ್ರಕಾರ, ಭಾರತವು ವಿಶ್ವದ 5 ನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿದ್ದು, ಮಾರಾಟದ ವಿಷಯದಲ್ಲಿ ಜರ್ಮನಿಯನ್ನು ಹಿಂದಿಕ್ಕಿದೆ. ಮೂರು ವರ್ಷಗಳ ನಂತರ ಭಾರತೀಯ ಆಟೋ ಎಕ್ಸ್‌ಪೋ ಹಿಂತಿರುಗಿದಂತೆ 2023 ವರ್ಷವು ಹಲವಾರು ಕಾರು ಬಿಡುಗಡೆಗಳಿಗೆ ಸಾಕ್ಷಿಯಾಗಲಿದೆ. ಇದು ಎರಡು ವರ್ಷಗಳಿಗೊಮ್ಮೆ ಆಚರಿಸಲಾಗುವ ಅತಿ ದೊಡ್ಡ ಭಾರತೀಯ ದ್ವೈವಾರ್ಷಿಕ ಆಟೋಮೊಬೈಲ್ ಪ್ರದರ್ಶನಗಳಲ್ಲಿ ಒಂದಾಗಿದೆ. ಇದು ಆಟೋಮೊಬೈಲ್ ಉತ್ಸಾಹಿಗಳನ್ನು ಪೂರೈಸುತ್ತದೆ, ಹೊಸ ಉದ್ಯಮದ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು, ಪರಿಕಲ್ಪನೆಗಳು ಮತ್ತು ಪ್ರವೃತ್ತಿಗಳನ್ನು ಜಗತ್ತಿಗೆ ತೋರಿಸಲು ಅನುಮತಿಸುತ್ತದೆ. ಈ ಘಟನೆಯ ಹೊರತಾಗಿ, ವರ್ಷವಿಡೀ ಇತರ ಕಾರುಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ ಎಂಜಿ ಹೆಕ್ಟರ್ ಮೋರಿಸ್ ಗ್ಯಾರೇಜಸ್ ಇಂಡಿಯಾ ಹೊಸ ಹೆಕ್ಟರ್ ಎಸ್‌ಯುವಿಯನ್ನು ಜನವರಿ 5, 2023 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಈ ವರ್ಷದ ಮೊದಲ…
ಪಪ್ಪಾಯಿ ಬೀಜಗಳು ನಮ್ಮ ದೇಹಕ್ಕೆ ಉತ್ತಮವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪಪ್ಪಾಯಿ ಬೀಜಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ಉರಿಯೂತ-ವಿರೋಧಿ ಪರಿಣಾಮಗಳು: ಕೆಲವು ಅಧ್ಯಯನಗಳು ಪಪ್ಪಾಯಿ ಬೀಜಗಳು ಉರಿಯೂತದ ಗುಣಲಕ್ಷಣಗಳಿಗೆ ಪರಿಣಾಮಕಾರಿಯಾಗಿವೆ ಎಂದು ಹೇಳುತ್ತವೆ. ಇದು ಉರಿಯೂತದಿಂದ ಗುಣಲಕ್ಷಣಗಳನ್ನು ಹೊಂದಿರುವ ಪರಿಸ್ಥಿತಿಗಳಿಗೆ ಪ್ರಯೋಜನಕಾರಿಯಾಗಿದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು: ಪಪ್ಪಾಯಿ ಬೀಜಗಳು ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಸೋಂಕುಗಳನ್ನು ತಡೆಗಟ್ಟುವಲ್ಲಿ ಅವರ ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತದೆ. ಜೀರ್ಣಕಾರಿ ಆರೋಗ್ಯ: ಪಪ್ಪಾಯಿ ಬೀಜಗಳು ಪಪೈನ್‌ನಂತಹ ಕಿಣ್ವಗಳನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಕಿಣ್ವಗಳು ಪ್ರೋಟೀನ್‌ಗಳನ್ನು ಒಡೆಯಲು ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಪರಾವಲಂಬಿ ಹೊರಹಾಕುವಿಕೆ: ಕೆಲವು ಸಾಂಪ್ರದಾಯಿಕ ಔಷಧ ಪದ್ಧತಿಗಳು ಕರುಳಿನ ಪರಾವಲಂಬಿಗಳನ್ನು ಹೊರಹಾಕಲು ಪಪ್ಪಾಯಿ ಬೀಜಗಳನ್ನು ಬಳಸುತ್ತವೆ. ಇದು ಸಾಮಾನ್ಯ ನಂಬಿಕೆಯಾಗಿದ್ದರೂ, ಈ ನಿರ್ದಿಷ್ಟ ಪ್ರಯೋಜನದ ಕುರಿತು ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ. ಯಕೃತ್ತಿನ ಬೆಂಬಲ: ಪಪ್ಪಾಯಿ ಬೀಜಗಳು ಯಕೃತ್ತಿನ ಮೇಲೆ ರಕ್ಷಣಾತ್ಮಕ…
ರಣ್‌ಬೀರ್ ಕಪೂರ್- ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸೂಪರ್ ಹಿಟ್ ಆಗಿದೆ. ರಣ್‌ಬೀರ್ ಜೋಡಿಯಾಗಿ ಕಾಣಿಸ್ಕೊಂಡ ರಶ್ಮಿಕಾ ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರುವ ಪರ್ಫಾಮೆನ್ಸ್ ನೀಡಿದ್ದಾರೆ. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಪರಿಣಿತಿ ಚೋಪ್ರಾ ಇದೀಗ ತಮ್ಮ ತಪ್ಪಿನ ಅರಿವಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ (Sandeep Reddy Vanga) ವಂಗಾಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ. ಅನಿಮಲ್ (Animal) ಸಿನಿಮಾ ರಿಲೀಸ್ ಆದ್ಮೇಲೆ ರಶ್ಮಿಕಾ ನಟಿಸಿದ ಗೀತಾಂಜಲಿ ಪಾತ್ರದ ವಿಚಾರ ಚರ್ಚೆಯಲ್ಲಿತ್ತು. ಇಲ್ಲಿ ರಶ್ಮಿಕಾ ಮಾಡಿರುವ ಪಾತ್ರಕ್ಕೆ ಮೊದಲು ಕರೆ ಹೋಗಿದ್ದು ಪರಿಣಿತಿ ಚೋಪ್ರಾಗೆ ಅನ್ನೋದು ಅಸಲಿ ವಿಷಯ. ಇದನ್ನ ಸಂದರ್ಶನವೊಂದರಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ಹೇಳಿದ್ದರು. ಅನಿಮಲ್ ಸಕ್ಸಸ್ ಬಳಿಕ ಪರಿಣಿತಿ (Parineethi Chopra) ಸಂದೀಪ್‌ಗೆ ಸಾಧ್ಯವಾದರೆ ಕ್ಷಮಿಸಿಬಿಡಿ ಎಂದು ಸಂದೇಶ ಕಳಿಸಿದ್ದಾರೆ. ‘ಅನಿಮಲ್’ನಲ್ಲಿ ರಶ್ಮಿಕಾ ಮಾಡಿರುವ ಗೀತಾಂಜಲಿ ಪಾತ್ರಕ್ಕೆ ಭರ್ಜರಿ ಮೆಚ್ಚುಗೆ ಬಂದಿದೆ. ಬಾಲಿವುಡ್‌ನಲ್ಲಿ ಎರಡು ಚಿತ್ರ ಮಾಡಿ ಬ್ರೇಕ್‌ಗಾಗಿ ಕಾಯುತ್ತಿದ್ದ ರಶ್ಮಿಕಾಗೆ ಅನಿಮಲ್ ಭದ್ರ ನೆಲೆ…
ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಮುಖ್ಯಭೂಮಿಕೆಯ ಗುಂಟೂರು ಖಾರಂ ಸಿನಿಮಾದ ಟಪ್ಪಾಂಗುಚ್ಚಿ ಹಾಡಿಗೆ ಕನ್ನಡತಿ ಶ್ರೀಲೀಲಾ (Sreeleela) ಹೆಜ್ಜೆ ಹಾಕಲಿದ್ದಾರೆ. ಅದೊಂದು ಡಾನ್ಸ್ ನಂಬರ್ ಸಾಂಗ್ ಆಗಿದ್ದು, ಶ್ರೀಲೀಲಾ ಮೈಚಳಿ ಬಿಟ್ಟು ಕುಣಿಯಲಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಬೇಕಾಗಿದೆ. ಗುಂಟೂರು ಖಾರಂ (Guntur Kharam) ಸಿನಿಮಾಗೆ ನಾಯಕಿ ಯಾರು ಎನ್ನುವ ಚರ್ಚೆ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. ಪೂಜಾ ಹೆಗಡೆ (Pooja Hegde) ಬಿಟ್ಟು ಹೋದ ಸ್ಥಾನವನ್ನು ತುಂಬುವವರು ಯಾರು? ಎನ್ನುವ ಪ್ರಶ್ನೆ ಮೂಡಿತ್ತು. ಶ್ರೀಲೀಲಾ, ತ್ರಿಷಾ ಸೇರಿದಂತೆ ಹಲವರು ಹೆಸರು ನಾಯಕಿ ಸ್ಥಾನಕ್ಕಾಗಿ ಕೇಳಿ ಬಂದಿತ್ತು. ಈ ಎಲ್ಲ ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಮಣೆ ಹಾಕಿತ್ತು ಚಿತ್ರತಂಡ. ಈ ಹಿಂದೆ ಕನ್ನಡದ ನಟಿ ಶ್ರೀಲೀಲಾ ಅಥವಾ ಸ್ಟಾರ್ ನಟಿ ತ್ರಿಷಾ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಯುವ…
ನೆಲಮಂಗಲ:- ಉದ್ಭವ ಗಣೇಶ ಜಾತ್ರೆಯಲ್ಲಿ ಪುಂಡರ ಹಾವಳಿಯಿಂದ ಅಂಗಡಿಕಾರರು ರೋಸಿ ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಜರುಗಿದೆ. ಪುಂಡರು ರೌಡಿಶೀಟರ್ ರಂಗ ಅಲಿಯಾಸ್ ಗಣೇಶನ ಗುಡಿ ರಂಗ ಹೆಸರಿನಲ್ಲಿ ಜಾತ್ರೆಯಲ್ಲಿ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದರು. ಈ ವಿಚಾರ ತಿಳಿದ ನೆಲಮಂಗಲ ಟೌನ್ ಠಾಣೆ ಪೊಲೀಸರು ಸ್ಥಳೀಯರ ನೆರವಿನಿಂದ ಆರೋಪಿಗಳನ್ನು ವಶಕ್ಕೆ ಪಡೆದರು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಂಡರು ಜಾತ್ರೆಯಲ್ಲಿ ಯುವತಿಯರು ಕಂಡರೇ ಪೀಪಿ ಊದಿ ಕರ್ಕಶ ಶಬ್ದ ಮಾಡಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಈ ರೀತಿ ಉಪಟಳ ನೀಡುತ್ತಾ ವಿಕೃತ ಆನಂದ ಪಡೆಯುತ್ತಿದ್ದರು. ಹೀಗಾಗಿ ಪುಂಡರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮತ್ತೊಂದಡೆ ಮಂಗಳಮುಖಿಯರ ಉಪಟಳ ಮಿತಿಮೀರಿದೆ. ಹೌದು ಮಂಗಳಮುಖಿಯರು ಕೂಡ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೇ ಬಟ್ಟೆ ಎತ್ತಿ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಹಣ ಕೊಡದ ಅಂಗಡಿಯಲ್ಲಿನ ಸಾಮಾನುಗಳನ್ನ ಎತ್ತಿ ಬಿಸಾಡುತ್ತಿದ್ದರು. ಈ…
ಬೆಂಗಳೂರು: ಪಕ್ಷೀಯರ ವಿರುದ್ಧ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿ ಗುಂಡು ಸಿಡಿಸಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ನಲವತ್ತು ಸಾವಿರ ಕೋಟಿ ಕೋವಿಡ್ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ನನ್ನನ್ನ ಉಚ್ಛಾಟನೆ ಮಾಡಿದ್ರೆ,ದಾಖಲೆ ಬಿಡುಗಡೆ ಮಾಡುವುದಾಗಿ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ. ವಾಯ್ಸ್-ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವ್ರ ಕುಟುಂಬದ ವಿರುದ್ಧ ಒಂದಲ್ಲಾ ಒಂದು ವಿಚಾರಗಳಿಗೆ,ವಾಗ್ದಾಳಿ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ವೇಳೆ ನಲವತ್ತು ಸಾವಿರ ಕೋಟಿ ಹಣ ಅವ್ಯವಹಾರ ಆಗಿದೆ ಎಂದು ಬಿಎಸ್ವೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಅಲ್ದೆ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ ಮರುದಿನವೇ ಎಲ್ಲ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಯತ್ನಾಳ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ವಾಯ್ಸ್-ಇನ್ನು ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಗೆ ಯತ್ನಾಳ್,ಬಿಎಸ್ವೈ ವಿರುದ್ಧ ಏಕವಚನದಲ್ಲಿ ರಣಾಕ್ರೋಶ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ತನ್ನ ಕುಟುಂಬಕ್ಕೆ ಏನ್ ಬೇಕೋ ಅದನ್ನ ಮಾಡಿಕೊಂಡಿದ್ದಾನೆ.ತನ್ನ ಚೇಲಾಗಳಿಗೆ ಏನು ಮಾಡಬೇಕೋ ಅದನ್ನ ಮಾಡಿದ್ದಾರೆ.ಬಿಎಸ್ವೈ ಕುಟುಂಬಕ್ಕೆ ಕರ್ನಾಟಕ…
2023-24ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆಯಾಶ್ರಿತ ಕೃಷಿ ನೀತಿ, 2014ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸಲು ನಿರ್ಧರಿಸಲಾಗಿದೆ. ಸಮರ್ಪಕವಾಗಿ ಮಳೆ ನೀರಿನ ಸಂಗ್ರಹಣೆ ಮಾಡುವುದು. ಶೇಖರಣೆಯಾದ ನೀರನ್ನು ಉಪಯುಕ್ತವಾಗಿ ಬಳಕೆ ಮಾಡಿ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸಿ ಆದಾಯ ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ. 100 ಕೋಟಿ ರೂ ವೆಚ್ಚದಲ್ಲಿ ಕೋಲಾರ ಜಿಲ್ಲೆ ಸೇರಿದಂತೆ 24 ಜಿಲ್ಲೆಗಳ ವ್ಯಾಪ್ತಿಯ 106 ತಾಲೂಕುಗಳಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. 106 ತಾಲೂಕುಗಳಲ್ಲಿ16,062 ಕೃಷಿ ಹೊಂಡ ನಿರ್ಮಾಣ ಗುರಿ ಹೊಂದಿದ್ದು, ಕ್ಷೇತ್ರ ಬದು ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ ಅಳವಡಿಕೆ. ಕೃಷಿ ಹೊಂಡದಿಂದ ನೀರು…
ಬೆಂಗಳೂರು:- ಹೊಸವರ್ಷದ ಹಿನ್ನೆಲೆ, ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು ತಯಾರಿ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಹೊಸ ವರ್ಷಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಿದ್ದವಾಗುತ್ತಿದೆ. ಅದರಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು ತಯಾರಿ ನಡೆಸುತ್ತಿದ್ದಾರೆ ಎಂದರು. ಹೊಸ ವರ್ಷಾಚರಣೆ ವೇಳೆ ಜನರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೂ ಮಹಿಳೆ ಮತ್ತು ಮಕ್ಕಳಿಗೆ ಸಮಸ್ಯೆ ಆಗಬಾರದು. ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದರು. ಭದ್ರತೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ನಿಯೋಜಿಸಲಾಗಿದೆ. ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಪಿಐ, 600 ಸಬ್ಇನ್ಸ್ಪೆಕ್ಟರ್ಗಳು, 600 ಎಎಸ್ಐ, 1800 ಹೆಡ್ಕಾನ್ಸ್ಟೇಬಲ್ಸ್, 5,200 ಕಾನ್ಸ್ಟೇಬಲ್ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.