ದಾವಣಗೆರೆ: ನೆರೆ ರಾಜ್ಯ ಕೇರಳ ಬಳಿಕ ಕರ್ನಾಟಕದಲ್ಲೂ ಕೋವಿಡ್ ಭೀತಿ ಶುರುವಾಗಿದೆ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಒಬ್ಬರಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಇದು ಹೊಸ ಜೆಎನ್-1 ತಳಿಯಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ವೃದ್ಧರೊಬ್ಬರು ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದು, ಸುಸ್ತು ಕಾಣಿಸಿಕೊಂಡಾಗ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಕೋವಿಡ್ ಪತ್ತೆಯಾಗಿದೆ. ಡಿ. 25ರ ರಾಜ್ಯ ಬುಲೆಟಿನ್‌ನಲ್ಲಿ ತೋರಿಸಲಾಗಿದೆ. ಯಾವುದೇ ತೊಂದರೆ ಇಲ್ಲ. ಸುರಕ್ಷಿತವಾಗಿದ್ದಾರೆ’ ಎಂದು ಡಿಎಚ್‌ಒ ಡಾ.ಷಣ್ಮುಖಪ್ಪ ತಿಳಿಸಿದರು. ಡಿ.25ರಂದು 97 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಒಂದು ಪ್ರಕರಣ ಪತ್ತೆಯಾಗಿದೆ. ಡಿ.26ರಂದು 180 ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲವೂ ನೆಗೆಟಿವ್ ಬಂದಿವೆ. ಜಿಲ್ಲೆಯಲ್ಲಿ ಕೋವಿಡ್ ಎದುರಿಸಲು ಬೆಡ್ ವ್ಯವಸ್ಥೆ, ಕೋವಿಡ್ ಕೇರ್ ಸೆಂಟರ್‌ಗಳನ್ನು ಮೂಲಸೌಲಭ್ಯಗಳ ಜೊತೆ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
Author: AIN Author
ಹುಬ್ಬಳ್ಳಿ-: ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿವೊಂದಕ್ಕೆ ವಿದ್ಯುತ್ ವೈರ ತಾಗಿ ಬೆಂಕಿ ಹೊತ್ತಿಕೊಂಡ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಗುತ್ತಿಗನೂರ ಗ್ರಾಮದಿದ್ದು, ಚಾಲಕನ ಸಮಯಪ್ರಜ್ಞಾಯಿಂದ ಬಾರಿ ಅನಾಹುತವೊಂದು ತಪ್ಪಿದೆ. ಗುತ್ತಿಗನೂರು ಗ್ರಾಮದಿಂದ ಭತ್ತದ ಹುಲ್ಲು ಲೋಡ್ ಲಾಡಿದ ಲಾರಿ ಗ್ರಾಮದಲ್ಲಿ ಸಾಗಿ ಬರುತ್ತಿರುವ ಸಂದರ್ಭದಲ್ಲಿ ವಿದ್ಯುತ್ ವೈರ ತಾಗಿದೆ. ಇದರಿಂದ ಲಾರಿಯ ಮೇಲ್ಭಾಗದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಲಾರಿ ಚಾಲಕ ಕೂಡಲೇ ಲಾರಿಯನ್ನು ಗುತ್ತಿಗನೂರ ಗ್ರಾಮದಿಂದ ಹೊರಗಡೆ ತಂದು ನಿಲ್ಲುಸಿದ್ದಾನೆ. ಬಳಿಕ ಗ್ರಾಮಸ್ಥರ ನೇರವು ಪಡೆದುಕೊಂಡು ಅಹ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಸಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಕೊನೆಗೆ ಬೆಂಕಿನಂದಿಸಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಂಕಿ ನಂದಿಸಿದ ನಂತರ ಗುತ್ತಿಗನೂರು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ. ಗ್ರಾಮದ ಹೊರವಲಯದಲ್ಲಿ ಹಲವು ಗ್ರಾಮಸ್ಥರ ಬಣವಿ ಇದ್ದು, ಒಂದುವೇಳೆ ಬೆಂಕಿ ಕಿಡಿ ಹಾರಿ…
ಚಾಮರಾಜನಗರ:- ಮಹದೇಶ್ವರ ಬೆಟ್ಟಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ವಾರಾಂತ್ಯ, ಕ್ರಿಸ್‌ಮಸ್ ರಜೆಗಳ ಅವಧಿಯಲ್ಲಿ ವಿವಿಧ ಉತ್ಸವಗಳಿಂದ ₹1.29 ಕೋಟಿ ಆದಾಯ ಬಂದಿದೆ. ಶನಿವಾರ ₹17,11,509, ಭಾನುವಾರ ₹54,80,984 ಮತ್ತು ಕ್ರಿಸ್‌ಮಸ್ ದಿನ ₹57,34,215 ಆದಾಯ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಸೇವೆಗಳು, ಮಾಹಿತಿ ಕೇಂದ್ರ, ಲಾಡು ವಿತರಣೆ, ತೀರ್ಥ ಪ್ರಸಾದ, ಬ್ಯಾಗ್, ಪಾರ್ಕಿಂಗ್, ಮಿಶ್ರ ಪ್ರಸಾದ, ಅಕ್ಕಿ ಸೇವೆ, ಪುದುವಟ್ಟು ಸೇವೆ, ವಿಶೇಷ ಪ್ರವೇಶ ಶುಲ್ಕ, ಜನ ವಾಹನ ಕ್ಯಾಲೆಂಡರ್ ಹಾಗೂ ಇತರೆ ಸೇರಿ ವಿವಿಧ ವಿಭಾಗದಿಂದ ವಸೂಲಾದ ಮೊತ್ತಗಳು ಇದರಲ್ಲಿ ಸೇರಿವೆ. ಹುಂಡಿ ಕಾಣಿಕೆಯ ಹಣ ಇದರಲ್ಲಿ ಸೇರಿಲ್ಲ. ಲಾಡು ಮಾರಾಟದಿಂದ ಶನಿವಾರ ₹3,90,875, ಭಾನುವಾರ ₹9,71,425 ಮತ್ತು ಸೋಮವಾರ ₹12,05,350 ಸಂಗ್ರಹವಾಗಿದೆ. ಮೂರು ದಿನಗಳ ಅವಧಿಯಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಹಾಡೊಂದರ ಮೂಲಕ ವ್ಯಾಪಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್ (Nimika Ratnakar). ಬಣ್ಣದ ಜಗತ್ತಿನ ಭಾಗವಾಗಿದ್ದುಕೊಂಡು, ಸದಾ ಕ್ರಿಯಾಶೀಲವಾಗಿರುವ ನಿಮಿಕಾ ಇದೀಗ ಖ್ಯಾತ ಕ್ರಿಕೆಟ್ ಆಟಗಾರ ಪೃಥ್ವಿ ಶಾ (Prithvi Shah)ರನ್ನು ಭೇಟಿಯಾಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಕ್ರಿಸ್ ಮಸ್ (Christmas) ಹಬ್ಬ ನಿಮಿಕಾ ರತ್ನಾಕರ್ ತಮ್ಮಿಬ್ಬರು ಸಹೋದರರೊಂದಿಗೆ ಕ್ರಿಕೆಟರ್ ಪೃಥ್ವಿ ಶಾರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪೃಥ್ವಿ ಜೊತೆಗೂಡಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮಿಸಿದ್ದಾರೆ. ಮಾಡೆಲಿಂಗ್ ಕ್ರೇತ್ರದಲ್ಲಿ ಮಿಂಚುತ್ತಾ, ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ಮಂಗಳೂರು ಮೂಲದ ನಿಮಿಕಾ ಸಿನಿಮಾದಾಚೆಗೂ ಒಂದಷ್ಟು ಸೆಲೆಬ್ರಿಟಿಗಳ ಸ್ನೇಹ ವಲಯದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೊಬ್ಬರಾಗಿರುವ ಪೃಥ್ವಿ ಶಾ ಜೊತೆಗಿನ ಕ್ರಿಸ್ ಮಸ್ ಆಚರಣೆ ನಿಮಿಕಾ ಖುಷಿಗೆ ಕಾರಣವಾಗಿದೆ.
ಬಾಲಿವುಡ್ ನ ಮತ್ತೊಂದು ಭಾರೀ ಬಜೆಟ್ ಸಿನಿಮಾ ಡಂಕಿ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಸಲಾರ್ ಎದುರು ಈ ಸಿನಿಮಾ ಅಬ್ಬರಿಸುತ್ತಾ ಅಥವಾ ಸೋಲು ಕಾಣುತ್ತಾ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಲಾರ್ ಮುಂದೆ ತುಸು ಮುಗ್ಗರಿಸಿದ್ದರೂ, ತನ್ನ ಪಾಡಿಗೆ ತಾನು ತಣ್ಣಗೆ ಗೆಲುವಿನತ್ತ ಹೆಜ್ಜೆ ಹಾಕಿದೆ. ಡಂಕಿ ಸಿನಿಮಾದ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಂತೆ, ವಾರಂತ್ಯಕ್ಕೆ ಡಂಕಿ ಗಳಿಸಿದ್ದು 211.13 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ. ಒಂದು ಕಡೆ ಸಿನಿಮಾ ಕೋಟಿ ಕೋಟಿ ಗಳಿಸುತ್ತಿದ್ದರೆ, ಮತ್ತೊಂದು ಕಡೆ ಪೈರಸಿ ಹಾವಳಿ ಕೂಡ ಚಿತ್ರದ ಹಿನ್ನೆಡೆಗೆ ಕಾರಣವಾಗುತ್ತಿದೆ. ಡಂಕಿ (Dunki) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ (Piracy) ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ. ವೆಬ್…
ಕೋಲಾರ :- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಎಸ್.ಜೀಡಮಾಕಲಪಲ್ಲಿ ಗ್ರಾಮದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಯುವಕ ಹಾಗೂ ಮಹಿಳೆ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದಾರೆ. ಅನಸೂಯ (35) ಹಾಗೂ ವಿಜಯ್ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡವರು. ಅನಸೂಯಗೆ ಮದುವೆಯಾಗಿ ಎರಡು ಮಕ್ಕಳು ಇದ್ದರೂ ಸಹ ಸಹ ಅವಿವಾಹಿತ ಯುವಕ ವಿಜಯ್ ಕುಮಾರ್ನೊಂದಿಗೆ ಅಕ್ರಮ ಸಂಬಂಧವಿತ್ತು. ಅಲ್ಲದೇ ಇವರಿಬ್ಬರು ಕಳೆದ ಎರಡು ತಿಂಗಳ ಹಿಂದೆ ಊರು ಬಿಟ್ಟು ನಾಪತ್ತೆಯಾಗಿದ್ದರು. ಆದ್ರೆ, ಇದೀಗ ಗ್ರಾಮಕ್ಕೆ ಬಂದು ಏಕಾಏಕಿ ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಸೂಯ, ಮಂಜುನಾಥ್ ಎನ್ನುವರೊಂದಿಗೆ ಮದುವೆಯಾಗಿದ್ದು, ಈಗಾಗಲೇ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇನ್ನು ವಿಜಯ್ ಕುಮಾರ್ ಮದುವೆಯಾಗಿರಲಿಲ್ಲ. ಅನಸೂಯ ಮತ್ತು ವಿಜಯ್ ಕುಮಾರ್ ನಡುವೆ ಅಕ್ರಮ ಸಂಬಂಧವಿತ್ತು. ಅಲ್ಲದೇ ಈ ಜೋಡಿ ಮನೆ ಬಿಟ್ಟು ಓಡಿ ಹೋಗಿತ್ತು. ಈಗ ಇಬ್ಬರು ಕಳೆದ ರಾತ್ರಿ ಗ್ರಾಮದ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಜಾಭಾರತ, ಗಿಚ್ಚಿ ಗಿಲಿಗಿಲಿ (Gichchi Giligili) ನಟಿ ಪ್ರಿಯಾಂಕಾ ಕಾಮತ್ (Priyanka Kamath) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿಗೆ ಕಿರುತೆರೆ ನಟ-ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ ಕಳೆದ ಎರಡು ದಿನಗಳಿಂದ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ಮದುವೆ ಕುರಿತ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿವೆ. ಇದೀಗ ದಾಂಪತ್ಯ ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಅಮಿತ್- ಪ್ರಿಯಾಂಕಾ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ನಂತರದಲ್ಲಿ ಏಳು-ಬೀಳಿನಲ್ಲಿ ಇವರಿಬ್ಬರು ಒಟ್ಟಿಗೆ ಸಾಥ್ ನೀಡಿದ್ದರು. ಇದೀಗ ಹೊಸ ಬಾಳಿಗೆ ನವಜೋಡಿ ಕಾಲಿಟ್ಟಿದ್ದಾರೆ. ಅಮಿತ್ ನಾಯಕ್ (Amith Nayak) ಮೂಲತಃ ಕುಂದಾಪುರದವರು. ಕಳೆದ ಒಂದು ವರ್ಷದಿಂದ ಈ ಜೋಡಿ ಸಾಕಷ್ಟು ಕಡೆ ಪ್ರವಾಸ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು.
ಆನೆಯನ್ನ ಪಳಗಿಸೋಕೆ ಒಬ್ಬ ಮಾವುತ ಬೇಕು ಅಂತ ಆ್ಯಡ್ ನೋಡಿದೆ. ಹಾಗಾಗಿ ಬಂದೆ. ಇದು ಅಸ್ತಿಕ್ ಅವಿನಾಶ್ ಶೆಟ್ಟಿ (Avinash Shetty) ವೈಲ್ಡ್ ಕಾರ್ಡ್ (Wild Card) ಮೂಲಕ ಈ ಸಲದ ಬಿಗ್ ಬಾಸ್ ಮನೆಯೊಳಗೆ (Bigg Boss Kannada 10) ಹೋದಾಗ ಆಡಿದ ಮಾತು. ಅವರ ಸ್ಟೈಲ್, ಕಾನ್ಫಿಡೆನ್ಸ್, ಮಾತು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂಬುದನ್ನು ದೃಢೀಕರಿಸುವ ಹಾಗೆಯೇ ಇತ್ತು. ಆದರೆ ಅವಿನಾಶ್ ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲು ಸಾಧ್ಯಾಗಿಲ್ಲ. ಹಾಗಾಗಿಯೇ ಈ ವಾರ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಿಂದ ಹೊರಗೆ ಬರುವುದರ ಮೂಲಕ, ಅರ್ಧದಲ್ಲಿ ಎಂಟ್ರಿ ಕೊಟ್ಟು ಮನೆಯೊಳಗೆ ಜಾಗ ಗಿಟ್ಟಿಸುವುದು ಸುಲಭದ ಮಾತಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಮೈಕಲ್- ಅವಿನಾಶ್ ಭಾನುವಾರದ ಸಂಚಿಕೆಯ ಕೊನೆಯಲ್ಲಿ ಕಾರಿನಲ್ಲಿ ಕೂತು ಮನೆಯಿಂದ ಹೊರಗೆ ಹೋದಾಗ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ…
ದೇವನಹಳ್ಳಿ:- ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯು ಅಂಗಡಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಬೆಂಗಳೂರಿಲ್ಲಿಂದು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ಸಾದಹಳ್ಳಿ ಗೇಟ್ ಬಳಿಯ ಟೋಲ್ ಪ್ಲಾಜಾದಿಂದ ಆರಂಭವಾಗುವ ರ‍್ಯಾಲಿ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಲ್ಲದೇ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಏರ್ಪೋರ್ಟ್ ರಸ್ತೆಯ ಡಿವೈಡರ್ ಬಳಿ ಸೈಡ್ ವಾಲ್ಗಳನ್ನು ಅವಳವಡಿಸಿದ್ದಾರೆ. ಪ್ರತಿಭಟನೆ ವೇಳೆ ಜನ ನೋಡುತ್ತಾ ಟ್ರಾಫಿಕ್ ಜಾಮ್ ಮಾಡುತ್ತಾರೆ ಎಂದು ಪೊಲೀಸರು ಸುಮಾರು 500 ಮೀಟರ್ ಗೂ ಅಧಿಕ ದೂರ ಸೈಡ್ ವಾಲ್ ಅಳವಡಿಕೆ ಮಾಡಿದ್ದಾರೆ. ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್ ಬಳಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 1 ಎಸಿಪಿ, 6 ಇನ್ಸ್ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್ ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ರ‍್ಯಾಲಿಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದರೆ ಕಾರ್ಯಕರ್ತರನ್ನ ವಶಕ್ಕೆ ಪಡೆಯುವ…
ಬೆಂಗಳೂರು: ಹೊಸತಳಿ ಜೆಎನ್.1 ಪತ್ತೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಜೆಎನ್.1 ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡ ರಾಜ್ಯ ಸರ್ಕಾರ ನಿರ್ಬಂಧವಿಲ್ಲದಿದ್ರೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಹಲವು ಅಗತ್ಯ ಕ್ರಮ ಸಂಪುಟ ಉಪಸಮಿತಿ ಸಭೆಯಲ್ಲಿ ಕೈಗೊಂಡ ಕ್ರಮದ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ ಟೆಸ್ಟಿಂಗ್ ಹೆಚ್ಚಳಕ್ಕೆ ಮುಂದು..ಸೋಂಕಿನ ಕಡಿವಾಣಕ್ಕೆ ಮುನ್ನೆಚ್ಚರಿಕಾ ಕ್ರಮ ಜೆಎನ್.1 ಕಡಿವಾಣಕ್ಕೆ ಸರ್ಕಾರ ಕ್ರಮ ರಾಜ್ಯದಲ್ಲಿ ಈಗಾಗಲೇ ನೀಡಿರುವ 5 ಸಾವಿರ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಬೇಕು ಸೋಂಕಿತರ ಸಂಪರ್ಕಿತರು ಕೊರೊನಾ ಲಕ್ಷಣ ಹೊಂದಿದ್ದಲ್ಲಿ ಟೆಸ್ಟ್ ಮಾಡಿಸಿಕೊಳ್ಳಬೇಕು ಸೋಂಕಿರನ್ನ ಪಿಹೆಚ್ ಸಿ ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸಬೇಕು ಐಸಿಯುನಲ್ಲಿರುವ ಸೋಂಕಿತರನ್ನ Tele ICU ನ ಮೂಲಕ ಮೇಲ್ವಿಚಾರಣೆ ನಡೆಸುವುದು ಅಗತ್ಯವಿರುವ ಸೋಂಕಿತರ ಸ್ಯಾಂಪಲ್ಸ್ ಜೀನೋಮ್ ಸೀಕ್ವೆನ್ಸ್ ಗಾಗಿ ಕಳುಹಿಸುವುದು ಮುನ್ನೆಚ್ಚರಿಕ ಕ್ರಮವಾಗಿ PSA plantಗಳು & LMO plantಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು PESO license ಆದಷ್ಟು ಶೀಘ್ರ ಪಡೆಯುವುದು, ಆಕ್ಸಿಜನ್ ಉತ್ಪಾದನಾ ಪ್ರಮಾಣ ಪುಷ್ಟಿಕರಿಸಬೇಕು…