Author: AIN Author

ನವದೆಹಲಿ: ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಲು ಸಿಪಿಐ-ಎಂ (CPI-M) ತೀರ್ಮಾನಿಸಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿ, ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡುವ ಹಕ್ಕನ್ನು ನಾವು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರತಿಪಾದಿಸಿ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಬಹುದು. ಆದರೆ ಉದ್ಘಾಟನಾ ಸಮಾರಂಭ ರಾಜ್ಯ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ. https://ainlivenews.com/prime-minister-modis-youtube-channel-has-crossed-2-crore-subscribers/ ಭಾರತೀಯ ಸಂವಿಧಾನ (Constitution) ಮತ್ತು ಸುಪ್ರೀಂ ಕೋರ್ಟ್‌ಗೆ (Supreme Court) ಸಂಬಂಧಿಸಿದಂತೆ, ರಾಜ್ಯ ಈ ರೀತಿಯ ಕಾರ್ಯಕ್ರಮ ಮಾಡಬಾರದು. ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಇತರರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಬಿಜೆಪಿ (BJP) ಧಾರ್ಮಿಕ ರಾಜಕೀಯದಲ್ಲಿ ತೊಡಗಿದೆ. ಇದು ಸರಿಯಲ್ಲ. ಅದಕ್ಕೆ ನಾವು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಮ್ಮ ಪಕ್ಷ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಮಾಜಿ ರಾಜ್ಯಸಭಾ ಸದಸ್ಯೆ, ಬೃಂದಾ ಕಾರಟ್‌ (Brinda Karat) ಸ್ಪಷ್ಟಪಡಿಸಿದ್ದಾರೆ.

Read More

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌ (Petrol rate), ಡೀಸೆಲ್‌ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ   96.72.…

Read More

ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಡಿ.21ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಂಕಿ ಸಿನಿಮಾಗೆ ಪ್ರೇಕ್ಷಕ ತೋರಿಸುತ್ತಿರುವ ಪ್ರೀತಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ. ಈ ಹಿನ್ನೆಲೆ ಭಾನುವಾರದಂದು ತಮ್ಮ ನಿವಾಸ ಮನ್ನತ್ (Mannat) ಎದುರು ಜಮಾಯಿಸಿದ್ದ ನೂರಾರು ಅಭಿಮಾನಿಗಳಿಗೆ ಶಾರುಖ್ ದರ್ಶನ ಕೊಟ್ಟಿದ್ದಾರೆ. ತಮ್ಮ ಸಿಗ್ನೇಚರ್ ಶೈಲಿಯ ಪೋಸ್ ನೀಡಿ ಫ್ಯಾನ್ಸ್ ಗೆ ಧನ್ಯವಾದ ತಿಳಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆ ಸೇರಿ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಂದು ಸಿಂಪಲ್ ಕಥೆಯನ್ನು ಬಹಳ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್‌ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ. ಕಿಂಗ್ ಖಾನ್- ಹಿರಾನಿ ಒಟ್ಟಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ‘ಡಂಕಿ’…

Read More

ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ (Kannada Board) ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (Karnataka Rakshana Vedike) ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಾಣವನ್ನೂ ಲೆಕ್ಕಿಸದೇ ಬೃಹತ್ ಜಾಹೀರಾತು ಫಲಕ ಏರಿ ಇಂಗ್ಲಿಷ್‍ನಲ್ಲಿದ್ದ ಬೋರ್ಡ್ ಅನ್ನು ಹರಿದು ಹಾಕಿದ್ದಾರೆ. ಹಾಗೆ ಯುಬಿ ಸಿಟಿ ಬೋರ್ಡ್ ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರ ನಂತರ ಆಂಗ್ಲ ಬೋರ್ಡ್‌ಗಳನ್ನ ಪುಡಿ ಪುಡಿ ಮಾಡುತ್ತಿದ್ದು  ಹೀಗೆ ಪುಂಡಾಟ ಮಾಡುತ್ತಿದ್ದ ಕೆಲ ಕರವೇ ಕಾರ್ಯಕರ್ತರು ಹಾಗೆ ಸಾರ್ವಜನಿಕರಿಗೆ ತೊಂದರೆ ಮಾಡ್ತಿದ್ದವರನ್ನ ವಶಕ್ಕೆ ಪಡೆದ ಪೋಲಿಸರು ಕಲ್ಲು ತೂರಾಟ ಮಾಡುತ್ತಿದ್ದ ಹದಿನೈದರಿಂದ ಇಪ್ಪತ್ತು ಕಾರ್ಯಕರ್ತರನ್ನ ವಶಕ್ಕೆ ಪಡೆದ ಕಬ್ಬನ್ ಪಾರ್ಕ್ ಪೋಲಿಸರು

Read More

ನವದೆಹಲಿ: ದೆಹಲಿಯ (New Delhi) ಚಾಣಕ್ಯಪುರಿಯಲ್ಲಿರುವ (Chanakyapuri) ಇಸ್ರೇಲ್ ರಾಯಭಾರಿ ಕಚೇರಿಗೆ (Israel Embassy) ಬಾಂಬ್ ಬೆದರಿಕೆ ಕರೆ (Bomb Threat Call) ಬಂದಿದ್ದು, ದೆಹಲಿ ಪೊಲೀಸರು (Delhi Police) ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರಿಗೆ ಅಪರಿಚಿತ ಕರೆ ಬಂದಿದೆ. ಕರೆಯಲ್ಲಿ ಸ್ಫೋಟದ ಬಗ್ಗೆ ಅಧಿಕಾರಿಗಳಿಗೆ ವರದಿಯಾಗಿದೆ. ಇಸ್ರೇಲಿ ರಾಯಭಾರ ಕಚೇರಿಯ ಹಿಂದೆ ಖಾಲಿ ಜಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಮಾಡಿದ ಅನಾಮಿಕ ವ್ಯಕ್ತಿ ತಿಳಿಸಿದ್ದಾನೆ. https://ainlivenews.com/prime-minister-modis-youtube-channel-has-crossed-2-crore-subscribers/ ಬೆದರಿಕೆ ಕರೆ ಬಂದ ತಕ್ಷಣ ಬಾಂಬ್ ಸ್ಕ್ವಾಡ್‌ನೊಂದಿಗೆ ಪೊಲೀಸರ ವಿಶೇಷ ಸೆಲ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಕರೆ. ಕರೆ ಮಾಡಿದವರ ಗುರುತು, ಮತ್ತು ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. 

Read More

ಕನ್ನಡದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಯುವ ಸಿನಿಮೋತ್ಸಾಹಿಗಳು ಹೊಸ ಬಗೆಯ ಕಥಾಹಂದರ ಮೂಲಕ ಪ್ರೇಕ್ಷಕರ ಎದುರು ಹಾಜರಾಗುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವೇ ಕಾದಲ್. ಪ್ರೀತಿ, ಪ್ರೇಮ, ಪ್ರಯಣದ ಸುತ್ತ ಸಾಗುವ ಸಾಕಷ್ಟು ಸಿನಿಮಾಗಳು ಕನ್ನಡದಲ್ಲಿ ಬಂದು ಹೋಗಿವೆ. ಬರುತ್ತಲೇ ಇದೆ. ಆದರೆ ಭಾವನೆಗಳ ಭಾಷೆಗೆ ಮೌನವೆಂಬ ಲಿಪಿಯೇ ಪ್ರೇಮಿ ಎಂಬ ಆಶಯ ಇಟ್ಟುಕೊಂಡು ಪ್ರೀತಿ ಪ್ರೇಮ ಜಗತ್ತಿನಲ್ಲಿ ಅತಿ ಶ್ರೇಷ್ಠವಾದದ್ದು. ಎಲ್ಲರೊಳಗ್ಗೂ ಹುಟ್ಟಿ ಸಾಯುವ ಭಾವಕೋಶಗಳಿಗೆ ಹೊಸಬಗೆಯ ರೂಪಕೊಡಲು ಸಜ್ಜಾಗಿದ್ದಾರೆ ನಿರ್ದೇಶಕ ವಿಜಯಪ್ರಿಯಾ. ವಿಜಯಪ್ರಿಯಾ ಚೊಚ್ಚಲ ಹೆಜ್ಜೆ ಕಾದಲ್. ವಿಜಯದೀಪ ಪಿಕ್ಚರ್ಸ್ ನ ಮೊದಲ ಕಾಣಿಯಾಗಿರುವ ಈ ಸಿನಿಮಾದ ಟೈಟಲ್ ಅನಾವರಣ ಕಾರ್ಯಕ್ರಮ ಇತ್ತೀಚೆಗಷ್ಟೇ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೀಚಗೊಂಡನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಾರುತಿ ದೇಗುಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಊರಿನ ಗ್ರಾಮಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ಟೈಟಲ್ ಬಿಡುಗಡೆ ಮಾಡಲಾಯಿತು. ಐದು ಕಥೆ ಐದು ಜನ ನಿರ್ದೇಶಕರ ಪೆಂಟಗನ್ ಸಿನಿಮಾಗೆ ಒಂದು ಕಥೆ ಬರೆದು ಸಹ ನಿರ್ದೇಶಕರಾಗಿ ಕೆಲಸ…

Read More

ಬೆಂಗಳೂರು: ಕೊರೋನಾ (Corona Virus) ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳು ಅಂತಾ ಬಂದು ಜನರು ಜೊತೆ ಉದ್ಯಮಗಳು ನೆಲ ಕಚ್ಚಿ ಹೋಗಿದ್ವು. ಹೀಗಾಗಿ ಈ ಬಾರಿ ವೇಷ ಬದಲಿಸಿಕೊಂಡು ಬಂದಿರುವ ಹೊಸ ತಳಿ ಬಗ್ಗೆ ಆತಂಕ ಹೆಚ್ಚು ಮಾಡಿದೆ. ಆರೋಗ್ಯ ಇಲಾಖೆ ರೂಲ್ಸ್ ತರಲಿ ಬಿಡಲಿ ನಮಗೆ ನಾವೇ ರೂಲ್ಸ್ ಮಾಡ್ಕೋತೀವಿ ಅಂತ ಪಿಜಿ ಓನರ್ಸ್ (PG Owners) ಡಿಸೈಡ್ ಮಾಡಿದ್ದಾರೆ. ಕೊರೊನಾ ವೈರಸ್‍ನಿಂದ ಪಿಜಿ ಉದ್ಯಮ ಮಾತ್ರ ಸಂಪೂರ್ಣವಾಗಿ ನೆಲಕಚ್ಚಿ ಹೋಗಿತ್ತು. ಕಳೆದ ಕೋವಿಡ್ ಅಟ್ಟಹಾಸಕ್ಕೆ ನಡುಗಿದ್ದ ಪಿಜಿ ಅಸೋಸಿಯೇಷನ್ ಇದೀಗ ಮುಂಜಾಗ್ರತವಾಗಿ ಸಭೆ ನಡೆಸಿ ಹೊರ ರಾಜ್ಯದಿಂದ ಬರುವಂತವರಿಗೆ ಆರ್ಟಿಪಿಸಿಆರ್ ಕಡ್ಡಾಯಗೊಳಿಸಿ, ಸುರಕ್ಷತಾ ಕ್ರಮಗಳ ಮೇಲೆ ಕಣ್ಣಿಟ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದೇವೆ ಎನ್ನುತ್ತಿದ್ದಾರೆ. ಪಿಜಿ ಅಸೋಸಿಯೇಷನ್‍ನ ಕ್ರಮಗಳೇನು..?: ಕ್ರಿಸ್ಮಸ್ (Christmas) ರಜೆ, ಹೊಸ ವರ್ಷಾಚರಣೆ ಹಿನ್ನಲೆ ಪಿಜಿಯಿಂದ ಊರಿಗೆ ತೆರಳಿದ್ದಾರೆ. ಪಿಜಿಗೆ ಹಿಂದಿರುಗುವಾಗ ಆರೋಗ್ಯದಲ್ಲಿ ಏರುಪೇರಿದ್ರೆ ಕೂಡಲೇ ಆರ್ ಟಿಪಿಸಿಆರ್ ಟೆಸ್ಟ್ (RTPCR Test)…

Read More

ಮಂಡ್ಯ: ಅಲ್ಲಾ ಹು ಅಕ್ಬರ್ ಎನ್ನಬೇಕಾಗಿರುವುದು ನಿಮ್ಮ ಮನೆ ಮತ್ತು ಮಸೀದಿಯಲ್ಲಿಯೇ ಹೊರತು ಸಮಾಜದಲ್ಲಿ ಅಲ್ಲ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದ್ದಾರೆ. ಶ್ರೀರಂಗಪಟ್ಟಣದಲ್ಲಿ (Srirangapatna) ಹನುಮಂತನ ಶೋಭಾಯಾತ್ರೆಯಲ್ಲಿ (Hanuman Shobha Yatra) ಮಾತನಾಡಿದ ಅವರು, ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಇಲ್ಲೇ ಕೂಗಿದ್ದು. ಇಂತಹ ಹೆಣ್ಣುಮಕ್ಕಳಿಗೆ ಹಣ ಕೊಟ್ಟು, ಶಹಬ್ಬಾಸ್‍ಗಿರಿ ಕೊಟ್ಟು ಅಲ್ಕೈದಾ ಭಯೋತ್ಪಾದಕ ಸಂಸ್ಥೆ ಬೆಳೆಸುತ್ತಿದೆ. ಈಕೆ ಅವರ ಸಂಪರ್ಕದಲ್ಲಿದ್ದು, ಮಂಡ್ಯದ ಜನ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ನಮ್ಮ ಸಿಎಂ ಹತ್ತು ಸಾವಿರ ಕೋಟಿ ರೂ.ಗಳನ್ನು ಮುಸಲ್ಮಾನರಿಗೆ ಕೊಡುತ್ತೇವೆ ಎಂದಿದ್ದರು. https://ainlivenews.com/prime-minister-modis-youtube-channel-has-crossed-2-crore-subscribers/  ಇದು ಯಾರಪ್ಪನ ದುಡ್ಡು ಎಂದು ಕೊಡ್ತೀರಿ? ಕಂದಾಯ ಕಟ್ತಿರೋದು ಹಿಂದೂಗಳು. ಅಲ್ಲದೇ ಹಿಜಬ್‍ನ್ನು ಮತ್ತೆ ಜಾರಿ ಮಾಡ್ತಿವಿ ಎಂದು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಈ ಮೂಲಕ ಶಾಲಾ ಮಕ್ಕಳಲ್ಲಿ ಪ್ರತ್ಯೇಕತೆ ತರುತ್ತಿದ್ದಾರೆ. ಸಮವಸ್ತ್ರದ ಉದ್ದೇಶವನ್ನು ಕೊಂದು ಹಾಕುತ್ತಿದ್ದಾರೆ. ಹಿಜಬ್ ತರೋಕೆ ಸಿದ್ದರಾಮಯ್ಯಗೆ  (Siddaramaiah)…

Read More

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಹಾಗು ಭವಾನಿ ರೇವಣ್ಣ ವಿರುದ್ದ ಕಿರುಕುಳ ಆರೋಪ ಪ್ರಕರಣದ ಭಾಗವಾಗಿ ಮಂಗಳವಾರದಂದು ಪ್ರಜ್ವಲ್ ರೇವಣ್ಣ ನವರ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಜೊತೆಗೆ ಜಿಲ್ಲಾ ಎಸ್ಪಿ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ತಮಗೆ ಸೇರಿದ ೧೩ ಎಕರೆ ಭೂಮಿಯನ್ನ ತಾವು ಹೇಳಿದವರಿಗೆ ಮಾರಾಟ ಮಾಡಲು ಕೂಡಿಹಾಕಿ ಕಿರುಕುಳ ಮತ್ತು ಹಲ್ಲೆ ಆರೋಪ. ಮಾರ್ಚ್ ೧೨. ರಂದು ಮಾತನಾಡುವ ಸಲುವಾಗಿ ಕರೆಸಿ ಮೂರು ದಿನ ಕೂಡಿ ಹಾಕಿ ಕಿರುಕುಳ ಕೊಡಲಾಗಿದೆ ಎಂಬುದು ದೂರು. ಕಿರಣ್ ರೆಡ್ಡಿ ಎಂಬುವವರ ಹೆಸರಿಗೆ ಭೂಮಿ ಬರೆದು ಕೊಡುವಂತೆ ಬಲವಂತವಾಗಿ ಕ್ರಯ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಕಾರ್ತಿಕ್ ಆರೋಪ. ಬಲವಂತವಾಗಿ ಸಹಿ ಹಾಕಿಸಿಕೊಂಡು ಕ್ರಯಮಾಡಿಸಿಕೊಂಡು ೪೧ ಲಕ್ಷ ಹಣವನ್ನು ತಮ್ಮ ಖಾತೆಯಿಂದ ತೆಗೆಯಲಾಗಿದೆ ಎಂಬುದು ದೂರಾಗಿದೆ. https://ainlivenews.com/prime-minister-modis-youtube-channel-has-crossed-2-crore-subscribers/ ಭವಾನಿ ರೇವಣ್ಣ ಹಲ್ಲೆಯಿಂದ ತನ್ನ ಪತ್ನಿಗೆ ಗರ್ಭಪಾತವಾದ ಬಗ್ಗೆಯೂ ಕಾರ್ತಿಕ್ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂದ ಎಸ್ಪಿಗೆ ದೂರು…

Read More

ಬೀದರ್: ನಗರದ ಹಾರೋಗೆರಿ ಬಳಿ ಕಾರು ಹರಿದ ಪರಿಣಾಮ 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ‌ ಜರುಗಿದೆ. ಬಸವಚೇತನ ಮೃತಪಟ್ಟ ದುರ್ದೈವಿ ಮಗು ಎನ್ನಲಾಗಿದೆ. ಹಾರೊಗೇರಿ‌ ನಿವಾಸಿ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿ ಪುತ್ರ ಬಸವಚೇತನ. https://ainlivenews.com/prime-minister-modis-youtube-channel-has-crossed-2-crore-subscribers/ ಆಟವಾಡುತ್ತ ರಸ್ತೆ ಬದಿಯಲ್ಲಿ‌ ಮಗು ಬಂದಿದ್ದ ವೇಳೆ ಇನ್ನೋವಾ ಕಾರು ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಗಂಜ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Read More