Author: AIN Author

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಬಹುತ್ವವನ್ನ ಒಪ್ಪಿಕೊಂಡು, ಅಳವಡಿಸಿಕೊಂಡಿರುವುದು ಕೇವಲ ಹಿಂದೂ ಧರ್ಮ (Hindu Religion) ಮಾತ್ರ, ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ದತ್ತ ಮಾಲೆ ಜಯಂತಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೂಡ ವಿಶೇಷ ಧನ್ಯವಾದ ಎಂದರು. ಸರ್ಕಾರದ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ಭಾಗವಹಿಸಬೇಕಾಗಿತ್ತು. ಸರ್ಕಾರದ ಪ್ರತಿನಿಧಿಗಳಾಗಿ ಯಾರು ಬಾರದೇ ಇರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿ ಎಂದರು.  https://ainlivenews.com/prime-minister-modis-youtube-channel-has-crossed-2-crore-subscribers/ ಇದು ಮುಜರಾಯಿ ಇಲಾಖೆಗೆ ಸೇರಿದ ದತ್ತಾತ್ರೇಯ ಸ್ವಾಮಿ ದೇವಸ್ಥಾನವಾಗಿದ್ದು, ಯಾರಾದರೂ ಒಬ್ಬರು ಭಾಗವಹಿಸಬೇಕಾದದ್ದು ಕ್ರಮವಾಗಿತ್ತು. ಯಾರೂ ಭಾಗವಹಿಸದೇ ಇರುವುದು ದುರಾದೃಷ್ಟಕರ. ಅವರ ಮನಸ್ಸಿನಲ್ಲಿ ಹಿಂದೂ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆ ಎಂಬ ಭಾವನೆ ಇರಬಹುದು. ಈದ್ ಮಿಲಾದ್‌ನಲ್ಲಿ ಪಾಲ್ಗೊಳ್ಳುತ್ತಾರೆ. ದತ್ತ…

Read More

ಜೆಎನ್.1 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ.  ನಿರ್ಬಂಧವಿಲ್ಲದಿದ್ರೂ ನಿಯಂತ್ರಣಕ್ಕೆ ಹಲವು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಟೆಸ್ಟಿಂಗ್ ಹೆಚ್ಚಳಕ್ಕೆ ಮುಂದು..ಸೋಂಕಿನ ಕಡಿವಾಣಕ್ಕೆ ಮುನ್ನೆಚ್ಚರಿಕಾ ಕ್ರಮ‌ಗಳ ಬಗ್ಗೆ  ಸಂಪುಟ ಉಪಸಮಿತಿ ಸಭೆಯಲ್ಲಿ ಕೈಗೊಂಡ ಕ್ರಮದ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ.  ಜೆಎನ್.1 ಕಡಿವಾಣಕ್ಕೆ ಸರ್ಕಾರ ಕ್ರಮ ರಾಜ್ಯದಲ್ಲಿ ಈಗಾಗಲೇ ನೀಡಿರುವ 5 ಸಾವಿರ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಬೇಕು ಸೋಂಕಿತರ ಸಂಪರ್ಕಿತರು ಕೊರೊನಾ ಲಕ್ಷಣ ಹೊಂದಿದ್ದಲ್ಲಿ ಟೆಸ್ಟ್ ಮಾಡಿಸಿಕೊಳ್ಳಬೇಕು ಸೋಂಕಿರನ್ನ ಪಿಹೆಚ್ ಸಿ ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸಬೇಕು ಐಸಿಯುನಲ್ಲಿರುವ ಸೋಂಕಿತರನ್ನ Tele ICU ನ ಮೂಲಕ ಮೇಲ್ವಿಚಾರಣೆ ನಡೆಸುವುದು ಅಗತ್ಯವಿರುವ ಸೋಂಕಿತರ ಸ್ಯಾಂಪಲ್ಸ್ ಜೀನೋಮ್ ಸೀಕ್ವೆನ್ಸ್ ಗಾಗಿ ಕಳುಹಿಸುವುದು ಮುನ್ನೆಚ್ಚರಿಕ ಕ್ರಮವಾಗಿ PSA plantಗಳು & LMO plantಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು PESO license ಆದಷ್ಟು ಶೀಘ್ರ ಪಡೆಯುವುದು, ಆಕ್ಸಿಜನ್ ಉತ್ಪಾದನಾ ಪ್ರಮಾಣ ಪುಷ್ಟಿಕರಿಸಬೇಕು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸುವುದು. ಬೆಡ್ ಹಾಗೂ ವೆಂಟಿಲೇಟರ್ ಸಿದ್ಧತೆ ಪರಿಶೀಲನೆ…

Read More

ಪ್ಯಾರಾಸೈಟ್ ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ಹಾಲಿವುಡ್ ನಟ ಲೀ ಸನ್ ಕ್ಯುನ್ (Lee Sun-kyun) ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕೊರಿಯಾದ (South Korea) ಸೆಂಟ್ರಿಲ್ ಸಿಯೋಲ್ ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನಲ್ಲೇ ನಟನ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿತ್ತು. ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಪತ್ತೆ ಮಾಡಿ, ಅದು ಲೀ ಸನ್ ಕ್ಯೂನ್ ಎಂದು ದೃಢಪಡಿಸಿದ್ದಾರೆ. ಲೀ ಸನ್ ಕ್ಯೂನ್ ಆತ್ಮಹತ್ಯೆ (suicide) ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ಮಾಡಲಾಗಿತ್ತು. ವಿಚಾರಣೆಗೆ ಒಳಗಾದ ಮರುದಿನವೇ ಅವರು ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 48ರ ವಯಸ್ಸಿನ ನಟನ ಸುದ್ದಿಯು ದಕ್ಷಿಣ ಕೊರಿಯಾಗೆ ಆಘಾತವನ್ನೇ ಮೂಡಿಸಿದೆ. https://ainlivenews.com/prime-minister-modis-youtube-channel-has-crossed-2-crore-subscribers/ ಅಲ್ಲದೇ ಮನೆಯಲ್ಲಿ ಆತ್ಮಹತ್ಯೆಯ ಪತ್ರವನ್ನು ಬರೆದಿಟ್ಟು, ತಮ್ಮ ಪತಿ ಹೋಗಿರುವುದಾಗಿ ಲೀ ಸನ್ ಕ್ಯೂನ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಾಗುತ್ತಿದೆ. ಕಾರಿನಲ್ಲಿ…

Read More

ಬೆಂಗಳೂರು: ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಬೆಂಗಳೂರಿನ ಮಲ್ಲೇಶ್ವರಂನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಇಂದು ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮೂರು ವಾರಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಮಂತ್ರಿ ಮಾಲ್ ಆಡಳಿತ ವರ್ಗದವರಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿಲ್ಲ. ಸುಮಾರು 53 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ವಸೂಲಿಗೆ ಡಿಮ್ಯಾಂಡ್ ನೋಟೀಸ್ ನೀಡಿದ್ದರು ಸಹ ಪಾವತಿ ಮಾಡದ ಹಿನ್ನಲೆ, ಕಾನೂನು ತಜ್ಞರ ಸಲಹೆ ಮೇರೆಗೆ ಮಂತ್ರಿ ಮಾಲ್ ಅನ್ನು ಸೀಝ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಾಲ್ ನ ಆಡಳಿತ ಮಂಡಳಿಯವರು ಮಾತ್ರ ನಮಗೆ ಯಾವುದೇ ನೋಟೀಸ್ ನೀಡದೆ ಮಾಲ್ ಗೆ ಬೀಗ ಹಾಕಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಮಾಲ್ ನಲ್ಲಿ ಸಮಯ ಕಳೆಯಲು ಬಂದ ನೂರಾರು ಜನ ಸಾರ್ವಜನಿಕರು ಮಾಲ್ ನ ಒಳ ಹೋಗಲಾಗದೆ ಹೊರಗಡೆಯೆ ನಿಂತು ಕಾಯುತ್ತಿದ್ದರು.

Read More

ಕೊಪ್ಪಳ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಕುಟೀರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊತ್ತಿ ಉರದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ನಡೆದಿದೆ. ಐತಿಹಾಸಿಕ ಪಂಪಾ ಸರೋವರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಕೆಲ ವರ್ಷಗಳ ಹಿಂದೆ ಬಂದಾಗ, ತಾವು ಉಳಿದುಕೊಳ್ಳಲೆಂದೆ ಕುಟೀರವೊಂದನ್ನು ನಿರ್ಮಾಣ ಮಾಡಿಸಿದ್ದರು. https://ainlivenews.com/prime-minister-modis-youtube-channel-has-crossed-2-crore-subscribers/ ಅಂಜನಾದ್ರಿ, ಪಂಪಾ ಸರೋವರಕ್ಕೆ ಬಂದಾಗ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಇದೇ ಕುಟಿರದಲ್ಲಿ ವಾಸ್ತವ್ಯ ಮಾಡುತ್ತಿತ್ತು. ಕುಟಿರದೊಳಗೆ ಎಸಿ ಸೇರಿದಂತೆ ಆಧುನಿಕ ಅನೇಕ ಸೌಕರ್ಯಗಳು ಇದ್ದವು. ಆದರೆ ಇಂದು ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ ಕುಟಿರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕುಟಿರ ಸುಟ್ಟು ಭಸ್ಮವಾಗಿದೆ. ಕುಟಿರದ ಮೇಲೆ ಹುಲ್ಲಿನ ಹೊದಿಕೆ ಹೊದೆಸಲಾಗಿತ್ತು. ಹೀಗಾಗಿ ಬೆಂಕಿ ಇಡೀ ಕುಟಿರವನ್ನು ಆವಸರಿಸಿಕೊಂಡಿದ್ದರಿಂದ ಕುಟಿರ ಅಗ್ನಿಗಾಹುತಿಯಾಗಿದೆ.

Read More

ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಮೂರು ಬಾರಿ ಆಹಾರ ಸೇವನೆ ಮಾಡ್ಬೇಕು. ಯಾವುದೇ ವೈದ್ಯರು ರಾತ್ರಿ ಊಟ ಬಿಡುವಂತೆ ಸಲಹೆ ನೀಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಮಲಗುವುದು ನಿಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ, ನಿಮ್ಮ ಚಯಾಪಚಯವು ನಿಧಾನಗೊಳ್ಳುತ್ತದೆ. ಇದಲ್ಲದೆ  ಪ್ರೋಟೀನ್  ಪರಿವರ್ತನ ಸಾಮರ್ಥ್ಯ ಅರ್ಧದಷ್ಟು ಕಡಿಮೆಯಾಗುತ್ತದೆ.  ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಏನೆಲ್ಲ ಸಮಸ್ಯೆಯುಂಟಾಗುತ್ತದೆ ಎಂಬ ಸಂಗತಿಯನ್ನು ನಾವಿಂದು ಹೇಳ್ತೇವೆ. ಖಾಲಿ ಹೊಟ್ಟೆಯಲ್ಲಿ ಮಲಗಿದ್ರೆ ಕಾಡುತ್ತೆ ಈ ಸಮಸ್ಯೆ :  ನಿದ್ರಾಭಂಗ : ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಮಧ್ಯರಾತ್ರಿ (Midnight) ಯಲ್ಲಿ ಹಸಿವು ಕಾಡುತ್ತದೆ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದಾಗ  ನಿಮ್ಮ ಮೆದುಳು (Brain) ಆಹಾರದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತದೆ. ಮಧ್ಯರಾತ್ರಿ ಹಸಿವಿನ ಭಾವನೆ ಹೆಚ್ಚಾಗುತ್ತದೆ ಮತ್ತು ನಿದ್ರೆ (Sleep)ಯ ಮಧ್ಯದಲ್ಲಿ ಎಚ್ಚರವಾಗುತ್ತದೆ. ನಿದ್ರಾಹೀನತೆ ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಸ್ನಾಯು ಗಳಿಗೆ ಹಾನಿ : ಆಹಾರಕ್ರಮವು ನಮ್ಮ ಸ್ನಾಯುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಸ್ನಾಯುಗಳಿಗೆ ಹಾನಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್‌ 26ರಂದು ಯುವ ನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಿದ್ದಾರೆ. 2024ರ ಜನವರಿ 12ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುವ ನಿಧಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಅದುವರೆಗೆ ನೋಂದಣಿ ಮಾಡಿಕೊಂಡು ದೃಢೀಕರಿಸಲ್ಪಟ್ಟ ಪದವೀಧರ/ಡಿಪ್ಲೊಮಾ ಹೋಲ್ಡರ್‌ ನಿರುದ್ಯೋಗಿ ಯುವಕ ಯುವತಿಯರಿಗೆ ಅಂದೇ ಡಿಬಿಟಿ ಮೂಲಕ ಭತ್ಯೆಯನ್ನು ವಿತರಿಸಲಾಗುತ್ತದೆ. ಹಾಗಿದ್ದರೆ ನೀವು ಅರ್ಜಿ ಸಲ್ಲಿಸಬೇಕಲ್ಲ! ಅರ್ಜಿ ಸಲ್ಲಿಸಬೇಕು ಅಂದರೆ ಏನು ಮಾಡಬೇಕು? ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಏನಿದು ಯುವನಿಧಿ ಯೋಜನೆ? ಯಾರಿಗೆ ಸಿಗುತ್ತದೆ ಹಣ? ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ. 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯು…

Read More

ಬೆಂಗಳೂರು: ಬೆಂಗಳೂರು ಐಟಿ ಸಿಟಿಯಾಗಿ ಮಾರ್ಪಟ್ಟಿದೆ.ಇದರಿಂದ ನಗರದೆಲ್ಲಡೆ ಇಂಗ್ಲಿಷ್ ನಾಮಫಲಕಗಳೇ ರಾಜಾಜಿಸುತ್ತಿದೆ. ರಾಜಧಾನಿಯಲ್ಲಿ ಕನ್ನಡ ನಾಮಫಲಕ ರೂಲ್ಸ್ ಇದ್ರೂ ಉದ್ದಿಮೆಗಳು ಫಾಲೋನೇ ಮಾಡ್ತಿಲ್ಲ.ಇದು ಕನ್ನಡ ಪರ ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಈ ಬಗ್ಗೆ  ಕೆರಳಿರೋ ಕರವೇ ಕನ್ನಡ ನೆಲ, ಜಲ, ಅನ್ನ ತಿಂದುಂಡು ಕನ್ನಡಕ್ಕೆ ಅಗೌರವ ತೋರುವ ಉದ್ದಿಮೆಗಳ ವಿರುದ್ದ ಕರವೇ ಕಹಳೆ ಮೊಳಗಿಸಿತ್ತು. ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಬೃಹತ್ ರ್ಯಾಲಿ ನಡೆಸಿ ಇಂಗ್ಲಿಷ್ ಬೋರ್ಡ್ಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನು ಕಿತ್ತು ಹಾಕಿದ್ರು, ಹಾಗಾದ್ರೆ ಬೆಂಳೂರಿನಲ್ಲಿ ಕರವೇ ಇಂಗ್ಲಿಷ್ ಬೋರ್ಡ್  ಸಮರ ಹೇಗಿತ್ತು ಬನ್ನಿ ತೋರಿಸ್ತೀವಿ. ಜಗತ್ತಿನ ಪ್ರಮುಖ ನಗರಗಳ ಪೈಕಿ ಬೆಂಗಳೂರು  ಒಂದು. ವಿಶ್ವಮಟ್ಟದಲ್ಲಿ ಬೆಂಗಳೂರು ಹೆಸರು ರಾರಾಜಿಸುತ್ತಿದೆ.ನಗರ ಬೆಳೆದಂತೆ ಕನ್ನಡ ನೆಲದಲ್ಲೇ ಕನ್ನಡವನ್ನ ಕಡೆಗಣಿಸಲಾಗ್ತಿದೆ ಅನ್ನೋ ಆರೋಪ ಇದೆ. ನಗರದಲ್ಲಿ ನಾಮಫಲಕಗಲ್ಲಿ  ಶೇ 60 ರಷ್ಟು ಕನ್ನಡ ನಾಮಫಲಕ ಆಳವಡಿಕೆಗೆ ಸರ್ಕಾರ ಸೂಚನೆ ನೀಡಿದ್ರೂ ಉದ್ದಿಮೆಗಳು ನಿರ್ಲಕ್ಷ್ಯ ಮಾಡ್ತಿವೆ.ಈ ಬಗ್ಗೆ ಕೆರಳಿಸಿರೋ ಕನ್ನಡ ಪರ ಸಂಘಟೆಗಳು ಇಂದು  ಹೋರಾಟಕ್ಕೆ ಧುಮ್ಮುಕ್ಕಿದ್ದುವು.…

Read More

ಇನ್ನೇನು 2023 ಮುಕ್ತಾಯವಾಗಲಿದೆ. ಈ ವರ್ಷ ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ಯಾಂಡಲ್‌ವುಡ್‌, ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ತಾರೆಯರ ಮದುವೆ ಸಂಭ್ರಮ ಜೋರಾಗಿತ್ತು. ಹೊಸ ಜೀವನ ಆರಂಭಿಸಿದ ತಾರೆಯರು ಒಂದ್ಕಡೆಯಾದರೆ, ಇನ್ನೊಂದ್ಕಡೆ ಕೆಲ ತಾರೆಯರು ಎರಡನೇ ಮದುವೆ ಮಾಡಿಕೊಂಡರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ತಮಿಳು ನಟಿ ಅಮಲಾ ಪೌಲ್ ಇತ್ತೀಚೆಗಷ್ಟೇ ಎರಡನೇ ಮದುವೆ ಮಾಡಿಕೊಂಡರು. ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದ ಆಶೀಶ್ ವಿದ್ಯಾರ್ಥಿ ಅವರ ಮೊದಲ ಮದುವೆ ಮುರಿದುಬಿದ್ದಿತ್ತು. ತಮ್ಮ 60ನೇ ವಯಸ್ಸಿನಲ್ಲಿ ಆಶೀಶ್‌ ವಿದ್ಯಾರ್ಥಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ತೆಲುಗು ನಟ ಮಂಚು ಮನೋಜ್‌ ಕೂಡ ಈ ವರ್ಷ ಎರಡನೇ ವಿವಾಹವಾದರು. ಬಾಲಿವುಡ್ ನಟಿ ಮಸಾಬಾ ಗುಪ್ತಾ ಕೂಡ ಸೆಕೆಂಡ್ ಮ್ಯಾರೇಜ್‌ ಆದರು. ಈ ಕುರಿತ ಚಿತ್ರಪಟ ಇಲ್ಲಿದೆ ನೋಡಿ… ಮಂಚು ಮನೋಜ್ ಎರಡನೇ ಮದುವೆ ತೆಲುಗು ನಟ ಮಂಚು ಮನೋಜ್ ಎರಡನೇ ಮದುವೆಯಾದರು. ಮೌನಿಕಾ ರೆಡ್ಡಿ ಎಂಬುವರನ್ನು ಮಂಚು ಮನೋಜ್ ವಿವಾಹವಾದರು. ಕುಟುಂಬಸ್ಥರು…

Read More

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಾಜೀನಾಮೆಗೆ ಒತ್ತಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಬೆದರಿಕೆ ಇಮೇಲ್ (Threat Email) ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ (Mumbai) ಕ್ರೈಂ ಬ್ರಾಂಚ್ ಮೂವರನ್ನು ವಶಕ್ಕೆ ಪಡೆದಿದೆ. ಗುಜರಾತ್‌ನ (Gujarat) ವಡೋದರಾದಿಂದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರಲ್ಲಿ ಒಬ್ಬನನ್ನು ಆದಿಲ್ ರಫಿಗ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆತನ ಸಂಬಂಧಿ ಹಾಗೂ ಮತ್ತೋರ್ವ ವ್ಯಕ್ತಿ ಅವನ ಸ್ನೇಹಿತ ಎಂದು ತಿಳಿದುಬಂದಿದೆ. ಬೆದರಿಕೆ ಇಮೇಲ್‌ಗಳ ಹಿಂದಿನ ಉದ್ದೇಶವನ್ನು ಕಂಡುಹಿಡಿಯುವ ಸಲುವಾಗಿ ಪೊಲೀಸರು ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಇಮೇಲ್‌ಗಳನ್ನು ಕಳುಹಿಸಲು ಬಳಸುವ ಸಾಧನವನ್ನು ಸಹ ಪರಿಶೀಲಿಸಲಾಗುತ್ತಿದೆ.  https://ainlivenews.com/prime-minister-modis-youtube-channel-has-crossed-2-crore-subscribers/ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಬಂದಿರುವ ಬೆದರಿಕೆ ಇಮೇಲ್‌ನಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕಚೇರಿಗಳ ಜೊತೆಗೆ ಅದರ ಕಚೇರಿ ಮೇಲೆ ದಾಳಿ ನಡೆಸಲಾಗುವುದು ಎಂದು ಬೆದರಿಕೆಯೊಡ್ಡಲಾಗಿತ್ತು. ಮುಂಬೈನ ವಿವಿಧ ಸ್ಥಳಗಳಲ್ಲಿ 11 ಬಾಂಬ್‌ಗಳನ್ನು ಇರಿಸಲಾಗಿದೆ…

Read More