ಬೆಂಗಳೂರು: ಲೋಕಸಭಾ ಚುನಾವಣೆ ಟಾಸ್ಕ್ ಒಂದು ಕಡೆಯಾದ್ರೆ ಸದ್ಯ ಪಕ್ಷದ ಡ್ಯಾಮೇಜ್ ಕೊಡುವಂತಹ ನಾಯಕರಿಗೆ ಕಡಿವಾಣ ಹಾಕಲೇಬೇಕೆಂಬ ನಿರ್ಣಯವನ್ನ ತೆಗೆದುಕೊಳ್ಳಲಾಗಿದೆ. ಶಾಸಕ ಯತ್ನಾಳ್ ಅವರ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ಅಗ್ತಿದೆ ಅಂತಾ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ವಿರುದ್ಧ ಒಕ್ಕೊರಲಿನಿಂದ ಖಂಡಿಸಲಾಯ್ತು. ಯತ್ನಾಳ್ ಕಾಂಗ್ರೆಸ್ ಏಜೆಂಟ್ ಥರ ವರ್ತಿಸುತ್ತಿದ್ದಾರೆ ಅವರ ಹೇಳಿಕೆಯಿಂದ ನಮ್ಮ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುವಂತಾಗಿದೆ. https://ainlivenews.com/sudeep-will-release-the-teaser-of-the-movie-left-hand-cause-of-accident/ ಬಿಜೆಪಿ ಹಿರಿಯ ನಾಯಕರ ವಿರುದ್ಧ ಹೇಳಿಕೆಗಳನ್ನ ಕೊಟ್ಟಿ ಕಾಂಗ್ರೆಸ್ ನಾಯಕರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ತಮ್ಮ ಕೆಲಸಗಳನ್ನು ಮಾಡಿಸ್ಕೊತಿದಾರೆ. ವಿಜಯಪುರದಲ್ಲಿ ಅವರೊಬ್ಬರು ಮಾತ್ರ ಗೆದ್ದಿದ್ದಾರೆ, ಉಳಿದ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಇನ್ನೂ ಎಷ್ಟು ದಿನ ಹೀಗೇ ಸಹಿಸಿಕೊಂಡು ಕೂರಬೇಕು ಕಾರ್ಯಕರ್ತರಿಗೆ ಯಾವ ಸಂದೇಶ ಕೊಡಬೇಕು ಯತ್ನಾಳ್ ವಿರುದ್ಧ ದೂರು ನೀಡಿ ಉಚ್ಚಾಟನೆಗೆ ಹೈಕಮಾಂಡ್ ಬಳಿ ಮನವಿ ಮಾಡಬೇಕಂತ ಒಮ್ಮತದ ನಿರ್ಣಯಗಳನ್ನ ಮಾಡಲಾಯ್ತು..
Author: AIN Author
ಕಲಬುರಗಿ: ಹುಚ್ಚುನಾಯಿ ದಾಳಿಗೆ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.ಮಿಜ್ಬಾ ನಗರದ ನಿವಾಸಿ 6 ವರ್ಷದ ಸಪೂರಾ ನಾಯಿ ದಾಳಿಗೆ ಒಳಗಾಗಿ ಇದೀಗ ಆಸ್ಫತ್ರೆ ಸೇದಿದ್ದಾಳೆ.ಘಟನೆಯಿಂದ ನೊಂದಿರೋ ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶಗೊಂಡಿದ್ದು ನಾಯಿ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿದ್ದಾರೆ..
ದಾವಣಗೆರೆ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬೆಳಗಾವಿ ಅಧಿವೇಶನದ ಸಮಯವನ್ನು ತಿಂದು ಹಾಕಿದರು. ರಾಜ್ಯದಲ್ಲಿ ಉಂಟಾಗಿರುವ ಬರದ ವಿಚಾರವನ್ನು ಚರ್ಚೆ ಮಾಡದೆ ಯಡಿಯೂರಪ್ಪ ವಿಜಯೇಂದ್ರ ವಿರುದ್ದ ಮಾತನಾಡಿದರು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬೆಳಗಾವಿ ಅಧಿವೇಶನದ ಸಮಯವನ್ನು ತಿಂದು ಹಾಕಿದರು. ರಾಜ್ಯದಲ್ಲಿ ಉಂಟಾಗಿರುವ ಬರದ ವಿಚಾರವನ್ನು ಚರ್ಚೆ ಮಾಡದೆ ಯಡಿಯೂರಪ್ಪ ವಿಜಯೇಂದ್ರ ವಿರುದ್ದ ಮಾತನಾಡಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಎಲ್ಲರ ಮೇಲೆಯೂ ಗೂಬೆ ಕೂರಿಸುತ್ತಿದ್ದಾರೆ ಎಮದು ಯತ್ನಾಳ್ ಅವರ ವಿರುದ್ಧ ಕಿಡಿಕಾರಿದರು. ಸ್ವತಃ ಯತ್ನಾಳ್ ಅವರು ತಮಗೆ ಕೋವಿಡ್ ಬಂದಾಗ 8 ಲಕ್ಷ ರೂ. ಖರ್ಚು ಆಗಿದೆ ಎಂದು ಹೇಳಿದ್ದಾರೆ. ನೀವು ಐಶಾರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಎಂದು ಹೋಗಿರಬಹುದು. ಆದರೆ, ಕೋವಿಡ್ ಚಿಕಿತ್ಸೆ ಪಡೆದಾಗ ನೀವೇನು ಯಡಿಯೂರಪ್ಪನವರಿಗೆ 8 ಲಕ್ಷ ರೂ. ನೀಡಿದ್ರಾ? ನಮಗೂ ಕೋವಿಡ್ ಬಂತು…
ಗದಗ: ರಾಜ್ಯದಲ್ಲಿ ಕೋವಿಡ್-19 ಜೆಎನ್ 1 ಪ್ರಕರಣಗಳು ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆಗಾಗಿ ಮಾಡಿಕೊಳ್ಳಲಾದ ವ್ಯವಸ್ಥೆಯನ್ನು ಪರಿಶೀಲಿಸಿದ್ರು. ನಂತರ ಉನ್ನತ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಕೋವಿಡ್ ನಿರ್ವಹಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆಯನ್ನ ನೀಡಿದ್ರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಜಿಮ್ಸ್ ನಿರ್ದೆಶಕ ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಎಸ್.ಎಸ್.ನೀಲಗುಂದ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು: ಇತ್ತೀಚಿನ ಕೆಲವು ದಿನಗಳಿಂದ ಬಿಜೆಪಿಯೊಳಗಿನ ವಾತಾವರಣದಿಂದ ಹತಾಶರಾಗಿ ಪದೇ ಪದೇ ತಮ್ಮ ಅಸಮಾಧಾನವನ್ನು ಕೆಲವೊಮ್ಮೆ ಪ್ರತ್ಯಕ್ಷೇವಾಗಿ ಮಗದೊಮ್ಮೆ ಪರೋಕ್ಷವಾಗಿ ಹೊರಹಾಕುತ್ತಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಮತ್ತೊಮ್ಮೆ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಮಾತನಾಡುತ್ತಿರುವ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯಿಂದ 40 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಬಿಜೆಪಿ ನಾಯಕ ಯತ್ನಾಳ್ ಅವರೇ ಖುದ್ದಾಗಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದು ಅದರಿಂದ ಪಕ್ಷಕ್ಕೆ ತೀವ್ರವಾಗಿ ಮುಜುಗರವಾಗಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರ ವಿಚಾರ ಪ್ರಸ್ತಾಪ ಮಾಡಿದ ಸದಾನಂದ ಗೌಡರು, ಅವರನ್ನು ಹಿಂದೆ ಪಕ್ಷದಲ್ಲೇ ಉಳಿಸಿಕೊಂಡಿದ್ದಕ್ಕೆ ಈಗ ಅನುಭವಿಸುತ್ತಿದ್ದೇವೆ ಎಂದು ಅವರು ಹರಿಹಾಯ್ದಿದ್ದಾರೆ. https://ainlivenews.com/sudeep-will-release-the-teaser-of-the-movie-left-hand-cause-of-accident/ ಆನಂತರ, “ಆಗೊಮ್ಮೆ ಯತ್ನಾಳ್ ಅವರು ಪಕ್ಷಕ್ಕೆ ಮುಜುಗರ ತರುವಂತೆ ಮಾತನಾಡಿದಾಗ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೆ. ಆದರೆ, ಆಗ ಯಡಿಯೂರಪ್ಪ ಅವರೇ ಖುದ್ದಾಗಿ ನನ್ನನ್ನು ಸಂಪರ್ಕಿಸಿ ಯತ್ನಾಳ್ ಅವರ…
ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಸಾರಥಿಯಾಗಿ ಬಿವೈ ವಿಜಯೇಂದ್ರ ಅಧಿಕಾರವಹಿಸಿಕೊಂಡ ನಂತರ ಕಳೆದ ವಾರ ಪಧಾದಿಕಾರಿಗಳ ನೇಮಕವಾಗಿತ್ತು. ಇಂದು ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪಧಾದಿಕಾರಿಗಳ ಮೊದಲ ಸಭೆ ನಡೆಸಿದ್ರು ಮರಿಹುಲಿ. ಹೊಸ ಟೀಮ್ ನ ಸದಸ್ಯರ ಮೊದಲ ಸಭೆಯಲ್ಲೇ ಕೆಲವೊಂದು ಟಾಸ್ಕ್ ನೀಡಲಾಗಿದೆ, ಜೊತೆಗೆ ಪಕ್ಷದ ವಿರುದ್ದ ಡ್ಯಾಮೇಜ್ ಹೇಳಿಕೆ ನೀಡುವವರ ಬಗ್ಗೆಯು ಚರ್ಚೆ ನಡೆಸಲಾಯ್ತು. ಈ ಮಧ್ಯೆ ಯತ್ನಾಳ್ ಜೊತೆ ಮಾಜಿ ಸಿಎಂ ಸದಾನಂದಗೌಡ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು ರಾಜ್ಯಾಧ್ಯಕ್ಷರನ್ನೇ ಪ್ರಶ್ನೆ ಮಾಡಿ ಆಂತರಿಕ ಒಳ ಬೇಗುದಿಗೆ ತುಪ್ಪ ಸುರಿದಿದ್ದಾರೆ. https://ainlivenews.com/sudeep-will-release-the-teaser-of-the-movie-left-hand-cause-of-accident/ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ನೂತನ ಬಿಜೆಪಿ ರಾಕ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಿಂದೆ ಇದ್ದ ಟೀಮ್ ವಜಾಗೊಳಿಸಿ ಹೊಸ ಟೀಮ್ ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನೂತನ ಪದಾಧಿಕಾರಿಗಳ ಸಭೆಯನ್ನ ನಡೆಸಿದ್ರು ನೂತನ ಸದಸ್ಯರಿಗೆ ಕೆಲವು ಸೂಚನೆಗಳ ಜೊತೆ ಟಾಸ್ಕ್ ನ್ನ ನೀಡಲಾಯ್ತು. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿ ಹೊತ್ತು 28…
ಬೆಂಗಳೂರು: ಕಣ್ಣಿಗೆ ಕಾಣದಂತೆ ಗುಪ್ತಗಾಮಿನಿಯಂತೆ ಎಲ್ಲೆಡೆ ಹರಿದಾಡುತ್ತಿರುವ ಕೊರೊನಾ ದಿನೆ ದಿನೇ ಆತಂಕ ಹುಟ್ಟಿಸಿದೆ. ಬೆಂಗಳೂರಿನಲ್ಲಿ ಇದರ ಪ್ರತಾಪ ಹೆಚ್ಚಾಗಿದ್ದು ಸಾವು-ನೋವುಗಳು ಸಹ ಹೆಚ್ಚಿವೆ.ಇದ್ರ ನಡುವೆ ಚಿತಾಗಾರ ಸಿಬ್ಬಂದಿ ಬಿಬಿಎಂಪಿಗೆ ಶಾಕ್ ಕೊಟ್ಟಿದ್ದಾರೆ. ಜನವರಿ ಮೊದಲ ವಾರದಿಂದ ಚಿತಾಗಾರದಲ್ಲಿ ಹಣ ಸುಡೋದಿಲ್ಲ ಅಂತ ಎಚ್ಚರಿಸಿರೋದು ಮೃತದೇಹ ಸುಡೋದಕ್ಕೂ ಹಣಗಾಟದ ಭೀತಿ ಎದುರಾಗಿದೆ. ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿಬಿಟಿ ಸಿಟಿ ಎಂದು ಜಗದ್ವಿಖ್ಯಾತವಾಗಿರುವ ಬೆಂಗಳೂರು ಎಂಬ ಮಾಯಾನಗರಿಯ ಗರ್ಭದಲ್ಲಿ, ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿ ಸ್ಮಶಾನದಲ್ಲಿ ವಾಸವಾಗಿರುವ ರುದ್ರಭೂಮಿ ಕುಟುಂಬಗಳ ಬದುಕು ಅಕ್ಷರಶಃ ಸುಡುಗಾಡಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಸ್ಮಶಾನಗಳಿವೆ. ಇವುಗಳಲ್ಲಿ ವಂಶ ಪಾರಂಪರ್ಯವಾಗಿ ಗುಂಡಿ ತೆಗೆದು ಶವಗಳಿಗೆ ಮುಕ್ತಿ ಕಾಣಿಸುವ ಕಾಯಕದಲ್ಲಿ ತೊಡಗಿರುವ ನೂರಾರು ಕುಟುಂಬಗಳಿವೆ. ಹಲವು ದಶಕಗಳಿಂದ ಇಂತಹ ಪವಿತ್ರ ಕಾರ್ಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಈ ರುದ್ರಭೂಮಿ ನೌಕರರನ್ನು ಖಾಯಂ ಗೊಳಿಸುವತ್ತ ಬಿಬಿಎಂಪಿಯಾಗಲಿ, https://ainlivenews.com/sudeep-will-release-the-teaser-of-the-movie-left-hand-cause-of-accident/ ಸರ್ಕಾರ ಯಾಗಲಿ ಇದುವರೆಗೆ ಯೋಚನೆ ಯನ್ನೇ ಮಾಡಿಲ್ಲ.ಇದರಿಂದ ಕೆರಳಿರುವ ಪಾಲಿಕೆಯ ಗುತ್ತಿಗೆ ರುದ್ರಭೂಮಿ…
ಬೆಂಗಳೂರು: ಬಿಜೆಪಿ ಶಾಸಕ ಯತ್ನಾಳ್ ತಮ್ನ ಬಳಿ ಇರುವ ಕೋವಿಡ್ ಭ್ರಷ್ಟಾಚಾರ ಹಗರಣದ ದಾಖಲೆಗಳನ್ನು ತನಿಖಾ ಆಯೋಗಕ್ಕೆ ಕೊಡಿ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ. ಯತ್ನಾಳ್ ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನ ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ, ಬಿಜೆಪಿ ನಾಯಕರು ಯಾರು ಕೂಡ ಯತ್ನಾಳ್ ಅವರಿಗೆ ಒಂದು ನೋಟಿಸ್ ಕೂಡ ನೀಡಿಲ್ಲ. ಶಿಸ್ತು ಕ್ರಮ ಜರುಗಿಸುವ ಬಗ್ಗೆ ಬಿಜೆಪಿಯ ಯಾವೊಬ್ಬ ಹಿರಿಯ ನಾಯಕರಿಗು ಧೈರ್ಯ ಇಲ್ಲ ವಿಜಯೇಂದ್ರ ಅವರ ಭ್ರಷ್ಟಾಚಾರದ ಕೆಲವು ದಾಖಲೆಗಳು ಯತ್ನಾಳ್ ಅವರ ಬಳಿ ಇರಬಹುದು ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರದ ಪಾಲುದಾರಿಕೆಯಲ್ಲಿ ಕೇಂದ್ರ ಬಿಜೆಪಿಯವರ ಪಾಲೂ ಇದೆ ಬಿಜೆಪಿಯವರದ್ದು ಹಗರಣಗಳ ವಿಚಾರದಲ್ಲಿ ಮೌನಂ ಸಮ್ಮತಿ ಲಕ್ಷಣಂ. https://ainlivenews.com/prime-minister-modis-youtube-channel-has-crossed-2-crore-subscribers/ ಬಿಜೆಪಿಯ ಲೂಟಿಕೋರರನ್ನೇ ಅವರ ಕಮಿಟಿಗಳ ಪದಾಧಿಕಾರಿಗಳಾಗಿದ್ದಾರೆ, ಯಾರೆಲ್ಲ ಭ್ರಷ್ಟಾಚಾರದ ಭಾಗಿಯಾಗಿದ್ದರೋ ಅವರನ್ನೇ ಕಮಿಟಿಗಳಲ್ಲಿ ಸೇರಿಸಿಕೊಂಡಿದ್ದಾರೆ,…
ಎಡಗೈ ಬಳಸುವವರ ಕಥೆ ಆಧಾರಿತ ಸಿನಿಮಾ ‘ಎಡಗೈಯೇ ಅಪಘಾತಕ್ಕೆ ಕಾರಣ’ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ಮೊದಲ ಭಾಗವೆಂಬಂತೆ ಚಿತ್ರದ ಟೀಸರ್ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ನಾಳೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್ ನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಲಿದ್ದಾರೆ. ಈ ಮೂಲಕ ದಿಗಂತ್ ಸಿನಿಮಾಗೆ ಸಾಥ್‌ಕೊಡಲಿದ್ದಾರೆ ಅಭಿನಯ ಚಕ್ರವರ್ತಿ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ದೂದ್ ಪೇಡ ದಿಗಂತ್ ನಾಯಕನಾಗಿ ನಟಿಸಿದ್ದು, ದಿಗ್ಗಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಡಗೈ ಅಪಘಾತಕ್ಕೆ ಕಾರಣ ಸಿನಿಮಾವನ್ನು…
ಬೆಂಗಳೂರು: ಜಾತಿಗಣತಿ (Caste Census) ವರದಿ ಲೀಕ್ ಆಗಿಲ್ಲ. ವಿರೋಧ ಮಾಡುವವರು ವರದಿ ಬಂದಾಗ ಅದನ್ನು ಓದಿದ ಮೇಲೆ ಮಾತಾಡಲಿ ಎನ್ನುವ ಮೂಲಕ ಜಾತಿಗಣತಿ ವಿರೋಧ ಮಾಡುವವರಿಗೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿರುಗೇಟು ಕೊಟ್ಟರು. ಜನವರಿಯಲ್ಲಿ ಅಹಿಂದ ಸಮಾವೇಶ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸಂಘಟನೆಗೋಸ್ಕರ ಸಮಾವೇಶ ಮಾಡ್ತಾರೆ. ಲಿಂಗಾಯತರು ಸಮಾವೇಶ ಮಾಡಿದ್ರು. ಅದರಂತೆ ಅಹಿಂದಾ ಸಮಾವೇಶ ಆಗ್ತಿದೆ. ಅನೇಕ ಬೇಡಿಕೆಗಳು ಇರಲಿದೆ. ಇದು ಲಿಂಗಾಯತ ಸಮಾವೇಶಕ್ಕೆ ಕೌಂಟರ್ ಅಲ್ಲ. ಅದು ಸಂಘಟನೆ ವಿಚಾರವಾಗಿ ಆಗುವ ಸಮಾವೇಶ ಎಂದರು. https://ainlivenews.com/prime-minister-modis-youtube-channel-has-crossed-2-crore-subscribers/ ಜಾತಿಗಣತಿ ವರದಿ ಸಿದ್ದವಾಗಿದೆ. ಅದು ಕೇವಲ ಜಾತಿಗೆ ಸೀಮಿತ ಆಗಿರುವ ಗಣತಿ ಅಲ್ಲ. ಸಾಮಾಜಿಕ, ಅರ್ಥಿಕ ಗಣತಿ ಅದು. 54 ಅಂಶಗಳಲ್ಲಿ ಗಣತಿ ಆಗಿದೆ. ಯಾರು ಪರ, ವಿರೋಧ ಮಾಡೋದು ಮುಖ್ಯ ಅಲ್ಲ. ಪ್ರಜಾಪ್ರಭುತ್ವ ಇದು. ವಿರೋಧ-ಪರ ಸಹಜ. ಮೊದಲು ವರದಿ ಸ್ವೀಕಾರ ಮಾಡೋಣ. ಮೊದಲು ವರದಿ ಓದಲಿ ಆಮೇಲೆ ವಿರೋಧದ ಬಗ್ಗೆ ನೋಡೋಣ ಎಂದು ತಿಳಿಸಿದರು.