2024 ರಲ್ಲಿ ಭಾರತದಲ್ಲಿ ಮುಂಬರುವ Kia ಕಾರುಗಳ ಪಟ್ಟಿ ಇಲ್ಲಿದೆ. Kia ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್‌ಗಳ ಹಿನ್ನೆಲೆಯಲ್ಲಿ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸ ಕಾರು ತಯಾರಕರಾಗಿದ್ದಾರೆ. ಹ್ಯುಂಡೈನ ಒಡಹುಟ್ಟಿದವರು, ಕಿಯಾ ವಾಹನಗಳು ಹ್ಯುಂಡೈ ಕಾರುಗಳೊಂದಿಗೆ ಪವರ್‌ಟ್ರೇನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಹಂಚಿಕೊಳ್ಳುತ್ತವೆ. ಆದಾಗ್ಯೂ, ಇದು ಸ್ವಲ್ಪ ಹೆಚ್ಚು ಪ್ರೀಮಿಯಂ ಕಾರು ತಯಾರಕ ಎಂದು ಕರೆಯುತ್ತದೆ. ಆದ್ದರಿಂದ, ಅದರ ಕಾರುಗಳು ಆಯಾ ವಿಭಾಗಗಳಲ್ಲಿ ಕೆಲವು ಅತ್ಯುತ್ತಮ ತಂತ್ರಜ್ಞಾನ, ಸಂಪರ್ಕ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ಹೆಮ್ಮೆಪಡುತ್ತವೆ. ಅದು ನಮ್ಮ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳ ಪ್ರಮುಖ ಆಕರ್ಷಣೆಯಾಗಿದೆ. ಡಿಸೆಂಬರ್ 14, 2023 ರಂದು, ಕಿಯಾ ಸೋನೆಟ್ ಫೇಸ್‌ಲಿಫ್ಟ್ ಅನ್ನು ಅನಾವರಣಗೊಳಿಸಿತು. ಕೊರಿಯನ್ ದೈತ್ಯದಿಂದ 2024 ರಲ್ಲಿ ನಾವು ನೋಡಬಹುದಾದ ವಾಹನಗಳ ವಿವರಗಳನ್ನು ನೋಡೋಣ ಕಿಯಾ ಸೋನೆಟ್ ಕಿಯಾ ಸೋನೆಟ್ ಇತ್ತೀಚೆಗೆ ಫೇಸ್‌ಲಿಫ್ಟ್‌ಗೆ ಒಳಗಾಗಿದೆ, ಅಧಿಕೃತ ಬಿಡುಗಡೆಯನ್ನು ಜನವರಿ 2024 ಕ್ಕೆ ನಿಗದಿಪಡಿಸಲಾಗಿದೆ. ಅದೇ ಸಮಯದಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ. 2024 ರ Kia Sonet ಫೇಸ್‌ಲಿಫ್ಟ್‌ಗಾಗಿ ಪ್ರಸ್ತುತ…
Author: AIN Author
ಕರ್ನಾಟಕದ ಬೆಂಗಳೂರಿನಲ್ಲಿ ಚಿನ್ನದ ಮೇಲಿನ ಹೂಡಿಕೆ ಪ್ರಮಾಣ ಶೇ.69ರಷ್ಟಿದ್ದು, ಇದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ತಿರುವನಂತಪುರಂ ಶೇ.66ರೊಂದಿಗೆ 2ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ಭಾರತದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುಟುಂಬಗಳ ಪ್ರಮಾಣವು 2022ರಲ್ಲಿನ ಶೇ.3ರಿಂದ 2023ರಲ್ಲಿ ಶೇ.5ಕ್ಕೆ ಏರಿಕೆಯಾಗಿದೆ. ಅಲ್ಲದೇ 2023ರಲ್ಲಿ ದೇಶದಲ್ಲಿ ಶೇ.27ರಷ್ಟು ಕುಟುಂಬಗಳು ಜೀವ ವಿಮೆ ಪಾಲಿಸಿಗಳನ್ನು ಹೊಂದಿವೆ. ಇದು 2019ರ ಶೇ.19ರಷ್ಟಕ್ಕೆ ಹೋಲಿಸಿದರೆ ಅಧಿಕವಾಗಿದೆ. ಸಮೀಕ್ಷೆಯ ಪ್ರಕಾರ ಶೇ.53ರಷ್ಟು ಕುಟುಂಬಗಳು ಯಾವುದೇ ಆರೋಗ್ಯ ವಿಮೆ ಹೊಂದಿಲ್ಲ, ಷೇರು ಮಾರುಕಟ್ಟೆ ಹೂಡಿಕೆದಾರರ ಪ್ರಮಾಣ ಶೇ.9ಕ್ಕೆ ಏರಿದೆ, ಶೇ.10ರಷ್ಟು ಭಾರತೀಯ ಕುಟುಂಗಳು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
ಮಂಗಳೂರು:- ರಾಜ್ಯಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕರಾವಳಿಯಲ್ಲಿ ಮಾತ್ರ ವಾಡಿಕೆಯ ಮಳೆ ಸುರಿದಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 27ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಶೇ. 31, ಉತ್ತರ ಒಳನಾಡಿನಲ್ಲಿ ಶೇ. 69 ಮತ್ತು ಮಲೆನಾಡಿನಲ್ಲಿ ಶೇ. 15ರಷ್ಟು ಮಳೆ ಕೊರತೆ ಉಂಟಾಗಿದೆ. ಕೇವಲ ಕರಾವಳಿದಲ್ಲಿ ಮಾತ್ರ ಶೇ. 5ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಈ ಬಾರಿ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಳವಾಗುವ ನಿರೀಕ್ಷೆ ಇದೆ. ಕಳೆದ ಏಳು ವರ್ಷಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ಕೇವಲ ಮೂರು ಬಾರಿ ಮಾತ್ರ ವಾಡಿಕೆ ಮಳೆ ಸುರಿದಿತ್ತು. 2018ರಲ್ಲಿ ಶೇ.-28, 2019ರಲ್ಲಿ ಶೇ. 124, 2020ರಲ್ಲಿ ಶೇ. 27, 2021ರದಲ್ಲಿ ಶೇ. 122 ಮತ್ತು 2022ರಲ್ಲಿ ಅಂದರೆ ಕಳದೆ ವರ್ಷ ಶೇ. 14ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಈ ವರ್ಷ ಸದ್ಯ ಶೇ. 5ರಷ್ಟು ಮಳೆ ಪ್ರಮಾಣದಲ್ಲಿ ಏರಿಕೆ ಇದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಸುರಿದರೂ ಉಭಯ ಜಿಲ್ಲೆಗಳ 5 ತಾಲೂಕುಗಳಲ್ಲಿ…
ಬೆಂಗಳೂರು:- ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ತರುಣ್ ಬಾಲಚಂದ್ರನ್ ನಗರದ ಕೆಂಗೇರಿ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 2ನೇ ಮಹಡಿಯಿಂದ ಡಿ.19ರಂದು ಆಯತಪ್ಪಿ ಬಿದ್ದಿದ್ದ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಹತ್ತಿರದ ಗ್ಲೆನಿಗಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡುವ ಬಾಲಚಂದ್ರ ಹಾಗೂ ಲತಾ ದಂಪತಿ ತಮ್ಮ ಮಗನ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು. ಮೃತ ತರುಣ್ ತಂದೆ ಚಾಲಚಂದ್ರ ಮಾತನಾಡಿ, ತರುಣ್ ನಮ್ಮ ಶಕ್ತಿಯ ಮೂಲವಾಗಿದ್ದ. ಅವನ ಹಠಾತ್ ನಿಧನ ನಮ್ಮ ಕುಟುಂಬದ ಮೇಲೆ ಭಾರೀ ಪರಿಣಾಮ ಉಂಟು ಮಾಡಿದೆ. ಮತ್ತೊಬ್ಬರಲ್ಲಿ ಮಗ ಜೀವಂತವಾಗಿರಲಿ ಎಂಬ ಕಾರಣದಿಂದ ಅಂಗಾಂಗ ದಾನ ಮಾಡಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
‘ಸೀತಾರಾಮ’ (Seetharama) ಸೀರಿಯಲ್ ಸೀತಾ ಆಗಿ ಮನಗೆಲ್ಲುತ್ತಿರೋ ವೈಷ್ಣವಿ ಗೌಡ (Vaishnavi Gowda) ಅವರು ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಸೀತಾ ನಯಾ ಅವತಾರ ಪಡ್ಡೆಹುಡುಗರಿಗೆ ಖುಷಿ ಕೊಟ್ಟಿದೆ. ನೆಕ್‌ಲೆಸ್ ಡ್ರೆಸ್‌ನಲ್ಲಿ ವೈಷ್ಣವಿ ಗೌಡ (Vaishnavi Gowda) ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸಖತ್ ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ವೈಷ್ಣವಿ ಪೋಸ್ ನೀಡಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಸೀತಾರಾಮ’ ಸೀರಿಯಲ್‌ನಲ್ಲಿ ಸೀತಾ ಆಗಿ ಮನಗೆಲ್ಲುತ್ತಿದ್ದಾರೆ. ಸಿಹಿ, ರಾಮ್, ಸೀತಾ ಪಾತ್ರಗಳು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಧಾರಾವಾಹಿಗೆ ಪ್ರಶಂಸೆ ವ್ಯಕ್ತವಾಗಿದೆ
ಹುಬ್ಬಳ್ಳಿ: ಫೇಸ್‌ಬುಕ್ ಪೇಜ್ ಲೈಕ್ ಮಾಡಿ ಟೆಲಿಗ್ರಾಂ ಟಾಸ್ಕ್ ಸ್ಪೇಷಲಿಸ್ಟ್ ಖಾತೆಗೆ ಕಳುಹಿಸಿದರೆ ಹೆಚ್ಚು ಲಾಭಗಳಿಸಬಹುದೆಂದು ನಂಬಿಸಿದ ಅಪರಿಚಿತರು ನಗರದ ಸುರ್ ಗಾಯತೊಂಡೆ ಎಂಬುವರಿಂದ 5.32 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸುರ್ ಎಂಬುವರಿಗೆ ಟೆಲಿಗ್ರಾಮ್‌ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಫೇಸ್‌ಬುಕ್ ಪೇಜ್ ಕಳಹಿಸಿ ಲೈಕ್ ಮಾಡಿದ ಪೇಜ್ ಮರಳಿ ಟೆಲಿಗ್ರಾಮ್‌ಗೆ ಹಾಕಲು ಹೇಳಿದ್ದಾನೆ. ಇದನ್ನು ನಂಬಿದ ಅವರು ಲೈಕ್ ಮಾಡಿ ಕಳಹಿಸಿದಾಗ ಮೊದಲಿಗೆ 2 ಸಾವಿರ ರೂ., ಆ ಮೇಲೆ 2,800 ರೂ. ಹಾಕಿ ನಂಬಿಕೆ ಬರುವಂತೆ ಮಾಡಿದ್ದಾನೆ. ಬಳಿಕ ಇನ್ನೂ ಹೆಚ್ಚಿನ ಟಾಸ್ಕ್ ನೀಡಿದ್ದು, ಹಂತ ಹಂತವಾಗಿ ಸುರ್ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಲುಲ್ಲಕ ವಿಚಾರಕ್ಕಾಗಿ ಮದುವೆಗಳು (Marriage Cancel) ರದ್ದಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅಂಥದ್ದೇ ಘಟನೆಯೊಂದು ನಡೆದು ಹೋಗಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಹೌದು. ವಧುವಿನ ಕಡೆಯವರು ಊಟದ ಮೆನುವಿನಲ್ಲಿ ಮಟನ್ ಬೋನ್ ಮ್ಯಾರೋ (Mutton Bone Marrow) ಸೇರಿಸಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ನಿಜಾಮಾಬಾದ್‍ನ ವಧು ಹಾಗೂ ಜಗ್ತಿಯಾಳ್ ಮೂಲದ ವರನಿಗೂ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಕಳೆದ ನವೆಂಬರ್ ತಿಂಗಳಲ್ಲಿ ವಧುವಿನ ಮನೆಯಲ್ಲಿ ನೆರವೇರಿತ್ತು. ಆದರೆ ಇದೀಗ ಸಣ್ಣ ವಿಚಾರವೊಂದಕ್ಕೆ ಮದುವೆಯೇ ರದ್ದಾಗಿದೆ. ನಿಶ್ಚಿತಾರ್ಥದ (Engagement) ಬಳಿಕ ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. https://ainlivenews.com/prime-minister-modis-youtube-channel-has-crossed-2-crore-subscribers/ ಆದರೆ ಈ ಮೆನುವಿನಲ್ಲಿ ಮಟನ್ ಐಟಮ್ ಇರಲಿಲ್ಲ. ಇದನ್ನು ಗಮನಿಸಿದ ವರನ ಕಡೆಯವರು ಮಟನ್ ಬೇಕು ಎಂದು ಹಠಕ್ಕೆ ಬಿದ್ದರು. ಈ ಸಂಬಂಧ ಎರಡೂ ಮನೆಯವರಿಗೂ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು…
ಹುಬ್ಬಳ್ಳಿ: ಇಲ್ಲಿಯ ನವನಗರದ ಚಿಕೇನಕೊಪ್ಪ ಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸತ್ಸಂಗ ಹಾಗೂ ದಾಸೋಹ ಸೇವಾ ಸಮಿತಿ ವತಿಯಿಂದ “ಶ್ರದ್ದಾಸ್ಮರಣೆ’ ಅಧ್ಯಾತ್ಮ ಪ್ರವಚನ ಡಿ. 29ರಿಂದ ಜನೆವರಿ 2ರ ವರೆಗೆ ಏರ್ಪಡಿಸಲಾಗಿದೆ. ವಿಜಯಪುರ ಶ್ರೀಗೌರಿಶಂಕರ ಬಿಲ್ವಾಶ್ರಮದ, ಪ್ರವಚನ ಪ್ರವಿಣ ಶ್ರೀ ಸಿದ್ದಲಿಂಗ ದೇವರು ನಿತ್ಯ ಸಂಜೆ 6ಕ್ಕೆ ಪ್ರವಚನ ನೀಡುವರು. ಡಿ. 29ರಂದು ಸಂಜೆ ನಡೆಯುವ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಬಳಗಾನೂರು ಕ್ಷೇತ್ರದ ಶ್ರೀ ಶಿವಶಾಂತವೀರ ಶರಣರು ವಹಿಸುವರು. ಜನೆವರಿ 2ರಂದು ಸಂಜೆ ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದ್ದು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.
ಚಳಿಗಾಲ ಬಂತೆಂದರೆ ಸಾಕು, ಜೊತೆಗೆ ಶೀತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ಕಾಯಿಲೆಗಳು ಜೊತೆಯಾಗಿಯೇ ಬರುತ್ತದೆ. ಶುಂಠಿಯು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಎಲ್ಲಾ ಸಮಸ್ಯೆಗಳ ನಿವಾರಣೆಗೆ ಇದು ಅತ್ಯಂತ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯ ಕಾಪಾಡುತ್ತದೆ. ಇದಕ್ಕಾಗಿ ನೀವು ಮನೆಯಲ್ಲೇ ಶುಂಠಿ ಕ್ಯಾಂಡಿ ಮಾಡಿ ಸೇವಿಸಿ. ಶುಂಠಿ ಕ್ಯಾಂಡಿಯು ಆರೋಗ್ಯಕರ ಮತ್ತು ರುಚಿಕರವಾಗಿದೆ. ಇದರ ಪಾಕವಿಧಾನ ನೋಡೋಣ. ಇದನ್ನು ಮಾಡಲು ಶುಂಠಿ, ಬೆಲ್ಲ, ಲವಂಗ ಪುಡಿ, ಕರಿಮೆಣಸು ಪುಡಿ, ಅರಿಶಿನ ಪುಡಿ, ಕಪ್ಪು ಉಪ್ಪು, ತುಪ್ಪ ಬೇಕು. ಮೊದಲು ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಶುಂಠಿಯನ್ನು ಬ್ಲೆಂಡಿಂಗ್ ಜಾರ್ ನಲ್ಲಿ ಹಾಕಿ ನಯವಾದ ಪೇಸ್ಟ್ ಮಾಡಿ. ಈಗ ಗ್ಯಾಸ್ ಮೇಲೆ ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ನಂತರ ಶುಂಠಿ ಹಾಕಿ 3 ನಿಮಿಷ ಚೆನ್ನಾಗಿ ಫ್ರೈ ಮಾಡಿ. ನಂತರ ರುಬ್ಬಿದ ಬೆಲ್ಲವನ್ನು ಬಾಣಲೆಯಲ್ಲಿ ಹಾಕಿ ಮತ್ತು ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಮಿಶ್ರಣ ಮಾಡಿ. ಬೆಲ್ಲ…
ಕೋಲಾರ :- ಮಕ್ಕಳಿಂದ ಮಲಗುಂಡಿ ಸ್ವಚ್ಚತೆ ಕೇಸ್ ಗೆ ಸಂಬಂಧಿಸಿದಂತೆ ಇದು ಬಹಳ ಕ್ರೂರ ಕೃತ್ಯವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ್ದು ಕ್ರೂರ ಕೃತ್ಯ. ಅಪ್ಪಿತಪ್ಪಿಯೂ ಇಂಥ ಕೃತ್ಯ ಸಹಿಸುವುದಿಲ್ಲ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಎರಡು ದಿನಗಳಲ್ಲಿ ಇನ್ನುಳಿದ ಇಬ್ಬರನ್ನು ಬಂಧಿಸಬೇಕು’ ಎಂದು ತಾಕೀತು ಮಾಡಿದರು. ಈ ಘಟನೆ ಇಡೀ ರಾಜ್ಯಕ್ಕೆ ಒಂದು ಪಾಠ. ಯಾವುದೇ ಕಾರಣಕ್ಕೂ ಮರುಕಳಿಸಬಾರದು. ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ‘ಸ್ಮಶಾನ ಮತ್ತು ಖಬರಸ್ತಾನಕ್ಕೆ ಅಗತ್ಯ ಜಾಗ ಒದಗಿಸಬೇಕು. ಸರ್ಕಾರಿ ಸ್ಥಳ ಇಲ್ಲದಿದ್ದರೆ ಖರೀದಿಸಿ ಕೊಡಬೇಕು. ದಲಿತರು ಸೇರಿದಂತೆ ಯಾವುದೇ ಸಮುದಾಯ, ಧರ್ಮದವರಿಗೆ ಶವ ಸಂಸ್ಕಾರಕ್ಕೆ ತೊಂದರೆ ಆಗಕೂಡದು’ ಎಂದರು.