Author: AIN Author

ಚಂಡೀಗಢ;- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ನರೇಂದ್ರ ಮೋದಿ ಸರ್ಕಾರದ ಹೋರಾಟ ಕೇವಲ ಒಂದು ನಾಟಕ ಎಂದರು. ಯಾರಾದರೂ ದೊಡ್ಡ ಪಾಪ ಅಥವಾ ಅಪರಾಧ ಮಾಡಿ ಬಿಜೆಪಿಗೆ ಸೇರಿದರೆ, ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆ ವ್ಯಕ್ತಿಯನ್ನು ಮುಟ್ಟಲು ಎಂದಿಗೂ ಧೈರ್ಯ ಮಾಡಿಲ್ಲ ಬಿಜೆಪಿ ಆರೋಪಿಸಿದ ವ್ಯಕ್ತಿ ಪಕ್ಷಕ್ಕೆ ಸೇರಿದ ನಂತರ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ’ ಎಂದು ದೂರಿದ್ದಾರೆ. ಯಾರು ಭ್ರಷ್ಟರು?. ಇ.ಡಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದವರಲ್ಲ. ಬದಲಿಗೆ ಇ.ಡಿಗೆ ಹೆದರಿ ಬಿಜೆಪಿ ಸೇರಿದವರೇ ನಿಜವಾದ ಅರ್ಥದಲ್ಲಿ ಭ್ರಷ್ಟರು. ಇ.ಡಿಯಿಂದ ಸಿಕ್ಕಿಬಿದ್ದರೂ, ಬಿಜೆಪಿಗೆ ಸೇರದವರು ಕಟು ಪ್ರಾಮಾಣಿಕರು. ಏಕೆಂದರೆ ಇಂದು ಅಥವಾ ನಾಳೆ ತಾವು ಹೊರಬರುತ್ತೇವೆ ಎಂದು ಅವರಿಗೆ ತಿಳಿದಿದೆ. ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ತಮ್ಮನ್ನು ಬಂಧಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಮತ್ತು ತಕ್ಷಣವೇ ಬಿಜೆಪಿ ಸೇರಬೇಕಾಗುತ್ತದೆ ಎಂದು ತಿಳಿದಿದೆ…

Read More

ಕೋಲಾರ;- ಭೀಕರ ಬರದಿಂದ 3 ತಿಂಗಳಲ್ಲಿ 250 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ನವಂಬರ್‌ನಲ್ಲಿಯೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ. ಇನ್ನು ಮುಂದಿನ‌ ದಿನಗಳ ಬಗ್ಗೆ ಭಯ ಕಾಡುತ್ತಿದೆ. ಈಗ ರೈತರ ನೆರವಿಗೆ ಬರಬೇಕಾದ್ದು ಸರ್ಕಾರದ ಕರ್ತವ್ಯ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ರೂ. ಖರ್ಚು ಮಾಡಿದ್ದಾರೆ. 2013 ರಿಂದ 2018ರವರಗೆ 4,256 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರೇ ಹೇಳುತ್ತಾರೆ. ಈಗ ಮೂರು ತಿಂಗಳ ಅವಧಿಯಲ್ಲಿ 250 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ತಾಳ ತಪ್ಪಿದೆ. ನಾವು ಇವರ ಸರ್ಕಾರ 5 ವರ್ಷ ಇರುತ್ತದೆ ಎಂದುಕೊಂಡಿದ್ದೇವು. ಆದರೆ, ಸರ್ಕಾರ ತಾಳ ತಪ್ಪಿರೋದು ಸ್ಪಷ್ಟವಾಗುತ್ತಿದೆ. ನಮ್ಮ‌ಸರ್ಕಾರ ಇದ್ದಾಗ 7 ಗಂಟೆ ತ್ರೀ ಫೇಸ್‌ ವಿದ್ಯತ್ ನೀಡಿದ್ದೆವು. ಆದರೆ,…

Read More

ಇಂದು ನಡೆದ ವಿಶ್ವಕಪ್‌ 2023 ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದಾಖಲೆಯ ಶತಕದಾಟದ ನೆರವಿನೊಂದಿಗೆ ದ.ಆಫ್ರಿಕಾಗೆ ಭಾರತ 327 ರನ್‌ಗಳ ಗುರಿ ನೀಡಿದೆ. ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 326 ರನ್‌ಗಳಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಉತ್ತಮ ಇನ್ನಿಂಗ್ಸ್‌ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನಡೆಸಿದ ರೋಹಿತ್‌ ಶರ್ಮಾ 24 ಬಾಲ್‌ಗಳಿಗೆ 40 ರನ್‌ ಗಳಿಸಿ (6 ಫೋರ್‌, 2 ಸಿಕ್ಸರ್‌) ಗಳಿಸಿ ಅರ್ಧಶತಕ ವಂಚಿತರಾದರು. ಆದರೂ ತಂಡಕ್ಕೆ ಉತ್ತಮ ಆರಂಭಕ್ಕೆ ನೆರವಾದರು. ನಂತರ ಭರವಸೆ ಮೂಡಿಸಿದ್ದ ಗಿಲ್‌ ಮತ್ತು ಕಿಂಗ್‌ ಕೊಹ್ಲಿ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್‌ 22 ರನ್‌ ಗಳಿಸಿ ಕ್ಲೀನ್‌ ಬೌಲ್ಡ್‌ ಆಗಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ…

Read More

ಬೆಂಗಳೂರು ;- ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡು ಕೆಲಸ ಮಾಡಬೇಕು, ಚುನಾವಣೆ ವೇಳೆ ರಾಜಕಾರಣ ಮಾಡಬೇಕು, ಇತರೆ ಸಮಯದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು. ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬದ ಅವಶ್ಯಕತೆಯಿಲ್ಲ ಎಂದಿದ್ದೆ. ಆದರೂ ಅಭಿಮಾನಿಗಳು ಬಂದು ಶುಭ ಕೋರುತ್ತಿದ್ದಾರೆ. ಅವರಿಗೆ ಋಣಿ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಬರ ಅಧ್ಯಯನ ಪ್ರವಾಸ ಮಾಡಲಿದ್ದಾರೆ. ಏಳು ಮತ್ತು ಎಂಟರಂದು ಜಿಲ್ಲಾ ಪ್ರವಾಸಕ್ಕೆ ಹೋಗಲಿದ್ದಾರೆ” ಎಂದರು. ಬರ ಪ್ರವಾಸದ ಅಧ್ಯಯನಕ್ಕೆ ಹೋಗುವ ಬದಲು ಕೇಂದ್ರದಿಂದ ಅನುದಾನ ತನ್ನಿ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಿಡಿಕಾರಿದ ವಿಜಯೇಂದ್ರ, “ಅವರು ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ, ಸರ್ಕಾರದ ಗೌರವಾನ್ವಿತ ಸ್ಥಾನದಲ್ಲಿದ್ದು ಅವರ ಹೇಳಿಕೆ ರಾಜ್ಯಕ್ಕೆ ಮಾರಕವಾಗಲಿದೆ. ಆಡಳಿತದಲ್ಲಿದ್ದು ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದ…

Read More

ಬೆಂಗಳೂರು;- ಸಿಲಿಕಾನ್ ಸಿಟಿಯಲ್ಲಿ ಈರುಳ್ಳಿಯ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿಯೂ ಕ್ವಿಂಟಲ್‌ಗೆ ₹ 4000 ದಿಂದ 4300 ರೂಪಾಯಿಗೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮೂಲಕ ಬೆಲೆ ನಿಯಂತ್ರಣದ ಉದ್ದೇಶಕ್ಕಾಗಿ ಇಲ್ಲಿಗೆ ಪೂರೈಸುತ್ತಿರುವ ಈರುಳ್ಳಿಯೂ ಸಹ ಕ್ವಿಂಟಲ್‌ಗೆ ಸುಮಾರು 4600 ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮಹಾರಾಷ್ಟ್ರದ ಈರುಳ್ಳಿ 6000 ರೂಪಾಯಿ ಗಡಿ ದಾಟುತ್ತಿದೆ. ಸಾಗಣೆ ವೆಚ್ಚ, ಕೂಲಿ, ಮತ್ತಿತರ ಕಾರಣದಿಂದ ಚಿಲ್ಲರೆ ಮಾರುಕಟ್ಟೆಗೆ ತಲುಪುವ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟೂ ಹೆಚ್ಚಾಗುತ್ತಿದೆ. ನಗರದ ಕೆ.ಆರ್‌. ಮಾರುಕಟ್ಟೆ, ಶೇಷಾದ್ರಿಪುರ, ಮಲ್ಲೇಶ್ವರ, ಜಯನಗರ ಮಾರುಕಟ್ಟೆಗಳಲ್ಲಿ ಕೆಜಿಗೆ 65 ರಿಂದ 75 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್ ಮತ್ತು ಇತರೆಡೆ ಉತ್ತಮ ಗುಣಮಟ್ಟದ ಈರುಳ್ಳಿಗೆ 85 ರೂಪಾಯಿ ವರೆಗೆ ನಿಗದಿಪಡಿಸಲಾಗಿದೆ. ಕಳೆದ ತಿಂಗಳು ಈರುಳ್ಳಿಯ ಬೆಲೆ ಕೇವಲ 25 ರೂಪಾಯಿ ಇದ್ದದ್ದು ಇಷ್ಟು ಹೆಚ್ಚಳವಾಗಿರುವುದು ಗ್ರಾಹಕರ ಕಣ್ಣಿನಲ್ಲಿ ನೀರನ್ನು ತರಿಸುತ್ತಿದೆ…

Read More

ನವದೆಹಲಿ;- ಎಎಪಿ ಯಶಸ್ಸು ಮತ್ತು ಮುನ್ನಡೆ ಕಂಡು ಪ್ರಧಾನಿ ಹೆದರಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಆಮ್ ಆದ್ಮಿ ಪಕ್ಷ ಬೆಳೆಯುತ್ತಿರುವ ವೇಗ ಮತ್ತು ಯಶಸ್ಸನ್ನು ಕಂಡು ಹೆದರಿದ್ದಾರೆ. ಎಎಪಿಯ ಯಶಸ್ಸು ಮತ್ತು ಪಕ್ಷವು ಮುನ್ನಡೆಯುತ್ತಿರುವ ವೇಗದ ಬಗ್ಗೆ ಪ್ರಧಾನಿ ನರೇಂದ್ರ ಅವರಿಗೆ ಹೆದರಿಕೆ ಉಂಟಾಗಿದೆ. ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಕೇವಲ 11 ವರ್ಷಗಳ ನಂತರ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮ ಪಾರ್ಟಿ ಮುನ್ನಡೆಯುತ್ತಿರುವ ವೇಗವು ಪ್ರತಿ ಪಕ್ಷವನ್ನು ಹೊರಹಾಕುತ್ತದೆ ಎಂಬ ಭಯ ಆವರಲ್ಲಿ ಕಾಡುತ್ತಿದೆ’ ಎಂದು ಹೇಳಿದ್ದಾರೆ.

Read More

ವಿರಾಟ್ ಕೊಹ್ಲಿ ಅವರು, ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ದಿಟ್ಟ ಹೋರಾಟ ನೀಡಿದ ಕೊಹ್ಲಿ ಹುಟ್ಟು ಹಬ್ಬ ದಿನವೇ ಶತಕ ಸಾಧನೆ ಮಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್, ಸೆಂಚುರಿ ಕುರಿತು ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೇ ವೇಳೆ ಕೊಹ್ಲಿ ಸೆಂಚುರಿ ಅತ್ಯಂತ ಸ್ವಾರ್ಥ ಶತಕವಾಗಿತ್ತು ಅನ್ನೋ ಟೀಕೆಯೂ ಕೇಳಿಬಂದಿದೆ. ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶತಕಕ್ಕಾಗಿ ಆಡಿದ ರೀತಿ ಇತ್ತು ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಆಟದಲ್ಲಿ ಸೆಂಚುರಿ ಪೂರೈಸಲೇಬೇಕು ಅನ್ನೋ ಹಠವಿತ್ತೇ ಹೊರತು ಭಾರತಕ್ಕಾಗಿ ಆಡುತ್ತಿದ್ದೇನೆ ಅನ್ನೋ ಛಾಯೆ ಕಾಣಿಸಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಶತಕದ ಸನಿಹದಲ್ಲಿ ಕೊಹ್ಲಿ ಅತೀವ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ದಾರೆ. ಬೌಂಡರಿ ಸಿಕ್ಸರ್‌ಗಿಂತ ಕೊಹ್ಲಿ, ತಮ್ಮ ಶತಕದ ಮೇಲೆ ಹೆಚ್ಚು ಗಮನಕೇಂದ್ರಿಕರಿಸಿದ್ದರು. ಹೀಗಾಗಿ ಇದು ಸೆಲ್ಫಿಶ್ ಸೆಂಚುರಿ ಅನ್ನೋ ಟೀಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ. ಇದೇ ವೇಳೆ…

Read More

ಬಾಗಲಕೋಟೆ;- ಸಮಯ ಕೂಡಿ ಬಂದಾಗ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಆಗಲು ಕಾಯಬೇಕಾಗುತ್ತದೆ. ಸಮಯ ಕೂಡಿ ಬಂದಾಗ ಮಾತ್ರ ಸಾಧ್ಯ. ಈ ಕುರಿತು ನಿರ್ಣಯ ಕೈಗೊಳ್ಳಲು ಪಕ್ಷ, ಶಾಸಕರಿದ್ದಾರೆ. ಪಕ್ಷದ ತೀರ್ಮಾನ ಬಹಳ ಮುಖ್ಯ’ ಎಂದರು. ನನಗೆ ಯಾವುದೇ ರೀತಿಯ ಅಸಮಾಧಾನ ಆಗಿಲ್ಲ. ಪಕ್ಷದೊಳಗೆ ಯಾರಿಗಾದರೂ ಅಸಮಾಧಾನವಿದ್ದರೆ ಮಾತುಕತೆ ಮೂಲಕ ಬಗೆಹರಿಸಲಾಗುವುದು’ ಎಂದು ಹೇಳಿದರು. ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆಯೇ ಎಂಬ ಪ್ರಶ್ನೆಗೆ, ‘ಅವರೇ ಈ ಬಗ್ಗೆ ಈಗಾಗಲೇ ಹೇಳಿದ್ದಾರಲ್ಲ. ಕಾದು ನೋಡೋಣ’ ಎಂದರು. ನಿಮ್ಮನ್ನು ಮಹಾರಾಷ್ಟ್ರದ ಅಜಿತ್ ಪವಾರ್‌ಗೆ ಹೋಲಿಸಲಾಗುತ್ತಿದೆಯೆಲ್ಲ ಎಂಬ ಪ್ರಶ್ನೆಗೆ, ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಹಾರಾಷ್ಟ್ರದ ಸ್ಥಿತಿ ಇಲ್ಲಿ ಬರಲ್ಲ’ ಎಂದರು

Read More

ಪೀಣ್ಯ ದಾಸರಹಳ್ಳಿ: ಎಂಟನೇ ಮೈಲಿ ಕಡೆಯಿಂದ ಐಕಿಯ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಐಕಿಯಗೆ ನೀರಿನ ಸಂಪರ್ಕಕ್ಕೆ ಪೈಪ್ ಅಳವಡಿಸಲು ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ. ರಾಮಯ್ಯ ಬಡಾವಣೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ಹೋಗುವ ತಿರುವಿನಲ್ಲಿ ಇರುವ ಗುಂಡಿಗೆ ಬಿದ್ದು ಸಾಕಷ್ಟು ಅವಗಡಗಳು ಸಂಭವಿಸಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಎಷ್ಟೋ ಮಂದಿ ಬಿದ್ದು ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ್ದಾರೆ ಎಂದು ಸ್ಥಳೀಯರು ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಹಾಯಕ ಎಂಜಿನಿಯರ್ ಕಾರ್ತಿಕ್ ಅವರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಅವರು ಇದಕ್ಕೆ ಸ್ಪಂದಿಸುತ್ತಿಲ್ಲ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ದುರಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು. ನಮ್ಮ ಕಣ್ಣೆದುರೇ ತಾಯಿ ಮಗು ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದರು, ದಿನನಿತ್ಯ ಈ ರಸ್ತೆ ಗುಂಡಿಗೆ ಬಿದ್ದು, ಎದ್ದು ಹೋಗುತ್ತಿದ್ದಾರೆ ಯಾರೂ ಇತ್ತ ಕಡೆ ಗಮನ…

Read More

ಪ್ರತಾಪ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ವಾ? ಕಳೆದ ವಾರ ವಿನಯ್ ಬಾಯಲ್ಲಿ ಇಂಥದೊಂದು ಮಾತು ಹೊರಬಂದಿತ್ತು. ಅದಕ್ಕೆ ಇಶಾನಿ‌ ಕೂಡ ‘ಹೌದು. ನಂಗೂ ಗೊತ್ತು ಅದು’ ಎಂದು ಅನುಮೋದಿಸಿದ್ದರು.‌ ತುಕಾಲಿ, ನಮ್ರತಾ ಕೂಡ ಆ ಮಾತನ್ನು ಅನುಮೋದಿಸಿದ್ದರು. ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಇದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಪ್ರತಾಪ್ ಕ್ಯಾರೆಕ್ಟರಿಗೇ ಕಳಂಕ ತರುವಂಥ ಮಾತುಗಳನ್ನಾಡಿದ ವಿನಯ್, ಇಶಾನಿ ಏನು ಹೇಳುತ್ತಾರೆ? ಸ್ವತಃ ಪ್ರತಾಪ್ ಗೆ ಇವೆಲ್ಲದರ ಅರಿವಿದೆಯೇ?ಎಂಬುವ ಪ್ರಶ್ನೆಗಳಿಗೆ ಇಂದಿನ ‘ಸೂಪರ್ ಸಂಡೆ ವಿಥ್ ಸುದೀಪ್’ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ.

Read More