ವಾಷಿಂಗ್ಟನ್: ಸೌದಿ ಅರೇಬಿಯಾದಿಂದ ಮಂಗಳೂರು ಬಂದರಿಗೆ ಬರುತ್ತಿದ್ದ ಹಡಗೊಂದರ ಮೇಲೆ ಡ್ರೋನ್ ದಾಳಿ ನಡೆದ ಕುರಿತು ವರದಿಯಾಗಿತ್ತು. ಹೌದು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ನಡೆದ ಡ್ರೋನ್ ದಾಳಿಯ ಹಿಂದೆ ಇರಾನ್ ಕೈವಾಡವಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಫೋಟಕ ಹೇಳಿಕೆ ನೀಡಿದೆ. ಗುಜರಾತ್‌ನಿಂದ 200 ಕಿ.ಮೀ. ದೂರದ ಅಂತಾರಾಷ್ಟ್ರೀಯ ಸಮುದ್ರದ ವಲಯದಲ್ಲಿ ಭಾರತಕ್ಕೆ ಬರುತ್ತಿದ್ದ ಲೈಬೀರಿಯಾದ ‘ಚೆಮ್ ಪ್ಲೂಟೋ’ ಹಡಗಿನ ಮೇಲೆ ನಿಗೂಢ ದಾಳಿ ನಡೆದಿತ್ತು. https://ainlivenews.com/sudeep-will-release-the-teaser-of-the-movie-left-hand-cause-of-accident/ ಈ ಹಡಗು ಸೌದಿಯಿಂದ ನವ ಬಂಗಳೂರು ಬಂದರಿಗೆ ತೈಲ ಹೊತ್ತು ತರುತ್ತಿತ್ತು. ಈ ವೇಳೆ ಹಡಗಿಗೆ ಬೆಂಕಿ ಹೊತ್ತಿಕೊಂಡರೂ ಅದನ್ನು ಕೆಲವೇ ಕ್ಷಣಗಳಲ್ಲಿ ಶಮನ ಮಾಡಲಾಗಿತ್ತು. ದಾಳಿ ಮಾಡಿದ್ಯಾರು ಎಂದು ಗೊತ್ತಾಗಿರಲಿಲ್ಲ. ಈ ಬಗ್ಗೆ ಅಮೆರಿಕ ವಿದೇಶಾಂಗ ವಕ್ತಾರರು ಹೇಳಿಕೆ ನೀಡಿ, ‘ಚೆಮ್ ಪ್ಲೂಟೋ’ ಹಡಗಿನ ಮೇಲೆ ಡ್ರೋನ್ ಹಾರಿ ಬಂದಿದ್ದು ಇರಾನ್‌ನಿಂದ’ ಎಂದಿದ್ದಾರೆ.
Author: AIN Author
ಬೆಂಗಳೂರು:- ಕನ್ನಡಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಕರವೇ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು, ಈ ಹಿನ್ನೆಲೆ ನಗರದ ಚಿಕ್ಕಜಾಲ ಪೊಲೀಸರು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅರ್ಧ ಕಿಲೋಮೀಟರ್ ಹಿಂದೆಯೇ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಫುಲ್ ಸೆಕ್ಯೂರಿಟಿ ನೀಡಲಾಗಿದ್ದು, ಪರಪ್ಪನ ಅಗ್ರಹಾರ ಮುಖ್ಯರಸ್ತೆಯಿಂದ ಜೈಲು ರಸ್ತೆಗೆ ಯಾರಿಗೂ ಪ್ರವೇಶ ಇಲ್ಲ. ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ. ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆ ಒದಗಿಸಲಾಗಿದೆ. ಕರವೇ ಕಾರ್ಯಕರ್ತರು ಜೈಲಿನ ಬಳಿ ಆಗಮಿಸಬಹುದು ಎನ್ನುವ ಹಿನ್ನೆಲೆ.. ಯಾರಿಗೂ ಮೇಲಿನ ಬಳಿ ಪ್ರವೇಶಕ್ಕೆ ಅವಕಾಶ ಇಲ್ಲ. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಪೊಲೀಸರು ಕರೆ ತಂದಿದ್ದು, ಇದು ಮುಟ್ಟಾಳ ಸರ್ಕಾರ ಎಂದು ಬೈದು ನಾರಾಯಣಗೌಡ ಒಳ ಹೋಗಿದ್ದಾರೆ.
ತಮಿಳಿನ (Tamil Nadu) ಹೆಸರಾಂತ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ (Covid positive) ಆಗಿದ್ದು, ನಂತರ ತತಕ್ಷಣವೇ ಅವರನ್ನು ಐಸಿಯೂಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮಿಳು ನಾಡಿನ ಡಿಎಂಡಿಕೆ (DMDK) ಮುಖ್ಯಸ್ಥರೂ ಆಗಿರುವ ಕ್ಯಾಪ್ಟನ್ ವಿಜಯಕಾಂತ್ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು. ಕ್ಯಾಪ್ಟನ್ ವಿಜಯಕಾಂತ್ (Vijayakanth) ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿದರೆ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ ಅದನ್ನು ನಿರಾಕರಿಸಿತ್ತು. ಮಾಧ್ಯಮಗಳು ಪ್ರಸಾರ ಮಾಡುವಂತೆ ಕ್ಯಾಪ್ಟನ್ ಅವರ ಆರೋಗ್ಯ ತೀರಾ ಹದಗೆಟ್ಟಿಲ್ಲ. ಜ್ವರ ಮತ್ತು ಶೀತದಿಂದ ಅವರು ಬಳಲುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಮನೆಗೆ ಬರಲಿದ್ದಾರೆ ಎಂದು ಹೇಳಿದ್ದರು.ಆದರೆ, ಮನೆಗೆ ಬಾರದೇ, ಬಾರದ…
ಬೆಂಗಳೂರು:- ಕರವೇ ನಾರಾಯಣಗೌಡ ಅರೆಸ್ಟ್ ಆದ ಬೆನ್ನಲ್ಲೇ ಕಾರ್ಯಕರ್ತರ ಕೋಪಕ್ಕೆ ಬಿಎಂಟಿಸಿ ಬಸ್ ಗ್ಲಾಸ್ ಪೀಸ್ ಪೀಸ್ ಆಗಿದೆ. ಯಲಹಂಕ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುವಾಗ ಬಸ್ ತಡೆದು ಕಲ್ಲೇಟು ತೂರಲಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂಧಿಯೊಬ್ಬರಿಗೆಜನನ ಕಲ್ಲೇಟು ಬಿದ್ದಿದೆ. ಇಂದು ಮತ್ತಷ್ಟು ಕರವೇ ಪ್ರತಿಭಟನೆ ತೀವ್ರಗೊಳ್ಳಲಿದೆ. ಇಂದು ಬೆಂಗಳೂರು ಸೇರಿ, ರಾಜ್ಯಾದ್ಯಂತ ಪ್ರತಿಭಟನೆಗೆ ಕರವೇ ನಾರಾಯಣಗೌಡ ಕರೆ ಕೊಟ್ಟಿದೆ. ಇಂದು ಸಿಎಂ, ಸಚಿವ್ರ ಮನೆ ಮುತ್ತಿಗೆಗೆ ಕರವೇ ಕಾರ್ಯಕರ್ತರು ಮುಂದಾಗಿದ್ದಾರೆ.
ಶಿರಸಿ: ನೂತನ ರಾಮಮಂದಿರ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಗುರುತು. ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲಿನಿಂದಲೂ ಬಹುಸಂಖ್ಯಾತರ ಪರವಾಗಿಲ್ಲ. ಕೇವಲ ಓಲೈಕೆ ರಾಜಕಾರಣದಲ್ಲಿ ನಿಸ್ಸೀಮವಾಗಿರುವ ಕಾಂಗ್ರೆಸ್’ಗೆ ಅಲ್ಪ ಸಂಖ್ಯಾತರ ಮತವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ. ಯಾರು, ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡಲಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪುವಿನ ಹೆಸರನ್ನು ಬಳಸಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅನಂತ್, ರಾಜಕೀಯದಲ್ಲಿ ಏಳು-ಬೀಳು ಸ್ವಾಭಾವಿಕ. ಮುಂದಿನ ದಿನದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದ್ದು, ದುರಂಹಕಾರಿ ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ದಿನ ಉಳಿಯುವುದಿಲ್ಲ. https://ainlivenews.com/sudeep-will-release-the-teaser-of-the-movie-left-hand-cause-of-accident/ ಹಿಂದೂ ವಿರೋಧಿ ಸರ್ಕಾರ…
ಬೆಂಗಳೂರು:- ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ ಕಡೆಗಣನೆ ವಿರೋಧಿಸಿ ಕರವೇ ಸಂಘಟನೆ ಇಂಗ್ಲಿಷ್ ಬೋರ್ಡ್ ಹರಿದು ಆಕ್ರೋಶ ಹೊರಹಾಕಿತ್ತು. ಪ್ರತಿಭಟನೆ ಅತಿರೇಕಕ್ಕೆ ತಿರುಗಿ ಕಲ್ಲು ತೂರಟ ಕೂಡ ನಡೆದಿತ್ತು. ಈ ಹಿನ್ನೆಲೆ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಫಲಕದಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರವೇ ನಡೆಸಿದ ಪ್ರತಿಭಟನೆ ವೇಳೆ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಒಪ್ಪಿಸಿದ್ದು ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ JMFC ಕೋರ್ಟ್ ಜಡ್ಜ್ ಕರವೇ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ನಾರಾಯಣಗೌಡ, ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರಲ್ಲ. ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇನ್ನೂ 100 ಕೇಸ್ ಹಾಕಿದರೂ ಹೋರಾಟ ಹತ್ತಿಕ್ಕಲು ಆಗಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ…
ಮೈಸೂರು: ಜಾತಿ ಗಣತಿ ವರದಿ ಸ್ವೀಕಾರಕ್ಕೆ ವೀರಶೈವ ಲಿಂಗಾಯತ ಸಮುದಾಯ ಯಾಕೆ ವಿರೋಧ ಮಾಡುತ್ತಿದಿಯೋ ಗೊತ್ತಾ ಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜಾತಿ ಗಣತಿ ವರದಿ ಬಿಡುಗಡೆ ಆಗಲಿ. ಅದರಲ್ಲಿ ಏನಿದೆ ಎಂದು ಚರ್ಚೆ ಆಗಲಿ. ವರದಿಯನ್ನು ನೋಡದೇ, ತಿಳಿಯದೇ, ಸುಮ್ಮನೇ ಆರಂಭದಲ್ಲೇ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. https://ainlivenews.com/sudeep-will-release-the-teaser-of-the-movie-left-hand-cause-of-accident/ ಇದೇ ರೀತಿ ಅಂದು ಹಾವನೂರು ಆಯೋಗದ ವರದಿಯನ್ನು ಕೂಡ ಸಾಕಷ್ಟು ವಿರೋಧ ಮಾಡಿದ್ದರು. ಆದರೆ, ಅಂದಿನ ಸಿಎಂ ದೇವರಾಜ ಅರಸು ಅವರು ಎಲ್ಲರ ವಿರೋಧದ ನಡುವೇಯೂ ಹಾವನೂರು ವರದಿಯನ್ನು ಬಿಡುಗಡೆ ಮಾಡಿದರು. ಈಗಲೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಬೇಕು. ಈ ವಿಚಾರದಲ್ಲಿ ಯಾರ ಮುಲಾಜಿಗೂ ಒಳಗಾಗಬಾರದು ಎಂದು ಅವರು ಆಗ್ರಹಿಸಿದರು. ವರದಿ ಬಿಡುಗಡೆಯಾದ ಬಳಿಕವೂ ಚರ್ಚೆ ನಡೆಯಲಿ. ಏನು ಇದೆ, ಏನಿಲ್ಲ ಎನ್ನುವುದನ್ನು ಚರ್ಚೆ ಮಾಡಲಿ. ಸುಮ್ಮನೇ ಈಗಲೇ ಇಲ್ಲಸಲ್ಲದ…
ಬೆಂಗಳೂರು:- ಬೆಂಗಳೂರಿನಲ್ಲಿ ಚಳಿ ವ್ಯಾಪಕವಾಗಿ ಹೆಚ್ಚಾಗಿದ್ದು, ಹಲವೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಸಿಲಿಕಾನ್ ಸಿಟಿ ಜನರು ಚುಮುಚುಮು ಚಳಿಗೆ ಮನೆಯಿಂದ ಆಚೆ ಬರೋದಕ್ಕೂ ಹಿಂದೇಟು ಹಾಕುವಂತಾಗಿದೆ ಬೆರಳೆಣಿಕೆ ಜನರಷ್ಟೇ ಆಫೀಸ್‌ಗೆ ತೆರಳುವವರು ರಸ್ತೆಯಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ. ಚಳಿ ಕಾರಣದಿಂದಾಗಿ ಬಿಸಿಲು ಬಿದ್ದ ಮೇಲೆಯೇ ಸಿಟಿಯಲ್ಲಿ ಜನರು ಓಡಾಡೋದಕ್ಕೆ ಮುಂದಾಗುವಂತಾಗಿದೆ ಈ ವೇಳೆ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆಯು ಇದೆ. ಚಳಿ ಕಾರಣದಿಂದಾಗಿ ಬಿಸಿಲು ಬಿದ್ದ ಮೇಲೆಯೇ ಸಿಟಿಯಲ್ಲಿ ಜನರು ಓಡಾಡೋದಕ್ಕೆ ಮುಂದಾಗುವಂತಾಗಿದೆ ಈ ವೇಳೆ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆಯು ಇದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿ ಅನುಭವ ಕಾಡುತ್ತಿದ್ದು, ಅದರಲ್ಲೂ ಮಡಿಕೇರಿ, ಸುಳ್ಯ, ,ಮೂಡಿಗೇರೆ, ಚಿಕ್ಕಮಗಳೂರು,ಬೆಂಗಳೂರು ಗ್ರಾಮಾಂತರ ಭಾಗಗಳು ಸೇರಿದಂತೆ ಚಳಿ ಚಳಿ ಎನ್ನುವಂತಾಗಿದೆ. ಥರಗುಟ್ಟುವ ಚಳಿಗೆ ಐಟಿಸಿಟಿ ಜನರು ಮರಗಟ್ಟಿ ಹೋದಂತೆ ಭಾಸವಾಗುತ್ತಿದೆ.
ಬಾಗಲಕೋಟೆ: ಬಿಜೆಪಿಯವರು (BJP) ಪಾಪ ಅವರು ಕನಸು ಕಾಣುತ್ತಿದ್ದಾರೆ. ಇವರಿಗೆ ಜನ ಯಾವತ್ತಾದರೂ ಬಹುಮತ ಕೊಟ್ಟಿದ್ದಾರಾ ಎಂದು ನಿರಾಣಿಗೆ (Murugesh Nirani) ಸಚಿವ ಆರ್ ಬಿ ತಿಮ್ಮಾಪುರ್ (RB Timmapur) ತಿರುಗೇಟು ನೀಡಿದ್ದಾರೆ. ಆರು ತಿಂಗಳಲ್ಲಿ ಸರ್ಕಾರ ಢಮಾರ್ ಎಂಬ ಮಾಜಿ ಸಚಿವ ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಡ್ಡದಾರಿ ಹಿಡಿದು ಹೋಗಬೇಕು ಎನ್ನುತ್ತಾರೆ. ಅಡ್ಡದಾರಿಯಲ್ಲಿ ಹೋದರೆ ಯಶಸ್ವಿಯಾಗುವುದಿಲ್ಲ. ಪಾಪ ಕನಸು ಕಾಣುತ್ತಿದ್ದರೆ ಕಾಣಲಿ. ಅದಕ್ಕೆ ನಾವು ಬೇಡ ಎನ್ನುವುದಿಲ್ಲ ಎಂದು ಟಾಂಗ್ ನೀಡಿದರು. ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಾನಂದ ಪಾಟೀಲರು ಯಾಕೆ ಆ ರೀತಿ ಹೇಳಿದ್ದೇನೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. https://ainlivenews.com/sudeep-will-release-the-teaser-of-the-movie-left-hand-cause-of-accident/ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು. ಬಿಜೆಪಿ ಅವರಿಗೆ ರೈತರ ಬಗ್ಗೆ ಯಾವ ಕಾಳಜಿ ಇದೆ? ಯಾವ್ಯಾವ ಮಾತುಗಳನ್ನು ತಿರುಚಿ ಮಾತಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ. 5 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ?…
ತುಮಕೂರು:- ಸಚಿವ ಮಧು ಬಂಗಾರಪ್ಪ ಇದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲಿ ದುರಂತ ತಪ್ಪಿದ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ. ಬೆಂಗಳೂರು ಕಡೆಗೆ ಸಚಿವ ಮಧು ಬಂಗಾರಪ್ಪ ಕಾರು ಹೋಗುತ್ತಿತ್ತು. ಈ ವೇಳೆ ಕಾರನ್ನು ಉಜ್ಜಿಕೊಂಡು ಲಾರಿ ಚಾಲಕ ಹೋಗಿದ್ದಾನೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಬೇರೆ ಕಾರಿನಲ್ಲಿ ಸಚಿವ ಮಧುಬಂಗಾರಪ್ಪ ಬೆಂಗಳೂರಿಗೆ ತೆರಳಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.