ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿರುವ ಘಟನೆ ನಗರದ ಸುಬ್ಬಯ್ಯ ಸರ್ಕಲ್ ಬಳಿ ಘಟನೆ. ಪುಷ್ಪ (51) ಬಿಎಂಟಿಸಿಗೆ ಬಲಿಯಾದ ಮಹಿಳೆಯಾಗಿದ್ದು ಮನೆಯಿಂದ ಬೇಕರಿಗೆ ತೆರಳುತಿದ್ದ ವೇಳೆ ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುಷ್ಪ ನಗರದ ಕಬ್ಬನ್ ಪೇಟೆ ನಿವಾಸಿಯಾಗಿದ್ದು, ಮನೆಯಿಂದ ಬೇಕರಿಗೆ ತೆರಳುತಿದ್ದ ವೇಳೆ ಘಟನೆ ನಡೆದಿದೆ. ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದಿದೆ. ಕೂಡಲೇ ಪುಷ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಬಸ್ ಚಾಲಕ ನಾಗರಾಜ್ನನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Author: AIN Author
ಚೈತ್ರಾ ಆಚಾರ್ (Chaithra Achar) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸಂಚಲನ ಮೂಡಿಸುತ್ತಲೇ ಇರುತ್ತಾರೆ. ಇದೀಗ ‘ಟೋಬಿ’ (Toby) ಹುಡುಗಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಕಪ್ಪು ಬಣ್ಣದ ಶಾರ್ಟ್ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ತೊಟ್ಟು ನಟಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಯಾ ಲುಕ್ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ಚೈತ್ರಾ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. ‘ಟೋಬಿ’ ಸುಂದರಿಯ ಮೈಮಾಟಕ್ಕೆ ಪಡ್ಡೆಹುಡುಗರು ಬಗೆ ಬಗೆಯ ಕಾಮೆಂಟ್ ಹಾಕುತ್ತಿದ್ದಾರೆ. ಇತ್ತೀಚೆಗೆ ಫೋಟೋಶೂಟ್‌ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ (Troll) ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು. ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು…
ರಾಯಚೂರು: ಕಲಿಯುಗ ಕಾಮಧೇನು ಕಲ್ಪವೃಕ್ಷ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt Mantralaya) ಕಳೆದ 26 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳ (December) 26 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಒಟ್ಟು 2,95,74,004 ರೂ. ಕಾಣಿಕೆ ಸಂಗ್ರಹವಾಗಿದೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 2, 89, 63,504 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 6,10,500 ರೂ. ನಾಣ್ಯಗಳ ಸಂಗ್ರಹವಾಗಿದೆ. 71 ಗ್ರಾಂ ಚಿನ್ನ ಹಾಗೂ 439 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು , ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಸೆಂಚೂರಿಯನ್: ಭಾರತದ (Team India) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನ ದಕ್ಷಿಣ ಆಫ್ರಿಕಾ (South Africa) ಮೇಲುಗೈ ಸಾಧಿಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 245 ರನ್‌ಗಳಿಗೆ ಆಲೌಟ್ ಆದರೆ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 256 ರನ್‌ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ. ವಿದಾಯ ಟೆಸ್ಟ್ ಸರಣಿಯಲ್ಲಿ ಡೀನ್ ಎಲ್ಗರ್ (Dean Elgar) ಶತಕ ಸಿಡಿಸಿ ದಿಗ್ಗಜರನ್ನೊಳಗೊಂಡ ಎಲೈಟ್ ಲಿಸ್ಟ್ ಸೇರಿದ್ದಾರೆ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಎಲ್ಗರ್ ಔಟಾಗದೇ 140 ರನ್ (211 ಎಸೆತ, 23 ಬೌಂಡರಿ). ಈ ಶತಕದ ಮೂಲಕ ಡೀನ್ ಎಲ್ಗರ್ ಅವರು ದಿಗ್ಗಜರಾದ ಗ್ಯಾರಿ ಕರ್ಸ್ಟನ್ ಮತ್ತು ಹರ್ಷಲ್ ಗಿಬ್ಸ್ ಬಳಿಕ ತವರಿನಲ್ಲಿ ಭಾರತದ ವಿರುದ್ಧ ಟೆಸ್ಟ್ ಶತಕ ಬಾರಿಸಿದ ಮೂರನೇ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಡೇವಿಡ್ ಬೆಡಿಂಗ್ಹ್ಯಾಮ್ 56 ರನ್ ಹೊಡೆದರೆ ಟೋನಿ ಡಿ ಜೋರ್ಜಿ 28 ರನ್…
ಬೆಂಗಳೂರು: ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಬೆಂಗಳೂರಿನ ಮಲ್ಲೇಶ್ವರಂನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಇಂದು ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮೂರು ವಾರಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಮಂತ್ರಿ ಮಾಲ್ ಆಡಳಿತ ವರ್ಗದವರಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿಲ್ಲ. ಸುಮಾರು 53 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ವಸೂಲಿಗೆ ಡಿಮ್ಯಾಂಡ್ ನೋಟೀಸ್ ನೀಡಿದ್ದರು ಸಹ ಪಾವತಿ ಮಾಡದ ಹಿನ್ನಲೆ ಕಾನೂನು ತಜ್ಞರ ಸಲಹೆ ಮೇರೆಗೆ ಮಂತ್ರಿ ಮಾಲ್ ಅನ್ನು ಸೀಝ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಾಲ್ ನ ಆಡಳಿತ ಮಂಡಳಿಯವರು ಮಾತ್ರ ನಮಗೆ ಯಾವುದೇ ನೋಟೀಸ್ ನೀಡದೆ ಮಾಲ್ ಗೆ ಬೀಗ ಹಾಕಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಮಾಲ್ ನಲ್ಲಿ ಸಮಯ ಕಳೆಯಲು ಬಂದ ನೂರಾರು ಜನ ಸಾರ್ವಜನಿಕರು ಮಾಲ್ ನ ಒಳ ಹೋಗಲಾಗದೆ ಹೊರಗಡೆಯೆ ನಿಂತು ಕಾಯುತ್ತಿದ್ದರು. ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿಬಿಎಂಪಿ ಸೌಲಭ್ಯ ಬೇಕು..ಆದ್ರೆ ತೆರಿಗೆ…
ನವದೆಹಲಿ: ತಮಿಳು ನಟ, ಡಿಎಂಡಿಕೆ ನಾಯಕ ವಿಜಯ್‍ಕಾಂತ್ (Vijayakanth) ನಿಧನಕ್ಕೆ ಇಡೀ ತಮಿಳು ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕೂಡ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಎಕ್ಸ್ ಮಾಡಿರುವ ಪ್ರಧಾನಿ, ವಿಜಯ್‍ಕಾಂತ್ ಅವರ ನಿಧನ ಅತೀವ ದುಃಖ ತಂದಿದೆ. ತಮಿಳು ಚಲನಚಿತ್ರ ಪ್ರಪಂಚದ ದಂತಕಥೆಯಾಗಿರುವ ಅವರು ತಮ್ಮ ನಟನೆಯಿಂದಲೇ ಎಲ್ಲರ ಮನಗೆದ್ದಿದ್ದರು. ರಾಜಕೀಯ ನಾಯಕರಾಗಿ ಅವರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದರು. ಇಂದು ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಆತ್ಮೀಯ ಸ್ನೇಹಿತರಾಗಿದ್ದರು. ನನ್ನೊಂದಿಗಿನ ಅವರ ಒಡನಾಟವನ್ನು ನಾನು ನೆನಪಲ್ಲಿಟ್ಟುಕೊಂಡಿದ್ದೇನೆ. ಈ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. https://twitter.com/narendramodi/status/1740228820332896483?ref_src=twsrc%5Etfw%7Ctwcamp%5Etweetembed%7Ctwterm%5E1740228820332896483%7Ctwgr%5E6066cf283040427ddfa540bd1ef94333f78a0ff7%7Ctwcon%5Es1_&ref_url=https%3A%2F%2Fpublictv.in%2Fvijayakanth-was-a-close-friend-fondly-recall-my-interactions-pm-modi%2F ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ವಿಜಯಕಾಂತ್ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಕೂಡ ಆಗಿದ್ದು, ನಂತರ ತಕ್ಷಣವೇ…
ನವದೆಹಲಿ: ದಕ್ಷಿಣದಿಂದ ಉತ್ತರಕ್ಕೆ ‘ಭಾರತ್ ಜೋಡೋ ಯಾತ್ರೆ’ ಮಾಡಿ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಈಗ ಪೂರ್ವ-ಪಶ್ಚಿಮ ಭಾಗಗಳಲ್ಲಿ ಯಾತ್ರೆ ಮಾಡಲು ಸಜ್ಜಾಗಿದ್ದಾರೆ. ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ 6,200 ಕಿಮೀ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ‘ಭಾರತ ನ್ಯಾಯ ಯಾತ್ರೆ’ಯು (Bharat Nyay Yatra) ಲೋಕಸಭೆ ಚುನಾವಣೆಗೆ ಮುನ್ನ ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಯಾತ್ರೆ ಕೈಗೊಳ್ಳಲಿದ್ದಾರೆ. ಯಾತ್ರೆಯಲ್ಲಿ 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಸುತ್ತಲಿದ್ದಾರೆ ಎಂದು ಕಾಂಗ್ರಸ್ ಹೇಳಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪಾದಯಾತ್ರೆ ನಡೆಯಲಿದೆ. https://ainlivenews.com/brain-dysfunctional-parents-of-sons-organ-donation/ ರಾಹುಲ್ ಗಾಂಧಿಯವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ (Bharat Jodo Yatra) ಕೈಗೊಂಡಿದ್ದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿರೋಧ ಪಕ್ಷದ…
ಬೆಂಗಳೂರು: ಹೊಸ ವರ್ಷವನ್ನು ಹರ್ಷದಿಂದ ಬರ ಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಕೊರೋನ ಅಡ್ಡಲಾಗಿ ನಿಂತಿದೆ. ಈಗಾಗಲೇ ಜೆಎನ್.1 ಉಪತಳಿ ಹಾವಳಿ ಇಡುತ್ತಿದ್ದು ಆರೋಗ್ಯ ಇಲಾಖೆ ಕೂಡ ಕೊರೋನಾವನ್ನು ಕಟ್ಟಿಹಾಕಲು ಕಸರತ್ತು ನಡೆಸುತ್ತಿದೆ. ಕರ್ನಾಟಕದಲ್ಲಿ ಏಕಾಏಕಿಯಾಗಿ ಉಪತಳಿಯ ಹಾವಳಿ ಸ್ಫೋಟವಾಗಿದೆ.ಆದರೆ ಅದೃಷ್ಟ ವಶಾತ್ ಆಸ್ಪತ್ರೆಯ ದಾಖಲಾತಿಯಲ್ಲಿ ಏರಿಕೆಯಾಗದೆ, ಬಹುತೇಕ ಸೋಂಕಿತರು ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರೋರಿಗೆ ಬಿಬಿಎಂಪಿ ಆರೋಗ್ಯ ಇಲಾಖೆ ಔಷಧದ ಕಿಟ್ ಗಳನ್ನು ಅಗತ್ಯ ಬಿದ್ದಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಪ್ಯಾರಸೆಟಮಲ್,ಆಂಟಿಬಯೋಟಿಕ್, ಜಿಂಕ್ ಮಾತ್ರೆ,ಮಾಸ್ಕ್ ಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಜೊತೆ ಟೆಲಿ ಕನ್ಸಲ್ಟಿಂಗ್ ಮೂಲಕ ನಿರಂತರ ಸಂಪರ್ಕವನ್ನು ಮಾಡಲಾಗುತ್ತಿದೆ. ತುರ್ತು ಔಷಧ ಅಗತ್ಯ ಬಿದ್ದರೆ ವೈದ್ಯರನ್ನು ಮನೆಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ಈಗ ಹೊಸ ವರ್ಷದ ಆಚರಣೆಗೆ ಸದ್ಯ ಯಾವುದೇ ನಿಯಮಾವಳಿ ನೀಡಿಲ್ಲವಾದರೂ ಕೊನೆಕ್ಷಣದಲ್ಲಿ ಯಾವುದೇ ಬದಲಾವಣೆ ಆದರೂ ಆಶ್ಚರ್ಯ ಇಲ್ಲ.
ಬೆಂಗಳೂರು: ಕರವೇ ನಾರಾಯಣಗೌಡರು ಸೇರಿ 29 ಮಂದಿಗೆ ಕೋರ್ಟ್ ಜನವರಿ 10ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕನ್ನಡ ಬೋರ್ಡ್ ಅಭಿಯಾನದ ವೇಳೆ ಚಿಕ್ಕಜಾಲ ಪೊಲೀಸರು ಅರೆಸ್ಟ್ ಮಾಡಿ, FIR ದಾಖಲು ಮಾಡಿದ್ದಾರೆ. ಕರವೇ ನಾರಾಯಣಗೌಡರು ಸೇರಿ ಹಲವರ ಮೇಲೆ FIR ದಾಖಲಾಗಿದೆ. ಇಂದು ನಸುಕಿನ ಜಾವ ಜಡ್ಜ್ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ನಾರಾಯಣಗೌಡ ಸೇರಿ 29 ಮಂದಿಯನ್ನು ಹಾಜರುಪಡಿಸಿದ್ದರು. ದೇವನಹಳ್ಳಿ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಎಲ್ಲರನ್ನೂ ಶಿಫ್ಟ್ ಮಾಡಿದ್ದಾರೆ. ನಾರಾಯಣಗೌಡ ಸೇರಿದಂತೆ 29 ಮಂದಿಯೂ ಪರಪ್ಪನ ಅಗ್ರಹಾರ ಜೈಲ್ ಗೆ ಶಿಫ್ಟ್ ಮಾಡಲಾಗಿದೆ. ಕರವೇ ಅಧ್ಯಕ್ಷ ನಾರಾಯಣಗೌಡರು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇದ್ದರು. ಕರವೇ ನಿನ್ನೆ ಕನ್ನಡ ಬೋರ್ಡ್ಗಾಗಿ ಬೃಹತ್ ಹೋರಾಟ ನಡೆಸಿತ್ತು. ಇನ್ನೂ ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಮಾತನಾಡಿ ಕನ್ನಡಕ್ಕಾಗಿ ಹೋರಾಡಿದ ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡ್ತೀರ, ಮುಖ್ಯಮಂತ್ರಿಗಳೇ ನಿಮ್ಮ ಕನ್ನಡ ಪ್ರೇಮ ಕಂಡು ಬೆಂಬಲಿಸಿದ್ದೆವು. ಇವತ್ತು…
ಬೆಂಗಳೂರು: ಜನ-ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರ್‌ಗಳ ಖಾತೆಯಲ್ಲಿ ಬರ ನಿರ್ವಹಣೆಗೆ ಅಗತ್ಯವಾದ ಹಣ ಇದೆ. ಜನ-ಜಾನವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದರು. https://ainlivenews.com/corona-virus-concern-in-the-state-increased-cold-cold-cough-in-children/ ಮುಂದಿನ ಹಲವು ವಾರಗಳಿಗೆ ಆಗುವಷ್ಟು ಮೇವು ಸಂಗ್ರಹ ಇದೆ. ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿ ಬಗ್ಗೆ ಆದ್ಯತೆ ನೀಡಬೇಕು. ನರೇಗಾ ಉದ್ಯೋಗ 100 ರಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಕೇಂದ್ರದಿಂದ ಒಪ್ಪಿಗೆ ಸಿಕ್ಕಿಲ್ಲ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಆಗುವವರೆಗೂ ರೈತರಿಗೆ 2 ಸಾವಿರ ತಕ್ಷಣಕ್ಕೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೋಲಾರದ ಜನ ನನ್ನ ಬಳಿಗೆ ಬಂದರೆ ಇಲ್ಲಿ ಜಿಲ್ಲಾಡಳಿತ ವಿಫಲ ಎಂದೇ ಪರಿಗಣಿಸಬೇಕಾಗುತ್ತದೆ. ಈ…