Author: AIN Author

ಶಿವಮೊಗ್ಗ: ದೇವರ ಹಾಗೂ ತಂದೆತಾಯಿಗಳ ಆಶೀರ್ವಾದದಿಂದ ನಾನು ಆರಾಮಾಗಿದ್ದೇನೆ ಎಂದು ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ‌ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಕಾರಿನ ಚಾಲಕ ಸೇರಿದಂತೆ ಎಲ್ಲಾ ಕ್ಷೇಮವಾಗಿದ್ದು,ಯಾರೂ ಸಹ ಆತಂಕ‌, https://ainlivenews.com/sabarimala-ayyappa-swami-temple-earned-204-crore-rupees-in-39-days/ ಗಾಬರಿಯಾಗುವ ಅವಶ್ಯಕತೆಯಿಲ್ಲ. ನನಗಾಗಿ ಹಾರೈಸಿದ ಶುಭಕೋರಿದ ಪ್ರಾರ್ಥಿಸಿದ ನನ್ನೆಲ್ಲ ಮತಬಾಂಧ ವರಿಗೂ ಹಿತೈಷಿಗಳಿಗೂ ಜಿಲ್ಲಾ ಹಾಗೂ ಮತಕ್ಷೇತ್ರದ ಜನತೆಗೂ,ಅಭಿಮಾನಿಗಳಿಗೂ,ಪಕ್ಷದ ಎಲ್ಲಾ ಕಾರ್ಯಕರ್ತ ಮುಖಂಡರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಸಚಿವರು ಸ್ಪಷ್ಟಪಡಿಸಿದ್ದಾರೆ.

Read More

ನವದೆಹಲಿ: ಅಗ್ನಿಪಥ್ (Agnipath Scheme) ನೇಮಕಾತಿ ಯೋಜನೆಯನ್ನು ಪರಿಚಯಿಸುವ ಮೂಲಕ ಕೇಂದ್ರ ಸರ್ಕಾರವು ಅಸಂಖ್ಯಾತ ಯುವಕರ ಕನಸುಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಯುವಕರ ಗುಂಪಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಯುವಕರು ಬಿಹಾರದ ಚಂಪಾರಣ್‌ನಿಂದ ಬಂದವರು ಎಂದು ಹೇಳಿದ್ದಾರೆ. ನಿರುದ್ಯೋಗದ ಸಮಸ್ಯೆಯನ್ನು ‘ಬೀದಿಗಳಿಂದ ಸಂಸತ್ತಿನವರೆಗೆ’ ಎತ್ತುವವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ತಾತ್ಕಾಲಿಕ ನೇಮಕಾತಿಗೆ ಅಗ್ನಿವೀರ್ ಯೋಜನೆ ಜಾರಿಗೊಳಿಸಿ, ಸೇನೆ ಮತ್ತು ಭಾರತೀಯ ವಾಯುಪಡೆಯ ಶಾಶ್ವತ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ಅಸಂಖ್ಯಾತ ಯುವಕರ ಕನಸನ್ನು ನುಚ್ಚುನೂರು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ‘ಸತ್ಯಾಗ್ರಹದ ನಾಡು’ ಚಂಪಾರಣ್‌ನಿಂದ ದೆಹಲಿಗೆ ಬರಲು 1,100 ಕಿಲೋಮೀಟರ್‌ಗಳಷ್ಟು ಪಾದಯಾತ್ರೆ ಮಾಡಿರುವ ಯುವಕರ ಹೋರಾಟವನ್ನು ಮಾಧ್ಯಮಗಳು ಪ್ರಸಾರ ಮಾಡದಿರುವುದು ಬೇಸರದ ಸಂಗತಿಯಾಗಿದೆ. ಉದ್ಯೋಗದ ಸಮಸ್ಯೆಯನ್ನು ಬೀದಿಗಳಿಂದ ಸಂಸತ್ತಿನ ವರೆಗೆ ಪ್ರಶ್ನಿಸುವ ಯುವಕರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.  

Read More

ಬೆಂಗಳೂರು: “ನಾವೆಲ್ಲರೂ ಕನ್ನಡ ಉಳಿಸಬೇಕು. ಕನ್ನಡಪರ ಹೋರಾಟಗಾರರ ಮೇಲೆ ನಮಗೆ ಗೌರವವಿದೆ. ಹಾಗಂತ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸದಾಶಿವನಗರ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಕನ್ನಡ ನಾಮಫಲಕ ಕುರಿತ ಹೋರಾಟದ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದು ಹೀಗೆ: “ಕನ್ನಡ ಉಳಿಸಿ, ಬೆಳೆಸುವ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಹೋರಾಟದ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ. ಇದರಿಂದ ಕರ್ನಾಟಕದ ಗೌರವ, ಘನತೆಗೆ ಧಕ್ಕೆಯಾಗುತ್ತದೆ. ಕಾನೂನು ಪಾಲನೆ ಎಲ್ಲರ ಕರ್ತವ್ಯ. ನೀವು ಹೋರಾಟ ಮಾಡುವುದಾದರೆ ಮಾಡಿ, 60% ನಾಮಫಲಕ ಹಾಕಬೇಕು ಎನ್ನುವುದನ್ನು ಕೇಳಲು ಒಂದು ಇತಿಮಿತಿ ಇದೆ. ಈ ಹಿಂದೆ ಯಾರೋ ಒಬ್ಬರು ದೂರು ನೀಡಿದರು ಎಂದು ನಾರಾಯಣಗೌಡರ ಮೇಲೆ ಕೇಸ್ ದಾಖಲಾದಾಗ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ…

Read More

ಬೆಂಗಳೂರು: ಹಿಂದುತ್ವ ಬೇರೆ, ಹಿಂದೂ‌ ಬೇರೆ, ನಾನೂ ಊರಲ್ಲಿ ಧನುರ್ಮಾಸದ ಸಂದರ್ಭದಲ್ಲಿ ಭಜನೆಗೆ ಹೋಗ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಾಫ್ಟ್ ಹಿಂದುತ್ವ ಹಾರ್ಡ್ ಹಿಂದುತ್ವ ಎಂದರೇನು? ಸಾಫ್ಟ್ ಹಾಗೂ ಹಾರ್ಡ್ ಹಿಂದುತ್ವ ಇಲ್ಲ. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ನಾವೂ ಶ್ರೀರಾಮ ಪೂಜೆ ಮಾಡಿಲ್ವಾ? ಇವರೊಬ್ಬರೇನಾ ಮಾಡುವುದು? ಅವರು ಮಾತ್ರ ಹಿಂದೂಗಳಾ ನಾವಲ್ಲವಾ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಆಧುನಿಕ ಭಾರತಕ್ಕೆ ನೆಹರೂ ಅಡಿಪಾಯ ಕಾರಣ. ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಅಣೆಕಟ್ಟು ಕಟ್ಟಿಲ್ಲ. ಇರುವ ಅಣೆಕಟ್ಟು ಕಾಂಗ್ರೆಸ್ ಅವಧಿಯಲ್ಲಿ ಕಟ್ಟಿದ್ದು. ಹಾಗಾದರೆ ನೀವು ಏನು ಮಾಡಿದ್ದೀರಿ? ಎಂದು ಬಿಜೆಪಿಗೆ ಪ್ರಶ್ನಿಸಿದರು. https://ainlivenews.com/corona-virus-concern-in-the-state-increased-cold-cold-cough-in-children/ ಡಿಜಿಟಲ್ ಇಂಡಿಯಾಗೆ ಅಡಿಪಾಯ ಹಾಕಿದ್ದು ರಾಜೀವ್ ಗಾಂಧಿ. ಬಿಜೆಪಿ ನಾಯಕರು ಸುಳ್ಳನ್ನು ತಲೆಗೆ ಹೊಡೆದ ಹಾಗೆ ಹೇಳುತ್ತಾರೆ‌. ಅವರ ಸುಳ್ಳು ಬಯಲು ಮಾಡುವ ಕೆಲಸ ಮಾಡಬೇಕಿದೆ ಎಂದು…

Read More

ಧಾರವಾಡ: ಪ್ರತಿಯೊಂದು ಚುನಾವಣೆಯಲ್ಲಿ ಮತದಾನ ಪ್ರಮಾಣ ಕ್ಷಿಣಿಸುವುದು ಆಘಾತಕಾರಿ ಸಂಗತಿ. ಪ್ರಜ್ಞಾವಂತರು ತಪ್ಪದೇ, ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರೇಖಾ ಡೊಳ್ಳಿನವರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಚುನಾವಣಾ ಸಾಕ್ಷರತಾ ಕ್ಲಬ್, ಅಂಜುಮನ್ ಮಹಾವಿದ್ಯಾಲಯ, ಎನ್ನೆಸ್ಸೆಸ್ ಸಹಯೋಗದಲ್ಲಿ ತಾಲೂಕಿನ ಮರೇವಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸರ್ವರೂ ಹಕ್ಕು ಚಲಾಯಿಸಬೇಕು. ಕೆಲವರು ಮತದಾನ ಮಾಡದಿರಲು ಕಾರಣ ಇರಬಹುದು. ಅಂತವರಿಗೆ ಸರ್ಕಾರ ನೋಟಾ ಅವಕಾಶ ಕಲ್ಪಿಸಿದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು. ಮತದಾನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕಡ್ಡಾಯ ಮಾತದಾನ ಮಾಡಬೇಕು. ಮುಖ್ಯವಾಗಿ 18 ವರ್ಷ ತುಂಬಿದ ಯುವಕ ಮತ್ತು ಯುವತಿಯರು ಪೋರ್ಟ್ಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಂ.ಮಕಾAದಾರ ಮಾತನಾಡಿ, ಸರ್ವರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಎಂದು…

Read More

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ವತಿಯಿಂದ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಅವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷದ ನೂತನ ಉಪನಾಯಕರಾಗಿ ಆಯ್ಕೆಯಾಗೊಂಡ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ್ ಅವರ ಗೃಹ ಕಛೇರಿಯಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಿ ಶುಭಾಶಯ ಕೋರಿದೇವು. ಈ ವೇಳೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಚಂದ್ರಶೇಖರ ಗೋಕಾಕ್, ಡಾ. ಕ್ರಾಂತಿಕಿರಣ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಮಂಜುನಾಥ್ ಚಿಂತಗಿಂಜಾಲ್, https://ainlivenews.com/sabarimala-ayyappa-swami-temple-earned-204-crore-rupees-in-39-days/ ಸಂತೋಷ್ ಅರಕೇರಿ, ರಾಜು ಕೊರ್ಯಾಣಮಠ, ದೀಪಕ್ ಲಾಳಗೆ, ರಾಜು ಜರ್ತಾರಘರ್, ಮಂಜುನಾಥ್ ಕಾಟಕರ್, ಡಾ. ರವೀಂದ್ರ ವೈ, ಪ್ರತಿಭಾ ಪವಾರ್, ಮಹೇಶ ಲಕಾಜಿನವರ, ಸುಭಾಷ ಅಥಣಿ, ಗೋಪಾಲ್ ಕೊಲ್ಲೂರ್, ಗಣೇಶ ಅಮರಾವತಿ, ನೀಲಕಂಠ ತಡಸದಮಠ, ಪೂಜಾ ರಾಯ್ಕರ್, ನಾಗರತ್ನ ಬಳ್ಳಾರಿ, ಮಾಧ್ಯಮ ಸಂಚಾಲಕ ಲಕ್ಷ್ಮೀಕಾಂತ್ ಘೋಡಕೆ, ಬಿಜೆಪಿ ಪೂರ್ವ ಕ್ಷೇತ್ರದ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಹಾಗೂ ಅನೇಕರು ಉಪಸ್ಥಿತರಿದ್ದರು.

Read More

ಬಳ್ಳಾರಿ: ಇಂದು ಬಳ್ಳಾರಿ ಯಲ್ಲಿ ಎಐಡಿಎಸ್ಓ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ ಅವರು ಮಾತನಾಡಿ ಈಗಾಗಲೇ ತಮ್ಮ ಸೂಕ್ತ ಗಮನದಲ್ಲಿರುವಂತೆ, ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ತರಗತಿಗಳನ್ನು ಬಹಿಷ್ಕರಿಸಿ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ. ಒಂದೆಡೆ ತರಗತಿಗಳು ನಡೆಯುತ್ತಿಲ್ಲ ಮತ್ತು ಇನ್ನೊಂದೆಡೆ ಸೆಮಿಸ್ಟರ್ ಪರೀಕ್ಷೆಯ ದಿನಾಂಕಗಳು ಸಮೀಪಿಸುತ್ತಿವೆ. ಶೈಕ್ಷಣಿಕವಾಗಿ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳನ್ನು ಈ ಪರಿಸ್ಥಿತಿಯು ಸಾಕಷ್ಟು ಆತಂಕಕ್ಕೆ ತಳ್ಳಿದೆ. ಘನ ರಾಜ್ಯ ಸರ್ಕಾರವು ಕೂಡಲೇ ಈ ಕುರಿತು ಗಮನಹರಿಸಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಶೀಲಿಸಿ ಅವರಿಗೆ ನ್ಯಾಯ ಒದಗಿಸಬೇಕು ಮತ್ತು ಕಾಲೇಜುಗಳಲ್ಲಿ ಪಾಠಗಳು…

Read More

ಕಲಬುರಗಿ: ನಿರ್ಮಾಣ ಹಂತದಲ್ಲಿದ್ದ ಜಯದೇವ ಆಸ್ಪತ್ರೆಯ ಕಂಪೌಂಡ್ ಕುಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಮುಖ್ಯರಸ್ತೆಯಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಕಾಂಪೌಂಡ್ ಕಾರ್ಯ ಭರದಿಂದ ಸಾಗಿದ್ದು ಇನ್ನೇನು ಮುಗಿಯಲು ಬಂದಿತ್ತು..ಆದ್ರೆ ಏಕಾಎಕಿ 150 ಅಡಿ ಉದ್ದದ ಕಬ್ಬಿಣ ಹಾಗು ಸಿಮೆಂಟ್ ಕಂಬಗಳಿಂದ ನಿರ್ಮಿಸಿದ್ದ ಕಂಪೌಂಡ್ ಧರೆಗುರುಳಿದೆ.

Read More

ಕಲಬುರಗಿ: ಬರೋಬ್ಬರಿ 23 ವರ್ಷಗಳ ಬಳಿಕ ಕಲಬುರಗಿ ಯುವಕನೊಬ್ಬ ರಣಜಿಗೆ ಆಯ್ಕೆಯಾಗಿದ್ದಾನೆ. ಗುಲಾಬ್ ವಾಡಿಯ ಸ್ಲಂ ಬಡಾವಣೆ ನಿವಾಸಿ ಶಶಿಕುಮಾರ್ ರಣಜಿಗೆ ಆಯ್ಕೆಯಾದ ಕ್ರೀಡಾಪಟು. ರೈಟ್ ಆಮ್೯ ಆಫ್ ಸ್ಪಿನ್ನರ್ ಆಗಿರೋ ಶಶಿಕುಮಾರ್ ಕರ್ನಾಟಕ ತಂಡ ಪ್ರತಿನಿಧಿಸಲಿದ್ದಾನೆ. ಕಲಬುರಗಿ ಜಿಲ್ಲೆಯಿಂದ ಈ ಹಿಂದೆ 1998 ರಲ್ಲಿ ರಘುತ್ತಮ ಹಾಗೂ 2000 ರಲ್ಲಿ ವಿಜಯ್ ರಣಜಿಗೆ ಆಯ್ಕೆಯಾಗಿದ್ರು.ಹೀಗಾಗಿ ಕಲಬುರಗಿ ಜಿಲ್ಲೆಯಿಂದ ರಣಜಿಗೆ ಆಯ್ಕೆಯಾದ 3ನೇ ಆಟಗಾರ ಎಂಬ ಹೆಗ್ಗಳಿಕೆ ಶಶಿಕುಮಾರ್ ‌ಪಾತ್ರರಾಗಿದ್ದಾರೆ. ಈ ವಿಚಾರದ ಬಗ್ಗೆ ಶಶಿಕುಮಾರ್ ಸ್ನೇಹಿತರು ಹಾಗು ಹಿತೈಷಿಗಳು ಸಂತಸಗೊಂಡಿದ್ದಾರೆ.

Read More

ಧಾರವಾಡ: ವ್ಯಾಟ್ಸ್ ಆ್ಯಫ್‌ನಲ್ಲಿ ಕಮ್ಯೂನಿಟಿಯಲ್ಲಿ ಹೋಲ್ ಸೇಲ್ ಬಟ್ಟೆ ಪೂರೈಸುವುದಾಗಿ ನಂಬಿಸಿ ರಿಟೇಲ್ ಬಟ್ಟೆ ವ್ಯಾಪಾರಿಯೊಬ್ಬರಿಗೆ ಮುಂಬೈ ಮೂಲದ ವ್ಯಕ್ತಿಯೊಬ್ಬ‌ ಧಾರವಾಡ ವ್ಯಾಪಾರಿಗೆ ಬರೊಬ್ಬರಿ 1ಲಕ್ಷ16 ಸಾವಿರ ರೂಪಾಯಿ ಮಕ್ಮಲ್ ಟೋಪಿ ಹಾಕಿರುವ ಘಟನೆ ನಡೆದಿದೆ.‌ ಧಾರವಾಡ ನಿವಾಸಿ ಮಹಾಂತೇಶ ಪಟ್ಟಣ ಶೆಟ್ಟಿ ಎಂಬ ಬಟ್ಟೆ ವ್ಯಾಪಾರಿಯೇ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ನಗರದ ಸಂಗಮ ವೃತ್ತದಲ್ಲಿ ಬಟ್ಟೆ ಅಂಗಡಿ ಹೊಂದಿರುವ ಮಹಾಂತೇಶ ಅವರಿಗೆ ಮುಂಬೈ ಮೂಲದ ವ್ಯಕ್ತಿ ಪರಿಚಯ ವಾಗಿದ್ದ. ತಾನು ಹೋಲ್ ಸೇಲ್ ಬಟ್ಟೆ ಪೂರೈಸುವುದಾಗಿ ಮನೀಶ ಎಂಬ ಹೆಸರಿನಿಂದ ಪರಿಚಯವಾಗಿ, ಹೋಲ್ ಸೇಲ್ ವ್ಯಾಪಾರಿಯಾಗಿದ್ದೇನೆ ಎಂದು ಮಹಾಂತೇಶನ ನಂಬಿಸಿದ್ದಾನೆ.‌ ನಂಬಿಕ ಬಂದ ಬಳಿಕ ಡಿ. 9 ತಾರೀಖಿನಂದ 20 ನೇ ತಾರೀಖಿನವರೆಗೆ ಹಂತ ಹಂತವಾಗಿ 1ಲಕ್ಷ 16 ಸಾವಿರ 8 ನೂರು ರೂಪಾಯಿ ಹಣವನ್ನು ಪೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ. ಬಳಿಕ ಒಂದೆರಡು ದಿನದಲ್ಲಿ ಹೋಲ್ ಸೇಲ್ ಬಟ್ಟೆ ಬರುತ್ತೆ ಅಂದುಕೊಂಡಿದ್ದ ಮಾಹಾಂತೇಶಗೆ ಹಣ ಹಾಕಿಸಿಕೊಂಡ ವ್ಯಕ್ತಿ ಮೊಬೈಲ್…

Read More