Author: AIN Author

ಇಸ್ಲಾಮಾಬಾದ್:- ಪಾಕ್ ನಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಗುರುವಾರ ದೇಶದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ ಕಾಕರ್ ಅವರು ಪ್ಯಾಲೆಸ್ಟೀನಿಯಾದವರಿಗೆ ಒಗ್ಗಟ್ಟನ್ನು ತೋರಿಸಲು ಮತ್ತು ಹೊಸ ವರ್ಷದಲ್ಲಿ ಸಮಚಿತ್ತತೆ ಮತ್ತು ನಮ್ರತೆಯನ್ನು ಪ್ರದರ್ಶಿಸಲು ದೇಶದ ಜನರಲ್ಲಿ ಒತ್ತಾಯಿಸಿದ್ದಾರೆ. “ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಪ್ಯಾಲೆಸ್ತೀನ್ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು, ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತದೆ” ಎಂದು ಅವರು ಹೇಳಿದರು. ಅಕ್ಟೋಬರ್ 7 ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳು ಸೇರಿದಂತೆ ಇಸ್ರೇಲ್ ಪಡೆಯ ಹಿಂಸಾಚಾರದಲ್ಲಿ ಇದುವರೆಗೆ 21,000 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. ಇಡೀ ಪಾಕಿಸ್ತಾನಿ ರಾಷ್ಟ್ರ ಮತ್ತು ಮುಸ್ಲಿಂ ಜಗತ್ತು ಗಾಜಾ ಮತ್ತು ಪಶ್ಚಿಮ…

Read More

ವಿಜಯಪುರ: ಸಚಿವ ಎಂ.ಬಿ.ಪಾಟೀಲ ನಾಲ್ಕನೇ ಟಿಪ್ಪು ಸುಲ್ತಾನ್ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರನೇ ಟಿಪ್ಪು ಎಂಬ ಸಚಿವ ಎಂ.ಬಿ.ಪಾಟೀಲರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, https://ainlivenews.com/sabarimala-ayyappa-swami-temple-earned-204-crore-rupees-in-39-days/ ಇದೇ ರೀತಿ ಸಮವಸ್ತ್ರ ಇರಬೇಕು ಎಂದು ಈ ಹಿಂದೆ ಬಿಜೆಪಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಇಡಿ ದೇಶದಲ್ಲಿ ಎಲ್ಲಿಯೂ ಈ ವಿಷಯ ಇಲ್ಲ, ಕರ್ನಾಟಕದಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಇದು ಇವರೇ ತೆಗೆದಿದ್ದು, ಈ ವಿಚಾರ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ನಿಶ್ಚಿತವಾಗಿ ಮುಳುವಾಗಲಿದೆ. ಈ ರೀತಿ ಕೋಮು ಆಧಾರದ ಮೇಲೆ ಮಕ್ಕಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗದ ಶಾಲಾ ಮಕ್ಕಳಿಗೆ ಪ್ರವಾಸಕ್ಕೆ ಕಳಿಸುತ್ತೀರಿ.  ಬಡವರು ಸೇರಿದಂತೆ ಎಲ್ಲಾ ಮಕ್ಕಳನ್ನೂ ಕಳಿಸಬೇಕು. ಆಗ ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ಪ್ರತ್ಯೇಕವಾಗಿ ಕಳಿಸುವುದರಿಂದ…

Read More

ಬೆಂಗಳೂರು:- ವಿಕಲಚೇತನರಿಗೆ ಬಿಎಂಟಿಸಿ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಸಾರಿಗೆ ಇಲಾಖೆ ನಿರ್ದೇಶನದಂತೆ 2024 ರ ಅವದಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡಲು ಸಜ್ಜಾಗಿದೆ. ಒಂದು ವರ್ಷಕ್ಕೆ 660 ರೂ ದರವನ್ನು ಬಿಎಂಟಿಸಿ ನಿಗದಿ ಮಾಡಿದೆ. ಡಿಸೆಂಬರ್ 29 ರಿಂದ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಗತ್ಯ ಇರುವ ನಿಲ್ದಾಣ ಆಯ್ಕೆ ಮೂಲಕ ಸೇವಾಸಿಂಧು ಪೂರ್ಟಲ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ ಒಂದು ವರ್ಷವಿಡಿ ವಿಲಕನಚೇತನರಿಗೆ ರಿಯಾಯಿತಿ ದರದ ಪಾಸ್ BMTC ನೀಡಲಿದೆ. ನೂತನ ಪಾಸ್ ಅರ್ಜಿ ಸಲ್ಲಿಸಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಪಾಸ್ ನವೀಕರಣಕ್ಕೆ ಅರ್ಜಿ ಸಲ್ಲಿಸದರೆ ನಗರದ 12 ಕಡೆ ಪಾಸ್ ಲಭ್ಯವಾಗಿದೆ. ನೂತನ ಪಾಸ್ & ನವೀಕರಣ ಪಾಸ್ ಎಲ್ಲೆಲ್ಲಿ ಸಿಗಲಿದೆ:- ನೂತನ ಪಾಸ್ ಕೆಂಪೇಗೌಡ ಬಸ್ ನಿಲ್ದಾಣ ಲಭ್ಯ ವಿಕಲಚೇತನರಿಗೆ ನವೀಕರಣ ಪಾಸ್ ಸಿಗುವ ಸ್ಥಳ ಕೆ.ಆರ್ ಮಾರ್ಕೆಟ್ ಟಿಟಿಎಂಸಿ ಬನಶಂಕರಿ ಟಿಟಿಎಂಸಿ…

Read More

ಹೊನ್ನಾಳಿ : ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ಹಿಂಪಡೆವ ಹೇಳಿಕೆ ನೀಡಿ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡುಕೊಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಸಮವಸ್ತ್ರ ಧರಿಸಬೇಕೆಂದು ಆದೇಶ ಹೊರಡಿಸಿತ್ತು, ಈ ಆದೇಶದ ವಿರುದ್ದವಾಗಿ ಕೆಲವರು ಕೋರ್ಟಿಗೆ ಹೋದಾಗಲೂ ಸರ್ಕಾರದ ಆದೇಶ ಎತ್ತಿ ಹಿಡಿಯಲಾಯಿತು.  ಮತ್ತೆ ಕೆಲವರು ಸುಪ್ರಿಂಕೋರ್ಟಿಗೆ ಹೋಗಿದ್ದಾರೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿ ಹಿಜಾಬ್ ನಿಷೇಧ ಹಿಂತೆಗೆತ ಮಾತನಾಡಿರುವುದು ನ್ಯಾಯಾಂಗ ಆದೇಶ ಉಲ್ಲಂಘನೆ ಅಲ್ಲವೆ ಎಂದು ಪ್ರಶ್ನಿಸಿದರು. https://ainlivenews.com/sabarimala-ayyappa-swami-temple-earned-204-crore-rupees-in-39-days/ ಅವರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗಿ ಎಂದರೆ ನಾವೂ ಸಹ ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಬೇಕಾಗುತ್ತದೆ. ಆಗ ಕೋಮು ಸಂಘರ್ಷಕ್ಕೆ ದಾರಿಯಾಗಬಹುದು ಎಂದು ಎಚ್ಚರಿಸಿದರು. ಮೌಲ್ವಿಗಳ ಸಭೆಗೆ ಹೋಗುತ್ತಾರೆ. ಅಲ್ಲಿ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ,…

Read More

ದೊಡ್ಡಬಳ್ಳಾಪುರ:- ಇಲ್ಲಿನ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಕಳ್ಳರು ಕರಾಮತ್ತು ತೋರಿದ್ದಾರೆ. ಒಂದೆಡೆ ಹತ್ತು ದಿನಗಳ ರಾಸುಗಳ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ರೈತರು ಬಂದಿದ್ದಾರೆ. ಮತ್ತೊಂದೆಡೆ ಜನಜಂಗುಳಿಯಲ್ಲಿ ದುಡ್ಡು ಹೆಗರಿಸುವುದನ್ನು ಕಳ್ಳರು ಕಸುಬು ಮಾಡಿಕೊಂಡಿದ್ದಾರೆ. ಹೌದು, ರೈತನೋರ್ವನಿಂದ ಎಂಟು ಸಾವಿರ ಹಣ ಕದ್ದು ಪರಾರಿ ಯಾಗಲು 3 ಜನ ಕಳ್ಳರು ಯತ್ನಿಸಿದ್ದಾರೆ. ಕೂಡಲೇ ರೈತನ ಚಿರಟಾದಿಂದ ಎಚೆತ್ತಾ ಅಲ್ಲಿನ ಸ್ಥಳೀಯ ಜನ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಇದರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದು ಇನ್ನಿಬ್ಬರು ಪರಾರಿ ಆಗಿದ್ದಾರೆ. ಜಾತ್ರೆಗೆ ಬಂದಿದ್ದ ರೈತರಿಂದ ಸಿಕ್ಕಿಬಿದ್ದ ಓರ್ವ ಕಳ್ಳನಿಗೆ ಸಾರ್ವಜನಿಕರು ಹಿಗ್ಗಮುಗ್ಗ ಥಳಿಸಿದ್ದಾರೆ. ಸಿಕ್ಕಿಬಿದ್ದಾ ಕಳ್ಳ ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರ ಅತಿಥಿ ಆಗಿದ್ದಾನೆ.

Read More

ಮುದ್ದೇಬಿಹಾಳ: ತಂದೆ ಮಾಡಿದ ಸಾಲ ಮಕ್ಕಳು ತೀರಿಸುವ ಹಾಗೆ ಹಿಂದಿನ ಬಿಜೆಪಿ ಸರ್ಕಾರ ಮಾಡಿಟ್ಟ ಸಾಲವನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೀರಿಸುವ ಪರಿಸ್ಥಿತಿ ಬಂದಿದೆ. ಸರ್ಕಾರದ ಯಾವುದೇ ಇಲಾಖೆಯನ್ನು ಬಿಡದೇ ಖಜಾನೆಯನ್ನೇ ಖಾಲಿ ಮಾಡಿ ಕೊಳ್ಳೆ ಹೊಡೆದು ಹೋಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಆರೋಪಿಸಿದರು. ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ಗೃಹ ಕಚೇರಿಯಲ್ಲಿ ಪಕ್ಷದ ತಾಲೂಕು ಎಸ್ಸಿ, ಎಸ್ಟಿ ಘಟಕದ ನೂತನ ಅಧ್ಯಕ್ಷ ಶ್ರೀಕಾಂತ ಚಲವಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಜೆ.ವಿಜಯಕರಗೆ ಸನ್ಮಾನಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಬಡವರ, ದೀನ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ, ರೈತರ ಪರ ಕಾಳಜಿ ಇರುವ ಪಕ್ಷ. https://ainlivenews.com/sabarimala-ayyappa-swami-temple-earned-204-crore-rupees-in-39-days/ ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಇದನ್ನು ಸಹಿಸದ ಬಿಜೆಪಿಯವರು ಜನರಿಗೆ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಕಾರ್ಯ…

Read More

ಬೆಂಗಳೂರು:- ವಿದ್ಯುತ್ ತಂತಿ ತಗುಲಿ ಬಾಲಕಿ ಸಾವನ್ನಪ್ಪಿದ ಘಟನೆ ವರ್ತೂರುವಿನ ಪ್ರೆಸ್ಟೀಜ್ ಹೆಬಿಟೇಡ್ ಅಪಾರ್ಟ್ ಮೆಂಟ್ ನಲ್ಲಿ ಜರುಗಿದೆ. 10 ವರ್ಷದ ಮಾನ್ಯ ವಿದ್ಯುತ್ ತಂತಿ ತುಳಿದು ಮೃತ ಪಟ್ಟ ಬಾಲಕಿ ಎನ್ನಲಾಗಿದೆ. ನಿನ್ನೆ ಸಂಜೆ 7.30 ರ ಸುಮಾರಿಗೆ ಘಟನೆ ಜರುಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಬಾಲಕಿಯನ್ನು ಸ್ಥಳೀಯರು ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಹಸ್ತ್ರ ಆಸ್ಪತ್ರೆಯಲ್ಲಿ ಬಾಲಕಿ ಮೃತ ಪಟ್ಟಿದ್ದಾರೆ. ಬಾಲಕಿ ಪೋಷಕರಿಂದ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Read More

ಕಂಪ್ಲಿ : ವಿದ್ಯಾರ್ಥಿಗಳು ಇಂದು ದಿಢೀರ್ ಪ್ರತಿಭಟನೆಯನ್ನು ಕೈಗೊಂಡಿರುವ ಘಟನೆ ಕಂಪ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಯೆಸ್ ವೀಕ್ಷಕರೇ, ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ತರಗತಿಗಳನ್ನು ಬಹಿಷ್ಕರಿಸಿ ಕಳೆದ ೩-೪ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ. ಒಂದೆಡೆ ತರಗತಿಗಳು ನಡೆಯುತ್ತಿಲ್ಲ ಮತ್ತು ಇನ್ನೊಂದೆಡೆ ಸೆಮಿಸ್ಟರ್ ಪರೀಕ್ಷೆಯ ದಿನಾಂಕಗಳು ಸಮೀಪಿಸುತ್ತಿವೆ. ಶೈಕ್ಷಣಿಕವಾಗಿ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳನ್ನು ಈ ಪರಿಸ್ಥಿತಿಯು ಸಾಕಷ್ಟು ಆತಂಕಕ್ಕೆ ತಳ್ಳಿದೆ. ರಾಜ್ಯ ಸರ್ಕಾರವು ಕೂಡಲೇ ಈ ಕುರಿತು ಗಮನಹರಿಸಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಶೀಲಿಸಿ ಅವರಿಗೆ ನ್ಯಾಯ ಒದಗಿಸಬೇಕು ಮತ್ತು ಕಾಲೇಜುಗಳಲ್ಲಿ ಪಾಠಗಳು ಸರಿಯಾಗಿ ನಡೆಯುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಇನ್ನೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ, ನಮಗೆ ಎಕ್ಸಾಮ್ಸ್ ಹತ್ರಾ ಬರ್ತಿವೆ, ನಮಗೆ ಪಾಠ ಮಾಡಿ, ಅತಿಥಿ ಉಪನ್ಯಾಸಕರ…

Read More

ಕಂಪ್ಲಿ:- ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರನ್ನು ಬಂಧಿಸಿರುವುದು ಖಂಡನಿಯ, ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹೌದು ವೀಕ್ಷಕರೇ, ನಗರದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿರುವ ಪರ ಭಾಷೆಗಳದ ಹಿಂದಿ,ಇಂಗ್ಲಿಷ್, ತೆಲುಗು ಹಾಗೂ ತಮಿಳು ಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸಲು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟ ನಡೆಸಿ, ಪರಭಾಷಾ ನಾಮಫಲಕಗಳನ್ನು ಕಿತ್ತೆಸೆದು, ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆ ಕನ್ನಡಕ್ಕೆ ಮೊದಲ ಪ್ರಮುಖ್ಯತೆ ನೀಡುವಂತೆ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ,ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಹೋರಾಟ ನಿರತರಾಗಿದ್ದ ಟಿ.ಎ. ನಾರಾಯಣ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸರ್ಕಾರ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರವನ್ನು ನಡೆಸಿದೆ ಸರ್ಕಾರದ ಈ ನಡೆಯನ್ನು ಕರವೇ ಕಂಪ್ಲಿ ತಾಲೂಕು ಘಟಕ ಖಂಡಿಸುತ್ತದೆ. ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ ಅವರ ಆದೇಶದ ಮೇರೆಗೆ ಇಂದು…

Read More

ಕೋಲ್ಕತಾ: ಜನವರಿ 22ರಂದು ನಡೆಯಲಿರುವ ಅಯೋಧ್ಯಾ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದೆ ಇರಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಅವರ ಬದಲು ಯಾವುದೇ ಪ್ರತಿನಿಧಿಯನ್ನು ಕಳುಹಿಸುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. ತನ್ನ ನಿರ್ಧಾರವನ್ನು ಟಿಎಂಸಿ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಆಡಳಿತಾರೂಢ ಬಿಜೆಪಿಯ ರಾಜಕೀಯ ನಿರೂಪಣೆಯ ಜಾಲದೊಳಗೆ ಪಕ್ಷ ಸಿಲುಕುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 2024ರ ಲೋಕಸಭೆ ಚುನಾವಣೆಗೆ ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ಚಿಮ್ಮುಹಲಗೆಯನ್ನಾಗಿ ಬಳಸಿಕೊಳ್ಳಲು ನೋಡುತ್ತಿದೆ ಎಂದು ಮಮತಾ ನಂಬಿದ್ದಾರೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ಹೀಗಾಗಿ ಬಿಜೆಪಿಯ ತಾಳಕ್ಕೆ ತಕ್ಕಂತೆ ತಾವು ಕುಣಿಯಬಾರದು ಎಂದು ಟಿಎಂಸಿ ನಿರ್ಧರಿಸಿದೆ. ಸಮಾರಂಭಕ್ಕೆ ತಾವು ಹಾಜರಾದರೆ ಅದು ಬಿಜೆಪಿಯ ಗೆಲುವಿನಂತೆ ಭಾಸವಾಗುತ್ತದೆ ಎನ್ನುವುದು ಮಮತಾ ಅಭಿಪ್ರಾಯ ಎನ್ನಲಾಗಿದೆ. ಅಯೋಧ್ಯಾದಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ವಿರೋಧ ಪಕ್ಷಗಳ…

Read More