ಕಲಬುರಗಿ: ಕಲಬುರಗಿಯ ಡಾ.ಪಿಎಸ್ ಶಂಕರ ಪ್ರತಿಷ್ಡಾನದ 24 ನೇ ವಾರ್ಷಿಕೋತ್ಸವ ಜನೆವರಿ 1 ರಂದು ನಡೆಯಲಿದ್ದು ಹೆಸರಾಂತ ಇಬ್ಬರು ವೈದ್ಯರಿಗೆ ವೈದ್ಯಶ್ರೀ ಹಾಗು ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಅಂತ ಪ್ರತಿಷ್ಡಾನದ ಕಾರ್ಯದರ್ಶಿ ನರೇಂದ್ರ ಬಡಷೇಸಿ ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಪ್ರತಿಷ್ಡಾನದ ಪ್ರಮುಖರು ಈ ಬಾರಿ ಡಾ.ಕೆ ವಿಜಯಲಕ್ಷ್ಮಿ ಹಾಗು ಅಮರನಾಥ ಸೋಲಾಪುರೆ ಇಬ್ಬರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಅಂತ ಹೇಳಿದ್ರು. ಇದೇವೇಳೆ 10 ವೈದ್ಯ ವಿದ್ಯಾರ್ಥಿ ಮತ್ತು ಓರ್ವ ಇಂಜಿನಿಯರ್ ವಿದ್ಯಾರ್ಥಿಗೆ ಶಿಕ್ಷಣ ಮುಗಿಯೋತನಕ ಪ್ರತಿ ತಿಂಗಳ ಒಂದು ಸಾವಿರ ಸಹಾಯಧನ ನೀಡಲಾಗುವುದು ಅಂತ ತಿಳಿಸಿದ್ರು.ಜನೆವರಿ ಒಂದರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದ್ರು.
Author: AIN Author
ಸೋಷಿಯಲ್ ಮೀಡಿಯಾ ಸ್ಟಾರ್ ದಿಶಾ ಮದನ್ (Disha Madan) ಅವರು 10 ವರ್ಷಗಳ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ‘ಕುಲವಧು’ (Kulavadhu) ಸೀರಿಯಲ್ ನಟಿ ದಿಶಾ ಮತ್ತೆ ಹೊಸ ಸೀರಿಯಲ್ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದಾರೆ. ‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್ ಮೂಲಕ ಮತ್ತೆ ನಟನೆಗೆ ದಿಶಾ ಮರಳಿದ್ದಾರೆ. ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಬಣ್ಣ ಹಚ್ಚಿದ್ದಾರೆ. ಈ ಸೀರಿಯಲ್ ಸಕಲ ತಯಾರಿ ಮಾಡಿಕೊಂಡಿದ್ದೆ ಬಂದಿದ್ದಾರೆ. ಸದ್ಯದಲ್ಲೇ ಪ್ರಸಾರದ ದಿನಾಂಕ ರಿವೀಲ್ ಆಗಲಿದೆ. ಶಶಾಂಕ್ ಜೊತೆ ಪ್ರೀತಿಸಿ ಮದುವೆಯಾದ ಮೇಲೆ ವೈವಾಹಿಕ ಬದುಕಿನಲ್ಲಿ ದಿಶಾ ಬ್ಯುಸಿಯಾಗಿದ್ದರು. 2 ಮಕ್ಕಳ ತಾಯಿಯಾಗಿರುವ ನಟಿ ಈಗ ಕುಟುಂಬದ ಬೆಂಬಲದ ಮೇರೆಗೆ ಮತ್ತೆ ನಟನೆಗೆ ಮರಳಿದ್ದಾರೆ. ಕುಲವಧು’ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ದಿಶಾ ನಟಿಸಿದ್ದರು. ‘ಇಸ್ಮಾರ್ಟ್ ಜೋಡಿ’ ಎಂಬ ರಿಯಾಲಿಟಿ ಶೋನಲ್ಲಿ ಪತಿ ಜೊತೆ ದಿಶಾ ಭಾಗವಹಿಸಿದ್ದರು. ‘ಹಂಬಲ್ ಪೋಲಿಟಿಷಿಯನ್’ ನೊಗರಾಜ್ ಸೇರಿದಂತೆ ಹಲವು ವೆಬ್ ಸಿರೀಸ್‌ನಲ್ಲಿ ದಿಶಾ ನಟಿಸಿದ್ದಾರೆ.
ಹಾಸನ: ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನುವುದು ನಮ್ಮ ಗುರಿ. ದೇವೇಗೌಡರು, ಕುಮಾರಸ್ವಾಮಿ ಎಲ್ಲರದ್ದೂ ಇದೇ ಗುರಿ. ನಮಗೆ ಬೇರೆ ಯಾವುದರ ಬಗ್ಗೆಯೂ ಚಿಂತೆ ಇಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಬೇಕಾದಾಗ ಎಚ್ ಡಿ ಕುಮಾರಸ್ವಾಮಿ ಅವರ ಮನೆ ಬಳಿ ಬರುತ್ತಾರೆ. ಅವರು ಅಧಿಕಾರಕ್ಕೆ ನಮ್ಮನ್ನ ಬಂದಾಗ ದೂರ ಇಡುತ್ತಾರೆ ಎಂದು ಆರೋಪಿಸಿದರು. ಇದೇವೇಳೆ ನಮಗೆ ಎಷ್ಟು ಸ್ಥಾನ ಕೊಡಬೇಕು ಎಂಬುದು ಸೇರಿದಂತೆ ಯಾವುದರ ಬಗ್ಗೆಯೂ ಸದ್ಯಕ್ಕೆ ನಿರ್ಧಾರ ಆಗಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ನಂಬಬೇಡಿ. ಮೈತ್ರಿ ಬಿಟ್ಟು ಬನ್ನಿ. ನಾವು ಬೆಂಬಲಿಸ್ತೇವೆ ಎಂದು ಅಂದೇ ಪ್ರಧಾನಿ ಮೋದಿ ಹೇಳಿದ್ದರು. ಆಗ ಸಮಯ ಕೂಡಿ ಬಂದಿರಲಿಲ್ಲ. ಈಗ ಬಂದಿದೆ. ಅದನ್ನು ಸಹಿಸದೇ ಕಾಂಗ್ರೆಸ್ ನವರು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಜೊತೆಗೆ ಹೋದ ಎಲ್ಲರಿಗೂ ಇದೇ ಪರಿಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/attention-students-mphil-not-recognized-ugc-notice-to-stop-admission/ ಇದೇ ವೇಳೆ ಭವಾನಿ ರೇವಣ್ಣ…
ತಮ್ಮ ನೆಚ್ಚಿನ ನಟ ದರ್ಶನ್ ಅವರ ಸಿನಿಮಾವನ್ನು ನೋಡಲು ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಡಿಸೆಂಬರ್ 29 ರಂದು ರಾಜ್ಯಾದ್ಯಂತ ಕಾಟೇರ ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ದಿನದಂದು ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಮಾಹಿತಿಯನ್ನು ರಮ್ಯಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ವಿಚಾರದಲ್ಲಿ ರಮ್ಯಾ ತುಂಬಾನೇ ತಡಮಾಡಿದ್ದರು. ನವೆಂಬರ್ 14, 2022ರಂದೇ ತಮ್ಮ ಚೊಚ್ಚಲ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾ ಶೂಟಿಂಗ್ ಮುಗಿಸಿರುವುದಾಗಿ ರಮ್ಯಾ ಸಂಸ್ಥೆಯು ಹೇಳಿಕೊಂಡಿತ್ತು. ಆನಂತರ ಸಿನಿಮಾ ಯಾವಾಗ ರಿಲೀಸ್ (Release) ಎನ್ನುವ ಕುರಿತು ಮಾಹಿತಿ ನೀಡಿರಲಿಲ್ಲ. 2022 ನವೆಂಬರ್ ನಲ್ಲಿ ಶೂಟಿಂಗ್ ಮುಗಿಸಿದವರು 2023 ನವೆಂಬರ್ 24 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ, ಒಟಿಟಿಯ ಮಾಹಿತಿ ಮಾತ್ರ ವೇಗವಾಗಿ ಹಂಚಿಕೊಂಡಿದ್ದಾರೆ.…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಚಿರತೆ ಭೀತಿ ಆಯ್ತ ಈಗ ಕನಕಪುರದ ಸರದಿಯಲ್ಲಿ ಜನರಿಗೆ ಕಾಣಿಸಿಕೊಂಡ ಚಿರತೆ ಆತಂಕದಲ್ಲಿ ಮನೆ ಮಾಡಿದ್ದು ಜನರೆಲ್ಲಾ ಭಯದಿಂದಲೇ ಬದುಕುತಿದ್ದಾರೆ. ಕನಕಪುರ ತಾಲೂಕಿನಲ್ಲಿ ಹಾವಳಿಯಿಡುತ್ತಿರುವ ಚಿರತೆ ಫಾರ್ಮ್ ಹೌಸ್‌ನಲ್ಲಿ ಚಿರತೆಯ ಓಡಾಟದ ದೃಶ್ಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದ್ದು ಕಾಪೌಂಡ್ ಎಗರಿ ಫಾರ್ಮ್ ಹೌಸ್‌ಗೆ ನುಗ್ಗಿದ ಚಿರತೆ ಫಾರ್ಮ್ ಹೌಸ್‌ನಲ್ಲಿದ್ದ ಎರಡು ಕೋಳಿಗಳನ್ನು ತಿಂದು ಹಾಕಿರುವ ಚಿರತೆ. ಸಾಕಷ್ಟು ದಿನಗಳಿಂದ ಕನಕಪುರ ತಾಲೂಕಿನಲ್ಲಿ ಹಾವಳಿ ನಡೆಸುತ್ತಿರುವ ಚಿರತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ರೂ ಇದುವರೆಗೆ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳು ಹೀಗಾಗಿ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿಯಪ್ಪ ಅನ್ನೋರಿಗೆ ಸೇರಿದ ಫಾರ್ಮ್ ಹೌಸ್‌ಗೆ ನುಗ್ಗಿದ ಚಿರತೆ ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಕಂಡುಬಂದಿದೆ.
ಬಿಗ್ ಬಾಸ್ ಮನೆಯ (Bigg Boss Kannada 10) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟಕ್ಕೆ ತೆರೆ ಬೀಳಲು ಕೆಲವೇ ಕೆಲವು ದಿನ ಬಾಕಿಯಿದೆ. ಹೀಗಿರುವಾಗ ಮನೆಗೆ ಕುಟುಂಬಸ್ಥರ ಆಗಮನವಾಗುತ್ತಿದೆ. ಅದರಂತೆಯೇ ಸಂಗೀತಾ (Sangeetha Sringeri) ಫ್ಯಾಮಿಲಿ (Family) ಎಂಟ್ರಿ ಕೊಡುತ್ತಿದ್ದಂತೆ ವಿನಯ್ – ತುಕಾಲಿ ಎದುರು ಬರಲಾರದೇ ಅವಿತು ಕುಳಿತುಕೊಂಡಿದ್ದಾರೆ. ಅದಷ್ಟೇ ಅಲ್ಲ, ಎಷ್ಟು ಕಳಪೆ ಕೊಟ್ರು ತಲೆಕೆಡಿಸಿಕೊಳ್ಳಬೇಡ ಎಂದು ಅತ್ತಿಗೆ ಸುಚಿತ್ರಾ ಅವರು ಸಂಗೀತಾ ಕಿವಿ ಮಾತು ಹೇಳಿದ್ದಾರೆ. ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸಂಗೀತಾ ಅವರ ತಂದೆ ಶಿವಕುಮಾರ್, ತಾಯಿ ಭವಾನಿ, ಅತ್ತಿಗೆ ಸುಚಿತ್ರಾ, ಅಣ್ಣ ಕೂಡ ದೊಡ್ಮನೆಗೆ ಬಂದಿದ್ದಾರೆ. ಇಲ್ಲಿಯವರೆಗೆ ಪ್ರತಿ ಸ್ಪರ್ಧಿ ಮನೆಯಿಂದ ಒಬ್ಬರು, ಇಬ್ಬರು ಬಂದಿದ್ದರೆ, ಸಂಗೀತಾ ಮನೆಯಿಂದ ನಾಲ್ವರು ಬಂದಿದ್ದರು. ಮೊದಲು ಎಂಟ್ರಿ ಕೊಟ್ಟ ಅತ್ತಿಗೆ ಸುಚಿತ್ರಾಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಾನು ಏನೇ ಮಾಡಿದ್ರೂ ಎಲ್ಲರೂ ವಿರೋಧಿಸುತ್ತಾರೆ. ನನಗೆ ಇದೇ ವಿಷಯಕ್ಕೆ ಬೇಸರ ಆಗಿ ಅಳ್ತಿದೀನಿ…
ನವದೆಹಲಿ: ಹೊಸವರ್ಷಕ್ಕೆ (New Year) ಕಾಲಿಡಲು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿವೆ. ಈ ಹೊತ್ತಲ್ಲೇ ನರೇಂದ್ರ ಮೋದಿ (Narendra Modi) ಸರ್ಕಾರ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಜನವರಿಗೂ ಮೊದಲೇ ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್‌ಗೆ 10 ರೂ. ಕಡಿತಗೊಳಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ಪೆಟ್ರೋಲಿಯಂ ಸಚಿವಾಲಯ (Petroleum Ministry) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 8 ರೂ. ನಿಂದ 10 ರೂ.ವರೆಗೆ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಪ್ರಧಾನಿ ಮೋದಿಯ ಅನುಮೋದನೆ ಸಿಗಬೇಕಿದೆ. https://ainlivenews.com/attention-students-mphil-not-recognized-ugc-notice-to-stop-admission/ 2023-24ರ ಹಣಕಾಸು ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕೇವಲ 2 ತಿಂಗಳು ಹೊರತುಪಡಿಸಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 77.14 ಡಾಲರ್ (ಸುಮಾರು 6,415.71 ರೂ.) ಇತ್ತು. ಇನ್ನು ಸೆಪ್ಟೆಂಬರ್‌ನಲ್ಲಿ 93.54 ಡಾಲರ್ (7,779.69 ರೂ.) ಹಾಗೂ ಅಕ್ಟೋಬರ್‌ನಲ್ಲಿ 90.08 ಡಾಲರ್‌ನಷ್ಟು (7,491.92 ರೂ.) ಏರಿಕೆಯಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾತೈಲದ ಬೆಲೆ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ‘ರಾಬರ್ಟ್’ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಿತ್ತು. ಗುರುವಾರ ಮಧ್ಯ ರಾತ್ರಿಯೇ ಅನೇಕ ಕಡೆಗಳಲ್ಲಿ ಶೋ ಆರಂಭ ಆಗಿದೆ. ದರ್ಶನ್ ಅಭಿಮಾನಿಗಳು ಆ್ಯಕ್ಷನ್ ದೃಶ್ಯಗಳನ್ನು ಬಯಸುತ್ತಾರೆ. ಅಂಥವರಿಗೆ ಈ ಸಿನಿಮಾ ಖಂಡಿತಾ ನಿರಾಸೆ ಮಾಡುವುದಿಲ್ಲ. ಈ ಚಿತ್ರದಲ್ಲಿ ಹೊಡಿಬಡಿ ಸನ್ನಿವೇಶಕ್ಕೆ ಕಾರಣ ಆಗುವಂತಹ ಟ್ವಿಸ್ಟ್ ಬರಬೇಕು ಎಂದರೆ ಪ್ರೇಕ್ಷಕರು ಬಹಳ ಹೊತ್ತು ಕಾಯಬೇಕು. ಆಮೇಲೆ ಕಾದಿದ್ದಕ್ಕೂ ಸಾರ್ಥಕ ಆಯ್ತು ಎಂಬಷ್ಟು ಆ್ಯಕ್ಷನ್ ಸೀನ್ಗಳನ್ನು ತರುಣ್ ಸುಧೀರ್ ತೋರಿಸುತ್ತಾರೆ. ಮಾಸ್ ಪ್ರೇಕ್ಷಕರು ಈ ಚಿತ್ರವನ್ನು ಎಂಜಾಯ್ ಮಾಡುತ್ತಾರೆ. ಸಿನಿಮಾ ನೋಡಿ ಹೊರ ಬಂದ ಬಳಿಕ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸಿದ್ದಾರೆ. ‘ಅದ್ಭುತ ಸಿನಿಮಾ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್ಗೆ ಧನ್ಯವಾದ’ ಎಂದಿದ್ದಾರೆ
ವ್ಯೂಹಂ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮದಲ್ಲಿ ಕೂತು ಬಹಿರಂಗವಾಗಿ ತಮ್ಮನ್ನು ಕೊಲ್ಲಲು ಪ್ರಚೋದನೆ ನೀಡಿದ್ದಾರೆ. ನನ್ನ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಂಧ್ರ ಪೊಲೀಸ್ ರಿಗೆ ಮೊರೆ ಹೋಗಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದರು. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರ ವಿರುದ್ಧ ವರ್ಮಾ ದೂರು…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಶುರುವಾಗಿದೆ. ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್ ಡಿಬಾಸ್ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ. ದರ್ಶನ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿದೆ. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿದೆ. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ…