Author: AIN Author

ಕಲಬುರಗಿ: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಲಾಭ ಎಲ್ಲಾ ಫಲಾನುಭವಿಗಳಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಅವರು, ನಾಡಿನ ಮಹಿಳೆಯರ ಆರ್ಥಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ, ಜನಪರ ಆಡಳಿತದ ಮೂಲಕ ನುಡಿದಂತೆ ನಡೆಯುತ್ತಿರುವ ನಮ್ಮ ಕಾಂಗ್ರೆಸ್ (Congress) ಸರ್ಕಾರವು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಮತ್ತಷ್ಟು ಜನರಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಶೇಷ ಶಿಬಿರವನ್ನು ಆಯೋಜಿಸಿದೆ ಎಂದು ತಿಳಿಸಿದ್ದಾರೆ.  https://ainlivenews.com/attention-students-mphil-not-recognized-ugc-notice-to-stop-admission/ ರಾಜ್ಯದ ಎಲ್ಲಾ 5,000ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಏಕಕಾಲದಲ್ಲಿ ಡಿಸೆಂಬರ್ 27ರಿಂದ 29ರವರೆಗೆ ಮೂರು ದಿನಗಳ ಕಾಲ ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ ಅಪ್ಡೇಟ್, ಹೊಸ ಬ್ಯಾಂಕ್ ಖಾತೆ ಸಂಪರ್ಕ ಸೇರಿದಂತೆ ಹಲವು ಅಡೆತಡೆಗಳನ್ನು ನಿವಾರಿಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ…

Read More

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿಯೂ ಕನ್ನಡ ನಾಮಫಲಕದ ಹೋರಾಟದ ಕಿಚ್ಚು ಹತ್ತಿದೆ. ಈಗಾಗಲೇ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ಈಗ ವಾಣಿಜ್ಯನಗರಿಯಲ್ಲಿಯೂ ಮುನ್ನೆಲೆಗೆ ಬಂದಿದೆ. ಬಾರಕೋಲು ಮೂಲಕ ಎಚ್ಚರಿಕೆ ಘಂಟೆ ಬಾರಿಸಿದ್ದಾರೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ಬಹುತೇಕ ಕನ್ನಡಪರ ಹೋರಾಟಗಾರರು ರಸ್ತೆಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು.. ಹುಬ್ಬಳ್ಳಿಯಲ್ಲೂ ಕನ್ನಡ ನಾಮಫಲಕ ಹೋರಾಟ ಮುನ್ನೆಲೆಗೆ ಬಂದಿದ್ದು, ಕರವೇ ಕಾರ್ಯಕರ್ತರಿಂದ ವಿಭಿನ್ನ ಹೋರಾಟ ನಡೆಸಿದರು. ಧೋತಿ ತೊಟ್ಟು, ಬಾರಕೋಲು ಹಿಡಿದು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯಲ್ಲಿಯೂ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು. ಇನ್ನೂ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ಮೂಲಕ ಪ್ರತಿಭಟನೆ ರ್ಯಾಲಿ ಮಾಡಿದ ಪ್ರತಿಭಟನಾಕಾರರು, ಕನ್ನಡ ನಾಮಫಲಕ ಹಾಕಿದ್ರೆ ಶಾಂತಿ,ಇಲ್ಲದಿದ್ದರೆ ಕ್ರಾಂತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಮಫಲಕ ಹಾಕಬೇಕು ಇಲ್ಲವಾದರೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ…

Read More

ವಿಜಯನಗರ: ದಕ್ಷಿಣ ಕಾಶಿ ಹಂಪಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಫಲಪೂಜಾ ಕಾರ್ಯಕ್ರಮ ಭಕ್ತಸಮೂಹದ ನಡುವೆ ಸಂಭ್ರಮದಿಂದ ಜರುಗಿತು. ಶ್ರೀ ಪಂಪಾ ವಿರೂಪಾಕ್ಷೇಶ್ವರ ಮತ್ತು ತಾಯಿ ಹಂಪಮ್ಮ ದೇವಿಯ ಫಲಪೂಜಾ ಕಾರ್ಯಕ್ರಮದ ನಿಮಿತ್ತ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮ ನಡೆದವು. ಸ್ವಾಮಿಗೆ ಅರಸರ ಕಾಲದ ನವರತ್ನ ಖಚಿತ ಸುವರ್ಣಮುಖದೊಂದಿಗೆ ಅಲಂಕಾರ ಮಾಡಲಾಗಿತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತಾದಿಗಳು ಫಲಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. https://ainlivenews.com/bmtc-gave-good-news-to-the-disabled/ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನಂತರ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ದರ್ಶನ ಪಡೆದರು. ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ಕಡಪ, ರಾಜ್ಯದ ಬಳ್ಳಾರಿ, ಹಾವೇರಿ, ರಾಯಚೂರು, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಫಲಪೂಜಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ರಾತ್ರಿ ದೀಪೋತ್ಸವ ನಡೆಯಿತು. ಸ್ವದೇಶಿರು ಸೇರಿ ವಿದೇಶಿ ಪ್ರವಾಸಿಗರು ಕೂಡ  ಭಕ್ತರು ದೀಪಗಳನ್ನು ಬೆಳಗಿಸಿದರು.

Read More

ಬೆಂಗಳೂರು: 2023-24 ನೇ ಸಾಲಿನಲ್ಲಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಸೌಲಭ್ಯಗಳನ್ನು ಪಡೆಯಲು ಬೇಕಾದ ಅರ್ಹತೆಗಳೇನು? ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಈ ಯೋಜನೆಯು ಒಣ ವಲಯ ಕ್ಷೇತ್ರದ ರೈತರಿಗೆ ಮಾತ್ರ ಸಂಬಂಧಪಟ್ಟಿರುತ್ತದೆ. ಕೃಷಿ ಭಾಗ್ಯದಲ್ಲಿ ಯಾವೆಲ್ಲಾ ಸವಲತ್ತು ಪಡೆಯಬಹುದು? ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್/ ಪೆಟ್ರೋಲ್ ಪಂಪ್ಸೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು ಹನಿ) ನೀರಾವರಿ ಸೇರಿದಂತೆ ನಾನಾ ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು. ಒಂದುವೇಳೆ ಸಂಬಂಧಪಟ್ಟ ತಾಲೂಕಿಗೆ / ಹೋಬಳಿಗೆ ನಿಗದಿಪಡಿಸಿದ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾದರೆ ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಗುರಿಗಳನ್ವಯ ಆಯ್ಕೆ ಮಾಡಲಾಗುತ್ತದೆ. ರೈತರು…

Read More

ಸೆಂಚೂರಿಯನ್‌: ಟೀಂ ಇಂಡಿಯಾ (Team India) ಟಾಪ್‌ ಕ್ಲಾಸ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅತ್ಯುತ್ತಮ ಬ್ಯಾಟಿಂಗ್‌ ಫಾರ್ಮ್‌ನೊಂದಿಗೆ ದಾಖಲೆ ಮೇಲೆ ದಾಖಲೆಗಳನ್ನ ಬರೆಯುತ್ತಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 114 ರನ್ ಕಲೆಹಾಕುವ ಮೂಲಕ ಪ್ರಸಕ್ತ ವರ್ಷದ ಎಲ್ಲಾ ಸ್ವರೂಪದಲ್ಲೂ 2 ಸಾವಿರ ರನ್‌ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ. ಭಾರತದ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕೊಹ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಸಾರ್ವಕಾಲಿಕ ದಾಖಲೆಯನ್ನ ನುಚ್ಚುನೂರು ಮಾಡಿದ್ದರು. ಇಡೀಗ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ 146 ವರ್ಷಗಳ ಟೆಸ್ಟ್‌ ಕ್ರಿಕೆಟ್‌ (Test Cricket) ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. ಕೊಹ್ಲಿ ಸಪ್ತ ಸಾಧನೆ: ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದು, ಒಂದೇ ಕ್ಯಾಲೆಂಡರ್ ವರ್ಷದಲ್ಲಿ 7 ಬಾರಿ…

Read More

ಧಾರವಾಡ: ಅಭಿಮಾನಿಗಳ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹು ನಿರೀಕ್ಷಿತ ಚಿತ್ರ ಇಂದು ವರ್ಲ್ಡ್ ವೈಡ್ ರೀಲಿಸಾಗಿದ್ದು, ಪೇಡಾ ನಗರಿ ಧಾರವಾಡದಲ್ಲಿ ದಾಸನ ಅಭಿಮಾನಿಗಳು ಡಿಜೆ ಹಚ್ಚಿ ಕಾಟೇರವನ್ನು ವಿಜೃಂಭಣೆಯಿಂದ ಸ್ವಾಗತಿಸಿದರು. ಕಾಟೇರಾ ಮೊದಲ‌ ಶೋ ಸೌಂಡ್ ಜೋರಾಗಿದೆ. ನಗರದ ಎರಡು ಥಿಯೇಟರ್‌ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಶ್ರಿನಿವಾಸ್ ಹಾಗೂ ವಿಜಯ ಚಿತ್ರಮಂದಿರದಲ್ಲಿ ಕಾಟೇರಾ ಪ್ರದರ್ಶನ ಕಾಣುತ್ತಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳ ದಾಸ್‌ನ ಕಟೌಟ ರಾರಾಜಿಸುತ್ತಿವೆ.‌ ಪಟಾಕಿ ಸದ್ದು ಕೂಡಾ ಥಿಯೇಟರ್ ಮುಂದೆ ಹೆಚ್ಚಾಗಿದ್ದು, ಎರಡು ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳ ಬ್ಯಾನರಗಳು ರಾರಾಜಿಸುತ್ತಿವೆ‌. ಇನ್ನೂ ಚಿತ್ರದ ಮೊದಲ‌ ಶೋ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದಾಸ‌ನ ಫ್ಯಾನ್ಸ್‌ಗಳು ಚಿತ್ರಮಂದಿರ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಡಿ ಬಾಸ್ ಘೋಷಣೆಗುತ್ತಾ ಸಂಭ್ರಮಿಸುತ್ತಿದ್ದಾರೆ‌. ಅಷ್ಟೇಯಲ್ಲದೆ ಹಲವು ಅಭಿಮಾನಿಗಳು ತಮ್ಮದೆಯಾ ರೀತಿಯಲ್ಲಿ ಕಾಟೇರಾ ಸಂಭ್ರಮದಲ್ಲಿ ತೊಡಿಗಿದ್ದಾರೆ.

Read More

ಧಾರವಾಡ: ಶಕ್ತಿ ಯೋಜನೆಯ ಬಿಸಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಗೂ ತಟ್ಟುತಿದ್ದು, ಧಾರವಾಡದ ವಿದ್ಯಾರ್ಥಿಗಳಿಗೂ ಇದರ ಬಿಸಿ ಈಗ ತಟ್ಟಿದೆ‌. ನಿಗದಿತ ಸಮಯಕ್ಕೆ ಬಸ್ ಬಾರದೇ ಇರುವುದರಿಂದ ಕಂಗಾಲಾದ ವಿದ್ಯಾರ್ಥಿಗಳು ಏಕಾಏಕಿ ಬಸ್‌ಗಳನ್ನು ತಡೆದು ಇಂದು ಉಪ್ಪಿನ ಬೆಟಗೇರಿ ಗ್ರಾಮದಲ್ಲಿ  ಪ್ರತಿಭಟನೆ ನಡೆಸಿದರು. ಗ್ರಾಮದ ಮುಖ್ಯ ಬಸ್ಸ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕಾದು ಸುಸ್ತಾಗಿದ್ದ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಈ ಮೊದಲು ಮೂರ್ನಾಲ್ಕು ಬಸ್‌ಗಳು ನಿರಂತರವಾಗಿ ಸಂಚರಿಸುತ್ತಿದ್ದವು. ಆದರೆ, ಈಗ ಬೆಳಿಗ್ಗೆ 8 ಗಂಟೆಯ ಬಸ್ ಧಾರವಾಡದತ್ತ ಹೊರಟು ಹೋದರೆ, ಮುಂದೆ 10 ಗಂಟೆಯವರೆಗೂ ಯಾವುದೇ ಬಸ್ಸಿನ ಸೌಕರ್ಯವಿಲ್ಲ. ಹೀಗಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅಳಲು ತೊಡಿಕೊಂಡರು. ಬೆಳಿಗ್ಗೆ 9 ಗಂಟೆ ಹಾಗೂ 10 ಗಂಟೆಗೆ ಎರಡು ಬಸ್ಸಿನ ಅವಶ್ಯಕತೆ ಇದ್ದು, ಒಂದು…

Read More

ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‌ಬಾಸ್‌ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ. ‘ಕ್ಯಾಪ್ಟನ್‌ ಯಾರು?’ ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರದ ಜೊತೆಗೇ ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸದಸ್ಯರು ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರದ ಸುಳಿವು ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಇದೆ. ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆ ಯಾರು ಈ ಮನೆಯ ಕ್ಯಾಪ್ಟನ್ ಆಗಬೇಕಾಗಬೇಕು ಎಂದು ಬಯಸುತ್ತೀರಿ? ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ಅಭಿಪ್ರಾಯ ಸೂಚಿಸಿದ್ದರು. ಅದರ ಅನುಸಾರ ಸಂಗೀತಾ, ತನಿಷಾ ಮತ್ತು ಪ್ರತಾಪ್ ಹೆಸರು ಅತಿ ಹೆಚ್ಚು ಸಲ ಬಂದಿತ್ತು. ಹಾಗಾಗಿ…

Read More

ಸೆಂಚೂರಿಯನ್‌: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಭಾರತ (Team India) ಟೆಸ್ಟ್‌ ಕ್ರಿಕೆಟ್‌ ಮುಗ್ಗರಿಸಿದೆ. ಮುಗ್ಗರಿಸಿದ್ದು ಮಾತ್ರವಲ್ಲ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಹೀನಾಯವಾಗಿ ಸೋತಿದೆ. ಮೊದಲ ಟೆಸ್ಟ್‌ (Test Cricket) ಪಂದ್ಯವನ್ನು ಇನ್ನಿಂಗ್ಸ್‌ ಮತ್ತು 32 ರನ್‌ಗಳಿಂದ ಗೆದ್ದ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ದಿನ 5 ವಿಕೆಟ್‌ ಕಳೆದುಕೊಂಡು 256 ರನ್‌ ಗಳಿಸಿದ್ದ ಆಫ್ರಿಕಾ ಇಂದು 108.4 ಓವರ್‌ಗಳಲ್ಲಿ 408 ರನ್‌ಗಳಿಗೆ ಆಲೌಟ್‌ ಆಯ್ತು. 163 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಅಂತಿವಾಗಿ 34.1 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವಪತನ ಕಂಡಿತು. ಟೀಂ ಇಂಡಿಯಾದ ಬ್ಯಾಟಿಂಗ್‌ ಎಷ್ಟು ಕಳಪೆ ಆಗಿತ್ತು ಶುಭಮನ್‌ ಗಿಲ್‌ 26 ರನ್‌, ವಿರಾಟ್‌ ಕೊಹ್ಲಿ 76 ರನ್(82‌ ಎಸೆತ, 12 ಬೌಂಡರಿ, 1 ಸಿಕ್ಸರ್‌) ಹೊಡೆದದ್ದು ಬಿಟ್ಟರೆ ಉಳಿದ 8 ಆಟಗಾರರು ಎರಂಡಕಿ ಗಳಿಸದೇ ಔಟಾಗಿದ್ದರು. ಯಶಸ್ವಿ ಜೈಸ್ವಾಲ್‌ 5, ನಾಯಕ…

Read More

ಮುಂಬೈ: ಆಸ್ಟ್ರೇಲಿಯಾ (Australia) ವಿರುದ್ಧ ಏಕೈಕ ಪಂದ್ಯದ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ (India) ಮಹಿಳಾ ಕ್ರಿಕೆಟ್​ ತಂಡ ಏಕದಿನ (1st ODI) ಸರಣಿಯ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 8 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿತು. ಈ ಮೊತ್ತವನ್ನು ಚೇಸ್‌ ಮಾಡಿದ ಆಸ್ಟ್ರೇಲಿಯಾ 46.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 285 ರನ್‌ ಹೊಡೆದು ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರ ಫೋಬೆ ಲಿಚ್‌ಫೀಲ್ಡ್ 78 ರನ್‌ (89 ಎಸೆತ, 8 ಬೌಂಡರಿ, 1 ಸಿಕ್ಸರ್‌), ಎಲ್ಲಿಸ್ ಪೆರ್ರಿ 75 ರನ್‌ (72 ಎಸೆತ, 9 ಬೌಂಡರಿ, 2 ಸಿಕ್ಸರ್‌), ಬೆತ್ ಮೂನಿ 42 ರನ್‌(47 ಎಸೆತ, 4 ಬೌಂಡರಿ), ತಹ್ಲಿಯಾ ಮೆಕ್‌ಗ್ರಾತ್ ಔಟಾಗದೇ 68 ರನ್‌(55…

Read More