Author: AIN Author

ಕಡಲೆಹಿಟ್ಟು ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ವೃದ್ಧಿಸಲೂ ಕೂಡಾ ಉಪಯೋಗಿಸಲಾಗುತ್ತದೆ. ಹಿಂದಿನ ಕಾಲದಿಂದಲೂ ಕಡಲೆಹಿಟ್ಟನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತಿತ್ತು. ಸೋಪ್‌ ಕಂಡುಹಿಡಿಯುವ ಮೊದಲು ಕಡಲೆಹಿಟ್ಟನ್ನು ಸೋಪ್‌ ನಂತೆ ಉಪಯೋಗಿಸುತ್ತಿದ್ದರು. ಕಡಲೆ ಹಿಟ್ಟಿನಲ್ಲಿರುವ ಕೆಲವೊಂದು ಗುಣಗಳಿಂದಾಗಿ ಇಂದಿನ ದಿನಗಳಲ್ಲೂ ಕಡಲೆಹಿಟ್ಟಿನಿಂದ ತಯಾರಿಸಿದ ಸೋಪ್ ಗಳು ಮಾರುಕಟ್ಟೆಯಲ್ಲಿವೆ. ಚರ್ಮದಲ್ಲಿ ಉಂಟಾಗುವ ಅಲರ್ಜಿ, ತುರಿಕೆ, ಉರಿಗಳಿಂದ ದೂರವಿಡಲು ಕಡಲೆ ಹಿಟ್ಟು ಉತ್ತಮ ಪರಿಹಾರ. ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆದು, ಯಾವುದೇ ರೀತಿಯ ಚರ್ಮದ ಕಾಯಿಲೆ ಬರದಂತೆ ತಡೆಯುತ್ತದೆ. ಸೌಂದರ್ಯದ ದೃಷ್ಟಿಯಿಂದ ನೋಡಿದಾಗಲೂ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ. ಸತತವಾಗಿ ಕಡ್ಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಚರ್ಮ ನಯವಾಗಿ ಕಾಣಿಸುತ್ತದೆ. ಕಡಲೆ ಹಿಟ್ಟಿನಿಂದ ಮುಖದ ಕಲೆ ದೂರವಾಗುತ್ತದೆ. ಬಿಸಿಲಿನಿಂದ ತ್ವಚೆ ಕಪ್ಪಗಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ. ಯಾವುದೇ ಅಡ್ಡಪರಿಣಾಮವಿಲ್ಲದೇ ಕಡಲೆ ಹಿಟ್ಟು ಉಪಯೋಗಿಸಿ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ. ಹೊಳಪಿನ ತ್ವಚೆಗೆ ಮೊದಲು ಕಡಲೆಹಿಟ್ಟಿಗೆ ಸ್ವಲ್ಪ ಹಾಲು…

Read More

ಮಂಡ್ಯ: ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ಶ್ರೀರಂಗ ಪಟ್ಟಣ ನ್ಯಾಯಾಲಯ ಜಮೀನು ಮಂಜೂರು ಮಾಡಿದೆ. ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ನೀಡಿದ ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 24 ರಂದು ಶ್ರೀರಂಗಪಟ್ಟಣ ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಿಕಾರಿಗಳನ್ನು ಉದ್ದೇಶಿಸಿ ಮುಸ್ಲಿಮರ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನ ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿರುವ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ರೌಡಿಶೀಟರ್ ತೆರೆದು ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಜ್ಮಾ ನಝೀರ್ ದೂರು ನೀಡಿದ್ದರು. ಪ್ರಭಾಕರ ಭಟ್‌ ಹೇಳಿದ್ದೇನು? ಹಿಂದೆ ತಲಾಖ್‌ ತಲಾಖ್‌ ಎಂದು ಹೇಳಿ ಮುಸ್ಲಿಂ ಗಂಡಂದಿರು ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು…

Read More

ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುವ ಆಹಾರಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಹಲವಾರು ಸಂಶೋಧನೆಗಳು ನಡೆದಿವೆ. ಆದ್ದರಿಂದ ಮಹಿಳೆಯ ಆಹಾರಕ್ರಮವು ಸ್ತನ ಕ್ಯಾನ್ಸರ್​ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ನಾವು ಯಾವ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತೇವೆ, ನಮ್ಮ ಡಯೆಟ್​ನಲ್ಲಿ ಯಾವೆಲ್ಲ ಆಹಾರಗಳನ್ನು ಸೇರಿಸಿಕೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ಆರ್ಗಾನಿಕ್ ಆಹಾರಗಳು, ಕಡಿಮೆ ಕೀಟನಾಶಕಗಳ ಬಳಕೆಯ ಆಹಾರಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ನಾವು ಸೇವಿಸುವ ಪ್ರತಿಯೊಂದು ತುತ್ತು ಕೂಡ ನಮ್ಮ ಆಯ್ಕೆಯೇ ಆಗಿರಬೇಕು. ಒಂದೊಂದು ತುತ್ತಿನಲ್ಲೂ ಪೌಷ್ಟಿಕಾಂಶಗಳು ಇರುತ್ತವೆ. ನಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಬೇಕೆನ್ನುವುದು ನಮ್ಮ ಆಯ್ಕೆಯಾಗಿರಬೇಕು. ಆದಷ್ಟೂ ಆರ್ಗಾನಿಕ್ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಇದು ಉತ್ತಮ ನಿರ್ಧಾರವಾಗಿದೆ. ನಾವು ತಿನ್ನುವ ಆಹಾರ ಕೂಡ ಆರೋಗ್ಯದ ಅಪಾಯಗಳ ಜೊತೆ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ಹಾನಿಕಾರಕ ರಾಸಾಯನಿಕಗಳಿಲ್ಲದ ಆಹಾರವನ್ನು ಸೇವಿಸುವುದು…

Read More

ಧಾರವಾಡ: ನಿಗದಿತ ಸಮಯಕ್ಕೆ ಬಸ್ ಬಾರದೇ ಇರುವುದರಿಂದ ಕಂಗಾಲಾದ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಏಕಾಏಕಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ. ಈ ಮೊದಲು ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಮೂರ್ನಾಲ್ಕು ಬಸ್‌ಗಳು ನಿರಂತರವಾಗಿ ಸಂಚರಿಸುತ್ತಿದ್ದವು. ಆದರೆ, ಈಗ ಬೆಳಿಗ್ಗೆ 8 ಗಂಟೆಯ ಬಸ್ ಧಾರವಾಡದತ್ತ ಹೊರಟು ಹೋದರೆ ಮುಂದೆ 10 ಗಂಟೆಯವರೆಗೂ ಯಾವುದೇ ಬಸ್ಸಿನ ಸೌಕರ್ಯವಿಲ್ಲ. ಹೀಗಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂದು ಏಕಾಏಕಿ ಬಸ್ ತಡೆದು ಪ್ರತಿಭಟನೆ ನಡೆಸಿದರು. https://ainlivenews.com/eat-these-foods-if-you-are-deficient-in-vitamin-d-in-winter/ ಬೆಳಿಗ್ಗೆ 9 ಗಂಟೆ ಹಾಗೂ 10 ಗಂಟೆಗೆ ಎರಡು ಬಸ್ಸಿನ ಅವಶ್ಯಕತೆ ಇದೆ. ಈ ಎರಡು ಬಸ್ಸುಗಳು ಬಂದರೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಅನುಕೂಲವಾಗುತ್ತದೆ. ಈ ಸಂಬಂಧ ಡಿಪೊ ಮ್ಯಾನೇಜರ್‌ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ಕೂಡ…

Read More

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ ಪ್ರಕಟವಾಗಿದ್ದು  6 ಕೋಟಿ 96 ಲಕ್ಷದ 70 ಸಾವಿರ ದಂಡ‌ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹಾಗೆ  ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸ‌ ಅನುಭವಿಸಲು ಆದೇಶ ಕೂಡ ನೀಡಲಾಗಿದೆ. ದಂಡದ ಹಣದಲ್ಲಿ 6.96,60,000 ರೂಪಾಯಿ ದೂರುದಾರರಿಗೆ ಪರಿಹಾರವಾಗಿ ನೀಡಲು ಆದೇಶ ಹೊರಡಿಸಿದ್ದು ಉಳಿದ 10 ಸಾವಿರ ರೂಪಾಯಿ ಸರ್ಕಾರಕ್ಕೆ ದಂಡವಾಗಿ ನೀಡಲು ಆದೇಶ ಕೊಟ್ಟಿದೆ. ಆಕಾಶ್ ಆಡಿಯೋ ಕಂಪನಿಯ ಎಂಡಿ ಆಗಿದ್ದ ಮಧು ಬಂಗಾರಪ್ಪ ಅವರು 2011ರಲ್ಲಿ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.6 ಕೋಟಿ ರೂಪಾಯಿ ಚೆಕ್ ನೀಡಿದ್ದರು. ಆದ್ರೆ, ಆ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ವಿರುದ್ಧ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆ ದೂರು ದಾಖಲಿಸಿತ್ತು. ಈ ವೇಳೆ ದೂರುದಾರ ಕಂಪೆನಿಗೆ 6.60 ಕೋಟಿ ಬಾಕಿ ಪಾವತಿಗೆ ಚೆಕ್ ನೀಡಿದ್ದರು 2011 ರಲ್ಲಿ ಮಧು ಬಂಗಾರಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು ಹಾಗೆ ಖಾತೆಯಲ್ಲಿ…

Read More

ವಿಜಯಪುರ: ಕರವೇ ನಾರಾಯಣಗೌಡ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ರಾಜ್ಯ ಬಿಜ್ಜಳ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿ ಪ್ರತಿಭಟನೆ ನಡೆಸಿದ್ದು,  ರಾಜ್ಯ ಬಿಜ್ಜಳ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.  ಕರವೇ ಮುಖಂಡ ಅಶೋಕ ಹಾರಿವಾಳ ನೇತ್ರತ್ವದಲ್ಲಿರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.    

Read More

ದಾವಣಗೆರೆ: ದಾವಣಗೆರೆ ನಗರದಲ್ಲಿ ಆಗಿರುವ ಫುಟ್ ಪಾತ್ ಒತ್ತುವರಿ ತೆರವಿಗೆ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಮಹಾ ನಗರ ಪಾಲಿಕೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಪ್ರಮುಖವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜು ರಸ್ತೆ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ಅಂಗಡಿಗಳು ರಸ್ತೆಗಳನ್ನ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ವಾಹನಗಳು ಹಾಗೂ ಜನರು ಓಡಾಡುವ ರಸ್ತೆಗಳಲ್ಲಿ ಈ ರೀತಿಯಾಗಿ ಫುಟ್ ಪಾತ್ ಒತ್ತುವರಿ ಆಗಿರುವುದರಿಂದ ಸಾರ್ವಜನಿಕರು ಓಡಾಡಲು ಆಗುತ್ತಿಲ್ಲ. ವಾಹನಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಕಾಲೇಜು ವಿದ್ಯಾರ್ಥಿಗಳು ಓಡಾಡುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಒತ್ತು ಮಾಡಿ ಅಂಗಡಿ ನಿರ್ಮಿಸಿಕೊಂಡಿರುವ ಹಣ್ಣಿನ ಅಂಗಡಿಗಳು, ರಸ್ತೆ ಬದಿಯ ಬಟ್ಟೆ ಅಂಗಡಿಗಳು, ಮೊಬೈಲ್ ಶಾಪ್ ಸೇರಿದಂತೆ ಇತರೆ ಅಂಗಡಿಗಳನ್ನ ತೆರವುಗೊಳಿಸಿ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಕರ್ನಾಟಕ ನವ ನಿರ್ಮಾಣ ಸೇನೆಯ ಉಪಾಧ್ಯಕ್ಷ ಶೇರ್ ಅಲಿ ಹಾಗೂ ದಾವಣಗೆರೆ ನಗರ…

Read More

ಕೆಆರ್ ಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಧೀಮಂತ ಭಾಷೆ ಕನ್ನಡವಾಗಿದೆ ಎಂದು ಸಮಾಜಸೇವಕ ಆರ್.ಮಂಜುನಾಥ್ ತಿಳಿಸಿದರು. ರಾಮಮೂರ್ತಿನಗರ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಕನ್ನಡದ ಇತಿಹಾಸ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜೊತೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಕನ್ನಡವನ್ನು ಹೆಚ್ಚು ಬಳಸುವ ಮುಖಾಂತರ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ, ಕನ್ನಡ ಭಾಷೆಯ ಮಹತ್ವ ತಿಳಿದು ಬಾಳಿದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕವಾಗುತ್ತದೆ, ಕರ್ನಾಟಕ ಏಕೀಕರಣವಾಗಲು ನಾಡಿನ ಹಲವು ಕವಿಗಳು,ನಟರು,ವಿಚಾರವಂತರು ಸಾಹಿತಿಗಳು ಸೇರಿದಂತೆ ಹಲವರ ಕೊಡುಗೆ ಅಪಾರವಾಗಿದ್ದು, ಅವರ ಹೋರಾಟದಿಂದಲೇ ನಾವಿಂದ ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿ.ವಿ.ಭಾರತಿ ಮುಖಂಡರಾದ ಎಮ್.ಭಕ್ತಣ್ಣ, ಚಂದ್ರು,ಹರಿ,ಪರಮೇಶ್ವರಯ್ಯ,ಲೋಕೇಶ್ ಮುಂತಾದವರು ಇದ್ದರು.

Read More

ತುಮಕೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಶುಕ್ರವಾರ ದಿಢೀರನೆ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅವರು ದಿಢೀರನೆ ತುಮಕೂರು‌ ನಗರದ ಬಾರ್ ಲೈನ್ ರಸ್ತೆಯಲ್ಲಿರೋ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

Read More

ಹುಬ್ಬಳ್ಳಿ ; ನಗರದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮಸಮಾವೇಶದ ಅಂಗವಾಗಿ ಮೂರನೇ ದಿನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿತು ಅನೇಕ ಜನರಿಗೆ ಲಿಂಗ ದೀಕ್ಷೆಯನ್ನು ಮಾಡುವ ಮೂಲಕ ಲಿಂಗದ ಮಹಿಮೆಯನ್ನು ತಿಳಿಸಿಕೊಟ್ಟರು ದೇವಾನುದೇವತೆಗಳು ಕೂಡ ಇಷ್ಟ ಲಿಂಗ ಮಹಾಪೂಜೆಯನ್ನು ಮಾಡಿಕೊಳ್ಳುತ್ತಿದ್ದರು. ಕೂಡ ತಾವು ನೋಡಬಹುದು ಪಂಡರಾಪುರದಲ್ಲಿ ವಿಠಲನ ಶರದ ಮೇಲೆ ಲಿಂಗ ಇರುವುದು ಕಂಡು ಬರುತ್ತದೆ ಅಲ್ಲಿ ಪ್ರತಿದಿನ ಬಿಲ್ವಾರ್ಚಿನ್ನು ಅರ್ಪಿಸುವ ಮೂಲಕ ಪೂಜೆ ನೆರವೇರುವುದು ಲಿಂಗದ ಮಹಿಮೆಯನ್ನು ಅರಿತವರು ಲಿಂಗದ ಮಾಹಿತಿಯನ್ನು ತಿಳಿಯದವರಿಗೆ ನೀಡಿ ವೀರಶೈವ ಲಿಂಗಾಯತರು ಪ್ರತಿಯೊಬ್ಬರು ಲಿಂಗಧಾರಣೆಯನ್ನು ಮಾಡಿಕೊಳ್ಳಬೇಕು ಹಾಗೂ ಲಿಂಗವನ್ನು ಧರಿಸಿಯೇ ಇರಬೇಕು ಅಂದಾಗ ಮಾತ್ರ ಅವನು ಲಿಂಗವಂತ ಅಥವಾ ವೀರಶೈವ ಆಗುವನು ಎಂದು ತಿಳಿಸಿದರು. ಇವತ್ತಿನ ಪೂಜೆ ಯಲ್ಲಿ ಪ್ರಕಾಶ್ ಬೆಂಡಿಗೇರಿ ದಂಪತಿಗಳು ಜಗದ್ಗುರುಗಳ ಪಾದಪೂಜೆಯನ್ನು ನೆರವೇರಿಸಿದರು ಅಂಬಿಕಾ ನಗರದ ಶ್ರೀ ಷ ಬ್ರ ಈಶ್ವರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು ನೋ ನೂರಾರು ಮಹಿಳೆಯರು ಲಿಂಗ ದೀಕ್ಷೆಯನ್ನು ಮಾಡಿಕೊಂಡರು ಹುಬ್ಬಳ್ಳಿಯ…

Read More