ನವದೆಹಲಿ: ದೇಶದಲ್ಲಿ ಎಲ್ಲೆಲ್ಲೂ ರಾಮ ನಾಮ ಸ್ಮರಣೆ. ಅಯೋಧ್ಯೆ ರಾಮಮಂದಿರದ (Ram Mandir) ಮೇಲಿನ ಭಕ್ತಿ, ಪ್ರೀತಿ ಹಿಂದೂಗಳಿಗಷ್ಟೇ ಸೀಮಿತವಾಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ಮಹಿಳೆಯೊಬ್ಬರು (Muslim Women) ಸರ್ವಧರ್ಮ ಸಮನ್ವಯದ ದೃಷ್ಟಿಯಿಂದ ರಾಮಮಂದಿರಕ್ಕೆ ಪಾದಯಾತ್ರೆ ಬೆಳೆಸಿದ್ದಾರೆ. ಮುಸ್ಲಿಂ ಯುವತಿ ಶಬನಮ್ ಮುಂಬೈನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ತನ್ನ ಸಹಚರರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಶಬನಮ್ 1,425 ಕಿಲೋಮೀಟರ್ ಕಾಲ್ನಡಿಗೆ ಮೂಲಕವೇ ಅಯೋಧ್ಯೆ ತಲುಪಲು ಹೊರಟಿದ್ದಾರೆ. https://ainlivenews.com/eat-these-foods-if-you-are-deficient-in-vitamin-d-in-winter/ ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ ಮೇಲೆ ಅಚಲ ಭಕ್ತಿ ಹೊಂದಿದ್ದಾರೆ. ರಾಮನನ್ನು ಪೂಜಿಸಲು ಒಬ್ಬ ಹಿಂದೂ ಆಗುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಶಬನಮ್ ಸಾರಿದ್ದಾರೆ. ಉತ್ತಮ ಮಾನವನಾಗಿರುವುದು ಮುಖ್ಯ. ಈಗ ಶಬನಮ್ ಮಧ್ಯಪ್ರದೇಶದ ಸಿಂಧವಾವನ್ನು ತಲುಪಿದ್ದಾರೆ. ಪ್ರತಿದಿನ 25-30 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ. ಸುದೀರ್ಘ ಯಾತ್ರೆಯಿಂದ ಬರುವ ಆಯಾಸದ ಹೊರತಾಗಿಯೂ, ಮೂವರು ಯುವಜನರು ರಾಮನ ಮೇಲಿನ ಭಕ್ತಿ ತಮ್ಮನ್ನು ಮುಂದುವರಿಸುತ್ತಿದೆ ಎಂದು ಹೇಳುತ್ತಾರೆ. ಈ ಮೂವರು…
Author: AIN Author
ಲಿಚ್ಚಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿದೆ, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಲಿಚ್ಚಿ ಹಣ್ಣಿನಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದ್ದು, ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಈ ಹಣ್ಣು ಬಿಸಿ ವಾತಾವರಣದಲ್ಲಿ ನಿಮ್ಮನ್ನು ಹೈಡ್ರೀಕರಿಸುತ್ತದೆ. ಲಿಚಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮ ಸ್ನೇಹಿ ಪೋಷಕಾಂಶವಾಗಿದೆ. ವಿಟಮಿನ್ ಸಿ ನಿಮಗೆ ಮೃದುವಾದ ವಿನ್ಯಾಸ ಮತ್ತು ಉತ್ತಮ ಚರ್ಮವನ್ನು ನೀಡುತ್ತದೆ. ಇದು ಸೂರ್ಯನ ಹಾನಿಕಾರಕ ಪರಿಣಾಮಗಳಿಂದ ತ್ವಚೆಯನ್ನು ರಕ್ಷಿಸುತ್ತದೆ ಪ್ರತಿ ರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ ಸ್ವಲ್ಪ ಹವಾಮಾನ ಬದಲಾವಣೆಯಾದರೂ ಶೀತ ಮತ್ತು ಕೆಮ್ಮಿಗೆ ಗುರಿಯಾಗುವುದು ಸಹಜ. ಇಂತಹ ಸಮಯದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗುವ ಸಾಧ್ಯತೆಯಿದೆ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಲಿಚ್ಚಿ ಸೇವಿಸಿ. ಲಿಚ್ಚಿಯಲ್ಲಿರುವ ವಿಟಮಿನ್ ಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನೀರಿನಲ್ಲಿ ಕರಗುವ ಈ ವಿಟಮಿನ್ ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಇದು…
ಕುಷ್ಠಗಿ:- ಡಿ.ಕೆ ಶಿವಕುಮಾರ್ ರೊಂದಿಗೆ ಉತ್ತಮ ಸಮನ್ವಯತೆ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನನ್ನ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರ ನಡುವೆ ಯಾವುದೇ ರೀತಿಯ ಸಮನ್ವಯತೆಯ ಕೊರತೆ ಇರುವುದಿಲ್ಲ. ನಮ್ಮ ಪಕ್ಷದ ಎಲ್ಲಾ ನಾಯಕರುಗಳ ನಡುವೆ ಉತ್ತಮವಾದ ಸಮನ್ವಯತೆ ಇದೆ ಎಂದು ಇತ್ತೀಚಿನ ರಾಜಕೀಯ ಊಹಾಪೋಹಗಳ ಬಗ್ಗೆ ತೆರೆ ಎಳೆದಿದ್ದಾರೆ. ತಮ್ಮ ಹಾಗೂ ಡಿಕೆಶಿ ಮದ್ಯೆ ಗುಸುಗುಸು ರಾಜಕೀಯ ವಿದ್ಯಾಮಾನಕ್ಕೆ ತಾರ್ಕಿಕ ಅಂತ್ಯವಾಡಲು ಯತ್ನಿಸಿ, ನಮ್ಮ ಸರಕಾರದಲ್ಲಿ ಮೂರು ಡಿಸಿಎಂ ಹುದ್ದೆಗಳನ್ನು ನೀಡುವ ಕುರಿತು ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಯಾವುದೇ ರೀತಿಯ ಆರ್ಥಿಕ ಹೊರೆಯಾಗಿಲ್ಲ. ಬದಲಾಗಿ ಈ ಹಿಂದಿನ ಬಿಜೆಪಿ ಸರಕಾರವು ತನ್ನ ಅಧಿಕಾರವಧಿಯ ಕೊನೆ ಗಳಿಗೆಯಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಹೆಚ್ಚಿನ ಸಾಲ ಮಾಡಿ ಹೋಗಿರುವುದು ಆರ್ಥಿಕವಾಗಿ ಹೊರೆಯಾಗಿರುತ್ತದೆ ಎಂದರು
ಕುಶಾಲನಗರ:- ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಯಾವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಬಿಜೆಪಿಯ ಯತ್ನಾಳ್‌ರಿಂದಲೇ ಮಾಹಿತಿ ಪಡೆದು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದರು. ಈಗಾಗಲೇ ಸಿದ್ದರಾಮಯ್ಯನವರ ಸರ್ಕಾರ ತನಿಖೆ ಸಮಿತಿ ರಚಿಸಿದೆ. ತನಿಖೆಯೂ ನಡೆಯುತ್ತಿದೆ ಎಂದರು. ಇನ್ನು, ಕೋವಿಡ್ ಸಂದರ್ಭ ಬಿಜೆಪಿಯ 40 ಪರ್ಸೆಂಟ್ ಸರ್ಕಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ನೆನಪಿಸಿದರಲ್ಲದೆ, ಇದಕ್ಕೆ ಪೂರಕವಾಗಿ ಬಿಜೆಪಿ ಸರ್ಕಾರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ 40,000 ಕೋಟಿ ರು. ಅಕ್ರಮ ಆರೋಪಿಸಿದ್ದಾರೆ. ಈ ವಿಚಾರದ ಬಗ್ಗೆ ಯತ್ನಾಳ್ ಸರಿಯಾದ ದಾಖಲೆ ಕೊಟ್ಟರೆ ತನಿಖೆಗೆ ಅನುಕೂಲ ಆಗಲಿದೆ ಎಂದವರು ಹೇಳಿದರು.
ಬೆಂಗಳೂರು:- ಅತಿಥಿ ಉಪನ್ಯಾಸಕರ ವೇತನ 5 ಸಾವಿರ ಏರಿಕೆ ಆಗಿದ್ದು, ಜ. 1ರಿಂದ ಅನ್ವಯವಾಗುವಂತೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಸೇವೆ ಖಾಯಂ ಗೊಳಿಸುವಂತೆ ರಾಜ್ಯವ್ಯಾಪಿ ಮುಷ್ಕರ ನಡೆಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಜತೆಗೆ ರಾಜ್ಯ ಸರಕಾರ ಸಂಧಾನಕ್ಕೆ ಮುಂದಾಗಿದೆ. ಜ. 1ರಿಂದ ಅನ್ವಯವಾಗುವಂತೆ ಹಾಲಿ ಇರುವ ಗೌರವಧನವನ್ನು 5 ಸಾವಿರ ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನ 26 ಸಾವಿರ ದಿಂದ 31 ಸಾವಿರ ರೂ.ವರೆಗೆ ಇದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10,600 ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಳದ ಪ್ರಯೋ ಜನ ಸಮಾನವಾಗಿ ದೊರಕಲಿದೆ. ರಾಜ್ಯದ ಬೊಕ್ಕಸಕ್ಕೆ ಇದರಿಂದ ವಾರ್ಷಿಕ 55 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು MC ಸುಧಾಕರ್ ಹೇಳಿದ್ದಾರೆ.
ಮಂಗಳೂರು:- ವಿದ್ಯಾರ್ಥಿಗಳು ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸೇವಾದಳ ದೇಶದ ದೊಡ್ಡ ಸಂಘಟನೆಯಾಗಿದೆ. ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬೇಕು ಎಂದು ವಿದಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಕರೆ ನೀಡಿದರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳಷ್ಟು ಮಂದಿ ಯುವಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೇಶ ಸೇವೆ ಮಾಡುವ ಮನಸ್ಸು ಪ್ರತಿಯೊಬ್ಬರಲ್ಲೂ ಮೂಡಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎಲ್ಲರೂ ತಿಳಿದುಕೊಂಡು ಅವರ ಆದರ್ಶದಡಿ ಸಾಗಬೇಕು ಎಂದರು.
ದೋಹಾ: ಗೂಢಚರ್ಯೆ ಪ್ರಕರಣದಲ್ಲಿ ಮರಣದಂಡನೆಯ (Death Sentence) ಭೀತಿ ಎದುರಿಸುತ್ತಿದ್ದ ಭಾರತೀಯ ನೌಕಾಪಡೆಯ ಎಂಟು ಮಂದಿ ನಿವೃತ್ತ ಅಧಿಕಾರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಎಂಟು ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ರದ್ದು ಮಾಡಿ ಕತಾರ್ ಕೋರ್ಟ್ (Qatar Court) ತೀರ್ಪು ನೀಡಿದೆ. ಈ ಮೂಲಕ ಕಾನೂನು ಸಮರದಲ್ಲಿ ಭಾರತ ಸರ್ಕಾರಕ್ಕೆ (Indian Government) ಮೊದಲ ಗೆಲುವು ಸಿಕ್ಕಿದೆ. ಮರಣದಂಡನೆಯನ್ನು ಜೈಲು ಶಿಕ್ಷೆಯಾಗಿ ಮಾರ್ಪಾಡು ಮಾಡಿ ತೀರ್ಪು ನೀಡಿದೆ. ಆದರೆ ಎಷ್ಟು ವರ್ಷ ಶಿಕ್ಷೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಕತಾರ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಈ ಪ್ರಕರಣದಲ್ಲಿ ಮುಂದಿನ ಹೆಜ್ಜೆ ಇಡುವ ಬಗ್ಗೆ ಕಾನೂನು ಪರಿಣಿತರನ್ನು ಸಂಪರ್ಕಿಸಿದೆ. ಕತಾರ್‌ನಲ್ಲಿರುವ ಭಾರತದ ರಾಯಭಾರಿ ವಿಪುಲ್ ಮತ್ತು ಇತರ ಅಧಿಕಾರಿಗಳು ಬಂಧಿತ ವ್ಯಕ್ತಿಗಳ ಕುಟುಂಬ ಸದಸ್ಯರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. https://ainlivenews.com/attention-students-mphil-not-recognized-ugc-notice-to-stop-admission/ ತೀರ್ಪಿನ ಸಂಪೂರ್ಣ ವಿವರಕ್ಕೆ ನಾವು ಕಾಯುತ್ತಿದ್ದೇವೆ. ಈ ವಿಚಾರದಲ್ಲಿ ಆರಂಭದಿಂದಲೂ ಕುಟುಂಬದ ಬೆಂಬಲಕ್ಕೆ ನಿಂತಿದ್ದೇವೆ…
ಬೆಂಗಳೂರು:- 1.6 ಲಕ್ಷ ಮನೆಗಳ ನಿರ್ಮಾಣ ಮಾರ್ಚ್ ಒಳಗೆ ಪೂರ್ಣಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯಾದ್ಯಂತ ವಸತಿ ಇಲಾಖೆಯ ವಿವಿಧ ಯೋಜನೆಗಳಡಿ ನಿರ್ಮಿಸುತ್ತಿರುವ 1.6 ಲಕ್ಷ ಮನೆಗಳ ನಿರ್ಮಾಣ 2024ರ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಬೇಕು. ಜತೆಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ 52,189 ಮನೆಗಳ ನಿರ್ಮಾಣವನ್ನು ಸರ್ಕಾರದ ಹಣದಿಂದಲೇ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಚಿವ ಸಂಪುಟ ಸಭೆ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದರು. ವಿವಿಧ ವಸತಿ ಯೋಜನೆಗಳಡಿ ವರ್ಷ 3 ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಲಾಗಿತ್ತು. ಇದೀಗ 1.31 ಲಕ್ಷ ಮನೆಗಳ ನಿರ್ಮಾಣ ಪೂರ್ಣವಾಗಿದೆ. ಉಳಿದಂತೆ ನಿರ್ಮಾಣ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು 2024ರ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಮಂಗಳೂರು:- ಬರ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಬೇಡ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಈ ಸಂಬಂಧ BC ಮಾತನಾಡಿದ ಅವರು ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರವನ್ನ ದೂರುತ್ತಿದೆ. ಅದರ ಬದಲು ರಾಜ್ಯ ಸರ್ಕಾರವೇ 10 ಸಾವಿರ ಕೋಟಿ ರು. ಘೋಷಿಸಲಿ, ಕೇಂದ್ರ ಸರ್ಕಾರದ ಜತೆ ನಾವು ನೀವು ಒಟ್ಟಾಗಿ ಮಾತನಾಡೋಣ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದರು. ಯುವನಿಧಿ ಯೋಜನೆಯಲ್ಲಿ ಪದವಿ ಪಡೆದ ಎಲ್ಲ ನಿರುದ್ಯೋಗಿಗಳಿಗೆ ಹಣ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ 2022-23ರಲ್ಲಿ ಪದವಿ ಪೂರೈಸಿದ ನಿರುದ್ಯೋಗಿಗಳಿಗೆ ಮಾತ್ರ ಎನ್ನುತ್ತಿದ್ದಾರೆ. ಕರ್ನಾಟಕ ಸರ್ಕಾರ ಆಡಳಿತದಲ್ಲಿ ವಿಫಲವಾಗಿ ಅಸಹಾಯಕವಾಗಿದೆ. ಬರ ನಿರ್ವಹಣೆ, ಕಾನೂನು ಸುವ್ಯವಸ್ಥೆ ಎಲ್ಲ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವ ವಿಚಾರದಲ್ಲಿ ಸರ್ಕಾರ ಮುಳುಗಿದೆ ಎಂದರು. ಶಾಸಕ ಬಸನಗೌಡ ಪಾಟೀಳ್ ಯತ್ನಾಳರ…
ಬಾಳೆಹಣ್ಣು ರುಚಿಕರವಾದ ಪೌಷ್ಟಿಕಾಂಶದ ಹಣ್ಣು (Health). ಇದು ಕೈಗೆಟುಕುವ ದರದಲ್ಲಿಯೂ ಸಿಗುತ್ತದೆ. ಬಾಳೆಹಣ್ಣು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು pH ಅನ್ನು ಸಮತೋಲನಗೊಳಿಸುವ ವಿದ್ಯುದ್ವಿಚ್ಛೇದ್ಯಗಳಲ್ಲಿ ಒಂದಾಗಿದೆ. ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಜೀರ್ಣಕ್ರಿಯೆ, ಸ್ನಾಯುವಿನ ಸಂಕೋಚನದಂತಹ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವುದು ಅವಶ್ಯಕ (Side effects). ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಹುದೇ? ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಸರಿಯೋ ಅಲ್ಲವೋ ಎಂಬುದಕ್ಕೆ ನೇರವಾದ ಉತ್ತರವನ್ನು ನೀಡಲಾಗುವುದಿಲ್ಲ. ಇದು ಬಾಳೆಹಣ್ಣಿನ ಮೇಲೆ ಅವಲಂಬಿತವಾಗಿರುತ್ತದೆ. ಬಾಳೆಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಾಳೆಹಣ್ಣುಗಳು ಹಸಿರಾಗಿರುವಾಗ ಹೆಚ್ಚು ಫೈಬರ್ ಅನ್ನು ಹೊಂದಿರುತ್ತವೆ. ತುಂಬಾ ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ. ಬಾಳೆಹಣ್ಣುಗಳು ಹಳದಿ ಮತ್ತು ಹಣ್ಣಾಗಲು ಪ್ರಾರಂಭಿಸಿದ ತಕ್ಷಣ, ಫೈಬರ್ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅದೇ ವೇಳೆ ಬಾಳೆಹಣ್ಣಿನಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಹ ಕ್ಷಿಪ್ರವಾಗಿ ಹೆಚ್ಚಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ದೇಹದಲ್ಲಿ ಸಕ್ಕರೆ…