Author: AIN Author

ಬೆಂಗಳೂರು: ಕೆಇಎ (KEA) ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಎಸ್ಕೇಪ್ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪರೀಕ್ಷೆಯಲ್ಲಿ ಅಕ್ರಮವಾದಾಗ ಸುಮ್ಮನೆ ‌ಕುಳಿತಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹಾರಿಸೋದು ಬಿಡಬೇಕು. ಇದರ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದ್ರು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆರ್​.ಡಿ. ಪಾಟೀಲ್‌ಗೆ ನಾವಾಗಲಿ ನಮ್ಮ ಸರ್ಕಾರವಾಗಲಿ ದಯೆ ತೋರಿಸೋ ಉದ್ದೇಶವಿಲ್ಲ. ನಾವು ಕಳೆದ ನಾಲ್ಕು ದಿನಗಳಲ್ಲಿ 20 ಜನಗಳಿಗಿಂತ ಅಧಿಕ ಮಂದಿಯನ್ನು ಅರೆಸ್ಟ್ ಮಾಡಿದ್ದೀವಿ. ಆರ್​.ಡಿ. ಪಾಟೀಲ್ ಕೂಡ ಇನ್ನೊಂದು ಎರಡು ಅಥವಾ ಮೂರು ದಿನಗಳಲ್ಲಿ ಸಿಗಬಹುದು. ನಮ್ಮ ‌ಪೋಲಿಸ್ ಅಧಿಕಾರಿಗಳು ಆರ್​.ಡಿ. ಪಾಟೀಲ್ ಹಿಡಿಯೋದಕ್ಕೆ ಪ್ರಾಮಾಣಿಕ ಪ್ರಯತ್ನ ‌ಮಾಡಿದ್ದಾರೆ. ಪರೀಕ್ಷಾ ಸಮಯದಲ್ಲಿ ತಪಾಸಣೆ ಕೂಡಾ ಮಾಡಿದ್ದೀವಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Read More

ಬೆಂಗಳೂರು: ಕೆಇಎ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ನಾಪತ್ತೆ ವಿಚಾರ ವಿಚಾರ ಏನು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆರ್.ಡಿ.ಪಾಟೀಲ್ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಹಾಗೆ  ಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ. ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು. ಈಗ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್​ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ. ನಮ್ಮೆಲ್ಲಾ ಮುಖಂಡರೂ…

Read More

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಂದ ಬರ ಅಧ್ಯಯನ ಪ್ರವಾಸ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಕೇಂದ್ರವೇ ಅಧ್ಯಯನ ಮಾಡಿದೆ, ಇವರೇನು ಅಧ್ಯಯನ ಮಾಡುತ್ತಾರೆ? ನಾವು ಕೂಡ ಬರ ಅಧ್ಯಯನ ಮಾಡಿದ್ದೀವಲ್ಲ  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಕೇಂದ್ರ ತಂಡ ಅಧ್ಯಯನ ಮಾಡಿ ಹೋಗಿದೆ, ಆದರೆ ವರದಿ ನೀಡಿಲ್ಲ. ಮೊದಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಅನುದಾನ ಕೊಡಿಸಲಿ. ಬರ ಅಧ್ಯಯನ ಮಾಡಬಾರದು ಅಂತಾ ನಾವು ಹೇಳಲು ಹೋಗಲ್ಲ. ಕೇಂದ್ರ ಸರ್ಕಾರದ ಬಳಿ 17,900 ಕೋಟಿ ರೂ. ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ, ಅದನ್ನ ಮೊದಲು ಕೊಡಿಸಲಿ. ಬಿಜೆಪಿಯ 25 ಸಂಸದರಿದ್ದಾರಲ್ಲ ಚರ್ಚಿಸಿ ಅನುದಾನ ಕೊಡಿಸಲಿ. ನಮ್ಮ ಸಚಿವರ ಭೇಟಿಗೆ ಕೇಂದ್ರ ಸರ್ಕಾರ ಸಮಯವನ್ನೇ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂಬ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ  ತಿರುಗೇಟು ನೀಡಿದ್ದಾರೆ. ಬರ ಅಧ್ಯಯನ ನಡೆಸಿದ್ದು…

Read More

ಮಂಗಳೂರು: ಪ್ರಖ್ಯಾತ ಹುಲಿವೇಷ ತಂಡವಾದ ಕಲ್ಲೇಗ ಟೈಗರ್ಸ್‌ನ (Kallega Tigers) ಮುಖ್ಯಸ್ಥ ಬರ್ಬರವಾಗಿ ಹತ್ಯೆಯಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ನೆಹರೂ ನಗರ (Nehru Nagar) ಜಂಕ್ಷನ್‌ನಲ್ಲಿ ನಡೆದಿದೆ. ಅಕ್ಷಯ್ ಕಲ್ಲೇಗ (26) ಬರ್ಬರವಾಗಿ ಹತ್ಯೆಯಾದ ಯುವಕ. ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್‌ನನ್ನು ಮಾಣಿ-ಮೈಸೂರು ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿ ಕೊಲೆ (Murder) ಮಾಡಲಾಗಿದೆ. ಹತ್ಯೆಗೈದ ಬನ್ನೂರು ನಿವಾಸಿ ಮನೀಷ್ ಹಾಗೂ ಚೇತು ಘಟನೆಯ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವ ಮಾಹಿತಿ ಲಭಿಸಿದೆ.  ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭ ಎರಡು ಸಾವಿರ ರೂ. ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತಿರುಗಿದೆ. https://ainlivenews.com/supreme-ray-healing-centre-reiki-treatment/ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಮೂರಕ್ಕೂ ಅಧಿಕ…

Read More

ಕೋಲಾರ: ರೈತರ ವಿರುದ್ಧ ಅಪಾಯಕಾರಿ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ರೈತ ಕಾಯ್ದೆಯನ್ನ ರದ್ದುಪಡಿಸದೆ, ಹಿಂದಿನ ಸರ್ಕಾರ ತಂದ ಕಾಯ್ದೆಗಳನ್ನ ಜಾರಿ ಮಾಡುತ್ತಿದೆ. ಯಾವ ಕಾರ್ಪೋರೇಟ್ ಕಂಪನಿ ನಿಮ್ಮೊಂದಿಗೆ ಇದ್ದಾರೆ? ಇಂತಹ ಅಪಾಯದ ಕೆಲಸಕ್ಕೆ ಕೈ ಹಾಕಬೇಡಿ. ಕಾಯ್ದೆ ರದ್ದಿಪಡಿಸಬೇಕೆಂದು ಚಳುವಳಿ ಮಾಡಿದಾಗ, https://ainlivenews.com/supreme-ray-healing-centre-reiki-treatment/ ಕಾಯ್ದೆ ರೈತರಿಗೆ ವಿರುದ್ದ ಇದೆ ಎಂದು ಹೇಳಿದ್ರಿ. ಆಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಚಳುವಳಿಯಲ್ಲಿ ಭಾಗವಹಿಸಿದ್ರು. ಜಾಹಿರಾತು ನೀಡುವ ಮೂಲಕ ರೈತರನ್ನ ಹರಾಜಿಗೆ ಇಟ್ಟಿದ್ದೀರಿ ಎಂದು ಕೋಲಾರದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

Read More

ಹಾಸನ: ಪ್ರಸಿದ್ದ ಹಾಸನಾಂಬ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಿದ್ಧ ಹಾಸನಾಂಬೆ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಕೆಎನ್​ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸಾಥ್​ ನೀಡಿದರು. https://ainlivenews.com/supreme-ray-healing-centre-reiki-treatment/ ಹಾಸನಾಂಬೆ ದರ್ಶನದ ಬಳಿಕ ಸಿಎಂ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಇಂದು ಎರಡನೇ ಬಾರಿಗೆ ಹಾಸನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ನಾಡಪ್ರಭು ಕೆಂಪೇಗೌಡರ ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಹಾಸನಕ್ಕೆ ಆಗಮಿಸಿದ್ದರು.

Read More

ಬೆಂಗಳೂರು: ಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕಿಡಿ ಕಾರಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು ಎಂದರು. ಈಗ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್​ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ. ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು…

Read More

ಹಾಸನ: ನಮ್ಮ ನಾಡಿನಲ್ಲಿ ಸಂಪತ್ತು ಹೇರಳವಾಗಿದ್ದು ಅದು ಸಮರ್ಪಕವಾಗಿ ಎಲ್ಲರಿಗೂ  ಸದ್ಬಳಕೆಯಾಗುವಂತೆ ಹಾಗೂ ಹಂಚಿಕೆಯಾಗುವಂತೆ ಈ ರಾಜ್ಯವನ್ನು ಆಳುವವರೆಗೆ ದೇವರು ಜ್ಞಾನೋದಯ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹಾಸನದ ಆದಿ ದೇವತೆ ಹಾಸನಾಂಬ ದೇಗುಲಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿಯೊಡನೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ, ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ದೇವರಿಗೆ ಪೂಜೆ ಸಲ್ಲಿಸುವ ವೇಳೆ ಬರದ ಸಂಕಷ್ಟದಿಂದ ನೊಂದಿರುವ ನಾಡಿನ ಅನ್ನದಾತ ರೈತರಿಗೆ ಒಳ್ಳೆಯದಾಗಲಿ, ನಾಡಿನ ಎಲ್ಲ ಜನರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ ಅವರು, ಬಡವರ ರೈತರ ದೀನದಲಿತರ ಸೇವೆ ಮಾಡಲು ಒಳ್ಳೆಯ ಆರೋಗ್ಯವನ್ನು ತಾಯಿ ನನಗೆ ಕರುಣಿಸಲಿ ಎಂದು  ಕೇಳಿಕೊಂಡಿರುವುದಾಗಿ ತಿಳಿಸಿದರು. https://ainlivenews.com/supreme-ray-healing-centre-reiki-treatment/ ಪತ್ರಕರ್ತರ ಪ್ರಶ್ನೆಯೆಂದಕ್ಕೆ ಉತ್ತರಿಸಿದ ಅವರು ಜೆ ಡಿ ಎಸ್ ನ ಎಲ್ಲಾ ಶಾಸಕರು ಹಾಸನಾಂಬ ದರ್ಶನಕ್ಕೆ ಆಗಮಿಸಲಿದ್ದು ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ತಾವು ಒಗ್ಗಟ್ಟು ಪ್ರದರ್ಶನ ಮಾಡುವುದಾಗಿ ಇದೆ ವೇಳೆ…

Read More

ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ   ನಾಡಿನ ಹಿರಿಯ ರಾಜಕೀಯ ನಾಯಕ ಡಿ.ಬಿ.ಚಂದ್ರೇಗೌಡ ಅವರು ನಿಧನದ ಸುದ್ದಿ ಕೇಳಿ ಬಹಳ ದುಃಖವಾಯ್ತು. ಅವರ ನಿಧನಕ್ಕೆ ಸಂತಾಪ‌ ಸೂಚಿಸಿದ ವಾಟಾಳ್ ನಾಗರಾಜ್ ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ತು ಸದಸ್ಯರಾಗಿ ಭಾರತದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರುಅವರು ರಾಜ್ಯದಲ್ಲಿ ಸಚಿವರಾಗಿದ್ದ ಅವರ ಆದರ್ಶ ಬದುಕುವಿಚಾರ ಪೂರ್ಣ ಆಲೋಚನೆ , ಪರಿಣಾಮಕಾರಿ ಭಾಷಣ ಅಧ್ಯಯನ ಶೀಲ ಮನಸ್ಸು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದರು. ಹಾಗೆ ಸ್ಪೀಕರ್ ಸ್ಥಾನಕ್ಕೆ ಗಾಂಭೀರ್ಯ ತಂದುಕೊಟ್ಟವರುನಾಡಿನ ಸಜ್ಜನ ರಾಜಕಾರಣಿಗಳ ಸಾಲಿನಲ್ಲಿ ಮತ್ತೊಬ್ಬರಿಲ್ಲ ಇವರು ನನ್ನ ಸಹಪಾಠಿ ಆತ್ಮೀಯ ಬಾಂಧವ್ಯದಿಂದ ಮಾತನಾಡಿಸುತ್ತಿದ್ದರು ಸಜ್ಜನ ವ್ಯಕ್ತಿ ಇವರ ಅಗಲಿಕೆ ಕನ್ನಡಿಗರಿಗೆ ತುಂಬಲಾರದ ನಷ್ಟ ಎಂದರು.

Read More

ಬಿಗ್ ಬಾಸ್ ಮನೆಯಲ್ಲಿ (Bigg Boss House 10) ಪ್ರತಿ ಬಾರಿಯಂತೆ ಈ ಸಲ ಕೂಡ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ. ಅದರಲ್ಲಿ ಸಂಗೀತಾ- ಕಾರ್ತಿಕ್ ಒಡನಾಟ ಹೈಲೆಟ್ ಆಗಿದೆ. ಇದೀಗ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಕಾರ್ತಿಕ್‌ಗೆ ಕಿವಿಮಾತೊಂದನ್ನ ತನಿಷಾ ಹೇಳಿದ್ದಾರೆ. ಕಾರ್ತಿಕ್‌ಗೆ ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ, ವ್ಯರ್ಥ ಪ್ರಯತ್ನ ಅಂತ ತನಿಷಾ ಎಚ್ಚರಿಕೆ ನೀಡಿದ್ದಾರೆ.‌ ವೀಕೆಂಡ್ ಮಾತುಕತೆಯಲ್ಲಿ ಸುದೀಪ್, ಸಹಸ್ಪರ್ಧಿಗೆ ಬಲೂನ್ ಹೊಡೆದು ತಮ್ಮ ಅನಿಸಿಕೆಯನ್ನ ಹೇಳುವ ಅವಕಾಶ ಪ್ರತಿಯೊಬ್ಬರಿಗೂ ನೀಡಿದ್ದರು. ಆಗ ಎಲ್ಲರಂತೆ ತನಿಷಾ (Tanisha) ಕೂಡ, ಕಾರ್ತಿಕ್ (Karthik Mahesh) ಕುರಿತು ಮಾತನಾಡಿದ್ದಾರೆ. ನಿನ್ನ ನಿರ್ಧಾರಗಳೆಲ್ಲವೂ ಯಾವಾಗಲೂ ಸರಿ ಅಂದುಕೊಳ್ಳುತ್ತಿಯಾ ಆದರೆ ಅದು ಸುಳ್ಳು ಎಂದು ಬಲೂನ್ ಬ್ಲ್ಯಾಸ್ಟ್ ಮಾಡಿದ್ದಾರೆ. ಬಳಿಕ ನಮ್ಮ ಹುಡುಗಿ ಸಂಗೀತಾ ನಿನ್ನ ಲವ್‌ನಲ್ಲಿ ಬೀಳಲ್ಲ. ಅದು ನಿಮ್ಮ ಪ್ರಯತ್ನ ವ್ಯರ್ಥ ಎಂದಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಪರಿಚಯವಾದ ಸಹೋದರಿಯರ ಜೊತೆ…

Read More