ದಾವಣಗೆರೆ: 2ಎ ಮೀಸಲಾತಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ಜಯಮೃತ್ಯುಂಜ ಶ್ರೀ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈ ಬಿಟ್ಟಿದ್ದಾರೆ. ಗಡುವು ಕೇಳಿರುವ ಸಿಎಂ ಸಿದ್ದರಾಮಯ್ಯ ಆದ್ದರಿಂದ ಮುತ್ತಿಗೆಗೆ ತಾತ್ಕಾಲಿಕೆ ತಡೆ ನೀಡಿದ್ದೇವೆ ಎಂದ ಸ್ವಾಮೀಜಿ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜ.20 ರೊಳಗೆ ಇರುವ ಕಾನೂನು ಪ್ರಕ್ರಿಯೆ ಮುಗಿಸಬೇಕು. ಮುಗಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಸಮಾಜದ ಮುಖಂಡರು ಮತ್ತು ಸಿಎಂ ಮಾತು ಕೇಳಿ ಮುತ್ತಿಗೆ ಮುಂದೂಡಿದ್ದೇವೆ. ಇದರಲ್ಲಿ ಸಿಎಂ ತಮ್ಮ ಮಾತನ್ನ ಉಳಿಸಿಕೊಳ್ಳಬೇಕು. ಮಾತಿಗೆ ತಪ್ಪದಿರುವುದೇ ನಿಮ್ಮ ವ್ಯಕ್ತಿತ್ವಕ್ಕೆ ಮೇರುಗನ್ನಡಿ. ಇಲ್ಲದಿದ್ದರೆ ಮುಂದಿನ ತೀರ್ಮಾಣ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇನ್ನೂ ಈ ಬಗ್ಗೆ ಚರ್ಚಿಸಿಲು ಕೂಡಲಸಂಗಮದಲ್ಲಿ ಸಮಾಜದ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲ ಮುಖಂಡರು ಸೇರಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಸಭೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಒಳಪಂಗಡಗಳು ನಾವೆಲ್ಲ ಸೇರಿ ಸರ್ಕಾರದ ಗಮನ ಸೆಳೆಯೋಣ ಎಂದು ದಾವಣಗೆರೆಯಲ್ಲಿ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
Author: AIN Author
ಬಿಗ್ ಬಾಸ್ ಶುರುವಿಗೆ ಇಡೀ ಮನೆಯನ್ನು ಆವರಿಸಿಕೊಂಡಿದ್ದು ನಮ್ರತಾ. ಪುರುಷರ ಸರಿ ಸಮಾನವಾಗಿ ನಿಂತುಕೊಂಡು ನಮ್ರತಾ ಫೈಟ್ ಕೊಡುತ್ತಾರೆ ಎಂದೇ ನಂಬಲಾಗಿತ್ತು. ಆದರೆ, ಬರ್ ಬರ್ತಾ ನಮ್ರತಾ ಚಾರ್ಮ್ ಕಳೆದುಕೊಂಡರು. ಹೊಂದಾಣಿಕೆಯ ಆಟ ಆಡಲು ಶುರು ಮಾಡಿದರು. ಆದ್ರೆ ಈಗ ಈಗ ಆಟ ಶುರು ಮಾಡಿದ್ದಾರೆ. ಕ್ಯಾಪಟ್ನ್ಸಿ ಟಾಸ್ಕ್ ಆಗಿ ಕ್ಯಾಪ್ಟನ್ ಆಗಿದ್ದರು. ಈಗ ನಮ್ರತಾ ಕೂಡ ಇತ್ತೀಚೆಗೆ ಮೆಚ್ಚುಗೆ ಪಡೆಯುತ್ತಿದ್ದಾರೆ. ಕಾರ್ತಿಕ್ ಅವರು ಮೊದಲಿನಿಂದಲೂ ನಮ್ರತಾ ಜೊತೆ ಕ್ಲೋಸ್ ಆಗೋಕೆ ಪ್ರಯತ್ನಿಸಿದ್ದರು. ಸ್ನೇಹಿತ್ ಹೋದ ಮೇಲೆ ಇಬ್ಬರ ಮಧ್ಯೆ ಒಳ್ಳೆಯ ರ‍್ಯಾಪೋ ಬೆಳೆಯುತ್ತಿದೆ. ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗುತ್ತಿದ್ದಾರೆ. ಈಗ ಇಬ್ಬರೂ ಓಪನ್ ಆಗಿ ಫ್ಲರ್ಟ್ ಮಾಡಿದ್ದಾರೆ. ಇದು ಸಖತ್ ಫನ್ನಿ ಆಗಿತ್ತು. ನಮ್ರತಾ ಜೊತೆ ಡೇಟ್ಗೆ ಹೋಗಬೇಕು ಎಂಬುದು ಕಾರ್ತಿಕ್ ಕನಸು. ಮೊದಲಿನಿಂದಲೂ ಈ ಬಗ್ಗೆ ಮಾತನಾಡುತ್ತಲೇ ಬರುತ್ತಿದ್ದಾರೆ. https://ainlivenews.com/dont-be-fooled-by-lychee-the-benefits-of-eating-this-fruit-are-not-one-or-two/ ಇದನ್ನು ನಮ್ರತಾ ಹಾಗೂ ಕಾರ್ತಿಕ್ ಇಬ್ಬರೂ ಫನ್ ಆಗಿಯೇ ಸ್ವೀಕರಿಸಿದ್ದಾರೆ. ತಮ್ಮ ತಾಯಿ ಬಂದಾಗಲೂ ಕಾರ್ತಿಕ್ ಈ ವಿಚಾರ ತೆಗೆದಿದ್ದರು.…
ತುಮಕೂರು: ತುಮಕೂರು ತಾಲೂಕಿನ ಹೊನಸಿಗೆರೆ ಗ್ರಾಮದ ಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ಎಗ್ಗಿಲ್ಲದೇ ಸಾಗಿದೆ. ಈ ಕೆರೆ ಪ್ರಾತ್ರದಲ್ಲಿ ಯಾವುದೇ ಮಣ್ಣು ಟೆಂಡರ್ ಇಲ್ಲ. ಇಲ್ಲಿ ನಡೀಯುತ್ತಿರೋಮಣ್ಣು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆಕೋರರು ಕೆರೆ ಒಡಲು ಬಗೆದು ಮರಳು ಹೆಕ್ಕುತ್ತಿದ್ದಾರೆ. ಕೆಲ ಸ್ಥಳೀಯರು ಜೆಸಿಬಿಗಳು ಹಾಗೂ ಟ್ರಾಕ್ಟರ್ ಗಳನ್ನ ಇಟ್ಟು ಕೆರೆಯಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದಾರೆ. ಎಲ್ಲ ಕಾನೂನುಗಳು ಗಾಳಿಗೆ ತೂರಿ ಎಗ್ಗಿಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ನಡೆದ್ರೂ ಗಣಿ ಹಾಗೂ ಕಂದಾಯ ಇಲಾಖೆ ಡೋಂಟ್ ಕೇರ್ ಅಂತಿವೆ. ಇದು ರೈತರು, ನದಿ ಪಾತ್ರದ ಗ್ರಾಮಗಳ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಆನೇಕಲ್ ತಾಲೂಕಿನ ಗಟ್ಟಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಹುಸ್ಕೂರು ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಿದೆ ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ..ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ಇಂದು ನಸುಕಿನ ಜಾವ ತೆರಳುತ್ತಿದ್ದ ಬೈಕ್ ಸವಾರನಿಗೆ ಚಿರತೆ ಕಾಣಿಸಿದೆ. ಕೂಡಲೇ ಮೊಬೈಲ್ನಲ್ಲಿ ಚಿರತೆ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ .. ಇನ್ನು ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋನ್ ಇಟ್ಟಿದ್ದಾರೆ. ಕಳೆದ ವಾರವಷ್ಟೇ ಚಿರತೆಯೊಂದು ಕೋಳಿಯನ್ನು ಬೇಟೆಯಾಡಿ ತಿಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳೆದ ವಾರ ಗಟ್ಟಹಳ್ಳಿ, https://ainlivenews.com/krishna-stone-from-mysore-is-used-to-carve-sri-rama-idol/ ಹುಸ್ಕೂರು, ಕನ್ನಲ್ಲಿ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿತ್ತು. ಈಗ ಪ್ರತ್ಯಕ್ಷವಾಗಿರುವುದು ಅದೇ ಚಿರತೆ ಎಂದು ಅಂದಾಜಿಸಲಾಗಿದೆ. ಚಿರತೆ ಕಂಡು ಬಂದ ಪ್ರದೇಶದಲ್ಲಿ 400 ಎಕರೆ ಸಿಲ್ಕ್ ಫಾರ್ಮ್ ಇದ್ದು, ಚಿರತೆಯ ಚಲನವಲನ ಕಂಡು ಹಿಡಿಯಲು ಅನುಕೂಲವಾಗಲಿದೆ. ಹಾಗೆಯೇ,…
ಬೆಂಗಳೂರು: ಹೊಸ ವರ್ಷವನ್ನು ಹರ್ಷದಿಂದ ಬರ ಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಕೊರೋನ ಅಡ್ಡಲಾಗಿನಿಂತಿದೆ. ಈಗಾಗಲೇ ಜೆಎನ್.1 ಉಪತಳಿ ಹಾವಳಿ ಇಡುತ್ತಿದ್ದು ಆರೋಗ್ಯ ಇಲಾಖೆ ಕೂಡ ಕೊರೋನಾವನ್ನು ಕಟ್ಟಿಹಾಕಲು ಕಸರತ್ತು ನಡೆಸುತ್ತಿದೆ. ಕರ್ನಾಟಕದಲ್ಲಿ ಏಕಾಏಕಿಯಾಗಿ ಉಪತಳಿಯ ಹಾವಳಿ ಸ್ಫೋಟವಾಗಿದೆ. ಆದರೆ ಅದೃಷ್ಟ ವಶಾತ್ ಆಸ್ಪತ್ರೆಯ ದಾಖಲಾತಿಯಲ್ಲಿ ಏರಿಕೆಯಾಗದೆ, ಬಹುತೇಕ ಸೋಂಕಿತರು ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರೋರಿಗೆ ಬಿಬಿಎಂಪಿ ಆರೋಗ್ಯ ಇಲಾಖೆ ಔಷಧದ ಕಿಟ್ ಗಳನ್ನು ಅಗತ್ಯ ಬಿದ್ದಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ. https://ainlivenews.com/krishna-stone-from-mysore-is-used-to-carve-sri-rama-idol/ ಪ್ಯಾರಸೆಟಮಲ್,ಆಂಟಿಬಯೋಟಿಕ್, ಜಿಂಕ್ ಮಾತ್ರೆ,ಮಾಸ್ಕ್ ಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಜೊತೆ ಟೆಲಿ ಕನ್ಸಲ್ಟಿಂಗ್ ಮೂಲಕ ನಿರಂತರ ಸಂಪರ್ಕವನ್ನು ಮಾಡಲಾಗುತ್ತಿದೆ. ತುರ್ತು ಔಷಧ ಅಗತ್ಯ ಬಿದ್ದರೆ ವೈದ್ಯರನ್ನು ಮನೆಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ಈಗ ಹೊಸ ವರ್ಷದ ಆಚರಣೆಗೆ ಸದ್ಯ ಯಾವುದೇ ನಿಯಮಾವಳಿ ನೀಡಿಲ್ಲವಾದರೂ ಕೊನೆಕ್ಷಣದಲ್ಲಿ ಯಾವುದೇ ಬದಲಾವಣೆ ಆದರೂ ಆಶ್ಚರ್ಯ ಇಲ್ಲ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪಾರ್ಟಿ ಮುಗಿಸಿ ತೆರಳುವ ಜನರಿಗಾಗಿಯೇ ಬಿಎಂಟಿಸಿ ಡಿಸೆಂಬರ್ 31ರಂದು ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ. ಬಿಎಂಟಿಸಿ ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆಯಿಂದ ವಿವಿಧ ಪ್ರದೇಶಗಳಿಗೆ ಈ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ 2 ಗಂಟೆಯ ತನಕ ಬಸ್‌ಗಳು ಸಂಚಾರ ನಡೆಸಲಿವೆ. ಬಿಎಂಟಿಸಿ ಡಿಸೆಂಬರ್ 31ರಂದು ಎಂ. ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಜನರಿಗೆ ಅನುಕೂಲವಾಗುವಂತೆ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೇ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ/ ಜಂಕ್ಷನ್‌ಗಳಾದ ಯಲಹಂಕ, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಬನಶಂಕರಿ, ಜಯನಗರ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಕಾಡುಗೋಡಿ, ನಾಗಸಂದ್ರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಿಂದಲೂ ಬಸ್ ಸಂಚಾರಕ್ಕೆ ಬಿಎಂಟಿಸಿ ಕ್ರಮ ಕೈಗೊಂಡಿದೆ. ಬಸ್ ಮಾರ್ಗ, ಸಂಖ್ಯೆಗಳು…
ಬೆಂಗಳೂರು: ಶೇ.77ರಷ್ಟು ಜನರು ತಮ್ಮ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡುವ ಮೂಲಕ ಉಳಿತಾಯ ಮಾಡಲು ಮುಂದಾಗಿದ್ದರೆ, ಶೇ.21ರಷ್ಟು ಜನರು ಚಿನ್ನದ ಮೇಲೆ ಹೂಡಿಕೆ ಮಾಡುವ ಮೂಲಕ ಗಳಿಕೆಯ ಉಳಿತಾಯ ಮಾಡಲು ಒಲವು ತೋರಿದ್ದಾರೆ. ಈ ಪೈಕಿ ಕರ್ನಾಟಕದ ಬೆಂಗಳೂರಿನಲ್ಲಿ ಚಿನ್ನದ ಮೇಲಿನ ಹೂಡಿಕೆ ಪ್ರಮಾಣ ಶೇ.69ರಷ್ಟಿದ್ದು, ಇದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ತಿರುವನಂತಪುರಂ ಶೇ.66ರೊಂದಿಗೆ 2ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ನಡೆಸಿದ ವಾರ್ಷಿಕ ವೈಯಕ್ತಿಕ ಹಣಕಾಸು ಸಮೀಕ್ಷೆಯಲ್ಲಿ ಈ ಮಾಹಿತಿ ತಿಳಿದು ಬಂದಿದ್ದು ಈ ಪೈಕಿ ಭಾರತದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುಟುಂಬಗಳ ಪ್ರಮಾಣವು 2022ರಲ್ಲಿನ ಶೇ.3ರಿಂದ 2023ರಲ್ಲಿ ಶೇ.5ಕ್ಕೆ ಏರಿಕೆಯಾಗಿದೆ. https://ainlivenews.com/krishna-stone-from-mysore-is-used-to-carve-sri-rama-idol/ ಅಲ್ಲದೇ 2023ರಲ್ಲಿ ದೇಶದಲ್ಲಿ ಶೇ.27ರಷ್ಟು ಕುಟುಂಬಗಳು ಜೀವ ವಿಮೆ ಪಾಲಿಸಿಗಳನ್ನು ಹೊಂದಿವೆ. ಇದು 2019ರ ಶೇ.19ರಷ್ಟಕ್ಕೆ ಹೋಲಿಸಿದರೆ ಅಧಿಕವಾಗಿದೆ. ಸಮೀಕ್ಷೆಯ ಪ್ರಕಾರ ಶೇ.53ರಷ್ಟು ಕುಟುಂಬಗಳು ಯಾವುದೇ ಆರೋಗ್ಯ ವಿಮೆ ಹೊಂದಿಲ್ಲ, ಷೇರು ಮಾರುಕಟ್ಟೆ ಹೂಡಿಕೆದಾರರ ಪ್ರಮಾಣ ಶೇ.9ಕ್ಕೆ ಏರಿದೆ, ಶೇ.10ರಷ್ಟು ಭಾರತೀಯ ಕುಟುಂಗಳು ಮ್ಯೂಚುವಲ್…
ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ – ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) – ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ: ಬಾಗಲಕೋಟೆ – ರೂ. 102.27 ಬೆಂಗಳೂರು – ರೂ. 101.94 ಬೆಂಗಳೂರು ಗ್ರಾಮಾಂತರ – ರೂ. 102.07 ಬೆಳಗಾವಿ – ರೂ. 101.76 ಬಳ್ಳಾರಿ – ರೂ. 103.61 ಬೀದರ್ – ರೂ. 102.28 ವಿಜಯಪುರ – ರೂ. 101.72 ಚಾಮರಾಜನಗರ – ರೂ. 102.10 ಚಿಕ್ಕಬಳ್ಳಾಪುರ – ರೂ. 101.69 ಚಿಕ್ಕಮಗಳೂರು – ರೂ.…
ಬೆಂಗಳೂರು: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಅದು ಯಾವಗ ನಿಲ್ಲುತ್ತದೆ. ಅನ್ನೂವುದೆ ಈಗಿನ ಪ್ರಶ್ನೆಯಾಗಿದೆ. ಹೌದು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಮಲ ತಂದೆಗೆ 20 ವರ್ಷ ಜೈಲು, ಹತ್ತು ಸಾವಿರ ರೂ. ದಂಡ ವಿಧಿಸಿ ನಗರದ 2ನೇ ತ್ವರಿತ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ವೆಂಕಟೇಶ್ (48) ಶಿಕ್ಷೆಗೆ ಗುರಿಯಾದವನು. ಸಿಡೇದಹಳ್ಳಿ ನಿವಾಸಿ ವೆಂಕಟೇಶ್ ತನ್ನ 2ನೇ ಪತ್ನಿಯ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಸಂತ್ರಸ್ತೆ 2013ರ ಫೆಬ್ರವರಿ 22ರಂದು ಪೀಣ್ಯ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವೆಂಕಟೇಶ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಪೋಕ್ಸೋ ಕಾಯಿದೆಯನ್ವಯ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. https://ainlivenews.com/good-news-for-metro-commuters-trains-will-run-till-2-15-midnight-on-new-years-day/ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಜಿ ಗಂಗಾಧರ್, ಅಪರಾಧಿ ವೆಂಕಟೇಶ್‌ಗೆ 20 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಜತೆಗೆ, ಸಂತ್ರಸ್ತೆಗೆ 4 ಲಕ್ಷ ರೂ.…
ನಟ, ರಾಜಕಾರಣಿ ವಿಜಯಕಾಂತ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಅಂತಿಮ ದರ್ಶನ ಪಡೆದ ಬಳಿಕ ತಮ್ಮ ಕಾರಿನತ್ತ ಹೊರಟಿದ್ದ ವಿಜಯ್ (Vijay) ಮೇಲೆ ಚಪ್ಪಲಿ (Cheppali) ತೂರಿ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. https://twitter.com/iam_K_A/status/1740626989462217094?ref_src=twsrc%5Etfw%7Ctwcamp%5Etweetembed%7Ctwterm%5E1740626989462217094%7Ctwgr%5E7999e2402774ac1e9e3756276bd039febff2e250%7Ctwcon%5Es1_&ref_url=https%3A%2F%2Fkeralakaumudi.com%2Fen%2Fnews%2Fnews.php%3Fid%3D1217886u%3Dslipper-hurdled-at-actor-vijay-while-paying-tributes-to-vijayakant ನೆಚ್ಚಿನ ನಟನ ಅಂತಿಮ ದರ್ಶನ ಪಡೆಯುವುದಕ್ಕಾಗಿ ಜನಸಾಗರವೇ ಹರಿದು ಬಂದಿತ್ತು. ಜನರ ನಡುವೆ ಸಾಗಿ, ತಮ್ಮ ಕಾರಿನತ್ತ ಹೊರಟಿದ್ದರು ವಿಜಯ್. ಕಾರಿನತ್ತ ಹೊರಡಲು ವಿಜಯ್ ಹರಸಾಹಸ ಪಡುತ್ತಿದ್ದರು. ಈ ಸಮಯದಲ್ಲೇ ಯಾರೋ ಚಪ್ಪಲಿ ಎಸೆದಿದ್ದಾರೆ. ಆದರೆ, ಅವರಿಗೆ ಅದು ಬಿದ್ದಿಲ್ಲ. ಸಹಜ ಸಾವಲ್ಲ ರಾಜಕಾರಣಿ ವಿಜಯಕಾಂತ್ (Vijayakanth) ಅವರದ್ದು ಸಹಜವಾವಲ್ಲ, ಅದೊಂದು ಕೊಲೆ (Murder) ಎಂದು ಮಲಯಾಳಂನ ಖ್ಯಾತ ಸಿನಿಮಾ ನಿರ್ದೇಶಕ ಅಲ್ಪೋನ್ಸ್ ಪುತ್ರೆನ್ (Alphonse Puthren) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ಅವರು ಇನ್ಸ್ಟಾದ ಸ್ಟೋರಿ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಆತಂಕವನ್ನು…