Author: AIN Author

ಬೆಂಗಳೂರು:- 2024ರ ಜನವರಿ 1ರಿಂದ ಅನ್ವಯವಾಗುವಂತೆ ಮದ್ಯದ ದರ ಏರಿಕೆಯಾಗಲಿದೆ ಎಂಬ ಮಾಹಿತಿ ಬರುತ್ತಿದೆ. ನೀವು ಹೊಸ ವರ್ಷದಲ್ಲಿ ಮದ್ಯ ಮುಟ್ಟೋದಿಲ್ಲ ಅಂತ ನಿರ್ಣಯ ಮಾಡಿರುವವರ ಸಾಲಿನಲ್ಲಿದ್ದರೆ ಈ ಸುದ್ದಿ ಖುಷಿಕೊಡಬಹುದು, ಇಲ್ಲ ಬದುಕನ್ನು ಎಣ್ಣೆಯೊಂದಿಗೇ ಎಂಜಾಯ್‌ ಮಾಡಬೇಕು ಅನ್ನುವ ನಿರ್ಧಾರ ನಿಮ್ಮದಾದ್ರೆ ನಿಮಗಿದು ಸ್ವಲ್ಪ ಬೇಸರ ತರಬಹುದು! ಹಾಗಂತ ಈ ದರ ಏರಿಕೆಯನ್ನು ಸರ್ಕಾರ ಪ್ರಕಟಿಸಿದ್ದಲ್ಲ. ಕಳೆದ ಬಜೆಟ್‌ನಲ್ಲಿ ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಕೆಲವಕ್ಕೆ ಶೇಕಡಾ 10 ಇನ್ನು ಕೆಲವಕ್ಕೆ ಶೇ. 20ರಷ್ಟು ಏರಿಕೆ ಮಾಡಿತ್ತು. ಹಾಗಾಗಿ ಜುಲೈ ಒಂದರಿಂದ ಮದ್ಯದ ದರ ಏರಿಕೆ ಜಾರಿಗೆ ಬಂದಿತ್ತು. ಈ ಬಾರಿ ಮದ್ಯದ ದರ ಏರಿಕೆಗೆ ಮುಂದಾಗಿರುವುದು ಕೆಲವು ಮದ್ಯದ ಕಂಪನಿಗಳು. ಜನವರಿ 1ರಿಂದ ದರ ಏರಿಕೆ ಮಾಡುತ್ತಿದ್ದೇವೆ ಎಂದು ಅವರು ಅಬಕಾರಿ ಇಲಾಖೆಗೆ ಪತ್ರ ಬರೆದಿವೆ. ಈಗ ಇಷ್ಟು ಮುನ್ಸೂಚನೆ ಸಿಕ್ಕಿರುವುದರಿಂದ ಮದ್ಯ ಪ್ರಿಯರು ಈ ವರ್ಷದ ಮುಕ್ತಾಯ ಆಗುವುದರ ಒಳಗೆ ಒಂದಿಷ್ಟು ಕುಡಿದುಬಿಡಬಹುದು. ಯಾಕೆಂದರೆ ಹೊಸ ವರ್ಷದ…

Read More

ಆಲೂರು :- ತಾಲೂಕಿನಲ್ಲಿ ಇಂದು ಕ ರ ವೇ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡ ಬಂಧನವನ್ನು ಖಂಡಿಸಿ ತಾಲೂಕು ಘಟಕದಿಂದ ತಾಲೂಕ ಅಧ್ಯಕ್ಷರಾದ ನಟರಾಜ್ ಮತ್ತು ರಘು ಪಾಳ್ಯ ಹಾಗೂ  ಕಾರ್ಯಕರ್ತರ ಸಮ್ಮುಖದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿ ವಾಹಿನಿಯ ಜೊತೆ ಮಾತನಾಡಿದ ತಾಲೂಕ ಅಧ್ಯಕ್ಷರಾದ ನಟರಾಜ ಅವರು ಕಳೆದ ಒಂದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕ ರ ವೇ ರಾಜ್ಯಾಧ್ಯಕ್ಷರಾದ ಟಿ ಎನ್ ನಾರಾಯಣ ಗೌಡ ನೇತೃತ್ವದಲ್ಲಿ ನಡೆದಂತಹ ಕನ್ನಡಭಿಮಾನ ಅಭಿಯಾನ ಜಾತ ಅನ್ಯ ಭಾಷೆಯ ನಾಮಫಲಕವನ್ನು ತೆಗೆಸಿ ಕನ್ನಡ ನಾಮ ಫಲಕ ಹಾಕಬೇಕೆನ್ನುವ ಉದ್ದೇಶದಲ್ಲಿ ಹೊರಟಾಗ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಬಂಧನ ಮಾಡಿದ್ದಾರೆ, ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡರು ಅವರನ್ನು ಬಂದಿಸಿರುವುದನ್ನು ಖಂಡಿಸುತ್ತೇವೆ ಅವರನ್ನು ಬಿಡುಗಡೆ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಟರಾಜ್, ಜಿಲ್ಲಾ ಪಂಚಾಯಿತಿ…

Read More

ಹುಬ್ಬಳ್ಳಿ; ಕೊಟ್ಟಿ ಜನಪದ ಹಾವಳಿಯ ಮಧ್ಯೆ ಮೂಲ ಜನಪದದ ಅರಿವು ಮಕ್ಕಳಿಗೆ ಇಲ್ಲದಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಇವರು ಹುಬ್ಬಳ್ಳಿ ತಾಲೂಕ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಅಂಗಳದಲ್ಲಿ ಜನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ನಮ್ಮ ಹಿರಿಯರು ಕಟ್ಟಿಕೊಟ್ಟು ಹೋದ ಮೂಲ ಪರಂಪರೆಯ ಹಾಡುಗಳು ಮೂಲ ಜನಪದ ಇದರ ಬಗ್ಗೆ ಇಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರಿವು ಮೂಡಿಸಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪುರದಪ್ಪ ಗಾಳಿ ವಹಿಸಿಕೊಂಡಿದ್ದರು. ಕಲಾವಿದ ಕುಬೇರ ಗೌಡ ಮುರಳಿಯವರು ಜನಪದದ ಮೂಲ ಹಾಡುಗಳಾದ ಹಂತಿ ಗೀಗಿ ಲಾವಣಿ ಸೋಬಾನದಂತ ವಿವಿಧ ಹಾಡುಗಳನ್ನು ಹಾಡುವ ಮೂಲಕ…

Read More

ಕಲಬುರ್ಗಿ:- ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರಕವಿ ಕುವೆಂಪುರವರ 119 ನೇ ಜಯಂತೋತ್ಸವ ಕಾರ್ಯಕ್ರಮವನ್ನ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು..ನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮ ಪ್ರಭು ಪಾಟೀಲ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತ ಕುವೆಂಪುರವರ ಸಂದೇಶಗಳು ಇಂದಿಗೂ ಮತ್ತು ಮುಂದಿನ ಪೀಳಿಗೆಗೂ ದಾರಿದೀಪ ಅಂತ ಹೇಳಿದ್ರು. ಇದೇವೇಳೆ ಕಾರ್ಯಕ್ರಮ ಆಯೋಜಿಸಿದ್ದ ವೇದಿಕೆಯ ರಾಜ್ಯಾಧ್ಯಕ್ಷ ಸಚಿನ್ ಫರ್ತಾಬಾದ್ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಕುವೆಂಪು ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ರು. ಕಾಂಗ್ರೆಸ್ ಮುಖಂಡ ನೀಲಕಂಠ ರಾವ್ ಮೂಲಗೆ ಹಾಗು ವಿವಿಧ ಮಠಾಧೀಶರು ಸೇರಿದಂತೆ ಅನೇಕರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದೇವೇಳೆ ಕುವೆಂಪುರವರ ಸಾಹಿತ್ಯದ ಹಲವು ಗೀತೆಗಳನ್ನು ಕಲಾವಿದ ಚನ್ನು ಪ್ರಸ್ತುತಪಡಿಸಿದ್ರು.

Read More

ತುಮಕೂರು: ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣಾಧಿಕಾರಿ ಶಿವಕುಮಾರ್’ ಕೆ. ಅವರನ್ನು ಅಮಾನತುಗೊಳಿಸಿ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ಅವರು ಆದೇಶಿಸಿದ್ದಾರೆ. ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಲ್ದಾಣಾಧಿಕಾರಿಯಾಗಿದ್ದ ಶಿವಕುಮಾರ್ ಕೆ. ವಿರುದ್ಧ ಹಲವು ಆರೋಪಗಳಿದ್ದವು. ಕೆಳ ಹಂತದ ಸಿಬ್ಬಂದಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಸೇರಿದಂತೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಹಲವು ದೂರು, ಆರೋಪಗಳು ಕೇಳಿ ಬಂದಿದ್ದವು. ಆದರೆ ಈವರೆಗೆ ಯಾವುದೇ ದೂರುಗಳು ದಾಖಲಾಗಿರಲಿಲ್ಲ. ಆದರೆ ಈ ಬಾರಿ ವಿಡಿಯೋ ರೆಕಾರ್ಡ್ ದಾಖಲೆ ಸಮೇತವಾಗಿ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಆದೇಶವಾಗಿದೆ ಎಂದು ತಿಳಿದು ಬಂದಿದೆ. ‘ ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಆಧರಿಸಿ ತುಮಕೂರು ನಿಲ್ದಾಣಾಧಿಕಾರಿ ಶಿವಕುಮಾರ್ ಕೆ. ಅವರನ್ನು ಅಮಾನತು ಮಾಡಲಾಗಿದೆ’ ಎಂದು ‌ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ತಿಳಿಸಿದ್ದಾರೆ.

Read More

ವಿಜಯಪುರ:- ಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನತೆ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಈ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಸರಕಾರಿ ನೌಕರರಿಗೆ ವೇತನ ಕೊಡಲಾಗದ ದಾರುಣ ಪರಿಸ್ಥಿತಿ ಈಗಾಗಲೇ ಬಂದಿದೆ. 14 ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಈಗ ವಿಲವಿಲ ಒದ್ದಾಡುತ್ತಿದ್ದಾರೆ. ಚುನಾವಣೆ ಗೆಲ್ಲಲೇಬೇಕೆಂಬ ಹಪಾಹಪಿಯಲ್ಲಿ ಭರವಸೆ ನೀಡಿದ್ದ ಅವರು, ಜಾಹೀರಾತಿನೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಯಾವ ಶಾಸಕರಿಗೂ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಸಮಸ್ಯೆ ಆಗಲಿದೆ. ನಿಮ್ಮ ನಡವಳಿಕೆಯನ್ನು ರಾಜ್ಯದ ಮತದಾರರು ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ. ಕಾಂಗ್ರೆಸ್ ಪರಿಸ್ಥಿತಿಯನ್ನು ಲೋಕಸಭಾ ಚುನಾವಣೆ ಬಳಿಕ ನೋಡಿ ಎಂದು ಹೇಳಿದರು. ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿಲ್ಲ. ಕಂದಾಯ ಸಚಿವರು…

Read More

ಬಾಗಲಕೋಟೆ :- ಜಿಲ್ಲೆಯ ನೂತನ ತಾಲೂಕು ಕೇಂದ್ರ ರಬಕವಿ ಬನಹಟ್ಟಿ ನಗರಸಭೆಯ ಪಕ್ಕದಲ್ಲೇ ಇರುವ ವಾಹನ ನಿಲುಗಡೆ ಶೆಡ್ ಇದೀಗ ಇಸ್ಪೀಟ್ ಅಡ್ಡೆಯಾಗಿ ಪರಿವರ್ತನೆಯಾದಂತಾಗಿದೆ ನಗರವನ್ನ ಸ್ವಚ್ಛಗೊಳಿಸಬೇಕಾದ ನಗರಸಭೆಯ ಪೌರ ಕಾರ್ಮಿಕರು ತಾವೇ ಸ್ವತಃ ಸಾರಾಯಿ ಕುಡಿಯುತ್ತಾ ನಗರಸಭೆಯ ವಾಹನ ನಿಲುಗಡೆ ಶೆಡ್ ನಲ್ಲಿ ರಾಜಾರೋಷವಾಗಿ ಹಾಡಹಗಲೇ ಇಸ್ಪೀಟ್ ಆಡುವದನ್ನ ನೋಡಿದ್ರೆ ಇವರಿಗೆ ಮೇಲಾಧಿಕಾರಿಗಳ ಯಾವುದೇ ಬಯ ಇಲ್ಲವೋ ಅಥವಾ ಅಧಿಕಾರಿಗಳ ಸಹಕಾರವೂ ಇದೆಯೋ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಇನ್ನು ಆರು ಜನರ ಈ ಇಸ್ಪೀಟ್ ತಂಡದಲ್ಲಿ ಪೌರಕಾರ್ಮಿಕರ ದಫೆದಾರ್ ಶ್ರೀಕಾಂತ ದೊಡಮಣಿ ಕಿರಣ್ ಮಡ್ಡಿಮಣಿ ಅನಿಲ್ ಹರಿಜನ ಹನಮಂತ ಬಿಸನಾಳ ಸಚಿನ್ ಮಡ್ಡಿಮಣಿ ಹೀಗೆ ಇವರೆಲ್ಲರೂ ಸೇರಿ ಪ್ರತಿನಿತ್ಯ ಕೆಲಸದ ವೇಳೆಯಲ್ಲಿ ತಮ್ಮ ಈ ಇಸ್ಪೀಟ್ ದಂಡೆಯಲ್ಲಿ ತೊಡಗುತ್ತಾರೆ ಪೌರ ಕಾರ್ಮಿಕರ ಅಕ್ರಮ ಇಸ್ಪೀಟ್ ದಂದೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡಾ ಮುಕಪ್ರೇಕ್ಷಕರಂತೆ ಇರುವ ಪೌರಾಯುಕ್ತರು ಇನ್ನುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದನ್ನೆಲ್ಲ ನೋಡಿದರೆ…

Read More

ಮದುವೆ ಆಗಿ ಅಂತ ಕೂತ್ಕೋತಿನಿ, ಆಗ್ತೀರಾ?’ ಎಂದು ಕಾರ್ತಿಕ್​ಗೆ ನಮ್ರತಾ ನೇರ ಪ್ರಶ್ನೆ ಹಾಕಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಗಳು ನಡೆಯುತ್ತಿವೆ. ಈ ವಾರ ಒಬ್ಬರಿಗೆ ಇದ್ದ ಕ್ರೇಜ್, ಮತ್ತೊಬ್ಬರಿಗೆ ಇರೋದಿಲ್ಲ. ಹೀಗಾಗಿ ಗೆಲುವು ಯಾರಿಗೆ ಸಿಗಲಿದೆ ಎಂಬುವ ಲೆಕ್ಕಾಚಾರ ಹಾಕುವುದೇ ಕೊಂಚ ಕಷ್ಟವೆ. ಇದೀಗ ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗುತ್ತಿದ್ದಾರೆ. ಈಗ ಇಬ್ಬರೂ ಓಪನ್ ಆಗಿ ಫ್ಲರ್ಟ್ ಮಾಡಿದ್ದಾರೆ. ಇದು ಸಖತ್ ಫನ್ನಿ ಆಗಿತ್ತು. ನಮ್ರತಾ ಜೊತೆ ಡೇಟ್​ಗೆ ಹೋಗಬೇಕು ಎಂಬುದು ಕಾರ್ತಿಕ್ ಕನಸು. ಮೊದಲಿನಿಂದಲೂ ಈ ಬಗ್ಗೆ ಮಾತನಾಡುತ್ತಲೇ ಬರುತ್ತಿದ್ದಾರೆ. ಇದನ್ನು ನಮ್ರತಾ ಹಾಗೂ ಕಾರ್ತಿಕ್ ಇಬ್ಬರೂ ಫನ್ ಆಗಿಯೇ ಸ್ವೀಕರಿಸಿದ್ದಾರೆ. ತಮ್ಮ ತಾಯಿ ಬಂದಾಗಲೂ ಕಾರ್ತಿಕ್ ಈ ವಿಚಾರ ತೆಗೆದಿದ್ದರು. ‘ನಾನು ನಮ್ರತಾ ಜೊತೆ ಡೇಟ್​ಗೆ ಹೋಗಲೇ’ ಎಂದು ಕೇಳಿದ್ದರು. ಈಗ ಕಾರ್ತಿಕ್ ಹಾಗೂ ನಮ್ರತಾ ಆಡಿದ ಮಾತು ಗಮನ ಸೆಳೆಯುತ್ತಿದೆ. ಕಾರ್ತಿಕ್ ಅವರು ಅಡುಗೆ ಮನೆಗೆ ಹೊರಟಿದ್ದರು. ಈ ವೇಳೆ…

Read More

ಬೆಂಗಳೂರು:- ಚುನಾವಣಾ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ನಾಲ್ಕೇ ದಿನಕ್ಕೆ ‘10,834 ಅರ್ಜಿ’ ಸಲ್ಲಿಕೆ ಆಗಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರು, ಯುವನಿಧಿ ಯೋಜನೆಯ ನೋಂದಣಿಗೆ ದಿನಾಂಕ 26-12-2023ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಿದ್ದರು ಎಂದಿದ್ದಾರೆ. ಅರ್ಹ ಡಿಪ್ಲೋಮಾ, ಪದವೀಧರ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ದಾಖಲಿಸುವ ಪ್ರಕ್ರಿಯೆಯು ಆರಂಭಗೊಂಡಿದೆ. ಅರ್ಹ ಅಭ್ಯರ್ಥಿಗಳಇಂದ ನೋಂದಣಿಗಾಗಿ ಯುವನಿಧಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಪ್ರತಿ ದಿನ ಅರ್ಜಿ ಸಲ್ಲಿಸುತ್ತಿದ್ದು, ಯಾವುದೇ ಅಡಚಣೆ ಇಲ್ಲದೇ ಅಭ್ಯರ್ಥಿಗಳು ನೋಂದಣಿ ಮಾಡಲು ಅನುಕೂಲ ಕಲ್ಪಿಸಲಾಗಿದೆ. ದಿನಾಂಕ 29-12-2023ರ ಸಂಜೆ 6 ಗಂಟೆಯವರೆಗೆ 10,834 ಅರ್ಜಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಯುವನಿಧಿ ಯೋಜನೆಗೆ ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

Read More

ತನ್ನ ಗ್ರಾಹಕರಿಗೆ ಭಾರತೀಯ ಅಂಚೆ ಇಲಾಖೆ ಹೊಸ ಯೋಜನೆ ಪರಿಚಯಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಹೌದು, ಕೇವಲ 1500 ರೂಗಳನ್ನು ಠೇವಣಿ ಮಾಡುವ ಮೂಲಕ 35 ಲಕ್ಷ ರೂಪಾಯಿ ವರೆಗೆ ಗಳಿಸುವ ಅವಕಾಶ ಈ ಯೋಜನೆಯಲ್ಲಿದೆ..ಈ ಯೋಜನೆಯಡಿ ಯಾರು ಹೂಡಿಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನೀವು ಪೋಸ್ಟ್ ಆಫೀಸ್ ಜಾರಿಗೊಳಿಸಿರುವ ಈ ಹೊಸ ಹೂಡಿಕೆ ಯೋಜನೆಯ ಲಾಭವನ್ನು ಬಳಸಿಕೊಳ್ಳಬಹುದು. ತಿಂಗಳಿಗೆ ಕೇವಲ 1500 ರೂಪಾಯಿಗಳ ಹೂಡಿಕೆಯಲ್ಲಿ ನೀವು 35 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಹಾಗಾದ್ರೆ ಈ ಯೋಜನೆಯಿಂದ ಸಿಗುವ ಲಾಭವೇನು ಎಂದು ತಿಳಿಯುವುದಾದ್ರೆ. ಭಾರತೀಯ ಅಂಚೆ ಹಲವು ರೀತಿಯ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಹೂಡಿಕೆದಾರರು ಕೇವಲ 1500 ರೂಗಳನ್ನು ಠೇವಣಿ ಮಾಡಬಹುದು ಮತ್ತು ರೂ 35 ಲಕ್ಷದವರೆಗೆ ಗಳಿಸಬಹುದು. ಈ ಯೋಜನೆಯನ್ನು ‘ಗ್ರಾಮ ಸುರಕ್ಷಾ ಯೋಜನೆ’ ಎಂದು ಕರೆಯಲಾಗುತ್ತದೆ. ಒಂದೊಮ್ಮೆ ನೀವು 19 ವರ್ಷ ವಯಸ್ಸಿನವರಾಗಿದ್ದರೆ ಹೆಚ್ಚು ಲಾಭವನ್ನು ತರಲಿದೆ. 19 ರಿಂದ 55…

Read More