ಬೆಂಗಳೂರು:- ಬೆಂಗಳೂರಿನ ಎಲ್ಲ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲು ಮುಟ್ಟಲಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ಮಾರ್ಪಾಡು ಮಾಡಿದೆ. ಕೆಲವು ಕಡೆ ವಾಹನಗಳ ಪ್ರವೇಶವನ್ನೇ ನಿಷೇಧ ಮಾಡಿದ್ದರೆ, ಇನ್ನು ಕೆಲವು ಕಡೆ ಸಂಚಾರ ಡೈವರ್ಷನ್‌ಗೆ ಸೂಚಿಸಲಾಗಿದೆ. ಎಲ್ಲೆಲ್ಲಿ ವಾಹನಗಳ ಪ್ರವೇಶ ನಿಷೇಧ? ಈ ಕೆಳಗಿನ ಭಾಗಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶ ನಿಷೇಧ ಮಾಡಲಾಗಿದೆ. ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್‌ವರೆಗೆ ಚರ್ಚ್ ಸ್ಟ್ರೀಟ್ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ. ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್ ನಿಂದ ಎಂ.ಜಿ ರಸ್ತೆ ಜಂಕ್ಷನ್…
Author: AIN Author
ಕೋಲಾರ:- ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವ್ರು ತಿಳಿಸಿದರು. ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಎಂಆರ್ ಶ್ರೀನಾಥ್ ಫೌಂಡೇಶನ್ ಹಾಗೂ ಆರ್.ಎಲ್ ಜಾಲಪ್ಪ ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯನಿಗೆ ರೋಗಗಳು ಬರುವ ಮುಂಚೆ ಎಚ್ಚರ ವಹಿಸಿದರೆ ಮಾತ್ರವೇ ಉತ್ತಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಆಸ್ಪತ್ರೆಗೆ ಹೋಗುವುದು ಮತ್ತು ಚಿಕಿತ್ಸೆಯಿಂದ ದೂರ ಇರಲು ಸಾಧ್ಯವಾಗುತ್ತದೆ ಎಂದರು. ಚಿಕ್ಕ ಮಕ್ಕಳಿಂದ ಹಿರಿಯ ರವರೆಗೂ ಆರೋಗ್ಯವಾಗಿದ್ದರೆ, ಸುಖವಾಗಿ ಜೀವನ ನಡೆಸಲು ಸಾಧ್ಯ ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣಗಳು ಬರುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆಗಳನ್ನು…
ರಾಂಚಿ:- ಫೋನ್ನಲ್ಲಿ ಮಾತನಾಡುವಾಗ ಅಳಲು ಶುರು ಮಾಡಿದ 2 ವರ್ಷದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಬೆಂಗಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಜರುಗಿದೆ! ಈ ಸಂಬಂಧ ಮೃತ ಮಗುವಿನ ತಾತ ರೋಜನ್ ಅಲಿಯಾಸ್ ಜಬ್ಬಾರ್ ಅನ್ಸಾರಿ ನೀಡಿದ ದೂರಿನ ಮೇರೆಗೆ ಕರಣ ದಾಖಲಿಸಲಾಗಿದೆ. ಸೊಸೆ ತನ್ನ ಮೊಮ್ಮಗ ಹಆಸಿಫ್ ಅನ್ಸಾರಿಯನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಮಾವ ಆರೋಪಿಸಿದ್ದಾರೆ. ವಿಚಾರಣೆ ವೇಳೆ ನಿರ್ದಯ ತಾಯಿ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಫ್ಸಾನಾಗೆ ಎರಡು ಗಂಡು ಮಕ್ಕಳಿದ್ದು, ಒಬ್ಬನಿಗೆ ನಾಲ್ಕು ವರ್ಷ ಮತ್ತು ಇನ್ನೊಬ್ಬನಿಗೆ ಎರಡು ವರ್ಷ. ಆಕೆ ತಾನೂ ಫೋನ್ನಲ್ಲಿ ಮಾತನಾಡುವ ವೇಳೆ ಗಲಾಟೆ ಮಾಡಿದ ಎಂದು ತನ್ನ 2ನೇ ಮಗು ಆಸಿಫ್ ಅನ್ಸಾರಿಯನ್ನು ಕೊಂದು ತಾಯ್ತನಕ್ಕೆ ಅವಮಾನ ಮಾಡಿದ್ದಾಳೆ.
ಗದಗ:- ಲೊಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಅವರು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯ ಬಂಕಾಪುರ-ಲಕ್ಷ್ಮೇಶ್ವರ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿದ್ರು. ಇದೇ ವೇಳೆ ಮಾತನಾಡಿದ ಅವರು ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಕುರಿತು ಶಾಸಕ ಡಾ.ಚಂದ್ರು ಲಮಾಣಿ ಗಮನ ಸೆಳೆದಿದ್ದು, ಹಂತ ಹಂತವಾಗಿ ರಸ್ತೆ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ರಸ್ತೆ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರಕ್ಕೆ ವಿನಂತಿ ಮಾಡಲಾಗುವದು ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಡಾ. ಚಂದ್ರು ಲಮಾಣಿ, ವಿ.ಪ. ಸದಸ್ಯ ಎಸ್ ವಿ ಸಂಕನೂರ ಇದ್ರು.
ಕೆಲವೊಂದು ಮಾನಸಿಕ ಸಮಸ್ಯೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಅದ್ರಲ್ಲಿ ಗೈನೋಫೋಬಿಯಾ ಕೂಡ ಒಂದು. ಇದು ಪುರುಷರನ್ನು ಕಾಡುವ ತೊಂದರೆ. ಮಹಿಳೆಯರ ಬಗ್ಗೆ ಪುರುಷರಲ್ಲಿ ಇರುವ ವಿಶೇಷ ರೀತಿಯ ಫೋಬಿಯಾ ಇದಾಗಿದೆ. ಈ ಸಮಸ್ಯೆ ಇರುವ ಪುರುಷರಿಗೆ ಮಹಿಳೆಯನ್ನು ಕಂಡರೆ ಆಗೋದಿಲ್ಲ. ಮಹಿಳೆಯನ್ನು ಕಂಡ ಕೂಡಲೇ ಬೆವರಲು ಶುರು ಮಾಡ್ತಾರೆ. ಕಾಲುಗಳು ನಡುಗಲು ಶುರುವಾಗುತ್ತದೆ. ಮಾತನಾಡುವಾಗ ತೊದಲುತ್ತಾರೆ. ಕೆಲವರು ತುಂಬಾ ಉದ್ವಿಗ್ನತೆ ಗೆ ಒಳಗಾಗ್ತಾರೆ. ಸರಿಯಾಗಿ ಹಾಗೂ ಸರಾಗವಾಗಿ ಉಸಿರಾಡಲು ಸಾಧ್ಯವಾಗೋದಿಲ್ಲ. ಗೈನೋಫೋಬಿಯಾ ಲಕ್ಷಣಗಳು : ಎದೆ ನೋವು ಅಥವಾ ಹೃದಯಾಘಾತ : ಮಹಿಳೆಯರನ್ನು ನೋಡುತ್ತಿದ್ದಂತೆ ಪ್ಯಾನಿಕ್ ಅಟ್ಯಾಕ್, ಎದೆಯ ಬಿಗಿತ, ಅತಿಯಾದ ಬೆವರುವಿಕೆ, ತ್ವರಿತ ಹೃದಯ ಬಡಿತ, ತಲೆತಿರುಗುವಿಕೆ, ಆಯಾಸ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಗೈನೋಫೋಬಿಯಾದಿಂದ ವ್ಯಕ್ತಿ ಓದಲು ತೊಂದರೆ ಅನುಭವಿಸುತ್ತಾನೆ. ಸರಿಯಾಗಿ ಬರೆಯಲು ಸಾಧ್ಯವಾಗೋದಿಲ್ಲ. ನಿತ್ಯದ ಕೆಲಸ ಮಾಡುವಾಗ್ಲೂ ಅವರು ತೊಂದರೆಯನ್ನು ಅನುಭವಿಸುತ್ತಾರೆ. ತಮ್ಮನ್ನು ತಾವು ನಕಾರಾತ್ಮಕವಾಗಿ ನೋಡ್ತಾರೆ ಜನ : ಗೈನೋಫೋಬಿಯಾ ಎಂದರೆ ಮಹಿಳೆಯರಿಂದ ಕಾಡುವ…
ಬೆಂಗಳೂರು:- 2024ರ ಜನವರಿ 1ರಿಂದ ಅನ್ವಯವಾಗುವಂತೆ ಮದ್ಯದ ದರ ಏರಿಕೆಯಾಗಲಿದೆ ಎಂಬ ಮಾಹಿತಿ ಬರುತ್ತಿದೆ. ನೀವು ಹೊಸ ವರ್ಷದಲ್ಲಿ ಮದ್ಯ ಮುಟ್ಟೋದಿಲ್ಲ ಅಂತ ನಿರ್ಣಯ ಮಾಡಿರುವವರ ಸಾಲಿನಲ್ಲಿದ್ದರೆ ಈ ಸುದ್ದಿ ಖುಷಿಕೊಡಬಹುದು, ಇಲ್ಲ ಬದುಕನ್ನು ಎಣ್ಣೆಯೊಂದಿಗೇ ಎಂಜಾಯ್ ಮಾಡಬೇಕು ಅನ್ನುವ ನಿರ್ಧಾರ ನಿಮ್ಮದಾದ್ರೆ ನಿಮಗಿದು ಸ್ವಲ್ಪ ಬೇಸರ ತರಬಹುದು! ಹಾಗಂತ ಈ ದರ ಏರಿಕೆಯನ್ನು ಸರ್ಕಾರ ಪ್ರಕಟಿಸಿದ್ದಲ್ಲ. ಕಳೆದ ಬಜೆಟ್‌ನಲ್ಲಿ ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಕೆಲವಕ್ಕೆ ಶೇಕಡಾ 10 ಇನ್ನು ಕೆಲವಕ್ಕೆ ಶೇ. 20ರಷ್ಟು ಏರಿಕೆ ಮಾಡಿತ್ತು. ಹಾಗಾಗಿ ಜುಲೈ ಒಂದರಿಂದ ಮದ್ಯದ ದರ ಏರಿಕೆ ಜಾರಿಗೆ ಬಂದಿತ್ತು. ಈ ಬಾರಿ ಮದ್ಯದ ದರ ಏರಿಕೆಗೆ ಮುಂದಾಗಿರುವುದು ಕೆಲವು ಮದ್ಯದ ಕಂಪನಿಗಳು. ಜನವರಿ 1ರಿಂದ ದರ ಏರಿಕೆ ಮಾಡುತ್ತಿದ್ದೇವೆ ಎಂದು ಅವರು ಅಬಕಾರಿ ಇಲಾಖೆಗೆ ಪತ್ರ ಬರೆದಿವೆ. ಈಗ ಇಷ್ಟು ಮುನ್ಸೂಚನೆ ಸಿಕ್ಕಿರುವುದರಿಂದ ಮದ್ಯ ಪ್ರಿಯರು ಈ ವರ್ಷದ ಮುಕ್ತಾಯ ಆಗುವುದರ ಒಳಗೆ ಒಂದಿಷ್ಟು ಕುಡಿದುಬಿಡಬಹುದು. ಯಾಕೆಂದರೆ ಹೊಸ ವರ್ಷದ…
ಆಲೂರು :- ತಾಲೂಕಿನಲ್ಲಿ ಇಂದು ಕ ರ ವೇ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡ ಬಂಧನವನ್ನು ಖಂಡಿಸಿ ತಾಲೂಕು ಘಟಕದಿಂದ ತಾಲೂಕ ಅಧ್ಯಕ್ಷರಾದ ನಟರಾಜ್ ಮತ್ತು ರಘು ಪಾಳ್ಯ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿ ವಾಹಿನಿಯ ಜೊತೆ ಮಾತನಾಡಿದ ತಾಲೂಕ ಅಧ್ಯಕ್ಷರಾದ ನಟರಾಜ ಅವರು ಕಳೆದ ಒಂದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕ ರ ವೇ ರಾಜ್ಯಾಧ್ಯಕ್ಷರಾದ ಟಿ ಎನ್ ನಾರಾಯಣ ಗೌಡ ನೇತೃತ್ವದಲ್ಲಿ ನಡೆದಂತಹ ಕನ್ನಡಭಿಮಾನ ಅಭಿಯಾನ ಜಾತ ಅನ್ಯ ಭಾಷೆಯ ನಾಮಫಲಕವನ್ನು ತೆಗೆಸಿ ಕನ್ನಡ ನಾಮ ಫಲಕ ಹಾಕಬೇಕೆನ್ನುವ ಉದ್ದೇಶದಲ್ಲಿ ಹೊರಟಾಗ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಬಂಧನ ಮಾಡಿದ್ದಾರೆ, ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡರು ಅವರನ್ನು ಬಂದಿಸಿರುವುದನ್ನು ಖಂಡಿಸುತ್ತೇವೆ ಅವರನ್ನು ಬಿಡುಗಡೆ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಟರಾಜ್, ಜಿಲ್ಲಾ ಪಂಚಾಯಿತಿ…
ಹುಬ್ಬಳ್ಳಿ; ಕೊಟ್ಟಿ ಜನಪದ ಹಾವಳಿಯ ಮಧ್ಯೆ ಮೂಲ ಜನಪದದ ಅರಿವು ಮಕ್ಕಳಿಗೆ ಇಲ್ಲದಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಇವರು ಹುಬ್ಬಳ್ಳಿ ತಾಲೂಕ ಹೆಬಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಅಂಗಳದಲ್ಲಿ ಜನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ನಮ್ಮ ಹಿರಿಯರು ಕಟ್ಟಿಕೊಟ್ಟು ಹೋದ ಮೂಲ ಪರಂಪರೆಯ ಹಾಡುಗಳು ಮೂಲ ಜನಪದ ಇದರ ಬಗ್ಗೆ ಇಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರಿವು ಮೂಡಿಸಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪುರದಪ್ಪ ಗಾಳಿ ವಹಿಸಿಕೊಂಡಿದ್ದರು. ಕಲಾವಿದ ಕುಬೇರ ಗೌಡ ಮುರಳಿಯವರು ಜನಪದದ ಮೂಲ ಹಾಡುಗಳಾದ ಹಂತಿ ಗೀಗಿ ಲಾವಣಿ ಸೋಬಾನದಂತ ವಿವಿಧ ಹಾಡುಗಳನ್ನು ಹಾಡುವ ಮೂಲಕ…
ಕಲಬುರ್ಗಿ:- ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರಕವಿ ಕುವೆಂಪುರವರ 119 ನೇ ಜಯಂತೋತ್ಸವ ಕಾರ್ಯಕ್ರಮವನ್ನ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು..ನಗರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮ ಪ್ರಭು ಪಾಟೀಲ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತ ಕುವೆಂಪುರವರ ಸಂದೇಶಗಳು ಇಂದಿಗೂ ಮತ್ತು ಮುಂದಿನ ಪೀಳಿಗೆಗೂ ದಾರಿದೀಪ ಅಂತ ಹೇಳಿದ್ರು. ಇದೇವೇಳೆ ಕಾರ್ಯಕ್ರಮ ಆಯೋಜಿಸಿದ್ದ ವೇದಿಕೆಯ ರಾಜ್ಯಾಧ್ಯಕ್ಷ ಸಚಿನ್ ಫರ್ತಾಬಾದ್ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಕುವೆಂಪು ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ರು. ಕಾಂಗ್ರೆಸ್ ಮುಖಂಡ ನೀಲಕಂಠ ರಾವ್ ಮೂಲಗೆ ಹಾಗು ವಿವಿಧ ಮಠಾಧೀಶರು ಸೇರಿದಂತೆ ಅನೇಕರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದೇವೇಳೆ ಕುವೆಂಪುರವರ ಸಾಹಿತ್ಯದ ಹಲವು ಗೀತೆಗಳನ್ನು ಕಲಾವಿದ ಚನ್ನು ಪ್ರಸ್ತುತಪಡಿಸಿದ್ರು.
ತುಮಕೂರು: ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಾಧಿಕಾರಿ ಶಿವಕುಮಾರ್’ ಕೆ. ಅವರನ್ನು ಅಮಾನತುಗೊಳಿಸಿ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ಅವರು ಆದೇಶಿಸಿದ್ದಾರೆ. ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಲ್ದಾಣಾಧಿಕಾರಿಯಾಗಿದ್ದ ಶಿವಕುಮಾರ್ ಕೆ. ವಿರುದ್ಧ ಹಲವು ಆರೋಪಗಳಿದ್ದವು. ಕೆಳ ಹಂತದ ಸಿಬ್ಬಂದಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಸೇರಿದಂತೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಹಲವು ದೂರು, ಆರೋಪಗಳು ಕೇಳಿ ಬಂದಿದ್ದವು. ಆದರೆ ಈವರೆಗೆ ಯಾವುದೇ ದೂರುಗಳು ದಾಖಲಾಗಿರಲಿಲ್ಲ. ಆದರೆ ಈ ಬಾರಿ ವಿಡಿಯೋ ರೆಕಾರ್ಡ್ ದಾಖಲೆ ಸಮೇತವಾಗಿ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಆದೇಶವಾಗಿದೆ ಎಂದು ತಿಳಿದು ಬಂದಿದೆ. ‘ ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಆಧರಿಸಿ ತುಮಕೂರು ನಿಲ್ದಾಣಾಧಿಕಾರಿ ಶಿವಕುಮಾರ್ ಕೆ. ಅವರನ್ನು ಅಮಾನತು ಮಾಡಲಾಗಿದೆ’ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ತಿಳಿಸಿದ್ದಾರೆ.