ಬೆಂಗಳೂರು:- ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ತಮ್ಮ ನೇಮಕವನ್ನು ಟೀಕಿಸಿರುವ ಕುಮಾರಸ್ವಾಮಿಗೆ ಬಸವರಾಜ್ ರಾಯರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಕುಮಾರಸ್ವಾಮಿ ಅವರಿಗೆ ಯಾಕೆ ಬೇಕು. ನನ್ನ ಜತೆಗೆ ಚರ್ಚೆಗೆ ಕುಳಿತುಕೊಳ್ಳಲಿ, ನನಗೆ ಗೊತ್ತಿದೆಯೋ? ಅವರಿಗೆ ಗೊತ್ತಿದೆಯೋ? ಸಾಬೀತಾಗಲಿ’ ಎಂದರು. ನನ್ನ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ. ನನಗೆ ಏನು ಗೊತ್ತಿದೆಯೋ ಮಾತನಾಡುತ್ತೇನೆ, ಅವರಿಗೆ ಏನು ಗೊತ್ತಿದೆಯೋ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವ ಇವರು ದೊಡ್ಡ ಆರ್ಥಿಕ ತಜ್ಞರಾ? ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದರು. ಸಲಹೆಗಾರ ಸ್ಥಾನ ಕೊಡಿ ಎಂದು ನಾನು ಕೇಳಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್ಥಿಕ ಸಲಹೆಗಾರ ಸ್ಥಾನ ಕೊಟ್ಟಿದ್ದಾರೆ. ಬಹಳ ದೊಡ್ಡ ಸವಾಲಿನ ಜವಾಬ್ದಾರಿ ಇದೆ. ಇದು. ಸುಮ್ಮನೆ ಕಾರು, ಬೇರೆ ಸೌಲಭ್ಯಕ್ಕಾಗಿ ತಗೊಂಡಿಲ್ಲ. ನನ್ನದೇ ಆದ ಆಲೋಚನೆಗಳಿವೆ. ಮುಖ್ಯಮಂತ್ರಿಗಳೂ ತಜ್ಞರಿದ್ದು ಅವರೊಂದಿಗೆ ಕೂಡಿ ಕೆಲಸ ಮಾಡುತ್ತೇನೆ ಎಂದರು.
Author: AIN Author
ಮಧುಮೇಹದ ವಿಷಯಕ್ಕೆ ಬಂದಾಗ ಶಿಸ್ತುಬದ್ಧ ಆಹಾರವು ಆರೋಗ್ಯಕರ ಜೀವನಶೈಲಿಗೆ ಪ್ರಮುಖವಾಗಿದೆ. ಮಧುಮೇಹದ ನಂತರದಲ್ಲಿ ಅನುಭವಿಸುವ ಸಾಮಾನ್ಯ ಪರಿಣಾಮವೆಂದರೆ ತೂಕನಷ್ಟ.ಆದರ್ಶ ದೇಹದ ತೂಕವನ್ನು ಸಾಧಿಸುವ ಉದ್ದೇಶವು ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪುನಃ ಸ್ಥಾಪಿಸುವುದರೊಂದಿಗೆ ಸಂಬಂಧವನ್ನು ಹೊಂದಿದೆ. ಆದ್ದರಿಂದ ಮಧುಮೇಹಿಗಳು ಅಗತ್ಯವಾದ ಆಹಾರ ಮಾರ್ಪಾಡುಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ನೈಸರ್ಗಿಕ ಮತ್ತು ತಾಜಾ ಆಹಾರ ಪದಾರ್ಥಗಳು ಇದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಧಾನ್ಯಗಳು: ಓಟ್ಸ್, ಬಾರ್ಲಿ, ಕ್ವಿನೋವಾ ಮುಂತಾದ ಧಾನ್ಯಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಚಿಯಾ ಬೀಜಗಳು: ಚಿಯಾ ಬೀಜಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳಲ್ಲಿ ಕಡಿಮೆಯಾಗಿದೆ. ಚಿಯಾ ಬೀಜಗಳ ಸೇವನೆಯು ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ಅವರು ಆಹಾರದ ಹೀರಿಕೊಳ್ಳುವಿಕೆಯ ಪ್ರಮಾಣವನ್ನು ನಿಧಾನಗೊಳಿಸುತ್ತಾರೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಣ್ಣುಗಳು: ಹೆಚ್ಚು ಹಣ್ಣುಗಳನ್ನು, ವಿಶೇಷವಾಗಿ ಸ್ಟ್ರಾಬೆರಿ, ದ್ರಾಕ್ಷಿ ಮತ್ತು ಸೇಬುಗಳನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ…
ಮೊದಲೆಲ್ಲ ಪೋಸ್ಟ್ ಆಫೀಸ್ ಎಂದರೆ ಪತ್ರ ವ್ಯವಹಾರ ಮಾತ್ರ ಇತ್ತು. ಆದರೀಗ, ಅಂಚೆ ಕಚೇರಿಗಳು ಬ್ಯಾಂಕ್‌ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್ ಆಫೀಸ್‌ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಪೋಸ್ಟ್ ಆಫೀಸ್ ಬ್ಯಾಂಕ್‌ಗಳಲ್ಲಿ (Post Office Schemes) ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ (Interest) ಸಿಗುವುದರಿಂದ ಹೆಚ್ಚಿನ ಜನ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ (Saving Schemes) ಮೂಲಕ ಲಾಭ ಗಳಿಸುತ್ತಿದ್ದಾರೆ. ಹಾಗಾದರೆ, ಭಾರತೀಯ ಅಂಚೆ ಇಲಾಖೆ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನೀವು ಪೋಸ್ಟ್ ಆಫೀಸ್ ಜಾರಿಗೊಳಿಸಿರುವ ಈ ಹೊಸ ಹೂಡಿಕೆ ಯೋಜನೆಯ ಲಾಭವನ್ನು ಬಳಸಿಕೊಳ್ಳಬಹುದು. ತಿಂಗಳಿಗೆ ಕೇವಲ 1500 ರೂಪಾಯಿಗಳ ಹೂಡಿಕೆಯಲ್ಲಿ ನೀವು 35 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಹಾಗಾದ್ರೆ ಈ ಯೋಜನೆಯಿಂದ ಸಿಗುವ ಲಾಭವೇನು ಎಂದು ತಿಳಿಯುವುದಾದ್ರೆ. ಭಾರತೀಯ ಅಂಚೆ ಹಲವು ರೀತಿಯ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಹೂಡಿಕೆದಾರರು ಕೇವಲ 1500 ರೂಗಳನ್ನು ಠೇವಣಿ ಮಾಡಬಹುದು ಮತ್ತು ರೂ 35 ಲಕ್ಷದವರೆಗೆ ಗಳಿಸಬಹುದು. ಈ…
ಸೂರ್ಯೋದಯ: 06.41 AM, ಸೂರ್ಯಾಸ್ತ : 06.04 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಹೇಮಂತ ಋತು, ತಿಥಿ: ಇವತ್ತು ಚೌತಿ 11:55 AM ತನಕ ನಂತರ ಪಂಚಮಿ ನಕ್ಷತ್ರ: ಇವತ್ತು ಆಶ್ಲೇಷ 05:42 AM ತನಕ ನಂತರ ಮಖ ಯೋಗ: ಇವತ್ತು ವಿಷ್ಕುಂಭ02:56 AM ತನಕ ನಂತರ ಪ್ರೀತಿ ಕರಣ: ಇವತ್ತು ಬಾಲವ 11:55 AM ತನಕ ನಂತರ ಕೌಲವ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ12:00: ನಿಂದ 01:30 ವರೆಗೂ ಗುಳಿಕ ಕಾಲ:03:00 ನಿಂದ 04:30 ವರೆಗೂ ಅಮೃತಕಾಲ: 03.56 AM to 05.42 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:40 ವರೆಗೂ ಮೇಷ ರಾಶಿ: ಹೋಟೆಲ್ ಉದ್ಯಮದಾರರಿಗೆ ಧನ ಲಾಭ ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ…
ಬೆಂಗಳೂರು:- 37 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದಾರೆ. ಕಮಲ್ ಪಂತ್, ಅಲೋಕ್ ಕುಮಾರ್ ಸಹಿತ 37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ. ► ಕಮಲ್ ಪಂತ್ – ಡಿಜಿಪಿ, ನೇಮಕಾತಿ ವಿಭಾಗ ► ಅಲೋಕ್ ಕುಮಾರ್ – ವಿಶೇಷ ಆಯುಕ್ತ, ರಸ್ತೆ ಸುರಕ್ಷತಾ ವಿಭಾಗ ► ಸೀಮಂತ್ ಕುಮಾರ್ ಸಿಂಗ್ – ಎಡಿಜಿಪಿ, ಬಿಎಂಟಿಎಫ್ ► ಹರಿಶೇಖರನ್ -ಎಡಿಜಿಪಿ, ಹೋಂ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ► ನಂಜುಂಡಸ್ವಾಮಿ – ಎಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆ ► ಚಂದ್ರಗುಪ್ತ – ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಸಿಸಿಬಿ ► ತ್ಯಾಗರಾಜನ್ – ಐಜಿಪಿ, ಪೂರ್ವ ವಲಯ ► ಅಮಿತ್ ಸಿಂಗ್ – ಐಜಿಪಿ, ಪಶ್ಚಿಮ ವಲಯ
ವಿಜಯಪುರ:- ಕೋವಿಡ್ ಅವ್ಯವಹಾರ ಪ್ರಕರಣ ತನಿಖೆಯಾಗಲಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೋವಿಡ್ ಹೆಸರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದು, ರಾಜ್ಯ ಸರ್ಕಾರ ತನಿಖೆ ನಡೆಸಲಿ’ ಎಂದರು. ‘ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ಆರೋಪವಿದ್ದರೆ, ರಾಜ್ಯ ಸರ್ಕಾರ ಅನುಕಂಪ ತೋರಿಸುವುದು ಅಗತ್ಯವಿಲ್ಲ. ಸಂಬಂಧಪಟ್ಟವರಿಂದ ದಾಖಲೆ ಪಡೆದು ತನಿಖೆ ನಡೆಸಲಿ. ನಾವು ಯಾವುದೇ ಕಾರಣಕ್ಕೂ ಭಯಪಡುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ಶನಿವಾರ ತಿಳಿಸಿದರು. ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಆಗಿದೆ. ಹಣ ಜಮೆ ಮಾಡದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ರಾಜ್ಯದ ಸಚಿವರ ಸ್ಥಿತಿ. ‘ಕೇಂದ್ರ ಸರ್ಕಾರದ ಬಳಿ ನಾನು ಅಥವಾ ಪಕ್ಷದ ಮುಖಂಡರು ಚಾಡಿ, ದೂರುಗಳನ್ನು ಹೇಳಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಭವಿಷ್ಯದಲ್ಲಿ ಪರಿಸ್ಥಿತಿ ಬಂದಂತೆ ಕೇಂದ್ರದಲ್ಲಿ ವರಿಷ್ಠರು ತೀರ್ಮಾನಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಅವರು…
ದಾವಣಗೆರೆ:- ಕಾಂಗ್ರೆಸ್ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರ್ಕಾರದ ನೂನ್ಯತೆಗಳ ಮುಚ್ಚಲು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರವನ್ನ ಬುರುಡೇ ಸರ್ಕಾರವೆಂದು ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಹಣೆಬರಹಕ್ಕೆ ಜನರಿಗೆ ಗ್ಯಾಸ್ ಕೊಡುವ ಯೋಗ್ಯತೆಯೂ ಇಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾದರೆ ಚಾಲೆಂಜ್ ಮಾಡಲಿ. ಸೂರಿಲ್ಲದವರಿಗೆ ಸೂರು ಅಂತಾ 3 ಕೋಟಿ ಮನೆ ಕಟ್ಟಿದ್ದಾಗಿ ಹೇಳುತ್ತಾರೆ. ಆದರೆ, ಮೋದಿ ಸರ್ಕಾರ ಕಳೆದೊಂದು ದಶಕದಲ್ಲಿ 4 ಕೋಟಿ ಮನೆ ಕೊಟ್ಟಿದೆ. ಇದನ್ನು ಸಹಿಸದ ಸಿಎಂ ಬುರುಡೇ ಸರ್ಕಾರವೆನ್ನುತ್ತಾರೆ ಎಂದರು. ಯುಪಿಎ ಆಳ್ವಿಕೆಯಲ್ಲಿ ಶೇ.12ರಷ್ಟು ವಿದ್ಯುತ್ ಕೊರತೆ ಇತ್ತು. ಈಗ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಬೇರೆ ದೇಶಗಳಿಗೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಮುದ್ರಾ, ಸ್ವನಿಧಿ ಯೋಜನೆ, ಡಿಬಿಟಿ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ ಹೀಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಹತ್ತಾರು ಉದಾಹರಣೆ ಕೊಡಬಹುದು…
ಬೆಂಗಳೂರು:- ಹೊರ ರಾಜ್ಯದಿಂದ ರೈಲುಗಳ ಮೂಲಕ ತರುತ್ತಿದ್ದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ರೈಲ್ವೆ ಪೊಲೀಸರು ಜಪ್ತಿ ಮಾಡಿ, ಏಳು ಮಂದಿಯನ್ನು ಬಂಧಿಸಿದ್ದಾರೆ. ರಾಜೇಶ್ ದಾಸ್, ಬಿಹಾರದ ಅಮರ್‌ಜಿತ್ ಕುಮಾರ್, ಒಡಿಶಾದ ನಿತ್ಯಾನಾನದ್ ದಾಸ್, ನಿಕೇಶ್ ರಾಣ, ಜಲಂಧರ್ ಕನ್ಹರ್, ಬೋರೆಬೆಟ್ಟದ ಬೈಕುಂಟಾ ಕನ್ಹರ್ ಹಾಗೂ ಸಾಗರ್ ಕನ್ಹರ್ ಬಂಧಿತರು. ಬಂಧಿತರಿಂದ ₹60ಲಕ್ಷ ಮೌಲ್ಯದ 60 ಕೆ.ಜಿ 965 ಗ್ರಾಂ ಮಾದಕ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ‘ಆರೋಪಿಗಳು ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್, ಶಾಲಿಮರ್ ವಾಸ್ಕೊ ಎಕ್ಸ್‌ಪ್ರೆಸ್‌ಗಳ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳ ಗ್ರಾಹಕರಿಗೆ ಪೂರೈಸಲು ಮಾದಕ ವಸ್ತುಗಳನ್ನು ತರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ರೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಬೆಂಗಳೂರು ನಗರ ಪೊಲೀಸ್ ಠಾಣೆ, ಬೈಯಪನಹಳ್ಳಿ ಪೊಲೀಸ್ ಠಾಣೆ ಹಾಗೂ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಶನಿವಾರ 201 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, 60 ಜನರು ಗುಣಮುಖರಾಗಿದ್ದಾರೆ. 24 ಗಂಟೆಗಳಲ್ಲಿ 7,060 ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. 15 ಜನ ಸೋಂಕಿತರು ಐಸಿಯುನಲ್ಲಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 833ಕ್ಕೆ ಏರಿಕೆಯಾಗಿದೆ. ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಬ್ಬ ಕೋವಿಡ್ ಸೋಂಕಿತ ಸಾವನ್ನಪ್ಪಿದ್ದಾನೆ. ಸೋಂಕಿನ ಪಾಸಿಟಿವಿಟಿ ದರ ಶೇ.2.84 ದಾಖಲಾಗಿದೆ.
ಬೆಂಗಳೂರು:- ಕೋಟ್ಯಂತರ ರೂ. ಮೌಲ್ಯದ ಮರ ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಹೋದರ ವಿಕ್ರಮ್ ಸಿಂಹನನ್ನು ವಶಕ್ಕೆ ಪಡೆಯಲಾಗಿದೆ. ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ 126 ಮರ ಕಡಿದು ಸಾಗಿಸಿದ ಆರೋಪದಡಿ ವಿಕ್ರಮ್ ಸಿಂಹ ವಿರುದ್ಧ ಕೇಸ್ ದಾಖಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ವಿಕ್ರಮ್ ವಿಚಾರಣೆ ಮಾಡಲಾಗುತ್ತಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಜಯಮ್ಮರಿಗೆ ಸೇರಿದ ಸರ್ವೆ ನಂಬರ್ 16/P2ರಲ್ಲಿರುವ 3.10 ಎಕರೆ ಜಮೀನು ಪಡೆದಿದ್ದ ವಿಕ್ರಮ್ ಸಿಂಹ, ಶುಂಠಿ ಬೆಳೆಯಲು ಜಮೀನು ಪಡೆದು ಅಗ್ರಿಮೆಂಟ್ ಮಾಡಿಕೊಂಡಿದ್ದರು. ಬೇಲೂರು ತಹಶೀಲ್ದಾರ್ ಮಮತಾ ಸಮಯಪ್ರಜ್ಞೆಯಿಂದ ಡಿ.16ರಂದು 216 ಮರಗಳ ಮಾರಹೋಮ ಪ್ರಕರಣ ಬೆಳಕಿಗೆ ಬಂದಿತ್ತು. ಒಪ್ಪಂದ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಸೇರಿದಂತೆ ಸೇರಿ 12 ಎಕರೆಯಲ್ಲಿ ಬೆಳೆದಿದ್ದ ಹೊನ್ನೆ, ನಂದಿ, ಗರಿಹೆಬ್ಬೇವು, ಹೆಬ್ಬಲಸು, ಮಾವು, ಹಲಸು ಮರಗಳ ಹನನ ಮಾಡಲಾಗಿದೆ. 25-30 ಲೋಡ್ ಮರ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ಮಮತಾ ಮಾಹಿತಿ ನೀಡಿದ್ದಾರೆ.