ದೊಡ್ಡಬಳ್ಳಾಪುರ: ಗಣಿತ, ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪ್ರಯೋಗಗಳಿಗೆ ವಿಜ್ಞಾನ ಮೇಳವು ವೇದಿಕೆಯಾಯಿತು. ತಾಲೂಕಿನ ವಿವಿಧ ಶಾಲೆಯಿಂದ 1500ಕ್ಕೂ ಅಧಿಕ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳು, ಪ್ರಯೋಗಗಳಲ್ಲಿ ತೊಡಗುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳಲು ವಿಜ್ಞಾನ ಮತ್ತು ಗಣಿತ ಮೇಳವನ್ನ ಆಯೋಜನೆ ಮಾಡಲಾಗಿದೆ ಎಂದು ನವೋದಯ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವೀರೆಗೌಡ ಹೇಳಿದರು. ತಾಲೂಕಿನ ಕೊನಘಟ್ಟ ಸಮೀಪವಿರುವ ನವೋದಯ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಹಾಗೂ ವಿಜ್ಞಾನ ಮೇಳವನ್ನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸ್ವಂತ ಅನುಭವಗಳಿಂದ ಕಲಿಯಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿದೆ ಎಂದರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವುದು, ಪ್ರಾಯೋಗಿಕ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳತ್ತ ಪ್ರೇರಣೆ ನೀಡುವುದು ಮೇಳದ ಉದ್ದೇಶವಾಗಿತ್ತು. ನಮ್ಮ ಈ ಎಲ್ಲ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು. ಶಾಲೆಯ ಆಡಳಿತ ಉಸ್ತುವಾರಿಯಾದ…
Author: AIN Author
ಕ್ರಿಕೆಟಿಗೂ ಬಾಲಿವುಡ್‌ಗೂ ಬಹಳ ಹಳೆಯ ಸಂಬಂಧ. ಕ್ರಿಕೆಟ್ ತಾರೆಯರ ಜೊತೆ ಬಾಲಿವುಡ್ ನಟಿಯರು ಡೇಟಿಂಗ್ ನಡೆಸುವುದು ಹೊಸದೇನಲ್ಲ. ಆದ್ರೆ ಮದುವೆ ಕೂಡ ಆಗುವುದು ಹೊಸದೆನಲ್ಲಾ ಇಲ್ಲಿದೆ ನೋಡಿ ಬಾಲಿವುಡ್ ನಟಿಯರನ್ನು ಮದುವೆಯಾದ ಭಾರತೀಯ ಕ್ರಿಕೆಟಿಗರ ಲೀಸ್ಟ್.! ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅತ್ಯಂತ ಪ್ರಸಿದ್ಧ ಕ್ರಿಕೆಟ್-ಬಾಲಿವುಡ್ ಜೋಡಿ, ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ. 2017ರಲ್ಲಿ ಇಟಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಇವರಿಬ್ಬರೂ ವಿವಾಹವಾದರು. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ವಿರುಷ್ಕಾ ಎಂದು ಕರೆಯುತ್ತಾರೆ. ಕ್ರಿಕೆಟಿಗ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕ್ರಿಕೆಟಿಗ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿಯನ್ನು ವಿವಾಹವಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ಕೆ. ಎಲ್. ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ಮಹೋತ್ಸವ ಜನವರಿ 23 ರಂದು ಅದ್ಧೂರಿಯಾಗಿ ನೆರವೇರಿತು. ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಬಹುಕಾಲದ ಗೆಳತಿ ಹೇಜಲ್…
ದೇವನಹಳ್ಳಿ:- 2024ರ ಹೊಸ ವರ್ಷದಂದು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತವು, 2024ರ ಅತಿಯಾದ ಸಂಭ್ರಮಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ. ಕೆಲವು ಕಡೆ ಜನ ಮೋಜು ಮಸ್ತಿ ಮಾಡಿ, ಕಾನೂನು ಸುವ್ಯವಸ್ಥೆಗೆ ದಕ್ಕೆ ಹಿನ್ನಲೆ, ಕೆಲವರು ಅತಿಯಾದ ಮೋಜು ಮಸ್ತಿಗೆ ಬಿದ್ದು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳೊ ಸಾಧ್ಯತೆ ಹಿನ್ನಲೆ ಕ್ರಮವಹಿಸಲಾಗಿದೆ. ನಿರ್ಬಂಧಿತ ಪ್ರದೇಶಗಳು:- ನೆಲಮಂಗಲದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ದೊಡ್ಡಬಳ್ಳಾಪುರದ ಮಾಕಳಿ ಬೆಟ್ಟದ ಟ್ರಕಿಂಗ್, ದೇವನಹಳ್ಳಿಯ ಆವತಿಬೆಟ್ಟ, ನಂದಿ ಬೆಟ್ಟದ ತಪ್ಪಲಿನಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ನಿಷೇಧ ಮಾಡಲಾಗಿದೆ. ಡಿಸೆಂಬರ್ 30ರಿಂದ ಜನವರಿ 1ರ ಮಧ್ಯರಾತ್ರಿವರೆಗೂ 3ದಿನ ನಿಷೇಧಾಜ್ಞೆ 144ಸೆಕ್ಷನ್ ಜಾರಿ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.
ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ. ಈ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗೇರಿಸಲು ಟಾಕ್ಸಿಕ್ ಟೀಮ್ ರೆಡಿ ಆಗುತ್ತಿದೆ. ಅಂದು ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚಿತ್ರದ ಟೈಟಲ್ ಅನ್ನು ಹೊಸ ರೀತಿಯಲ್ಲೇ ತೋರಿಸಿದ್ದ ಟಾಕ್ಸಿಕ್ ಟೀಮ್, ಗ್ಲಿಂಪ್ಸ್ (Glimpse) ಅನ್ನು ಇನ್ನೂ ಬೇರೆಯದಾಗಿಯೇ ಪ್ರೇಕ್ಷಕರ ಮುಂದೆ ಇಡಲಿದ್ದಾರೆ. ಯಶ್ ಅವರ ಹುಟ್ಟು ಹಬ್ಬ ಮುಗಿಯುತ್ತಿದ್ದಂತೆಯೇ ಸಿನಿಮಾದ ಶೂಟಿಂಗ್ (Shooting) ಕೂಡ ಶುರುವಾಗಲಿದೆ. ಜನವರಿ (January) ಎರಡನೇ ವಾರದಿಂದ ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರೀಕರಣಕ್ಕೆ ಈಗಿನಿಂದಲೇ ಭರ್ಜರಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಯಶ್ (Yash) ಈ ಬಾರಿ ಪ್ಯಾನ್ ಇಂಡಿಯಾವನ್ನೂ ದಾಟಿಕೊಂಡು ಯೋಚನೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಆಯ್ಕೆ ಮಾಡಿಕೊಂಡಿರುವ ಕಥೆ ನೋಡಿದರೆ, ಇದೊಂದು ಹಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ ಕನ್ನಡದ ಸಿನಿಮಾ ಎಂದೇ ಹೇಳಬಹುದು. ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದರೂ, ಅದಕ್ಕೆ ತೊಂದರೆ ಆಗದಿರುವಂತೆ ‘ಟಾಕ್ಸಿಕ್’…
ಬೆಂಗಳೂರು:- ನ್ಯೂ ಇಯರ್ ಸೆಲೆಬ್ರೇಷನ್ ಗೆ ಕೌಂಟ್ ಡೌನ್ ಶುರುವಾಗಿದ್ದು, ನೂತನ ವರ್ಷ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದಾರೆ. ಸೆಲೆಬ್ರೇಷನ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಸ್ಕಾಂ ಅಲರ್ಟ್ ಆಗಿದೆ. ಸೆಲೆಬ್ರೇಷನ್ ನಡೆಯುವ ಸ್ಥಳಗಳಲ್ಲಿ ಬೆಸ್ಕಾಂ ಹೆಚ್ಚುವರಿ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಅವಘಡ ನಡೆಯದಂತೆ ಬೆಸ್ಕಾಂನಿಂದಲೂ ಮುಂಜಾಗೃತ ಕ್ರಮವಹಿಸಲಾಗಿಗೆ. ಬೆಸ್ಕಾಂ ಹಿರಿಯ ಅಧಿಕಾರಿಗಳು ಖುದ್ದು ಫಿಲ್ಡಿಗೆ ಇಳಿದಿದ್ದಾರೆ. ಹೊಸ ವರ್ಷ ಆಚರಣೆಗೆ ಸಜ್ಜಾಗಿರುವ ನಗರದ ಮುಖ್ಯ ಪ್ರದೇಶಗಳಾಗಿರುವ ಎಂ ಜಿ ರಸ್ತೆ , ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ 60 ಅಡಿ ರಸ್ತೆಯ ಎರಡೂ ಬದಿಗಳಲ್ಲಿರುವ ಬೆಸ್ಕಾಂ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಕಾರ್ಯದಕ್ಷತೆಯನ್ನು ಈಗಾಗಲೇ ಬೆಸ್ಕಾಂ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಜೋತು ಬಿದ್ದಿರುವ ವಿದ್ಯುತ್ ತಂತಿಗಳ ಸರಿ ಪಡಿಸಲಾಗಿದೆ. ಹೊಸ ವರ್ಷ ಆಚರಣೆ ನಡೆಯುವ ಪ್ರದೇಶಗಳಲ್ಲಿ ವಿದ್ಯುತ್ ಸಂಬಂಧಿತ ಅಹಿತಕರ ಘಟನೆ ಸಂಭವಿಸದಂತೆ ಈಗಾಗಲೇ ಬೆಸ್ಕಾಂ ಅಧಿಕಾರಿಗಳಿಂದ ಮುಂಜಾಗೃತ ಕ್ರಮ ವಹಿಸಲಾಗಿದೆ.
ಹಾಸನ:- ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದೆಂದಿಗಿಂತಲೂ ನಾವು ಒಗ್ಗಟ್ಟಾಗಿದ್ದೇವೆ, ಒಂದಾಗಿದ್ದೇವೆ. ನಮ್ಮ ನಾಡಿನ ಚಹರೆ ಏನು ಎಂದು ಗೊತ್ತಾಗಿರುವುದು ನಾಡಗೀತೆಯಿಂದ. ಭಾರತ ಒಂದು ಒಕ್ಕೂಟವಾಗಿದ್ದು ಒಂದು ಪವಾಡ. ನಮಗೆ ಕನ್ನಡ ಭಾಷೆ ಹಕ್ಕಾಗಿ ಸಿಕ್ಕಿದ್ದು ಭಾಷಾವಾರು ಪ್ರಾಂತ್ಯದಿಂದ. ಈಗ ದಿಶಾವನ್ನು ಭಾರತ ಮಾಡಲು ಎಲ್ಲಾ ಪ್ರಯತ್ನ ನಡೆಯುತ್ತಿದೆ. ಉತ್ತರ ಭಾರತದಲ್ಲಿ 700 ಲೋಕಸಭಾ ಕ್ಷೇತ್ರಗಳು ಆಗುತ್ತವೆ. ದಕ್ಷಿಣ ಭಾರತದಲ್ಲಿ ಕೇವಲ 117 ಕ್ಷೇತ್ರಗಳು ಮಾತ್ರ ಆಗುತ್ತವೆ ಎಂದಿದ್ದಾರೆ. ದಿಶಾ ಭಾರತ ಅಂದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ ದಿಕ್ಕಿಲ್ಲದವರಾಗುತ್ತೇವೆ ನೆನಪಿಟ್ಟುಕೊಳ್ಳಿ. ಒಕ್ಕೂಟ ಕೊಟ್ಟ ಕನ್ನಡದ ಹಕ್ಕಿನ ಪತ್ರವನ್ನು ಜೋಪಾನ ಮಾಡಬೇಕು. ಈ ಸಂಸ್ಥಾನ ಅತ್ಯಂತ ದೊಡ್ಡ ಸಂಸ್ಥಾನ ಧೈರ್ಯವಾಗಿ ಹೇಳುತ್ತೇನೆ. ಈ ಕ್ಷೇತ್ರದಿಂದ ಒಂದೇ ಒಂದು ವಿನಂತಿ ಮಾಡುತ್ತೇನೆ. ಆ ಸತ್ಪುರುಷನ ಅಭಯ ಎನ್ನುವ ಹೃದಯದ ಕಕ್ಷೆ ಕನ್ನಡಕ್ಕೆ ಬೇಕಾಗಿದೆ. ಈಗ ಭಾಷೆಯಿಂದ ನಮಗೆ ರಾಜ್ಯವಿರಬಹುದು ಮುಂದೆ…
ಬೆಂಗಳೂರು:- ಜನವರಿ 1 ಅಂದರೆ ಹೊಸವರ್ಷದಂದೇ ಹಲವು ಜಿಲ್ಲೆಗಳಲ್ಲಿ ವರುಣನ ಆಗಮನ ಆಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ ರಾಜ್ಯದ ರಾಜಧಾನಿ ಬೆಂಗಳೂರು ಹೊಸವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಹಾಗೆಯೇ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಹವಾಮಾನದಲ್ಲಿಯೂ ಬದಲಾವಣೆ ಆಗುವ ಸಾಧ್ಯೆತೆಯಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಂದು ಮಳೆರಾಯನ ಆಗಮನ ಆಗಲಿದೆ ಅಂತಲೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನವರಿ 1ರಂದು ಕೊಡಗು ಜಿಲ್ಲೆಯ ಕೆಲವು ಕಡೆ ಮತ್ತು ಜನವರಿ 2ರರಂದು ಕೊಡಗು ಮತ್ತು ಚಿಕ್ಕ ಮಗಳೂರು ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆ ಬೀಳುವಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಮುಂದುವರೆಯಲಿದೆ. ಅದರಲ್ಲೂ ವಿಜಯಪುರ, ಕೊಪ್ಪಳ, ಬೀದರ್, ಚಿಕ್ಕಮಗಳೂರು, ಕೋಲಾರ ಭಾಗದಲ್ಲಿ ಚಳಿಯ ಪ್ರಮಾಣ ಸ್ವಲ್ಪ ಹೆಚ್ಚಾಗಿಯೇ ಇರಲಿದೆ ಎಂದು ತಿಳಿಸಿದೆ. ಕಳೆ ಎರಡು ವಾರಗಳಿಂದ ರಾಜ್ಯದ ಯಾವ ಜಿಲ್ಲೆಯಲ್ಲಿಯೂ…
ಗದಗ:- ಅಬಕಾರಿ ಪೊಲೀಸರ ಕಾರ್ಯಾಚರಣೆಯಿಂದ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಕ್ರಾಸ್ ಬಳಿ ಘಟನೆ ಜರುಗಿದೆ ಬೈಕ್ ನಲ್ಲಿ ಸಾಗಿಸೋವಾಗ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದಿದು, ಗೋವಾ ಮದ್ಯ ಸೇರಿ ಒಟ್ಟು 6.69 ಲೀ ಮದ್ಯ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮದ್ಯ ಸಾಗಿಸ್ತಿದ್ದ ವ್ಯಕ್ತಿ ಪರಾರಿ ಆಗಿದ್ದು, ಅಕ್ರಮ ಮದ್ಯ ಸಾಗಾಟ ಕುರಿತು ಪ್ರಕರಣ ದಾಖಲಾಗಿದೆ. ಅಬಕಾರಿ ಉಪ ಆಯುಕ್ತೆ ಲಕ್ಷಿ ಹಾಗೂ ಅಬಕಾರಿ ಉಪ ಅಧೀಕ್ಷಕ ಎ ಬಿ ಮಠಪತಿ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಶಿರಹಟ್ಟಿ ವಲಯ ನಿರೀಕ್ಷಕ ಸಂತೋಷ್ ರಡ್ಡೆರ್, ಸಿಬ್ಬಂದಿಗಳಾದ ಗಿರೀಶ್ ಮುದರೆಡ್ಡಿ, ನಿಂಗಪ್ಪ, ನದಾಫ್, ಸಂತೋಷ್ ಭಾಗಿಯಾಗಿದರು.
ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಅವರ ಎರಡನೇ ಮದುವೆ (Marriage) ನಡೆಯಿತು. ನಟಿ ಮಲೈಕಾ ಅರೋರಾ (Malaika Arora) ವಿಚ್ಛೇದನದ ನಂತರ ಒಂಟಿಯಾಗಿಯೇ ಉಳಿದುಕೊಂಡಿದ್ದ ಅರ್ಬಾಜ್, ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ನಡೆಯುತ್ತಿದ್ದಂತೆಯೇ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ನಟಿ ಮಲೈಕಾ ಅರೋರಾ ರಿಯಾಲಿಟಿ ಶೋನಲ್ಲಿ ನಿರ್ಣಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅವರ ಮದುವೆ ವಿಚಾರ ಪ್ರಸ್ತಾಪಿಸಲಾಯಿತು. ಯಾವಾಗ ಮದುವೆ ಆಗಲಿದ್ದೀರಿ ಎಂದು ಕೇಳಲಾಯಿತು. ಕೊಂಚವೂ ಯೋಚನೆ ಮಾಡದೇ ಮುಂದಿನ ವರ್ಷ ಹೊಸ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟ್ ಮಾಡುತ್ತಿದ್ದಾರೆ. ಸಹಜೀವನ ನಡೆಸುತ್ತಿರುವ ರೀತಿಯಲ್ಲೇ ಬದುಕುತ್ತಿದ್ದಾರೆ. ಅರ್ಜುನ್ ಜೊತೆ ಸಾಕಷ್ಟು ದೇಶಗಳನ್ನೂ ಮಲೈಕಾ ಸುತ್ತಿದ್ದಾರೆ. ಕೊನೆಗೂ ಮದುವೆ ವಿಷಯದ ಕುರಿತು ಮಲೈಕಾ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ತಿಂಗಳು ಮತ್ತು ಡೇಟ್ ಮಾತ್ರ ತಿಳಿಸಿಲ್ಲ.
ಬೆಂಗಳೂರು:- ಸಂಕ್ರಾಂತಿ ವೇಳೆಗೆ ಸಂಕ್ರಾಂತಿ ಹಬ್ಬದ ವೇಳೆಗೆ ನಿಗಮ ಮಂಡಳಿ ನೇಮಕವಾಗುವ ನಿರೀಕ್ಷೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಈ ಸಂಬಂಧ ಮಾತನಾಡಿದ ಅವರು,ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ಕುರಿತು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ನಾಯಕರು ಕೂಡ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿದ್ದು, ಎಲ್ಲರ ಜತೆ ಚರ್ಚೆ ಮಾಡಬೇಕು ಎಂದರು. ಜನವರಿಯಲ್ಲಿ ದಿನಕ್ಕೆ ಎರಡು ಅಥವಾ ಮೂರು ವಿಧಾನಸಭೆ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೆಹಲಿ ಹಾಗೂ ಬೇರೆ ಕಡೆ ಪ್ರವಾಸ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಜ.10ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜತೆಗೆ ಸಭೆ ನಡೆಯಲಿದೆ. ಜ.4ರಂದು ದೆಹಲಿಯಲ್ಲಿ ಇದೇ ವಿಷಯವಾಗಿ ಸಭೆ ನಿಗದಿಯಾಗಿದ್ದು, ಕೆಲವು ಸಚಿವರು ವರದಿ ನೀಡಿದ್ದಾರೆ. ಅದರಂತೆಯೇ ಸಮೀಕ್ಷೆ ಮಾಡಬೇಕಿದ್ದು, ದೆಹಲಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ…