ಬೆಂಗಳೂರು: ಹೊಸ ವರ್ಷ ಆಚರಣೆಗೆ ಸಜ್ಜಾಗಿರುವ ನಗರದ ಮುಖ್ಯ ಪ್ರದೇಶಗಳಾದ ಎಂ ಜಿ ರಸ್ತೆ , ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ 60 ಅಡಿ ರಸ್ತೆಯು ಎರಡೂ ಬದಿಗಳಲ್ಲಿರುವ ಬೆಸ್ಕಾಂ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಕಾರ್ಯದಕ್ಷತೆಯನ್ನು ಬೆಸ್ಕಾಂ ಹಿರಿಯ ಅಧಿಕಾರಿಗಳು ಪರಿಶೀಲಿಶಿದರು. ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿ ಪಡಿಸಲಾಯಿತು. https://ainlivenews.com/16-days-bank-holiday-in-january-2024/ ಈ ಮೂರು ಸ್ಥಳಗಳಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯನ್ನು ಇನ್ನೊಮ್ಮೆ ಮಾಡಲಾಯಿತು. ಹಾಗೆಯೇ ಹೊಸ ವರ್ಷ ಆಚರಣೆ ನಡೆಯುವ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ಸಂಬಂದಿತ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕಾವಲಿಗೆ ಬೆಸ್ಕಾಂ ಸಿಬ್ಬಂದಿಯನ್ನು ಭಾನುವಾರ ನಿಯೋಜಿಸಲಾಗುವುದು.
Author: AIN Author
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಗೋಳಿಸಬೇಕು, ಕನ್ನಡ ಹೋರಾಟಗಾರರನ್ನು ಈ ಕೂಡಲೇ ಜೈಲಿನಿಂದ ಬಿಡುಗಡೆ ಗೊಳಿಸಬೇಕೆಂದು ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳಿಂದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕರವೇ ನಾರಾಯಣ ಗೌಡ ಸೇರಿದಂತೆ ಇತರೆ ಹೋರಾಟಗಾರರು ಕಾರ್ಯಕರ್ತರನ್ನು ಕೊಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಅಂತ ಹೇಳಿ ಇವತ್ತು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. https://ainlivenews.com/16-days-bank-holiday-in-january-2024/ ಕೂಡಲೇ ನಮ್ಮ ಕನ್ನಡ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಕಡ್ಡಾಯ ಮಾಡಬೇಕು ಇಲ್ಲದಿದ್ದರೆ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಹೋರಾಟ ಮುಂದುವರೆಸುತ್ತವೆ ಅಗತ್ಯ ಬಿದ್ದರೆ ಬಂದ್ ಕೂಡ ಮಾಡುತ್ತವೆ ಅಂತ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಸಿದರು, ಇನ್ನ ಅನ್ಯ ಭಾಷೆಯ ಚಿತ್ರಗಳು ರಾಜ್ಯದಲ್ಲಿ ಬ್ಯಾನ್ ಆಗ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನ ಇದೇ ವೇಳೆ ಮಾತನಾಡಿದ ಸಾ…
ಬೆಂಗಳೂರು: ನೇಮಕಾತಿ ಆದೇಶ ಪ್ರತಿಗಾಗಿ ನೂರಾರು ಆಕಾಂಕ್ಷಿಗಳು ಕೆಪಿಟಿಸಿಎಲ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆಪಿಸಿಎಲ್ ನಿಂದ ಆರ್ಡರ್ ಕಾಪಿ ಯಾವಾಗ ಕೊಡ್ತೀರಾ ಅಂತ ಬಿತ್ತಿ ಪತ್ರ ಕಾರಿಗೆ ಅಂಟಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಕಚೇರಿಯ ಗೇಟ್ ನ ಮುಂಭಾಗ ದಲ್ಲಿ ಭಿತ್ತಿ ಪತ್ರ ಅಂಟಿಸಿದ ಕಾರನ್ನು ಅಡ್ಡಲಾಗಿ ನಿಲ್ಲಿಸಿ ಯಾವುದೇ ಕಾರುಗಳು ಒಳಗೆ ಹಾಗೂ ಹೊರಗೆ ಹೋಗದಂತೆ ಗೇಟ್ ಗೆ ಅಡ್ಡ ನಿಲ್ಲಿಸಿ ಗೇಟ್ ಮುಂಭಾಗ ಕೂತು ಕೆಪಿಟಿಸಿಎಲ್ ಗೆ ದಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು. https://ainlivenews.com/16-days-bank-holiday-in-january-2024/ ಇನ್ನ ಕೆಪಿಟಿಸಿಎಲ್ ನಿಂದ 2022 ಜನವರಿಯಂದು 1500 ಎಇ, ಜೆಇ ಹುದ್ದೆಗೆ ಅರ್ಜಿಯನ್ನು ಸ್ವೀಕರಿಸ ಲಾಗಿತ್ತು ನಂತರ ಜುಲೈ 2022ರಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆದಿದ್ದು ಜನವರಿ 2023 ಫಲಿತಾಂಶ ನೀಡಲಾಗಿದೆ, ನಂತರ ದಾಖಲಾತಿ ಪರಿಶೀಲಿಸಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದಾರೆ ಹೊರತು ಇನ್ನೂ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ, ಪರೀಕ್ಷೆ ನಡೆದು ಎರಡು ವರ್ಷವಾದ್ರೂ ಇನ್ನೂ ನೇಮಕಾತಿ…
ದೊಡ್ಡಬಳ್ಳಾಪುರ: ಪ್ರಪಂಚದಲ್ಲಿ ಜ್ಞಾನವೇ ಶ್ರೇಷ್ಠ. ಜ್ಞಾನವಂತರು ಎಲ್ಲಿ ಬೇಕಾದರೂ ಬದುಕಬಹುದು. ಜಗತ್ತಿನ ಸರ್ವಶ್ರೇಷ್ಠ ಎಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಜನಿಸಿದ ಈ ಕಾಲಮಾನ ಜ್ಞಾನವಂತರ ಯುಗ ಎನಿಸಿದೆ ಎಂದು ಸಾಹಿತಿ, ನಟ ಮಹದೇವ್ ಚಿಕ್ಕಹೆಜ್ಜಾಜಿ ಅಭಿಪ್ರಾಯಪಟ್ಟರು. ನಗರದ ಪ್ರತಿಷ್ಠಿತ ಗುರುಕುಲ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಸಂಭ್ರಮ 2023-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2019 ರಲ್ಲಿ ಪ್ರಾರಂಭವಾದ ಗುರುಕುಲ ಶಾಲೆ ನಾಲ್ಕೇ ವರ್ಷದಲ್ಲಿ ಎತ್ತರಕ್ಕೆ ಬೆಳೆದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಶಾಲೆ ನಡೆಸುವುದು ತುಂಬಾ ಕಷ್ಟದ ಕೆಲಸ. ಒಂದು ಸಂಸ್ಥೆ ಕಟ್ಟಲು ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಎಂಬ ನಾಲ್ಕು ಪಿಲ್ಲರ್ ಗಳು ಅತ್ಯಗತ್ಯ. ಆಡಳಿತ ಮಂಡಳಿ ಬದ್ಧತೆಯಿಂದಾಗಿ ಶಾಲೆಗೆ ಉತ್ತಮ ಹೆಸರು ಬಂದಿದೆ. ಮಕ್ಕಳಿಗೆ ಉತ್ತಮ ವಿದ್ಯೆ ನೀಡುವ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚು ತರಬೇತಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಶಾಲೆಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು. ಮಕ್ಕಳ ಎದುರು ಪೋಷಕರು ಜಗಳ ಆಡವಾಡಬಾರದು. ಜಗಳದ ವೇಳೆ…
ಉಡುಪಿ: ಕಾರು ಡಿವೈಡರ್ ಎರಿ ಲೈಟ್ ಕಂಬಕ್ಕೆ ಢಿಕ್ಕಿ ಚಾಲಕ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಂಬದಕೋಣೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಕಾರವಾರದಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಡಿವೈಡರ್ ಎರಿ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. https://ainlivenews.com/16-days-bank-holiday-in-january-2024/ ಕಾರು ಚಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಪ್ರದ್ಯೋತ್ ಮ್ರತ ದುರ್ದೈವಿ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ಪರಿಶೀಲನೆ ನಡೆಸಿ ಈ ಘಟನೆ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೊಡಗು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಅರ್ಜಿ ಗ್ರಾಮದ ಬರಪೊಳೆಯ ಕೊಂಗಣ ನದಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಷಿಕ್ ಕುಶಾಲಪ್ಪ (20), ಆಕಾಶ್ ಬಿದ್ದಪ್ಪ (20), ಸುದೀಶ್ ಅಯ್ಯಪ್ಪ (20) ಎಂದು ಗುರುತಿಸಲಾಗಿದೆ. https://ainlivenews.com/16-days-bank-holiday-in-january-2024/ ಕೊಡಗಿನ ಪೊನ್ನಂಪೇಟೆ ಸಿಇಟಿ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಐವರ ತಂಡ ವೀಕೆಂಡ್ ಹಿನ್ನೆಲೆಯಲ್ಲಿ ಕೊಂಗಣ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಿದ್ದರಿಂದ 3 ಕೊಚ್ಚಿ ಹೋಗಿದ್ದಾರೆ. ಇನ್ನುಳಿದ ಇಬ್ಬರು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿ ದ್ದಂತೆ ಸ್ಥಳಕ್ಕೆ ಪೊನ್ನಂಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Sharukh Khan) ಪುತ್ರಿ ಸುಹಾನಾ ಖಾನ್ (Suhana Khan) ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸುಹಾನಾ ಸೌಂದರ್ಯಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಸುಹಾನಾ ನಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ ಹಾಟ್ ಆಗಿ ನಟಿ ಸುಹಾನಾ ಖಾನ್ ಪೋಸ್ ಕೊಟ್ಟಿದ್ದಾರೆ. ನಟಿಯ ಅಂದವನ್ನ ಪಡ್ಡೆಹುಡುಗರು ಹಾಡಿ ಹೊಗಳುತ್ತಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್ ಆಗಿ ನಟಿ ಪೋಸ್ ನೀಡಿದ್ದಾರೆ. ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನಾ ನಟಿಸಿದ್ದರು. ಚೊಚ್ಚಲ ಸಿನಿಮಾದಲ್ಲಿ ಸುಹಾನಾ ಪುಟ್ಟ ಪಾತ್ರ ಮಾಡಿದ್ರೂ ಕೂಡ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು ಇದೀಗ ಸುಹಾನಾ ಖಾನ್ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಕಲ ತಯಾರಿ ಮಾಡಿಕೊಳ್ತಿದ್ದಾರೆ.
ಹಾಸನ: ನಂದಗೋಡನಹಳ್ಳಿಯಲ್ಲಿ ಅಕ್ರಮವಾಗಿ ಮರಗಳ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಆನಂತರ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ವಾರದ ಹಿಂದೆ, ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪದ ಮೇರೆಗೆ ಅವರ ವಿರುದ್ಧ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಆಧರಿಸಿ ಅವರನ್ನು ವಶಕ್ಕೆ ಪಡೆಯಲು ವಿಕ್ರಂ ಅವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಆದರೆ, ವಿಕ್ರಂ ಅವರು ತಲೆಮರೆಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು. https://ainlivenews.com/16-days-bank-holiday-in-january-2024/ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಅರಣ್ಯಾಧಿಕಾರಿಗಳಿಗೆ, ಅವರು ಬೆಂಗಳೂರಿನಲ್ಲಿ ಇರುವ ಕುರಿತಾಗಿ ಮಾಹಿತಿ ಸಿಕ್ತಿತ್ತು. ಹಾಗಾಗಿ, ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು ಅವರನ್ನು ಬೆಂಗಳೂರಿನಲ್ಲೇ ಇರುವ ಜಾರುಬಂಡೆ ಕಾವಲ್ ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಆನಂತರ ಅವರನ್ನು ಬಂಧಿಸಿ ಹಾಸನಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಏಜೆಂಟ್ ಅಲ್ಲ. ಕಾಂಗ್ರೆಸ್‌ಗೂ ಯತ್ನಾಳ್‌ಗೂ (Basanagouda Patil Yatnal) ಸಂಬಂಧ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ (M.B.Patil) ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದ್ದಂತೆ ಕಾಣುತ್ತಿದೆ. ಯತ್ನಾಳ್ ಹಿಂದಿನಿಂದ ಹೇಳುತ್ತ ಬಂದಿರುವುದು ಎಲ್ಲವೂ ಸತ್ಯ. ಹೀಗಾಗಿಯೇ ಯತ್ನಾಳ್ ವಿರುದ್ಧ ಬಿಜೆಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಶಿಸ್ತು ಕ್ರಮ ಆಗದೇ ಇರುವುದು ನೋಡಿದರೆ ಅವರ ಬಳಿ ಎಲ್ಲ ದಾಖಲೆ ಇದ್ದಂತೆ ಇದೆ. ಸರ್ಕಾರ ಕೂಡ ತನಿಖೆ ಮಾಡ್ತಾ ಇದೆ. ಕೊರೊನಾ ಸಂದರ್ಭದಲ್ಲಿ ಗುತ್ತಿಗೆದಾರರ ಅಸೋಸಿಯೇಷನ್ ಆರೋಪ ಸೇರಿ ಎಲ್ಲ ತನಿಖೆ ಮಾಡ್ತೇವೆ. ಸರ್ಕಾರ ಸುಮ್ಮನೆ ಕುಳಿತಿಲ್ಲ ಎಂದು ತಿಳಿಸಿದರು. https://ainlivenews.com/16-days-bank-holiday-in-january-2024/ ಜಾತಿ ಜನಗಣತಿ ವಿಚಾರದಲ್ಲಿ ಪದೇ ಪದೇ ಹೇಳಿಸಬೇಡಿ. ಹಿಂದೂ ಲಿಂಗಾಯತ, ಹಿಂದೂ ಬಣಜಿಗ, ಹಿಂದೂ ಸಾದರ ಎಂದು ಜಾತಿ ಜನಗಣತಿಯಲ್ಲಿ ಬರೆಸಿದ್ದಾರೆ. 2ಎ ಮೀಸಲಾತಿ ಸಲುವಾಗಿ ಬೇರೆ ಬೇರೆ ಬರೆಸಿದರೆ ಯಾವುದೇ ಪ್ರಯೊಜನ ಇಲ್ಲ. 17-22% ನಾವು…
ದಕ್ಷಿಣ ಕೊರಿಯಾ: ಮನುಷ್ಯ ಮತ್ತು ವಸ್ತುವಿನ ನಡುವಿನ ವ್ಯತ್ಯಾಸವನ್ನು ಪತ್ತೆ ಮಾಡುವಲ್ಲಿ ವಿಫಲವಾದ ರೋಬಾಟ್, ವ್ಯಕ್ತಿಯನ್ನು ಜಜ್ಜಿ ಸಾಯಿಸಿದ ಘಟನೆ ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ. ವ್ಯಕ್ತಿಯು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ತರಕಾರಿ ಬಾಕ್ಸ್ ಹಾಗೂ ಆತನ ನಡುವಿನ ವ್ಯತ್ಯಾಸವನ್ನು ಅರಿಯುವಲ್ಲಿ ರೋಬಾಟ್ ಸಂಪೂರ್ಣವಾಗಿ ವಿಫಲವಾಗಿದೆ. ಮೆಣಸು ತುಂಬಿದ್ದ ಪೆಟ್ಟಿಗೆಗಳನ್ನು ಕಟ್ಟಿಗೆ ಪಟ್ಟಿಗಳ ಮೇಲೆ ಇರಿಸುವಂಥ ಜವಾಬ್ದಾರಿಗಳನ್ನು ನೀಡಲಾಗಿತ್ತು. ಆದರೆ, ಈ ವೇಳೆ ವ್ಯಕ್ತಿ ಹಾಗೂ ತರಕಾರಿ ಬುಟ್ಟಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ರೋಬಾಟ್ ವಿಫಲವಾಗಿದ್ದು, ವ್ಯಕ್ತಿಯನ್ನು ಜಜ್ಜಿ ಸಾಯಿಸಿದೆ. ರೋಬಾಟ್ ಈ ಹಂತದಲ್ಲಿ ಸಂಪೂರ್ಣ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿತು. ತರಕಾರಿ ಬುಟ್ಟಿ ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಹಿಡಿದುಕೊಂಡ ರೋಬಾಟ್ ಆತನನ್ನು ಕನ್ವೇನರ್ ಬೆಲ್ಟ್‌ಗೆ ಆತನ ಮುಖ ಹಾಗೂ ಎದೆಯ ಭಾಗವನ್ನು ಅಪ್ಪಳಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿಯೇ ಸಾವು ಕಂಡಿದ್ದಾನೆ ಎಂದು ದಕ್ಷಿಣ ಕೊರಿಯಾದ ನ್ಯೂಸ್ ಏಜೆನ್ಸಿ ತಿಳಿಸಿದೆ. https://ainlivenews.com/attention-students-mphil-not-recognized-ugc-notice-to-stop-admission/ ಆ ವ್ಯಕ್ತಿ ರೋಬೋಟ್‌ನ ಸೆನ್ಸಾರ್‌ನಲ್ಲಿ ತಪಾಸಣೆ ನಡೆಸುತ್ತಿದ್ದ.…