ಬೆಂಗಳೂರು: ಬೆಂಗಳೂರಿನ (Bengaluru) ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಮಾಲ್ ಆಫ್ ಏಷ್ಯಾ (Mall Of Asia) ಮುಂದಿನ 15 ದಿನಗಳ ಕಾಲ ಬಂದ್ ಆಗಲಿದೆ. ಅಲ್ಲದೇ ಮಾಲ್ ಆಫ್ ಏಷ್ಯಾ ಬಳಿ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ. ಮಾಲ್ ಆಫ್ ಏಷ್ಯಾ ಮೇಲೆ ಕರವೇ (Karnataka Rakshana Vedike) ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಭಾನುವಾರದಿಂದ 15 ದಿನಗಳವರೆಗೆ ಮಾಲ್ ಅನ್ನು ಮುಚ್ಚಲಾಗುತ್ತದೆ. ಮಾತ್ರವಲ್ಲದೇ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅನ್ನು ಜಾರಿ ಮಾಡಿ ಆದೇಶ ನೀಡಲಾಗಿದೆ. ಇತ್ತೀಚಿಗಷ್ಟೆ ಬೆಂಗಳೂರಿನಾದ್ಯಂತ ಕರವೇ ಕಾರ್ಯಕರ್ತರು ಕನ್ನಡ ನಾಮಫಲಕ (Kannada Nameboard) ಹಾಕುವಂತೆ ಹೋರಾಟ ಮಾಡಿದ್ದರು. ನಾಮಫಲಕದಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಿ ಕರವೇ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ್ದು, https://ainlivenews.com/16-days-bank-holiday-in-january-2024/ ಪ್ರತಿಭಟನೆ ವೇಳೆ ಮಾಲ್ ಆಫ್ ಏಷ್ಯಾಕ್ಕೆ ದಾಳಿ ನಡೆಸಿದ್ದರು. ಈ ವೇಳೆ ನಾಮಫಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮುಂಜಾಗ್ರತೆ ಹಿನ್ನೆಲೆ 144…
Author: AIN Author
ಬೆಂಗಳೂರು: ನಿಗಮ ಮಂಡಳಿಗಳಲ್ಲಿ (Corporation Board) ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತ ರಿಗೂ ಸ್ಥಾನಮಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರಿನ (Bengaluru) ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಎಲ್ಲಾ ನಾಯಕರು ಕೂತು ಚರ್ಚೆ ಮಾಡುತ್ತೇವೆ. ನೇಮಕದ ಪಟ್ಟಿ ಒಂದು ಹಂತಕ್ಕೆ ಬಂದಿದೆ. ಕೇಂದ್ರ ನಾಯಕರು ಕೂಡಾ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿರುತ್ತಾರೆ. ಅದಕ್ಕಾಗಿ ಎಲ್ಲರ ಜೊತೆ ಚರ್ಚೆ ಮಾಡಬೇಕು. ಸಂಕ್ರಾಂತಿ ಹಬ್ಬದ ವೇಳೆಗೆ ನಿಗಮ ಮಂಡಳಿ ನೇಮಕ ಆಗಬಹುದು ಎನ್ನುವ ನಿರೀಕ್ಷೆ ಇದೆ ಎಂದರು. ಜನಸಾಮಾನ್ಯರು ತಮ್ಮ ಕಷ್ಟಗಳನ್ನು ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರ ಕಷ್ಟಗಳನ್ನು ಕೇಳಲು ನಾವೇ ಅವರ ಬಳಿ ಹೋಗಬೇಕು. ಅವರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬಾಗಿಲಿಗೆ ಬಂತು ಸರ್ಕಾರ, https://ainlivenews.com/16-days-bank-holiday-in-january-2024/ ಸೇವೆಗೆ ಇರಲಿ ಸಹಕಾರ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ತಿಂಗಳು ದಿನಕ್ಕೆ ಎರಡು ಅಥವಾ…
ಧಾರವಾಡ: ಧಾರವಾಡದ ವಿವಿಧ ಸ್ಲಂಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನ್ನತನಗರದ ಸಾದಿಕ್ ಕಬಾಡಿ ಹಾಗೂ ಹಾಸ್ಮಿನಗರದ ನಾಜಿಮ್ ಶೇಖ್ ಎಂಬುವವರೇ ಬಂಧಿತ ಆರೋಪಿಗಳು. https://ainlivenews.com/16-days-bank-holiday-in-january-2024/ ಇವರು ಸ್ಲಂ ಏರಿಯಾಗಳಲ್ಲಿನ ಗಾರೆ ಕೆಲಸದವರನ್ನೇ ಟಾರ್ಗೆಟ್ ಮಾಡಿ ಅವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು 200 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಮರಗಳ್ಳತನ ಪ್ರಕರಣದಲ್ಲಿ ತನ್ನ ಸಹೋದರ ವಿಕ್ರಂ ಸಿಂಹನನ್ನು (Vikram Simha) ಬಂಧಿಸಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ (Pratap Simha) ಕೊನೆಗೂ ಮೌನ ಮುರಿದಿದ್ದಾರೆ. ಪ್ರಕರಣದ ಎಫ್‌ಐಆರ್ ಪ್ರತಿಯನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಯನ್ನು ಹಂಚಿಕೊಂಡಿರುವ ಸಂಸದ ‘ಎಫ್‌ಐಆರ್’ ಎಂದಷ್ಟೇ ಬರೆದಿದ್ದಾರೆ. ಎಫ್‌ಐಆರ್ ಪ್ರತಿಯಲ್ಲಿ ಪ್ರಕರಣದ ಮೊದಲ ಆರೋಪಿ ರಾಕೇಶ್ ಶೆಟ್ಟಿ ಎಂದಿದೆ. 2ನೇ ಆರೋಪಿ ಜಯಮ್ಮ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದ ಆರೋಪಿ ಅಲ್ಲದೇ ಇದ್ದರೂ ವಿಕ್ರಂ ಬಂಧನ ಎಂದು ಮಾರ್ಮಿಕವಾಗಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. https://ainlivenews.com/16-days-bank-holiday-in-january-2024/ ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬೇಲೂರು ಬಳಿಯ ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಆರೋಪದಡಿ ವಿಕ್ರಂ ಸಿಂಹನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏನಿದು ಪ್ರಕರಣ? ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್‌ಎಫ್‌ಒ ಜಮೀನಿನ ಮಾಲೀಕರಾದ…
ಬೆಂಗಳೂರು: ಶಾಲಾ ಪಠ್ಯಪುಸ್ತಕ ಮುದ್ರಣದಲ್ಲಿಯೂ ಪರ್ಸಂಟೇಜ್ ದಂಧೆ ನಡೆಯುತ್ತಿದೆ. ಮುದ್ರಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಪ್ರಾಥಮಿಕ ಪ್ರೌಡಶಿಕ್ಷಣ ಇಲಾಖೆಯಲ್ಲಿ ಪ್ರತಿವರ್ಷ ಪಠ್ಯ ಪುಸ್ತಕ ಮುದ್ರಣ ಮಾಡಲಾಗುತ್ತದೆ. ಈಗ ದಕ್ಷಿಣ ಭಾರತದ ಎಲ್ಲಾ ಮುದ್ರಣ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಕೊಡಲಾಗಿದೆ. https://ainlivenews.com/16-days-bank-holiday-in-january-2024/ ರಾಜ್ಯದವರಿಗೆ ನೀಡದೇ ಇತರೆ ಮುದ್ರಕರು ಟೆಂಡರ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಿ ವ್ಯಾಪಾರ ಮಾಡುತ್ತಾರೆ. ಒಬ್ಬ ಮುದ್ರಕ ಹೇಳಿದನಂತೆ, ಸ್ವಲ್ಪ ಬಿಗಿ ಮಾಡಿಕೊಳ್ಳಿ. 10% ಅಲ್ಲ15% ಕೊಡುತ್ತಾರೆ ಎಂದು. ಇದು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆಯುತ್ತಿರುವುದು. ಪ್ರಶ್ನೆ ಮಾಡಿದರೆ ಕುಮಾರಸ್ವಾಮಿ ಭ್ರಮನೀರಸಗೊಂಡಿದ್ದಾನೆ ಅಂತಾರೆ. ಏನು ಮಾಡಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಗುತ್ತಿಗೆದಾರರ ಬಳಿ ಕಮೀಷನ್ ಕಿತ್ತು ತಿನ್ನಲಾಗುತ್ತಿದೆ. ಈಗ ಅವರು ಪುಸ್ತಕ ಮುದ್ರಕರನ್ನೂ ಬಿಡುತ್ತಿಲ್ಲ ಎಂದು ಅವರು ಟೀಕಿಸಿದರು. ಅಲ್ಪಸಂಖ್ಯಾತರ ಹೆಸರಿನಲ್ಲೂ ಕೊಳ್ಳೆ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ…
ಧಾರವಾಡ: ಆಕೆ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾದ ಶಿಕ್ಷಕಿ..ನಿವೃತ್ತಿ ನಂತರ ಆಕೆ ತನ್ನ ಪಾಡಿಗೆ ಬದುಕಿದರೆ ಇಷ್ಟೊತ್ತಿಗೆ ಸುಂದರ ಜೀವನ ಅವಳದಾಗುತ್ತಿತ್ತು..ದುಡ್ಡಿನ ಆಸೆಗೆ ಬಿದ್ದ ಆಕೆ ದುಡ್ಡು ಪಡೆದವನಿಂದಲೆ ಬೀಕರವಾಗಿ ಹತ್ಯೆಯಾಗಿದ್ದಾಳೆ..ಅಷ್ಟಕ್ಕೂ ಯಾರು ಆಕೆ..ಆಕೆಯ ಹತ್ಯೆಗೆ ಕಾರಣ ಏನು ಗೊತ್ತಾ..ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್. ಹೀಗೆ ಖಾಲಿ ಖಾಲಿ ಮನೆ.. ಮನೆ ಎದುರು ನೆಮ್ಮದಿ ಎನ್ನುವ ಬೋರ್ಡ್..ಆದ್ರೆ ಆ ನೆಮ್ಮದಿಯೇ ಇಂದು ದುಡ್ಡಿನ ಆಸೆಗೆ ಜೀವನ ಅಂತ್ಯಗೊಳಿಸಿದೆ..ಧಾರವಾಡದ ನಗರದ ಓಂ ನಗರದಲ್ಲಿರುವ ಈ ನೆಮ್ಮದಿ ಎನ್ನುವ ಮನೆಯಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ ನಡೂರಮಠ ಏಕಾಂಗಿ ಜೀವನ ನಡೆಸುತ್ತಿದ್ದರು..ಗಂಡ ಮಕ್ಕಳು ಇಲ್ಲದೆ ಏಕಾಂಗಿಯಾಗಿದ್ದ ಗಿರಿಜಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು..ಇತ್ತೀಚೆಗೆ ನಿವೃತ್ತಿ ಯಾಗಿ ಜೀವನ ನಡೆಸುತ್ತಿದ್ದರು..ಆದ್ರೆ ಇದೆ 15ರಂದು ಗಿರಿಜಾ ಸಾವನ್ನಪ್ಪಿದರು. ಆ ಸಾವು ಮೊದಮೊದಲು ಸಹಜ ಅಂತಲೇ ಭಾವಿಸಲಾಗಿತ್ತು..8ದಿನಗಳ ಬಳಿಕ ಸಿಕ್ಕ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿ ಸಿಕ್ಕಿತ್ತು..ಆದ್ರೆ ಯಾವಾಗ ಬಡ್ಡಿ ವ್ಯವಹಾರ ಗೊತ್ತಾಗುತ್ತೋ ಆಗ ಇದು ಮರ್ಡರ್ ಅನ್ನೋದು ತನಿಖೆಯ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾದ ಅಬ್ಬರ ಎರಡನೇ ವಾರಕ್ಕೂ ಮುಂದುವರೆದಿದೆ. ಎರಡನೇ ದಿನದ ಕಲೆಕ್ಷನ್ 17.35 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮೊದಲ ದಿನ ಮತ್ತು ಎರಡನೇ ದಿನ ಸೇರಿ ಒಟ್ಟು ಎರಡು ದಿನಕ್ಕೆ 37.14 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿತ್ತು. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. https://ainlivenews.com/16-days-bank-holiday-in-january-2024/ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಜೋರಾಗಿದೆ. ಮೊನ್ನೆಯಿಂದ ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್ ಡಿಬಾಸ್ ಎಂದು…
ಬೆಂಗಳೂರು : ಹೊಸ ವರ್ಷಕ್ಕೆ ಒಂದು ದಿನ ಮುಂಚೆಯೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಹೌದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ಆಡಳಿತ ವಿಭಾಗಕ್ಕೆ ಚುರುಕು ಮುಟ್ಟಿಸಲು ಮೇಜರ್ ಸರ್ಜರಿ ಮಾಡಿದೆ. ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. https://ainlivenews.com/16-days-bank-holiday-in-january-2024/ ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ, ಹೊಸ ವರ್ಷಕ್ಕೆ ಗಿಫ್ಟ್ ನೀಡಿದೆ. ಕಮಲ್ ಪಂಥ್ ಅವರನ್ನು ಡಿಜಿಪಿ ನೇಮಕಾತಿ ವಿಭಾಗಕ್ಕೆ ನೇಮಿಸಿದೆ. ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರೋಡ್ ಸೇಫ್ಟಿ (ರಸ್ತೆ ಸುರಕ್ಷಾ ವಿಭಾಗ) ವಿಭಾಗದ ಸ್ಪೆಷಲ್ ಕಮಿಷನರನ್ನಾಗಿ ಮಾಡಿದೆ. ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿಎಂಟಿಎಫ್ಗೆ ವರ್ಗಾವಣೆ ಮಾಡಿದೆ.
ಕಲಬುರಗಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನ ಖಾಯಮಾತಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಅಂತ ರಾಜ್ಯ ಸರ್ಕಾರಿ ಅತಿಥಿ ಉಪನ್ಯಾಸಕರ ಸಂಘ ತಿಳಿಸಿದೆ..ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚಂದ್ರಕಾಂತ ಶಿರೋಳಿ, ಜನೆವರಿ 1ರಂದು ತುಮಕೂರಿನ ಸಿದ್ಧಗಂಗಾ ಮಠದಿಂದ ಪಾದಯಾತ್ರೆ ಶುರುಮಾಡ್ತೇವೆ ಅಂದ್ರು.. ಜನೆವರಿ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ದಲ್ಲಿ ಸಭೆ ಮಾಡ್ತೇವೆ ಅಂತ ಹೇಳಿದ್ರು.ಪಾದಯಾತ್ರೆ ಉದ್ದಕ್ಕೂ 10 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಭಾಗಯಾಗಲಿದ್ದು ಸರ್ಕಾರದ ವಿರುದ್ಧ ಅತಿದೊಡ್ಡ ಹೋರಾಟ ಮಾಡ್ತೇವೆ ಅಂತ ಎಚ್ಚರಿಕೆ ಕೊಟ್ರು..
ಮುಂಬೈ: ಮಹಾರಾಷ್ಟ್ರದ (Maharashtra) ಗ್ಲೌಸ್ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ (Fire Accident) ಆರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಮುಂಜಾನೆ 2 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಖಾನೆಯ ಒಳಗೆ ಸಿಲುಕಿದ್ದ 6 ಜನ ಸಾವಿಗೀಡಾಗಿದ್ದಾರೆ. ಕೂಡಲೇ ಆವರಣದೊಳಗೆ ಮಲಗಿದ್ದ ಕಾರ್ಮಿಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ ವಿಷಯ ತಿಳಿಸಿದ್ದಾರೆ. https://ainlivenews.com/16-days-bank-holiday-in-january-2024/ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿತ್ತು. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 6 ಜನರ ಮೃತದೇಹಗಳನ್ನ ಹೊರತೆಗೆದಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಮೋಹನ್ ಮುಂಗ್ಸೆ ತಿಳಿಸಿದ್ದಾರೆ. ಬೆಳಗಿನ ವೇಳೆಗೆ ಬೆಂಕಿ ಹತೋಟಿಗೆ ಬಂದಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.