ಜನನ ದಿನಾಂಕ ಮತ್ತು ಸಮಯದ ಆಧಾರ ಮೇಲೆ ನಿಮ್ಮ ಜನ್ಮಜಾತಕ ಬರೆದು ಅದನ್ನು ಸರಿಯಾಗಿ ಪರೀಕ್ಷಿಸಿ ಈ ಕೆಳಕಂಡ ಮಾಹಿತಿಗಳು ಇದ್ದರೆ”ಲಕ್ಷ್ಮಿ ಯೋಗ” ಉಂಟಾಗುತ್ತದೆ. ರಾಶಿಚಕ್ರದ ಚಿಹ್ನೆಯು ಏರಿಕೆಯ ಸ್ಥಾನದಲ್ಲಿ ಯೋಗವನ್ನು ಪಡೆದುಕೊಂಡರೆ ಉತ್ತಮ ಅದೃಷ್ಟದಿಂದ ಕೂಡಿರುತ್ತದೆ. ಲಕ್ಷ್ಮಿ ದೇವಿಯು ತ್ರಿಕೋನ ಭಾವ ದೇವತೆ ಆಗಿರುತ್ತಾಳೆ. ಭಗವಾನ್ ವಿಷ್ಣು ಕೇಂದ್ರ ಭವನದ ದೇವರು. ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ಒಂತ್ತನೇ ಮನೆಯ ಅಧಿಪತಿ ಉದಾತ್ತನಾಗಿದ್ದರೆ ಉತ್ತಮ ಅದೃಷ್ಟವು ಪಡೆದುಕೊಳ್ಳುವವರು. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಒಂಬತ್ತನೇ ಮನೆ ಅದು “ಭಾಗ್ಯಸ್ಥಾನ”. ಒಂಬತ್ತನೇ ಮನೆಯಲ್ಲಿ ತ್ರಿಕೋನ ಉಂಟಾದರೆ ಅದನ್ನು “ಶುಭ ಲಕ್ಷ್ಮಿ ಯೋಗ” ಎಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಸಂಪತ್ತಿನ ಆದಾಯ ಉಂಟಾಗುವುದು. ಐಷಾರಾಮಿ ಜೀವನ ನಡೆಸುವರು. ಐಷಾರಾಮಿ ವಸ್ತುಗಳ ಬಳಕೆ ಮತ್ತು ಸಂತೋಷವನ್ನು ಪಡೆದುಕೊಳ್ಳುವರು. ಕೇಂದ್ರ ತ್ರಿಕೋನ ರಾಜ…
Author: AIN Author
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ. ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ. 2ನೇ ಮನೆಯ ಕುಟುಂಬ ಸ್ಥಾನ 4ನೇ ಮನೆ ಸುಖದ ಸ್ಥಾನ, 9ನೇ ಮನೆ ಭಾಗ್ಯದ ಸ್ಥಾನ, 11ನೇಮನೆಲಾಭಸ್ಥಾನವಾಗಿರುತ್ತದೆ. ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ…
ಇಂಗ್ಲಿಷ ಹೊಸ ವರ್ಷ ಸೂರ್ಯೋದಯ: 06:50, ಸೂರ್ಯಾಸ್ತ : 05:48 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ , ಕೃಷ್ಣ ಪಕ್ಷ, ದಕ್ಷಿಣಾಯನಮ್ ಹೇಮಂತ ಋತು, ತಿಥಿ: ಪಂಚಮಿ, ನಕ್ಷತ್ರ: ಮಖಾ, ಯೋಗ: ಆಯುಷ್ಮಾನ್, ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ:03:00 ನಿಂದ 04:30 ತನಕ ಅಮೃತಕಾಲ: ಬೆ.4:28 ನಿಂದ ಬೆ.6:17 ತನಕ ಅಭಿಜಿತ್ ಮುಹುರ್ತ: ಬೆ.11:57 ನಿಂದ ಮ.12:41 ತನಕ ಸೋಮಶೇಖರ್ ಗುರೂಜಿ B.Sc M.935348 8403 ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. ಮೇಷ ರಾಶಿ: ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ…
ಬೆಂಗಳೂರು:- ಬ್ರಿಗೆಡ್ ರೋಡ್ ನಲ್ಲಿ ಜಾಗೃತಿ ಫಲಕ ಕಂಡು ಬಂದಿದೆ. ಹೊಸ ವರ್ಷ ಆಚರಣೆಗೆ ಬಂದ ಯುವಕ ನಿಂದ ಜಾಗೃತಿ ಫಲಕ ಹಾಕಲಾಗಿದೆ. ಎಲ್ಲರಿಗೂ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸಿಗಲಿ ಎಂದು ಆಗ್ರಹಿಸಿದ್ದಾರೆ. ಮತ್ತು ಕನಿಷ್ಟ ವೇತನದೊಂದಿಗೆ ನಾವು ಕಾಯುತ್ತಿದ್ದೇವೆ. ನಾವು ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಈ ರೀತಿ ಯುವಕ ಫಲಕ ಹಿಡಿದಿದ್ದಾನೆ.
ಬಳ್ಳಾರಿ:-ಹೊಸ ವರ್ಷವನ್ನ ಸಂಭ್ರಮದಿಂದ ಆಚರಣೆ ಮಾಡಲು ಗಣಿನಾಡು ಬಳ್ಳಾರಿ ನಗರದ ಬೇಕರಿಗಳಲ್ಲಿ ಕೇಕ್ ಗಳ ಮಾರಾಟ ಭರ್ಜರಿಯಿಂದ ಸಾಗಿದೆ. ನಗರದ ರೇಣುಕಾ ಬೇಕರಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಗೆಯ ಕೇಕ್ ಗಳನ್ನ ಸಿದ್ದಪಡಿಸಲಾಗಿದ್ದು, ಹೊಸ ವರ್ಷ ಆಚರಣೆ ಮಾಡುವವರಿಗೆ ಕೇಕ್ ಗಳು ಆಕರ್ಷಕವಾಗಿವೆ. ತರಹೇವಾರಿ ಕೇಕ್ ಗಳನ್ನ ಜನರು ಖರೀದಿ ಮಾಡುತ್ತಿದ್ದಾರೆ.ಕಳೆ 2-3 ದಿನಗಳಿಂದಲೂ ಸುಮಾರು 30 ಕ್ಕೂ ಹೆಚ್ಚು ಕೆಲಸಗಾರರು ಕೇಕ್ ಗಳನ್ನ ಸಿದ್ದಪಡಿಸುತ್ತಿದ್ದಾರೆ. ವೆನೆಲ್ಲಾ, ಸ್ಟ್ರಾಬರಿ, ಹನಿ, ಚಾಕ್ ಲೆಟ್,ಐಸ್ ಕೇಕ್ ಸೇರಿದಂತೆ ತರಹೇವಾರಿ ಕೇಕ್ ಗಳು ಸಿದ್ದಗೊಂಡಿವೆ. ಈತ್ತ ಯುವಕ-ಯುವತಿಯರು ಕೇಕ್ ಖರೀದಿಸಲು ಮುಗಿಬಿದ್ದಿದ್ದಾರೆ.
ಬೆಂಗಳೂರು:- ಬಿಬಿಎಂಪಿ ವಾರ್ಡ್‍ಗಳನ್ನು 75 ಉಪ ವಿಭಾಗಗಳಾಗಿ ವಿಂಗಡಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 225 ವಾರ್ಡ್‍ಗಳನ್ನು ಪುನರ್ ರಚಿಸಿ ಅಧಿಸೂಚಿಸಲಾಗಿರುವ ಸರಕಾರ ಆದೇಶವನ್ನು ಪಾಲಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಈ ವಾರ್ಡ್‍ಗಳನ್ನು 75 ಕಂದಾಯ, ಕಾಮಗಾರಿ ಮತ್ತು ಆರೋಗ್ಯ ಉಪ ವಿಭಾಗಗಳಾಗಿ ವಿಂಗಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ. ಹೊಸ ಉಪ ವಿಭಾಗ ಹಾಗೂ ವಾರ್ಡ್‍ಗಳ ಅನ್ವಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಿದ್ದಾರೆ.
ತುಮಕೂರು:- ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಇಂದು ಒಂದೇ ದಿನ 18 ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ತುಮಕೂರು, ಗುಬ್ಬಿ, ಕುಣಿಗಲ್, ಪಾವಗಡ, ಶಿರಾ, ಹಾಗೂ ಕೊರಟಗೆರೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಪತ್ತೆ ಆಗಿದೆ. ತುಮಕೂರು – 3, ಕುಣಿಗಲ್ – 3, ಕೊರಟಗೆರೆ – 3, ಗುಬ್ಬಿ-4, ಪಾವಗಡ-4,ಶಿರಾ-01 ಒಟ್ಟು ಜಿಲ್ಲೆಯಲ್ಲಿ ಇದುವರೆಗೆ 26 ಸಕ್ರೀಯ ಪ್ರಕರಣ ದಾಖಲಾಗಿದೆ. ಹೀಗಾಗಿ ಕೋವಿಡ್ ಪಾಸಿಟಿವ್ ಬಂದವರ ಕುಟುಂಬದ ಮೇಲೂ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ.
ಬೆಂಗಳೂರು:- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 1 ಸಾವಿರ ಗಡಿ ಮುಟ್ಟಿದೆ. ರಾಜ್ಯಾದ್ಯಂತ 3527 ಮಂದಿಗೆ ಕೋವಿಡ್ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 229 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಕೋವಿಡ್ ಪಾಸಿಟಿವಿಟಿ ದರ 6.49 ದಾಖಲಾಗಿದ್ದು, ಮರಣ ಪ್ರಮಾಣ ದರ ಶೂನ್ಯವಿದೆ. ಒಟ್ಟು 1000 ಸಕ್ರಿಯ ಪ್ರಕರಣಗಳಲ್ಲಿ 943 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. 57 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 22 ಮಂದಿ ಐಸಿಯುನಲ್ಲಿದ್ದಾರೆ. ಇನ್ನೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ ಇಲ್ಲದಿದ್ದರೂ ಜಾಗೃತಿ ಮೂಡಿಸುವಂತೆ ಆರೋಗ್ಯ ಇಲಾಖೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ, ಕೋವಿಡ್ ನಿಯಮಾವಳಿ ಅನುಷ್ಠಾನದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬೀದರ್:- ಸರ್ಕಾರದ ಮೇಲೆ ಗೂಬೆ ಕೂರಿಸಿದ್ರೆ ಪ್ರತಾಪ್ ಸಿಂಹಾಗೆ ಶೋಭೆ ತರಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಕ್ರಮವಾಗಿ ಮರಗಳ ಮಾರಣಹೋಮ ಹಿನ್ನಲೆ ವಿಕ್ರಂ ಸಿಂಹ ಬಂಧನ ಘಟನೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸುಮ್ಮನೆ ಸಿಎಂ ಮತ್ತು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದು, ಇದನ್ನು ಗಮನಿಸಿದರೆ ಈ ಅಪರಾಧದಲ್ಲಿ ಅವರು ಸಹ ಪರೋಕ್ಷವಾಗಿ ಭಾಗಿಯಾಗಿದ್ದಾರೆಂದು ಭಾವಿಸಬೇಕಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿರುಗೇಟು ಕೊಟ್ಟಿದ್ದಾರೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಶುಂಠಿ ಬೆಳೆಯುವುದಾಗಿ ಕರಾರು ಮಾಡಿಕೊಂಡು, ಹಾಡುಹಗಲಲ್ಲೇ 126 ಬೆಲೆ ಬಾಳುವ ಮರಗಳನ್ನು ಕಡಿದಿದ್ದಾರೆ. ಒಬ್ಬ ಜವಾಬ್ದಾರಿಯುತ ಸಂಸದರಾಗಿರುವ ಪ್ರತಾಪ್, ನಿಷ್ಪಕ್ಷಪಾತ ತನಿಖೆ ಮತ್ತು ಯಾರೇ ತಪ್ಪಿತಸ್ಥರಿರಾಗಲಿ ಅವರಿಗೆ ಶಿಕ್ಷೆ ಆಗಲಿ ಎಂದು ಹೇಳಬೇಕಿತ್ತು ಎಂದರು. ಆದರೆ, ಕಾನೂನು ಉಲ್ಲಂಘಿಸಿ, ತನಿಖೆಯ ದಾರಿ ತಪ್ಪಿಸಲು ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕಲು ಅಧಿಕಾರದ ದುರುಪಯೋಗ ಮಾಡಿಕೊಳ್ಳಲಾಗಿದೆ. ತಮ್ಮ ಮಗನನ್ನು…
ಬೆಂಗಳೂರು:- ಸಮಸಮಾಜ ನಿರ್ಮಾಣವಾಗಲು ಅಸಮಾನತೆ ತೊಲಗಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಮಾಜದಲ್ಲಿನ ವೈರುಧ್ಯಗಳು, ಜಾತೀಯತೆ, ಅಸಮಾನತೆಗಳು ತೊಲಗಿದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸಮಸಮಾಜ ನಿರ್ಮಾಣವಾಗಲು ಅಸಮಾನತೆ ತೊಲಗಲೇಬೇಕು. ಮನುಷ್ಯನ ಸ್ವಾರ್ಥದಿಂದ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿ ಕಾರ್ಯನಿರ್ವಹಿಸುವುದು ಎಲ್ಲರ ಜವಾಬ್ದಾರಿ. ಸಂವಿಧಾನ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸಂವಿಧಾನದ ಆಶಯಗಳನ್ನು ಈಡೇರಿಸಲು ದುರ್ಬಲ ವರ್ಗದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು. ಮನುಷ್ಯತ್ವ ಅಂತಿಮ ಗುರಿಯಾಗಬೇಕು. ಅಲ್ಪಮಾನವರಾಗದೇ, ವಿಶ್ವಮಾನವರಾಗುವತ್ತ ನಮ್ಮೆಲ್ಲರ ಪ್ರಯತ್ನವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಚಲನೆ ಉಂಟಾಗುತ್ತದೆ. ಸಮಾಜದಲ್ಲಿ ಬದಲಾವಣೆ ಆಗುವವರೆಗೂ ಹೋರಾಟ ನಡೆಸುವ ಗುರಿಯಿಂದಲೇ ‘ಹೋರಾಟಕ್ಕೆ ಸಾವಿಲ್ಲ’ ಎಂಬ ಕೃತಿಯನ್ನು ಹೊರತರಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವನ್ನು ಹತ್ತಿಕ್ಕಬಾರದು. ಆದರೆ ಹೋರಾಟಗಳು ಅಹಿಂಸಾತ್ಮಕವಾಗಿರಬೇಕು ಎಂದು…