ಚಿಕ್ಕಬಳ್ಳಾಪುರ:- ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆ ಇದೆ ಎಂದರು. ಸಿದ್ದರಾಮಯ್ಯ ಮುಸ್ಲಿಮರಿಗೆ 11 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಮಾಡಿದರು, ಶಾದಿ ಭಾಗ್ಯ ತಂದರು. ಅವರು ಹಿಂದೂ ವಿರೋಧಿ. ಅದಕ್ಕಾಗಿಯೇ ಇದೆಲ್ಲಾ ಮಾಡಿದ್ದಾರೆ ಎಂದರು. ಶ್ರೀರಾಮ ಈ ಆದರ್ಶ ಪುರುಷ. ಕಳೆದ 30 ವರ್ಷಗಳಿಂದಲೂ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸುತ್ತಿದ್ದೆವು. ಆ ಪ್ರಕಾರ ಮಂದಿರ ಕಟ್ಟಿದ್ದೇವೆ. ಮಂದಿರ ಕಟ್ಟುವುದಷ್ಟೇ ಅಲ್ಲ ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿ ನಿಲುವು ಮತ್ತು ನಮ್ಮ ಗುರಿ ಎಂದರು. ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ. ಕಾಂಗ್ರೆಸ್ ನವರಿಂದ ಹೆಚ್ಚಿಗೆ ಏನೂ ಬಯಸುವುದಿಲ್ಲ. ರಾಮ ಅನ್ನೋದು ಅವರ ಜನ್ಮದಲ್ಲೇ ಬರಲ್ಲ. ಅವರು ಟಿಪ್ಪು ಸಂಸ್ಕೃತಿಯವರು. ರಾಮಜಪ ಮಾಡಿದ ಕಾರಣಕ್ಕೆ ನಾವು ರಾಮಮಂದಿರ ನಿರ್ಮಿಸಿದೇವೆ.…
Author: AIN Author
ಬೆಂಗಳೂರು ಬುಲ್ಸ್, ಹೊಸ ವರ್ಷಕ್ಕೆ ಉಡುಗೊರೆ ನೀಡಿದೆ. ಸತತ 2 ಸೋಲುಗಳ ನಂತರ ಮತ್ತೆ ಲಯಕ್ಕೆ ಮರಳಿದೆ. ಅಲ್ಲದೆ, 10ನೇ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಬುಲ್ಸ್, 6ನೇ ಲಗ್ಗೆಯಿಟ್ಟಿದೆ. ತಮಿಳ್ ತಲೈವಾಸ್ ವಿರುದ್ಧ 37-38 ಅಂಕಗಳಿಂದ ರಣರೋಚಕ ಗೆಲುವು ಸಾಧಿಸಿದೆ. ಶಾಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣದಲ್ಲಿ ಜರುಗಿದ ಲೀಗ್ನ 50ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಅದ್ಭುತ ಹೋರಾಟ ನಡೆಸಿತು. ತಮಿಳ್ ತಂಡ ನೀಡಿದ ಪ್ರಬಲ ಹೋರಾಟದ ನಡುವೆ ಮೈಕೊಡವಿ ನಿಂತ ಗೂಳಿಗಳು ಲೀಗ್ನಲ್ಲಿ 4ನೇ ಜಯದ ನಗೆ ಬೀರಿದರು. ಒಂದು ಹಂತದಲ್ಲಿ ಸೋಲುವ ಭೀತಿಗೆ ಒಳಗಾಗಿದ್ದ ಬುಲ್ಸ್, ನಂತರ ಬಲವಾಗಿ ಪುನರಾಗಮನ ಮಾಡಿ ಎದುರಾಳಿ ಆಘಾತ ನೀಡಿತು. ಬೆಂಗಳೂರು ಪರ ಭರತ್ ಮತ್ತೆ ಮಿಂಚಿದರು. 4 ಬೋನಸ್ ಸೇರಿ 9 ರೇಡಿಂಗ್ ಅಂಕಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನೀರಜ್ ನರ್ವಾಲ್ 5, ವಿಕಾಸ್ ಖಂಡೋಸ್, ಪರ್ತೀಕ್, ಸೌರಭ್ ನಂದಲ್ ತಲಾ ಅಂಕ ಪಡೆದರು. ಸುರ್ಜೀತ್…
ಧಾರವಾಡ : ಇಷ್ಟು ದಿನ ಮನೆ, ಬ್ಯಾಂಕ್, ಎಟಿಎಂ, ದೇವಸ್ಥಾನಗಳ ಹುಂಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ರೈತರ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮೈಲಾರಪ್ಪ ಕುರಗುಂದ ಅವರ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಹತ್ತಿಯನ್ನು ಕಳ್ಳರ ಗ್ಯಾಂಗ್ ಬಿಡಿಸಿಕೊಂಡು ಪರಾರಿಯಾಗಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ ರೈತ ಮಲ್ಲಪ್ಪನಿಗೆ ಹೊಲದಲ್ಲಿನ ಹತ್ತಿ ಇಲ್ಲದನ್ನು ನೋಡಿ ಶಾಕ್ ಆಗಿದೆ. ಹತ್ತಿ ಬೆಳೆ ಫಸಲು ನೀಡಲು ಆರಂಭದಿಂದ ಒಂದು ಬಾರಿ ಹತ್ತಿ ಬೀಡಿಸಿ ಮಾರಾಟ ಮಾಡಿದ್ದು, ಎರಡನೇ ಬಾರಿ ಬೀಡಿಬೇಕಾಗಿತ್ತು. ಮನೆಯಲ್ಲಿ ಕೆಲಸ ಕಾರ್ಯಗಳಿಂದ ಹಾಗೂ ಆಳಿನ ಸಮಸ್ಯೆಯಿಂದ ಹಾಗೆ ಬಿಟ್ಟಿದ ಹತ್ತಿ ಬೆಳೆ ಈಗ ರೈತನ ಕೈತಪ್ಪಿ ಕಳ್ಳರ ಪಾಲಾಗಿದೆ. 4 ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನ 4 ರಿಂದ 5 ಕ್ವಿಂಟಲ್ ಹತ್ತಿ ಕಳ್ಳತನವಾಗಿದೆ. ಖದೀಮ ಕಳ್ಳರ ಈ…
ಕಳೆದ 2 ದಿನಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೊಸ ವರ್ಷದ ದಿನವಾದ ಇಂದು ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ತಿಳಿಯಿರಿ.. 22 ಕ್ಯಾರೆಟ್ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,855 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,840 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 58,550 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,85,500 ರೂ. ಇದೆ. 24 ಕ್ಯಾರೆಟ್ ಚಿನ್ನದ ದರ 1 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಇಂದು 6,387 ರೂ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 51,096 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,870 ರೂ. ಕೊಡಬೇಕು. 100 ಗ್ರಾಂ ಚಿನ್ನದ ದರ 6,38,700 ರೂ ಇದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ…
ಕೆನಡಾ ಮೂಲದ ದರೋಡೆಕೋರ (Canada-Based Gangster) ಲಖ್ಬೀರ್ ಸಿಂಗ್ ಲಾಂಡಾನನ್ನ ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ (MHA) ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಮಾಹಿತಿ ಪ್ರಕಾರ, 1989ರಲ್ಲಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ (Lakhbir Singh Land) 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ. ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಖಲಿಸ್ತಾನಿ ಗ್ರೂಪ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಗೆ ಸೇರಿದ್ದಾನೆ. 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ (Punjab Police) ಇಂಟೆಲಿಜೆನ್ಸ್ ಮುಖ್ಯಕಚೇರಿ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಈತ ಭಾಗಿಯಾಗಿದ್ದನು ಎಂದು ವಿವರಿಸಲಾಗಿದೆ. https://ainlivenews.com/16-days-bank-holiday-in-january-2024/ ಅಲ್ಲದೇ ಈತ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಪೂರೈಕೆ ಮಾಡುತ್ತಿದ್ದ. ಪಂಜಾಬ್‌ನಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಣ ಪೂರೈಕೆ ಮಾಡುತ್ತಿದ್ದ.…
ನವದೆಹಲಿ:- ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಭಾರತ ಸೇರಿ ವಿಶ್ವದಾದ್ಯಂತ ಸಂಭ್ರಮಾಚಾರಣೆ ಮುಗಿಲು ಮುಟ್ಟಿತ್ತು. ಭಾರತವು ಸೇರಿದಂತೆ ವಿಶ್ವದಾದ್ಯಂತ ಜನರು 2023ಕ್ಕೆ ವಿದಾಯ ಹೇಳಿ 2024 ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಮೋಜು ಮಸ್ತಿಯಲ್ಲಿ ತೊಡಗಿ ಯುವ ಜನತೆ ಹುಚ್ಚೆದ್ದು ಕುಣಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಬೆಂಗಳೂರು, ದಿಲ್ಲಿ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಂಭ್ರಮದ ಕೇಕೆ ಮುಗಿಲು ಮುಟ್ಟಿತ್ತು. ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಗಲಾಟೆಗಳು ನಡೆದ ಬಗ್ಗೆ ವರದಿಯಾಗಿವೆ. ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಹಲವರು ಗಣ್ಯರು ಎಕ್ಸ್ ವೇದಿಕೆಯಲ್ಲಿ ಹೊಸ ವರ್ಷದ ಆಗಮನದ ಶುಭಾಶಯಗಳನ್ನು ಕೋರಿದರು. ಅವರ ಟ್ವೀಟ್‌ಗಳು ಸಾಕಷ್ಟು ವೈರಲ್ ಕೂಡಾ ಆದವು. ಹಾಂಕಾಂಗ್, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಭರ್ಜರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು.
ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಇತ್ತೀಚೆಗೆ ಸಾಫ್ಟ್‌ಬ್ಯಾಂಕ್-ಬೆಂಬಲಿತ ಸಂಸ್ಥೆ ಫಸ್ಟ್‌ಕ್ರೈ, ತಾಯಿ ಮತ್ತು ಮಗುವಿನ ಉತ್ಪನ್ನಗಳ ಭಾರತದ ಪ್ರಮುಖ ಓಮ್ನಿಚಾನಲ್ ರಿಟೇಲರ್‌ನಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. IPO-ಬೌಂಡ್ ಕಂಪನಿಯ ಅತಿದೊಡ್ಡ ಷೇರುದಾರರು, ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್, ಸಂಸ್ಥೆಯಲ್ಲಿ ಹೆಚ್ಚುವರಿ ಷೇರುಗಳನ್ನು ಮಾರಾಟ ಮಾಡಿದೆ, ಇದರಿಂದಾಗಿ ಹೆಚ್ಚಿನ ಕುಟುಂಬ ಕಚೇರಿಗಳು ಮತ್ತು ವ್ಯಕ್ತಿಗಳು FirstCry ನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಿಸುತ್ತದೆ. ಇದು ಮುಂದಿನ ವರ್ಷದಲ್ಲಿ ನಿರೀಕ್ಷಿತ ಸಾರ್ವಜನಿಕ ಕೊಡುಗೆಯ ಮೊದಲು ಒಟ್ಟು ದ್ವಿತೀಯ ಷೇರು ಮಾರಾಟವನ್ನು 1,000 ಕೋಟಿ ರೂ.ಗಿಂತ ಹೆಚ್ಚಿನ ಫಸ್ಟ್‌ಕ್ರೈಗೆ ತೆಗೆದುಕೊಳ್ಳುತ್ತದೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ ಜನರು, ಸಾಫ್ಟ್‌ಬ್ಯಾಂಕ್ ಒಟ್ಟು ರೂ 600 ಕೋಟಿಗೆ ಷೇರುಗಳನ್ನು ಮಾರಾಟ ಮಾಡಿದೆ, ಕಂಪನಿಯಲ್ಲಿ ಅದರ ಹಿಡುವಳಿ ಶೇಕಡಾ 25 ಕ್ಕಿಂತ ಕಡಿಮೆಯಾಗಿದೆ. ಮಸಯೋಶಿ ಸನ್ ನೇತೃತ್ವದ ತಂತ್ರಜ್ಞಾನ ಹೂಡಿಕೆದಾರರು ಒಂದೆರಡು ವರ್ಷಗಳ ಹಿಂದೆ ಸುಮಾರು 29-30 ಪ್ರತಿಶತದಷ್ಟು ಹಿಡುವಳಿಯನ್ನು ಕಡಿಮೆ ಮಾಡಿದ್ದಾರೆ.…
ಬೆಂಗಳೂರು:- ಕುಡಿದ ಮತ್ತಿನಲ್ಲಿ ಕಿರಿಕ್ ತೆಗೆದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಬಳಿ ಜರುಗಿದೆ. ಯುವಕ ಶರ್ಟ್ ಹರಿದು ಹಾಕಿ ಹಲ್ಲೆ ನಡೆಸಲಾಗಿದ್ದು, ರಸ್ತೆ ಬದಿಯಲ್ಲಿ ಅರೆಬೆತ್ತಲೆಯಾಗಿ ಯುವಕ ಬಿದ್ದಿದ್ದಾನೆ. ಹಲ್ಲೆಗೊಳಗಾಗಿದ್ದ ಯುವಕನು ಸಹ ಫುಲ್ ಕುಡಿದು ಟೈಟ್ ಆಗಿದ್ದ ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಲ್ಲೆಗೊಳಗಾಗಿ ಬಿದ್ದಿದ್ದ ಯುವಕನನ್ನ ಆಂಬ್ಯುಲೇನ್ಸ್ ಮೂಲಕ ರವಾನೆ ಮಾಡಲಾಗಿದೆ.
ಬೆಂಗಳೂರು:- ಫ್ಲೈ ಓವರ್ ಮೇಲೆ ಹೋಗಲು ಕಾರು ಸವಾರನ ಭಾರೀ ಹೈಡ್ರಾಮ ನಡೆಸಿರುವ ಘಟನೆ ಜರುಗಿದೆ. ಶಾಸಕರ ಬೋರ್ಡ್ ಹಾಕಿಕೊಂಡು ಸವಾರರು ಬಂದಿದ್ದು, ಹಾರ್ಟ್ ಪೇಷಂಟ್ ಇದ್ದಾರೆ ಎಮರ್ಜೆನ್ಸಿ ಹೋಗಬೇಕೆಂದು ಹೈಡ್ರಾಮ ಮಾಡಿದ್ದಾರೆ. ಕಾರಿನಲ್ಲಿ ಹಾರ್ಟ್ ಪೇಷಂಟ್ ಮಹಿಳೆ ಇದ್ದಾರೆಂದು ಕಥೆ ಕಟ್ಟಿದ್ದರು. ಕಾರಿನಲ್ಲಿ ಪರಿಶೀಲನೆ ನಡೆಸಿದ್ರೆ ಮಹಿಳೆ ಇರಲಿಲ್ಲ. ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ಆಸಾಮಿ ಶಾಸಕರ ಬೋರ್ಡ್ ತೆಗೆದಿರುವ ದೃಶ್ಯ ಕಂಡು ಬಂದಿದೆ.
ಬೆಂಗಳೂರು:- ನಗರದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಭಾನುವಾರ ಮಧ್ಯರಾತ್ರಿ ಬರಮಾಡಿಕೊಂಡರು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನ ಪಬ್‌ಗಳು, ಹೋಟೆಲ್‌ಗಳು ತುಂಬಿ ತುಳುಕಿದವು. ಇನ್ನು ರಸ್ತೆಗಳಲ್ಲಿ ಯುವಕ-ಯುವತಿಯರು ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಿಕ್ಕಿಬಿದ್ದ ಮೊಬೈಲ್ ಕಳ್ಳ ಬ್ರಿಗೇಡ್ ರಸ್ತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕುಡಿದು ಮೊಬೈಲ್ ಕಳ್ಳತನಕ್ಕೆ ಕಳ್ಳ ಯತ್ನಿಸಿದ್ದಾನೆ. ಹೀಗಾಗಿ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಆತ ತನ್ನನ್ನು ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಂಡಿದ್ದು ಕಂಡುಬಂತು. ನಂತರ ಆತನಿಂದ…