Author: AIN Author

ದಾವಣಗೆರೆ:- ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಗೆ ಆಗ್ರಹಿಸಿ ದಾವಣಗೆರೆಯಲ್ಲಿ ಇಂದು ಬೃಹತ್ ಹೋರಾಟ ನಡೆಯಲಿದೆ. ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ರಾ.ಹೆದ್ದಾರಿ 48ರಲ್ಲಿ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ನಡೆಸಲಿದ್ದಾರೆ. ಮೊದಲು ಇಷ್ಟಲಿಂಗ ಪೂಜೆ ಬಳಿಕ ಹೆದ್ದಾರಿ ತಡೆದು ಜಯಮೃತ್ಯುಂಜಯ ಶ್ರೀ ಪ್ರತಿಭಟನೆ ನಡೆಸಲಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಲೋಕಸಭೆ ಚುನಾವಣೆಯೊಳಗೆ ನಮಗೆ 2ಎ ಮೀಸಲಾತಿ ಘೋಷಣೆ ಮಾಡುವಂತೆ ಸ್ವಾಮೀಜಿ ಒತ್ತಾಯಿಸುತ್ತಿದ್ದು, ಈಗಾಗಲೇ ಝಳಕಿ, ನಿಪ್ಪಾಣಿ, ಗದಗ, ಬೆಳಗಾವಿ, ಹುಬ್ಬಳ್ಳಿಯಲ್ಲಿ‌ ಸ್ವಾಮೀಜಿ ಹೋರಾಟ ನಡೆಸಿದ್ದಾರೆ. ಇಂದು ಬೃಹತ್ ಹೋರಾಟಕ್ಕೆ ಮೀಸಲಾತಿ ವಿಚಾರ ಸಾಕ್ಷಿಯಾಗಲಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗುವ ಸಾಧ್ಯತೆ ಇದೆ.

Read More

ಕಲಬುರಗಿ;- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಆಶ್ರಯ ನೀಡಿದ್ದ ಇಬ್ಬರನ್ನ ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಅಪಾರ್ಟ್‌ಮೆಂಟಿನ ಮಾಲಿಕ ಶಂಕರಗೌಡ & ಮ್ಯಾನೇಜರ್ ದಿಲೀಪ್ ಬಂಧಿತರು. ಪೋಲೀಸ್ ದಾಳಿವೇಳೆ RD ಪಾಟೀಲ್ ಕೈಗೆ ಸಿಗದೇ ಜಸ್ಟ್ ಮಿಸ್ ಆಗಿದ್ದ.ಆ ವೇಳೆ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ CCTV ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಕಿಂಗ್ ಪಿನ್ ಗೆ ಅಪಾರ್ಟಮೆಂಟ್ ದಲ್ಲಿ ಬಾಡಿಗೆ ಆಧಾರದ ಮೇಲೆ ಆಶ್ರಯ ಕೊಟ್ಟ ಆರೋಪದ ಹಿನ್ನಲೆ ಇದೀಗ ಇಬ್ಬರು ಲಾಕ್ ಆಗಿದ್ದಾರೆ ಎನ್ನಲಾಗಿದೆ..

Read More

ಬಾಗಲಕೋಟೆ: ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ಮುಂಚೆಯೇ ಬಿದ್ದು ಹೋಗುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಬಾಗಲಕೋಟೆ ಜಿಲ್ಲೆಯಲ್ಲಿ ಮಾತನಾಡಿದ ಅವರು, ” ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಸಿಎಂ ಸ್ಥಾನ ವಿವಾದವನ್ನು ಅವರು ಮೊದಲು ಸರಿ ಮಾಡಿಕೊಳ್ಳಲಿ, ಸರ್ಕಾರ ಪತನ ಬಗ್ಗೆ ನಾವು ಕಾಯುತ್ತಿಲ್ಲ. ಬಿಜೆಪಿ ಪಕ್ಷವು ರೈತರ ಪರವಾಗಿದೆ, ರೈತರಿಗೆ ಸರ್ಕಾರ ನ್ಯಾಯ ಕೊಡದೇ ಇದ್ದಲ್ಲಿ ಹೋರಾಟ ಮಾಡಿ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತದೆ ” ಎಂದರು. ಆಪರೇಷನ್ ಹಸ್ತದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು. https://ainlivenews.com/knee-pain-treatment-joint-pain-treatment/ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಬರ ಇದ್ದರೂ ರೈತರ ಕಣ್ಣೀರು ಒರೆಸುವ ಬದಲು ತಮ್ಮ ಶಾಸಕರ, ಸಚಿವರ ಕಣ್ಣೀರು ಒರೆಸುತ್ತಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಸರ್ಕಾರ ಪತನವಾಗುತ್ತದೆ ಎಂದು ತಿಳಿಸಿದ ಕಟೀಲ್, ರಾಜ್ಯದಲ್ಲಿ ಭೀಕರ ಬರಗಾಲದಿಂದ ಮುಖ್ಯಮಂತ್ರಿ ಅವರು ರೈತರೊಂದಿಗೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚೆ ಮಾಡುವ ರೈತರ ಸಮಸ್ಯೆ ಬಗೆ ಹರಿಸಬೇಕಾಗಿತ್ತು.…

Read More

ಬೆಂಗಳೂರು:- ಗೊಂಬೆ ಮಾಸ್ಕ್ ಧರಿಸಿ ಪುಂಡರು ಪುಂಡಾಟ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಏರಿಯಾ ಒಂದರಲ್ಲಿ ಮನೆ ಮುಂದೆ ನಿಲ್ಲಿಸಿದ್ದ 15 ವಾಹನಗಳ ಗಾಜನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಲಗ್ಗೆರೆ ರಾಜೀವ್ ಗಾಂಧಿನಗರ ಬಳಿ ಘಟನೆ ಜರುಗಿದೆ. ಡಿಯೋ ದ್ವಿಚಕ್ರ ವಾಹನದಲ್ಲಿ ಬಂದು ಲಾಂಗು ಮಚ್ಚಿನಿಂದ ಅಟ್ಯಾಕ್‌ ನಡೆದಿದೆ. 15 ವಾಹನಗಳಿಗೆ ಹಾನಿ ಮಾಡಿ ಪುಂಡರು ಪರಾರಿ ಆಗಿದ್ದಾರೆ. ಮದ್ಯ ರಾತ್ರಿ ಮೂವರು ಪುಂಡರಿಂದ ಕೃತ್ಯ ನಡೆದಿದೆ. ರಾಜಗೋಪಾಲ್‌ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆದಿದ್ದು, ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಖ್ಯಾತ ನಿರ್ದೇಶಕರೊಬ್ಬರ ವಿರುದ್ಧ ವಂಚನೆ ದೂರು ದಾಖಲಾಗಿದೆ. ಪೃಥ್ವಿ, ಸವಾರಿ, ಸವಾರಿ-2, ಚಂಬಲ್ ಚಿತ್ರಗಳ ನಿರ್ದೇಶಕ ಜಾಕೋಬ್ ವರ್ಗೀಸ್ ಮೇಲೆ ದೂರು ದಾಖಲಾಗಿದೆ. ಸಾಕ್ಷ್ಯಚಿತ್ರದ ಕಾಪಿರೈಟ್ಸ್ ನೀಡದೆ (ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್‌ಗೆ ವಂಚನೆ ಮಾಡಲಾಗಿದೆ ಎಂದು ದೂರಲಾಗಿದೆ. ಎಚ್‌ಐವಿ ಬಾಧಿತ ಮಕ್ಕಳ ಜೀವನ ಕ್ರಮದ ಬಗ್ಗೆ ಸಂಸ್ಥೆ ಜಾಕೋಬ್‌ ಬಳಿ ವಿಡಿಯೋ ಮಾಡಿಸಿತ್ತು. ʼರನ್ನಿಂಗ್ ಪಾಸಿಟಿವ್ʼ ಎನ್ನುವ ಸಾಕ್ಷ್ಯಚಿತ್ರ ಮಾಡಲು ಫೌಂಡೇಶನ್ ಹಣ ನೀಡಿತ್ತು. ವಿಡಿಯೋ ಚಿತ್ರೀಕರಣ ಮಾಡಿದ್ದ ಜಾಕೋಬ್ ವರ್ಗೀಸ್ ಕಾಪಿರೈಟ್ಸ್ ಅನ್ನು ಸಂಸ್ಥೆಗೆ ನೀಡಿಲ್ಲ ಎಂದು ದೂರಲಾಗಿದೆ. 4 ವರ್ಷದ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ವಿಡಿಯೋ ಚಿತ್ರಿಕರಣ ಮಾಡಿದ್ದ ಜಾಕೋಬ್‌ಗೆ ವಿಡಿಯೋ ಚಿತ್ರಿಕರಣ ಮಾಡಲು ಹಂತ ಹಂತವಾಗಿ ಫೌಂಡೇಶನ್ ಹಣ ನೀಡಿತ್ತು. ಇದೀಗ ಕಾಪಿರೈಟ್ಸ್ ಸಂಸ್ಥೆಗೆ ನೀಡದೆ ತಾನೇ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವ ಆರೋಪ ಬಂದಿದೆ. ಆಸ್ಕರ್ ಅಕಾಡೆಮಿ ಅವಾರ್ಡ್ ವಿಭಾಗದಲ್ಲಿ ತಾನೇ ಕಾಪಿರೈಟ್ಸ್ ಮಾಲೀಕ ಎಂದು ಮಾಹಿತಿ ನೀಡಿದ್ದಾರೆ. ಆಯುಷ್ಮಾನ್ ಚಲನಚಿತ್ರ ಪ್ರಶಸ್ತಿಗೂ ಈ…

Read More

ಭೋಪಾಲ್: ಜನಸಂಖ್ಯಾ ನಿಯಂತ್ರಣದ ಕುರಿತು ಮಾತನಾಡುವ ವೇಳೆ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದ್ದಾರೆ. ಮಧ್ಯಪ್ರದೇಶ (Madhya Pradesh) ಗುಣ ಎಂಬಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರ ವಿರುದ್ಧ ನೀಡುವ ಹೇಳಿಕೆಗಳು ದೇಶವನ್ನೇ ಅವಮಾನಿಸುವಂತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಮೈತ್ರಿಕೂಟದ ದೊಡ್ಡ ನಾಯಕರೊಬ್ಬರು ಬಿಹಾರ ವಿಧಾನಸಭೆಯೊಳಗೆ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. https://ainlivenews.com/knee-pain-treatment-joint-pain-treatment/  ಇಂಡಿಯಾ ಒಕ್ಕೂಟದ ಯಾವೊಬ್ಬ ನಾಯಕನೂ ಇದರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರಿಗೆ ನಾಚಿಕೆಯಾಗಬೇಕು. ಮಹಿಳೆಯರ ಬಗ್ಗೆ ಈ ರೀತಿ ಯೋಚಿಸುವರು ನಿಮಗೆ ಏನಾದರೂ ಒಳ್ಳೆಯದನ್ನು ಮಾಡುವುದು ಸಾಧ್ಯವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ತಾಯಂದಿರು ಮತ್ತು ಸಹೋದರಿಯರ ಬಗ್ಗೆ ಕೆಟ್ಟ ಮನೋಭಾವವನ್ನು ಹೊಂದಿರುವವರು ಇಂದು ನಮ್ಮ ದೇಶವನ್ನು ಅವಮಾನಿಸುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೇ ನೀವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ ಎಂದು ಅವರು ಹೇಳಿದರು. 

Read More

ಬೆಂಗಳೂರು:- ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್​ ತೀರ್ಪು ಪ್ರಕಟವಾಗಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ. ಹಲವು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ಕುರಿತ ತೀರ್ಪನ್ನು ಹೈಕೋರ್ಟ್ ಇಂದು ಪ್ರಕಟಿಸಲಿದೆ. ಸರ್ಕಾರದ ಆದೇಶ ರದ್ದು ಕೋರಿ ಎನ್.ವಿ.ಚಂದನ್ ಸೇರಿದಂತೆ ಪಿಎಸ್​​ಐ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 100 ಅಧಿಕ ಅಭ್ಯರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆಯನ್ನು 2023ರ ಅ.26ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿದೆ. ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ, ಶುಕ್ರವಾರ ಮಧ್ಯಾಹ್ನ ತೀರ್ಪು ಹೊರಹಾಕಲಿದೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಇದಕ್ಕೆ ಪಿಎಸ್​ಐ ಆಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿದ್ದರು. ಬಳಿಕ ಸರ್ಕಾರದ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ)…

Read More

ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ “ಕುಚುಕು” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕ – ವಿತರಕ ಎಂ ಎನ್ ಕುಮಾರ್, ನಿರ್ಮಾಪಕ ಎಂ ಡಿ ಪಾರ್ಥಸಾರಥಿ, ಅದಿತಿ(ವಕೀಲರು), ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಾನು 26ವರ್ಷಗಳಿಂದ ಡ್ಯಾನ್ಸರ್ ಹಾಗೂ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದೆ “ನೃತ್ಯಂ” ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು. ನಾನು ಸಹಾಯಕ ನಿರ್ದೇಶಕನಾಗಿ…

Read More

ದೊಡ್ಡಬಳ್ಳಾಪುರ:- ರಸ್ತೆ ದಾಟುತ್ತಿದ್ದ ಯುವಕ ಹಿಟ್ ಆಂಡ್ ರನ್‌ಗೆ ಬಲಿಯಾಗಿರುವ ಘಟನೆ ಬೆಂಗಳೂರು ‌ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ‌ ರೈಲ್ವೆ ನಿಲ್ದಾಣದ ಬಳಿ ಜರುಗಿದೆ. ಖದೀರ್ ಪಾಷಾ ಮೃತ ದುರ್ದೈವಿ. ಖದೀರ್ ಪಾಷಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೂಟೆ ಹೊರುವ ಕೆಲಸ ಮಾಡಿಕೊಂಡಿದ್ದ ಖದೀರ್ ಪಾಷಾ ಕೆಲಸ ಮುಗಿಸಿ ವಾಪಸ್ ತೆರಳುವ ವೇಳೆ ಘಟನೆ ನಡೆದಿದೆ. ಅಪಘಾತ ಮಾಡಿ ವಾಹನ ನಿಲ್ಲಿಸದೆ ಪರಾರಿಯಾಗಿದೆ. ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮತಾಂತರ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ, ಹಳ್ಳಿ ಹಳ್ಳಿಗಳಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಕಳೆದ 2-3 ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಮುಸ್ಲಿಂ ಮತಾಂತರ ಮಾಡಿದ್ದಾರೆ. ಅಬ್ಬಾಸ್ ಎಂಬಾತನೇ ಮುಸ್ಲಿಂ ಮತಾಂತರ ಮಾಡಿದ್ದಾನೆ. ಕುರುಬ ಸಮೂದಾಯದ ಯುವಕನನ್ನು ಮುಸ್ಲಿಂ ಸಮೂದಾಯಕ್ಕೆ ಮತಾಂತರ ಮಾಡಲಾಗಿದೆ. ಇದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಹರಿಹಾಯ್ದರು.  ರಾಜ್ಯದಲ್ಲಿ ವಾಸಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. https://ainlivenews.com/knee-pain-treatment-joint-pain-treatment/ ಆದರೆ ಇವರು ಮತಾಂತರ ನಿಷೇಧ ಕಾಯಿದೆಯನ್ನು ಗಾಳಿಗೆ ತೂರಿ ಮತಾಂತರ ಪ್ರಕ್ರಿಯೆಯಲ್ಲಿ ಕೆಲವು ದುಷ್ಟರು ತೊಡಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಂಘರ್ಷಕ್ಕೆ ಇಳಿಯುವ ಮಾನಸಿಕತೆಗೆ ತರುತ್ತದೆ ಎಂದರು. ಸದ್ಯ ಮುಸ್ಲಿಂ, ಕ್ರೈಸ್ತ ಸಮೂದಾಯದ ಜನರು ರಾಜ್ಯದಲ್ಲಿ ತಮ್ಮದೇ ಸರ್ಕಾರ ಬಂದಿದೆ ಎಂಬಂತೆ ಸೊಕ್ಕಿನಿಂದ ವರ್ತನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ.…

Read More