ಬೆಂಗಳೂರು: ಸುಧಾಮನಗರದಲ್ಲಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಫೋಟೋಶೂಟ್‍ಗೆ ಬಿಡಿದ್ದಕ್ಕೆ ಸೂಸೈಡ್ ಮಾಡಿಕೊಂಡಿರುವ ವಿಚಾರ ಬಯಲಾಗಿದೆ https://ainlivenews.com/a-student-studying-bba-in-bangalore-committed-suicide/ ಈ ಸಂಬಂಧ ಕೇಂದ್ರ ಡಿಸಿಪಿ ಶೇಖರ್ ಪ್ರತಿಕ್ರಿಯಿಸಿ, ಫೋಟೋ ಶೂಟ್‍ಗೆ ತೆರಳಲು ಸಜ್ಜಾಗಿದ್ದಳು. ಈ ಫೋಟೋ ಶೂಟ್‍ಗೆ ಹೋಗೋದು ಬೇಡ ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ 21 ವರ್ಷದ ವರ್ಷಿಣಿ ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆದರೆ ಇಂದು ಈಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: AIN Author
ನವದೆಹಲಿ: ಜಮ್ಮು ಕಾಶ್ಮೀರದ (Jammu Kashmir) ತೆಹ್ರೀಕ್-ಎ-ಹುರಿಯತ್ (Tehreek-e-Hurriyat) ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಸಂಘಟನೆಯನ್ನು ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿ ಕಾನೂನುಬಾಹಿರ ಸಂಘಟನೆ ಎಂದು ಅಮಿತ್ ಶಾ (Amit Shah) ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ ಅಮಿತ್ ಶಾ ಅವರು,ತೆಹ್ರೀಕ್-ಎ-ಹುರಿಯತ್ ಸಂಘಟನೆ ಭಾರತದಿಂದ ಜಮ್ಮು ಕಾಶ್ಮೀರವನ್ನು ಪ್ರತ್ಯೇಕಿಸಲು ಮತ್ತು ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ನಿಷೇಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಈ ಗುಂಪು ಭಾರತ-ವಿರೋಧಿ ಪ್ರಚಾರವನ್ನು ಹರಡುತ್ತಿದೆ. https://ainlivenews.com/good-news-for-customers-for-the-new-year-19-kg-lpg-cylinder-price-for-commercial-use-reduced/ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸಿ, ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಭಯೋತ್ಪಾದನೆಯ ವಿರುದ್ಧ ಶೂನ್ಯ-ಸಹಿಷ್ಣು ನೀತಿಯನ್ನು ಪಾಲಿಸುತ್ತಿದ್ದಾರೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ತಕ್ಷಣವೇ ತಡೆಯುತ್ತೇವೆ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ 2023ಕ್ಕೆ ವಿದಾಯ ಹೇಳಿ, 2024ರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕೈಜೋಡಿಸಿರುವ ಗೂಗಲ್, ವಿಶಿಷ್ಟ ಕಸ್ಟಮೈಸ್ಟ್ ಆ್ಯನಿಮೇಟೇಡ್ ಡೂಡಲ್ ಮೂಲಕ ಗಮನ ಸೆಳೆದಿದೆ. ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್‌ನೊಂದಿಗೆ ಆಚರಿಸಿದೆ. ಮಿನುಗುವ ಡಿಸ್ಕೊ ಚೆಂಡುಗಳು, ಬಣ್ಣ ಬಣ್ಣದ ಅಂಶಗಳು ಸಂಭ್ರಮವನ್ನು ಬಿಂಬಿಸಿವೆ. “3… 2… 1… ಹೊಸ ವರ್ಷದ ಶುಭಾಶಯಗಳು!” ಎಂದು ಗೂಗಲ್ ಶುಭ ಕೋರಿದೆ. ಈ ಡೂಡಲ್ ಹೊಸ ವರ್ಷವನ್ನು ಪ್ರಾರಂಭಿಸಲು ಹೊಸ ಹುರುಪನ್ನು ನೀಡುತ್ತದೆ! ಮಧ್ಯರಾತ್ರಿಯಿಂದ ಪ್ರಪಂಚದಾದ್ಯಂತದ ಜನರು ತಮ್ಮ ಹೊಸ ವರ್ಷದ ಸಂಕಲ್ಪ ಮತ್ತು ಯಶಸ್ಸು, ಪ್ರೀತಿ, ಸಂತೋಷ ಎಲ್ಲದಕ್ಕಾಗಿ ಶುಭ ಕೋರಲು ಪ್ರಾರಂಭಿಸಿದ್ದಾರೆ ಎಂದು ಬರೆಯಲಾಗಿದೆ. ಜಗತ್ತಿನ ಕೋಟ್ಯಂತರ ಜನರು ಪಟಾಕಿ ಮತ್ತು ಹಬ್ಬದ ಬೆಳಕಿನ ಸಂಭ್ರಮದೊಂದಿಗೆ 2023ಕ್ಕೆ ವಿದಾಯ ಹೇಳಿ, 2024ಕ್ಕೆ ಹೊಸ ವರ್ಷ ಆರಂಭದ ಮುನ್ನಾದಿನವಾದ ಭಾನುವಾರ ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಮಾಡಿದ್ದರು.
ಬೀದರ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ವಿಕ್ರಂ ಸಿಂಹರನ್ನು ಬಂಧಿಸಿರುವುದು ಕಾನೂನಿನ ವಿರುದ್ಧವಾಗಿದೆ. ಎಫ್‍ಐಆರ್‍ನಲ್ಲಿ ಹೆಸರಿಲ್ಲದಿದ್ದರೂ ಅವರನ್ನು ಬಂಧಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಅವರು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯನವರ ಕುತಂತ್ರವಾಗಿದೆ. https://ainlivenews.com/good-news-for-customers-for-the-new-year-19-kg-lpg-cylinder-price-for-commercial-use-reduced/ ಈ ರೀತಿ ಕುತಂತ್ರ ಮಾಡಿದರೂ ಸಹ ಪ್ರತಾಪ್ ಸಿಂಹ ಅವರನ್ನು ಅಲ್ಲಿಯ ಜನ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸರು ಯಾರ ಮೂಗಿನ ಅಳತೆ ಮೇಲೆ ಕೆಲಸ ಮಾಡುತ್ತಿರುವುದು ಗೊತ್ತಿದೆ. ಇದು ಸರಿಯಾದ ನಡೆಯಲ್ಲ. ಪ್ರತಾಪ್ ಸಿಂಹ ಅವರೇ ನೀವು ಎದೆಗುಂದುವುದು ಬೇಡ, ಸತ್ಯಕ್ಕೆ ಜಯವಾಗಲಿದೆ ಎಂದಿದ್ದಾರೆ.
ಬೆಂಗಳೂರು: ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮಾಚರಣೆಯಲ್ಲಿ ಮದ್ಯದ (Alcohol sale on New Year) ಕಿಕ್ ಕೂಡ ಜೋರಾಗಿತ್ತು. ನ್ಯೂ ಇಯರ್ ಗೆ ಸರ್ಕಾರದ ಬೊಕ್ಕಸಕ್ಕೆ ಎಣ್ಣೆ ಕಾಸು ಹರಿದು ಬಂದಿದೆ. 2023ರ ಕೊನೆಯ ದಿನವಾದ ಭಾನುವಾರದಿಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಸೇಲ್ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಬಂದಿತ್ತು. ಈ ವರ್ಷ ಡಿಸೆಂಬರ್ ತಿಂಗಳಲ್ಲಿ 3 ಸಾವಿರ ಕೋಟಿ ಆದಾಯ ಸಂಗ್ರಹವಾಗಿದೆ ಒಟ್ಟಿನಲ್ಲಿ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ನಗರ ಹಾಗೂ ಗ್ರಾಮೀಣ ಭಾಗದ ಮೂಲೆ ಮೂಲೆಯಲ್ಲಿಯೂ ಜನರು ಮದ್ಯದ ನಶೆಯ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ
ಚಿಕ್ಕಮಗಳೂರು: ಹೆರಿಗೆಯಾಗಿದ್ದ ಬಾಣಂತಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ರಂಜಿತಾ ಬಾಯಿ (21) ಮೃತ ದುರ್ದೈವಿ. ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದ ಈಕೆ ರಾತ್ರಿ ವೇಳೆಗೆ ತೀವ್ರ ಹೊಟ್ಟೆನೋವಿನಿಂದ ನರಳಿ ಸಾವನ್ನಪ್ಪಿದ್ದಾರೆ. https://ainlivenews.com/statewide-katera-movie-abbar-d-boss-thanked-the-fans-with-love/ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಾಣಂತಿ ಕುಟುಂಬಸ್ಥರು ಆರೋಪಿಸಿದ್ದಾರೆ. ರಂಜಿತಾ ಮೂಲತಃ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ನಿವಾಸಿ, ಒಂದು ವರ್ಷದ ಹಿಂದೆಯಷ್ಟೇ ಶಶಿಧರ್ ನಾಯಕ್ ಎಂಬವರೊಂದಿಗೆ ವಿವಾಹವಾಗಿದ್ದರು.
ಬೆಂಗಳೂರು ಗ್ರಾಮಾಂತರ : ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು ಮುದ್ದಾದ ಆನೆ ಮರಿ ಜನನದಿಂದ ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿದ್ದು ಕಳೆದ ಹನ್ನೊಂದನೆ ತಾರೀಖಿನಂದು ಮರಿಯಾನೆಗೆ ಜನ್ಮ ನೀಡಿದ ರೂಪಾ ಎಂಬ 15 ವರ್ಷದ ಹೆಣ್ಣಾನೆ ಸಫಾರಿಯ ಸೀಗೆಕಟ್ಟೆಯಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಈ ಮರಿಯಾನೆ ಈ ಹಿಂದೆ ಎರಡು ಮರಿಗಳಿಗೆ ಜನ್ಮ ನೀಡಿದ್ದ ರೂಪಾ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯಾನೆಗೆ ಜನ್ಮ ನೀಡಿತ್ತು ಇದೀಗ ಮೂರನೇ ಹೆಣ್ಣು ಮರಿಯಾನೆಗೆ ಜನ್ಮನೀಡಿದ ರೂಪಾ ಪಶುವೈದ್ಯರ ಆರೈಕೆಯಲ್ಲಿ ಆರೋಗ್ಯವಾಗಿರುವ ತಾಯಿ ಹಾಗೂ ಮರಿಯಾನೆ ಹಾಗೆ ಜನನದಿಂದ ಆನೆಗಳ ಸಂಖ್ಯೆ ಏರಿಕೆಯಾಗಿದ್ದು ಇದೀಗ ಒಟ್ಟು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಬೆಂಗಳೂರು: 2024ನ್ನ ‘ಪ್ರಯಾಣಿಕರ ಸ್ನೇಹಿ’ ವರ್ಷವನ್ನಾಗಿಸಲು KSRTC ಪ್ಲಾನ್ ಮಾಡಿದ್ದು ಹೊಸ ವರ್ಷದಲ್ಲಿ ಪ್ರಯಾಣಿಕರ ಹರ್ಷಕ್ಕೆ ಹಲವು ಯೋಜನೆಗಳನ್ನು ಸಹ ರೂಪಿಸಿಜಕೊಂಡಿದ್ದು ಪ್ರಯಾಣಿಕರಿಗೆ ಒಂದಿಲ್ಲೊಂದು ಸೇವೆ ನೀಡ್ತಿರುವ ಕೆಎಸ್ ಆರ್ ಟಿಸಿಈಗ ವರ್ಷದ ಮೊದಲ ತಿಂಗಳಿಂದಲೇ ಹಲವು ಯೋಜನೆಗಳ ಫ್ಲ್ಯಾನ್ ರೂಪಿಸಿಕೊಂಡಿದೆ. ಹೊಸ ವರ್ಷದಲ್ಲಿ ಪ್ರಯಾಣಿಕರ ಹರ್ಷಕ್ಕೆ KSRTC ಏನೇಲ್ಲಾ ಪ್ಲ್ಯಾನ್ ಹಾಕಿಕೊಂಡಿದೆ ನೋಡೋಣ! 1.ಈ ವರ್ಷದಲ್ಲಿ ಪ್ರಯಾಣಿಕರ ದಾಹವನ್ನ ತಣಿಸಲು ಮುಂದಾದ ಇಲಾಖೆ 2.ಪ್ರಯಾಣಿಕರ ಅಪಘಾತ ವಿಮೆಯನ್ನ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ 3.ಪ್ರಸಕ್ತ ವರ್ಷದಲ್ಲಿ KSRTC ಸೇರ್ಪಡೆಗೊಳ್ಳಲಿದೆ 2,000 ವಾಹನಗಳು 4.ಪ್ರಸ್ತುತ ಇರುವ 20 ಕಾರ್ಗೋ ಟ್ರಕ್ ನ್ನ ವರ್ಷಾಂತ್ಯಕ್ಕೆ 500ಕ್ಕೆ ಹೆಚ್ಚಿಸಲು ಪ್ಲಾನ್ 5.1000 ವಾಹನಗಳ ಪುನಶ್ಚೇತನದ ಗುರಿ 6.ಬಸ್ ನಿಲ್ದಾಣಗಳ ಸುಚಿತ್ವಕ್ಕೆ ಆದ್ಯತೆ 7.KSRTC ಬಸ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ
ಬೀದರ್ : ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿಯನ್ನೇ (Husband) ಸಂಚು ರೂಪಿಸಿ ಪತ್ನಿ (Wife) ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿದ ಪ್ರಕರಣವನ್ನು ಕೊನೆಗೂ ಬೀದರ್ ಪೊಲೀಸರು (Bidar Police) ಬೇಧಿಸಿದ್ದಾರೆ. ಅಮಿತ್ ಕೊಲೆಯಾಗಿದ್ದು, ಪೊಲೀಸರು ಈಗ ಪತ್ನಿ ಚೈತ್ರಾ, ಆಕೆಯ ಗೆಳೆಯ ರವಿ ಪಾಟೀಲ್ ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿದ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? ನವೆಂಬರ್ 11 ರಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಬಳಿ ಅಮಿತ್ ಶವ ಪತ್ತೆಯಾಗಿತ್ತು. ಇದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಮೃತದೇಹ ನೋಡಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ತನಿಖೆಗೆ ಇಳಿದ ಪೊಲೀಸರಿಗೆ ಶವ ಪತ್ತೆಯಾದ ಜಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ನಂಬರ್ ಪತ್ತೆಹಚ್ಚಿದ್ದಾರೆ. ಬಳಿಕ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿ ಪಾಟೀಲ್ ಇವರಿಗೆ ಮುಂಗಡವಾಗಿ ಹಣ ನೀಡಿ ಕೃತ್ಯ ನಡೆಸಿ ವಿಚಾರಣೆಯನ್ನು…
ಬಿಗ್‌ಬಾಸ್ (Bigg Boss Kannada) ಮನೆಯ ಸದಸ್ಯರೆಲ್ಲರೂ ಜಿದ್ದಿಗೆ ಬಿದ್ದವರಂತೆ, ಟಾಸ್ಕ್, ಅಗ್ರೆಶನ್, ಪಾಲಿಟಿಕ್ಸ್, ನಾಮಿನೇಷನ್ ಎಂದೆಲ್ಲ ಪರಸ್ಪರ ದೂಷಣೆಯಲ್ಲಿ, ಹಗ್ಗಜಗ್ಗಾಟದಲ್ಲಿ ತೊಡಗಿಕೊಂಡಿದ್ದರೆ, ‘ನನ್ನ ದಾರಿಯೇ ಬೇರೆ’ ಎನ್ನುವಂತೆ ಶಾಂತರಾಗಿ, ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದವರು ಸಿರಿ. ‘ಬಿಗ್‌ಬಾಸ್ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿದ್ದಾರೆ ಸಿರಿ (Siri). ತಮ್ಮ ಸಂಯಮ, ಸಮತೂಕದ ವ್ಯಕ್ತಿತ್ವದಿಂದ ಬಿಗ್‌ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ನೆಚ್ಚಿನ ‘ಅಕ್ಕ’ನಾಗಿದ್ದ ಸಿರಿ, ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಪ್ರಯಾಣ ಮುಗಿಸಿದ ತಕ್ಷಣ JioCinemaಗೆ ನೀಡಿದ್ದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಅವರು ಈ ಪ್ರಯಾಣದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ. ನಾನು ನಿಮ್ಮ ಪ್ರೀತಿಯ ಸಿರಿ. ಬಿಗ್‌ಬಾಸ್ ಕನ್ನಡ ಸೀಸನ್…