Author: AIN Author

ಹೈದರಾಬಾದ್ :- PM ಮೋದಿಗೆ ನನ್ನ ಹೆಸರು ಕೇಳಿದರೆ ನಡುಕ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕಂಡರೆ ಭಯ. ನನ್ನ ಹೆಸರು ಕೇಳಿದರೆ ಅವರಿಗೆ ನಡುಕ ಹುಟ್ಟುತ್ತದೆ. ಹೀಗಾಗಿ ಎಲ್ಲೆಡೆ ನನ್ನ ವಿರುದ್ಧ ಮಾತನಾಡುತ್ತಾರೆ’ ಎಂದರು. ಅವರು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ 48 ಬಾರಿ ಭೇಟಿ ನೀಡಿ ಪ್ರಚಾರ ಮಾಡಿದ್ದರು. ಆದರೆ ಅವರು ಪ್ರಚಾರ ಮಾಡಿದಲ್ಲೆಲ್ಲಾ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ತೆಲಂಗಾಣದಲ್ಲೂ ಪುನರಾವರ್ತನೆಯಾಗಲಿದೆ. ಮೋದಿ 100 ಬಾರಿ ತೆಲಂಗಾಣಕ್ಕೆ ಭೇಟಿ ನೀಡಿದರೂ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಲಾಗದು. ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಬಿಆರ್‌ಸಿ ಎರಡೂ ಒಂದೇ. ಬಿಆರ್‌ಸಿ ತೆಲಂಗಾಣದಲ್ಲಿ ಬಿಜೆಪಿಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ತೆಲಂಗಾಣದ ಜನತೆ ಕೆಸಿಆರ್ ಮತ್ತು ಮೋದಿಯವರ ಮಕ್ಮಲ್ ಟೋಪಿಗೆ…

Read More

ಬೆಂಗಳೂರು:- ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಡಿಕೆಶಿ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಇದೆಲ್ಲ ಹೋಗಿ ಬಂದು ಏನಾಗಿದೆ‌. ಜೆಡಿಎಸ್​ನಿಂದ ಎಳೆದುಕೊಳ್ಳೋದು ಅಂತಿದ್ದಾರೆ. ಹಿಂದೆ ಏನಾಗಿತ್ತು ನಿಮಗೆ ಗೊತ್ತು. ಕಾಂಗ್ರೆಸ್ 120 ಸ್ಥಾನ ಇದ್ದಿದ್ದು, 80ಕ್ಕೆ ಬಂದಿತ್ತು. ಮತ್ತೆ ಅಂತದ್ದೇ ಪರಿಸ್ಥಿತಿ ಬರಲಿದೆ ಎಂದು ಟಾಂಗ್​ ನೀಡಿದರು. ಜೆಡಿಎಸ್‌-ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೈತ್ರಿ ಬಗ್ಗೆ, ಜೆಡಿಎಸ್​ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳೋದು ಬೇಡ. ಯಾರೂ ಜೆಡಿಎಸ್ ಮುಳುಗೋಯ್ತು ಅಂತ ತಿಳಿಯೋದು ಕೂಡ ಬೇಡ. ಅಂದು ಏನೂ ಇಲ್ಲ ಜೆಡಿಎಸ್ ಮುಗಿದೋಯ್ತು ಅಂದಿದ್ದರು. ಆದರೆ ದೇವೇಗೌಡರು 114 ಸೀಟು ಗೆದ್ದು, ಲೋಕಸಭಾ ಕ್ಷೇತ್ರದಲ್ಲಿ 18 ಸೀಟು ಗೆದ್ದು ಪ್ರಧಾನಿ ಆದರು. ಜೆಡಿಎಎಸ್ ​ ಮುಗಿಸೋಕೆ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಜೆಡಿಎಸ್​ನಿಂದ 3ನೇ ಎರಡರಷ್ಟು ಕಾಂಗ್ರೆಸ್‌ಗೆ ಬರ್ತಾರೆ ಅಂತ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಂದರೆ ಅವರನ್ನೆಲ್ಲ…

Read More

ವಾಷಿಂಗ್ಟನ್‌: ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಪ್ರಗತಿಯ ಅತ್ಯುತ್ತಮ ನಾಯಕ ಎಂದು ಅಮೆರಿಕ ಗಾಯಕ ಮತ್ತು ಆಫ್ರಿಕನ್-ಅಮೇರಿಕನ್ ನಟಿ ಮೇರಿ ಮಿಲ್‌ಬೆನ್‌ (Mary Millben) ಬಣ್ಣಿಸಿದ್ದಾರೆ. ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ವಿವಾದಾತ್ಮಕ ಜನಸಂಖ್ಯಾ ನಿಯಂತ್ರಣ ಹೇಳಿಕೆ ನೀಡಿದ್ದು, ವ್ಯಾಪಕ ಚರ್ಚೆ ಹುಟ್ಟುಕೊಂಡಿದೆ. ಮಹಿಳೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ತೀವ್ರವಾಗಿ ಟೀಕಿಸಲಾಗಿತ್ತು. ತಮ್ಮ ಹೇಳಿಗೆ ನಿತೀಶ್‌ ಕುಮಾರ್‌ ಕ್ಷಮೆ ಕೇಳಿದ್ದಾರೆ. ಬಿಹಾರ ಸಿಎಂ ಹೇಳಿಕೆಗೆ ಅಮೆರಿಕ ಗಾಯಕಿ ವೀಡಿಯೋ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದು, ನಿತೀಶ್‌ ಕುಮಾರ್‌ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಧೈರ್ಯಶಾಲಿ ಮಹಿಳೆ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಉಮೇದುವಾರಿಕೆ ಘೋಷಿಸುವ ಸಮಯ ಬಂದಿದೆ ಎಂದು ಮೇರಿ ಮಿಲ್ಬೆನ್‌ ಆಶಯ ವ್ಯಕ್ತಪಡಿಸಿದ್ದಾರೆ. https://ainlivenews.com/knee-pain-treatment-joint-pain-treatment/ ಇಂದು, ಭಾರತವು ಬಿಹಾರದಲ್ಲಿ ನಿರ್ಣಾಯಕ ಕ್ಷಣವನ್ನು ಎದುರಿಸುತ್ತಿದೆ. ಅಲ್ಲಿ ಮಹಿಳೆಯರ ಮೌಲ್ಯಕ್ಕೆ ಸವಾಲು ಎದುರಾಗಿದೆ. ಈ ಸವಾಲಿಗೆ ಒಂದೇ ಒಂದು ಉತ್ತರವಿದೆ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅನಧಿಕೃತ ಕೊಳವೆ ಬಾವಿ ತಡೆಗಟ್ಟಲು ವಿಶೇಷ ತಂಡ ರಚಿಸಲಾಗಿದೆ ಎಂದು ಸಚಿವ ಬೋಸರಾಜು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರು ನಗರ ಜಿಲ್ಲೆಯಲ್ಲಿ ಅನಧಿಕೃತವಾಗಿ ಕೊಳವೆ ಬಾವಿಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಅಂತರ್ಜಲ ನಿರ್ದೇಶನಾಲಯದಿಂದ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು. ರಾಜ್ಯದಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅನಧಿಕೃತ ಕೊಳವೆಬಾವಿಗಳನ್ನು ಕೊರೆಯುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವುದು ಆದ್ಯತೆಯ ವಿಷಯವಾಗಿದೆ. ಅನಧಿಕೃತ ಕೊಳವೆ ಬಾವಿಗಳಿಂದ ಅಂತರ್ಜಲ ಮಟ್ಟ ಕಡಿಮೆ ಆಗುತ್ತದೆ. ಅಂತರ್ಜಲ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ಅನುಮತಿ ಪಡೆದುಕೊಳ್ಳುವುದು ಅಗತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಪಾಲಿಸಲಾಗುತ್ತಿಲ್ಲ. ಅನುಮತಿ ಪಡೆದುಕೊಳ್ಳದೇ ಕೊಳವೆ ಬಾವಿಗಳನ್ನ ಕೊರೆಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕಾಗಿ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಸೂಚನೆಯ ಅನ್ವಯ ವಿಶೇಷ ತಂಡವನ್ನು ರಚಿಸಲಾಗಿದೆ ಎಂದಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಪ್ರದೇಶದಲ್ಲಿ ನಿಯಮಿತವಾಗಿ…

Read More

ಬೆಂಗಳೂರು ಉದ್ಯಾನ ನಗರಿ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.. ಇಲ್ಲಿನ ಶಾಪಿಂಗ್ ಮನಸ್ಸಿಗೆ ಮುದ ಹಾಗು ರೋಮಾಂಚನಕಾರಿ ಅನುಭುತಿಯನ್ನು ಉಂಟು ಮಾಡುತ್ತದೆ. ಬೆಂಗಳೂರಿನ ಯಾವ ಜಾಗದಲ್ಲಿ ಶಾಪಿಂಗ್ ಮಾಡಿದರೆ ಕಡಿಮೆ ದುಡ್ಡಿನಲ್ಲಿ ಉತ್ತಮವಾದ ಸರಕುಗಳು ದೊರೆಯುತ್ತವೆ ಎಂಬುದನ್ನು ನಾವು ತಿಳಿಯೋಣ 1. ಕಮರ್ಷಿಯಲ್ ಸ್ಟ್ರೀಟ್ ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡಲು ಅತ್ಯುತ್ತಮವಾದ ಸ್ಥಳವಾಗಿದೆ. ಇಲ್ಲಿ ಸುಂದರವಾದ ಉಡುಪುಗಳು, ವಿಭಿನ್ನ ಶೈಲಿಯ ಆಭರಣಗಳು, ಕ್ರೀಡಾ ಸಾಮಗ್ರಿಗಳು, ಸ್ಟೈಲೀಶ್ ಪಾದರಕ್ಷೆಗಳು, ಪುರಾತನ ವಸ್ತುಗಳನ್ನು ಇಲ್ಲಿ ನೀವು ಖರೀದಿಸಬಹುದು. 2. ಚಿಕ್ಕಪೇಟೆ ಬೆಂಗಳೂರಿನ ಶಾಪಿಂಗ್ ಎಂದ ತಕ್ಷಣ ತಟ್ಟನೆ ನೆನಪಿಗೆ ಬರುವುದೇ ಚಿಕ್ಕಪೇಟೆ ಶಾಪಿಂಗ್. ಇದು ಬೆಂಗಳೂರು ನಗರದ ಅತ್ಯಂತ ಹಳೆಯ ವಾಣಿಜ್ಯ ತಾಣಗಳಲ್ಲಿ ಒಂದಾಗಿದೆ, ಇದು ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಪೇಟೆಗೆ ಸುಮಾರು ೪೦೦ ವರ್ಷಗಳ ಇತಿಹಾಸವಿದ್ದು, ಬೆಂಗಳೂರಿನ ಜನಪ್ರಿಯವಾದ ಮಾರುಕಟ್ಟೆಗಳಲ್ಲಿ ಚಿಕ್ಕಪೇಟೆಯೇ ಪ್ರಮುಖವಾದುದು. 3.ಜಯನಗರದ 4th Block, ಚಿಕ್ಕಪೇಟೆ ಹಾಗು ಕಮರ್ಷಿಯಲ್ ಸ್ಟ್ರೀಟ್ ನಷ್ಟು ಜನಪ್ರಿಯವಾಗಿಲ್ಲದಿದ್ದರೂ, ತನ್ನದೇ ವಿಶಿಷ್ಟವಾದ…

Read More

ಬೆಂಗಳೂರು: ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿರುವ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಭಾರತ (India), ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ (Australia) ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಇನ್ನೊಂದು ತಂಡಕ್ಕೆ ಅವಕಾಶವಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಆಡಿದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ (New Zealand) 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್‌ ಹಿಂದಿಕ್ಕೆ ಪಾಕ್‌ ಸೆಮಿಸ್‌ ಪ್ರವೇಶಿಸಲೇಬೇಕಾದರೆ ಪಾಕ್‌ ತಂಡ ಊಹಿಸಲು ಸಾಧ್ಯವಾಗಷ್ಟು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ಮಾಡಿ ಕನಿಷ್ಠ 300 ರನ್‌ ಗಳಿಸಿದರೆ, ಇಂಗ್ಲೆಂಡ್‌ (England) ತಂಡವನ್ನು 13 ರನ್‌ಗಳಿಗೆ ಕಟ್ಟಿಹಾಕಬೇಕು. 400 ರನ್‌ ಗಳಿಸಿದ್ರೆ 112 ರನ್‌ಗಳಿಗೆ, 450 ರನ್‌ ಗಳಿಸಿದ್ರೆ 162 ರನ್‌ಗಳಿಗೆ, 500 ರನ್‌ ಗಳಿಸಿದ್ರೆ 211 ರನ್‌ಗಳಿಗೆ ಹಾಲಿ ಚಾಂಪಿಯನ್ಸ್‌ಗಳನ್ನ ಕಟ್ಟಿಹಾಕಬೇಕಾಗುತ್ತದೆ ಎಂದು…

Read More

ಚಾಮರಾಜನಗರ:- ಬಿವೈ ವಿಜಯೇಂದ್ರ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಹಿನ್ನಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಯಡಿಯೂರಪ್ಪ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಪಟಾಕಿ ಸಿಡಿಸಿ,ಸಿಹಿ ವಿತರಿಸಿ ಸಂಭ್ರಮಿಸಿದ್ದಾರೆ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ನೇತೃತ್ವದಲ್ಲಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿ.ಎಂ ಯಡಿಯೂರಪ್ಪಗೆ ಜೈಕಾರ ಕೂಗಿ ಘೋಷಣೆ ಹಾಕಿದ್ದಾರೆ. ಪಟಾಕಿ ಸಿಡಿಸಿ ಮಾಜಿ ಸಿ.ಎಂ.ಬಿಸ್ ವೈ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Read More

ಲಕ್ನೋ: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ದೀಪಾವಳಿಯಂದು ವಿಶ್ವ ದಾಖಲೆ ಬರೆಯಲು ವೇದಿಕೆ ಸಿದ್ಧವಾಗಿದೆ. ಅಯೋಧ್ಯೆಯ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ಆಡಳಿತವು ದೀಪಾವಳಿಯಂದು ಏಕಕಾಲದಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ವಾರ್ಸಿಟಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಅಯೋಧ್ಯೆಯ 51 ಘಾಟ್‌ಗಳಲ್ಲಿ ಸ್ವಯಂಸೇವಕರು ‘ಅಯೋಧ್ಯೆ ದೀಪೋತ್ಸವ’ ಮಾಡಲಿದ್ದಾರೆ. ಉತ್ತರ ಪ್ರದೇಶ ಸರ್ಕಾರವು 24 ಲಕ್ಷ ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿದೆ. ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರತಿಭಾ ಗೋಯಲ್ ಅವರ ಮೇಲ್ವಿಚಾರಣೆಯಲ್ಲಿ ಪ್ರಾದೇಶಿಕಗೊಳಿಸಿದ ದೀಪೋತ್ಸವ ಅದ್ಧೂರಿಯಾಗಿ ನೆರವೇರಲಿದೆ. 25,000 ಕ್ಕೂ ಹೆಚ್ಚು ಸ್ವಯಂಸೇವಕರು ದೀಪೋತ್ಸವದಲ್ಲಿ ಭಾಗಿಯಾಗಲಿದ್ದಾರೆ. https://ainlivenews.com/knee-pain-treatment-joint-pain-treatment/ ಸ್ವಯಂಸೇವಕರು, ಘಾಟ್ ಉಸ್ತುವಾರಿಗಳು ಮತ್ತು ಘಾಟ್ ಸಂಯೋಜಕರ ಮೇಲ್ವಿಚಾರಣೆಯಲ್ಲಿ ಈಗಾಗಲೇ 60 ರಿಂದ 70 ರಷ್ಟು ದೀಪಗಳನ್ನು ಎಲ್ಲಾ ಘಾಟ್‌ಗಳಲ್ಲಿ ಇರಿಸಲಾಗಿದೆ. ಸ್ವಯಂಸೇವಕರಿಗೆ ದೀಪಗಳನ್ನು ಬೆಳಗಿಸಲು 2.5 ಅಡಿ ಜಾಗ ಮತ್ತು 16 ರಿಂದ 16 (256) ದೀಪಗಳ ಬ್ಲಾಕ್‌ಗೆ…

Read More

ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನವೆಂಬರ್ 11 (ಇಂದು) ತಮ್ಮ ಹುಟ್ಟುಹಬ್ಬವನ್ನು (Birthday) ಫ್ಯಾನ್ಸ್ ಜೊತೆ ನಟಿ ಆಚರಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬರ್ತ್‌ಡೇ ಆಚರಣೆಯಿಂದ ದೂರವಿದ್ದರು. ಈ ಬಾರಿ ಫ್ಯಾನ್ಸ್‌ಗೆ ಭೇಟಿಯಾಗಲು ಸಮಯ ಮೀಸಲಿಟ್ಟಿದ್ದಾರೆ.‌ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ನಟಿ ಫ್ಯಾನ್ಸ್‌ಗೆ ಆಹ್ವಾನ ನೀಡಿದ್ದಾರೆ. ನಮಸ್ಕಾರ, ಹಲವು ವರ್ಷಗಳಿಂದ ಅಭಿಮಾನಿಗಳನ್ನ ಭೇಟಿ ಮಾಡೋಕೆ ಆಗಿರಲಿಲ್ಲ. ನ.11ರಂದು ಶನಿವಾರ ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಅಂದು ನಿಮಗೆ ಸಿಗುತ್ತೇನೆ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. ಇದರ ಜೊತೆಗೆ ಭೇಟಿಯಾಗೋಕೆ ವಿಳಾಸ ಕೂಡ ನೀಡಿದ್ದಾರೆ. ವಿಳಾಸ ಈ ಕೆಳಗಿನಂತಿದೆ. 10/11 ಎರಡನೇ ಮುಖ್ಯ ರಸ್ತೆ, ಎರಡನೇ ಕ್ರಾಸ್ ಆರ್‌ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ ಬೆಂಗಳೂರು ಎಂದು ಮಾಹಿತಿ ನೀಡಿದ್ದಾರೆ.

Read More

ಮಖಾನ ಎಂದು ಕರೆಯಲ್ಪಡುವ ಲೋಟಸ್‌ ಅಥವಾ ಫಾಕ್ಸ್ ಸೀಡ್ಸ್ ಹಲವರಿಗೆ ಅಪರಿಚಿತ. ಇದು ಯಾವುದೋ ಹೊಸ ಹೆಸರು ಎಂದು ತಿಳಿದು ಕೊಳ್ಳುವವರಿಗೆ ತಾವರೆ ಬೀಜಗಳು ಎಂದು ಸುಲಭವಾಗಿ ಹೇಳಬಹುದು. ತಮ್ಮಲ್ಲಿನ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಮನುಷ್ಯರಿಗೆ ಒದಗಿಸುವ ಕೆಲಸ ಮಖಾನ ಬೀಜಗಳದ್ದು. ಚೀನಾ ದೇಶದಲ್ಲಿ ಇವುಗಳನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗ ಮಾಡುತ್ತಾರೆ.  ಮೂತ್ರ ಪಿಂಡಗಳು ಮತ್ತು ಗುಲ್ಮ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಸೇವಿಸಬಹುದು. ಇನ್ನು ಡ್ರೈ ಫ್ರೂಟ್ ಗಳಾದ ಬಾದಾಮಿ ಬೀಜಗಳು, ವಾಲ್ನಟ್, ಗೋಡಂಬಿ ಬೀಜಗಳೂ ಕೂಡ ಫಾಕ್ಸ್ ಸೀಡ್ಸ್ ಗೆ ಹೋಲಿಸಿದರೆ, ಪೌಷ್ಟಿಕ ಸತ್ವಗಳಲ್ಲಿ ತಳಹದಿಯಲ್ಲಿ ನಿಂತಿರುತ್ತವೆ. ಫಾಕ್ಸ್ ಸೀಡ್ಸ್ ಗಳ ಸೇವನೆ ವಿಷಯಕ್ಕೆ ಬಂದರೆ ಇವುಗಳ ಮೇಲೆ ಕೆಲವು ಮಸಾಲೆ ಪದಾರ್ಥಗಳನ್ನು ಸಿಂಪಡಿಸಿ ಹುರಿದು ತಿನ್ನಬಹುದು. ಇವು ನಾಲಿಗೆಗೆ ಬಹಳ ರುಚಿ ಕೊಡುತ್ತವೆ. ಫಾಕ್ಸ್ ಸೀಡ್ಸ್ ಗಳ ಹಲವಾರು ಆರೋಗ್ಯ ಪ್ರಯೋಜನಗಳು ಈ ರೀತಿ ಇವೆ ಡಯಟ್ ಮಾಡುವವರಿಗೆ ಸಹಕಾರಿ ಮಖಾನ ಬೀಜಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ.…

Read More