Author: AIN Author

ಮಕ್ಕಳಿಂದ ಹಿಡಿದು ಅನೇಕ ವೃದ್ಧರವರೆಗೆ ಬಹುತೇಕರಿಗೆ ಟೈಂ ಪಾಸ್ ಅಂದ್ರೆ ಅದು ಮೊಬೈಲ್. ಅಕ್ಕಪಕ್ಕದಲ್ಲಿ ಯಾರೇ ಇರಲಿ, ಏನೇ ಇರಲಿ, ಜನರು ಅದಕ್ಕೆ ಮಹತ್ವ ನೀಡೋದಿಲ್ಲ. ಮನೆಯಲ್ಲಿರುವ ವ್ಯಕ್ತಿಗಳು ಅಕ್ಕಪಕ್ಕದಲ್ಲೇ ಕುಳಿತು ಚಾಟ್ ಮಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ. ಮೊಬೈಲ್ ನಲ್ಲಿ ಬರಿ ಚಾಟಿಂಗ್ ಮಾತ್ರವಲ್ಲ ಗೇಮ್ ಸೇರಿದಂತೆ ಅನೇಕಾನೇಕ ಕೆಲಸಗಳನ್ನು ಮಾಡ್ತಾರೆ ಜನರು. ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡ್ತಾ ಹೋದಂತೆ ಸಮಯ ಸರಿದಿದ್ದು ಜನರಿಗೆ ತಿಳಿಯೋದಿಲ್ಲ. ಈ ಮೊಬೈಲ್ ಗೇಮಿಂಗ್ , ಸಾಮಾಜಿಕ ಜಾಲತಾಣ ವೀಕ್ಷಣೆ ಈಗಿನ ದಿನಗಳಲ್ಲಿ ಹೊಸ ಹೊಸ ರೋಗಕ್ಕೆ ಕಾರಣವಾಗ್ತಿದೆ. ನೀವೂ ಮೊಬೈಲ್ ವೀಕ್ಷಣೆ ಮಾಡ್ತಿದ್ದರೆ ಯಾವೆಲ್ಲ ಸಮಸ್ಯೆ ನಿಮ್ಮನ್ನು ಕಾಡುತ್ತೆ ಎಂಬುದನ್ನು ತಿಳಿದುಕೊಳ್ಳಿ. ನಿರಂತರ ಮೊಬೈಲ್ ವೀಕ್ಷಣೆಯಿಂದ ನಿಮ್ಮನ್ನು ಕಾಡುತ್ತೆ ಈ ಸಮಸ್ಯೆ : ಕುತ್ತಿಗೆ ನೋವು : ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರ ಪ್ರಕಾರ, ಸ್ಮಾರ್ಟ್‌ಫೋನ್‌ನಲ್ಲಿ ಪೋಸ್ಟ್‌ಗಳನ್ನು ನೋಡುವಾಗ ಅಥವಾ ಸ್ಕ್ರೋಲಿಂಗ್ ಮಾಡುವಾಗ ತಲೆ ಮತ್ತು ಕುತ್ತಿಗೆ ಬಾಗಿರುತ್ತದೆ. ಕುತ್ತಿಗೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.…

Read More

ಸಿಡ್ನಿ: ಹೊಸ ವರ್ಷದ (New Year) ಸಂಭ್ರಮ ಶುರುವಾಗಿವೆ. ಎಲ್ಲರಿಗಿಂತಲೂ ಮೊದಲು 2024ಕ್ಕೆ ವೆಲ್‌ಕಮ್ ಹೇಳಿದ್ದು ಕಿರಿಬಾಟಿ, ಸಮೋವಾ, ಟೊಂಗಾ ದೇಶಗಳು. ನಂತರ ನ್ಯೂಜಿಲೆಂಡ್‌ನ (New Zealand) ಆಕ್ಲೆಂಡ್ ನಗರದ ಜನ ಸಡಗರ, ಸಂಭ್ರಮದ ಮಧ್ಯೆ ಹ್ಯಾಪಿ ನ್ಯೂ ಇಯರ್ ಎಂದು ಹೇಳಿದರು. ಆಸ್ಟ್ರೇಲಿಯಾದ (Australia) ಸಿಡ್ನಿ ನಗರದಲ್ಲಿ ಲೇಸರ್ ಶೋ ಗಮನ ಸೆಳೆಯಿತು. https://ainlivenews.com/curry-leaves-are-good-for-cooking-and-good-for-health-this-has-many-benefits/ ಜಪಾನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾಗಳು ಹೊಸ ವರ್ಷಕ್ಕೆ ವೆಲ್‌ಕಮ್ ಹೇಳಿತು. ಸಮೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಶುರುವಾದ ಎಂಟೂವರೆ ಗಂಟೆ ನಂತರ ಭಾರತ-ಶ್ರೀಲಂಕಾಗೆ 2024 ಕಾಲಿಡಲಿದೆ. ನಮ್ಮ ದೇಶದ ಬಳಿಕ ಸುಮಾರು ನಾಲ್ಕೂವರೆ ಗಂಟೆಯ ಬಳಿಕ 43 ದೇಶಗಳು ಏಕಕಾಲದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಿದೆ. 

Read More

ಒಂದು ಸರಳ ಪ್ರೇಮಕಥೆಯ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ.. ನಿನಗಾಗಿಯೇ..ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್‌ ಮಲಿಕ್‌ ಧ್ವನಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್‌ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ನಾಯಕಿಯಾರಾಗಿ ನಟಿಸಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ. ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ.…

Read More

ಟೋಕಿಯೊ: ಹೊಸ ವರ್ಷದ ಆರಂಭದಲ್ಲೇ ಜಪಾನ್‍ಗೆ (Japan) ತೀವ್ರ ಆಘಾತ ಎದುರಾಗಿದೆ. ಈಶಾನ್ಯ ಜಪಾನ್‍ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ಗಳಷ್ಟು ಎತ್ತರದ ತೆರೆಗಳು ಅಪ್ಪಳಿಸುತ್ತಿದೆ. ಇಶಿಕಾವಾ, ನೈಕತಾ ಮತ್ತು ಟೊಯಾಮಾ ನಗರಗಳ ಕರಾವಳಿ ತೀರಗಳಲ್ಲಿ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಇಶಿಕಾವಾ ಜಿಲ್ಲೆಯ ಕರಾವಳಿ ನೋಟೋಗೆ 5 ಮೀಟರ್ ಎತ್ತರದವರೆಗಿನ ಬೃಹತ್ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ನೈಗತ ಮತ್ತು ಟೊಯಾಮಾ ಸೇರಿದಂತೆ ಉಳಿದ ಕೆಲವು ಕರಾವಳಿ ತೀರಗಳಲ್ಲಿ 3 ಮೀಟರ್‍ವರೆಗೂ ಅಲೆಗಳು ಏಳಬಹುದು ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸ್ಥಳೀಯ ಕಾಲಮಾನ ಸಂಜೆ 4:10 ಸುಮಾರಿಗೆ ಇಶಿಕಾವಾ ಪ್ರಾಂತ್ಯದ ನೋಟೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನದ ತೀವ್ರತೆ ದಾಖಲಾಗಿದೆ. ಜಪಾನ್‍ನ ಈಶಾನ್ಯ ಭಾಗದ ನನಾವೋ ಭೂ ಕಂಪನದ ಕೇಂದ್ರ ಬಿಂದು ಎಂದು ವರದಿಯಾಗಿದೆ.

Read More

ಚಿತ್ರದುರ್ಗ: ಶಾಲಾ ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿ ಬಸ್, ಟ್ರಾಕ್ಟರ್, ಎರಡು ಕಾರ್, ಬೈಕ್ ನಡುವೆ ಡಿಕ್ಕಿಯಾಗಿರುವ ಘಟನೆ ಚಿತ್ರದುರ್ಗದ ಕೋಟೆ ರಸ್ತೆಯಲ್ಲಿ ನಗರದ ಉಚ್ಚಂಗಿ ಯಲ್ಲಮ್ಮ ದೇವಸ್ಥಾನ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕನ ಸಮಯ ಪ್ರಜ್ಞೆಯಿಂದ ಶಾಲಾ ವಿಧ್ಯಾರ್ಥಿಗಳು ಬಚಾವ್ ಆಗಿದ್ದಾರೆ. ಹೊಸ ವರ್ಷ ಹಿನ್ನೆಲೆ ಕೋಟೆ ವೀಕ್ಷಣೆಗೆ ಬಂದಿದ್ದರು. ಆದ್ರೆ ಈ ಘಟನೆಯಿಂದ ದ್ವಿಚಕ್ರ ವಾಹನ ಜಖಂ ಆಗಿದೆ. ಇನ್ನೂ ಘಟನಾ ಸ್ಥಳಕ್ಕೆ ಟ್ರಾಫಿಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Read More

ಹುಬ್ಬಳ್ಳಿ: 31 ವರ್ಷದ ಬಳಿಕ ರಾಮಜನ್ಮಭೂಮಿ‌ ಹೋರಾಟದ ಪ್ರಕರಣಕ್ಕೆ‌ ಮರುಜೀವ ಬಂದಿದೆ. ಹೌದು ಆ ಮೂಲಕ ರಾಮಜನ್ಮಭೂಮಿ ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳಿಗಾಗಿ ಏಕಾಏಕಿ ಹುಡುಕಾಟ ಆರಂಭಿಸಿದ್ದಾರೆ. 31 ವರ್ಷದ ಬಳಿಕ ಓರ್ವ ಆರೋಪಿಯನ್ನ‌ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ಪ್ರಕರಣ ದಾಖಲಾದಾಗ ಆರೋಪಿತ ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ, https://ainlivenews.com/curry-leaves-are-good-for-cooking-and-good-for-health-this-has-many-benefits/ ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿ ದ್ದಾರೆ.ಕರಸೇವೆಗೂ ಮುನ್ನ ಅಂದರೆ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿದ್ದು, ಒಂದು ಮಳಿಗೆಗೆ ಬೆಂಕಿ…

Read More

ಗದಗ: ಇದೀಗ ಎಲ್ಲೆಲ್ಲೂ ಚಳಿಯದ್ದೇ ಮಾತು. ಮನೆಯಿಂದ ಹೊರ ಗೋಗಬೇಕಂದ್ರೆ ಸ್ವೆಟರ್, ತಲೆಗೆ ಟೋಪಿ ಇಲ್ಲದೇ ಓಡಾಡೋಕೆ ಆಗೋದೆ ಇಲ್ಲ. ಇಂತಹ ಚಳಿಯ ನಡುವೆಯೂ ಕಡು ಬಡವರು, ಬೀದಿಬದಿ ನಿರ್ಗತಿಕರು, ಭಿಕ್ಷುಕರು ಎಲ್ಲಾದ್ರೂ ಸ್ವಲ್ಪ ಮಲಗೋಕೆ ಜಾಗ ಸಿಕ್ರೆ ಸಾಕು ಅಂತಾ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಠಗಳ ಆವರಣ, ರಸ್ತೆಬದಿ ನಡುಗುತ್ತಾ ಮಲಗಿರ್ತಾರೆ. ಅಂತಹವರನ್ನ ಹುಡುಕಿ ಅವರಿದ್ದಲ್ಲಿಗೇ ತೆರಳಿ ಬೆಚ್ಚಗಿನ ಹೊದಿಕೆ ವಿತರಿಸೋ ಕಾರ್ಯವನ್ನ ಗದಗ ಬೆಟಗೇರಿ ಎ ಎಸ್ ಎಸ್ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಮಾಡಲಾಗ್ತಿದೆ. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಫ್ರೊ. ಬಾಹುಬಲಿ ಜೈನರ್ ಅವರ ಮಾರ್ಗದರ್ಶನದಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರು ಕಳೆದ 3 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸಿ ಚಳಿಯಿಂದ ಬಳಲುತ್ತಿರೋ ನಿರ್ಗತಿಕರಿಗೆ ಬೆಚ್ಚಗಿನ ಹೊದಿಕೆಗಳನ್ನ ವಿತರಣೆ ಮಾಡ್ತಿದ್ದಾರೆ. ಆ ಮೂಲಕ ಮೂಲಕ ವಿದ್ಯಾರ್ಥಿ ಜೀವನದಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Read More

ಬೆಳಗಾವಿ: ಇತ್ತಿಚ್ಚೆಗೆ ರೈತರ ವಿರುದ್ಧ ತೊಡೆತಟ್ಟಿದ ಬೆಳಗಾವಿ ಎಸ್ಪಿ ಭೀಮಾಶಂಕರ್ ಹಾಗೂ ಅನ್ನದಾತರ ಬಗ್ಗೆ ಹಗುರವಾಗಿ‌ ಮಾತನಾಡಿದ್ದ ಸಚಿವ ಶಿವಾನಂದ ಪಾಟೀಲ ನಡೆಯನ್ನು ಖಂಡಿಸಿ, ಧಾರವಾಡದಲ್ಲಿ ರೈತರು ಬೀದಿಗೆ ಇಳಿದು, ಇಬ್ಬರ ಭಾವಚಿತ್ರಕ್ಕೆ ಸಗಣಿ ಹಚ್ಚಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು ಎಸ್ಪ ಭೀಮಾಶಕಂರ ಹಾಗೂ ಸಚಿವ ಶಿವಾನದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋ ವ್ಯಕ್ತಪಡಿಸಿದರು. ಇತ್ತಿಚೆಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಅವರು ರೈತರನ್ನು ಚದುರಿಸುವ ಸಮಯದಲ್ಲಿ ತೊಡೆತಡ್ಟಿ ಅವಮಾನಿಸಿದ್ದಾರೆ. ಮತ್ತೊಂದು ಕಡೆ ಸಚಿವ ಶಿವಾನಂದ ಪಾಟೀಲ ಅವರು ರೈತರು ಬರಗಾಲ ಬರಲಿಬೆಂದು ಎದುರು ನೋಡುತ್ತಾರೆ ಅಂರಾ ಹೇಳಿಕೆ ನೀಡಿದ್ದಾರೆ. ಇದೂ ರೈತ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ. ರೈತರಿಗೆ ದೇಶ ಸೇರಿ ಜಗತ್ತೆ ಗೌರವದಿಂದ ನೋಡುತ್ತದೆ. ಆದರೆ ಈ ಇಬ್ಬರಿಗೆ ರೈತರ ಮಹತ್ವ ಗೊತ್ತಿಲ್ಲ.…

Read More

ಬೆಂಗಳೂರು: ಕೇರಳ ಮೂಲದ ಜೈಹಿಂದ್ ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ನೀಡುವಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಭಾನುವಾರವಷ್ಟೇ ಜೈಹಿಂದ್ ಚಾನಲ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿಜು ಅವರಿಗೆ ಸಿಬಿಐ ನೋಟಿಸ್ ಜÁರಿ ಮಾಡಿದ ಬೆನ್ನಲ್ಲೇ ಇದೀಗ, ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಅವರ ಜೊತೆ ವ್ಯವಹಾರಿಕ ಪಾಲು ಹೊಂದಿರುವ 32ಕ್ಕೂ ಹೆಚ್ಚು ಮಂದಿಗೆ ಜನವರಿ 11ರಂದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ. 2017-2018ರಲ್ಲಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅಫಿಡೆವಿಟ್ ಆಧಾರದ ಮೇಲೆ ಸಿಬಿಐ ನೋಟಿಸ್ ನೀಡಿದೆ. ಅಫಿಡೆವಿಟ್‍ನಲ್ಲಿ ಜೈ ಹಿಂದ್ ವಾಹಿನಿಯಲ್ಲಿ ಹೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿಕೊಂಡ ಕಾರಣಕ್ಕಾಗಿ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದೆ. ಸಿಆರ್ಪಿಸಿ ಸೆಕ್ಷನ್ 91ರಡಿ ಹೊರಡಿಸಲಾದ ನೋಟಿಸ್‍ನಲ್ಲಿ, ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಾಡಿದ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜೊತೆಗೆ ಅವರ ಬ್ಯಾಂಕ್…

Read More

ದಾವಣಗೆರೆ: ಜಮಾಪುರ ಮುಖ್ಯರಸ್ತೆಯ ಆನಗೋಡಿನಲ್ಲಿ ತೀವ್ರ ಬರದಿಂದ ಸಂಪೂರ್ಣ ಬೆಳೆ ಹಾನಿಗೊಳಗಾಗಿರುವ ರೈತರ ಜಮೀನುಗಳಿಗೆ ಬಿವೈ ವಿಜಯೇಂದ್ರ ನೇತೃತ್ವದ ಬಿಜೆಪಿ ತಂಡ ಭೇಟಿ ನೀಡಿ ಸ್ಥಳ ಪರಿವೀಕ್ಷಣೆ ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಿತು. ಮಾಯಕೊಂಡ ಕ್ಷೇತ್ರದ ಜಮಾಪುರ ಬಳಿ ಸಿದ್ದಮ್ಮ ಮತ್ತು ಮರುಳಪ್ಪ ಎಂಬ ದಲಿತ ರೈತ ದಂಪತಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ಹಾನಿಗೊಳಗಾದ ಬಗ್ಗೆ ವಿಜಯೇಂದ್ರ ಮಾಹಿತಿ ಪಡೆದರು. ಈ ವೇಳೆ ಬೆಳೆ ಹಾಳಾಗಿದ್ದರಿಂದ ಅನುಭವಿಸುತ್ತಿರುವ ಆರ್ಥಿಕ ನಷ್ಟದ ಬಗ್ಗೆ ರೈತ ದಂಪತಿ ಅಳಲು ತೋಡಿಕೊಂಡರು. ನಾಲ್ಕು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಳಾಗಿದೆ ಎಂದು ತಿಳಿಸಿದರು. ರಾಜ್ಯದ ಬೆಳೆ ಪರಿಹಾರ, ಕೇಂದ್ರದ ಪರಿಹಾರ ಧನ ಪಡೆದ ಬಗ್ಗೆ ವಿಜಯೇಂದ್ರ ಪ್ರಶ್ನಿಸಿದಾಗ ಕೇಂದ್ರದ ಕಿಸಾನ್ ಸಮ್ಮಾನ್ ಸೇರಿ ಯಾವುದೇ ಪರಿಹಾರ ಬಂದಿಲ್ಲ ಎಂದು ದಂಪತಿ ಕಣ್ಣೀರು ಹಾರಿದರು.

Read More