ಸಾಯಿ ಪಲ್ಲವಿ ಯಾವುದೇ ರೀತಿಯ ಎಕ್ಸ್ಪೋಸಿಂಗ್ ಸೀನ್ಗಳನ್ನು ಮಾಡದೇ ಅತಿ ಹೆಚ್ಚು ಆಫರ್ಗಳನ್ನು ಪಡೆಯುತ್ತಿರುವ ನಟಿ. ಇನ್ನು ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಆಡಿದ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇತ್ತೀಚೆಗಷ್ಟೇ ಈ ನ್ಯಾಚುರಲ್ ಬ್ಯೂಟಿ ಸಂದರ್ಶನವೊಂದರಲ್ಲಿ ತನ್ನ ಬಾಲ್ಯದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಅವರ ತಂದೆ-ತಾಯಿ ಬಳಿ ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ. ಅದರಲ್ಲಿ ಅವರನ್ನು ದತ್ತು ತೆಗೆದುಕೊಂಡಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದರಂತೆ. ನಾನು ತುಂಬಾ ಬೆಳ್ಳಗಿದ್ದೇನೆ, ಫೇರ್ ಆಗಿದ್ದೇನೆ. ನಿನಗೇಕೆ ಡಸ್ಕಿ ಸ್ಕಿನ್ ಕಲರ್ ಇದೆ. ನನ್ನನ್ನು ದತ್ತು ತೆಗೆದುಕೊಂಡಿದ್ದೀರಾ ಎಂದು ತಂದೆ-ತಾಯಿಯನ್ನು ನೇರವಾಗೇ ಪ್ರಶ್ನಿಸುತ್ತಿದ್ರಂತೆ. ಕೊನೆಗೆ ಪೋಷಕರು ಸಾಯಿ ಪಲ್ಲವಿಗೆ ಮನವರಿಕೆ ಮಾಡಿದ್ದಾರೆ. ‘ನೀನು ನಿನ್ನ ತಂಗಿ ಇಬ್ಬರೂ ನಮ್ಮ ಮಕ್ಕಳೇ’ ಎಂದು ಹೇಳುತ್ತಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸಾಯಿ ಪಲ್ಲವಿ ಮತ್ತು ನಟಿ ಪೂಜಾ ಕಣ್ಣನ್, ಸೆಂತಾಮರೈ ಕಣ್ಣನ್ ಮತ್ತು ರಾಧಾ ಅವರ ಮಕ್ಕಳಾಗಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮೂಲದವರಾಗಿದ್ದಾರೆ.…
Author: AIN Author
ಬೆಂಗಳೂರು:- ಗ್ಯಾರಂಟಿಗಳಿಂದ ಬಡವರ ಕುಟುಂಬಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಗ್ಯಾರಂಟಿಗಳಿಂದ ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು, ಕೊಳ್ಳುವ ಶಕ್ತಿ ಇದೆ. ಇಲ್ಲದಿದ್ದರೆ ಹಾಹಾಕಾರ ಶುರುವಾಗುತ್ತಿತ್ತು. ಸಾರ್ವತ್ರಿಕ ಮೂಲ ಆದಾಯದ ತತ್ವದ ತಳಹದಿಯ ಮೇಲೆ ಜನರ ಆದಾಯ ಹೆಚ್ಚಿಸಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆತಿದೆ ಎಂದರು. ರಾಜ್ಯ ದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು, ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕಿದೆ. ಸಂವಿಧಾನ ಅರಿತು ಅದರಂತೆ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು. ಸರ್ಕಾರದ ಕಾರ್ಯದರ್ಶಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2024…
ಬಿಗ್‌ಬಾಸ್ ಮನೆಯಿಂದ ಗಳಿಕೆ ಮಾಡಿದ್ದೇನೆಂದು ಎಂಬುವುದನ್ನು ಕಿರುತೆರೆ ಸ್ಟಾರ್ ನಟಿ ಸಿರಿ ರಿವಿಲ್ ಮಾಡಿದ್ದಾರೆ. 12ನೇ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದ ಸಿರಿ ಅವರು ಸಾಮಾಜಿಕ ಜಾಲತಾಣಕ್ಕೆ ಬಂದು ಮೊದಲ ಬಾರಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಬಿಗ್‌ಬಾಸ್ ಮನೆಯಿಂದ ತಾವು ಏನು ಗಳಿಸಿಕೊಂಡು ಬಂದಿದ್ದಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ, ತುಂಬಾ.. ತುಂಬಾ.. ತುಂಬಾ.. ಖುಷಿಯಾಗ್ತಿದೆ. ನಿಮ್ಮೆಲ್ಲರ ಪ್ರೀತಿ ನೋಡುತ್ತಿದ್ದರೆ, ನಿಜ ಹೇಳಬೇಕೆಂದರೆ ನನಗೆ ಮಾತುಗಳೇ ಹೊರಡುತ್ತಿಲ್ಲ. ನನ್ನ ಜೀವನದ ದೊಡ್ಡ ತೀರ್ಮಾನ ಎಂದರೆ ಬಿಗ್‌ಬಾಸ್ ಮನೆಗೆ ಹೋಗುವುದು ಆಗಿತ್ತು. ಅಲ್ಲಿ ಹೇಗಿರುತ್ತೋ ಏನಿರುತ್ತೋ ಎಂಬ ಬಹಳಷ್ಟು ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು. ಆದರೆ, ನಾನು ಆ ಮನಗೆ ಹೋಗಿದ್ದಾಯ್ತು, ಅಲ್ಲಿ ಇದ್ದಿದ್ದಾಯ್ತು, ಆಟವಾಡಿದ್ದಾಯ್ತು, ಬಹಳಷ್ಟು ಎಮೋಷನ್ಸ್‌ಗಳನ್ನು ಹಂಚಿಕೊಂಡಿದ್ದಾಯ್ತು. ಆದರೆ, ಇವತ್ತು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾದಮೇಲೆ ನಾನು ಗಳಿಸಿಕೊಂಡು ಬಂದಿದ್ದು ಏನೆಂದರೆ ಅದು ನಿಮ್ಮೆಲ್ಲರ ಪ್ರೀತಿ. ನಿಮ್ಮ ಮನಸ್ಸನ್ನು ನಾನು ಗೆದ್ದಿದ್ದೀನಿ ಅದೇ ನನಗೆ ತುಂಬಾ ಸಂತೋಷ ಆಗ್ತಾಯಿದೆ. ಅದಕ್ಕೆ…
ಬೆಂಗಳೂರು:- 2023 ರಲ್ಲಿ ಬೆಂಗಳೂರು ಸಂಚಾರ ಪೊಲೀಸರು ದಾಖಲಿಸಿರುವ ಪ್ರಕರಣಗಳು, ಈ ಬಾರಿ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತಗಳು, ಅದರಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಮತ್ತು ಸಂಚಾರ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. 2023ರಲ್ಲಿ 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 184.83 ಕೋಟಿ ರೂ. ದಂಡವನ್ನು ಬೆಂಗಳೂರು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಸಿಕ್ಯಾಮರಾ ಪರಿಶೀಲಿಸಿ 87,25,321 ಸಂಚಾರಿ ನಿಯಮ ಉಲ್ಲಂಘನೆ ಕೇಸ್, ಸಂಚಾರಿ ಪೊಲೀಸರು ಖುದ್ದಾಗಿ ದಾಖಲಿಸಿದ ಕೇಸ್ಗಳ ಸಂಖ್ಯೆ 2,49,624. 7,055 ಡ್ರಂಕ್ & ಡ್ರೈವ್ ಕೇಸ್ ದಾಖಲು ಮಾಡಿದ್ದು, ಮದ್ಯಪಾನ ಮಾಡಿ ಅಪಘಾತ ಆರೋಪದಡಿ 16 ಪ್ರಕರಣ ದಾಖಲು ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಕೇಸ್ನಲ್ಲಿ 184.83 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 4,095 ಅಪಘಾತ ಪ್ರಕರಣ ಸಂಭವಿಸಿದೆ. 4,095 ಅಪಘಾತದಲ್ಲಿ 909 ಜನರ ಸಾವನ್ನಪ್ಪಿದ್ದರೆ, 4201 ಜನರು ಗಾಯಗೊಂಡಿದ್ದಾರೆ. ತುರ್ತು…
ಬೆಂಗಳೂರು:- ಕಾಂಗ್ರೆಸ್ ಮತ್ತೆ ದ್ವೇಷದ ರಾಜಕಾರಣ ಆರಂಭಿಸಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಮತ್ತೆ ದ್ವೇಷದ ರಾಜಕಾರಣ ಆರಂಭಿಸಿದೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿತ್ತು. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗಲು ದಿನಗಣನೆ ಶುರುವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ದೇಶಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಮಾತ್ರ ಇದನ್ನು ಭಯವೆಂಬಂತೆ ಬಿಂಬಿಸುತ್ತಿದೆ. 3 ದಶಕದ ಹಿಂದಿನ ಕೇಸ್: ಜೈಲು ಶಿಕ್ಷೆ ಇದೇ ವೇಳೆ ಹುಬ್ಬಳ್ಳಿಯಿಂದ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರನ್ನು 30 ವರ್ಷಗಳ ಹಿಂದಿನ ಪ್ರಕರಣ ಸಂಬಂಧ ಜೈಲಿಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟನೆಯ ಆಚರಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿರುವ ಸಂದರ್ಭದಲ್ಲಿ ಇಂತಹ ಕ್ರಮವನ್ನು ಸರ್ಕಾರ ಕೈಗೊಂಡಿದೆ. ನಾನು ಕೂಡ ಆಗ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ. ಈಗ ನನ್ನನ್ನೂ ಬಂಧಿಸುತ್ತೀರಾ? ಅಷ್ಟು ಧೈರ್ಯ ಇದೆಯಾ? ಎಂದು ರಾಜ್ಯ ಸರ್ಕಾರಕ್ಕೆ ಆರ್. ಅಶೋಕ್ ಪ್ರಶ್ನಿಸಿದರು. ಕಾರ್ಯಕರ್ತರ ಮೇಲೆ ಹಾಕಿದ…
ಬೆಂಗಳೂರು:- ಹೊಸವರ್ಷದಂದು 8 ಮೆಟ್ರಿಕ್ ಟನ್ ಕಸವನ್ನು ಬಿಬಿಎಂಪಿ ತೆರವು ಮಾಡಿದೆ. ನಗರದಲ್ಲಿ ಪೂರ್ವ ವಲಯ ವ್ಯಾಪ್ತಿಯಲ್ಲಿ ಹೊಸ ವರ್ಷಾರಣೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಬಿದ್ದಿದ್ದ ಸುಮಾರು 8 ಮೆಟ್ರಿಕ್ ಟನ್ ತ್ಯಾಜ್ಯ-ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಲಾಗಿದೆ ಹೊಸ ವರ್ಷಾಚರಣೆಯ ಹಿನ್ನೆಲೆ ನಗರದ ಸಿಬಿಡಿ ರಸ್ತೆಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಸಿಡೆನ್ಸಿ ರಸ್ತೆ, ರಿಚ್‍ಮಂಡ್ ರಸ್ತೆ, ಸೇಂಟ್ ಮಾಕ್ಸರ್ ರಸ್ತೆ, ಕಸ್ತೂರ್ ಬಾ ರಸ್ತ್ತೆ ಸೇರಿದಂತೆ ಮುಂತಾದ ರಸ್ತೆಗಳಲ್ಲಿ ಮುಂಜಾನೆ 3.30ರಿಂದ ಸ್ವಚ್ಛತಾ ಕಾರ್ಯ ಆರಂಭಿಸಿ ಬೆಳಗ್ಗೆ 6.30ರ ವೇಳೆಗೆ ಪೂರ್ಣಗೊಳಿಸಿ ಸುಮಾರು 8 ಮೆ. ಟನ್ ತ್ಯಾಜ್ಯವನ್ನು ಬೀದಿಗಳಿಂದ ತೆರವುಗೊಳಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ. ಸ್ವಚ್ಛತಾ ಕಾರ್ಯವು ಶಾಂತಿನಗರ ವಿಭಾಗದ ಘನತ್ಯಾಜ್ಯ ವಿಭಾಗದಿಂದ ಮಾಡಲಾಗಿದ್ದು, 3 ಮೇಲ್ವಿಚಾರಕರು, 80ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮಾಡಿದರು. ಸ್ಥಳದಲ್ಲಿ 1 ಕಾಂಪ್ಯಾಕ್ಟರ್ ಹಾಗೂ 7 ಆಟೋ ಟಿಪ್ಪರ್ ಗಳಿದ್ದವು.…
ಬಳ್ಳಾರಿ:- ಆ ಸಹೋದರಿಬ್ಬರು ಹೊಸ ವರ್ಷ ಸಂಭ್ರಮಾಚರಣೆ ಮಾಡಬೇಕು ಅಂತಾ ಕೇಕ್ ತರಲು ಬೇಕರಿಗೆ ಹೋಗಿದ್ರು. ಇನ್ನೇನು ಕೇಕ್ ತೆಗೆದುಕೊಂಡು ಮನೆಗೆ ಹೊರಡಬೇಕಿತ್ತು, ಅಷ್ಟ್ರರಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಎದುರುಗಡೆ ಇದ್ದ ಗುಂಪಿನೊಂದಿಗೆ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ, ಆಗ ಕುಡಿದ ಮತ್ತಿನಲ್ಲಿದ್ದ ಆ ಯುವಕರು ಕೇಕ್ ತರಲು ಬಂದ ವ್ಯಕ್ತಿಯನ್ನ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ… ಹೌದು, ವರ್ಷದ ಅಂತ್ಯದ ದಿನದಂದೇ ಗಣಿನಾಡು ಬಳ್ಳಾರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಸಹೋದರಿಬ್ಬರ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಓರ್ವನನ್ನ ಕೊಲೆ ಮಾಡಿದ ಘಟನೆ ನಡೆದಿದೆ… ಎಸ್ ಸೈಯದ್ ವಾಲಿ (23) ಮತ್ತು ರಜಾಕ ವಾಲಿ (26) ಈ ಇಬ್ಬರು ಸಹೋದರರು ಹೊಸ ವರ್ಷ ಸಂಭ್ರಮಾಚರಣೆ ಮಾಡಬೇಕು ಅಂತಾ ವಡ್ಡರಬಂಡೆಯಲ್ಲಿರುವ ಎಮ್.ಎಮ್ ಬೇಕರಿಗೆ ಕೇಕ್ ತರಲು ರಾತ್ರಿ 8:30 ಕ್ಕೆ ಬಂದಿದ್ದಾರೆ.. 1.5 kg ಕೇಕ್ ತೆಗೆದುಕೊಂಡು…
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಅವರ 2023ನೇ ವರ್ಷದ ಬಹುತೇಕ ಸಂಕಲ್ಪಗಳು ಈಡೇರಿದ್ದು, ಅದನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಗಿಲ್ ಅವರು 2023ರ ಗುರಿಗಳನ್ನು ಫೋಟೋಗಳೊಂದಿಗೆ ಮೆಲುಕು ಹಾಕಿದ್ದಾರೆ. ಕೇವಲ 24 ವರ್ಷಕ್ಕೆ ಸ್ಟಾರ್ ಆಟಗಾರನಾಗಿ ಹೊರ ಹೊಮ್ಮಿರುವ ಗಿಲ್, ಎಲ್ಲ ಮಾದರಿಯ ಪಂದ್ಯಗಳಲ್ಲೂ ತಂಡಕ್ಕೆ ಅನಿವಾರ್ಯ ಆಟಗಾರ ಎನಿಸಿಕೊಂಡಿದ್ದಾರೆ. ಗಿಲ್, ವೃತ್ತಿ ಜೀವನದ ಪಾಲಿಗೆ 2023 ಮಹತ್ವದ ವರ್ಷವಾಗಿದೆ. ಈ ವರ್ಷದಲ್ಲಿ ಎಲ್ಲ ಮಾದರಿ ಪಂದ್ಯಗಳಿಂದ 7 ಶತಕಗಳೊಂದಿಗೆ 2 ಸಾವಿರಕ್ಕೂ ಅಧಿಕ ರನ್ ಕಲೆ ಹಾಕುವ ಮೂಲಕ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. 2023ರಲ್ಲಿ ಗಿಲ್ ಅವರು ಕೆಲವೊಂದಿಷ್ಟು ಗುರಿಗಳನ್ನು ಹಾಕಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಗುರಿಗಳನ್ನು ಸಾಧಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಬೇಕೆಂಬುದು ಪ್ರಮುಖ ಗುರಿಯಾಗಿತ್ತು. ಅದು ಕೂಡ ನೆರವೇರಿದೆ. ಅಲ್ಲದೆ, ಗಿಲ್ ಅವರು ವಿಶ್ವಕಪ್ ಮತ್ತು ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಮೇಲೆ ತಮ್ಮ ಕಣ್ಣಿಟ್ಟಿದ್ದರು. ಎರಡೂ ಪಂದ್ಯಾವಳಿಗಳಲ್ಲಿ ಗಮನಾರ್ಹ ಪ್ರಭಾವ ಬೀರಲು…
ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲೇ ಬೇಕಾಗಿರುವ ಕಾರಣ ಈ ಸಮಯದಲ್ಲಿ ಅಸ್ತಮಾದಿಂದಾಗಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮೊದಲೇ ಕೊರೋನಾದ ಭಯವೂ ಜನರನ್ನು ಕಾಡುತ್ತಿದೆ. ಹೀಗಿರುವಾಗ ಅಸ್ತಮಾ ಕಾಣಿಸಿಕೊಂಡರೆ ಇನ್ನಷ್ಟು ಭಯಭೀತರಾಗುವುದು ಸಹಜ ಹೀಗಾಗಿ ಮೊದಲೇ ಅಸ್ತಮಾದಿಂದ ಬಳಲುತ್ತಿರುವವರು ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಬಲು ಅಗತ್ಯವಾಗಿದೆ. ಇನ್ನು ಅಸ್ತಮಾ ಎನ್ನುವುದು ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಕಾಡುವ ರೋಗ. ಹೀಗಾಗಿ ನಾವೆಷ್ಟು ಎಚ್ಚರಿಕೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು. ಅಸ್ತಮಾ ಕುರಿತಂತೆ ವೈದ್ಯರು ನೀಡುವ ಸಲಹೆ ಪಾಲಿಸುವುದು ಅಗತ್ಯ. ಯಾವ ಸಂದರ್ಭದಲ್ಲಿ ಮತ್ತು ಯಾವುದರಿಂದ ಅಸ್ತಮಾ ಉಲ್ಭಣಗೊಳ್ಳುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಅದರಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ವೈದ್ಯರು ನೀಡುವ ತ್ವರಿತ ಶಮನ ನೀಡುವ ಔಷಧಿ ಮತ್ತು ಇನ್ನೇಲರ್ ಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊಗೆ, ಧೂಳಿನಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು. ಮಲಗುವ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಜತೆಗೆ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬೂಷ್ಟ್ ಮತ್ತು…
ದಾಸವಾಳ ಟೀ ಮಾಡಲು ಕೇವಲ 3 ಪದಾರ್ಥಗಳು ಸಾಕು. ಈ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ, ಉತ್ತಮ ನಿದ್ರೆಗೂ ಸಹಕಾರಿಯಾಗಿದೆ. ಬೇಕಾಗುವ ಪದಾರ್ಥಗಳು: ಒಣ ದಾಸವಾಳ ದಳ – 1 ಕಪ್ ನೀರು – 2 ಕಪ್, 1 ಲೀಟರ್ ಸಕ್ಕರೆ ಪುಡಿ – 1 ಕಪ್ ತಂಪಾದ ನೀರು – 1 ಲೀಟರ್ ಐಸ್ ಕ್ಯೂಬ್ಸ್ – ಅಗತ್ಯಕ್ಕೆ ತಕ್ಕಂತೆ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ, ಅದರಲ್ಲಿ ಒಣಗಿದ ದಾಸವಾಳ ದಳಗಳನ್ನು ಸೇರಿಸಿ, ಬಿಸಿ ಮಾಡಿ. ನಂತರ ಕುದಿ ಬಂದ ತಕ್ಷಣ ಉರಿಯನ್ನು ಕಡಿಮೆ ಮಾಡಿ, ಸುಮಾರು 15 ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ 1 ಲೀಟರ್ ತಂಪಾದ ನೀರಿಗೆ ಸಕ್ಕರೆ ಪುಡಿ ಹಾಕಿ ಅದು ಕರಗುವತನಕ ಮಿಶ್ರಣ ಮಾಡಿ. ದಾಸವಾಳ ಹಾಗೂ ನೀರಿನ ಮಿಶ್ರಣವನ್ನು ಶಾಖದಿಂದ ತೆಗೆದುಹಾಕಿ ಸುಮಾರು 30 ನಿಮಿಷ…